Tag: Matchsticks

  • 2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ

    2ರೂ. ಬೆಂಕಿ ಪೊಟ್ಟಣದಲ್ಲಿ 36 ಕಡ್ಡಿ ಬದ್ಲು 50 ಕಡ್ಡಿ

    ಚೆನ್ನೈ: 14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ ಆಗಿರುವ ಬೆನ್ನಲ್ಲೆ ಇದೀಗ ಪೊಟ್ಟಣದಲ್ಲಿ(matchbox) ಇರುವ ಕಡ್ಡಿಗಳ ಸಂಖ್ಯೆಯಲ್ಲೂ ಏರಿಕೆ ಮಾಡಲಾಗಿದೆ. ಡಿಸೆಂಬರ್ 1ರಿಂದ ಬೆಂಕಿ ಪೊಟ್ಟಣದ ಬೆಲೆ 1 ರೂಪಾಯಿನಿಂದ 2ರೂ.ಗೆ ಏರಿಕೆಯಾಗುತ್ತಿದ್ದು, ಬೆಲೆ ಹೆಚ್ಚಾದರೂ ಪೊಟ್ಟಣದಲ್ಲಿ ಬೆಂಕಿ ಕಡ್ಡಿಗಳು ಹೆಚ್ಚಿಗೆ ಸಿಗುತ್ತಿದೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.

    14 ವರ್ಷದ ನಂತರ ಬೆಲೆ ಹೆಚ್ಚಿಸುತ್ತಿದ್ದು, 2ರೂಪಾಯಿಯ ಪೊಟ್ಟಣದಲ್ಲಿ ಇನ್ಮುಂದೆ36 ಕಡ್ಡಿಗಳ ಬದಲು 50 ಕಡ್ಡಿಗಳು ಇರಲಿದೆ ಎಂದು ತಿಳಿಸಿವೆ. ಬೆಂಕಿ ಪೊಟ್ಟಣ ತಯಾರಿಕೆಗೆ ಬಳಸುವ 14 ಕಚ್ಚಾವಸ್ತುಗಳು ಬೆಲೆ ಏರಿಕೆ ಸಮೇತ ವಿವರ ನೀಡಿರುವ ಕಂನಿಗಳು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿವೆ. ಇದನ್ನೂ ಓದಿ: ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ

    ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ದಿನನಿತ್ಯ ಬಳಕೆಯ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳವಾಗುತ್ತಲೇ ಇದೆ. ಆದರೆ ಕಳೆದ 14 ವರ್ಷಗಳಿಂದ ಬೆಂಕಿ ಪೊಟ್ಟಣದ ಬೆಲೆ ಮಾತ್ರ ಕಿಂಚಿತ್ತೂ ಏರಿಕೆಯಾಗದೆ ಸ್ಥಿರವಾಗಿತ್ತು. ಈ ಹಿಂದೆ 50 ಪೈಸೆ ಇದ್ದ ಬೆಂಕಿ ಪೊಟ್ಟಣದ ಬೆಲೆಯನ್ನು 2007ರಲ್ಲಿ ಪರಿಷ್ಕರಿಸಲಾಗಿತ್ತು. ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚೆಸ್ (All India Chamber Of Matches) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ. ಇದನ್ನೂ ಓದಿ: ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್

    ಬೆಲೆ ಏರಿಕೆಗೆ ಕಾರಣವೇನು?: ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಹೀಗಾಗಿ ಬೆಂಕಿ ಪೊಟ್ಟಣ ತಯಾರಕರು ಬೆಲೆಯೇರಿಕೆಯ ನಿರ್ಧಾರವನ್ನು ಅವಿರೋಧವಾಗಿ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ 600 ಬೆಂಕಿ ಪೊಟ್ಟಣಗಳ ಒಂದು ಬಂಡಲ್ 270ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅದನ್ನು 430ರಿಂದ 480 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ.

  • 5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ

    5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ

    ಭುವನೇಶ್ವರ: ಗಣೇಶ ಹಬ್ಬದ ಪ್ರಯುಕ್ತ ಒಡಿಶಾದ ಕಲಾವಿದರೊಬ್ಬರು ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶನ ಮೂರ್ತಿಯನ್ನು ರಚಿಸಿದ್ದಾರೆ. ಈ ಮೂರ್ತಿ 5,621 ಬೆಂಕಿ ಕಡ್ಡಿಗಳನ್ನು ಒಳಗೊಂಡಿರುವ ಕಲಾಕೃತಿಯಾಗಿದ್ದು, 23 ಇಂಚು ಉದ್ದ ಮತ್ತು 22 ಇಂಚು ಅಗಲವಿದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಸ್ವಯಂ ಅನುಶಾಸನ ಅಗತ್ಯ: ಸುನಿಲ್ ಕುಮಾರ್

    Ganesha idol-

    ಕಲಾವಿದ ಸಾಸ್ವತ್ ಸಾಹೂ ಈ ಮೂರ್ತಿಯನ್ನು ಸಿದ್ಧ ಪಡಿಸಲು ಎಂಟು ದಿನಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಕೋವಿಡ್-19 ಮಧ್ಯೆ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಈ ಬಾರಿ ನಾನು ಹೊಸದಾಗಿ ಏನಾದರೂ ಮಾಡಬೇಕೆಂದು ಯೋಚಿಸಿ, ಈ ಮೂರ್ತಿಯನ್ನು ಸಿದ್ಧ ಪಡಿಸಿದ್ದೇನೆ ಮತ್ತು ಹಬ್ಬದ ದಿನ ಈ ಮೂರ್ತಿಯನ್ನು ಮನೆಯಲ್ಲಿಟ್ಟು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    Ganesha idol-

    ಗಣೇಶ ಹಬ್ಬ ಹತ್ತು ದಿನಗಳ ಕಾಲ ಆಚರಿಸುವ ಹಬ್ಬವಾಗಿದ್ದು, ದೇಶಾದ್ಯಾಂತ ಜನರು ಬಹಳ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಕೋವಿಡ್-19 ನಿಂದಾಗಿ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ – ಮತ್ತೆ ಕೆಣಕಿದ ಶಿವಸೇನೆ