Tag: Master

  • ಮಾಸ್ಟರ್ ಮಹೇಂದ್ರನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸಾಂಗ್

    ಮಾಸ್ಟರ್ ಮಹೇಂದ್ರನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸಾಂಗ್

    ಮಿಳು ಚಿತ್ರರಂಗದಲ್ಲಿ ಮಾಸ್ಟರ್​ (Master) ಮಹೇಂದ್ರನ್ (Mahendran)​ ಜನಪ್ರಿಯ ಹೆಸರು. ಕೇವಲ ಮೂರು ವರ್ಷದವರಿದ್ದಾಗ ಬಣ್ಣ ಹಚ್ಚಿದ ಮಹೇಂದ್ರನ್​, ಆ ನಂತರ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡವರು. ತಮ್ಮ ಅಭಿನಯದಿಂದ ನಾಲ್ಕು ಬಾರಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವರು. ‘ವಿಳಾ’ ಎಂಬ ಚಿತ್ರದ ಮೂಲಕ ಹೀರೋ ಆದ ಮಹೇಂದ್ರನ್​, ಇದೀಗ ಮೊದಲ ಬಾರಿಗೆ ‘ನೀಲಕಂಠ’ (Nilakantha) ಎಂಬ ಪ್ಯಾನ್​ ಇಂಡಿಯಾ ಚಿತ್ರದಲ್ಲಿ ನಟಿಸಿದ್ದಾರೆ.

    ಎಲ್​.ಎಸ್​. ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಶ್ರವಣ್ ಜಿ ಕುಮಾರ್ ಎಂ.ಶ್ರೀನಿವಾಸುಲು ಮತ್ತು ಡಿ.ವೇಣುಗೋಪಾಲ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಆಕ್ಷನ್​ ಡ್ರಾಮಾ ಆಗಿದ್ದು, ನಾ. ಅರುಣ್​ ಕಾರ್ತಿಕ್​ ಬರೆದು ನಿರ್ದೇಶಸಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಹಳ್ಳಿಯಲ್ಲಿ ಚಿತ್ರೀಕರಿಸಲಾಗಿರುವುದು ವಿಶೇಷ. ಇಂದು ಮಹೇಂದ್ರನ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ‘ಆಕು ಪಾಕು’ ಎಂಬ ಹಾಡನ್ನು ಹುಟ್ಟುಹಬ್ಬರ ಕಾಣಿಕೆಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ:ಅನಾರೋಗ್ಯದ ಬಳಿಕ ಬಾಲಿವುಡ್‌ನತ್ತ ಮುಖ ಮಾಡಿದ ಸಮಂತಾ

    ಮಹೇಂದ್ರನ್ ಜೊತೆಗೆ ಯಶ್ನಾ ಚೌಧರಿ ಮತ್ತು ನೇಹಾ ಪಠಾಣ್​ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಸ್ನೇಹಾ ಉಲ್ಲಾಳ್​ ಸಹ ಇದ್ದು, ರಾಮ್ಕಿ, ಬಬ್ಲೂ ಪೃಥ್ವಿರಾಜ್, ಶುಭಲೇಖಾ ಸುಧಾಕರ್, ಸತ್ಯ ಪ್ರಕಾಶ್, ಚಿತ್ರಮ್ ಸೀನು, ಕನ್ನಡದ ಜ್ಯೋತಿ ರೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ನೀಲಕಂಠ’ ಚಿತ್ರವು ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    ಲಕ್ನೋ: ಮಾಲೀಕನನ್ನು ರಕ್ಷಿಸಲು ವಿಷಪೂರಿತ ಹಾವಿನೊಂದಿಗೆ ಸೆಣಸಾಡಿ ನಾಯಿಯೊಂದು ತನ್ನ ಪ್ರಾಣವನ್ನೇ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.

    ತನ್ನ ಯಜಮಾನನೊಂದಿಗೆ ವಾಕಿಂಗ್ ಹೋಗುತ್ತಿದ್ದ ವೇಳೆ ಹಾವನ್ನು ಕಂಡ ನಾಯಿ ಆತನನ್ನು ರಕ್ಷಿಸುವ ಸಲುವಾಗಿ ಹಾವನ್ನು ಕೊಂದು ಹಾಕಿದೆ. ಆದರೆ ದುರದೃಷ್ಟವಶಾತ್, ಹಾವು ಕಚ್ಚಿದ ವಿಷದಿಂದ ನಾಯಿ ಸಾವನ್ನಪ್ಪಿದೆ. ಇದನ್ನೂ ಓದಿ: ಮದುವೆ ಮನೆಗೆ ಬಂದವರಂತೆ ಬಂದ ಅಧಿಕಾರಿಗಳು- ಕೈ ಮುಖಂಡೆ, ಅಳಿಯನ ಮನೆ ಮೇಲೆ ಐಟಿ ರೇಡ್

    ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅಮಿತ್ ರೈ ಅವರು ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ ಪ್ರತಾಪಪುರದಲ್ಲಿ ವಾಸವಾಗಿದ್ದರು. ಮೊದಲಿನಿಂದಲೂ ಶ್ವಾನ ಪ್ರಿಯರಾಗಿದ್ದ ಅಮಿತ್ ಸುಮಾರು ಐದು ವರ್ಷಗಳ ಹಿಂದೆ ಅಮೆರಿಕದ ಬುಲ್ಲಿ ಎಂಬ ನಾಯಿಯನ್ನು ತಂದು ಅದಕ್ಕೆ ಗಬ್ಬರ್ ಎಂದು ಹೆಸರಿಟ್ಟಿದ್ದರು. ತಾವು ಸಾಕಿದ್ದ ಎಲ್ಲಾ ನಾಯಿಗಳಿಗಿಂತಲೂ ಕೊಂಚ ಹೆಚ್ಚು ಪ್ರೀತಿಯನ್ನು ಗಬ್ಬರ್ ಮೇಲೆ ಅಮಿತ್ ಹೊಂದಿದ್ದರು. ಅದೇ ರೀತಿ ಗಬ್ಬರ್ ಕೂಡ ಅಮಿತ್ ವಿಚಾರದಲ್ಲಿ ಬಹಳ ಪೊಸೆಸಿವ್ ಆಗಿತ್ತು. ಅಮಿತ್ ಗದರದೇ ಇದ್ದರೆ ಯಾರನ್ನೂ ಅವರ ಆತನ ಹತ್ತಿರಕ್ಕೆ ಬರಲು ಬಿಡದೇ ರಕ್ಷಣೆ ನೀಡುತ್ತಿತ್ತು.

    ಬುಧವಾರ ಪ್ರತಾಪ್ ಪುರದಲ್ಲಿರುವ ತಮ್ಮ ಫಾರ್ಮ್‍ಹೌಸ್‍ಗೆ ಅಮಿತ್ ತನ್ನ ನಾಯಿಯೊಂದಿಗೆ ವಾಕಿಂಗ್‍ಗೆ ತೆರಳಿದ್ದರು. ಈ ವೇಳೆ ದೈತ್ಯ ವಿಷಕಾರಿ ಹಾವು (ರಸ್ಸೆಲ್ಸ್ ವೈಪರ್) ತನ್ನ ಮಾಲೀಕನ ಕಡೆಗೆ ಬರುತ್ತಿರುವುದನ್ನು ನಾಯಿ ಗಮನಿಸಿದೆ ಆದರೆ ಹಾವನ್ನು ಅಮಿತ್ ನೋಡಿಲ್ಲ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ತನ್ನ ಯಜಮಾನನಿಗೆ ನಿಯತ್ತಾಗಿದ್ದ ಗಬ್ಬರ್ ಅಮಿತ್‍ನನ್ನು ರಕ್ಷಿಸಲು ತಕ್ಷಣವೇ ಹಾವಿನ ಮೇಲೆ ಎಗರಿಸಿದೆ. ಸುದೀರ್ಘ ಕಾಲ ನಡೆದ ಹಾವು ಮತ್ತು ನಾಯಿ ಕಾಳಗದಲ್ಲಿ ಕೊನೆಗೆ ಗಬ್ಬರ್ ವಿಷಪೂರಿತ ಹಾವನ್ನು ಎರಡು ತುಂಡುಗಳಾಗಿ ಕಚ್ಚಿ ಕೊಂದು ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಹಾವಿನ ವಿಷ ದೇಹದೊಳಗೆ ಹರಡಿದ್ದರಿಂದ ನಾಯಿ ಕೂಡ ಕೆಲ ನಿಮಿಷಗಳಲ್ಲೇ ಕೆಳಗೆ ಬಿದ್ದು ಸಾವನ್ನಪ್ಪಿದೆ.

    ಒಟ್ಟಾರೆ ಯಜಮಾನನಿಗಾಗಿ ನಾಯಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದು, ಗಬ್ಬರ್ ಅನನು ಕಳೆದುಕೊಂಡು ಅಮಿತ್ ಹಾಗೂ ಆತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2

    ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2

    ಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಖ್ಯಾತ ನಟಿ ಪೂಜಾ ಹೆಗ್ಡೆ ಅಭಿನಯದ `ಬೀಸ್ಟ್’ ಸಿನಿಮಾವು ಇದೇ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ.

    ದಳಪತಿ ವಿಜಯ್ ಅವರ ಈ ಹಿಂದಿನ ಚಿತ್ರ `ಮಾಸ್ಟರ್’ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಅಪರಾಧ ಚಟುವಟಿಕೆಗಳಿಕೆ ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಉತ್ತಮ ಸಂದೇಶ ನೀಡಿದ ಈ ಚಿತ್ರವು ಬಾಕ್ಸ್ ಆಫೀಸ್‍ನಲ್ಲೂ ಸದ್ದು ಮಾಡಿತ್ತು. ಕೋವಿಡ್ ಕಾರಣದಿಂದಾಗಿ ಶೇ.50ರಷ್ಟು ಸಿನಿಮಾ ಪ್ರದರ್ಶನಕ್ಕೆ ಅವಕಾಶವಿದ್ದ ಸಂದರ್ಭದಲ್ಲೂ ಈ ಸಿನಿಮಾ ದೊಡ್ಡ ಹೆಜ್ಜೆಯನ್ನಿರಿಸಿತ್ತು. ಇದೀಗ ಬಹುನಿರೀಕ್ಷಿತ ಚಿತ್ರ `ಬೀಸ್ಟ್’ನೊಂದಿಗೆ ತೆರೆಯ ಮೇಲೆ ಬರಲು ದಳಪತಿ ಸಿದ್ಧರಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಡಿಸೆಂಬರ್‌ನಲ್ಲಿ ಎಕ್ಸೈಟಿಂಗ್ ಪೋಸ್ಟರ್ ಬಿಡುಗಡೆ ಮಾಡಿದ್ದ ಬೀಸ್ಟ್ ಚಿತ್ರತಂಡವು ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈ ಸಿನಿಮಾ ಏಪ್ರಿಲ್ 2ನೇ ವಾರದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿತ್ತು. ಕೇರಳದಲ್ಲಿ ಏ.14 ರಂದು ಹೊಸ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 13ರಂದೇ ಚಿತ್ರತಂಡವು ಬೀಸ್ಟ್ ಅನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.

    ಈಗಾಗಲೇ ಚಿತ್ರತಂಡವು ಬೀಸ್ಟ್ ಸಿನಿಮಾದ ಹೊಸ ಬಗೆಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಆದರೆ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವು ಏಪ್ರಿಲ್ 14ರಂದು ತೆರೆಗೆ ಬರುತ್ತಿರುವುದು ಬೀಸ್ಟ್ ತಂಡಕ್ಕೆ ಭಾರಿ ಸವಾಲು ಎದುರಾಗಲಿದೆ ಎನ್ನುವುದೇ ಪ್ರಶ್ನೆಯಾಗಿದೆ.

  • ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ‘ಒಡೆಯ’ ದರ್ಶನ್ ತಮ್ಮನಾಗಲಿದ್ದಾರಾ ಪಂಕಜ್?

    ಬೆಂಗಳೂರು: ತಂದೆ ಎಸ್ ನಾರಾಯಣ್ ಗರಡಿಯಲ್ಲಿ ನಟನಾಗಿ, ನಿರ್ದೇಶಕ ವಿಭಾಗದಲ್ಲಿಯೂ ಪಳಗಿಕೊಂಡಿರುವವರು ಪಂಕಜ್ ನಾರಾಯಣ್. ಇದೀಗ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮನಾಗಿ ನಟಿಸಲು ಪಂಕಜ್ ತಯಾರಾಗಿದ್ದಾರೆ!

    ಚಿತ್ರತಂಡದ ಅಧಿಕೃತ ಮೂಲಗಳೇ ಈ ಸುದ್ದಿಯನ್ನು ಹೊರ ಹಾಕಿವೆ. ಅದರನ್ವಯ ದರ್ಶನ್ ಅವರ ತಮ್ಮನಾಗಿ ಪಂಕಜ್ ನಟಿಸಲಿರೋದು ಪಕ್ಕಾ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಸಹೋದರರಿರಲಿದ್ದಾರಂತೆ. ಅದರಲ್ಲೊಬ್ಬರಾಗಿ ಪಂಕಜ್ ನಟಿಸಿದರೆ, ಮತ್ತೋರ್ವ ಸಹೋದರನಾಗಿ ಯಶಸ್ ಸೂರ್ಯ ಅಭಿನಯಿಸಲಿದ್ದಾರೆ.

    ಚೆಲುವಿನ ಚಿಲಿಪಿಲಿ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದ ಪಂಕಜ್ ಒಂದು ಚಿತ್ರದಲ್ಲಿ ನಾರಾಯಣ್ ಅವರಿಗೆ ನಿರ್ದೇಶನ ವಿಭಾಗದಲ್ಲಿಯೂ ಸಾಥ್ ನೀಡಿದ್ದರು. ಇದೀಗ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಒಡೆಯ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶವನ್ನೇ ಗಿಟ್ಟಿಸಿಕೊಂಡಿದ್ದಾರೆ.

    ಒಡೆಯ ಚಿತ್ರ ಇದೇ ತಿಂಗಳ ಹತ್ತನೇ ತಾರೀಕಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ದರ್ಶನ್ ತಮ್ಮಂದಿರ ಪಾತ್ರಗಳಿಗೂ ಮಹತ್ವ ಇದೆಯಂತೆ. ಅಂಥಾ ಪಾತ್ರದಲ್ಲಿ ಮಿಂಚಲು ಪಂಕಜ್ ರೆಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv