ಕೌಲಾಲಂಪುರ: ಮಸೀದಿ ನಿರ್ಮಾಣಕ್ಕಾಗಿ ಕೌಲಾಲಂಪುರ ಹೃದಯಭಾಗದಲ್ಲಿರುವ 131 ವರ್ಷ ಹಳೆಯ ಹಿಂದೂ ದೇವಾಲಯವನ್ನು ಸ್ಥಳಾಂತರಿಸಲು ಮಲೇಷ್ಯಾ ಸರ್ಕಾರ ಮುಂದಾಗಿದೆ.
ಮಲಯ್ ಮೇಲ್ ವರದಿಯ ಪ್ರಕಾರ, ದೇವಿ ಶ್ರೀ ಪತ್ರಕಾಳಿಯಮ್ಮನ್ ದೇವಾಲಯವನ್ನು ಸ್ಥಳಾಂತರಿಸಲು ಸ್ಥಳವನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಆದರೆ, ನಿಖರವಾದ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ.
ಫೆಡರಲ್ ಸಂವಿಧಾನವು ಖಾತರಿಪಡಿಸುವ ಧಾರ್ಮಿಕ ಸ್ವಾತಂತ್ರ್ಯದ ತತ್ವಕ್ಕೆ ಅನುಗುಣವಾಗಿ ಕ್ರಮವಹಿಸಲಾಗುವುದು. ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ದೇವಾಲಯವನ್ನು ಕೆಡವಲಾಗುವುದಿಲ್ಲ ಎಂದು ದೃಢಪಡಿಸಲಾಗಿದೆ.
ಮಲೇಷಿಯನ್ನರ ಹಕ್ಕುಗಳ ಯುನೈಟೆಡ್ ಪಾರ್ಟಿ (URIMAI) ಅಧ್ಯಕ್ಷ ಪ್ರೊಫೆಸರ್ ರಾಮಸಾಮಿ ಪಳನಿಸಾಮಿ, ಈ ದೇವಾಲಯವು ಮಲೇಷ್ಯಾದ ಸ್ವಾತಂತ್ರ್ಯಕ್ಕೂ ಮುಂಚಿನ ಮಹತ್ವದ ಮತ್ತು ಧಾರ್ಮಿಕ ಹೆಗ್ಗುರುತಾಗಿದೆ. ದೇವಾಲಯವು ಸ್ಥಳಾಂತರಗೊಳ್ಳದಂತೆ ನೋಡಿಕೊಳ್ಳಲು DBKL ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಬಹು-ಜನಾಂಗೀಯ ಮತ್ತು ಬಹು-ಧರ್ಮೀಯ ಎಂದು ಹೆಮ್ಮೆಪಡುವ ರಾಷ್ಟ್ರದಲ್ಲಿ, ಬೇರೆ ಯಾವುದೇ ಉದ್ದೇಶಕ್ಕಾಗಿ ದೀರ್ಘಕಾಲದಿಂದ ಸ್ಥಾಪಿತವಾದ ಹಿಂದೂ ದೇವಾಲಯವನ್ನು ತೆಗೆದುಹಾಕುವುದು ಸ್ವೀಕಾರಾರ್ಹವಲ್ಲ ಎಂದು ಪೆನಾಂಗ್‌ನ ಮಾಜಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
ಚಿಕ್ಕೋಡಿ: ದುರ್ಗಾಮಾತಾ (Durgamataha) ವಿಸರ್ಜನೆ ಸಂದರ್ಭದಲ್ಲಿ ಮಸೀದಿ (Masjid) ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ದುರ್ಗಾ ಮಾತಾ ವಿಸರ್ಜನೆ ವೇಳೆ ಮಸೀದಿ ಎದುರು ಹಾಡು ಹಚ್ಚಿದ್ದಕ್ಕೆ ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ (Solapur) ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ಸಂಭವಿಸಿದೆ.
9 ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸಿ ಭಾನುವಾರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮಸೀದಿ ಎದುರು ಶಿವಾಜಿ (Shivaji) ಅಫ್ಜಲ್ ಖಾನ್ ಕೊಂದಿದ್ದ ಹಾಡನ್ನ ಹಾಕಿದ್ದರು. ಇದರಿಂದ ಕೋಪಗೊಂಡ ಒಂದು ಕೋಮಿನ ಗುಂಪು ಮೆರವಣಿಗೆ ಮುಗಿಸಿ ಬರುತ್ತಿದ್ದ ಯುವಕರ ಮೇಲೆ ರಾಡ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: Uttar Pradesh | ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ – ಲಾಠಿ ಚಾರ್ಜ್, 30 ಮಂದಿ ಬಂಧನ
ಗಲಾಟೆಯಲ್ಲಿ 5 ಕ್ಕೂ ಹೆಚ್ಚು ಬೈಕುಗಳು ಹಾಗೂ ಎರಡು ಕಾರುಗಳಿಗೆ ಹಾನಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಇಲ್ಲಿಯವರೆಗೆ ಯಾರನ್ನು ಕೂಡ ವಶಕ್ಕೆ ಪಡೆದಿಲ್ಲ ಎನ್ನುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮಂಗಳೂರು: ನಗರದ ಹೊರವಲಯದಲ್ಲಿರುವ ಮಸೀದಿ ಮೇಲಿರುವ ಕಲ್ಲು ತೂರಾಟ ನಡೆಸಿರುವ ಘಟನೆ ಜಿಲ್ಲೆಯ ಸುರತ್ಕಲ್ (Suratkal) ಬಳಿಯ ಕಾಟಿಪಳ್ಳ (Katipalla) 3ನೇ ಬ್ಲಾಕಿನ ಬದ್ರಿಯಾ ಮಸೀದಿಯಲ್ಲಿ ನಡೆದಿದೆ.
ಮಂಗಳೂರು (Mangaluru) ಹೊರವಲಯದ ಕಾಟಿಪಳ್ಳ 3ನೇ ಬ್ಲಾಕಿನ ಬದ್ರಿಯಾ ಮಸೀದಿ ಮೇಲೆ ದುಷ್ಕರ್ಮಿಗಳ ತಂಡವೊಂದು ಕಲ್ಲು ತೂರಾಟ ನಡೆಸಿದೆ. ಬೈಕ್‌ನಲ್ಲಿ ಆಗಮಿಸಿ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲಿನ ಹೊಡೆತಕ್ಕೆ ಮಸೀದಿಯ ಗಾಜು ಒಡೆದು ಚೂರಾಗಿದೆ. ತಡರಾತ್ರಿ 2 ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಇದನ್ನೂ ಓದಿ: ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ – ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಭರ್ಜರಿ ಸಿದ್ಧತೆ!
ಸದ್ಯ ಸ್ಥಳದಲ್ಲಿ ಸುರತ್ಕಲ್ ಠಾಣಾ ಪೊಲೀಸರು ಬಂದುಬಸ್ತ್ ಮಾಡಿದ್ದಾರೆ.
ಭಜರಂಗದಳ-ವಿಹೆಚ್‌ಪಿಯಿಂದ ಬಿ.ಸಿ.ರೋಡ್ ಚಲೋ ಕರೆ:
ಮತ್ತೊಂದೆಡೆ ಭಜರಂಗದಳ ಹಾಗೂ ವಿಹೆಚ್‌ಪಿಯಿಂದ ಬಿ.ಸಿ.ರೋಡ್ (BC Road) ಚಲೋ ಕರೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಿ.ಸಿ.ರೋಡ್‌ನಲ್ಲಿ ಜಮಾಯಿಸಿದ್ದಾರೆ. ಬಿ.ಸಿ.ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಎದುರು ಸೇರಿದ ಕಾರ್ಯಕರ್ತರು ನಾವು ಸವಾಲು ಸ್ವೀಕರಿಸಿ ಬಂದಿದ್ದೇವೆ. ನಮ್ಮ ಮುಖಂಡ ಶರಣ್ ಪಂಪ್ವೆಲ್ ಬರುತ್ತಾರೆ ಅವರಿಗೆ ಸ್ವಾಗತ ಕೋರಲು ಬಂದಿರೋದಾಗಿ ವಿಹೆಚ್‌ಪಿ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ತಿಳಿಸಿದ್ದಾರೆ.ಇದನ್ನೂ ಓದಿ: ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್, ದಾಳಿಕೋರ ಸಿಕ್ಕಿದ್ದು ಹೇಗೆ?
ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ (Supreme Court) ಆದೇಶದ ನಂತರ ಮುಸ್ಲಿಮರಿಗೆ ಪರಿಹಾರವಾಗಿ ನೀಡಿದ ಅಯೋಧ್ಯೆಯ ಭೂಮಿಯಲ್ಲಿ ಹೊಸ ಮಸೀದಿಯ ಅಡಿಪಾಯಕ್ಕೆ ಮೆಕ್ಕಾದಲ್ಲಿ ಪವಿತ್ರಗೊಳಿಸಲ್ಪಟ್ಟಿರುವ ಇಟ್ಟಿಗೆಯನ್ನು ಬಳಸಲಾಗುತ್ತದೆ. ಇದನ್ನೂ ಓದಿ: ಅಮ್ಮಾ ನಿರ್ಮಲಾ, ನಮ್ಮ ದುಡ್ಡು ನೀಡಮ್ಮ: ಸಿದ್ದರಾಮಯ್ಯ
ಈ ಪವಿತ್ರ ಇಟ್ಟಿಗೆಯನ್ನು ಕಪ್ಪು ಮಣ್ಣಿನಿಂದ ಮಾಡಿದ್ದು, ಅದನ್ನು ಚಿನ್ನದಲ್ಲಿ ಕೆತ್ತಿ ಪವಿತ್ರ ಕುರಾನ್‌ನ ಕೆಲವು ಉಪದೇಶಗಳನ್ನು ಹೊಂದಿದೆ ಎಂದು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಶನ್ (ಐಐಸಿಎಫ್) ಪಾದಾಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈ ಇಟ್ಟಿಗೆಯನ್ನು ಮಾರ್ಚ್ 12 ರಂದು ರಂಜಾನ್ ಈದ್ ನಂತರ ಅಯೋಧ್ಯೆಯ ಮಸೀದಿ ಸ್ಥಳವಿರುವ ಧನ್ನಿಪುರ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಅನ್ಯಾಯ – ದೇಶದ ಗಮನ ಸೆಳೆಯಲು ಈ ಪ್ರತಿಭಟನೆ: ಸಿದ್ದರಾಮಯ್ಯ
ಐಐಸಿಎಫ್ ಸದಸ್ಯ ಮತ್ತು ಮಸೀದಿ ಅಭಿವೃದ್ಧಿ ಸಮಿತಿಯ ಮುಖ್ಯ ಸ್ಥಹಾಜಿ ಅರಾಫತ್ ಶೇಕ್ ಮಾತನಾಡಿ, ಮಹಾರಾಷ್ಟ್ರದಿಂದ ಇಟ್ಟಿಗೆಯನ್ನು ಮೆಕ್ಕಾಗೆ ತೆಗೆದುಕೊಂಡು ಹೋಗಿ ಅಲ್ಲಿನ ಪವಿತ್ರ ನೀರಿನಿಂದ ಪ್ರೋಕ್ಷಣೆ ಮಾಡಿದ್ದೇನೆ. ಅದನ್ನು ಮದೀನಾ ಶರೀಫ್ ದರ್ಗಾಗೆ ತೆಗೆದುಕೊಂಡು ಹೋಗಿ ಅಲ್ಲಿನ ಪವಿತ್ರ ನೀರಿನಿಂದ ಪ್ರೋಕ್ಷಣೆ ಮಾಡಿ ಪ್ರಾಥನೆ ಸಲ್ಲಿಸಿ ಫೆ.2 ರಂದು ಪವಿತ್ರ ಇಟ್ಟಿಗೆಯನ್ನು ಮಹಾರಾಷ್ಟ್ರಕ್ಕೆ ತರಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?
ಜೊತೆಗೆ ಮುಂದಿನ ದಿನಗಳಲ್ಲಿ ಅಜ್ಮೇರ್ ಶರೀಫ್ ದರ್ಗಾದಲ್ಲಿ ಇಟ್ಟಿಗೆಗೆ ಪ್ರಾಥನೆ ಸಲ್ಲಿಸಲಾಗುವುದು. ನಂತರ ಅಲ್ಲಿಂದ ಮೆರವಣಿಗೆಯಲ್ಲಿ ಅಯೋಧ್ಯೆಗೆ ತರಲಾಗುವುದು. ಇಟ್ಟಿಗೆಯನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯ ಅಡಿಪಾಯಕ್ಕೆ ಬಳಸಲಾಗುವುದು. ಏಪ್ರಿಲ್‌ನಲ್ಲಿ ಮಸೀದಿ ಕಾರ್ಯ ಆರಂಭಗಲಿದೆ ಎಂದು ಅರಾಫತ್ ಶೇಕ್ ಹೇಳಿದ್ದಾರೆ. ಇದನ್ನೂ ಓದಿ: ಜನರ ದುಡ್ಡಲ್ಲಿ ಕಾಂಗ್ರೆಸ್ ದೆಹಲಿಯಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದೆ: ಈಶ್ವರಪ್ಪ ವ್ಯಂಗ್ಯ
ಕೊಪ್ಪಳ: ಗಂಗಾವತಿ (Gangavati) ನಗರದ ಗಾಂಧಿ ಸರ್ಕಲ್ ಸಮೀಪ ಇರುವ ದೊಡ್ಡ ಜಾಮಿಯಾ ಮಸೀದಿ (Masjid) ಮುಂದೆ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ವೇಳೆ ಮಸೀದಿ ಮುಂದೆ ಪೂಜೆ ಮಾಡಿದ ಕಾರಣ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸೆ.28 ರಂದು ಗಂಗಾವತಿಯ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿದ್ದ ಗಣೇಶ ವಿಸರ್ಜನೆ ವೇಳೆಯಲ್ಲಿ ಯುವಕರು ಮಸೀದಿ ಎದುರು ಮಂಗಳಾರತಿ ಮಾಡಿ, ‘ಗವಿ ಗಂಗಾಧರೇಶ್ವರ ಮಹಾ ರಾಜಕೀ ಜೈ’ ಎಂದು ಘೋಷಣೆ ಕೂಗಿದ ವೀಡಿಯೋ ವೈರಲ್ ಆಗಿತ್ತು. ಇದು ಕೋಮು ಗಲಭೆಗೆ ಪ್ರಚೋದನೆ ನೀಡುತ್ತದೆ ಎನ್ನುವ ಕಾರಣಕ್ಕೆ ಸೆ.30 ರಂದು ಮಂಗಳಾರತಿ ಮಾಡಿದ 4 ಜನರ ಮೇಲೆ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಾಗಿತ್ತು. ಈ ಪ್ರರಕಣ ಇನ್ನೂ ಹಸಿ ಇರುವಾಗಲೇ ಮತ್ತೆ ಅದೇ ಮಸೀದಿಯ ಮುಂದೆ ಮಂಗಳವಾರ ರಾತ್ರಿ ವೇಳೆ ಕೂಡ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡದವರು, ಯುವಕರು ಮಸೀದಿಯ ಮುಂದೆಯ ರಸ್ತೆಯಲ್ಲಿ ರಂಗೋಲಿ ಹಾಕಿ, ಬೆಂಕಿ ಹಚ್ಚಿ, ಕುಂಬಳಕಾಯಿ ಹೊಡೆಯಲು ಮುಂದಾಗಿದ್ದರು. ಅದಕ್ಕೆ ಕೋಪಗೊಂಡಿದ್ದ ಮುಸ್ಲಿಂ ಸಮಾಜದವರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿತ್ತು.
ಕೂಡಲೇ ಸ್ಥಳದಲ್ಲಿಯೇ ಇದ್ದ ಪೊಲೀಸರು ಅದನ್ನು ನಿಲ್ಲಿಸಿ, ರಂಗೋಲಿಗೆ ನೀರು ಹಾಕಿ ಮೆರವಣಿಗೆಯನ್ನು ಮುಂದೆ ಕಳುಹಿಸಿದ್ದಾರೆ. ಪದೇ ಪದೇ ಮಸೀದಿಯ ಮುಂದೆ ಉದ್ದೇಶಪೂರ್ವಕವಾಗಿ ಪೂಜೆ ಮಾಡುವುದು, ಮಂಗಳಾರತಿ ಮಾಡುವುದು ಮಾಡಲಾಗುತ್ತಿದೆ. ಇದು ಕೋಮು ಗಲಭೆಯನ್ನು ಸೃಷ್ಠಿ ಮಾಡುವ ಕೆಲಸವಾಗಿದೆ. ಕೂಡಲೇ ಅಂತಹ ಆರೋಪಿಗಳನ್ನು ಬಂಧನ ಮಾಡಬೇಕು. ಈ ರೀತಿಯಾಗಿ ನಡೆಯದಂತೆ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ನೂರಾರು ಜನ ಮುಸ್ಲಿಂ ಸಮಾಜದವರು ಸೇರಿಕೊಂಡು ಪಟ್ಟು ಹಿಡಿದರು. ಸ್ಥಳಕ್ಕೆ ನಗರಠಾಣೆ ಪಿಎಸ್‌ಐ, ಡಿವೈಎಸ್ಪಿ ಅವರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮುಸ್ಲಿಂ ಸಮಾಜದವರು ಪಟ್ಟು ಬಿಡದೆ ಕೆಲ ಗಂಟೆಗಳವರೆಗೆ ಬಂಧನಕ್ಕೆ ಒತ್ತಾಯಿಸಿದ್ದಾರೆ. ನಂತರ ಮುಸ್ಲಿಂ ಸಮಾಜದ ಹಿರಿಯರ ಸಮ್ಮುಖದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಈದ್ ಮಿಲಾದ್ ಹಬ್ಬಕ್ಕೆ 5 ಕೋಟಿ ಸಂಗ್ರಹ – ಫಂಡಿಂಗ್ ಮಾಡಿದವರ ಹಿಂದೆ ಬಿದ್ದ ಖಾಕಿ
ಉದ್ವಿಗ್ನ ಪರಿಸ್ಥಿತಿ ನಿರ್ಮಾಣ: ಗಂಗಾವತಿ ನಗರದ ಗಾಂಧಿ ಸರ್ಕಲ್, ಮಸೀದಿ ಏರಿಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸಮಯದಲ್ಲಿ ಕೂಡ ಎರಡು ಸಮುದಾಯಗಳ ನಡುವೆ ಗಲಾಟೆ ನಡೆಯಬಹುದು ಎನ್ನುವ ಕಾರಣಕ್ಕೆ ತಹಸಿಲ್ದಾರ್ ಮಂಜುನಾಥ ಬೋಗವಾತಿ, ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆಯ ನಗರಠಾಣೆ ಪಿಎಸ್‌ಐ, ಗ್ರಾಮೀಣ ಠಾಣೆ ಪಿಎಸ್‌ಐ, ಡಿವೈಎಸ್ಪಿ ಸೇರಿದಂತೆ ಸಾಕಷ್ಟು ಜನರು ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಬಿಡುಬಿಟ್ಟಿದ್ದಾರೆ. ಯಾರು ಸಹ ಅನವಶ್ಯಕವಾಗಿ ಮಸೀದಿ ಮುಂದೆ ತಿರುಗಾಡದಂತೆ ಎಚ್ಚರಿಕೆ ವಹಿಸಲಾಗಿದೆ.
ಪೊಲೀಸರಿಂದ ಪೆಟ್ರೋಲಿಂಗ್: ಮಸೀದಿ ಮುಂದೆ ಪೂಜೆ ವಿವಾದಕ್ಕೆ ಸಂಬಂಧಪಟ್ಟಂತೆ ಕೋಮುಗಲಭೆ ಉಂಟಾಗುವ ಪರಿಸ್ಥಿತಿ ಇರುವುದರಿಂದ ನಗರದಲ್ಲಿ ಇರುವ ಹಾಗೂ ಬಂದೋಬಸ್ತ್ ಸಲುವಾಗಿ ಆಗಮಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಪೆಟ್ರೋಲಿಂಗ್ ನಡೆಸಿ, ನಗರದಲ್ಲಿ ಯಾರು ಸಹ ಗುಂಪು ಗುಂಪಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ರೀತಿಯಲ್ಲಿ ಗಲಾಟೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ
ತುಮಕೂರು: ಮಸೀದಿ (Masjid) ಮೇಲೆ ತ್ರಿವರ್ಣ ಧ್ವಜ ಹಾರಿಸಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು (77th Independence Day) ತುಮಕೂರಿನ ಗೂಡ್ ಶೆಡ್ ಕಾಲೋನಿಯಲ್ಲಿ ಆಚರಿಸಲಾಗಿದೆ.
ತುಮಕೂರಿನ (Tumakuru) ಗೂಡ್ ಶೆಡ್ ಕಾಲೋನಿಯ ಮೀನಾ ಮಸೀದಿ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡಿ ಮಕ್ಕಳು ಸಂಭ್ರಮಿಸಿದ್ದಾರೆ. ಈ ಕಾರ್ಯಕ್ರಮವನ್ನು ಮೀನಾ ಮಸೀದಿ ಆಡಳಿತ ಮಂಡಳಿಯಿಂದ ಆಯೋಜನೆಗೊಳಿಸಲಾಗಿತ್ತು. ಇದನ್ನೂ ಓದಿ: 77ನೇ ಸ್ವಾತಂತ್ರ್ಯ ದಿನ – ಟ್ವೀಟ್‌ನಲ್ಲಿ ಜನತೆಗೆ ಗಣ್ಯರ ಶುಭಾಶಯ
ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ (Gyanvapi Mosque) ಪತ್ತೆಯಾದ ಶಿವಲಿಂಗವನ್ನು (Shivling) ಕಾರ್ಬನ್ ಡೇಟಿಂಗ್ (Carbon Dating) ಸೇರಿದಂತೆ ವೈಜ್ಞಾನಿಕ ಸಮೀಕ್ಷೆಗೆ (Scientific Survey) ಒಳಪಡಿಸುವಂತೆ ಅಲಹಬಾದ್ ಹೈಕೋರ್ಟ್ (Allahabad High Court) ಶುಕ್ರವಾರ ಆದೇಶಿಸಿದೆ.
ಅಲಹಬಾದ್ ಹೈಕೋರ್ಟ್ ಶುಕ್ರವಾರ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಜ್ಞಾನವಾಪಿ ಮಸೀದಿಯೊಳಗೆ ಪತ್ತೆಯಾಗಿರುವ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಅನುಮತಿ ನೀಡಿದೆ.
ಕಳೆದ ವರ್ಷ ಜ್ಞಾನವಾಪಿ ಮಸೀದಿಯ ಆವರಣದೊಳಗೆ ವೀಡಿಯೋ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಶಿವಲಿಂಗದAತಹ ಆಕೃತಿಯೊಂದು ಪತ್ತೆಯಾಗಿದ್ದು, ಬಳಿಕ ಭಾರೀ ವಿವಾದಕ್ಕೆ ಕಾರಣವಾಯಿತು. ಹಿಂದೂ ಕಡೆಯವರು ಪತ್ತೆಯಾದ ಆಕೃತಿಯನ್ನು ಶಿವಲಿಂಗ ಎಂದು ಹೇಳಿಕೊಂಡರೆ ಮುಸ್ಲಿಂ ಕಡೆಯವರು ಇದು ಕಾರಂಜಿ ಎಂದು ವಾದಿಸಿದರು. ಬಳಿಕ ಆ ಆಕೃತಿಯನ್ನು ವೈಜ್ಞಾನಿಕ ಸಮೀಕ್ಷೆಗೆ ಒಳಪಡಿಸಬೇಕು ಎಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಕೇಸ್ ದಾಖಲು
ಮಸೀದಿ ಸಂಕೀರ್ಣದೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪೂಜೆ ಮಾಡಲು 5 ಹಿಂದೂ ಮಹಿಳೆಯರು ಮನವಿ ಮಾಡಿಕೊಂಡಿದ್ದರು. 5 ಅರ್ಜಿದಾರರಲ್ಲಿ ನಾಲ್ವರು ಶಿವಲಿಂಗ ಎಷ್ಟು ವರ್ಷ ಹಳೆಯದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾರ್ಬನ್ ಡೇಟಿಂಗ್ ಒಳಗೊಂಡAತೆ ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿಕೊಂಡಿದ್ದರು. ಇದನ್ನೂ ಓದಿ: ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ – ವಿದ್ಯುತ್ ದರ ಹೆಚ್ಚಳ
ಬೆಂಗಳೂರು: ಕೋಟ್ಯಂತರ ಭಕ್ತರನ್ನು ಹೊಂದಿರುವ ಶಬರಿಮಲೆ (Sabarimala) ಅಯ್ಯಪ್ಪಸ್ವಾಮಿಯ ಸನ್ನಿಧಾನದಲ್ಲಿ ಈಗ ಧರ್ಮದಂಗಲ್ ಶುರುವಾಗಿದೆ. ಅಯ್ಯಪ್ಪ (Ayyappa) ನ ದರ್ಶನಕ್ಕೂ ಮುನ್ನಾ ಮಸೀದಿ ಭೇಟಿ ಈಗ ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.
ಕರಾವಳಿ ಬಳಿಕ ಬೆಂಗಳೂರಿಗೆ ಕಾಲಿಟ್ಟಿರುವ ಧರ್ಮ ದಂಗಲ್ ಕಿಚ್ಚು ದಿನೇ ದಿನೇ ಹಲವು ದೇಗುಲಗಳನ್ನು ವ್ಯಾಪಿಸುತ್ತಿದೆ. ಅಯ್ಯಪ್ಪನ ಸನ್ನಿಧಾನದಲ್ಲಿ ಈಗ ಧರ್ಮ ದಂಗಲ್ ಸ್ವರೂಪ ಪಡೆದುಕೊಂಡಿದೆ. ಮಾಲಾಧಾರಿಗಳು ಅಯ್ಯಪ್ಪನ 18 ಮೆಟ್ಟಿಲು ಹತ್ತುವ ಮುನ್ನ ಅಲ್ಲಿನ ವಾವರ್ (Vavar Mosque) ಮಸೀದಿಗೂ ಭೇಟಿ ಕೊಡುತ್ತಾರೆ. ಆದರೆ ಈಗ ಅಯ್ಯಪ್ಪ ಭಕ್ತರ ಈ ಮಸೀದಿ ಭೇಟಿ ಧರ್ಮ ದಂಗಲ್‍ಗೆ ಕಾರಣವಾಗಿದ್ದು, ಕೆಲ ಹಿಂದೂ ಸಂಘಟನೆಗಳು ಇದಕ್ಕೆ ಅಕ್ಷೇಪ ವ್ಯಕ್ತಪಡಿಸುತ್ತಿವೆ.
ಮಸೀದಿಗೆ ಭೇಟಿ ನೀಡೋದೇಕೆ..?: ಶಬರಿಮಲೆಯಲ್ಲಿ ದರ್ಶನಕ್ಕೂ ಮುನ್ನ ವಾವರ್ ಮಸೀದಿಗೆ ಭೇಟಿ ನೀಡೋದು ಕೆಲ ಭಕ್ತರ ವಾಡಿಕೆ. ಅಯ್ಯಪ್ಪನ ದರ್ಶನಕ್ಕೂ ಮುನ್ನ ವಾವರ್ ಸ್ವಾಮಿಗೆ ಮೊದಲ ನಮನ ಸಲ್ಲಿಕೆ. ಇದು ಸೌಹಾರ್ದತೆಯ ಸಂಕೇತ ಎನ್ನಲಾಗುತ್ತೆ. ಹುಲಿ ಹಾಲು (Tiger Milk) ತರಲು ಕಾಡಿಗೆ ಅಯ್ಯಪ್ಪ ಹೋದಾಗ ವಾವರ್ ಜೊತೆ ಕಾದಾಟ ನಡೆಸಲಾಗಿತ್ತು. ಕಾದಾಟದ ಬಳಿಕ ವಾವರ್ ಅಯ್ಯಪ್ಪನ ಸ್ನೇಹಿತನಾದ ಅನ್ನೋದು ಪ್ರತೀತಿ. ಹೀಗಾಗಿ ಇಲ್ಲಿ ಈಡುಗಾಯಿ ಒಡೆದು ಕಾಣಿಕೆ ಹಾಕೋದು ವಾಡಿಕೆಯಾಗಿದೆ. ಅಯ್ಯಪ್ಪನ ಭಕ್ತರನ್ನು ಕಾಡು ಪ್ರಾಣಿಗಳಿಂದ ವಾವರ್ ರಕ್ಷಿಸುತ್ತಾನೆ ಅನ್ನೋದು ನಂಬಿಕೆ ಇದೆ.
ಹಿಂದೂ ಸಂಘಟನೆ ವಿರೋಧ ಏಕೆ..?: ಇದೆಲ್ಲವೂ ಒಂದು ಕಟ್ಟುಕಥೆ. ಇದಕ್ಕೆ ಯಾವುದೇ ಪೌರಾಣಿಕ ಸಾಕ್ಷಿಗಳು ಇಲ್ಲ. ಮಸೀದಿಗೆ ಕಾಣಿಕೆ ಕೊಡುವುದರಿಂದ ಈ ಹಣ ದುರುಪಯೋಗವಾಗುತ್ತಿದೆ. ಹೀಗಾಗಿ ಭೇಟಿ ಕೊಡಬಾರದು, ಇದನ್ನು ನಂಬಬಾರದು. ಮೂರ್ತಿ ಪೂಜೆ ನಂಬದವರ ಬಳಿ ಕಾಣಿಕೆ ಹಾಕೋದು ತಪ್ಪು ಅನ್ನೋದು ಹಿಂದೂ ಸಂಘಟನೆಗಳ ವಾದವಾಗಿದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೆ ಹಿಂದೂ ಜನಜಾಗೃತಿ ವೇದಿಕೆ ಒತ್ತಾಯ
ಶಬರಿಮಲೆಯ ಭಕ್ತರು ವಾವರ್ ಮಸೀದಿಯ ಭೇಟಿಯ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದ್ದು ಇದರ ಬಗ್ಗೆ ಅಭಿಯಾನ ನಡೆಸೋಕೂ ಹಿಂದೂ ಸಂಘಟನೆಗಳು ರೆಡಿಯಾಗಿದೆ.
Live Tv
[brid partner=56869869 player=32851 video=960834 autoplay=true]
ವಾರಣಾಸಿ: ಜ್ಞಾನವಾಪಿ ಪ್ರಕರಣದಲ್ಲಿ ಅಂಜುಮನ್ ಇಂತೇಜಾಮಿಯಾ ಮಸೀದಿ ಪರ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ಅಭಯನಾಥ್ ಯಾದವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಭಾನುವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಬಳಿಕ ಅಭಯನಾಥ್ ಯಾದವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಾರಣಾಸಿಯ ಪಾಂಡೆಪುರ ನಿವಾಸಿಯಾದ ಯಾದವ್ ಅವರು 35 ವರ್ಷಗಳಿಂದ ವಕೀಲ ವೃತ್ತಿಯಲ್ಲಿದ್ದು, ಪತ್ನಿ, ಮಗ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಭಾನುವಾರ ರಾತ್ರಿ 10:30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಾದವ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅವರು ಬದುಕಲಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್
ಯಾದವ್ ಕಳೆದ ತಿಂಗಳು ಜ್ಞಾನವಾಪಿ ಪ್ರಕರಣದಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಮಸೀದಿ ಪರ ವಾದವನ್ನು ಮಂಡಿಸಿದ್ದರು. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರ ತಂಡದ ನೇತೃತ್ವ ವಹಿಸಿದ್ದರು. ಅವರ ಸಾವಿಗೆ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಸಂತಾಪ ಸೂಚಿಸಿದ್ದಾರೆ.
ಲಕ್ನೋ: ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗವನ್ನು ಪೂಜಿಸಲು ಅನುಮತಿ ನೀಡಬೇಕಾಗಿ ಕೋರಿ ಇತ್ತೀಚೆಗೆ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಕೆಲವು ದಿನಗಳ ಹಿಂದೆ 7 ಹಿಂದೂ ಮಹಿಳೆಯರ ಗುಂಪು ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಜಸ್ಟಿನ್ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಈ ಮನವಿಯನ್ನು ನಿರಾಕರಿಸಿದೆ. ಇದನ್ನೂ ಓದಿ: ಭ್ರಷ್ಟಾಚಾರದ ಹೆಮ್ಮರವೊಂದಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದಕ್ಕೆ ಬೀದಿಗಿಳಿದಿದ್ದಾರೆ: ಬಿಜೆಪಿ
ಈ ಹಿಂದೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗದ ರಚನೆಯನ್ನು ಮಸೀದಿಯ ಸಮಿತಿ ಅದು ಶಿವಲಿಂಗವಲ್ಲ, ಕಾರಂಜಿ ಎಂದು ವಾದಿಸಿತ್ತು. ಈ ವಿಚಾರವಾಗಿ ದೇಶಾದ್ಯಂತ ವಿವಾದ ಉಂಟಾಗಿದ್ದು, ಬಳಿಕ ಅಲ್ಲಿನ ಜಿಲ್ಲಾ ನ್ಯಾಯಾಲಯ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಆರಾಧನೆಯ ಹಕ್ಕನ್ನು ನಿರ್ಬಂಧಿಸಿ, ಆ ಸ್ಥಳವನ್ನು ರಕ್ಷಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಕೇಳಿಕೊಂಡಿತ್ತು.
Live Tv
[brid partner=56869869 player=32851 video=960834 autoplay=true]