Tag: mastermind

  • ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

    ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

    – ಸಹಚರರ ಮಾಹಿತಿ ಕೊಟ್ಟವ್ರಿಗೆ ನಗದು ಬಹುಮಾನ ಘೋಷಣೆ

    ರೈಪುರ್: ದಾಂತೇವಾಡ (Dantewada) ಸ್ಫೋಟದ ತನಿಖೆ ಕೈಗೊಂಡಿರುವ ಬಸ್ತಾರ್ ಪೊಲೀಸರು ಕೃತ್ಯದ ಮಾಸ್ಟರ್‌ಮೈಂಡ್‌ ( Mastermind) ಫೋಟೋ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಆತನ ಹಾಗೂ ಸಹಚರರ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.

    ಸ್ಫೋಟದ ಮಾಸ್ಟರ್ ಮೈಂಡ್‍ನನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಜಗದೀಶ್‍ನ ಪತ್ನಿ ಸುಕ್ಮಾ ಜಿಲ್ಲೆಯ ಹೇಮ್ಲಾ ಕೂಡ ನಕ್ಸಲ್ ಸಂಘಟನೆಯ ದರ್ಭಾ ವಿಭಾಗದಲ್ಲಿ ಕಮಾಂಡರ್ ಆಗಿದ್ದಾಳೆ. ಅಲ್ಲದೇ ಜಗದೀಶ್‍ನ ಮಾವ ವಿನೋದ್ ಹೇಮ್ಲಾ, ಕಾಂಗೇರ್ ಘಾಟಿ ಪ್ರದೇಶದ ನಕ್ಸಲ್ ಸಮಿತಿಯ ಉಸ್ತುವಾರಿಯಾಗಿ ಸಕ್ರಿಯರಾಗಿದ್ದಾನೆ. ಗುಪ್ತಚರ ಮಾಹಿತಿಯ ಪ್ರಕಾರ ದರ್ಭಾ (Darbha) ವಿಭಾಗದ ಸಿಪಿಐ (CPI Maoist) ಸ್ಫೋಟದಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    10 ಡಿಎಫ್‍ಜಿ (District Reserve Guard) ಸಿಬ್ಬಂದಿ ಮತ್ತು ಚಾಲಕನ ಜೀವವನ್ನು ಬಲಿ ಪಡೆದ ಸುಧಾರಿತ ಸ್ಫೋಟಕವನ್ನು (IED) ಎರಡು ತಿಂಗಳ ಹಿಂದೆಯೇ ಭೂಮಿಯಲ್ಲಿ ಹುದುಗಿಸಿಟ್ಟಿರುವ ಕುರುಹುಗಳಿವೆ. ಫಾಕ್ಸ್‌ಹೋಲ್‌ ತಂತ್ರಜ್ಞಾನವನ್ನು (Foxhole Mechanism) ಬಳಸಿ ಸುರಂಗ ತೆಗೆದು ಇರಿಸಿದ್ದರು. ಇದರಿಂದ ಅದು ಪತ್ತೆಯಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗುಪ್ತಚರ ಮಾಹಿತಿಯ ಆಧಾರದ ಮೇಲೆ ಚೈತು, ದೇವಾ, ಮಂಗ್ಟು, ರಾನ್ಸಾಯಿ, ಜೈಲಾಲ್, ಬಮನ್, ಸೋಮ, ರಾಕೇಶ್, ಭೀಮಾ ಮತ್ತು ಇತರ ಮಾವೋವಾದಿಗಳ ವಿರುದ್ಧ ಸೆಕ್ಷನ್ 147 ಗಲಭೆ, 149 ಕಾನೂನು ಬಾಹಿರ ಚಟುವಟಿಕೆ, 307 ಕೊಲೆ ಯತ್ನ, 302 ಕೊಲೆ ಅಲ್ಲದೆ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಯುಎಪಿಎ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಛತ್ತೀಸ್‍ಗಢದ (Chhattisgarh) ದಾಂತೇವಾಡದಲ್ಲಿ ಜಿಲ್ಲಾ ಮೀಸಲು ಪಡೆ ಸಿಬ್ಬಂದಿಯ ಮೇಲೆ ಮಾವೋವಾದಿಗಳ ದಾಳಿಯ ನಂತರದ ಕ್ಷಣಗಳನ್ನು ತೋರಿಸುವ ವೀಡಿಯೋವೊಂದು ಪತ್ತೆಯಾಗಿದೆ. ಇದರಲ್ಲಿ ಮಾವೋವಾದಿಯೊಬ್ಬ ಪೊಲೀಸರ ಮೇಲೆ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏ.26 ರಂದು ಛತ್ತೀಸ್‍ಗಢದ ದಾಂತೇವಾಡದಲ್ಲಿ ಮಾವೋವಾದಿಗಳು ನಡೆಸಿದ್ದ ಐಇಡಿ ಸ್ಫೋಟದಲ್ಲಿ 10 ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದರು. ಇದನ್ನೂ ಓದಿ: ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

  • 73 ಜನರ ಬಲಿ ತೆಗೆದುಕೊಂಡ ಬಿಹಾರ ಕಳ್ಳಭಟ್ಟಿ ಪ್ರಕರಣದ ಮಾಸ್ಟರ್ ಮೈಂಡ್ ಕೊನೆಗೂ ಪೊಲೀಸ್ ಬಲೆಗೆ

    73 ಜನರ ಬಲಿ ತೆಗೆದುಕೊಂಡ ಬಿಹಾರ ಕಳ್ಳಭಟ್ಟಿ ಪ್ರಕರಣದ ಮಾಸ್ಟರ್ ಮೈಂಡ್ ಕೊನೆಗೂ ಪೊಲೀಸ್ ಬಲೆಗೆ

    ಪಾಟ್ನಾ: ಬಿಹಾರದ (Bihar) ಸರನ್ (Saran) ಜಿಲ್ಲೆಯಲ್ಲಿ 73 ಜನರ ಸಾವಿಗೆ ಕಾರಣವಾದ ಕಳ್ಳಭಟ್ಟಿ ದುರಂತ (Bihar Hooch Tragedy) ಪ್ರಕರಣದ ಮಾಸ್ಟರ್ ಮೈಂಡ್ (Mastermind) ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ದೆಹಲಿ ಪೊಲೀಸರ (Delhi Police) ತಂಡ ಕೊನೆಗೂ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಯನ್ನು ಸರನ್ ಜಿಲ್ಲೆಯ ದೋಯಿಲಾ ಗ್ರಾಮದ ನಿವಾಸಿ ರಾಮ್ ಬಾಬು ಮಹತೋ ಎಂದು ಗುರುತಿಸಲಾಗಿದೆ. ಆತ ದೆಹಲಿಯಲ್ಲಿ ಅಡಗಿರುವ ಶಂಕೆಯ ಮೇರೆಗೆ ಅಪರಾಧ ವಿಭಾಗ ಅಂತರ್ ರಾಜ್ಯ ಸೆಲ್‌ಗೆ ಮಾಹಿತಿ ನೀಡಿತ್ತು ಎಂದು ವಿಶೇಷ ಪೊಲೀಸ್ ಕಮಿಷನರ್ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

    ತಾಂತ್ರಿಕ ಕಣ್ಗಾವಲು ಮತ್ತು ನಿರ್ದಿಷ್ಟ ಒಳಹರಿವಿನ ಆಧಾರದ ಮೇಲೆ ಬಿಹಾರ ಕಳ್ಳಭಟ್ಟಿ ದುರಂತ ಪ್ರಕರಣದ ಮಾಸ್ಟರ್ ಮೈಂಡ್‌ನನ್ನು ದ್ವಾರಕಾದಲ್ಲಿ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಪಿಯ ಬಂಧನದ ಬಗ್ಗೆ ಮುಂದಿನ ಕ್ರಮಕ್ಕಾಗಿ ಬಿಹಾರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗಲ್ಲವೆಂದು ಸ್ಮಶಾನದಲ್ಲೇ ಬೆಂಕಿ ಹಚ್ಚಿಕೊಂಡ ಯುವಕ!

    spurious_liquor

    ಬಿಹಾರದಲ್ಲಿ ಮದ್ಯ ನಿಷೇಧವಿರುವ ಕಾರಣ ಆರೋಪಿಗಳು ಬೇಗನೆ ಹಾಗೂ ಸುಲಭವಾಗಿ ಹಣ ಗಳಿಸುವ ಆಸೆಯಿಂದ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕಗೆ ಹೋಗಬೇಕಿದ್ದ ಕೊರಿಯರ್‌ನಲ್ಲಿತ್ತು 4 ಮಾನವನ ತಲೆಬುರುಡೆ

    Live Tv
    [brid partner=56869869 player=32851 video=960834 autoplay=true]

  • ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

    ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

    ನವದೆಹಲಿ: ಪಂಜಾಬಿ ಖ್ಯಾತ ಗಾಯಕ (Punjabi Singer) ಹಾಗೂ ರಾಜಕಾರಣಿ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಮಾಸ್ಟರ್ ಮೈಂಡ್ (Mastermind) ಗೋಲ್ಡಿ ಬ್ರಾರ್‌ನನ್ನು (Goldy Brar) ಕ್ಯಾಲಿಫೋರ್ನಿಯಾದಲ್ಲಿ (California) ಬಂಧಿಸಲಾಗಿದೆ. ಸಿಧು ಹತ್ಯೆಯ ಜವಾಬ್ದಾರಿ ಹೊತ್ತಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಭಾರತದ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.

    ಭಾರತದ ಗುಪ್ತಚರ ಸಂಸ್ಥೆಗಳು ಅಂತಾರಾಷ್ಟ್ರೀಯ ಮೂಲಗಳಿಂದ ಈ ಮಾಹಿತಿಯನ್ನು ಪಡೆದಿವೆ. ಆದರೆ ಗೋಲ್ಡಿ ಬ್ರಾರ್ ಬಂಧನದ ಬಗ್ಗೆ ಕ್ಯಾಲಿಫೋರ್ನಿಯಾ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಆದರೆ ಭಾರತದ ಗುಪ್ತಚರ ಇಲಾಖೆಗಳಾದ ಆರ್‌ಎಡಬ್ಲ್ಯೂ, ಐಬಿ, ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮತ್ತು ಪಂಜಾಬ್ ಗುಪ್ತಚರ ಸಂಸ್ಥೆ ಈ ಮಾಹಿತಿಯನ್ನು ಪಡೆದಿರುವುದಾಗಿ ತಿಳಿಸಿವೆ. ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಪತ್ತೆಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿವೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ

    ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಕೆನಡಾ ಮೂಲದವನಾಗಿದ್ದಾನೆ. ಸಿಧು ಮೂಸೆವಾಲಾ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಈ ಹತ್ಯೆಯ ಮಾಸ್ಟರ್ ಮೈಂಡ್ ಇದೇ ಬ್ರಾರ್ ಎನ್ನಲಾಗಿದೆ.

    ಸಿಧು ಸಾವಿನ ಕೆಲ ದಿನಗಳ ಬಳಿಕ ಬ್ರಾರ್ ಸಿಧು ಹತ್ಯೆಗೆ ತಾನೇ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದ. ಸಿಧು ಬ್ರಾರ್‌ನ ವಿರೋಧಿ ಗ್ಯಾಂಗ್‌ನೊಂದಿಗೆ ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಮೂಸೆವಾಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊಲೆಯ ಯೋಜನೆ ಹಾಕಿದ್ದಾಗಿ ತಿಳಿಸಿದ್ದ. ಇದನ್ನೂ ಓದಿ: ಪಾಕಿಸ್ತಾನಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಕೊಡಲ್ಲ – ರಷ್ಯಾ

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಮಾಸ್ಟರ್ ಮೈಂಡ್‍ಗಳಿಗಾಗಿ ಹುಡುಕಾಟ

    ಇಬ್ಬರು ಮಾಸ್ಟರ್ ಮೈಂಡ್‍ಗಳಿಗಾಗಿ ಹುಡುಕಾಟ

    ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬ್ಲಾಸ್ಟ್ ಮಾಡಬೇಕು, ಹಿಂದೂ ಮುಖಂಡರ ಹತ್ಯೆ ಮಾಡಬೇಕು ಅಂತ ಅಂದುಕೊಂಡಿದ್ದ ತಂಡವನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೆಹಬೂಬ್ ಪಾಷಾ ಬಾಯಿಬಿಟ್ಟಿರೋ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಅದು ಕೂಡ ಮುಖ್ಯಮಂತ್ರಿಗಳ ಜಿಲ್ಲೆ ಶಿವಮೊಗ್ಗದಲ್ಲಿ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಬ್ಬರು ಮಾಸ್ಟರ್ ಮೈಂಡ್ ಗಳು ಇದ್ದಾರೆ ಅನ್ನೋ ಮಾಹಿತಿಯನ್ನು ಮೆಹಬೂಬ್ ಪಾಷಾ ಬಾಯಿ ಬಿಟ್ಟಿದ್ದಾನೆ. ಮೆಹಬೂಬ್ ಪಾಷಾ ಕೇವಲ ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು ಟ್ರೈನಿಂಗ್ ಕೊಡಿಸೋದು ಅಷ್ಟೇ. ತೀರ್ಥಹಳ್ಳಿಯಲ್ಲಿ ಇದ್ದವರು ಯಾವ ರೀತಿ ಕೆಲಸ ಮುಗಿಸಿಬೇಕು ಅಂತ ತೀರ್ಮಾನ ಮಾಡುತ್ತಾ ಇದ್ದರು. ಇದನ್ನೂ ಓದಿ: ಒಂದು ಹತ್ಯೆ ಯತ್ನ – ಆರು ಕೇಸ್ ರೀ ಓಪನ್

    ಶ್ರೀಲಂಕಾದ ಬ್ಲಾಸ್ಟ್ ನಲ್ಲಿ ಪಾಲ್ಗೊಂಡಿದ್ದ ಸಂಘಟನೆಯವರೇ ಇದರಲ್ಲೂ ಇದ್ದಾರೆ ಅನ್ನೋ ಅನುಮಾನ ಕಾಡುತ್ತಾ ಇದೆ. ಮೆಹಬೂಬ್ ಪಾಷಾ ಬಂಧನವಾದ ಕೂಡಲೇ ತೀರ್ಥಹಳ್ಳಿಯ ಇಬ್ಬರು ಪರಾರಿಯಾಗಿದ್ದಾರೆ. ಸದ್ಯ ಆ ಇಬ್ಬರು ಸಿಕ್ಕರೆ ಸ್ಫೋಟಕ ಮಾಹಿತಿ ಬಹಿರಂಗವಾಗಲಿದೆ. ಇದನ್ನೂ ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ