Tag: mass leader

  • ಮಾಸ್ ಲೀಡರ್ ಬಿಎಸ್‍ವೈ ನಾಯಕತ್ವ ಇಲ್ಲದ ರಾಜ್ಯ ಬಿಜೆಪಿಗೆ ಮೋದಿಯೇ ಮಾಸ್ ಬಾಸ್

    ಮಾಸ್ ಲೀಡರ್ ಬಿಎಸ್‍ವೈ ನಾಯಕತ್ವ ಇಲ್ಲದ ರಾಜ್ಯ ಬಿಜೆಪಿಗೆ ಮೋದಿಯೇ ಮಾಸ್ ಬಾಸ್

    ಬೆಂಗಳೂರು: ಫೆಬ್ರವರಿಯ 28 ದಿನದಲ್ಲಿ ನಾಲ್ಕೈದು ದಿನ ಟೈಂ ಕೊಡ್ತೀನಿ, ಪ್ಲಾನ್ ಮಾಡಿ. ಕರ್ನಾಟಕ ಗೆಲ್ಲುವ ಮೋದಿ ಕೊಟ್ಟ ಟೈಂಗೆ ಬಿಜೆಪಿ ಹೈಕಮಾಂಡ್ (BJP HighCommand) ಮೆಗಾ ಪ್ಲಾನ್ ಮಾಡ್ತಿದೆ ಎನ್ನಲಾಗಿದೆ.

    ಸ್ಥಳೀಯ ಮಾಸ್ ಲೀಡರ್ ಇಲ್ಲದ ಕರ್ನಾಟಕ ಬಿಜೆಪಿ (BJP) ಗೆ ಈಗ ಪ್ರಧಾನಿ ಮೋದಿ (Narendra Modi) ಆಸರೆ ಆಗಿದ್ದಾರೆ. ಕರ್ನಾಟಕದಲ್ಲಿ ಮೋದಿಯೇ ಫೇವರೆಟ್ ಏಕೆ ಎಂಬುದು ಹೈಕಮಾಂಡ್ ಗೆ ತಲುಪಿರುವ ವರದಿಯಲ್ಲಿ ಗೊತ್ತಾಗಿದೆ ಅಂತೆ. ಇದನ್ನೂ ಓದಿ: ಗುಜರಾತ್ ಸಕ್ಸಸ್: ಹುಬ್ಬಳ್ಳಿಯಲ್ಲಿ ಮೋದಿ ಶೋ ಸ್ಯಾಂಪಲ್ ಅಷ್ಟೇ – ಕರ್ನಾಟಕದಲ್ಲಿ ಮುಂದಿದೆ ಮೆಗಾ ಹವಾ

    ಕರ್ನಾಟಕ ಎಲೆಕ್ಷನ್‍ಗೂ ಮುನ್ನ ಬಿಜೆಪಿ ಹೈಕಮಾಂಡ್‍ನಿಂದ ಭರ್ಜರಿ ತಾಲೀಮು ನಡೆಸುತ್ತಿದೆ. ಫೆಬ್ರವರಿಯಲ್ಲಿ ಮೋದಿಯಿಂದ ನಾಲ್ಕೈದು ಟೂರ್ ಫಿಕ್ಸ್ ಮಾಡಲು ಪ್ಲಾನ್ ನಡೆದಿದೆ. ಫೆಬ್ರವರಿ ತಿಂಗಳಲ್ಲಿ ಕರ್ನಾಟಕಕ್ಕೆ ಹೆಚ್ಚು ಸಮಯ ಕೊಡುವುದಾಗಿ ಪ್ರಧಾನಿ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ಸಮಯಕ್ಕೆ ತಕ್ಕಂತೆ ಟೂರ್ ಫಿಕ್ಸ್ ಮಾಡಲು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಬ್ಲೂಪ್ರಿಂಟ್ ರೆಡಿ ಮಾಡ್ತಿದೆ. ಇದನ್ನೂ ಓದಿ: ತಾಯಿ ಮೇಲೆ ಆಣೆ ಮಾಡಿ ಸಿಎಂ ಕೊಟ್ಟ ಮಾತು ತಪ್ಪಿದ್ರು – ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ

    ಹಳೇ ಮೈಸೂರು, ಮಧ್ಯ ಕರ್ನಾಟಕ, ಬೆಂಗಳೂರು ವ್ಯಾಪ್ತಿಗಳಲ್ಲಿ ಫೆಬ್ರವರಿ ಮೋದಿ ಕಹಳೆ ಸಾಧ್ಯತೆ ಇದೆ. ಯಡಿಯೂರಪ್ಪ (BS Yediyurappa) ನಾಯಕತ್ವದಿಂದ ನಿರ್ಗಮನದ ನಂತರ ಬಿಜೆಪಿಗೆ ಮಾಸ್ ಲೀಡರ್ ಗಳ ಕೊರತೆ ಎದುರಾಗಿದೆ. ಹಾಗಾಗಿ ಯಡಿಯೂರಪ್ಪ ಕೊರತೆ ತುಂಬಲು ಮೋದಿ ಮ್ಯಾಜಿಕ್ ಅವಶ್ಯಕತೆ ಇದೆ ಎಂಬ ಗುಪ್ತ್ ವರದಿ ಹೈಕಮಾಂಡ್‍ಗೆ ತಲುಪಿದೆ. ಗುಪ್ತ್ ವರದಿ ಬೆನ್ನಲ್ಲೇ ಮೋದಿ ಮೋಡಿಗೆ ತಂತ್ರ ಹೂಡುತ್ತಿರುವ ಹೈಕಮಾಂಡ್ ಸಾಕಷ್ಟು ರಾಲಿಗಳಿಗೆ ಪ್ಲಾನ್ ಮಾಡ್ತಿದೆ. ಹಾಗಾಗಿ ಮುಂದಿನ ಮೂರು ತಿಂಗಳು ಕರ್ನಾಟಕದಲ್ಲಿ ನಮೋ ಮೇನಿಯಾ ಮೋದಿ ಅಬ್ಬರ ಫಿಕ್ಸ್ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಸ್ ಲೀಡರ್ ಪಬ್ಲಿಕ್ ಟಿವಿಯಲ್ಲಿ ಸೂಪರ್ ಲೀಡರ್ ಆಗಿ ಮಿಂಚಿಂಗ್-ಸಿನಿಮಾ ಬಗ್ಗೆ ಶಿವಣ್ಣ ಮನದಾಳದ ಮಾತು

    ಮಾಸ್ ಲೀಡರ್ ಪಬ್ಲಿಕ್ ಟಿವಿಯಲ್ಲಿ ಸೂಪರ್ ಲೀಡರ್ ಆಗಿ ಮಿಂಚಿಂಗ್-ಸಿನಿಮಾ ಬಗ್ಗೆ ಶಿವಣ್ಣ ಮನದಾಳದ ಮಾತು

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ‘ಮಾಸ್ ಲೀಡರ್’ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡು ಮುನ್ನುಗುತ್ತಿದೆ.

    ಒಬ್ಬ ಯೋಧನಾಗಿ ಪಾತ್ರ ಮಾಡಿದಕ್ಕೆ ತುಂಬಾ ಖುಷಿಯಾಗಿದ್ದೇನೆ. ನನಗೆ ಚಿಕ್ಕಂದಿನಿಂದಲೂ ದೇಶ, ಯೋಧ ಅಂದರೆ ನನಗೆ ತುಂಬಾ ಇಷ್ಟ. ಸಿನಿಮಾದ ಎರಡನೇ ಭಾಗ ತುಂಬ ಇಷ್ಟವಾಗುತ್ತದೆ. ಭಾವನಾತ್ಮಕವಾಗಿ ಸಿನಿಮಾ ನೋಡುಗರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಕೆಲವರು ದೇಶಭಕ್ತಿಯ ಬಗ್ಗೆ ಮಾತನಾಡಿ ನಮ್ಮ ಮಾತೃ ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಚೆಕಪ್ ನಡೆಯುತ್ತೆ, ಪೊಲೀಸ್ ಭದ್ರತೆಯೂ ಇರುತ್ತದೆ. ಆದರೂ ಮರುದಿನ ಬಾಂಬ್ ಬ್ಲಾಸ್ಟ್ ಆಗುತ್ತದೆ ಇದು ನಮ್ಮೊಳಗಿನ ವ್ಯವಸ್ಥೆಯ ತಂತ್ರಜ್ಞಾನದ ಕೊರತೆಯನ್ನು ತೋರಿಸುತ್ತದೆ ಎಂದು ಶಿವಣ್ಣ ಹೇಳಿದರು.

    ನಾವು ಜಮ್ಮು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವಾಗ ಸಾಕಷ್ಟು ಗಲಾಟೆಗಳು ನಡೆದವು. ನೀವು ಇಂಡಿಯಾದ ಪರವಾಗಿ ಸಿನಿಮಾ ಮಾಡುತ್ತಿದ್ದೀರಿ ಎಂಬ ಕಾರಣವೊಡ್ಡಿ ಗಲಾಟೆ ಮಾಡಿದರು. ಇದೇ ವೇಳೆ ಮತ್ತೆ ಕೆಲವರು ಬಂದು ನಮ್ಮ ಪರವಾಗಿ ಮಾತನಾಡಿ ನಮ್ಮನ್ನು ರಕ್ಷಿಸಿದರು ಎಂದು ಚಿತ್ರೀಕರಣದ ದಿನಗಳನ್ನು ಶಿವಣ್ಣ ನೆನಪಿಸಿಕೊಂಡರು.

    ಥಿಯೇಟರ್‍ನಲ್ಲಿ ನಾನು ನನ್ನ ಸಿನಿಮಾ ನೋಡುವಾಗ ಬೇರೊಬ್ಬರ ಕಮೆಂಟ್‍ಗಳನ್ನು ಕೇಳುತ್ತಿರುತ್ತೇನೆ. ಅಲ್ಲಿ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಭಿಮಾನಿಗಳು ಮಾತ್ರ ಸಿನಿಮಾ ಬಗ್ಗೆ ಒಳ್ಳೆಯ ಮೆಚ್ಚುಗೆಯನ್ನು ನೀಡಿದ್ದಾರೆ. ಸಿನಿಮಾಗೆ ನಾಲ್ಕು ದಿನಗಳಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ ಅಂದ್ರು.

    ಕಥೆ ಹೀಗಿರಬೇಕು: ಈ ತರಹದ ಸಿನಿಮಾಗಳನ್ನು ಈಗಾಗಲೇ ಮಾಡಿದ್ದೇವೆ. ಸಿನಿಮಾ ಕಥೆಯನ್ನು ಜನರಿಗೆ ವಿಭಿನ್ನವಾಗಿ ಹೇಳಬೇಕು, ಬಾಂಗ್ಲಾ ಜನರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡುವುದನ್ನು ಪ್ರೇಕ್ಷಕರಿಗೆ ಉಣಬಡಿಸಬೇಕು ಎಂಬುದು ನನ್ನ ಆಶಯವಾಗಿತ್ತು. ಎಲ್ಲಾ ಸೀಕ್ವೆನ್ಸ್ ಗಳನ್ನು ಮಾಡುವಾಗ ಒಂದು ಟೇಸ್ಟ್ ಇರಬೇಕು. ಯೋಗಿ ನೆಗಟಿವ್ ರೋಲ್‍ಗೆ ಹೇಳಿ ಮಾಡಿಸಿದ ವ್ಯಕ್ತಿ. ತರುಣ್ ಒಬ್ಬ ಒಳ್ಳೆಯ ವ್ಯಕ್ತಿ, ಯಾವಾಗಲೂ ನಮ್ಮ ಕುಟುಂಬವನ್ನ ಪ್ರೀತಿಸುವ ವ್ಯಕ್ತಿ. ಸಿನಿಮಾದ ಬಗ್ಗೆ ಬೇರೆಯಾದ ಅಭಿರುಚಿಯನ್ನು ಹೊಂದಿದ್ದಾರೆ. ಮುಂದಿನ ವರ್ಷವೂ ತರುಣ್ ಜೊತೆ ಸಿನಿಮಾ ಮಾಡುವ ಯೋಜನೆ ಇದೆ ಎಂದು ಶಿವಣ್ಣ ಹೇಳಿದರು.

    ಇದನ್ನೂ ಓದಿ: ಮಾಸ್ ಲೀಡರ್ ಸಿನಿಮಾ ವೀಕ್ಷಣೆ ಮಾಡಿದ ಶಿವಣ್ಣ- ಉಪ್ಪಿ ರಾಜಕೀಯ ಎಂಟ್ರಿಗೆ ಹೀಗಂದ್ರು

    ಒಬ್ಬ ಕಟುಕನನ್ನು ಒಳ್ಳೆಯವನನ್ನಾಗಿ ಮಾಡಬಹುದು ಎಂಬವುದನ್ನು ಸಿನಿಮಾ ತೋರಿಸುತ್ತದೆ. ಒಂದು ನೆಗೆಟಿವ್ ಪಾತ್ರವನ್ನು ನಿರ್ದೇಶಕರು ಪಾಸಿಟಿವ್ ಆಗಿ ಬದಲಾಯಿಸಿದ್ದಾರೆ. ಸಿನಿಮಾ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ ಎಂದು ನಟ ಲೂಸ್ ಮಾದ ಯೋಗಿ ತಮ್ಮ ಪಾತ್ರದ ಬಗ್ಗೆ ಪರಿಚಯ ಮಾಡಿಕೊಟ್ಟರು.

    ಸಿನಿಮಾ ಮಾಡುವಾಗ ತುಂಬಾ ಖುಷಿಯಾಗುತ್ತಿದೆ. ಆದರೂ ಮನದಲ್ಲಿ ಒಂದು ಭಯವಿತ್ತು, ಜನ ಹೇಗೆ ಸಿನಿಮಾ ಸ್ವೀಕರಿಸ್ತಾರೆ ಎಂಬುದು ಕಾಡುತ್ತಿತ್ತು. ಶಿವಣ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂದು ಜನರು ಸಿನಿಮಾವನ್ನು ಮೆಚ್ಚುಕೊಂಡಿದ್ದಾರೆ ಎಂದು ನಿರ್ಮಾಪಕ ತರೂಣ್ ಶಿವಪ್ಪ ಹೇಳಿದರು.

    ಇದನ್ನೂ ಓದಿ: ಇಂದು ಮಾಸ್ ಲೀಡರ್ ರಿಲೀಸ್ – ಸಿನಿಮಾ ನೋಡಿ ಭೇಷ್ ಎಂದ ಕಿಚ್ಚ ಸುದೀಪ್

    ಇಡೀ ಭಾರತೀಯರಿಗೆ ಸ್ವತಂತ್ರ ದಿನಕ್ಕೆ ಇದೊಂದು ಸಿನಿಮಾ ಗಿಫ್ಟ್ ಮುಖಾಂತರವಾಗಿ ನೀಡಿದ್ದೇವೆ. ಈ ತರಹದ ಸಿನಿಮಾಗಳನ್ನು ಜನ ತಾವು ನೋಡಿ, ಚಿತ್ರದ ಕಥೆಯಿಂದ ಸಿಗುವ ಸಂದೇಶವನ್ನು ಪಡೆಯಬೇಕು ಎಂದು ಥಿಯೇಟರ್ ಗೆ ಬರುತ್ತಿದ್ದಾರೆ. ಸಿನಿಮಾ ನೋಡಲು ಬರುತ್ತಿರುವವರಿಗೆ ಮತ್ತು ನೋಡಿವರಿಗೂ ಧನ್ಯವಾದಗಳು ಎಂದು ನಿರ್ದೇಶಕ ನರಸಿಂಹ ತಿಳಿಸಿದರು.

    https://www.youtube.com/watch?v=v5vFAw_tTok

  • ಇಂದು ಮಾಸ್ ಲೀಡರ್ ರಿಲೀಸ್ – ಸಿನಿಮಾ ನೋಡಿ ಭೇಷ್ ಎಂದ ಕಿಚ್ಚ ಸುದೀಪ್

    ಇಂದು ಮಾಸ್ ಲೀಡರ್ ರಿಲೀಸ್ – ಸಿನಿಮಾ ನೋಡಿ ಭೇಷ್ ಎಂದ ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ `ಮಾಸ್ ಲೀಡರ್’ ಚಿತ್ರ ಇಂದು ತೆರೆಕಾಣಲಿದೆ. ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಅಭಿನಯದ `ಮಾಸ್ ಲೀಡರ್’ ಅನೇಕ ಕಾರಣಗಳಿಂದ ಬಿಡುಗಡೆಗೂ ಮುನ್ನ ಭಾರೀ ಸೌಂಡ್ ಮಾಡಿತ್ತು.

    ಸ್ಯಾಂಡಲ್ ವುಡ್‍ಗೇ ಲೀಡರ್ ಆಗಿರುವ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ ಇಂದು ರಾಜ್ಯಾದ್ಯಂತ 300 ಚಿತ್ರಮಂದಿಗಳಲ್ಲಿ `ಮಾಸ್ ಲೀಡರ್’ ಭರ್ಜರಿಯಾಗಿ ತೆರೆಕಾಣಲಿದೆ.

    ಬಹುತಾರಾಗಣದ `ಮಾಸ್ ಲೀಡರ್’ ಚಿತ್ರದಲ್ಲಿ ಶಿವರಾಜ್‍ಕುಮಾರ್ ಫಸ್ಟ್ ಟೈಂ ಮಿಲಿಟರಿ ಕ್ಯಾಪ್ಟನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವರಾಜ್‍ಕುಮಾರ್ ಜೋಡಿಯಾಗಿ ಪ್ರಣಿತಾ ಅಭಿನಯಿಸಿದ್ರೆ ಇನ್ನುಳಿದ ವಿಶೇಷ ಪಾತ್ರಗಳಲ್ಲಿ ಲೂಸ್ ಮಾದ ಯೋಗೀಶ್, ಗುರುಜಗ್ಗೇಶ್, ವಿಜಯ್ ರಾಘವೇಂದ್ರ, ಶರ್ಮಿಳಾ ಮಾಂಡ್ರೆ ಮುಂತಾದವರು ಅಭಿನಯಿಸಿದ್ದಾರೆ.

    ಬಿಗ್ ಬಜೆಟ್‍ನಲ್ಲಿ ತಯಾರಾದ `ಮಾಸ್ ಲೀಡರ್’ ಚಿತ್ರವನ್ನ ತರುಣ್ ಶಿವಪ್ಪ ನಿರ್ಮಿಸಿದ್ದಾರೆ. ಚಿತ್ರವನ್ನ ನರಸಿಂಹ ನಿರ್ದೇಶಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗ್ಲೇ ಹಿಟ್ ಆಗಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇನ್ನು ಈಗಾಗ್ಲೇ ಈ ಚಿತ್ರವನ್ನ ನಟ ಸುದೀಪ್ ವೀಕ್ಷಿಸಿದ್ದು ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ತಂಡಕ್ಕೆ ಆನೆಬಲ ತಂದುಕೊಟ್ಟಿದೆ.

    ಚಿತ್ರವೊಂದು ದೇಶಭಕ್ತಿ ಎಳೆಯಲ್ಲಿ ತಯಾರಾದ ಒಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು ಎಲ್ಲಾ ರೀತಿಯ ಪ್ರೇಕ್ಷಕರನ್ನ ಸೆಳೆಯುವುದು ಫಿಕ್ಸ್ ಅನ್ನುತ್ತಿದೆ ಚಿತ್ರತಂಡ. ಹೀಗಾಗಿ ಸ್ವಾತಂತ್ರೋತ್ಸವ ದಿನಾಚರಣೆಯ ವಾರದಲ್ಲಿಯೇ ಚಿತ್ರ ಬಿಡುಗಡೆಯಾಗುತ್ತಿದೆ. ಅದೇನೇ ಇದ್ರೂ ಕೋಟ್ಯಾನುಕೋಟಿ ಕನ್ನಡಿಗರ ಕುತೂಹಲಕ್ಕೆ ಇಂದು ಉತ್ತರ ಕೊಡಲಿದೆ `ಮಾಸ್ ಲೀಡರ್’.

    https://www.youtube.com/watch?v=v5vFAw_tTok

     

  • ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು

    ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು

    ಬೆಂಗಳೂರು: ಸುಮಾರು 6 ತಿಂಗಳಿನಿಂದ ಗೊಂದಲಗಳಿಗೆ ಕಾರಣವಾಗಿದ್ದ ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಲೀಡರ್ ಟೈಟಲ್ ಎಎಮ್‍ಆರ್ ರಮೇಶ್ ಅವರಿಗೆ ಸೇರಿದ್ದು ಎಂದು ಫಿಲ್ಮ್ ಚೇಂಬರ್ ಅಧಿಕೃತವಾಗಿ ಲೆಟರ್ ನೀಡಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ತರುಣ್ ಶಿವಪ್ಪ ಈ ಟೈಟಲ್ ಬಳಸಬಾರದು ಎಂದು ಫಿಲ್ಮ್ ಚೇಂಬರ್ ಲೆಟರ್‍ನಲ್ಲಿ ತಿಳಿಸಿದೆ.

    ಸೈನೆಡ್ ನಿರ್ದೇಶಕ ಎಂಆರ್ ರಮೇಶ್ ಲೀಡರ್ ಟೈಟಲ್‍ನ್ನು ಅವರ ಬ್ಯಾನರ್‍ನಲ್ಲಿ ಸುಮಾರು 7 ವರ್ಷದ ಹಿಂದೆ ನೊಂದಾಯಿಸಿ ವರ್ಷ ವರ್ಷ ರಿನಿವಲ್ ಕೂಡ ಮಾಡಿಸುತ್ತಿದ್ದರು, ಆದ್ರೆ ನಿರ್ಮಾಪಕ ತರುಣ್ ಶಿವಪ್ಪ ಇವರನ್ನು ಸಂಪರ್ಕಿಸದೆ ಲೀಡರ್ ಹೆಸರಿನ ಸಿನಿಮಾ ಅನೌನ್ಸ್ ಮಾಡಿ ಶೂಟಿಂಗ್ ಶುರುಮಾಡಿದ್ದಲ್ಲದೆ ಪ್ರಚಾರ ಮಾಡಿದ್ದರು. ಈ ವಿಚಾರವಾಗಿ ರಮೇಶ್ ಅವರು ಫಿಲ್ಮ್ ಚೇಂಬರ್ ಮೆಟ್ಟಿಲನ್ನು ಏರಿದ್ದರು.

    ಈ ಟೈಟಲ್‍ನಲ್ಲಿ ಸಿನಿಮಾ ಮಾಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದು ಅತೀ ಶೀಘ್ರದಲ್ಲೇ ಲೀಡರ್ ಹೆಸರಿನ ನೈಜ ಘಟನೆ ಆಧಾರಿತ ಸಿನಿಮಾ ಶುರುವಾಗಲಿದೆ ಎಂದು ನಿರ್ದೇಶಕ ರಮೇಶ್ ಹೇಳಿದ್ದಾರೆ.