Tag: mask day

  • ಜೂನ್ 18ರಂದು ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ

    ಜೂನ್ 18ರಂದು ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ

    ಬೆಂಗಳೂರು: ಕೊರೊನಾ ಜಾಗೃತಿಗಾಗಿ ನಾಳೆ(ಗುರುವಾರ) ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ನಡೆಸಲಾಗುತ್ತದೆ.

    ಮಾಸ್ಕ್ ಡೇ ಅಂಗವಾಗಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿ ಹಲವು ನಿಯಮಗಳ ಪಾಲನೆ ಬಗ್ಗೆ ಜಿಲ್ಲೆ, ತಾಲೂಕು, ಪಂಚಾಯತ್ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಚುನಾಯಿತ ಪ್ರತಿನಿಧಿಗಳು, ವೈದ್ಯ ಸಿಬ್ಬಂದಿ, ಗಣ್ಯ ವ್ಯಕ್ತಿಗಳ ಜೊತೆ 50 ಜನ ಮೀರದಂತೆ ಸೇರಿಕೊಂಡು ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.