Tag: MaskMan

  • ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ

    ಗ್ರೀನ್ ಸಿನಿಮಾದಲ್ಲಿ ಮಾಸ್ಕ್ ಮ್ಯಾನ್ – ಪ್ರಚಾರದ ವಿನೂತನ ಪ್ರಯತ್ನ

    ರಾಜ್ ವಿಜಯ್ (Raj Vijay) ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ `ಗ್ರೀನ್’ ಚಿತ್ರ (Green Movie) ತೆರೆಗೆ ಬರಲು ಅಣಿಯಾಗಿದೆ. ನಿಶಾಂತ್.ಎನ್.ಎನ್ ಒಡೆತನದ ಹೊಸ ಚಿತ್ರ ನಿರ್ಮಾಣ ಸಂಸ್ಥೆ ಗುನಾದ್ಯ ಪ್ರೊಡಕ್ಷನ್ಸ್ `ಗ್ರೀನ್’ ಚಿತ್ರವನ್ನು ತೆರೆಗೆ ತರಲು ಬೆನ್ನೆಲುಬಾಗಿ ನಿಂತಿದೆ. ಬಿಡುಗಡೆಗೂ ಮುನ್ನ ನವರಾತ್ರಿ ಶುಭ ಸಂದರ್ಭದಲ್ಲಿ ವಿನೂತನ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ.

    ಬೆಂಗಳೂರಿನ (Bengaluru) ಹಲವು ಕಡೆ ಒಂದು ಕ್ಯೂಆರ್ ಕೋಡ್ ಇರುವ ಪೋಸ್ಟರ್ ಅಂಟಿಸಲಾಗಿತ್ತು. ಅದನ್ನು ಸ್ಕ್ಯಾನ್ ಮಾಡಿದಾಗ ಗ್ರೀನ್ ಚಿತ್ರದ ಟೀಸರ್ ಬರುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಮೂರು ಸಾವಿರಕ್ಕೂ ಹೆಚ್ಚು ಜನರು ಈ ಕ್ಯೂಆರ್ ಕೋಡ್ ಮೂಲಕ ಚಿತ್ರದ ಟೀಸರ್ ವೀಕ್ಷಿಸಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್

    ಇದರ ಜೊತೆಗೆ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಎಂಬ ವಿಶಿಷ್ಟ ಪಾತ್ರವಿದ್ದು, ಆ ಮಾಸ್ಕ್ ಮ್ಯಾನ್ ವೇಷಧಾರಿಯನ್ನು ನಗರದ ನಾಲ್ಕೂ ದಿಕ್ಕಲ್ಲಿ ಸುತ್ತಾಡಲು ಹೇಳಲಾಗಿತ್ತು. ಮಾಸ್ಕ್ ಮ್ಯಾನ್ ವೇಷಧಾರಿಯನ್ನು ಕಂಡ ಕೆಲ ಜನರು ಆಶ್ಚರ್ಯಚಕಿತರಾದರು. ಇನ್ನೂ ಕೆಲವರು ಭಯಭೀತರಾದರು. ಈ ಮಾಸ್ಕ್ ಮ್ಯಾನ್ ಕೇವಲ ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲೂ ಓಡಾಡಿದ್ದಾನೆ. ದಸರಾ ಸಂಭ್ರಮದಲ್ಲಿ ಮುಳುಗಿರುವ ಮೈಸೂರಿನ ಜನ ಹಾಗೂ ಪ್ರವಾಸಿಗರೂ ಸಹ ಮಾಸ್ಕ್ ಮ್ಯಾನ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಇಷ್ಟೇ ಅಲ್ಲದೆ ಚಿತ್ರದ ಟೀಸರ್ ಪ್ರಸಾರ ಮಾಡಿಕೊಂಡು ವಾಹನ ಒಂದು ಮೈಸೂರಿನ ತುಂಬಾ ಓಡಾಡಿದೆ. ಒಟ್ಟಿನಲ್ಲಿ ವಿನೂತನ ಪ್ರಚಾರದ ಮೂಲಕ ಚಿತ್ರ ಜನರ ಬಳಿ ತಲುಪುತ್ತಿದೆ. ಇದೇ ತಿಂಗಳಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಘೋಷಿಸಲಿದೆ. ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳ ಜೊತೆಗೆ ಪ್ರಶಂಸೆಯನ್ನು ಈ ಚಿತ್ರ ಪಡೆದುಕೊಂಡಿದೆ.

    ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಆರ್.ಜೆ.ವಿಕ್ಕಿ, ವಿಶ್ವನಾಥ್ ಮಾಂಡಲಿಕ, ಶಿವ ಮಂಜು, ಡಿಂಪಿ ಫದ್ಯಾ ಹಾಗೂ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಕೆ.ಮಧುಸೂದನ್ ಛಾಯಾಗ್ರಹಣ ಹಾಗೂ ಶಕ್ತಿ ಅವರ ಸಂಗೀತ ನಿರ್ದೇಶನವಿದೆ. `ಗ್ರೀನ್’ ಒಂದು ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಇದು ವೀಕ್ಷಕರನ್ನು ಮಾನವ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ. ವಿಭಿನ್ನ ಕಥಾಹಂದರ ಹೊಂದಿರುವ ಗ್ರೀನ್ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

  • ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

    ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

    ಮಂಗಳೂರು: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ಮ್ಯಾನ್‌ ಚಿನ್ನಯ್ಯನ (Maskman Chinnaiah) ಬಂಧನವಾದ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ (Dharmasthala Temple) ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಶಿವ ರುದ್ರತಾಂಡವ ಮಾಡುತ್ತಿರುವ ಫೋಟೋವನ್ನು ಅಪ್ಲೋಡ್‌ ಮಾಡಲಾಗಿದೆ.

    ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ (Shiva Rudra Tandav) ಫೋಟೋ ಅನಾವರಣವಾಗಿದೆ. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ

     

    ಧರ್ಮಸ್ಥಳ ದೇವರ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಷಡ್ಯಂತ್ರ ಮಾಡಿ ಗ್ಯಾಂಗ್‌ ಸುಳ್ಳಿನ ಕೋಟೆ ಕಟ್ಟಿತ್ತು. ಒಂದೊಂದೇ ಸುಳ್ಳಿನ ಕೋಟೆಗಳು ಕಳಚಿ ಬಿದ್ದು ಷಡ್ಯಂತ್ರ ಮಾಡುತ್ತಿದವರು ಬಂಧನವಾಗುತ್ತಿದ್ದಂತೆ ಆಡಳಿತ ಮಂಡಳಿ ಶಿವರುದ್ರ ತಾಂಡವದ ಫೋಟೋ ಹಾಕಿ ನಮೋ ಮಂಜುನಾಥ ಎಂದು ಬರೆದು ಅಪಪ್ರಚಾರ ಮಾಡಿದವರಿಗೆ ಸಂದೇಶ ಕಳುಹಿಸಿದೆ. ಇದನ್ನೂ ಓದಿ: ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?

    ಏನಿದರ ಸಂದೇಶ?
    ಶಿವ ರುದ್ರ ತಾಂಡವ ಸಂತೋಷ ಮತ್ತು ಭಾವಪರಾವಶತೆಯನ್ನು ಕೋಪವನ್ನು ಸಂಕೇತಿಸುತ್ತದೆ. ಅಧರ್ಮದ ವಿನಾಶವನ್ನು , ಅಹಂಕಾರದ ನಾಶವನ್ನು ಶಿವರುದ್ರತಾಂಡವ ಸೂಚಿಸುತ್ತದೆ. ಢಮರುಗ ಹಿಡಿದ ರೌದ್ರತೆ ತೋರುವ ಶಿವನ ಉಗ್ರ ಮತ್ತು ವಿನಾಶಕಾರಿ ಸ್ವರೂಪವನ್ನು ಬಿಂಬಿಸುತ್ತದೆ.

  • ಅನಾಮಿಕ ಮುಸುಕುಧಾರಿಗೆ ಪ್ರಶ್ನೆಗಳ ಸುರಿಮಳೆ – ಮಾಸ್ಕ್ ಮ್ಯಾನ್ ಉತ್ತರಕ್ಕೆ ಎಸ್‌ಐಟಿ ಪೊಲೀಸರು ತಬ್ಬಿಬ್ಬು

    ಅನಾಮಿಕ ಮುಸುಕುಧಾರಿಗೆ ಪ್ರಶ್ನೆಗಳ ಸುರಿಮಳೆ – ಮಾಸ್ಕ್ ಮ್ಯಾನ್ ಉತ್ತರಕ್ಕೆ ಎಸ್‌ಐಟಿ ಪೊಲೀಸರು ತಬ್ಬಿಬ್ಬು

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸಮಾಧಿ ಶೋಧವನ್ನು (Dharmasthala Mass Burials) ಎಸ್‌ಐಟಿ (SIT) ಅಧಿಕಾರಿಗಳು ಸ್ಥಗಿತ ಮಾಡಿದ್ದಾರೆ. ಇಂದು ಎಸ್‌ಐಟಿ ಪೊಲೀಸರು ಸುಮಾರು 6 ಗಂಟೆಗಳ ಕಾಲ ಅನಾಮಿಕ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ಮಾಡಿದ್ದಾರೆ.

    ಬೆಳಗ್ಗೆ 10 ಗಂಟೆಯಿಂದ ನಿರಂತರವಾಗಿ ಎಸ್‌ಐಟಿ ಪೊಲೀಸರು ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದಾರೆ. ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ – ಆ.23 ಕ್ಕೆ ವಿಚಾರಣೆ ಮುಂದೂಡಿಕೆ

    ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ ತಲೆಬುರುಡೆ ತಂದದ್ದೆಲ್ಲಿದ? ಬುರುಡೆ ತಂದಾಗ ಸ್ಥಳದಲ್ಲಿ ಇದ್ದವರು ಯಾರು? ಕತ್ತಿಯಲ್ಲಿ ಬುರುಡೆ ಎತ್ತಿದವರು ಯಾರು? ಸಮಾಧಿಯೊಳಗಿಂದ ನೀನು ಬುರುಡೆ ಅಗೆದು ತಂದಿರುವೆಯಾ? ಕಾಡಿನೊಳಗಿಂದ ಬುರುಡೆ ಎತ್ತಿದ ವೀಡಿಯೋದಲ್ಲಿ ಇರುವವರು ಯಾರು? ಕಾಡಿನ ಒಳಗೆ ಬುರುಡೆ ಸಿಕ್ಕಿದ್ದರೆ ಅದು ಅಸಹಜ ಸಾವಿನ ಪ್ರಕರಣವೋ? ಸಮಾಧಿಯಿಂದ ಬುರುಡೆ ಆಗಿದ್ದು ತಂದದ್ದು ಹೌದಾ? ಅನಾಮಿಕನ ಜೊತೆ ಕೈ ಜೋಡಿಸಿದವರು ಯಾರು ಎಂಬೆಲ್ಲಾ ಪ್ರಶ್ನೆಗಳನ್ನು ತನಿಖಾಧಿಕಾರಿ ಜಿತೇಂದ್ರ ದಯಾಮಾ ಅನಾಮಿಕನಿಗೆ ಕೇಳಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಬೀದಿ ನಾಯಿ ದಾಳಿಯಿಂದ ರೇಬಿಸ್; 4 ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು

    ಈ ಎಲ್ಲಾ ಪ್ರಶ್ನೆಗಳಿಗೆ ಎಸ್‌ಐಟಿ ಪೊಲೀಸರ ನಿರೀಕ್ಷೆಯಂತೆ ಯಾವುದೇ ಉತ್ತರಗಳು ಅನಾಮಿಕನಿಂದ ಬಂದಿಲ್ಲ. ಬದಲಾಗಿ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ ಬುರುಡೆ ಯಾವ ಭಾಗದಿಂದ ತೆಗೆದು ತಂದದ್ದು ಎಂಬ ಪ್ರಶ್ನೆಗೂ ಸರಿಯಾದ ಉತ್ತರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬಂಗ್ಲೆ ಗುಡ್ಡೆ, ಕಲ್ಲೇರಿ, ರತ್ನಗಿರಿ, ಬೊಳಿಯಾರು ಎಂಬ ಉತ್ತರವನ್ನು ಹೇಳಿದ್ದಾನೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ: ಪರಮೇಶ್ವರ್ ಘೋಷಣೆ

    ಸ್‌ಐಟಿ ಪೊಲೀಸರು ಆರಂಭದಲ್ಲಿ ಮಾಡಬೇಕಾಗಿದ್ದ ತನಿಖೆಯನ್ನು ಈಗ ಶುರು ಮಾಡಿದ್ದಾರೆ. ಕಾಡು ಮೇಡು ಅಲೆಸಿ ಗುಂಡಿ ತೋಡಿಸಿ ಈಗ ಹೊಸ ಕಥೆ ಶುರು ಮಾಡಿದ ಅನಾಮಿಕನ ತನಿಖೆ ಇನ್ನೆತ್ತ ಸಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು