Tag: Masala Jayaram

  • ಜೆಡಿಎಸ್ ನಂಬಿ ಮೋಸ ಹೋದ ಒಕ್ಕಲಿಗರು ಈಗ ಅಭಿವೃದ್ಧಿ ಕಡೆಗೆ ಮುಖ ಮಾಡಿದ್ದಾರೆ: ಮಸಾಲಾ ಜಯರಾಮ್

    ಜೆಡಿಎಸ್ ನಂಬಿ ಮೋಸ ಹೋದ ಒಕ್ಕಲಿಗರು ಈಗ ಅಭಿವೃದ್ಧಿ ಕಡೆಗೆ ಮುಖ ಮಾಡಿದ್ದಾರೆ: ಮಸಾಲಾ ಜಯರಾಮ್

    ತುಮಕೂರು: ಜೆಡಿಎಸ್ (JDS) ಪಕ್ಷ ಒಕ್ಕಲಿಗರನ್ನು (Okkaliga) ಕೇವಲ ಮತಕ್ಕಾಗಿ ಮಾತ್ರ ಬಳಸಿಕೊಂಡಿದೆ. ಅವರ ಅಭಿವೃದ್ಧಿ ಮಾಡಿಲ್ಲ. ಒಕ್ಕಲಿಗರು ಈಗ ಅಭಿವೃದ್ಧಿಗಾಗಿ ಬಿಜೆಪಿ (BJP) ಕಡೆ ಮುಖ ಮಾಡಿದ್ದಾರೆ ಎಂದು ತುರುವೇಕೆರೆ (Turuvekere) ಶಾಸಕ ಮಸಾಲಾ ಜಯರಾಮ್ (Masala Jayaram) ಹೇಳಿದ್ದಾರೆ.

    ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಒಕ್ಕಲಿಗ ಮತದಾರರು ಜೆಡಿಎಸ್ ನಂಬಿ ಮೋಸ ಹೋಗಿದ್ದಾರೆ. ದಬ್ಬೆಗಟ್ಟದಲ್ಲಿ ಒಕ್ಕಲಿಗರೇ ಹೆಚ್ಚಿದ್ದು, ಈ ಹಿಂದೆ ಯಾವ ಅಭಿವೃದ್ಧಿಯೂ ಆಗಿರಲಿಲ್ಲ. ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸವನ್ನು ನಾನು ಶಾಸಕನಾದ ಮೇಲೆ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು

    ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ 75 ವರ್ಷ ವಯಸ್ಸಾಗಿದೆ. ಅವರು ಈಗ ಶಾಸಕರಾಗಿ ಏನೂ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಮೊಮ್ಮಕ್ಕಳನ್ನು ನೋಡಿಕೊಂಡು ವಿಶ್ರಾಂತಿ ಪಡೆಯಲಿ. ಆಗಾಗಾ ಹೋಗಿ ಅವರ ಕುಶಲೋಪರಿ ವಿಚಾರಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ. ಈಗಾಗಲೇ ಅವರು ಮನೆಯಲ್ಲಿ ಇದ್ದಾರೆ. ಚುನಾವಣೆ (Election) ನಂತರ ಅದು ಮುಂದುವರೆಯಲಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ

  • ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್

    ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್

    ತುಮಕೂರು: ಲಾಕ್‍ಡೌನ್ ನಡುವೆಯೂ ಶುಕ್ರವಾರ ತುರುವೇಕೆರೆ ಶಾಸಕ ಮಸಾಲಾ ಜಯರಾಂ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಸಾಲೆ ಜಯರಾಂ ಅವರ ಬೆಂಬಲಿಗರಾದ ಗುಬ್ಬಿ ತಾಲೂಕು ಇಡಗೂರಿನ ರವಿ, ರಾಜೇನಹಳ್ಳಿಯ ವಸಂತಕುಮಾರ್ ಹಾಗೂ ಹೊನ್ನೇಗೌಡರ ಮೇಲೆ ಎಫ್‍ಐಆರ್ ದಾಖಲಾಗಿದೆ. ಲಾಕ್‍ಡೌನ್ ನಡುವೆ ಜನರನ್ನು ಸೇರಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಸಿಎಸ್ ಪುರ ಠಾಣೆಯ ಮುಖ್ಯ ಪೇದೆ ನವೀನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.

    ಶುಕ್ರವಾರ ಇಡಗೂರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ದ ಈ ಮೂವರು ವ್ಯಕ್ತಿಗಳು, ಹುಟ್ಟುಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಸಿ ಜನರ ಗುಂಪು ಸೇರಿಸಿದ್ದರು. ಶಾಸಕ ಮಸಾಲೆ ಜಯರಾಂ ಸಾಮಾಜಿಕ ಅಂತರ ಮರೆತು, ಮಾಸ್ಕ್ ಸಹ ಹಾಕಿಕೊಳ್ಳದೇ ಬೇಜವಾಬ್ದಾರಿತನ ಮೆರೆದಿದ್ದರು. ಅಷ್ಟೇ ಅಲ್ಲದೆ ಹುಟ್ಟುಹಬ್ಬ ನಿಮಿತ್ತ ಜನರಿಗೆ ಬಿರಿಯಾನಿ ಊಟ ಹಾಕಿಸಿದ್ದರು. ಹೀಗಾಗಿ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.

    ಕೊರೊನಾ ಭೀತಿಯಿಂದ ಲಾಕ್‍ಡೌನ್ ಘೋಷಣೆ ಆಗಿರುವ ಹೊತ್ತಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಬಂಡತನ ಪ್ರದರ್ಶನ ತೋರಿಸದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

  • ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

    ಅಂಗನವಾಡಿ ಆಹಾರದಲ್ಲಿ ಹುಳಗಳನ್ನ ಕಂಡು ಶಾಸಕರು ಕಂಗಾಲು

    ತುಮಕೂರು: ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ದಾಸ್ತಾನಿನಲ್ಲಿ ಹುಳಗಳನ್ನ ಕಂಡು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಕಂಗಾಲಾಗಿದ್ದಾರೆ.

    ತುರುವೇಕೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹಾವಾಳ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಆಹಾರ ಸರಬರಾಜು ದಾಸ್ತಾನು ಮಳಿಗೆಗೆ ಶಾಸಕ ಮಸಾಲೆ ಜಯರಾಮ್ ಧಿಡೀರ್ ಭೇಟಿ ಕೊಟ್ಟಾಗ ಈ ಅವ್ಯವಸ್ಥೆ ಬೆಳಕಿಗೆ ಬಂದಿದೆ.

    ಅಕ್ಕಿ ಮತ್ತು ರಾಗಿ ದಾಸ್ತಾನಿನಲ್ಲಿ ಬರೀ ಹುಳಗಳೇ ತುಂಬಿಕೊಂಡಿತ್ತು. ಹೀಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ ಶಾಸಕರು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಹಾರ ಪೂರೈಕೆ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ಅಲ್ಲದೆ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಸ್ಥಳದಲ್ಲಿಯೇ ಸಚಿವ ಮಾಧುಸ್ವಾಮಿ ಅವರಿಗೆ ಕರೆಮಾಡಿ ಒತ್ತಾಯಸಿದರು.

  • ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

    ಗಣಪತಿ ವಿಸರ್ಜನೆ ವೇಳೆ ಹಾಡಿ ರಂಜಿಸಿದ ಮಸಾಲೆ ಜಯರಾಮ್, ಜಗ್ಗೇಶ್

    ತುಮಕೂರು: ಗಣೇಶ ವಿಸರ್ಜನೆ ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಹಾಗೂ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಇಬ್ಬರು ಗಣ್ಯರು ತಮ್ಮ ಕಂಠಸಿರಿ ಮೂಲಕ ಹಾಡಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಜಗ್ಗೇಶ್ ಅವರು ಕನ್ನಡ ಸಿನಿಮಾದ ‘ಬಾರೇ ಬಾರೇ’ ಎಂಬ ಹಾಡನ್ನು ಹಾಡಿದರೆ, ಮಸಾಲೆ ಜಯರಾಮ್ ರಾಮನ ಅವತಾರ ಹಾಡನ್ನ ಹಾಡಿ ನೆರೆದವರು ತಲೆದೂಗುವಂತೆ ಮಾಡಿದ್ದಾರೆ.

    ಇಬ್ಬರೂ ಗಣ್ಯರು ತಲಾ ಎರಡೆರಡು ಹಾಡನ್ನ ಹಾಡಿದ್ದು, ಸುಮಾರು ಅರ್ಧಗಂಟೆಗಳ ಕಾಲ ಅಭಿಮಾನಿಗಳನ್ನು ರಂಜಿಸಿದರು. ಇಬ್ಬರು ನಾಯಕರ ಹಾಡಿಗೆ ತಲೆದೂಗಿದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೂಗಿದರು. ಮಸಾಲೆ ಜಯರಾಮ್ ಮೂಲತಃ ನಾಟಕ ಕಲಾವಿದರಾಗಿದ್ದರಿಂದ ಹಾಡು ಹಾಡಿದ ಅನುಭವ ಇತ್ತು. ಹೀಗಾಗಿ ಜಗ್ಗೇಶ್ ಅವರಿಗೆ ಜಯರಾಮ್ ಅವರು ಖುಷಿಯಿಂದ ಕಾರ್ಯಕ್ರಮದಲ್ಲಿ ಸಾಥ್ ನೀಡಿದರು.

  • ಶಾಸಕರ ದಸರಾ ವೈಭವ -ಮಸಾಲ ಜಯರಾಮ್ ಹಾಡಿಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ

    ಶಾಸಕರ ದಸರಾ ವೈಭವ -ಮಸಾಲ ಜಯರಾಮ್ ಹಾಡಿಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ

    ತುಮಕೂರು: ತುರುವೆಕೆರೆ ತಾಲೂಕಿನ ದೊಡ್ಡಮಲ್ಲಿಗೇರೆಯಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮಸಾಲ ಜಯರಾಮ್ ಸಖತ್ ಮನರಂಜನೆ ನೀಡುವ ಮೂಲಕ ದಸರಾ ವೈಭವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

    ದಸರಾ ಕಾರ್ಯಕ್ರಮದಲ್ಲಿ ರಂಜಿಸಿದ ಶಾಸಕ ಮಸಾಲ ಜಯರಾಮ್ ಹಾಡಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಲತಃ ನಾಟಕ ಕಲಾವಿದರಾಗಿರುವ ಶಾಸಕರು ದಸರಾ ಕಾರ್ಯಕ್ರಮದಲ್ಲಿ ಸಖತ್ ಮನರಂಜನೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ದೊಡ್ಡಮಲ್ಲಿಗೇರೆಯಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹೇಳಿ ಮಸಾಲ ಜಯರಾಮ್ ಎಲ್ಲರ ಮನ ಗೆದ್ದಿದ್ದಾರೆ.

    ರಾಮನ ಅವತಾರ ರಘುಕುಲ ಸೋಮನ ಅವತಾರ ಸಂಪೂರ್ಣ ಹಾಡು ಹಾಡಿ ಮಿಂಚಿದ್ದಾರೆ. ಶಾಸಕರ ಹಾಡಿಗೆ ಕಾರ್ಯಕ್ರಮದಲ್ಲಿ ನೆರೆದ ಪ್ರೇಕ್ಷಕರು ತಲೆದೂಗಿದ್ದು, ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರಿಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ಅವರು ಹಾಡು ಹೇಳಿದರು. ಹೀಗಾಗಿ ಶಾಸಕರ ಗಾಯನ ಕೇಳಿ ಕಾರ್ಯಕರ್ತರು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಜೊತೆಗೆ ವೇದಿಕೆ ಮೇಲೆ ಮಸಾಲ ಜಯರಾಮ್ ಅವರು ಮೈಕ್ ಹಿಡಿದು ಹಾಡು ಹೇಳುತ್ತಾ ಎಲ್ಲರನ್ನು ರಂಜಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.

  • ಹೇಮಾವತಿ ಎಸ್ಕೇಪ್ ಗೇಟಿಗೆ ಹಾನಿಗೈದು ನೀರು ಹರಿಸಿದ ಜೆಡಿಎಸ್ ಮಾಜಿ ಶಾಸಕ

    ಹೇಮಾವತಿ ಎಸ್ಕೇಪ್ ಗೇಟಿಗೆ ಹಾನಿಗೈದು ನೀರು ಹರಿಸಿದ ಜೆಡಿಎಸ್ ಮಾಜಿ ಶಾಸಕ

    -ಪ್ರಶ್ನಿಸಿದ ಪೊಲೀಸ್, ಎಇಇಗೆ ನಿಂದನೆ

    ತುಮಕೂರು: ಹೇಮಾವತಿಯ ಎಸ್ಕೇಪ್ ಗೇಟನ್ನು ತೆಗೆಸಿ ಅದಕ್ಕೆ ಹಾನಿಯುಂಟು ಮಾಡಿ, ನೀರನ್ನ ಹರಿಸಿಕೊಳ್ಳುವುದರ ಮೂಲಕ ತುರುವೇಕೆರೆ ಜೆಡಿಎಸ್‍ನ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ಗೂಂಡಾವರ್ತನೆ ತೋರಿದ್ದಾರೆ.

    ಶುಕ್ರವಾರ ನಡೆದ ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಈ ಸಭೆಯ ನಿರ್ಧಾರಕ್ಕೆ ಕ್ಯಾರೇ ಎನ್ನದ ಕೃಷ್ಣಪ್ಪ ಅವರು ಕುಣಿಗಲ್‍ಗೆ ನೀರು ಹರಿಯುವ ಮಾರ್ಗ ಮಧ್ಯದ ಡಿ.ಎಸ್.ಪಾಳ್ಯದಲ್ಲಿ ಗೇಟ್ ತೆರೆದು ನೀರು ಹರಿಸಿ ಗೂಂಡಾವರ್ತನೆ ಮೆರೆದಿದ್ದಾರೆ. ಈ ವೇಳೆ ಎಸ್ಕೇಪ್ ಗೇಟಿಗೆ ಹಾನಿ ಉಂಟಾಗಿದೆ.

    ತಮ್ಮ ಬೆಂಬಲಿಗರ ಸಹಾಯದಿಂದ ಒಂದು ಅಡಿ ಮೇಲಕ್ಕೆ ಎಸ್ಕೇಪ್ ಗೇಟ್ ಎತ್ತಿಸಿ, ನೀರು ಹರಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಜಲಾಶಯದ ಎಇಇ ವಿಜಯಲಕ್ಷ್ಮೀ ಅವರು ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದರೂ ಲೆಕ್ಕಿಸದೆ, ಅಧಿಕಾರಿಯನ್ನು ನಿಂದಿಸಿ ಹೇಮಾವತಿ ನೀರು ಹರಿಸಿಕೊಂಡು ದರ್ಪ ತೋರಿದ್ದಾರೆ.

    ಅಲ್ಲದೆ ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆಯೂ ವಾಗ್ದಾಳಿ ನಡೆಸಿ, ಯಾರ ಮಾತನ್ನು ಕೇಳದೆ ನೀರು ಹರಿಸಿಕೊಂಡಿದ್ದಾರೆ. ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸುವಂತಿಲ್ಲ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಕೃಷ್ಣಪ್ಪ ಅವರು ನೀರು ಹರಿಸಿದ್ದಾರೆ.

    ತುರುವೇಕೆರೆಯಲ್ಲಿ ಸದ್ಯ ಬಿಜೆಪಿಯ ಮಸಾಲ ಜಯರಾಮ್ ಶಾಸಕರಾಗಿದ್ದಾರೆ. ಆದರೆ ಜೆಡಿಎಸ್‍ನ ಮಾಜಿ ಶಾಸಕ ಈ ರೀತಿ ದರ್ಪ ಮೆರೆದಿರುವುದು ಬಿಜೆಪಿಯವರ ಕೆಂಗಣ್ಣಿಗೆ ಕಾರಣವಾಗಿದೆ.

  • ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಿಜೆಪಿ ಶಾಸಕ

    ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಿಜೆಪಿ ಶಾಸಕ

    ತುಮಕೂರು: ಹೇಮಾವತಿ ನೀರಿಗಾಗಿ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

    ಜಯರಾಂ ಅವರು ತನ್ನ ಕ್ಷೇತ್ರದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಇಂದು ತುರುವೇಕೆರೆ ತಾಲೂಕಿನ ಅಡವನಹಳ್ಳಿ ಹೇಮಾವತಿ ನಾಲೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಡಿಸಿಎಂ ಡಾ ಜಿ.ಪರಮೇಶ್ವರ್ ಹೇಮಾವತಿ ನೀರು ಹರಿಸಲು ತಾರತಮ್ಯ ಮಾಡಿದ್ದು, ತನ್ನ ಕ್ಷೇತ್ರವನ್ನ ಕಡೆಗಣಿಸಿದ್ದಾರೆ ಎಂದು ಆರೋಪ ಮಾಡಿದರು.

    ಒಂಭತ್ತು ಕ್ಷೇತ್ರವನ್ನು ಬರಗಾಲ ಎಂದು ಘೋಷಿಸಿದ್ದಾರೆ. ಆದರೆ ನಮ್ಮ ಕ್ಷೇತ್ರವನ್ನು ಘೋಷಣೆ ಮಾಡಿಲ್ಲ. ತಾನು ಬಿಜೆಪಿ ಶಾಸಕ ಎಂದು ತನ್ನ ಕ್ಷೇತ್ರ ಕಡೆಗಣಿಸಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸಮುದ್ರದ ಪಕ್ಕದಲ್ಲಿದ್ದರೂ ಕುಡಿಯಲು ನೀರು ಸಿಗುತ್ತಿಲ್ಲ ಅಂತಹ ಪರಿಸ್ಥಿತಿ ನನ್ನ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ತುರುವೇಕೆರೆ ತಾಲೂಕಿನ ಮೂಲಕ ಅನೇಕ ತಾಲೂಕಿಗೆ ನೀರು ಹರಿಯುತ್ತಿದೆ. ಆದರೆ ನನ್ನ ತಾಲೂಕಿಗೆ ನೀರು ಬರುತ್ತಿಲ್ಲ. ಇಂದು ಇಲ್ಲಿಗೆ ಬಂದಿರುವ ಜನರು ಊಟ ಮಾಡದೇ ಬಂದಿದ್ದಾರೆ. ಅವರ ಕಷ್ಟ ನಮಗೆ ಗೊತ್ತು ಎಂದು ಉಪವಾಸ ಸತ್ಯಾಗ್ರಹ ಆರಂಭಿಸಿ ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಶಾಸಕರು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv