Tag: mass suicide

  • ಒಂದೇ ಕುಟುಂಬದ 6 ಮಂದಿಯ ಆತ್ಮಹತ್ಯೆ- ಕಾರಣ ಕೊಟ್ಟ ಎಸ್‍ಪಿ

    ಒಂದೇ ಕುಟುಂಬದ 6 ಮಂದಿಯ ಆತ್ಮಹತ್ಯೆ- ಕಾರಣ ಕೊಟ್ಟ ಎಸ್‍ಪಿ

    ಕೊಪ್ಪಳ: ಒಂದೇ ಕುಟುಂಬದ ಆರು ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮಕ್ಕೆ ಎಸ್‍ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಪಿ ರೇಣುಕಾ, ಸಾವಿಗೆ ಹಲವು ಕಾರಣಗಳಿರಬಹುದು. ಈಗಾಗಲೇ ತನಿಖೆ ಆರಂಭವಾಗಿದ್ದು, ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ ಅಂತಾ ತಿಳಿಸಿದರು.

    ಶೇಖರಯ್ಯ ಎಂಬಾತ ತನ್ನ ಪತ್ನಿ ಮತ್ತು ನಾಲ್ವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಕೊನೆಗೆ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶುಕ್ರವಾರ ಸಂಜೆ ಮನೆಯ ಬಾಗಿಲು ಹಾಕಿಕೊಂಡಿದ್ದ ಶೇಖರಯ್ಯ ಕುಟುಂಬಸ್ಥರು, ಇಂದು ಬೆಳಗ್ಗೆಯಾದ್ರೂ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಜನರಿಗೆ ಅಡುಗೆ ಮನೆಯಲ್ಲಿ ಐವರ ಶವ ಕಂಡು ಬಂದಿದ್ದು, ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್ ಪಿ ರೇಣುಕಾ ಸ್ಪಷ್ಟಪಡಿಸಿದರು.

    ಈಗಾಗಲೇ ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿಗೆ ಸ್ಥಳೀಯರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಸ್ಥಳದಲ್ಲಿ ವಿಷದ ವಾಸನೆ ಬರುತ್ತಿದ್ದು, ತಂದೆಯೇ ಪತ್ನಿ ಮತ್ತು ಮಕ್ಕಳನ್ನು ಸಾಯಿಸಿ ಕೊನೆಗೆ ತಾನು ನೇಣು ಹಾಕಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಮೃತ ಶೇಖರಯ್ಯ ತನ್ನ ಸೋದರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದರೂ ಸಾಂಸಾರಿಕ ಕಲಹದಿಂದಾಗಿ ತವರು ಮನೆ ಸೇರಿಕೊಂಡಿದ್ದರು. ಉಳಿದ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಶೇಖರಯ್ಯ ವರನ ಹುಡುಕಾಟದಲ್ಲಿದ್ದರು ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ ಎಂದು ಎಸ್ ಪಿ ಹೇಳಿದ್ದಾರೆ.

    ಸಾಮೂಹಿಕ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಾವು ಸಹ ಮರಣೋತ್ತರ ಶವ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಸ್ಥಳೀಯರಿಂದ ಮತ್ತು ಸಂಬಂಧಿಕರಿಂದಲೂ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಸ್.ಪಿ. ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರದಿಂದ ಶಾಕ್ – ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಹಾಕಿದ ರೈತರು

    ಸರ್ಕಾರದಿಂದ ಶಾಕ್ – ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಹಾಕಿದ ರೈತರು

    ಬೆಂಗಳೂರು: ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಾನು ನಿಮ್ಮ ಜೊತೆ ಇದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದರೂ ನೆಲಮಂಗಲದ ರೈತರು ಈಗ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದಲ್ಲಿರುವ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಜನ್ಮ ಸ್ಥಳವಾದ ವೀರಾಪುರ ಗ್ರಾಮ ಹಾಗೂ ಅಕ್ಕಪಕ್ಕದ ನಾಲ್ಕಾರು ಗ್ರಾಮ ರೈತರು ಸರ್ಕಾರದ ನೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

    ಮೂರ್ನಾಲ್ಕು ತಲೆಮಾರುಗಳಿಂದ ಕೃಷಿ ಭೂಮಿಯನ್ನು ಉಳುಮೆ ಮಾಡಿಕೊಂಡ ರೈತರು ಕಂದಾಯ ಕಟ್ಟಿ ತಮ್ಮ ಹೆಸರಿಗೆ ಎಲ್ಲಾ ದಾಖಲೆಗಳನ್ನು ಕಾನೂನು ಬದ್ಧವಾಗಿ ಇರಿಸಿ ಕೊಂಡಿದ್ದಾರೆ. ಆದರೆ ಕೃಷಿಯೇ ಜೀವ ನಾದಾರವಾಗಿಸಿಕೊಂಡಿದ್ದ ರೈತರ ಸಾವಿರಾರು ಎಕರೆ ಭೂಮಿಗೆ ರಾಜ್ಯ ಅರಣ್ಯ ಇಲಾಖೆ ಏಕಾಏಕಿ ಗಡಿ ಗುರುತಿಸಿ, ಇದು ಮೈಸೂರು ಮಹಾರಾಜರು ಸರ್ಕಾರಕ್ಕೆ ನೀಡಿರುವ ಭೂಮಿ, ಹೀಗಾಗಿ ರೈತರು ಉಳುಮೆ ಸೇರಿದಂತೆ ಜಮೀನಿನಲ್ಲಿರುವ ಮರಗಳನ್ನು ಕಟಾವು ಮಾಡದಂತೆ ಸೂಚಿಸಿದೆ.

    ಸರ್ಕಾರ ನೀತಿಯಿಂದ ಆತಂಕಗೊಂಡ ಗ್ರಾಮಸ್ಥರು ರಾಜ್ಯ ಅರಣ್ಯ ಇಲಾಖೆ ನಡೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ತನ್ನ ನಿಲುವನ್ನು ಕೂಡಲೇ ಹಿಂಪಡೆಯದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

    ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

    ರಾಂಚಿ: ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮತ್ತೊಂದು ಅಘಾತಕಾರಿ ಆತ್ಮಹತ್ಯೆ ಘಟನೆ ವರದಿಯಾಗಿದೆ. ರಾಂಚಿಯ ಒಂದೇ ಕುಟುಂಬದ 7 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಘಟನೆ ನಡೆದಿದ್ದು, ಸಾಮೂಹಿಕ ಆತ್ಮಹತ್ಯೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಈ ಕುರಿತು ಸಂಪೂರ್ಣ ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಪತಿ ದೀಪಕ್ ಝಾ (40), ಪತ್ನಿ ಸೋನಿ ಝಾ, ರೂಪೇಶ್ ಝಾ, ಪುತ್ರಿ ದೃಷ್ಟಿ(7), ಕಿರಿಯ ಪುತ್ರ ಗಂಜು ಹಾಗೂ ದೀಪಕ್ ಝಾ ತಂದೆ, ತಾಯಿ ಮೃತದೇಹಗಳು ಸಹ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಘಟನೆಗೂ ಒಂದು ತಿಂಗಳ ಮುನ್ನ 6 ಮಂದಿಯ ಕುಟುಂಬವೊಂದು ಜಾರ್ಖಂಡ್‍ನ ಹಜಾರಿಬಾಗ್ ಆಪಾರ್ಟ್ ಮೆಂಟ್‍ವೊಂದರಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿತ್ತು. ಈ ವೇಳೆ ತನಿಖೆ ನಡೆಸಿದ ಪೊಲೀಸರು ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಸ್ಪಷ್ಟನೆ ನೀಡಿದ್ದರು.

  • ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆಗೆ ಸ್ಫೋಟಕ ತಿರುವು

    ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆಗೆ ಸ್ಫೋಟಕ ತಿರುವು

    ನವದೆಹಲಿ: ನಗರದ ಬುರಾರಿ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಗೆ ಸ್ಫೋಟಕ ತಿರುವು ಸಿಕ್ಕಿದೆ.

    ಹತ್ಯೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದ್ದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಸದ್ಯ ಮೃತರ ಮನೆಯಲ್ಲಿ ಕೆಲವು ಪತ್ರಗಳು ದೊರೆತಿದ್ದು, ಇದು ಹತ್ಯೆಯಲ್ಲ, ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಏನಿದೆ ಪತ್ರದಲ್ಲಿ:
    `ಮನುಷ್ಯನ ದೇಹ ಶಾಶ್ವತವಲ್ಲ. ಆತ್ಮವಷ್ಟೇ ಶಾಶ್ವತ. ಕಣ್ಣು ಮತ್ತು ಬಾಯಿಯನ್ನು ಮುಚ್ಚುವ ಮೂಲಕ ಭಯದಿಂದ ಹೊರ ಬರಬಹುದು’ ಅಂತಾ ಬರೆಯಲಾಗಿದೆ. ಜೊತೆಗೆ ಕೈ-ಕಾಲನ್ನು ಕಟ್ಟಿ ಹಾಕುವುದು ಹೇಗೆ ಎಂದು ಆ ಪತ್ರಗಳಲ್ಲಿ ವಿವರಿಸಲಾಗಿದೆ.

    ಕುಟುಂಬ ಹಿರಿಯರಾದ ನಾರಾಯಣಿ ಭಾಟಿಯಾ (77), ಮಕ್ಕಳಾದ ಭಾವನೇಶ್ (50) ಮತ್ತು ಲಲಿತ್ (45), ಸವಿತಾ ಭಾವನೇಶ್ (48) ಮತ್ತು ತೀನಾ ಲಲಿತ್ (42). ಭಾವನೇಶ್ ಅವರ ಮಕ್ಕಳಾದ ನೀತು (25), ಮೊನು (23) ಮತ್ತು ದೃವ (15) ಹಾಗು ಲಲಿತ್ ಅವರ ಮಗ ಶಿವಂ (15). ನಾರಾಯಣಿ ಅವರ ಹಿರಿಯ ಮಗಳು ಪ್ರತಿಭಾ (57) ಮೊಮ್ಮಗಳು ಪ್ರಿಯಾಂಕಾ (33) ಆತ್ಮಹತ್ಯೆ ಮಾಡಿಕೊಂಡವರು.