Tag: masoom sawaal film

  • ವಿವಾದ ಸೃಷ್ಟಿಸಿದ ಪ್ಯಾಡ್ ಮೇಲೆ ಹಿಂದೂ ದೇವರ ಪೋಸ್ಟರ್

    ವಿವಾದ ಸೃಷ್ಟಿಸಿದ ಪ್ಯಾಡ್ ಮೇಲೆ ಹಿಂದೂ ದೇವರ ಪೋಸ್ಟರ್

    ಚಿತ್ರರಂಗದಲ್ಲಿ ಕೆಲ ದಿನಗಳ ಹಿಂದೆ ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಪೋಸ್ಟರ್ ನೋಡಿ ಅಭಿಮಾನಿಗಳು ಗರಂ ಆಗಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರದ ವಿವಾದ ಸಖತ್ ಸೌಂಡ್ ಮಾಡುತ್ತಿದೆ. `ಮಾಸೂಮ್ ಸವಾಲ್’ ಚಿತ್ರದ ಪೋಸ್ಟರ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ್ ಕೃಷ್ಣ ಇರುವ ಪೋಸ್ಟರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಸಂತೋಷ್ ಉಪದ್ಯಾಯ ನಿರ್ದೇಶನದ `ಮಾಸೂಮ್ ಸವಾಲ್’ ಪೋಸ್ಟರ್ ರಿಲೀಸ್ ಆಗಿ,ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿ ಮಾಡಿದೆ. ಕೆಲ ದಿನಗಳ ಹಿಂದೆ ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಪೋಸ್ಟರ್ ನೋಡಿ ಫ್ಯಾನ್ಸ್ ಫುಲ್ ಗರಂ ಆಗಿದ್ದರು. ಈಗ ಪ್ಯಾಡ ಮೇಲೆ ಹಿಂದೂ ದೇವರು ಭಗವಾನ್ ಕೃಷ್ಣ ಫೋಟೋವಿರುವ ಪೋಸ್ಟರ್ ಬಿಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂಗಳ ಭಾವನೆಗೆ ಮತ್ತೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಚಿತ್ರದಲ್ಲಿ ಮುಟ್ಟಿನ ವಿಚಾರದ ಬಗ್ಗೆಯೇ ಸಿನಿಮಾವಿದೆ. ಹಾಗಾಗಿ ಪ್ಯಾಡ್ ತೋರಿಸಬೇಕಿತ್ತು. ಅದಕ್ಕಾಗಿಯೇ ಸಿನಿಮಾ ಪೋಸ್ಟರ್‌ನಲ್ಲಿ ಪ್ಯಾಡ್ ಇದೆಯೇ ಹೊರತು ಭಗವಾನ್ ಕೃಷ್ಣ ಇಲ್ಲ ಎಂದು ನಿರ್ದೇಶಕ ಸಂತೋಷ್ ಪ್ರತಿಕ್ರಿಯೇ ನೀಡಿದ್ದಾರೆ. ಪ್ಯಾಡ್ ಮೇಲೆ ಹಿಂದೂ ದೇವರ ಫೋಟೋ ಇರೋದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ನಾವು ನೋಡುತ್ತಿರುವ ದೃಷ್ಟಿ ಸರಿಯಲ್ಲ ಅದೇ ತಪ್ಪು ತಿಳುವಳಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಒಟ್ನಲ್ಲಿ ಸ್ಯಾನಿಟರಿ ಪ್ಯಾಡ್ ಮೇಲೆ ಹಿಂದೂ ದೇವರ ಫೋಟೋವಿರೋದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಆಗಸ್ಟ್‌ 5ಕ್ಕೆ ʻಮಾಸೂಮ್ ಸವಾಲ್’ ತೆರೆಗೆ ಬರಲಿದೆ. ಈ ವೇಳೆ ಚಿತ್ರತಂಡದ ಮುಂದಿನ ನಡೆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

    Live Tv
    [brid partner=56869869 player=32851 video=960834 autoplay=true]