ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ (SN Subbareddy) ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಿದ್ದು 101 ಜೋಡಿಗಳು ಸಾಮೂಹಿಕ ವಿವಾಹ (Mass Marriage) ಕಾರ್ಯಕ್ರಮದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೇರವೇರಿದ್ದು, ಮದುವೆಯಾದ ನೂತನ ವಧು-ವರರಿಗೆ ಸ್ಥಳದಲ್ಲೇ ಒಂದೊಂದು ಸೀಮೆ ಹಸು ವಿತರಣೆ ಮಾಡಲಾಯಿತು. ಇದನ್ನೂ ಓದಿ: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಶಾಸಕರ ಭರ್ಜರಿ ಆಫರ್ – ಮದ್ವೆಯಾಗಲು ಅಪ್ರಾಪ್ತರಿಂದಲೂ ಅರ್ಜಿ!

ಇನ್ನೂ ನೂತನ ವಧುವರರಿಗೆ ಸರ್ಕಾರದಿಂದ 50,000 ಪ್ರೋತ್ಸಾಹ ಧನ ಕೊಡಿಸಲಿದ್ದಾರೆ. ಜೊತೆಗೆ ಸಣ್ಣ ರೈತರಾದವರಿಗೆ ಉಚಿತ ಕೊಳವೆಬಾವಿ, ಡಿಎಲ್ ಇದ್ದ ವರನಿಗೆ 4 ಚಕ್ರದ ವಾಹನ ಕೊಡಿಸುವುದಾಗಿ ಸುಬ್ಬಾರೆಡ್ಡಿ ಭರವಸೆ ನೀಡಿದ್ದಾರೆ.

ಇನ್ನೂ ಮದುವೆಗೆ ಯಾವುದೂ ಕೊರತೆ ಆಗದಂತೆ ವಧು-ವರ ಸೇರಿ ಅವರ ತಂದೆ ತಾಯಿಗೂ ಹೊಸ ಬಟ್ಟೆಗಳನ್ನ ಕೊಡಿ, ತಲಾ ಒಂದೊಂದು ಜೋಡಿಗೂ ಒಬ್ಬೊಬ್ಬರು ಅರ್ಚಕರಂತೆ ಕಾಲುಂಗುರ, ಚಿನ್ನದ ತಾಳಿ ಕೊಟ್ಟು ಶಾಸ್ತ್ರೋಕ್ತವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನೂ ಓದಿ: ನನಗೆ ಮಿನಿಸ್ಟರ್ ಪೋಸ್ಟ್ ಬೇಕೇ ಬೇಕು – ಶಾಸಕ ಸುಬ್ಬಾರೆಡ್ಡಿ ಡಿಮ್ಯಾಂಡ್!
ಕಾರ್ಯಕ್ರಮದಲ್ಲಿ 20,000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು ಎಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಸೀಮೆ ಹಸು ಸಾಕಾಣಿಕೆ ಮೂಲಕ ನವ ದಂಪತಿ ಸುಃಖ ಜೀವನ ನಡೆಸಲಿ, ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲಿ ಅಂತ ಶಾಸಕ ಸುಬ್ಬಾರೆಡ್ಡಿ ಶುಭ ಹಾರೈಸಿದರು. ಇದನ್ನೂ ಓದಿ: ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು























