Tag: mattikere

  • ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ

    ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ

    ಬೆಂಗಳೂರು: ಸಿಲಿಕಾನ್ ಸಿಟಿಯ ಮತ್ತಿಕೆರೆಯಲ್ಲಿರುವ ಕಾರು ಗ್ಯಾರೇಜ್‍ (Mattikere Car Ggarage) ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

    ಮತ್ತಿಕೆರೆ ಸಮೀಪದ ದಿವಾನರಪಾಳ್ಯದ 7 ನೇಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಗುರುವಾರ ರಾತ್ರಿ 10.15ರ ವೇಳೆ ಗ್ಯಾರೇಜ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವಾಹನಗಳು ಹೊತ್ತಿ ಉರಿದಿವೆ. ಇದನ್ನೂ ಓದಿ: ಕೈಯಲ್ಲಿ ವಯೋವೃದ್ಧ ಫೋಟೋ ಹಿಡಿದು ರಸ್ತೆ ದಾಟುತ್ತಿದ್ದಾಗ ವ್ಯಕ್ತಿಗೆ ಕಾರು ಡಿಕ್ಕಿ- ಸಾವು

    ಗ್ಯಾರೇಜ್‍ಗೆ ಬಂದಿದ್ದ ಒಂದು ಕಾರ್, ಎರಡು ಟಾಟಾ ಏಸ್ ವಾಹನಗಳು ಅಗ್ನಿಗೆ ಆಹುತಿಯಾಗಿದ್ದು, ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

    ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅರ್ಜೆಂಟ್ ಕಾಲ್ ಮಾಡ್ಬೇಕಿತ್ತು ಅಂತ ಮೊಬೈಲ್ ತಗೊಂಡು ಪಂಗನಾಮ!

    ಅರ್ಜೆಂಟ್ ಕಾಲ್ ಮಾಡ್ಬೇಕಿತ್ತು ಅಂತ ಮೊಬೈಲ್ ತಗೊಂಡು ಪಂಗನಾಮ!

    ಬೆಂಗಳೂರು: ಅಪರಿಚಿತರಿಗೆ ಮೊಬೈಲ್ (Mobile) ಕೊಡೋ ಮುನ್ನ ಎಚ್ಚರವಾಗಿರಿ. ಅರ್ಜೆಂಟ್ ಒಂದು ಕಾಲ್ ಮಾಡಿ ಕೊಡ್ತೀನಿ ಅಂತ ಮೊಬೈಲ್ ತಗೊಂಡು ವ್ಯಕ್ತಿಗೆ ಮೋಸ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಯಶವಂತಪುರ (Yeshwanthpura) ದ ಮತ್ತಿಕೆರೆಯಲ್ಲಿ ಮೊಬೈಲ್ ಕೊಟ್ಟ ತಪ್ಪಿಗೆ ವ್ಯಕ್ತಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ದೇವವ್ರಾತ್ ಸಿಂಗ್ ಅನ್ನೋರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅರ್ಜೆಂಟ್ ಕಾಲ್ ಮಾಡಬೇಕು ಅಂದಿದ್ದ. ಅವನ ಮಾತು ಕೇಳಿ ದೇವವ್ರಾತ್ ಸಿಂಗ್ ಅವರು ಅಪರಿಚತನ ಕೈಗೆ ಮೊಬೈಲ್ ಕೊಟ್ಟಿದ್ದರು.

    ಮೊಬೈಲ್ ಕೈಗೆ ಕೊಟ್ಟ ತಕ್ಷಣ ಆತ ಮತ್ತೊಂದು ಬೈಕ್ (Bike) ಹತ್ತಿ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದಾನೆ. ಮೊಬೈಲ್ ನಲ್ಲಿ ದೇವವ್ರಾತ್ ಮತ್ತವನ ಗರ್ಲ್ ಫ್ರೆಂಡ್ ಖಾಸಗಿ ವೀಡಿಯೋಗಳಿದ್ದವು. ಇದನ್ನು ನೋಡಿದ ಅಪರಿಚಿತ, ಇದೀಗ ವ್ಯಕ್ತಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಹೊಸ ವರ್ಷಕ್ಕೆ ದೇವಾಲಯಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ – ದಂಪತಿ ಸಾವು, ಮಗು ಸ್ಥಿತಿ ಚಿಂತಾಜನಕ

    ಮೂದಲಿಗೆ ಒಂದು ಲಕ್ಷ ಹಣ ಕೇಳಿದ್ದ ಆತ, ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡೋಕೆ ಶುರುಮಾಡಿದ್ದ. ಇದರಿಂದ ಬೇಸತ್ತ ಮೊಬೈಲ್ ಮಾಲೀಕ, ಯಶವಂತಪುರ ಪೊಲೀಸರಿಗೆ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ನೀಡುವ ನೆಪದಲ್ಲಿ ಆರೋಪಿಯನ್ನು ಕರೆಸಿ ಬಂಧಿಸಿದ್ದಾರೆ.

    ಪವನ್, ಸೈಯದ್, ಬಂಧಿತ ಆರೋಪಿಗಳಾಗಿದ್ದು, ಇವರಿಂದ ಮೊಬೈಲ್ ಗಳು, ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]