Tag: Maternity hospital

  • 70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!

    70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!

    -ಬಡವರ ಆಸ್ಪತ್ರೆ ಎಂದೇ ಖ್ಯಾತಿ ಪಡೆದಿದ್ದ ಪೂರ್ ಹೌಸ್ ಹೆರಿಗೆ ಆಸ್ಪತ್ರೆ

    ಬೆಂಗಳೂರು: ಬಡವರಿಗೆ ಸಹಾಯ ಆಗಲೆಂದು ನಿರ್ಮಾಣವಾಗಿದ್ದ ಹೆರಿಗೆ ಆಸ್ಪತ್ರೆ (Maternity Hospital) ಕಳೆದ ಮೂರು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಬೀಗ ಹಾಕಲಾಗಿದೆ.

    ನಗರದ ಶಿವಾಜಿನಗರದಲ್ಲಿರುವ (Shivaji Nagara) ಪೂರ್ ಹೌಸ್ ಹೆರಿಗೆ ಆಸ್ಪತ್ರೆಯು (Poor House Hospital) 1957ರಲ್ಲಿ ಬಡವರಿಗೆ ಸಹಾಯ ಆಗಲೆಂದು ನಿರ್ಮಾಣವಾಗಿತ್ತು. ಯಾರೂ ಕೇಳವವರೂ ಹೇಳುವವರೂ ಇಲ್ಲದಂತಾಗಿ ಕಳೆದ ಮೂರು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಆಸ್ಪತ್ರೆಗೆ ಬೀಗ ಹಾಕಿಲಾಗಿದೆ.ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಘಾತ – 4 ದಿನಗಳಲ್ಲಿ 4 ಸಾವು

    ಶಿವಾಜಿನಗರ ವಿಧಾನಸಭಾ ಕ್ಷೇತ್ರದ ನಾರಯಣ ಪಿಳ್ಳೈ ರಸ್ತೆಯಲ್ಲಿರುವ ಬಡವರ ಆಸ್ಪತ್ರೆ ಎಂದೆ ಖ್ಯಾತಿ ಪಡೆದಿದ್ದ ಪೂರ್ ಹೌಸ್ ಹೆರಿಗೆ ಆಸ್ಪತ್ರೆ ದುಸ್ಥಿತಿಯಲ್ಲಿದೆ. ಕಟ್ಟಡ ದೂಳು ಹಿಡಿದು ಪಾಳು ಬಿದ್ದಿದ್ದು, ಅದರ ಸುತ್ತಮುತ್ತಲೂ ಗಿಡ ಗಟಿಂಗಳು ದಟ್ಟವಾಗಿ ಬೆಳೆದು ನಿಂತಿವೆ.

    ಈ ಭಾಗದ ಜನರಿಗೆ ತುಂಬಾ ಅನುಕೂಲ ಆಗಿತ್ತು. ಹಳೆಯ ಆಸ್ಪತ್ರೆ ಆಗಿದ್ದರಿಂದ ಇದಕ್ಕೆ ಬೀಗ ಜಡಿದು, ಹೊಸ ಕಟ್ಟಡವನ್ನು ಬ್ರ‍್ಯಾಂಡ್ ಬೆಂಗಳೂರು ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದುರಸ್ತಿ ಹೆಸರಿನಲ್ಲಿ ಪೂರ್ ಹೌಸ್ ಹೆರಿಗೆ ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ಆದರೆ ಕಳೆದ ಮೂರು ವರ್ಷಗಳಿಂದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ನಿತ್ಯ ಆರೋಗ್ಯ ಸೇವೆ ಸಿಗದೇ ಈ ಭಾಗದ ಜನ ಪರದಾಡುವಂತಾಗಿದೆ.ಇದನ್ನೂ ಓದಿ: ಸಿಖ್ಖರ ವಿರುದ್ಧ ಹೇಳಿಕೆಗೆ ತೀವ್ರ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌

    ಆಸ್ಪತ್ರೆಯ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸುವಂತೆ ಸ್ಥಳೀಯರು ಹಲವು ಬಾರಿ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗಲಿಲ್ಲ. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದಲೂ ಬಿಬಿಎಂಪಿ (BBMP) ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೂ ಪತ್ರ ಬರೆದಿದ್ದಾರೆ. ಬಡವರಿಗೆ ಅನುಕೂಲವಾಗಿದ್ದ ಈ ಆಸ್ಪತ್ರೆಗೆ ಆದಷ್ಟು ಬೇಗ ಉದ್ಘಾಟನೆಯ ಭಾಗ್ಯ ಸಿಗಲಿ ಎಂದು ಅಲ್ಲಿನ ಜನ ಕಾದು ಕೂರುವಂತಾಗಿದೆ.

  • ಖಾನಾಪುರದಲ್ಲಿ ಹೆರಿಗೆ ಆಸ್ಪತ್ರೆ ಸ್ಲ್ಯಾಬ್ ನಿರ್ಮಾಣ – ಅಂಜಲಿ ನಿಂಬಾಳ್ಕರ್ ಚಾಲನೆ

    ಖಾನಾಪುರದಲ್ಲಿ ಹೆರಿಗೆ ಆಸ್ಪತ್ರೆ ಸ್ಲ್ಯಾಬ್ ನಿರ್ಮಾಣ – ಅಂಜಲಿ ನಿಂಬಾಳ್ಕರ್ ಚಾಲನೆ

    ಬೆಳಗಾವಿ: ಖಾನಾಪೂರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಲ್ಯಾಬ್ ಕಾಮಗಾರಿಗೆ ಪೂಜೆ ಸಲ್ಲಿಸಿ ಕಾಂಕ್ರೀಟ್ ಹಾಕುವ ಮೂಲಕ ಶಾಸಕಿ ಅಂಜಲಿ ನಿಂಬಾಳ್ಕರ್ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾನಾಪೂರ ತಾಲೂಕಿಗೆ ಹೆಮ್ಮೆಯ ವಿಷಯವಾದ ಈ ಎಂಸಿಎಚ್ ಆಸ್ಪತ್ರೆಯ ಕೆಲಸ ಚಾಲನೆ ಇದೆ. 15 ಕೋಟಿ ರೂ. ವೆಚ್ಚದಲ್ಲಿ 60 ಬೆಡ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈ ಕೆಲಸದ ಸ್ಲ್ಯಾಬ್ ಹಾಕುವ ಕಾರ್ಯಕ್ರಮದ ಪೂಜೆ ನೇರವಿರಿಸಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಆಶೀರ್ವಾದಬೇಕು. ಏಕೆಂದರೆ ಇದು ತಾಲೂಕಿಗೆ ಹೆಮ್ಮೆಯ ವಿಷಯ ದೊಡ್ಡ ಆಸ್ಪತ್ರೆ ನಾನು ಒಬ್ಬ ಸ್ತ್ರೀ ವೈದ್ಯೆಯಾಗಿರುವುದರಿಂದ ನನಗೂ ಹೆಮ್ಮೆಯ ವಿಷಯ ಎಂದಿದ್ದಾರೆ.  ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ಖಾನಾಪೂರ ತಾಲೂಕಿನಲ್ಲಿ ಬಡಜನರಿದ್ದಾರೆ. ಅವರಿಗೆ ಬೆಳಗಾವಿಗೆ ಹೋಗಿ ಹೆರಿಗೆ ಮಾಡಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿ ಈ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ವೈದ್ಯೆಯಾಗಿರುವ ನನಗೆ ಜನ ಶಾಸಕಿ ಮಾಡಿ ಆಶಿರ್ವಾದ ನೀಡಿದ್ದಾರೆ. ಅವರು ನೀಡಿದ ಆಶಿರ್ವಾದಕ್ಕೆ ಚಿರಋಣಿ. ಇನ್ನು ಸ್ವಲ್ಪ ತಿಂಗಳಿನಲ್ಲಿ ಇದನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು. ಈ ಮೂಲಕ ತಾಯಿ ಮತ್ತು ಮಕ್ಕಳ ಆರೈಕೆಗೆ ಹೆಚ್ಚಿನ ಒತ್ತು ನೀಡುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

  • ಮುಂಬೈ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 4 ನವಜಾತ ಶಿಶುಗಳ ಸಾವು – ಪೋಷಕರಲ್ಲಿ ಆತಂಕ!

    ಮುಂಬೈ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 4 ನವಜಾತ ಶಿಶುಗಳ ಸಾವು – ಪೋಷಕರಲ್ಲಿ ಆತಂಕ!

    ಮುಂಬೈ: ಭಾಂಡೂಪ್‌ನಲ್ಲಿರುವ ಬೃಹನ್‌ಮುಂಬೈ ಮುನ್ಸಿಪಲ್ (ಬಿಎಂಸಿ) ನಡೆಸುತ್ತಿರುವ ಸಾವಿತ್ರಿಬಾಯಿ ಫುಲೆ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ.

    ಕಳೆದ 4 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿದ ನವಜಾತಾ ಶಿಶುಗಳು ಸಾವನ್ನಪ್ಪುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಬಿಎಂಸಿ ಗುರುವಾರ ತಿಳಿಸಿದೆ.

    ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿದವು. ನಂತರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಅಮಾನತು ಗೊಳಿಸಲಾಗುವುದು. ಈ ಕುರಿತು ಉನ್ನತ ಮಟ್ಟದ ತನಿಖೆಯನ್ನು ನಡೆಸುವುದಾಗಿ ತಿಳಿಸಿದರು. ಇದನ್ನೂ ಓದಿ: ಕೋವಿಡ್‌ ಎರಡನೇ ಲಸಿಕಾ ಅಭಿಯಾನದಲ್ಲಿ ಬೆಂಗಳೂರು ನಗರ ಜಿಲ್ಲೆ ರಾಜ್ಯಕ್ಕೆ ಪ್ರಥಮ

    ಇದಕ್ಕೂ ಮುನ್ನ ಪ್ರತಿಪಕ್ಷಗಳು ಬಿಎಂಸಿಯನ್ನು ಟೀಕಿಸಿದ್ದವು. ಆಡಳಿತದ ನಿರ್ಲಕ್ಷ್ಯದಿಂದ ಶಿಶುಗಳು ಸಾವನ್ನಪ್ಪುತ್ತಿವೆ ಎಂದು ಹೇಳಲಾಗಿತ್ತು. ಆದರೆ ಸೋಂಕಿನಿಂದಾಗಿ ಶಿಶುಗಳ ಸಾವು ಸಂಭವಿಸಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿರುವ ಬಗ್ಗೆ ವರದಿಯಾಗಿದೆ.

    ನಾಲ್ಕು ಶಿಶುಗಳ ಪೈಕಿ ಮೂರು ಶಿಶುಗಳು ಸೆಪ್ಟಿಕ್ ಶಾಕ್‌ನಿಂದಾಗಿ ಮೃತಪಟ್ಟಿವೆ. ಶಿಶುಗಳಿಗೆ ಸೋಂಕು ತಗುಲಿದ್ದು, ಔಷಧಿಗೆ ಗುಣಮುಖವಾಗಿಲ್ಲ ಎಂದು ಶಿಶುಗಳ ಸಾವಿನ ಬಗ್ಗೆ ವೈದ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ

  • ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್

    ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್

    ಮೈಸೂರು: ಉನ್ನತೀಕರಣಗೊಂಡಿರುವ ತುಳಸಿದಾಸ್ ಆಸ್ಪತ್ರೆಯ ಕಟ್ಡದಲ್ಲಿ 50 ಹಾಸಿಗೆಗಳ ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ಭಾನುವಾರ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು, ನೂತನವಾಗಿ ಉದ್ಘಾಟನೆಗೊಂಡಿರುವ ಈ ಆಸ್ಪತ್ರೆ ಎಲ್ಲ ವ್ಯವಸ್ಥೆಯನ್ನು ಒಳಗೊಂಡಿದ್ದು, ಸುಸಜ್ಜಿತವಾಗಿರುವುದರ ಜೊತೆಗೆ ಬಹಳ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಶ್ಲಾಘಿಸಿದರು.

    ಕೋವಿಡ್ ನಿಂದ ಮೃತರಾದವರ ಮಕ್ಕಳಿಗೆ ಅನಾಥ ಭಾವ ಕಾಡಬಾರದು. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸುತ್ತೂರು ಮಠದ ಸ್ವಾಮೀಜಿಯವರು ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಈಗ ಪ್ರಧಾನ ಮಂತ್ರಿಗಳು ಇಂತಹ ಮಕ್ಕಳಿಗಾಗಿ ನಿಧಿಯನ್ನು ತೆರೆದಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

    ಬೆಂಗಳೂರಿನ ನಂತರ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಹೀಗಾಗಿ ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಯನ್ನೂ ಸರ್ವೇ ನಡೆಸಲಾಗುತ್ತಿದೆ. ಈಗಾಗಲೇ ಶೇ.60 ರಿಂದ 70 ರಷ್ಟು ಮನೆ ಮನೆ ಸರ್ವೇ ಮುಗಿದಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಶೇ.70 ರಿಂದ 80ರಷ್ಟು ಮನೆ ಮನೆ ಸರ್ವೇ ಮುಗಿದಿದೆ ಎಂದು ತಿಳಿಸಿದರು.

    ಸಾರ್ವಜನಿಕರು ಸಹ ಲಾಕ್‍ಡೌನ್ ಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಸಾರ್ವಜನಿಕರ ಜೀವ ಕಾಪಾಡಲು ಸರ್ಕಾರವು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

    ಆಶಾ ಕಾರ್ಯಕರ್ತೆಯರ ಶ್ಲಾಘನೆ
    ಕೋವಿಡ್ ನಂತಹ ಸಂಕಷ್ಟದ ಕಾಲದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ದೇಶವೇ ಶ್ಲಾಘಿಸುತ್ತಿದೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.

    ನಂಜನಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಹೆಗ್ಗಡನಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರ ಕುರಿತು ಮಾತನಾಡಿದ ಅವರು, ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಮನೆ ಮನೆ ಸರ್ವೇಯನ್ನು ಮಾಡುವಾಗ ಹಲವಾರು ತೊಂದರೆಗಳು ಬರಬಹುದು. ಹೀಗಾಗಿ ಅವರೊಡನೆ ಪೊಲೀಸ್ ಸಿಬ್ಬಂದಿಯನ್ನು ಕಳುಹುಸಿಕೊಡಿ ಇದರಿಂದ ಅವರಿಗೆ ಧೈರ್ಯ ಬರುತ್ತದೆ ಎಂದು ಹೇಳಿದರು.

    ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ವೇತನ ಬಿಡುಗಡೆಯಾಗಿದ್ದು, ವೇತನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವ ಸಲುವಾಗಿ ನಡೆಯುತ್ತಿರುವ ಮನೆ ಮನೆ ಸರ್ವೇಯು ಇದೇ ತಿಂಗಳಲ್ಲಿ ಬಹುತೇಕ ಮುಕ್ತಾಯವಾಗುತ್ತದೆ. ಸರ್ವೇಯಲ್ಲಿ ಕೋವಿಡ್ ಲಕ್ಷಣಗಳು ಯಾರಿಗಾದರೂ ಕಂಡುಬಂದರೆ ಅವರಿಗೆ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುತ್ತದೆ. ಇದರಿಂದ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

    ಹುಲ್ಲಹಳ್ಳಿಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಮಾತನಾಡಿದ ಅವರು, ತಾಲೂಕುಗಳಲ್ಲಿ ಹಬ್ಬಿರುವ ಕೋವಿಡ್ ಪ್ರಕರಣಗಳನ್ನು ಪತ್ತೆ ಹಚ್ಚುವುದರಿಂದ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗಲಿವೆ. ಇದರಿಂದ ಹಳ್ಳಿಗಳು ಕೋವಿಡ್ ಮುಕ್ತ ಹಳ್ಳಿಗಳಾಗಬೇಕು. ಇದೇ ಕಾರಣಕ್ಕೆ ಮನೆ ಮನೆ ಸರ್ವೇಯನ್ನು ನಡೆಸಲಾಗುತ್ತಿದೆ.

    ಮಹದೇವನಗರ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಹರ್ಷವರ್ಧನ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪನಾಗ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತಿಯ ಸಿಇಒ ಎ.ಎಂ.ಯೋಗೀಶ್, ಉಪವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಡಿವೈಎಸ್ಪಿ ಗೋವಿಂದ ರಾಜು, ತಹಶಿಲ್ದಾರ್ ಮೋಹನ್ ಕುಮಾರಿ, ಡಾ.ಸಿ.ಪಿ.ನಂಜರಾಜ್, ಡಾ.ಸುಧಾ ರುದ್ರಪ್ಪ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಸೇರಿದಂತೆ ಇತರರು ಹಾಜರಿದ್ದರು.

  • ಚಂದ್ರಗ್ರಹಣ ಎಫೆಕ್ಟ್: ಹೆರಿಗೆ ಆಸ್ಪತ್ರೆ ಖಾಲಿ ಖಾಲಿ!

    ಚಂದ್ರಗ್ರಹಣ ಎಫೆಕ್ಟ್: ಹೆರಿಗೆ ಆಸ್ಪತ್ರೆ ಖಾಲಿ ಖಾಲಿ!

    ವಿಜಯಪುರ: ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿದೆ.

    ನಗರದ ಆಸ್ಪತ್ರೆಗಳಲ್ಲಿ ತುಂಬು ಗರ್ಭಿಣಿ ಸ್ತ್ರೀಯರಿಗೆ ಸಿಸೇರಿಯನ್ ಗಾಗಿ ದಿನಾಂಕ ನೀಡಿದ್ದರೂ ಯಾರೊಬ್ಬರು ಆಸ್ಪತ್ರೆಯತ್ತ ತಲೆ ಹಾಕುತ್ತಿಲ್ಲ. ಸಿಸೇರಿಯನ್ ಗಾಗಿ ನಿಗದಿಪಡಿಸಿದ ಡೇಟ್‍ಗಳು ಗ್ರಹಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಇದನ್ನು ಓದಿ: ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?

    ಗರ್ಭಿಣಿಯರ ಮನೆಯವರು ಹೆರಿಗೆಗೆ ನಿರಾಕರಣೆ ಮಾಡಿದ್ದು, ಬಹುತೇಕ ಆಸ್ಪತ್ರೆಗಳು ಖಾಲಿ ಖಾಲಿಯಾಗಿವೆ. ಇನ್ನು ಕೆಲವರು ಶನಿವಾರಕ್ಕೆ ಸಿಸೇರಿಯನ್ ಮುಂದೂಡಿದ್ದಾರೆ.

    ಚಂದ್ರ ಗ್ರಹಣದಿಂದಾಗಿ ಮುಂದೆ ಹುಟ್ಟಲಿರುವ ಮಗುವಿಗೆ ಕಂಟಕವಾಗುತ್ತದೆ ಎಂದು ಭಾವಿಸಿ ಗರ್ಭಿಣಿಯರು ದೇವರ ನಾಮ ಸ್ಮರಣೆಯ ಮೊರೆ ಹೋಗಿದ್ದಾರೆ. ಸ್ತ್ರೋತ್ರ ಪುಸ್ತಕಗಳನ್ನು ಓದುತ್ತ ಕುಳಿತ ಗರ್ಭಿಣಿ ಸ್ತ್ರೀಯರು ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ. ಇದನ್ನು ಓದಿ: ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ