ಕಲಬುರಗಿ: ಇತ್ತೀಚಿಗೆ ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ (Maternal Deaths Case) ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ (GIMS Hospital) ಬಾಣಂತಿಯ ಹೊಟ್ಟೆಯಲ್ಲಿ ಬಟ್ಟೆಯ ಉಂಡೆಯನ್ನೇ ಬಿಟ್ಟು ವೈದ್ಯರು ಪ್ರಮಾದ ಮಾಡಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಬಾಣಂತಿಯ ಸಾವಾಗಿದೆ.
ಸೋಮವಾರ ಹೇರಿಗೆಗೆಂದು ಇಎಸ್ಐಸಿ ಆಸ್ಪತ್ರೆಗೆ ದಾಖಲಾಗಿದ್ದ ಶಿಲ್ಪಾ, ಅಂದೇ ಗಂಡು ಮಗುವಿಗೆ ಜನ್ಮ ನೀಡಿದರು. ನಿರಂತರ ರಕ್ತ ನೀಡಿದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹೈವೇಯಲ್ಲಿ ಸರಣಿ ಅಪಘಾತ – ಈಶಾಗೆ ಬಂದಿದ್ದ ವಾಹನ ಸವಾರರ ಪರದಾಟ
ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು (Maternal Death) ಸಾವನ್ನಪ್ಪಿದ್ದಾರೆ.
ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಡಬಾಗಿ ಅವರು ಹೆರಿಗೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ ವೈಶಾಲಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಸಾವು!
ತಕ್ಷಣ ಬಾಣಂತಿ ವೈಶಾಲಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿತ್ತಾದರೂ, ಚಿಕಿತ್ಸೆ ಫಲಿಸದೇ ಮರಣ ಹೊಂದಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ವೈಶಾಲಿ ಪತಿ ಈರಣ್ಣ ಆರೋಪಿಸಿದ್ದಾರೆ.
ಈ ಘಟನೆಯಿಂದ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಎಪಿಎಂಸಿ ಪೊಲೀಸರು ಆಗಮಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ 29 ಬಾಣಂತಿಯರು ಸಾವಿಗೀಡಾಗಿದ್ದಾರೆಂದು ವರದಿಯಾಗಿತ್ತು. ಈಗ ಮತ್ತೊಂದು ಸಾವಾಗಿದೆ. ಬಾಣಂತಿಯರ ಸಾವಿಗೆ ಬಹುಅಂಗಾಂಗ ವೈಫಲ್ಯ, ಕಿಡ್ನಿ ಸಮಸ್ಯೆ ಕಾರಣ ಎಂದು ಈಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು. ಇದನ್ನೂ ಓದಿ: ಸರ್ಕಾರದ ಬೇಜವಾಬ್ದಾರಿತನದಿಂದ ಬಾಣಂತಿಯರು, ಹಸುಗೂಸುಗಳ ಸಾವು : ವಿಜಯೇಂದ್ರ
– ಬಾಣಂತಿಯರ ಸಾವು, ಮೆಡಿಕಲ್ ಮಾಫಿಯಾ ವಿಚಾರ ಚರ್ಚೆ
– ಸದನದಲ್ಲಿ ಗದ್ದಲ, ಕೋಲಾಹಲ
ಬೆಂಗಳೂರು/ಬೆಳಗಾವಿ: ಬಾಣಂತಿಯರ ಸಾವು (Maternal Deaths) ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯಾಗಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗದೇ ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಆರೋಪಿಸಿದರು.
ಬಾಣಂತಿಯರ ಸಾವು ಪ್ರಕರಣ ಕರ್ನಾಟಕವನ್ನೇ ಬೆಚ್ಚಿ ಬೀಳಿಸುವ ಘಟನೆಯಾಗಿದೆ. ಬಳ್ಳಾರಿ ಮಾತ್ರವಲ್ಲ ರಾಯಚೂರು, ಬೆಳಗಾವಿ, ಚಿತ್ರದುರ್ಗದಲ್ಲೂ ಬಾಣಂತಿಯರ ಸಾವಾಗಿದೆ. ಆರೋಗ್ಯ ಇಲಾಖೆ ರೋಗ ಪೀಡಿತ ಇಲಾಖೆ ಆಗಿದೆ. ಘಟನೆ ಆದ 6 ದಿನದ ಬಳಿಕ ಸಚಿವರು ಜಿಲ್ಲೆಗೆ ಹೋಗಿದ್ದಾರೆ. ವೈದ್ಯರು ತಪ್ಪು ಒಪ್ಪಿಕೊಳ್ಳುತ್ತಿಲ್ಲ, ಡ್ರಗ್ ಕಂಟ್ರೋಲರ್‌ನನ್ನು ಬಲಿಪಶು ಮಾಡಲಾಗಿದೆ ಎಂದು ದೂರಿದರಲ್ಲದೇ ಒಂದೆಡೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜೋರಾಗಿದೆ. ಆರೋಗ್ಯ ಇಲಾಖೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ವಯನಾಡ್‌ನಲ್ಲಿ ಆನೆ ತುಳಿತ ಪ್ರಕರಣಕ್ಕೆ 15 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದ್ದರು. ಆದರೆ ಬಾಣಂತಿಯರ ಸಾವಿಗೆ 2 ಲಕ್ಷ ಪರಿಹಾರ ಕೊಡಲಾಗಿದೆ ಎಂದು ಆರೋಪಿಸಿದರು.
ಮೃತಪಟ್ಟ ಮಹಿಳೆಯರನ್ನು (ಬಾಣಂತಿಯರು) ನೋಡಿದರೆ ನೋವಾಗುತ್ತೆ. ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗ್ತಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದರು. ಈ ವೇಳೆ ಅಶೋಕ್ ಮಾತಿಗೆ ಶಾಸಕ ಕೋನರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕರಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಡಿ ಅಂತ ಸಂದೇಶ ಕೊಡ್ತಿದ್ದೀರಾ? ಜನರಿಗೆ ಏನು ಸಂದೇಶ ಹೋಗುತ್ತೆ? ಒಳ್ಳೆಯ ಸಲಹೆ ಕೊಡಿ. ಸರ್ಕಾರ ಆಸ್ಪತ್ರೆಗಳ ಪರಿಸ್ಥಿತಿ ಉತ್ತಮಗೊಳಿಸಿದೆ, ಸರಿಯಾಗಿ ಮಾತಾಡಿ. ಸರ್ಕಾರಿ ಆಸ್ಪತ್ರೆ, ವೈದ್ಯರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾತನಾಡಬೇಡಿ ಎಂದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಏರ್ಪಟ್ಟಿತು.
ಮುಂದುವರಿದು ಮಾತನಾಡಿದ ಅಶೋಕ್, ಅವಧಿ ಮೀರಿ 6 ತಿಂಗಳು ಮುಗಿದಿರೋ ಔಷಧಗಳ ಬಳಕೆ ಆಗಿದೆ. ಇದರ ಬಗ್ಗೆ ಡ್ರಗ್ ಕಂಟ್ರೋಲ್ ಬೋರ್ಡ್ ಹೇಳಿದೆ. ಇಂತ ಔಷಧ ಬಳಸದಂತೆ ಸೂಚಿಸಿದೆ, ಒಂದು ವೇಳೆ ಪೂರೈಸಿದ್ದರೆ ಯೂಸ್ ಮಾಡಬೇಡಿ ಎಂದಿದೆ. ಹಾಗಿದ್ದರೂ ಯೂಸ್ ಮಾಡಿದ್ದು ಸರಿಯೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಇದಕ್ಕೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ನಾವು ಈ ಔಷಧವನ್ನ ಸ್ಟಾಪ್ ಮಾಡಿದ್ದೆವು. ಕಂಪನಿಯನ್ನ ಬ್ಲಾಕ್ ಲಿಸ್‌ಗೆ ಹಾಕಿದ್ದೆವು. ಅವರು ಕೋರ್ಟ್‌ಗೆ ಹೋಗಿ ಸ್ಟೇ ತಂದ್ರು, ಸೆಂಟ್ರಲ್ ಡ್ರಗ್ ಕಮೀಷನ್ ಐವಿ ದ್ರಾವಣ ಸರಿಯಿದೆ ಅಂದಿತ್ತು. ಹೀಗಾದಾಗ ನಾವೇನು ಮಾಡಬೇಕು? ಎಂದು ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದರು.