ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಐಎಎಸ್ (IAS) ಅಧಿಕಾರಿ ಎಂದು ಹೇಳಿಕೊಂಡು ಮಹಿಳೆಯರಿಗೆ ಹಣಕ್ಕಾಗಿ ವಂಚಿಸುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮ್ಯಾಟ್ರಿಮೋನಿ ವೈಬ್‌ಸೈಟ್‌ನಲ್ಲಿ ಜೀವನ್ ಕುಮಾರ್ ಎಂಬ ವ್ಯಕ್ತಿ ಐಡಿ ಕ್ರಿಯೆಟ್ ಮಾಡಿ ಐಎಎಸ್ ಆಫೀಸರ್ ಎಂದು ಮಹಿಳೆಗೆ ವಂಚಿಸುತ್ತಿದ್ದ. ಐಎಎಸ್, ಐಪಿಎಸ್ ಆಗಿರುವುದಾಗಿ ಹೇಳುತ್ತಿದ್ದ. ಬಳಿಕ ಮದುವೆ ಆಗುವುದಾಗಿ ನಂಬಿಸಿ ಕ್ಲೋಸ್ ಆಗಿ ಮೆಸೇಜ್ ಮಾಡಿ, ಖಾಸಗಿ ಫೋಟೊ ಹಾಗೂ ವಿಡಿಯೋ ಪಡೆಯುತ್ತಿದ್ದ.ಇದನ್ನೂ ಓದಿ:ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ
ಅದಾದ ಸ್ವಲ್ಪ ದಿನಗಳ ನಂತರ ತಾಯಿಗೆ ಕ್ಯಾನ್ಸರ್ ಇದೆ. ಚಿಕಿತ್ಸೆಗೆ ಹಣ ಬೇಕು ಹಾಗೂ ಟ್ರಬಲ್ ಇದೆ ಎಂದು ಹೇಳಿ ಹಣ ಪಡೆಯುತ್ತಿದ್ದ. ಮೊದಲು 3 ಲಕ್ಷ ಹಣ ಪಡೆದು, ಮತ್ತೆ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದೇ ಹೋದರೆ ಖಾಸಗಿ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.
ಒಂದು ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ತಿಳಿದುಬಂದಿದ್ದು, ಸದ್ಯ ಹೆಬ್ಬಾಳ ಪೋಲಿಸ್ ಠಾಣೆಯಲ್ಲಿ (Hebbal Police Station) ದೂರು ದಾಖಲಾಗಿದೆ.ಇದನ್ನೂ ಓದಿ:ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್ ಮತ್ತೆ ಹೊಸ ಬಾಂಬ್
ದಾವಣಗೆರೆ: ಮ್ಯಾಟ್ರಿಮೋನಿಯಲ್ಲಿ (Matrimony) ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ 62.83 ಲಕ್ಷ ರೂ. ಹಣ ಪಡೆದು ವಂಚಿಸಿದ (Fraud Case) ಆರೋಪಿಯನ್ನು ದಾವಣಗೆರೆಯ (Davanagere) ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಡ್ಯ ತಾಲ್ಲೂಕಿನ ಮಾಚಹಳ್ಳಿಯ ಎಂ.ಮಧು ಅಲಿಯಾಸ್ ಮಾದು (31) ಎಂದು ಗುರುತಿಸಲಾಗಿದೆ. ಆರೋಪಿ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಭರವಸೆ ಕೊಡುತ್ತಿದ್ದ. ಅಲ್ಲದೇ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ. ಹೀಗೆ ಹಲವಾರು ಯುವತಿಯರಿಗೆ ಆರೋಪಿ ವಂಚಿಸಿದ್ದ.
ದಾವಣಗೆರೆ ನಗರದ ಯುವತಿಯೊಬ್ಬಳನ್ನು ಅರೋಪಿ ಪರಿಚಯಿಸಿಕೊಂಡು, ವಿವಾಹವಾಗುವುದಾಗಿ ನಂಬಿಸಿದ್ದ. ಆಕೆಗೆ ಮೈಸೂರಿನಲ್ಲಿ ರೈಲ್ವೆ ಇಲಾಖೆಯ ವರ್ಕ್‍ಶಾಪ್‍ನಲ್ಲಿ ಉದ್ಯೋಗ ಕೊಡಿಸುವುದಾಗಿ ಹಂತ ಹಂತವಾಗಿ 21 ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಯುವತಿಗೆ ವಂಚನೆಗೊಳಗಾಗಿದ್ದು ಅರಿವಾಗುತ್ತಿದ್ದಂತೆ ಆಕೆ ದೂರು ದಾಖಲಿಸಿದ್ದಳು.
ಆರೋಪಿ ಮಧು ವಿರುದ್ಧ ಮಂಡ್ಯ, ದಾವಣಗೆರೆ, ಹರಿಹರ, ಬೆಂಗಳೂರು ಕಾಟನ್ ಪೇಟೆ, ಮೈಸೂರು, ಕೆ ಆರ್ ನಗರ, ಚಿಕ್ಕಮಗಳೂರು ಪೊಲೀಸ್ ಠಾಣೆಗಳಲ್ಲಿ ಕೂಡ ವಂಚನೆ ಪ್ರಕರಣ ದಾಖಲಾಗಿದೆ. ಇದುವರೆಗೂ ಆರೋಪಿ ಹಲವು ಯುವತಿಯರಿಗೆ 62.83 ಲಕ್ಷ ರೂ. ವಂಚಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.
ಸಾಮಾನ್ಯವಾಗಿ ಪತಿಯ ವಿರುದ್ಧ ಪತ್ನಿಯರು ದೂರು ನೀಡುವುದು ಬಣ್ಣದ ಲೋಕದಲ್ಲಿ ಹೆಚ್ಚಾಗಿತ್ತು. ಆದರೆ, ಪತ್ನಿಯ ವಿರುದ್ಧವೇ ವಂಚನೆ ದೂರು ನೀಡಿರುವ ಪ್ರಕರಣ ಕಿರುತೆರೆ ಲೋಕದಲ್ಲಿ ನಡೆದಿದೆ. ಕಿರುತೆರೆ ನಟಿ ಅಡ್ಡಾಲ ಐಶ್ವರ್ಯ ವಿರುದ್ಧ ಪತಿ ಡ್ರಗ್ ಸೇವನೆ, ವಂಚನೆ, ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ.
ನಟಿ ಅಡ್ಡಾಲ ಐಶ್ವರ್ಯ ಅವರು ತಮಗೆ ಮ್ಯಾಟ್ರಿಮೊನಿ ಮೂಲಕ ಪರಿಚಯವಾಗಿತ್ತು. ನಂತರ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆ ಕೂಡ ಆದೆವು. ಕಳೆದ ವರ್ಷ ಸೆಪ್ಟಂಬರ್ 6ಕ್ಕೆ ನಮ್ಮಿಬ್ಬರ ಮದುವೆ ಆಯಿತು. ಕೆಲ ದಿನಗಳ ಹಿಂದೆಯಷ್ಟೇ ಆಕೆ ಏನು ಅನ್ನುವುದು ಗೊತ್ತಾಯಿತು ಎಂದು ಪತಿ ಶ್ಯಾಮ್ ದೂರಿನಲ್ಲಿ ಆರೋಪಿಸಿದ್ದಾರೆ.
ಪತಿಯು ಆರೋಪಿಸಿದಂತೆ ನಟಿಯು ಡ್ರಗ್ಸ್ ಸೇವನೆ ಮಾಡುತ್ತಾರಂತೆ. ಸಿಗರೇಟು ಹಾಗೂ ಅಕ್ರಮ ಸಂಬಂಧವನ್ನು ಕೂಡ ಹೊಂದಿದ್ದಾರಂತೆ. ಮದುವೆ ಹೆಸರಿನಲ್ಲಿ ತಮಗೆ ಮೋಸ ಆಗಿದೆ ಎಂದು ಶ್ಯಾಮ್ ದೂರು ನೀಡಿದ್ದಾರೆ. ತಾವು ಡಿವೋರ್ಸ್ ನೀಡಲು ಸಿದ್ಧವಿದ್ದರೂ, ಅದಕ್ಕೂ ಪತ್ನಿ ಒಪ್ಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಬರೀ ಕಿರುಕುಳ ಮಾತ್ರವಲ್ಲ ಹಣವನ್ನೂ ಪೀಕಿದ ಬಗ್ಗೆಯೂ ಶ್ಯಾಮ್ ಮಾತನಾಡಿದ್ದಾರೆ. ಕೇವಲ ಆರೇ ಆರು ತಿಂಗಳಲ್ಲಿ ಬರೋಬ್ಬರಿ 25 ಲಕ್ಷ ರೂಪಾಯಿಯನ್ನು ತಮ್ಮಿಂದ ಪಡೆದಿರೋದಾಗಿ ಶ್ಯಾಮ್ ಹೇಳಿಕೊಂಡಿದ್ದಾರೆ.
– ಅಪ್ಪ, ಚಿಕ್ಕಪ್ಪ, ದೊಡ್ಡಪ ಮಾವ ಎಲ್ಲರೂ ಅವನೊಬ್ಬನೆ – ಧ್ವನಿ ಬದಲಿಸಿ ಮಾತನಾಡ್ತಿದ್ದ ಕಿಲಾಡಿ
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬರುತ್ತಿದ್ದ ಪೋಷಕರಿಗೆ ವಂಚಿಸುತ್ತಿದ್ದ ಆರೋಪಿಯ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಗುಜರಾತ್, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲೂ ದೋಖಾ ಮಾಡಿರುವ ರಹಸ್ಯ ವಿಚಾರಣೆ ವೇಳೆ ಬಯಲಾಗಿದೆ.
45 ವರ್ಷ ವಯಸ್ಸಿನ ಆರೋಪಿ (Accused) ನರೇಶ್ ಗೋಸ್ವಾಮಿ ತಾನೇ ಯುವಕನ ತಂದೆ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಅಂತ ಹೇಳಿಕೊಂಡು ಧ್ವನಿ ಬದಲಿಸಿ ಮಾತನಾಡುತ್ತಿದ್ದ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪರಿಸ್ಥಿತಿಗೆ ತಕ್ಕಂತೆ ಧ್ವನಿ ಬದಲಿಸಿ ಚಿಕ್ಕಪ್ಪನಿಗೆ ಆಕ್ಸಿಡೆಂಟ್ ಆಗಿದೆ, ಮಾವ ಆಸ್ಪತ್ರೆಯಲ್ಲಿದ್ದಾರೆ ಅಂತ ಹೇಳಿ, ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಕೆಲ ಪೋಷಕರ ಬಳಿ ವರದಕ್ಷಿಣೆ ರೂಪದಲ್ಲಿ ಮುಂಚಿತವಾಗಿಯೇ ಹಣ ಪಡೆದು ನಂತರ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಳ್ಳುತ್ತಿದ್ದ. ಕೇವಲ ಕರ್ನಾಕದಲ್ಲಿ ಮಾತ್ರವಲ್ಲ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಇದೇ ರೀತಿ ದೋಖಾ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು (Bengaluru Police) ತಿಳಿಸಿದ್ದಾರೆ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಪವನ್ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು.
ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದು ಫೋನ್ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್, ನನ್ನ ಚಿಕ್ಕಪ್ಪ ಟಿಕೆಟ್ ಬುಕ್ಕಿಂಗ್ ಮಾಡಬೇಕು, ಪರ್ಸ್ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ. ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.
ಹಣ ಪಡೆದ ವ್ಯಕ್ತಿ ಟಿಕೆಟ್ ಬುಕ್ಕಿಂಗ್ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿತ್ತು.
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬಂದಿದ್ದ ಪೋಷಕರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್ ಒಬ್ಬನನ್ನು ಪೊಲೀಸರು (Bengaluru Police) ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ರಾಜಾಜಿನಗರ (Rajajinagar) ನಿವಾಸಿ ಪವನ್ ಅಗರವಾಲ್ ಬಂಧಿತ ಆರೋಪಿ. ನಿಮ್ಮ ಮಗಳು ನನಗೆ ಇಷ್ಟ ಆಗಿದ್ದಾಳೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬರೋಬ್ಬರಿ 250ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾನೆ. ತಮಿಳುನಾಡು (Tamil Nadu) ಮೂಲದ ದಂಪತಿಗೆ ವಂಚನೆ ಕೇಸ್ ತನಿಖೆ ನಡೆಸುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಪವನ್ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್?
ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದು ಫೋನ್ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್, ನನ್ನ ಚಿಕ್ಕಪ್ಪ ಟಿಕೆಟ್ ಬುಕ್ಕಿಂಗ್ ಮಾಡಬೇಕು, ಪರ್ಸ್ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ. ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.
ಹಣ ಪಡೆದ ವ್ಯಕ್ತಿ ಟಿಕೆಟ್ ಬುಕ್ಕಿಂಗ್ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಇದನ್ನೂ ಓದಿ: ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.
ನವದೆಹಲಿ: ವಿಮಾನಯಾನ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯೊಬ್ಬರಿಗೆ 18 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 65,000 ರೂ. ನಗದನ್ನು ವಂಚಿಸಿ (Cheat) ಪರಾರಿಯಾದ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.
ವಿಜಯಲಕ್ಷ್ಮೀ ವಂಚನೆಗೊಳಗಾದ ಮಹಿಳೆ. ಇವರು ಬೆಂಗಳೂರಿನ (Bengaluru) ಮೂಲದವರಾಗಿದ್ದು, ಮ್ಯಾಟ್ರಿಮೋನಿ (Matrimony) ಸೈಟ್‌ನಲ್ಲಿ ಪರಿಚಯವಾದ ಅನ್ಶುಲ್ ಎಂಬ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ದೆಹಲಿಗೆ ತೆರಳಿದ್ದರು. ಈ ವೇಳೆ ಅವರ ಬಳಿಯಿದ್ದ ಬೆಲೆಬಾಳುವ ಚಿನ್ನಾಭರಣ ಹಾಗೂ ಹಣದ ಸಮೇತ ಅನ್ಶುಲ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಚಿಕಿತ್ಸೆಗೆ ಕರೆತಂದಿದ್ದ ಆರೋಪಿಯಿಂದ ಚಾಕು ಇರಿತ – ಯುವ ವೈದ್ಯೆ ಸಾವು
ಅನ್ಶುಲ್ ಜೈನ್ ಮ್ಯಾಟ್ರಿಮೋನಿ ಸೈಟ್‌ನಲ್ಲಿ ವಿಜಯಲಕ್ಷ್ಮೀ ಎಂಬವರನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ ವಾಟ್ಸಾಪ್‌ನಲ್ಲಿ ಮಾತನಾಡುತ್ತಾ ತನ್ನನ್ನು ಎನ್‌ಸಿಆರ್‌ನಲ್ಲಿ ಉದ್ಯಮಿ ಎಂದು ಪರಿಚಯಿಸಿಕೊಂಡು ಅವರನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ. ಮೂರು ದಿನಗಳ ಹಿಂದೆ ಅವರನ್ನು ದೆಹಲಿಗೆ ಬರುವಂತೆ ಒತ್ತಾಯಿಸಿ ಮದುವೆ ಸಮಾರಂಭವೊಂದರಲ್ಲಿ ಅವರನ್ನು ತನ್ನ ಕುಟುಂಬಕ್ಕೆ ಪರಿಚಯಿಸುವುದಾಗಿ ಹೇಳಿದ್ದು, ಅದಕ್ಕೆ ಸೂಕ್ತವಾದ ಒಡವೆಗಳು ಮತ್ತು ಬಟ್ಟೆಯನ್ನು ತರಬೇಕು ಎಂದು ಹೇಳಿದ್ದಾನೆ. ಇದನ್ನೂ ಓದಿ: ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್
ಮೇ 7ರಂದು ವಿಜಯಲಕ್ಷ್ಮೀ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಅವರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಫುಡ್‌ಕೋರ್ಟ್‌ನಲ್ಲಿ ಒಟ್ಟಿಗೆ ತಿಂಡಿ ತಿಂದು ಪ್ರಯಾಣ ಮುಂದುವರೆಸಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ವೇಳೆ, ಕಾರಿನಲ್ಲಿ ಏನೋ ಸಮಸ್ಯೆಯಿದೆ ಏನೆಂದು ನೋಡು ಎಂದು ಆಕೆಯನ್ನು ಕಾರಿನಿಂದ ಕೆಳಗಿಳಿಸಿದ್ದಾನೆ. ಆಕೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ 18 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳು, ಮೊಬೈಲ್ ಹಾಗೂ ಆಕೆಯ ಬ್ಯಾಗ್‌ನಲ್ಲಿದ್ದ 15,000 ರೂ. ಹಣದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಆಕೆಯ ಎಟಿಎಂ ಕಾರ್ಡಿನಿಂದ 50,000 ರೂ.ಗಳನ್ನೂ ಡ್ರಾ ಮಾಡಿದ್ದಾನೆ. ಇದನ್ನೂ ಓದಿ: ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ
ಘಟನೆ ನಡೆದ ಬಳಿಕ ವಿಜಯಲಕ್ಷ್ಮೀ ಆತನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದು, ಆತನ ಫೋಟೋವನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 420/406 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣಾ ಕರ್ತವ್ಯಕ್ಕೆ ಪಾನಮತ್ತರಾಗಿ ಆಗಮಿಸಿದ್ದ ಇಬ್ಬರು ಸಿಬ್ಬಂದಿ ಅಮಾನತು
ಮುಂಬೈ: ಮತ್ತೊಂದು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ ತಂದೆಯನ್ನು ಮಗನೇ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶಂಕರ್ ರಾಂಭೌ ಬೋರ್ಹಾಡೆ (80) ಮೃತ ವ್ಯಕ್ತಿ. ಶೇಖರ್ ಬೋರ್ಹಾಡೆ (47) ಆರೋಪಿ. ಇವರು ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಯಾಗಿದ್ದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ಘಟನೆ ನಡೆದಿದೆ. ಶಂಕರ್ ಬೋರ್ಹಾಡೆ ಮ್ಯಾಟ್ರಿಮೋನಿಯಲ್ಲಿ ಮರು ಮದುವೆ ಮಾಡಿಕೊಳ್ಳುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಈ ವಿಷಯ ತಿಳಿದ ಶೇಖರ್ ಕೋಪಗೊಂಡಿದ್ದ. ಇದರಿಂದಾಗಿ ಆತ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯನ್ನು ನೋಡಿದ ಶೇಖರ್, ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾರೆ.
ಬಳಿಕ ಶೇಖರ್ ರಾಜಗುರು ಪೊಲೀಸ್ ಠಾಣೆಗೆ ತೆರಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತನ್ನ ತಂದೆ ಮರು ಮದುವೆಯಾಗಲು ಬಯಸಿದ್ದರು. ಇದರಿಂದಾಗಿ ಕೋಪಗೊಂಡು ಅವರನ್ನು ಹತ್ಯೆಗೈದಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖರ್‍ನನ್ನು ಬಂಧಿಸಲಾಗಿದೆ. ಇನ್ಸ್‍ಪೆಕ್ಟರ್ ಸತೀಶ್ ಕುಮಾರ್ ಗೌರವ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್
ಹಾಸನ: ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಆರು ಲಕ್ಷ ಮೋಸ ಮಾಡಿದ್ದ ಚಾಲಾಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಲಕ್ಷ್ಮಿ (32) ಮತ್ತು ಆಕೆಗೆ ಸಹಾಯ ಮಾಡಿದ್ದ ಶಿವಣ್ಣ ಎಂದು ಗುರುತಿಸಲಾಗಿದೆ. ಆರೋಪಿ ಲಕ್ಷ್ಮಿ ಚಿಕ್ಕಬಳ್ಳಾಪುರ ಮೂಲದವಳಾಗಿದ್ದು, ಶಿವಣ್ಣ ಕೋಲಾರ ಮೂಲದವನು ಎಂದು ತಿಳಿದುಬಂದಿದೆ. ಹಾಸನದ 40 ವರ್ಷದ ಅವಿವಾಹಿತ ಪರಮೇಶ್ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ಲಕ್ಷ್ಮಿ ಮ್ಯಾಟ್ರಿಮೋನಿ ಮೂಲಕ ಪರಮೇಶ್‍ನನ್ನು ಪರಿಚಯ ಮಾಡಿಕೊಂಡಿದ್ದಳು. ನಾನು ಅನಾಥೆ, ಚಿಕ್ಕಮನ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ನಾನು ಐಟಿಯಲ್ಲಿ ಉದ್ಯೋಗಿ ಎಂದು ಪರಿಚಯ ಮಾಡಿಕೊಂಡಿದ್ದಳು. ನಂತರ ಡಿಸೆಂಬರ್ 2019 ರಿಂದ 2020ರ ತನಕ ಸುಮಾರು ಆರು ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಳು.
ಹಣ ಬಂದ ಕೂಡಲೇ ನನಗೆ ಕಾಲ್ ಮಾಡಿದರೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಲಕ್ಷ್ಮಿ ಬೆದರಿಕೆ ಹಾಕಿದ್ದಳು. ಆರೋಪಿ ಶಿವಣ್ಣನ ಸಹಾಯ ಪಡೆದು ಜನರಿಗೆ ಮೋಸ ಮಾಡುತ್ತಿದ್ದಳು. ಕೊನೆಗೆ ಪರಮೇಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಅಂತಿಮವಾಗಿ ಹಾಸನ ಪೊಲೀಸರು ಬೀಸಿದ್ದ ಬಲೆಗೆ ಶಿವಣ್ಣ ಮತ್ತು ಲಕ್ಷ್ಮಿ ಬಿದ್ದಿದ್ದಾರೆ.
ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ಯುವತಿಯನ್ನ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಮೇಶ್ ಅಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ. ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ರಮೇಶ್ ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ಯುವತಿಯರನ್ನ ನಂಬಿಸಿ ಮೋಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಆರೋಪಿ ರಮೇಶ್ ಇತ್ತೀಚೆಗೆ ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ಆಕೆಗೆ ಮದುವೆ ಆಗುವುದಾಗಿ ನಂಬಿಸಿದ್ದನು. ಬಳಿಕ ಸೈಟ್ ಕೊಳ್ಳಲು ಹಣದ ಅವಶ್ಯಕತೆ ಇದೆ ಆರೋಪಿ ರಮೇಶ್ ಯುವತಿಯ ಬಳಿ 7 ಲಕ್ಷ ಹಣ ಕೇಳಿದ್ದನು.
ಅದರಂತೆಯೇ ಯುವತಿ ಕೂಡ ರಮೇಶ್‍ನನ್ನು ನಂಬಿ 7 ಲಕ್ಷ ಹಣ ಕೊಟ್ಟಿದ್ದರು. ಆದರೆ ಆರೋಪಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದನು.
ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದೀಗ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆ ಆರೋಪಿಯಿಂದ 6.8 ಲಕ್ಷ ನಗದು, ಒಂದು ಕಾರು ಮತ್ತು ಎರಡು ಮೊಬೈಲ್ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಯ ದಾಖಲಾತಿಗಳು ವಶ ಪಡಿಸಿಕೊಂಡಿದ್ದಾರೆ.
ಬೆಂಗಳೂರು: ನಾಲ್ಕು ವಿವಾಹ ಹಾಗೂ ಪ್ರೀತಿ ಹೆಸರಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಗರದ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸುರೇಶ್ ಅಲಿಯಾಸ್ ಮೈಸೂರು ಸುರೇಶಾ ಬಂಧಿತ ಆರೋಪಿ. ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ. ವಿಧವೆ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಕೀಚಕ ಹಣ ಪಡೆದು ನಂತರ ವಂಚಿಸುತ್ತಿದ್ದ. ಈಗಾಗಲೇ ನಾಲ್ವರನ್ನು ಮದುವೆ ಆಗಿರುವ ಆರೋಪಿ ಸುರೇಶ್, 20ಕ್ಕೂ ಹೆಚ್ಚು ಯುವತಿಯೊಂದಿಗೆ ಪ್ರೀತಿಯಲ್ಲಿದ್ದ ಎಂಬ ಭಯಾನಕ ಸತ್ಯವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಂತರ ವಿಚಾರಣೆ ನಡೆಸಿದಾಗ ಸುರೇಶನ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಸುರೇಶ್ ಮೂಲತಃ ಮೈಸೂರಿನವನು, 2013ರಲ್ಲಿ ಶ್ವೇತಾ ಆಚಾರ್ಯ ಅವರ ಜೊತೆ ವಿವಾಹವಾಗಿ ವಿಚ್ಛೇದನ ಆಗಿದೆ. ಹೆಂಡತಿ ದೂರವಾದ ಮೇಲೆ ವಿಚ್ಛೇದನ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬಲೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಮಾಡಿ ಐದಾರು ವರ್ಷಗಳಲ್ಲಿ ಬರೋಬ್ಬರಿ ನಾಲ್ವರನ್ನು ಮದುವೆ ಆಗಿದ್ದಾನೆ. ಅಷ್ಟೇ ಅಲ್ಲದೆ ಮತ್ತಷ್ಟು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.
ವಿಚ್ಛೇದಿತ ಹಣವಂತ ಮಹಿಳೆಯರು ಪರಿಚಯವಾಗುತ್ತಿದ್ದಂತೆ ನಿವೇಶನ ಖರೀದಿಸುವ ನೆಪದಲ್ಲಿ ಅವರಿಂದ ಹಣ ಪಡೆಯುತ್ತಿದ್ದ. ನಂತರ ಹಣ ವಾಪಸ್ ನೀಡದೆ ಪರಾರಿಯಾಗುತ್ತಿದ್ದ. ಇದೇ ರೀತಿ ಮ್ಯಾಟ್ರಿಮೋನಿಯಲ್ಲಿ ಹಲವು ವಿಚ್ಛೇಧಿತ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಆರೋಪಿ ಮಾತಿಗೆ ಮರುಳಾಗಿ ಹಣ ನೀಡುತ್ತಿದ್ದ ಮಹಿಳೆಯರು, ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದರು.
ಇದೇ ರೀತಿ ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆ ಮಾಂಗಲ್ಯ ಸರ ಸೇರಿ 80 ಗ್ರಾಂ. ಒಡವೆ ಹಾಗೂ ಹಣ ಕೊಟ್ಟು ಮೊಸ ಹೋಗಿದ್ದಳು. ನಂತರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ತನಿಖೆ ಪ್ರಾರಂಭಿಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ನಂತರ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ಬಣ್ಣ ಬಯಲಾಗಿದೆ. ಆರೋಪಿ ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಹಲವಡೆಯ ಮಹಿಳೆಯರಿಗೆ ಮೋಸ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.