ಕಾರವಾರ: ಮಟ್ಕಾ ಆಡಿಸುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಪೊಲೀಸ್ ಸಿಬ್ಬಂದಿಗೆ 8 ವರ್ಷಗಳ ಬಳಿಕ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಶಿಕ್ಷೆಗೊಳಗಾದ ಆರೋಪಿ.
2017ರಲ್ಲಿ ಪಿಗ್ನಿ ಏಜೆಂಟ್ ಚಂದ್ರಹಾಸ ಎನ್ನುವವರು ಮಟ್ಕಾ ಹಣವನ್ನು ಸಂಗ್ರಹಿಸುವ ವಿಷಯ ಅರಿತ ಪೊಲೀಸ್ ಸಿಬ್ಬಂದಿ ಮುರುಳೀಧರ ನಾಯ್ಕ ಅವರು ಪ್ರತಿ ಎರಡು ವಾರಕ್ಕೆ 22 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದ ಚಂದ್ರಹಾಸ್ ಎನ್ನುವವರು ಮುರುಳೀಧರ್ ನಾಯ್ಕ 22 ಸಾವಿರ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಈ ಪ್ರಕರಣ ಎಂಟು ವರ್ಷಗಳ ಸುದೀರ್ಘ ವಾದ-ಪ್ರತಿವಾದ ನಡೆದು ಕಾರವಾರದ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ತೀರ್ಪು ನೀಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ (Varun Tej) ನಟನೆಯ 14ನೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್ ನಲ್ಲಿಂದು ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಮಾರುತಿ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರು. ಹರೀಶ್ ಶಂಕರ್ ಮಟ್ಕಾ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.
ವರುಣ್ ತೇಜ್ ನಟನೆಯ 14ನೇ ಸಿನಿಮಾಗೆ ಮಟ್ಕಾ (Matka) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್ ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿಕರಿಯರ್ ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಎಂಬ ನಿರೀಕ್ಷೆ ಹುಟ್ಟಿಸಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆಗಿನ ಸೆಲ್ಫಿ ಶೇರ್, ಹಳೆಯ ನೆನಪು ಬಿಚ್ಚಿಟ್ಟ ರಶ್ಮಿಕಾ
ಫಲಾಸ ಸಿನಿಮಾ ಖ್ಯಾತಿಯ ಕರುಣ ಕುಮಾರ್ (Karuna Kumar) ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮಟ್ಕಾ ಸಿನಿಮಾದಲ್ಲಿ ನಾಯಕಿಯಾಗಿ ಮೀನಾಕ್ಷಿ ಚೌಧರಿ (Meenakshi Chaudhary) ನಟಿಸುತ್ತಿದ್ದು, ನವೀನ್ ಚಂದ್ರ, ಕನ್ನಡದ ಕಿಶೋರ್, ಅಜಯ್ ಘೋಷ್, ಮೈಮ್ ಗೋಪಿ, ರೂಪಲಕ್ಷ್ಮಿ, ವಿಜಯರಾಮ ರಾಜು, ಜಗದೀಶ್, ರಾಜ್ ತಿರಂದಾಸ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇನ್ನು, ಮಟ್ಕಾದ ಸ್ಪೆಷಲ್ ನಂಬರ್ ಗೆ ಬಾಲಿವುಡ್ ಬ್ಯೂಟಿ ನೋರಾ ಫತೇಹಿ (Nora Fatehi) ಮೆಗಾ ಪ್ರಿನ್ಸ್ ವರುಣ್ ತೇಜ್ ಜೊತೆ ಸೊಂಟ ಬಳುಕಿಸಲಿದ್ದಾರೆ.
ವೈರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಮೋಹನ್ ಚೆರುಕುರಿ ಮತ್ತು ಡಾ ವಿಜೇಂದರ್ ರೆಡ್ಡಿ ಟೀಗಾಲ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಪ್ರಿಯ ಸೇಠ್ ಛಾಯಾಗ್ರಹಣ, ಕಾರ್ತಿಕ್ ಶ್ರೀನಿವಾಸ್ ಆರ್ ಸಂಕಲನ, ಸುರೇಶ್ ಕಲಾ ನಿರ್ದೇಶನವಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಮಟ್ಕಾ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ.
ಚಿಕ್ಕಬಳ್ಳಾಪುರ: ಕಲಿಯುಗ ಡಿಜಿಟಿಲ್ ಯುಗವಾಗಬೇಕು, ಎಲ್ಲ ವ್ಯವಹಾರಗಳು ಅನ್‍ಲೈನ್ ಮುಖಾಂತರವೇ ನಡೆದು ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲವೂ ಅನ್‍ಲೈನ್ ಮೂಲಕವೇ ವ್ಯವಹಾರ ವಹಿವಾಟು ನಡೆಯಲಿ ಅಂತ ಪ್ರಧಾನಿ ಮೋದಿ ಆಶಯಕ್ಕೆ ತಕ್ಕಂತೆ ಇತ್ತೀಚೆಗೆ ಅನ್‍ಲೈನ್ ಮೂಲಕ ಡಿಜಿಟಲ್ ಪೇಮೆಂಟ್‍ಗೆ ಪ್ರೋತ್ಸಾಹ ನೀಡಿದರು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಕಿಲಾಡಿ ಮಹಿಳೆಯರು ಅನ್‍ಲೈನ್ ಮೂಲಕವೇ ಮಟ್ಕಾ ದಂಧೆ ನಡೆಸುವ ಮೂಲಕ ಲಕ್ಷ ಲಕ್ಷ ವ್ಯವಹಾರ ನಡೆಸುತ್ತಿದ್ದರು.
ಇಂತಹ ಕಿಲಾಡಿ ಮಹಿಳೆಯರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ದಿನಸಿ ಅಂಗಡಿ ಮತ್ತು ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಿ ಹಾಗೂ ಅಂಜಿನಮ್ಮ ಇಬ್ಬರು ದಿನಸಿ ಅಂಗಡಿ ಜೊತೆ ಹೋಟೆಲ್ ಇಟ್ಟುಕೊಂಡಿದ್ದು, ಮಟ್ಕಾ ದಂಧೆ ನಡೆಸುತ್ತಿದ್ದರು.
1 ರೂಪಾಯಿಗೆ 70 ರೂಪಾಯಿ ಕೊಡುವ ಈ ಮಟ್ಕಾ ಜೂಜಾಟದ ವ್ಯವಹಾರವನ್ನು ಮೊಬೈಲ್ ಫೋನ್ ಕಾಲ್ ಮೂಲಕ ನಂಬರ್ ತಿಳಿಸುವುದು ಹಾಗೂ ಹಣವನ್ನು ಗೂಗಲ್ ಪೇ ಮತ್ತು ಫೋನ್ ಪೇ ಮುಖಾಂತರ ರವಾನೆ ಮಾಡುವ ಮೂಲಕ ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ದಿನಸಿ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಸಹ ಇಟ್ಟುಕೊಂಡಿದ್ದು, ಅದರ ಮೂಲಕ ಜೂಜಾಟದ ಹಣ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಲಕ್ಷ್ಮಿ ಹಾಗೂ ಅಂಜಿನಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಜಿನಮ್ಮ ಹಾಗೂ ಲಕ್ಷ್ಮಿ ಬಳಿ 21 ಸಾವಿರದ ಸ್ಮಾರ್ಟ್ ಫೋನ್ ಹಾಗೂ 2 ಬಾಲ್ ಪಾಯಿಂಟ್ ಪೆನ್ ಸೇರಿದಂತೆ ಬಿಮ್ ಯುಪಿಐನ ಬಾರ್ ಕೋಡ್ ಸ್ಕ್ಯಾನರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಮೂವರು ಪೊಲೀಸರ ಅಮಾನತು
ಮಿಟ್ಟೇಮರಿ ಗ್ರಾಮದ ಹೊರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಮಟ್ಕಾ ದಂಧೆಯನ್ನ ಮಹಿಳೆಯರು ನಡೆಸುತ್ತಿದ್ದರೂ, ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದ ಕಾರಣ ಹೊರ ಠಾಣೆ ಪೊಲೀಸ್ ಪೇದೆಗಳಾದ ಶ್ರೀನಿವಾಸ್, ಶಶಿಕುಮಾರ್ ಹಾಗೂ ದೇವರಾಜ್ ನನ್ನ ಅಮಾನತು ಮಾಡಿ ಚಿಕ್ಕಬಳ್ಳಾಪುರ ಎಸ್‍ಪಿ ಅಭಿನವ್ ಆದೇಶಿಸಿದ್ದಾರೆ.
ಉಡುಪಿ: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಗಾಂಜಾ ಬೆಳೆ, ಮಟ್ಕಾ ದಂಧೆ ಜಾಸ್ತಿಯಾಗುತ್ತಿದೆ ಎಂದು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕುಂದಾಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ಶಾಸಕರು, ಎರಡು ಅಕ್ರಮ ನಿಲ್ಲಿಸಬೇಕು ಎಂದು ಅಸಹಾಯಕತೆ ತೋಡಿಕೊಂಡು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಟ್ಕಾ ದಂಧೆ ಸಂಪೂರ್ಣವಾಗಿ ನಿಲ್ಲಿಸಬೇಕು. ಈ ವಿಚಾರವಾಗಿ ಡಿವೈಎಸ್‍ಪಿ ಮತ್ತು ಜಿಲ್ಲಾ ಎಸ್‍ಪಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ ಪಶ್ಚಿಮ ಘಟ್ಟ ಭಾಗದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ. ಕೂಡಲೇ ಅದನ್ನು ಪತ್ತೆ ಹಚ್ಚಿ ನಾಶ ಮಾಡುವ ಕೆಲಸ ಮಾಡಿ ಎಂದು ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ನಮಗೆ ಆ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂಬ ಅಭಯಾರಣ್ಯ ಅಧಿಕಾರಿಗಳ ಮಾತಿಗೆ ಕೆರಳಿದ ಶಾಸಕರು, ನಿಮ್ಮ ವನಪಾಲಕರು, ವಾಚರ್‍ಗಳು ಏನು ಮಾಡುತ್ತಿದ್ದಾರೆ? ಅವರಿಂದ ತಿಳಿದುಕೊಳ್ಳಿ. ನಮಗೆ ಮಾಹಿತಿ ಇದೆ ನಿಮಗೆ ಅಕ್ರಮ ಗೊತ್ತಾಗಲ್ವಾ ಎಂದು ಪ್ರಶ್ನಿಸಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತುಮಕೂರು: ಪಾವಗಡದಲ್ಲಿ ಮಟ್ಕಾ ದಂಧೆ ಮೀತಿ ಮೀರಿ ಹೋಗಿದ್ದು, ಪೊಲೀಸ್ ಇಲಾಖೆ ಈ ದಂಧೆ ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಇದರಿಂದ ಬೇಸತ್ತ ಯುವ ಪಡೆ ‘ಮಟ್ಕಾ ನಿಲಿಸಿ ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ.
ಈ ಅಭಿಯಾನದಿಂದ ಮುಜುಗರಕ್ಕೊಳಗಾದ ಪಾವಗಡದ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು, ಮಟ್ಕಾ ದಂಧೆ ನಿಯಂತ್ರಣಕ್ಕೆ ಸಜ್ಜಾಗಿದೆ. ಪಾವಗಡ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಮಟ್ಕಾ ದಂಧೆ ನಡೆಸುವ ಬುಕ್ಕಿಗಳನ್ನು ಪ್ರತಿದಿನ ತನ್ನ ವಶಕ್ಕೆ ಪಡೆದುಕೊಂಡು ವಾಪಸ್ ಬಿಡುಗಡೆ ಮಾಡುತ್ತಿದೆ. ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 20 ಕ್ಕೂ ಹೆಚ್ಚು ಮಟ್ಕಾ ದಂಧೆ ನಡೆಸುವವರನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ದಿಗ್ಬಂಧನ ಹಾಕಲಾಗುತ್ತಿದೆ.
ಠಾಣೆ ಎದುರು ಎಲ್ಲರನ್ನು ಕೂರಿಸಲಾಗಿದ್ದು, ದಂಧೆಕೋರರು ಎಲ್ಲೂ ಹೋಗದೇ ಪೊಲೀಸ್ ಕಾವಲು ಹಾಕಲಾಗಿದೆ. ಕಳೆದ ಒಂದು ವಾರದಿಂದ ಪಾವಗಡ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಈ ನಡುವೆ ಮಟ್ಕಾ ದಂಧೆಯಲ್ಲಿ ಶಾಮಿಲಾಗಿದ್ದರು ಎಂಬ ಆರೋಪದ ಮೇಲೆ ಸಿಪಿಐ ಮಹೇಶ್‍ನನ್ನು ಅಮಾನತುಗೊಳಿಸಲಾಗಿದೆ. ಇದರ ಪರಿಣಾಮ ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆ ನಿಯಂತ್ರಣವಾಗಿದೆ.
ಆದರೂ ಮಟ್ಕಾ ದಂಧೆಯ ಪ್ರಮುಖ ರೂವಾರಿಗಳಾದ ಅಶ್ವಥ್, ರಾಮಾಂಜಿ, ನೂರಿ ತಲೆ ಮರೆಸಿಕೊಂಡಿದ್ದು, ಅವರನ್ನೂ ಬಂಧಿಸಬೇಕು ಎಂದು ಪೊಲೀಸರ ಮೇಲೆ ಸಾರ್ವಜನಿಕರ ಒತ್ತಡವನ್ನು ಹೇರಿದ್ದಾರೆ.
ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಮಿತಿಮೀರಿದ ನಡೆಯುತ್ತಿರುವ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
ಜಿಲ್ಲೆಯ ಪಾವಗಡ ತಾಲೂಕು ಪ್ರೇಕ್ಷಣಿಯ ಸ್ಥಳವಾಗಿದ್ದು, ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಪಾವಗಡದಲ್ಲಿ ಸ್ಥಳೀಯರು ಮತ್ತು ಇತರೆ ಪ್ರದೇಶದಿಂದ ಬಂದ ಜನರು ಮಟ್ಕಾ ದಂದೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದರಿಂದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.
ಒಂದು ವಾರದಿಂದಲೇ ಈ ಅಭಿಯಾನವನ್ನು ಸ್ಥಳೀಯ ಯುವಕರು ಶುರು ಮಾಡಿದ್ದು, ಈಗಾಗಲೇ ಅಭಿಯಾನದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಯುವಕರು ಮಟ್ಕಾ ದಂಧೆಯನ್ನು ನಿಲ್ಲಿಸಬೇಕು. ಪಾವಗಡ ಪಟ್ಟಣದ ವೈ.ಎನ್ ಹೊಸಕೋಟೆ, ನಿಡುಗಲ್, ನಾಗಲಮಡಿಕೆ ಸೇರಿದ್ದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಿತಿಮೀರಿ ಮಟ್ಕಾ ದಂಧೆ ನಡೆಯುತ್ತಿದೆ. ಈ ಮಟ್ಕಾ ದಂಧೆಯಿಂದ ಸ್ಥಳೀಯ ಯುವ ಜನರು ಹಾಳಾಗುತ್ತಿದ್ದಾರೆ ಎಂದು ಪೋಸ್ಟ್ ಗಳಲ್ಲಿ ಬಿತ್ತರಿಸಲಾಗುತ್ತಿದೆ.