Tag: Maths

  • ರಾಜ್ಯ ಬಜೆಟ್‌ನಲ್ಲಿ ಮಠಗಳಿಗಿಲ್ಲ ನೇರ ಅನುದಾನ

    ರಾಜ್ಯ ಬಜೆಟ್‌ನಲ್ಲಿ ಮಠಗಳಿಗಿಲ್ಲ ನೇರ ಅನುದಾನ

    ಬೆಂಗಳೂರು: ಈ ಬಾರಿ ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಯಾವುದೇ ಮಠಮಾನ್ಯಗಳಿಗೆ ನೇರ ಅನುದಾನ ನೀಡಿಲ್ಲ. ಬದಲಾಗಿ ಧಾರ್ಮಿಕ ದತ್ತಿ ಇಲಾಖೆಯಡಿ 1,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

    ಧಾರ್ಮಿಕ ದತ್ತಿ ಇಲಾಖೆಯಡಿ 2022-23ನೇ ಸಾಲಿಗೆ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರ ಕಾಮಗಾರಿಗಳಿಗೆ ಒಟ್ಟು 425 ಕೋಟಿ ರೂ. ಅನುದಾನ ನೀಡಲಾಗಿತ್ತು. ಅಂತೆಯೇ ಮುಂದಿನ 2 ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ ನಮ್ಮ ಸರ್ಕಾರ 1,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: Karnataka Budget 2023ː ಬೆಂಗ್ಳೂರು ಅಭಿವೃದ್ಧಿಗೆ 9,698 ಕೋಟಿ – ಪ್ರತಿ ವಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ

    ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

    ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 48,000 ರೂ.ನಿಂದ 60,000 ರೂ.ಗೆ ಹೆಚ್ಚಿಸಲಾಗುವುದು. ಈ ಸೌಲಭ್ಯದಿಂದ 3,721 ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೊಮ್ಮಾಯಿ ಬಜೆಟ್ : ಶಂಕರ್ ನಾಗ್ ಹೆಸರಿನಲ್ಲಿ ಟ್ಯಾಕ್ಸಿ, ಆಟೋ ನಿಲ್ದಾಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೇಲಾದ ಗಣಿತದಲ್ಲಿಯೇ ಐಎಎಸ್ ಮಾಡಿದೆ- ವಿದ್ಯಾರ್ಥಿಗಳಿಗೆ ಸಿಇಓ ಪಾಠ

    ಫೇಲಾದ ಗಣಿತದಲ್ಲಿಯೇ ಐಎಎಸ್ ಮಾಡಿದೆ- ವಿದ್ಯಾರ್ಥಿಗಳಿಗೆ ಸಿಇಓ ಪಾಠ

    – ಎಸ್‍ಎಲ್‍ಎಲ್‍ಸಿ ಫಲಿತಾಂಶದಲ್ಲಿ ಬಳ್ಳಾರಿ ಅಗ್ರಸ್ಥಾನಕ್ಕೇರಲು ಶ್ರಮಿಸಿ

    ಬಳ್ಳಾರಿ: ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಲ್‍ಎಲ್‍ಸಿ ಫಲಿತಾಂಶ ವೃದ್ಧಿಸುವ ನಿಟ್ಟಿನಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಬಾರಿ ಜಿಲ್ಲೆ ಅಗ್ರಸ್ಥಾನಕ್ಕೇರಿಸಲು ಎಲ್ಲ ಶಿಕ್ಷಕ ಸಮುದಾಯ ಶ್ರಮಿಸಬೇಕು. ಎಲ್ಲ ಮಕ್ಕಳನ್ನು ಪಾಸ್ ಮಾಡುವ ಸಾಮರ್ಥ್ಯ ಹಾಗೂ ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂದು ಜಿ.ಪಂ ಸಿಇಒ ಕೆ.ನಿತೀಶ್ ಹೇಳಿದ್ದಾರೆ.

    ಜಿಲ್ಲಾಡಳಿತ, ಜಿ.ಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಎಸ್‍ಎಲ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸುವ ಕುರಿತು ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಮುಖ್ಯಗುರುಗಳು, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬದುಕು ರೂಪಿಸುವ ನಿಟ್ಟಿನಲ್ಲಿ ಎಸ್‍ಎಲ್‍ಎಲ್‍ಸಿ ಮುಖ್ಯ ಘಟ್ಟ. ತಾವು ವಿದ್ಯಾರ್ಥಿಗಳನ್ನು ಯಾವ ರೀತಿ ಪರಿಣಾಮಕಾರಿಯಾದ ಬೋಧನೆಯ ಮೂಲಕ ಅಣಿಗೊಳಿಸುತ್ತೀರೋ ಅವರು ಉತ್ತಮ ಫಲಿತಾಂಶ ಪಡೆಯಲು ಸಜ್ಜಾಗುತ್ತಾರೆ ಎಂದರು.

    ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಅವರನ್ನು ಪರಿಗಣಿಸಿ ಮತ್ತು ಬೋಧಿಸಿ. ಶಿಕ್ಷಕರು ಸರಿಯಾಗಿ ಪಾಠ ಮಾಡಿದರೇ ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಂಡ ಬಳಿಕ ನಿಮ್ಮನ್ನು ಸ್ಮರಿಸಲಿದ್ದಾರೆ. ಶಿಕ್ಷಕರಿಗೆ ಪ್ರತಿ ವರ್ಷ 10ನೇ ಕ್ಲಾಸ್ ಬರುತ್ತೆ. ಆದರೆ ವಿದ್ಯಾರ್ಥಿಗಳಿಗೆ ಒಂದೆ ಸಾರಿ ಬರುವುದು. ಇದೊಂದು ನಿಮಗೆ ಸದಾವಕಾಶ, ಅದನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.

    ತಾವು ಖುಷಿಯಿಂದ ಮಕ್ಕಳಿಗೆ ಪಾಠ ಹೇಳಿಕೊಟ್ಟರೇ ಅದು ಅವರ ತಲೆಗೆ ಹೋಗುತ್ತದೆ. ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಮಗೆ ಯಾವ ಸಹಾಯ-ಸಹಕಾರ ಬೇಕು ಅದನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಚಿತ್ರದುರ್ಗದಲ್ಲಿ ನವೋದಯ ಶಾಲೆಯಲ್ಲಿ ನಾನು 8ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಫೇಲಾಗಿದ್ದೆ. ಆದರೆ ನಂತರ ಅದೇ ಗಣಿತ ಶಿಕ್ಷಕರು ಅತ್ಯಂತ ಇಷ್ಟವಾಗಿ ಅವರ ಪಾಠವನ್ನು ಪ್ರೀತಿಯಿಂದ ಕಲಿತು ಎಸ್‍ಎಲ್‍ಎಲ್‍ಸಿಯಲ್ಲಿ 99 ಹಾಗೂ ಪಿಯುಸಿಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡೆ ಎಂದು ಕೆ.ನಿತೀಶ್ ಹೇಳಿದ್ದಾರೆ.

    ನಂತರದ ದಿನಗಳಲ್ಲಿ ಗಣಿತ ಇಷ್ಟದ ವಿಷಯವಾಯ್ತು. ಇಂಜನಿಯರಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಐಎಎಸ್ ಪರೀಕ್ಷೆಯನ್ನು ಗಣಿತದಲ್ಲಿಯೇ ಎದುರಿಸಿ ಇಡೀ ದೇಶಕ್ಕೆ 8ನೇ ರ‌್ಯಾಂಕ್ ಗಳಿಸಿದೆ. ಇದಕ್ಕೆ ಕಾರಣ ನನಗೆ ಕಲಿಸಿದ ಗಣಿತ ಶಿಕ್ಷಕರು ಎಂದು ಅವರು ಸ್ಮರಿಸಿದರು. ತಾವು ತಮ್ಮ ಮಕ್ಕಳನ್ನು ಅತ್ಯಂತ ಇಷ್ಟದಿಂದ ಕಲಿಸಿ. ಅವರು ಉನ್ನತ ಸ್ಥಾನಕ್ಕೇರಿದಾಗ ತಮ್ಮನ್ನು ಸದಾ ಸ್ಮರಿಸುತ್ತಾರೆ. ಅಂದು ಫೇಲಾಗಿದ್ದ ನನ್ನನ್ನೇ ಐಎಎಸ್ ಅಧಿಕಾರಿಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ಸಮೂಹಕ್ಕೆ ಸೇರುತ್ತದೆ ಎಂದು ತಮ್ಮ ಬಾಲ್ಯವನ್ನು ನೆನೆದರು.

  • ಗಣಿತವನ್ನು ಸುಲಲಿತವಾಗಿ ಅರೆದು ಕುಡಿದ ಯುವಕ- 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ

    ಗಣಿತವನ್ನು ಸುಲಲಿತವಾಗಿ ಅರೆದು ಕುಡಿದ ಯುವಕ- 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ

    ಚಿತ್ರದುರ್ಗ: ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಗಣಿತ ಕಬ್ಬಿಣದ ಕಡಲೆಯೇ ಆಗಿರುತ್ತದೆ. ಅದರಲ್ಲೂ ಮಗ್ಗಿಯಂತೂ ಕಷ್ಟದಾಯಕವಾಗಿರುತ್ತದೆ. ಆದರೆ ಕೋಟೆನಾಡಿನಲ್ಲಿ ವಿದ್ಯಾರ್ಥಿ ಮಾತ್ರ 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ ವಿಧಾನವನ್ನು ಕಂಡುಕೊಂಡಿದ್ದಾರೆ.

    ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯಲ್ಲಿನ ಹ್ಯಾಪಿ ಹೋಮ್ ಸ್ಕೂಲ್ ಮುಖ್ಯಸ್ಥರು ಹಾಗೂ ಶಿಕ್ಷಕಿಯಾಗಿರೋ ಮಾಲಾ ಅವರ ಪುತ್ರ ಸಿದ್ಧಾರ್ಥರಿಗೆ ಚಿಕ್ಕವಯಸ್ಸಿನಿಂದಲೂ ಗಣಿತದ ಬಗ್ಗೆ ಬಾರಿ ಆಸಕ್ತಿ. 6 ವರ್ಷದವನಿದ್ದಾಗಲೇ ಅಬ್ಯಾಕಸ್ ನಲ್ಲಿ ತುಂಬಾ ಫಾಸ್ಟ್ ಆಗಿದ್ದನು. ಆಗ ಓರ್ವ ವಿದ್ಯಾರ್ಥಿ 100ರ ಮಗ್ಗಿ ಹೇಳುವುದು ನೋಡಿ ಆಕರ್ಷಿತನಾಗಿದ್ದ ಈ ಯುವಕ ಕೇವಲ 1 ವಾರದ ನಂತರ 500 ವರೆಗೆ ಮಗ್ಗಿ ಹೇಳಲು ಶುರು ಮಾಡಿದ್ದಾರಂತೆ.

    ಇದೀಗ 6000 ರವರೆಗೆ ಏನೇ ಕೇಳಿದರೂ ಕ್ಷಣಾರ್ಧದಲ್ಲಿ ಫಟಾಫಟ್ ಅಂತ ಮಗ್ಗಿ ಹೇಳುತ್ತಾರೆ. ತಾನೇ ಖುದ್ದಾಗಿ 2ರಿಂದ 6,000ದವರೆಗೆ ಮಗ್ಗಿಯನ್ನು ಸುಲಭವಾಗಿ ಬರೆಯಬಲ್ಲ ವಿಧಾನವನ್ನು ಸಹ ಕಂಡು ಹಿಡಿದಿದ್ದಾರೆ. ಅದಕ್ಕೆ ಟಿಕ್ ಟ್ಯಾಕ್ ಟೂ ಅಂತ ಹೆಸರಿಟ್ಟಿದ್ದಾರೆ. ಎರಡು ಟೇಬಲ್ ಹಾಕಿ ಮಗ್ಗಿಯನ್ನು ವಿಸುವಲೇಸೇಷನ್ ನಲ್ಲಿ ಸುಲಭವಾಗಿ ಕಲಿಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಯಾವುದೇ ಮಗ್ಗಿ ಕೇಳಿದರೂ ಕ್ಷಣಾರ್ಧದಲ್ಲಿ ಹೇಳುವಂತ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಅಂತೆಯೇ ಅದೇ ವಿಧಾನವನ್ನು ಅಮ್ಮ ಕಟ್ಟಿದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಾರೆ.

    ಇದೀಗ ಬಿಬಿಎಂ ಓದುತ್ತಿರುವ ಈ ವಿದ್ಯಾರ್ಥಿಯ ಪ್ರತಿಭೆ ಕಂಡು ಖುದ್ದು ಶಿಕ್ಷಕಿ ಆಗಿರುವ ತಾಯಿಯೇ ಬೆರಗಾಗಿದ್ದಾರೆ. ಅಲ್ಲದೆ ಮಗನ ಸೂತ್ರವನ್ನೇ ಅನುಸರಿಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಆ ಮೂಲಕ ಕಬ್ಬಿಣದ ಕಡಲೆ ಆಗಿದ್ದ ಮಗ್ಗಿಯನ್ನು ಸರಳಸೂತ್ರದಲ್ಲಿ ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಇತರೆ ಶಿಕ್ಷಕರು ಸಹ ವಿದ್ಯಾರ್ಥಿಯ ಪ್ರತಿಭೆಗೆ ಶಹಬ್ಬಾಶ್ ಗಿರಿ ನೀಡಿದ್ದು, ಈ ಕ್ಷೇತ್ರದಲ್ಲಿ ಅಗಾಧವಾಗಿ ಸಾಧಿಸಿ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸಿದೆ ಎಂದು ಸಿದ್ಧಾರ್ಥ್ ತಾಯಿ ಹೇಳಿದ್ದಾರೆ.

    ಒಟ್ಟಾರೆಯಾಗಿ ಕೋಟೆನಾಡಿನ ಈ ವಿದ್ಯಾರ್ಥಿಯ ಸರಳಸೂತ್ರ ಈಗ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಅಪರೂಪದ ಪ್ರತಿಭೆಗೆ ವಿವಿಧ ಮಠ ಮಾನ್ಯಗಳು ಗೌರವಿಸಿ ಅಭಿನಂದಿಸುವ ಮೂಲಕ ಬೆನ್ನು ತಟ್ಟಿವೆ. ಪ್ರತಿಭಾವಂತ ಯುವಕನ ಕನಸು ಕೂಡ ನನಸಾಗಲಿ ಎಂಬುದು ದುರ್ಗದ ಜನರ ಆಶಯ.