Tag: Masala Pineapple Drink

  • ರಿಫ್ರೆಶ್ ಅನುಭವಕ್ಕೆ ಮಾಡಿ ಸವಿಯಿರಿ ಮಸಾಲಾ ಪೈನಾಪಲ್ ಡ್ರಿಂಕ್

    ರಿಫ್ರೆಶ್ ಅನುಭವಕ್ಕೆ ಮಾಡಿ ಸವಿಯಿರಿ ಮಸಾಲಾ ಪೈನಾಪಲ್ ಡ್ರಿಂಕ್

    ಪೈನಾಪಲ್ ಜ್ಯೂಸ್ ಅನ್ನು ನೀವೆಲ್ಲರೂ ಸವಿದಿರುತ್ತೀರಿ. ಆದರೆ ಅದೇ ಜ್ಯೂಸ್‌ಗೆ ಮಸಾಲೆಯ ಸ್ವಾದ ನೀಡಿ, ನಾಲಿಗೆಗೂ ಮಜವೆನಿಸುವ ರೆಸಿಪಿಯೊಂದನ್ನು ನಾವಿಂದು ನಿಮಗೆ ಹೇಳಿಕೊಡುತ್ತೇವೆ. ಇದೀಗ ಬೇಸಿಗೆ ಹತ್ತಿರವಾಗುತ್ತಿರುವುದರಿಂದ ದಾಹ ತಣಿಸಲು ಈ ರೆಸಿಪಿ ನಿಮ್ಮ ಸಹಾಯಕ್ಕೂ ಬರುತ್ತದೆ. ಮಸಾಲಾ ಪೈನಾಪಲ್ ಡ್ರಿಂಕ್ (Masala Pineapple Drink) ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ನೋಡಿ ತಿಳಿದುಕೊಳ್ಳಿ.

    ಬೇಕಾಗುವ ಪದಾರ್ಥಗಳು:
    ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಅನನಾಸು – ಎರಡೂವರೆ ಕಪ್
    ಸಣ್ಣಗೆ ಹೆಚ್ಚಿದ ಅನನಾಸು – ಅರ್ಧ ಕಪ್
    ಸಕ್ಕರೆ ಪುಡಿ – ಒಂದೂವರೆ ಟೀಸ್ಪೂನ್
    ಚಾಟ್ ಮಸಾಲಾ – ಅರ್ಧ ಟೀಸ್ಪೂನ್
    ಕಪ್ಪು ಉಪ್ಪು – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಚೆರಿ ಸ್ಮೂದಿ ಮಾಡಿ ಸವಿದು ಚಿಲ್ ಆಗಿ

    ಮಾಡುವ ವಿಧಾನ:
    * ಮೊದಲಿಗೆ ಅನನಾಸು ತುಂಡುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, 2 ಕಪ್ ತಣ್ಣಗಿನ ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ರುಬ್ಬಿದ ಜ್ಯೂಸ್ ಅನ್ನು ಒಂದು ಬೌಲ್‌ಗೆ ಹಾಕಿ, ಅದಕ್ಕೆ ಸಕ್ಕರೆ ಪುಡಿ, ಚಾಟ್ ಮಸಾಲಾ, ಕಪ್ಪು ಉಪ್ಪು ಹಾಗೂ ಜೀರಿಗೆ ಪುಡಿ ಹಾಕಿ, ಮಿಶ್ರಣ ಮಾಡಿ.
    * ಅದಕ್ಕೆ ಸಣ್ಣಗೆ ಹೆಚ್ಚಿದ ಅನನಾಸು ತುಂಡುಗಳನ್ನೂ ಸೇರಿಸಿ, ಮಿಶ್ರಣ ಮಾಡಿ.
    * ಈಗ ಮಸಾಲಾ ಪೈನಾಪಲ್ ಡ್ರಿಂಕ್ ತಯಾರಾಗಿದ್ದು, ಲೋಟಗಳಿಗೆ ಹಾಕಿ, ತಕ್ಷಣವೇ ಸವಿಯಿರಿ. ಇದನ್ನೂ ಓದಿ: ದೇಸೀ ಸಿಹಿಯ ಟಚ್ ನೀಡಿ ಚಾಕ್ಲೇಟ್ ಶೀರಾ ಮಾಡಿ