Tag: Matar Paneer Curry

  • ಮಟನ್ ಕರಿ ಬದಲಿಗೆ ಚಿಕನ್ ಕರಿ ಡೆಲಿವರಿ – 20 ಸಾವಿರ ದಂಡ ಕಟ್ಟಿದ ರೆಸ್ಟೋರೆಂಟ್

    ಮಟನ್ ಕರಿ ಬದಲಿಗೆ ಚಿಕನ್ ಕರಿ ಡೆಲಿವರಿ – 20 ಸಾವಿರ ದಂಡ ಕಟ್ಟಿದ ರೆಸ್ಟೋರೆಂಟ್

    ಭೋಪಾಲ್: ಫುಡ್ ಡೆಲಿವರಿ ಆ್ಯಪ್‍ಗಳು ಜನರ ಬದುಕನ್ನು ಬಹಳ ಸುಲಭಗೊಳಿಸಿದೆ. ಆದರೆ ಕೆಲವೊಮ್ಮೆ ಇದೇ ಫುಡ್ ಡೆಲಿವರಿ ವಿಚಾರ ಜನರನ್ನು ಆತಂಕಕ್ಕೀಡು ಮಾಡುತ್ತದೆ. ಹೌದು ಇತ್ತೀಚೆಗಷ್ಟೇ ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್ ಸಸ್ಯಾಹಾರಿ ಕುಟುಂಬಕ್ಕೆ ಮಟರ್ ಪನೀರ್ ಕಳುಹಿಸುವ ಬದಲಿಗೆ ಚಿಕನ್ ಕರಿ ಕಳುಹಿಸಿ 20,000ರೂ. ದಂಡ ಪಾವತಿಸಿದೆ.

    ವೃತ್ತಿಯಲ್ಲಿ ವಕೀಲರಾದ ಸಿದ್ಧಾರ್ಥ್ ಶ್ರೀವಾಸ್ತವ ಅವರು, ಫುಡ್ ಡೆಲಿವರಿ ಆ್ಯಪ್ ಮೂಲಕ ಮಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದರು. ಆದರೆ ಚಿಕನ್ ಕರಿ ಬಂದಿರುವುದನ್ನು ನೋಡಿ ಅವರ ಕುಟುಂಬಸ್ಥರು ಸಾಕ್ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಮನೆಯವರು ಗ್ರಾಹಕರ ಪರಿಹಾರ ವೇದಿಕೆಗೆ ದೂರು ನೀಡಿದ್ದು, ರೆಸ್ಟೊರೆಂಟ್‍ಗೆ 20,000 ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

    ಈ ಘಟನೆಯು ನಮ್ಮ ಕುಟುಂಬಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವನ್ನುಂಟು ಮಾಡಿದೆ. ಅಲ್ಲದೇ ಈ ವಿಚಾರವನ್ನು ಜಿವಾಜಿ ಕ್ಲಬ್‍ನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಕೀಲರು ಆರೋಪಿಸಿದ್ದರು. ಹೀಗಾಗಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಈ ಬಗ್ಗೆ ಕಾನೂನು ಹೋರಾಟ ನಡೆಸಿದ ಸಂದರ್ಭದಲ್ಲಿ ದೂರುದಾರರು ಮಾಡಿದ ವೆಚ್ಚವನ್ನು ಮರುಪಾವತಿಸಲು ಜಿವಾಜಿ ಕ್ಲಬ್ ನಿರ್ದೇಶನ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]