Tag: Mass Copy

  • ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

    ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

    ದಾವಣಗೆರೆ: ನರ್ಸಿಂಗ್ ಪರೀಕ್ಷೆಯಲ್ಲಿ (Exam) ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು (Mass Copy) ಮಾಡುತ್ತಿದ್ದ ವೇಳೆ ಏಕಾಏಕಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಕಾಲೇಜಿಗೆ ದಾಳಿ ನಡೆಸಿದ ಘಟನೆ ದಾವಣಗೆರೆಯ (Davanagere) ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ (Sanjeevini Nursing College) ನಡೆದಿದೆ.

    ಸೋಮವಾರ ನರ್ಸಿಂಗ್‌ನ ಪರೀಕ್ಷೆ ಇದ್ದ ಹಿನ್ನೆಲೆ ಕೊಠಡಿಯ ಒಳಗೆ ವಿದ್ಯಾರ್ಥಿಗಳು ಅನಟಾಮಿ ವಿಷಯದ ಪರೀಕ್ಷೆ ಬರೆಯುತ್ತಿದ್ದರು. ಅಲ್ಲಿದ್ದ ಸಿಬ್ಬಂದಿಯೊಬ್ಬ ಮೊಬೈಲ್‌ನಲ್ಲಿ ಉತ್ತರಗಳನ್ನು ತರಿಸಿಕೊಂಡು, ವಿದ್ಯಾರ್ಥಿಗಳಿಗೆ ಪರೀಕ್ಷೆ ನಕಲು ಮಾಡಲು ಹೇಳಿ ಕೊಡುತ್ತಿದ್ದ. ಅಲ್ಲದೆ ನಕಲು ಮಾಡಲು ಕಾಲೇಜು ಸಿಬ್ಬಂದಿ ಸಾಥ್ ನೀಡಿದ್ದರು ಎಂಬ ಗಂಭೀರ ಆರೋಪ ಬಂದಿದೆ.

    ವರದಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಲು ಪ್ರತಿಯೊಬ್ಬರಿಂದ 10 ಸಾವಿರ ರೂ. ಹಣ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಿ ಅವರಿಗೆ ಮಾತ್ರ ಉತ್ತರ ಹೇಳಿಕೊಡುತ್ತಿದ್ದರು. ಇದನ್ನೂ ಓದಿ: ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ವಿದ್ಯಾರ್ಥಿಗಳು ಮೊಬೈಲಿನಲ್ಲಿ ಪರೀಕ್ಷೆ ನಕಲು ಮಾಡಿ ಬರೆಯುತ್ತಿದ್ದ ವೇಳೆಯೇ ಸಿಕ್ಕಿಹಾಕಿಕೊಂಡಿದ್ದು, ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ನಮ್ಮಲ್ಲಿ ನಕಲು ನಡೆದಿಲ್ಲ ಎಂದು ವಾದ ಮಾಡಿದ್ದಾರೆ. ಕಾಲೇಜು ಸಿಬ್ಬಂದಿಯೇ ನಕಲು ಮಾಡಲು ಅವಕಾಶ ನೀಡಿದರೆ ಸಾಮಾನ್ಯ ವಿದ್ಯಾರ್ಥಿಗಳ ಗತಿ ಏನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದನ್ನೂ ಓದಿ: ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು, ಅದನ್ನು ಸಹಿಸಲಸಾಧ್ಯ: ಕಾಗೇರಿ

    Live Tv
    [brid partner=56869869 player=32851 video=960834 autoplay=true]

  • ಸಾಮೂಹಿಕ ನಕಲಿನಿಂದಾಗಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ – ಪತ್ರ ವೈರಲ್

    ಸಾಮೂಹಿಕ ನಕಲಿನಿಂದಾಗಿ SSLC ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ – ಪತ್ರ ವೈರಲ್

    ಹಾಸನ: ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಮೂಹಿಕ ನಕಲು ಕಾರಣ ಎಂದು ನೊಂದ ಶಿಕ್ಷಕ ಶಿವಕುಮಾರ್ ಹೆಸರಲ್ಲಿ ವ್ಯಕ್ತಿಯೊಬ್ಬರು ಸರ್ಕಾರಕ್ಕೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

    ಚನ್ನರಾಯಪಟ್ಟಣ ತಾಲೂಕಿನ ಶಾಲೆಯೊಂದರ ಶಿಕ್ಷಕ ಶಿವಕುಮಾರ್ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಕಳೆದ ವರ್ಷ ಹಾಸನ ಜಿಲ್ಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಮೂಹಿಕ ನಕಲು ಕಾರಣ. ಈ ಹಿಂದೆ ಹಾಸನ ಜಿಲ್ಲೆಯ ಉಪನಿರ್ದೇಶಕರಾಗಿದ್ದ ಮಂಜುನಾಥ್ ಎಂಬವರು ವಿದ್ಯಾರ್ಥಿಗಳಿಗೆ ಸಾಮೂಹಿಕ ನಕಲು ನಡೆಸಲು ಅವಕಾಶ ನೀಡುವಂತೆ ಆದೇಶ ನೀಡಿದರು. ಹೀಗಾಗಿ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು ಸಾಮೂಹಿಕ ನಕಲಿಗೆ ಅವಕಾಶ ನೀಡಿದರು. ಇದರಿಂದ ಹಾಸನ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ ಎಂದು ಬರೆದಿದ್ದಾರೆ.

    ಈ ಬೆಳವಣಿಗೆಯಿಂದ ನಿಷ್ಠಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಲ್ಲ ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿ ಅಳವಡಿಸುವಂತೆ ಶಿವಕುಮಾರ್ ತಮ್ಮ ಪತ್ರದಲ್ಲಿ ಮನವಿ ಮಾಡಿದರು. ಶಿವಕುಮಾರ್ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಪತ್ರ ಮುಖೇನ ಸೂಚಿಸಿದೆ.

    ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಹಾಸನ ಡಿಡಿಪಿಐ ಪ್ರಕಾಶ್, ಇದೊಂದು ಸುಳ್ಳು ಆರೋಪ. ನೊಂದ ಶಿಕ್ಷಕ ಶಿವಕುಮಾರ್ ಅವರ ಹೆಸರಿನಲ್ಲಿ ಪತ್ರ ಬರೆದಿರುವವರು ತಮ್ಮ ಪೂರ್ಣ ವಿಳಾಸ ಹಾಕಿಲ್ಲ. ಹೀಗಾಗಿ ಪತ್ರ ಬರೆದಿರುವ ಶಿಕ್ಷಕ ಯಾರೂ ಎಂಬುದು ಕೂಡ ಗೊತ್ತಿಲ್ಲ. ಅವರ ಆರೋಪದಲ್ಲಿ ಸತ್ಯ ಇದ್ದಿದ್ದರೆ, ಅವರು ತಮ್ಮ ಪೂರ್ಣ ವಿಳಾಸ ಮತ್ತು ದಾಖಲೆಯೊಂದಿಗೆ ದೂರು ನೀಡಬೇಕಿತ್ತು ಎಂದು ಹೇಳಿದ್ದಾರೆ.

    ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುವ ಎಲ್ಲ ಕೇಂದ್ರದಲ್ಲಿ ಸಿಸಿಟಿವಿಯನ್ನು ಕಡ್ಡಾಯ ಮಾಡಲಾಗಿದೆ. ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಇದನ್ನೂ ಓದಿ: SSLC ಪರೀಕ್ಷೆಗೆ ಸಿದ್ಧತೆ ಪೂರ್ಣ – ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಫಿಕ್ಸ್

  • ಒಂದೇ ಉತ್ತರ, ಒಂದೇ ರೀತಿ ತಪ್ಪು – 959 ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು

    ಒಂದೇ ಉತ್ತರ, ಒಂದೇ ರೀತಿ ತಪ್ಪು – 959 ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು

    ಗಾಂಧಿನಗರ: ಪರೀಕ್ಷೆ ಬರೆದ 959 ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡಿ ಒಂದೇ ರೀತಿ ಉತ್ತರ ಬರೆದು, ಒಂದೇ ರೀತಿ ತಪ್ಪುಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಗುಜರಾತ್‍ನ 12ನೇ ತರಗತಿಯ ಪರೀಕ್ಷೆ ವೇಳೆ 959 ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿದ್ದಾರೆ. ಇದು ರಾಜ್ಯ ಮಂಡಳಿಯ ಇತಿಹಾಸದಲ್ಲೇ ಅತಿ ದೊಡ್ಡ ಸಾಮೂಹಿಕ ನಕಲು ಎಂದು ವರದಿಯಾಗಿದೆ.

    ಸಾಮೂಹಿಕ ನಕಲು ಆಗಬಾರದು ಎಂದು ಕಠಿಣ ಕ್ರಮಕೈಗೊಂಡರೂ ಸಹ 959 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ನಕಲು ಮಾಡಿ ಒಂದೇ ರೀತಿ ಉತ್ತರ ಬರೆದಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಒಂದೇ ರೀತಿಯ ತಪ್ಪು ಉತ್ತರಗಳನ್ನು ಬರೆದಿದ್ದಾರೆ.

    ಯಾಕೆ ಹೀಗಾಯ್ತು ಎಂದು ಬೋರ್ಡ್ ಅಧಿಕಾರಿಗಳು ವರದಿಯಾದ ಉತ್ತರ ಪತ್ರಿಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ತನಿಖೆಗೆ ಇಳಿದಾಗ ಜುನಾಗಢ್ ಹಾಗೂ ಗಿರ್-ಸೋಮನಾಥ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ನಡೆದಿರುವ ವಿಚಾರ ಪತ್ತೆಯಾಗಿದೆ.

    ಸಾಮೂಹಿಕ ನಕಲನ್ನು ಪರಿಶೀಲಿಸಲು ಅಧಿಕಾರಿಗಳನ್ನು ವಿದ್ಯಾರ್ಥಿಗಳನ್ನು ಕರೆಸಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಶಿಕ್ಷಕರೇ ಉತ್ತರವನ್ನು ಹೇಳಿಕೊಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ.

    ಈ ವಿದ್ಯಾರ್ಥಿಗಳ ಫಲಿತಾಂಶ 2020ರವರೆಗೂ ತಡೆ ಹಿಡಿಯಲಾಗಿದೆ. ಅಲ್ಲದೆ ಅವರು ನಕಲು ಮಾಡಿದ ವಿಷಯಗಳಲ್ಲಿ ಫೇಲ್ ಮಾಡಲಾಗಿದೆ.

    ಅಮರಾಪುರ(ಗಿರ್ ಸೋಮನಾಥ್), ವಿಸನ್ವೆಲ್ (ಜುನಾಗಢ್) ಹಾಗೂ ಪ್ರಾಚಿ-ಪಿಪ್ಲಾ (ಗಿರ್ ಸೋಮನಾಥ್)ನಲ್ಲಿ ಈ ಕೇಂದ್ರಗಳಲ್ಲಿ 13ನೇ ತರಗತಿಯ ಪರೀಕ್ಷೆಗಳನ್ನು ಕ್ಯಾನ್ಸಲ್ ಮಾಡಲು ಬೋರ್ಡ್ ತಯಾರಿ ನಡೆಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    ಕಲಬುರಗಿ: ಇಂದು ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಪೋಷಕರು ಹಾಗೂ ಸ್ನೇಹಿತರು ಸಹಕರಿಸುತ್ತಿದ್ದ ದೃಶ್ಯ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಂಡು ಬಂದಿದೆ.

    ಮಣ್ಣೂರು ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಮಣ್ಣೂರು ಪರೀಕ್ಷಾ ಕೇಂದ್ರದಲ್ಲಿ 298ರ ಪೈಕಿಯ 296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ವೇಳೆ ನಕಲು ಮಾಡಲು ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಹೊರಗಿನಿಂದ ಸಹಾಯ ಮಾಡುತ್ತಿದ್ದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರೀಕ್ಷಾ ಕೊಠಡಿಯ ಕಿಟಕಿ ಹೊರಗಿನಿಂದ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ, ಪುಸ್ತಕಗಳನ್ನು ಕೊಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಯೇ ಸಾಮೂಹಿಕ ನಕಲಿಗೆ ಸಹಕರಿಸಿದ್ದಾರೆಂದು ಆರೋಪಗಳು ಕೇಳಿ ಬಂದಿದ್ದು, ಸ್ಕ್ಟಾಡ್ ತಂಡದಿಂದ ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿದಾಗ ನಕಲು ಮಾಡುತ್ತಿರುವುದು ಬಹಿರಂಗವಾಗಿದೆ. ಅಫಜಲಪುರ ಬಿಇಒ ವಸಂತ ರಾಠೋಡ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆದರಿಂದಲೇ ಈ ರೀತಿ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

    ನಕಲಿಗೆ ಅವಕಾಶ ಕೊಟ್ಟ 7 ದಾವಣಗೆರೆ ಶಿಕ್ಷಕರು ಅಮಾನತು

    ದಾವಣಗೆರೆ: ಪ್ರಾಥಮಿಕ ಶಾಲೆಯ ಸಿಎಸ್‍ಎಎಸ್ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಿಸಿದ್ದ 7 ಮಂದಿ ಶಿಕ್ಷಕರನ್ನು ದಾವಣಗೆರೆ ಡಿಡಿಪಿಐ ಅಮಾನತು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ.

    ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಸೇವಾನಗರ ಶಾಲೆಯಲ್ಲಿ ಶಿಕ್ಷಕರು ಸಾಮೂಹಿಕ ನಕಲು ಮಾಡಿಸಿದ್ದರು. ನಕಲು ಮಾಡಿಸುತ್ತಿದ್ದ ವೀಡಿಯೋ ವೈರಲ್ ಆದ ಹಿನ್ನಲೆ ಡಿಡಿಪಿಐ ಕೋದಂಡರಾಮ ಅವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ.

    ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರುಕ್ಮಿಣಿ, ಸಹ ಶಿಕ್ಷಕರಾದ ಅಂಗಡಿ ಶಾಂತಪ್ಪ, ಮಮತಾ, ಪರಮೇಶ್ವರನಾಯ್ಕ, ಹನುಮಂತಪ್ಪ, ಮಹದೇವಮ್ಮ ಮತ್ತು ಲಲಿತಾಬಾಯಿ ಅಮಾನತುಗೊಂಡವರು ಎಂದು ತಿಳಿದುಬಂದಿದೆ. 4 ರಿಂದ 7 ನೇ ತರಗತಿ ಮಕ್ಕಳ ಕಲಿಕಾ ಗುಣಮಟ್ಟ ತಿಳಿದುಕೊಳ್ಳಲು ನಡೆಸುವ ಪರೀಕ್ಷೆ ಇದಾಗಿದ್ದು, ಇದರಲ್ಲಿ ನಮ್ಮ ಶಾಲೆಯಿಂದ ಉತ್ತಮ ಫಲಿತಾಂಶ ಬರಲಿ ಎನ್ನುವ ನಿಟ್ಟಿನಲ್ಲಿ ಶಿಕ್ಷಕರೇ ನಕಲು ಮಾಡಿಸಿದ್ದರು ಎನ್ನಲಾಗಿದೆ.

    ಸಾರ್ವಜನಿಕ ದೂರಿನನ್ವಯ ಡಿಡಿಪಿಐರವರು ನಾಗರಿಕ ಸೇವಾ ನಿಯಮಾವಳಿ 1957 ರ ನಿಯಮ 3 (123) ಹಾಗೂ ರಾಜ್ಯ ಕಾಪಿ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕಾರ ಕ್ರಮ ಕೈಗೊಂಡಿದ್ದಾರೆ.