Tag: masala paratha

  • ನೀವು ಹೀಗೆ ಮಸಾಲೆ ಪರೋಟಾ ಮಾಡಿದ್ರೆ ಮಕ್ಕಳಿಗೆ ಸಖತ್ ಇಷ್ಟವಾಗುತ್ತೆ- ಒಮ್ಮೆ ಟ್ರೈ ಮಾಡಿ

    ನೀವು ಹೀಗೆ ಮಸಾಲೆ ಪರೋಟಾ ಮಾಡಿದ್ರೆ ಮಕ್ಕಳಿಗೆ ಸಖತ್ ಇಷ್ಟವಾಗುತ್ತೆ- ಒಮ್ಮೆ ಟ್ರೈ ಮಾಡಿ

    ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ. ಕೆಲವೊಮ್ಮೆ ನಮಗೆ ಉತ್ತರ ಭಾರತೀಯ ಶೈಲಿಯ ತಿಂಡಿಗಳು ಸಹ ಇಷ್ಟವಾಗುತ್ತದೆ. ಅದರಲ್ಲೂ ಪರೋಟಾ ಎಲ್ಲರ ನೆಚ್ಚಿನ ತಿಂಡಿಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಪರೋಟಾಗಳಲ್ಲಿ ಸಹ ಹಲವಾರು ವಿಧಗಳಲ್ಲಿ ಮಾಡುತ್ತೇವೆ. ನಾವು ಇಂದು ರುಚಿಯಾದ ಮಸಾಲೆ ಪರೋಟಾವನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ.

    ಬೇಕಾಗುವ ಸಾಮಗ್ರಿಗಳು:
    * ಬೆಳ್ಳುಳ್ಳಿ ಪೇಸ್ಟ್ – 3 ಚಮಚ
    * ಜೀರಿಗೆ ಪುಡಿ – 1 ಚಮಚ
    * ಗರಮ್ ಮಸಾಲಾ -1 ಚಮಚ
    * ಈರುಳ್ಳಿ-1
    * ಕಾಳುಮೆಣಸು ಪುಡಿ- 1 ಚಮಚ
    * ದನಿಯಾ ಪುಡಿ – 3 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಗೋಧಿ ಹಿಟ್ಟು- 1 ಕಪ್
    * ಅರಿಶಿನ ಪುಡಿ- ಸ್ವಲ್ಪ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ತೆಗೆದುಕೊಂಡು ಅಡುಗೆ ಎಣ್ಣೆ ಹಾಕಿ ಕಾಯಿಸಿ, ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟನ್ನು ಹಾಕಿ ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ.

    * ಅಗಲವಾಗಿ ಇದನ್ನು ಲಟ್ಟಿಸಿ ಮಧ್ಯಕ್ಕೆ ಬೇಯಿಸಿದ ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ

    * ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. ಪರೋಟಾವನ್ನು ಬಿಸಿದರೆ ರುಚಿಯಾದ ಪರೋಟ ಸವಿಯಲು ಸಿದ್ಧವಾಗುತ್ತದೆ.