Tag: Maternity

  • ಸಂತೆಗೆ ಬಂದಿದ್ದ ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆ

    ಸಂತೆಗೆ ಬಂದಿದ್ದ ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆ

    ಯಾದಗಿರಿ: ಏಳು ತಿಂಗಳ ಗರ್ಭಿಣಿಗೆ ನಡುರಸ್ತೆಯಲ್ಲಿ ಹೆರಿಗೆಯಾಗಿರುವ ಘಟನೆ ಜಿಲ್ಲೆಯ ಕಕ್ಕೇರಾ ಪಟ್ಟಣದ ಹೊರ ಭಾಗದಲ್ಲಿ ನಡೆದಿದೆ.

    ಬುಧವಾರ ಮಧ್ಯಾಹ್ನ ಬೆಂಚಿಗಡ್ಡಿ ಗ್ರಾಮದಿಂದ ಕಕ್ಕೇರಾದ ಸಂತೆಗೆ ಬಂದಿದ್ದ ಮರಿಯಮ್ಮ ವಾಪಸ್ ತೆರಳುವಾಗ ನಡುರಸ್ತೆಯಲ್ಲಿ ಅವಳಿ ಮಕ್ಕಳಗೆ ಜನ್ಮ ನೀಡಿದ್ದಾರೆ. ಎರಡು ಮಕ್ಕಳಲ್ಲಿ ಒಂದು ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

    ಮರಿಯಮ್ಮ ಅವರ ನೋವು ನೋಡದೆ ಅಲ್ಲಿಯ ಮಹಿಳೆಯರು ಟಂಟಂನಲ್ಲಿ ಹೆರಿಗೆಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಂದು ಹೆಣ್ಣು ಮಗು ಹಾಗೂ ತಾಯಿಯನ್ನು ಕಕ್ಕೇರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

  • ಸಕಾಲದಲ್ಲಿ ಚಿಕಿತ್ಸೆ ನೀಡದ್ದಕ್ಕೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು

    ಸಕಾಲದಲ್ಲಿ ಚಿಕಿತ್ಸೆ ನೀಡದ್ದಕ್ಕೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು

    ಕಲಬುರಗಿ: ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ತವರು ಜಿಲ್ಲೆಯಾದ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

    ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ವಿಜಯಲಕ್ಷ್ಮೀ ನಿಂಬಾಳಕರ ಅವರು ಮೃತ ಪಟ್ಟಿದ್ದಾರೆ. ಇವರು ಬುಧವಾರ ಬೆಳಗ್ಗೆ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದು ನಂತರ ಅನಾರೋಗ್ಯದ ಸಮಸ್ಯೆಯಿಂದ ಕೂಡಲೇ ಕಲಬುರಗಿ ಜಿಲ್ಲಾಸ್ಪತ್ರೆಗೆ ಬೆಳಗ್ಗೆ 10 ಗಂಟೆಗೆ ದಾಖಲಾಗಿದ್ದಾರೆ.

    ಆದರೆ ಕಲಬುರಗಿ ಜಿಲ್ಲಾಸ್ಪತ್ರೆಯ ವೈದ್ಯರು ಮಧ್ಯಾಹ್ನ 2 ಗಂಟೆವರೆಗೂ ಚಿಕಿತ್ಸೆ ನೀಡಲು ಮುಂದೆ ಬಂದಿಲ್ಲ. ನಂತರ ದಲಿತ ಸೇನೆ ಮುಖಂಡ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಕರೆ ಮಾಡಿ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಹೇಳಿದ್ದಾರೆ.

    ಸಚಿವರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಮೂರು ಜನ ವೈದ್ಯರು ಚಿಕಿತ್ಸೆ ನೀಡಲು ಬಂದಿದ್ದಾರೆ. ಚಿಕಿತ್ಸೆ ತಡವಾದ ಪರಿಣಾಮ ವಿಜಯಲಕ್ಷ್ಮೀ ರಾತ್ರಿ 10 ಗಂಟೆ ಸುಮಾರಿಗೆ ಸಾವನಪ್ಪಿದ್ದಾರೆ. ಈ ಸಾವಿಗೆ ಆಸ್ಪತ್ರೆಯ ವೈದ್ಯರು ಕಾರಣ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.