Tag: Mata Amritanandamayi

  • ಮಾತಾ ಅಮೃತಾನಂದಮಯಿ ಅವರ ತಾಯಿ ವಿಧಿವಶ

    ಮಾತಾ ಅಮೃತಾನಂದಮಯಿ ಅವರ ತಾಯಿ ವಿಧಿವಶ

    ತಿರುವನಂತಪುರಂ: ಮಾತಾ ಅಮೃತಾನಂದಮಯಿ (Mata Amritanandamayi) ಅವರ ತಾಯಿ ದಮಯಂತಿ (97) (Damayanthi Amma) ಅವರು ನಿಧನರಾಗಿದ್ದಾರೆ.

    ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಕೊಲ್ಲಂನ (Kollam) ಅಮೃತಪುರಿ ಆಶ್ರಮದಲ್ಲಿ (Amritapuri Ashram) ದಮಯಂತಿ ಅವರು ಕೊನೆಯುಸಿರೆಳೆದಿದ್ದು, ಮಂಗಳವಾರ ಸಂಜೆ 4 ಗಂಟೆಗೆ ಅಮೃತಪುರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಸಂಪ್ರದಾಯದಂತೆ ಮರುಮದುವೆಯಾದ್ರು 9 ಮಕ್ಕಳ ತಂದೆ-ತಾಯಿಯಾಗಿರುವ ಮುಸ್ಲಿಂ ದಂಪತಿ

    ದಮಯಂತಿ ಅವರು ಕೊಲ್ಲಂನ ಅಮೃತಪುರಿ ಎಡಮ್ಮನ್ನೆಲ್‍ನ ದಿವಂಗತ ಸುಗುಣಂದನ್ (Sugunandan) ಅವರ ಪತ್ನಿಯಾಗಿದ್ದು, ಇದೀಗ ಕಸ್ತೂರಿ ಭಾಯಿ, ಸುಭಗನ್, ಸುಗುಣಮ್ಮ, ಸಜಿನಿ, ಸುರೇಶ್ ಕುಮಾರ್, ಸತೀಶ್ ಕುಮಾರ್ ಮತ್ತು ಸುಧೀರ್ ಕುಮಾರ್ ಅವರ ಇತರ ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆ ಎದುರಿಸಿದ್ದ ಡಿ.ಕೆ ಶಿವಕುಮಾರ್‌ಗೆ ಅನಾರೋಗ್ಯ

    ದಮಯಂತಿ ಅವರ ನಿಧನಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾತಾ ಅಮೃತಾನಂದಮಯಿ ದೇವಿಯ ಪ್ರೀತಿಯ ತಾಯಿ ದಮಯಂತಿ ಅಮ್ಮನವರ ನಿಧನದ ಸುದ್ದಿಯಿಂದ ದುಃಖವಾಗಿದೆ. ಅವರ ಅಗಲಿಕೆ ನನ್ನ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾತಾ ಅಮೃತಾನಂದಮಯಿ ಅಮ್ಮನವರ ಆಶೀರ್ವಾದ ಪಡೆದ ಡಿಸಿಎಂ

    ಮಾತಾ ಅಮೃತಾನಂದಮಯಿ ಅಮ್ಮನವರ ಆಶೀರ್ವಾದ ಪಡೆದ ಡಿಸಿಎಂ

    ಕೊಲ್ಲಂ: ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬುಧವಾರದಂದು ಅಮೃತಪುರಿಗೆ ತೆರಳಿ ಮಾತಾ ಅಮೃತಾನಂದಮಯಿ ಅವರ ಆಶೀರ್ವಾದ ಪಡೆದರು.

    ಕೊಲ್ಲಂ ಸಮೀಪವಿರುವ ಆಶ್ರಮಕ್ಕೆ ಭೇಟಿ ನೀಡಿದ ಡಿಸಿಎಂ, ಅಮ್ಮ ಅವರ ಅನುಗ್ರಹ ಪಡೆದ ನಂತರ ಪ್ರಚಲಿತ ಸಮಸ್ಯೆಗಳು, ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಅಮ್ಮನವರ ಜತೆ ಮಾಹಿತಿ ವಿನಿಮಯ ಮಾಡಿಕೊಂಡರು. ಜತೆಗೆ, ಯುವಜನರ ಸಮಸ್ಯೆಗಳು, ಪ್ರಚಲಿತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅವರ ಜತೆ ಚರ್ಚೆ ನಡೆಸಿದರು.

    ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, ಮಾತಾ ಅಮೃತಾನಂದಮಯಿ ಅವರ ಆಶ್ರಮಕ್ಕೆ ಬರಬೇಕು ಎಂಬುದು ನನ್ನ ಬಹದಿನಗಳ ಕನಸಾಗಿತ್ತು. ಆ ಕನಸು ಇಂದು ನನಸಾಗಿದೆ. ಇಂದು ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದೆ. ಅಮ್ಮನವರು ಬೆಂಗಳೂರಿಗೆ ಬಂದಾಗಲೆಲ್ಲ ನಾನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಶಿಕ್ಷಣ, ಸಾಮಾಜಿಕ, ಆಹಾರ, ವಸತಿ, ಆರೋಗ್ಯ ಜೀವನೋಪಾಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಅಮೋಘ ಸೇವೆ ಮಾಡುತ್ತಾ ಸಮಾಜಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ. ಜತೆಗೆ, ಪ್ರಕೃತಿ ವಿಕೋಪದಂಥ ಕ್ಲಿಷ್ಟ ಸಂದರ್ಭಗಳಲ್ಲೂ ಅಮ್ಮನವರು ಮೊದಲು ನೆರವಿಗೆ ಧಾವಿಸುತ್ತಾರೆ ಎಂದರು.

    ಜನರಿಗೆ ಧರ್ಮಮಾರ್ಗವನ್ನು ತೋರುವುದು ಮಾತ್ರವಲ್ಲದೆ, ಜನರ ಬದುಕನ್ನು ಸಬಲೀಕರಣ ಮಾಡುವಲ್ಲಿಯೂ ಅಮ್ಮ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಕೇರಳ ಮಾತ್ರವಲ್ಲದೆ, ದೇಶಾದ್ಯಂತ ಮತ್ತು ಜಗತ್ತಿ ಉದ್ದಗಲಕ್ಕೂ ಅವರು ಸೇವೆ ಮಾಡುತ್ತಿದ್ದಾರೆ ಎಂದರು ಡಿಸಿಎಂ.