Tag: match box

  • ಮ್ಯಾಚ್ ಬಾಕ್ಸ್‌ನಲ್ಲಿ ಡ್ರಗ್ಸ್ ಇಟ್ಟು ಮಾರಾಟ – ಆರೋಪಿಗಳು ಅರೆಸ್ಟ್

    ಮ್ಯಾಚ್ ಬಾಕ್ಸ್‌ನಲ್ಲಿ ಡ್ರಗ್ಸ್ ಇಟ್ಟು ಮಾರಾಟ – ಆರೋಪಿಗಳು ಅರೆಸ್ಟ್

    ಬೆಂಗಳೂರು: ಡ್ರಗ್ಸ್ (Drugs) ಮಾರಾಟ ಮತ್ತು ಸಾಗಾಣಿಕೆ ಮಾಡಲು ದಂಧೆಕೋರರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಪ್ಲಾನ್ ಮಾಡುವ ಆರೋಪಿಗಳು, ಬೇರೆ ಬೇರೆ ಮಾರ್ಗಗಳಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ನಗರದಲ್ಲಿ ಬೆಂಕಿ ಪೊಟ್ಟಣಗಳಲ್ಲಿ (Match Box) ಡ್ರಗ್ಸ್ ಇಟ್ಟು ಅವುಗಳ ಮೂಲಕ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದಾರೆ.

    ಮೊದಲಿಗೆ ನಿರ್ಜನ ಪ್ರದೇಶಗಳು, ಖಾಲಿ ಸೈಟ್‌ಗಳು, ಬಸ್‌ಸ್ಟ್ಯಾಂಡ್‌ಗಳನ್ನು ಗುರುತು ಮಾಡಿಕೊಳ್ಳುವ ಆರೋಪಿಗಳು, ಅಲ್ಲಿ ಡ್ರಗ್ಸ್ ತುಂಬಿರುವ ಮ್ಯಾಚ್ ಬಾಕ್ಸ್‌ಗಳನ್ನು ಎಸೆದು ಹೋಗುತ್ತಿದ್ದರು. ಜೊತೆಗೆ ಆ ಮ್ಯಾಚ್ ಬಾಕ್ಸ್‌ನ ಫೋಟೋ ಮತ್ತು ಲೋಕೇಷನ್ ಶೇರ್ ಮಾಡುತ್ತಿದ್ದರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮತ್ತೆ ಭೂಕುಸಿತದ ಆತಂಕ

    ಡ್ರಗ್ಸ್ ಮಾರಾಟ ಮಾಡುವ ವೇಳೆ ಮೊದಲಿಗೆ ಫೋನ್‌ನಲ್ಲೇ ಫೋಟೋಗಳು, ಲೋಕೇಷನ್ ಶೇರ್ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದರು. ಹಣ ಕೊಟ್ಟ ಗ್ರಾಹಕರು, ಆ ಲೋಕೇಷನ್‌ಗೆ ಹೋಗಿ ಯಾರಿಗೂ ಅನುಮಾನ ಬಾರದಂತೆ ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಇಂತಹ ಪ್ರಕರಣಗಳು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಕೊತ್ತನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಕಿಪೊಟ್ಟಣ ಕದ್ದ ಆರೋಪ- ಯುವಕ ನೇಣಿಗೆ ಶರಣು

    ಬೆಂಕಿಪೊಟ್ಟಣ ಕದ್ದ ಆರೋಪ- ಯುವಕ ನೇಣಿಗೆ ಶರಣು

    ಕೊಪ್ಪಳ: ಬೆಂಕಿ ಪೊಟ್ಟಣ ಕಳ್ಳತನ ಮಾಡಿದ್ದಾನೆ ಎಂಬ ಆರೋಪ ಹೊರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದಲ್ಲಿ ಈ ಘಟನೆ ನಡೆದಿದ್ದು, 20 ವರ್ಷದ ರಾಜೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಡಿಸೆಂಬರ್ 17 ರಂದು ಈ ಘಟನೆ ನಡೆದಿದೆ.

    ಡಿ.17 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಹೊಲಕ್ಕೆ ನೀರು ಕಟ್ಟಲು ಹೋಗುವಾಗ ಬೆಂಕಿಪೊಟ್ಟಣ ಇಲ್ಲ ಎಂದು ರಾಜೇಶ್, ಪಕ್ಕದಲ್ಲೆ ಇರುವ ಬುಡ್ಡಪ್ಪ ಎಂಬವರ ಹೋಟೆಲ್ ಗೆ ಬಂದು ಅಲ್ಲೆ ಇದ್ದ ಬೆಂಕಿ ಪೊಟ್ಟಣ ತೆಗೆದುಕೊಂಡು ಹೋಗುತ್ತಿದ್ದನು. ಈ ವೇಳೆ ಹೋಟೆಲ್ ಮಾಲೀಕರಾದ ಬುಡ್ಡಪ್ಪ, ಶೇಖರಪ್ಪ, ಶಾಂತಮ್ಮ, ಲಕ್ಷ್ಮಿ ಎಂಬವರು ರಾಜೇಶನನ್ನು ಹಿಡಿದು, ಬೆಂಕಿಪೊಟ್ಟಣ ಕಳವು ಮಾಡುತ್ತೀಯಾ ಎಂದು ಥಳಿಸಿದ್ದಾರೆ.

    ವಿಷಯ ತಿಳಿದ ರಾಜೇಶನ ತಂದೆ ಆ ಮೇಲೆ ಮಾತಾಡೋಣ ಎಂದು ಸಮಾಧಾನ ಮಾಡಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದ ರಾಜೇಶ್ ಕೆಲ ಹೊತ್ತಿನಲ್ಲೇ ತಮ್ಮ ಹೊಲಕ್ಕೆ ಹೋಗಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕೇವಲ ಬೆಂಕಿಪೊಟ್ಟಣ ಕಳ್ಳತನ ಆರೋಪ ಹೊರಿಸಿ ನನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆಂದು ರಾಜೇಶ್ ತಂದೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಕಳ್ಳತನ ಆರೋಪ ಹೊರಿಸಿದ್ದ ಬುಡ್ಡಪ್ಪ, ಶೇಖರಪ್ಪ, ಲಕ್ಷ್ಮಿ, ಶಾಂತಮ್ಮ ಎಂಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv