Tag: masthigudi

  • ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಬೆಂಗಳೂರು: ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ಮೇಲೆ ಪ್ರಕರಣ ದಾಖಲಾಗಿದೆ. ಮಾಸ್ತಿಗುಡಿ ಚಿತ್ರಣದ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಇದನ್ನೂ ಓದಿಮಾಸ್ತಿಗುಡಿ ದುರಂತ- ಬಂಧಿಸಲು ಹೋದ ಪೊಲೀಸರ ಮುಂದೆ ಪರಾರಿಯಾದ ನಿರ್ಮಾಪಕ

    ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಬುಧವಾರ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತು. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.

    ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು.

    ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ಈ ಬಗ್ಗೆ ದೂರು ನೀಡಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ಐಪಿಸಿ 353 ಅನ್ವಯ ಪ್ರಕರಣ ದಾಖಲಾಗಿದೆ.

  • ಮಾಸ್ತಿಗುಡಿ ದುರಂತ: ಜೂ.27ಕ್ಕೆ ವಿಚಾರಣೆ ಮುಂದೂಡಿಕೆ

    ಮಾಸ್ತಿಗುಡಿ ದುರಂತ: ಜೂ.27ಕ್ಕೆ ವಿಚಾರಣೆ ಮುಂದೂಡಿಕೆ

    ರಾಮನಗರ: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಿಬ್ಬರ ದುರಂತ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಗಡಿಯ ಜೆಎಮ್‍ಎಫ್‍ಸಿ ನ್ಯಾಯಾಲದಲ್ಲಿ ಇಂದು ವಿಚಾರಣೆ ನಡೆಯಿತು.

    ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್‍ಎಫ್‍ಸಿ ನ್ಯಾಯಾಧೀಶ ಆನಂದ್ ಪ್ರಕರಣದ ವಿಚಾರಣೆ ನಡೆಸಿ ಜೂನ್ 27 ಕ್ಕೆ ಮುಂದೂಡಿದ್ರು. ಸಾಹಸ ನಿರ್ದೇಶಕ ರವಿವರ್ಮ, ಸಹ ನಿರ್ದೇಶಕ ಸಿದ್ದಾರ್ಥ್, ಹಾಗೂ ಯೂನಿಟ್ ಮ್ಯಾನೇಜರ್ ಭರತ್ ವಿಚಾರಣೆಗೆ ಹಾಜರಾಗಿದ್ರು.

    ಕಳೆದ ನೆವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 24 ರಂದು ರಾಮನಗರ ಡಿಸಿಐಪಿ ಪೊಲೀಸರು 81 ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಒಟ್ಟು 450 ಪುಟಗಳ ಚಾರ್ಜ್ ಶೀಟ್‍ನ್ನು ಮಾಗಡಿ ಜೆಎಮ್‍ಎಫ್‍ಸಿ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದಾರೆ.

    ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್ ಹಾಗೂ ಹೆಲಿಕಾಪ್ಟರ್ ಚಾಲಕ ಪ್ರಕಾಶ್ ಬಿರಾದಾರ್ ವಿಚಾರಣೆಗೆ ಗೈರಾಗಿದ್ದರು. ಗೈರಾಗಿದ್ದ ಆರೋಪಿತರ ಪರವಾಗಿ ವಾದ ಮಂಡಿಸಿದ ವಕೀಲರು ತಮ್ಮ ಕಕ್ಷಿದಾರರ ಅನಾರೋಗ್ಯದ ಸಮಸ್ಯೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ರು.

     

  • ಮಾಸ್ತಿಗುಡಿ ಚಿತ್ರದ ದುನಿಯಾ ವಿಜಯ್ ಕಟೌಟ್ ವಿರೂಪಗೊಳಿಸಿದ ಕಿಡಿಗೇಡಿಗಳು

    ಮಾಸ್ತಿಗುಡಿ ಚಿತ್ರದ ದುನಿಯಾ ವಿಜಯ್ ಕಟೌಟ್ ವಿರೂಪಗೊಳಿಸಿದ ಕಿಡಿಗೇಡಿಗಳು

    ಬೆಂಗಳೂರು: ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಸಿನಿಮಾ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಹಾಕಲಾಗಿದ್ದ ದುನಿಯಾ ವಿಜಿ ಕಟೌಟನ್ನ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

    ಕಟೌಟ್‍ನಲ್ಲಿ ದುನಿಯಾ ವಿಜಿ ತಲೆಯನ್ನು ಮುರಿದಿದ್ದಾರೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಲ್, ಉದಯ್ ಜೊತೆ ಇರೋ ದುನಿಯಾ ವಿಜಿ ಕಟೌಟನ್ನು ವಿರೂಪಗೊಳಿಸಿದ್ದಾರೆ. ಜೊತೆಗೆ ಚಿತ್ರದ ಟೈಟಲ್ ಬೋರ್ಡ್ ಕೂಡ ಮುರಿದು ಹಾಕಿದ್ದಾರೆ.

    ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು.

    ಮಾಸ್ತಿಗುಡಿ ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಕರಬಂಧ ಮತ್ತು ಅಮೂಲ್ಯ ನಟಿಸಿದ್ದಾರೆ.

    ಇದನ್ನೂ ಓದಿ: `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

  • `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

    `ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

    ದಾವಣಗೆರೆ: ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಚಿತ್ರದ ಯಶಸ್ಸಿಗಾಗಿ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಹರಕೆ ಸಲ್ಲಿಸಿದ್ದಾರೆ.

    ಹೌದು. ವಿಜಿ ಅಭಿಮಾನಿಯೊಬ್ಬರು ಮೊಣಕಾಲಿನಲ್ಲೇ ನಡೆಯುವ ಮೂಲಕ ನೆರೆದವರಿಗೆ ಅಚ್ಚರಿ ಮೂಡಿಸಿದ್ದಾರೆ. ದುನಿಯಾ ವಿಜಯ್ ಅಭಿಮಾನಿ ಬಳಗದ ಅಧ್ಯಕ್ಷ ದೊಡ್ಡೇಶ ಈ ವಿಶಿಷ್ಟ ಹರಕೆ ಸಲ್ಲಿಸಿದ್ದಾರೆ.

    ದಾವಣಗೆರೆ ನಗರದ ಅಶೋಕ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹೀಗಾಗಿ ದೊಡ್ಡೇಶ ಅವರು ಅರುಣಾ ಚಿತ್ರಮಂದಿರದಿಂದ ಲಿಂಗೇಶ್ವರ ದೇವಸ್ಥಾನದವರೆಗೆ ಸುಮಾರು 500 ಮೀಟರ್ ದೂರ ಮೊಣಕಾಲಿನಲ್ಲಿಯೇ ನಡೆದು ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನವೆಂಬರ್ 7ರಂದು ಮಾಗಡಿಯ ತಿಪ್ಪಗೊಂಡನಹಳ್ಳಿ ನಡೆದಿದ್ದ ಕ್ಮೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ವೇಳೆ ದುರಂತ ಸಂಭವಿಸಿತ್ತು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ರಾಘವ ಉದಯ್ ಜಲಸಮಾಧಿಯಾಗಿದ್ದರು. ಸಿನಿಮಾಕ್ಕೆ ನಾಗಶೇಖರ್ ನಿರ್ದೇಶನವಿದ್ದು ಸುಂದರ್ ಪಿ ಗೌಡ ನಿರ್ಮಿಸುತ್ತಿದ್ದಾರೆ.

    ಬೆಂಗಳೂರಿನ ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಮಾಸ್ತಿಗುಡಿ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಸಿನಿಮಾ ನೋಡಲು ಉದಯ್ ತಂದೆ ವೆಂಕಟೇಶ್, ತಾಯಿ ಕೌಸಲ್ಯ ಮತ್ತು ಉದಯ್ ಸಹೋದರ ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಉದಯ್ ತಂದೆ-ತಾಯಿ, ಉದಯ್ ಅಭಿನಯದ ಕೊನೆ ಸಿನಿಮಾ ಇದು. ಹಾಗಾಗಿ ಚಿತ್ರಮಂದಿರದಲ್ಲಿ ನೋಡೋಕೆ ಬಂದ್ವಿ ಅಂದ್ರು. ಇನ್ನು ಕ್ಲೈಮ್ಯಾಕ್ಸ್ ದುರಂತದಲ್ಲಿ ಬಲಿಯಾದ ಅನಿಲ್ ಮತ್ತು ವಿಜಯ್ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿದೆ ಮಾಸ್ತಿ ಚಿತ್ರತಂಡ.

  • ಸ್ಯಾಂಡಲ್‍ವುಡ್ ನಿರ್ದೇಶಕ ರಿಷಿ ಅರೆಸ್ಟ್

    ಸ್ಯಾಂಡಲ್‍ವುಡ್ ನಿರ್ದೇಶಕ ರಿಷಿ ಅರೆಸ್ಟ್

    ಬೆಂಗಳೂರು: ಸಿನಿಮಾ ಮಾಡೋದಾಗಿ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್‍ವುಡ್‍ನ ವಿವಾದಿತ ನಿರ್ದೇಶಕ ರಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಒನ್ ವೇ ಚಿತ್ರದ ನಿರ್ಮಾಪಕ ದೀಪಕ್‍ರಿಂದ ನಿರ್ದೇಶಕ ರಿಷಿ 5 ಲಕ್ಷ ರೂಪಾಯಿ ಪಡೆದಿದ್ರು. ಬಳಿಕ ದೀಪಕ್ ಹಣ ವಾಪಸ್ ಕೇಳಿದಾಗ ಚೆಕ್ ನೀಡಿದ್ರು. ಆದ್ರೆ ಚೆಕ್ ಬೌನ್ಸ್ ಆಗಿದ್ರಿಂದ ರಿಷಿ ವಿರುದ್ಧ ನಿರ್ಮಾಪಕ ದೀಪಕ್ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ದೇಶಕ ರಿಷಿಯವರನ್ನು ಬಂಧಿಸಿದ್ದಾರೆ.

    `ಕೊಟ್ಲಲ್ಲಪ್ಪೋ ಕೈ’ ಚಿತ್ರದ ವಿವಾದದ ಮೂಲಕ ಸದ್ದು ಮಾಡಿದ್ದ ರಿಷಿ ಬಳಿಕ ನಟಿ ಮೈತ್ರೇಯಾ ಗೌಡ ಅವರನ್ನ ಮದುವೆ ಅಗಿದ್ದೀನಿ ಅಂತ ಕಾಂಟ್ರವರ್ಸಿ ಮಾಡಿದ್ದರು. ಇತ್ತೀಚೆಗೆ ಮಾಸ್ತಿಗುಡಿ ಸಿನಿಮಾದಲ್ಲಿ ನನ್ನ ಹಾಡು ಬಳಸಿದ್ದಾರೆ ಅಂತಾ ಫಿಲಂ ಚೇಂಬರ್ ಗೆ ದೂರು ನೀಡಿದ್ದರು.