Tag: masala dosa ice cream

  • ಫುಡ್‍ಪ್ರಿಯರ ಗಮನಸೆಳೆದ ಐಸ್‍ಕ್ರೀಂ ಮಸಾಲಾ ದೋಸೆ- ವೀಡಿಯೋ ವೈರಲ್

    ಫುಡ್‍ಪ್ರಿಯರ ಗಮನಸೆಳೆದ ಐಸ್‍ಕ್ರೀಂ ಮಸಾಲಾ ದೋಸೆ- ವೀಡಿಯೋ ವೈರಲ್

    ನವದೆಹಲಿ: ಐಸ್‍ಕ್ರೀಂ, ದೊಸೆ ಅಂದ್ರೆ ಯಾರಿಗೆ ತಾನೇ ಇಷ್ಟಿಲ್ಲ ಹೇಳಿ. ಇಲ್ಲೊಬ್ಬರು ಮಸಾಲಾ ದೊಸೆ ಹಾಗೂ ಐಸ್‍ಕ್ರೀಂ ಎರಡನ್ನು ಮಿಕ್ಸ್ ಮಾಡಿ ಮಸಾಲಾ ದೋಸೆ ಐಸ್‍ಕ್ರೀಂ ಅನ್ನು ಮಾಡಿಕೊಡುತ್ತಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಫುಡ್‍ಪ್ರಿಯರನ್ನು ತಮ್ಮತ್ತ ಗಮನ ಸೆಳೆಯಲು ವ್ಯಾಪಾರಸ್ಥರೂ ವಿಭಿನ್ನ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಕಪ್ ಐಸ್‍ಕ್ರೀಂ, ಕೋನ್ ಐಸ್‍ಕ್ರೀಂ, ಐಸ್‍ಕ್ಯಾಂಡಿ ಹೀಗೆ ವಿವಿಧ ರೀತಿಯ ಐಸ್‍ಕ್ರೀಂಗಳನ್ನು ನಾವು ನೋಡಿದ್ದೇವೆ. ಇದೀಗ ಮಸಾಲಾ ದೋಸೆ ಐಸ್‍ಕ್ರೀಂ ಸರದಿ. ಇದನ್ನು ಕೇಳಲು ನಿಮಗೆ ವಿಚಿತ್ರ ಅನಿಸಬಹುದು. ಆದರೆ ದೋಸೆಯ ಬದಲು ಐಸ್‍ಕ್ರೀಂ ಅನ್ನು ರೋಲ್ ಮಾಡಿ ಅದಕ್ಕೆ ಪಲ್ಯ ಹಾಗೂ ಚಟ್ನಿಯನ್ನು ಹಾಕಿಕೊಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.

    ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಮಸಾಲಾ ದೋಸೆ ಐಸ್‍ಕ್ರೀಂ ತಯಾರಿಸುತ್ತಿದ್ದಾರೆ. ಮಸಾಲಾ ದೋಸೆ ಹಾಗೂ ಅದರಲ್ಲಿರುವ ಪಲ್ಯದ ಜೊತೆಗೆ ವೆನಿಲ್ಲಾ ಐಸ್‍ಕ್ರೀಂನ್ನು ಸೇರಿಸುತ್ತಾರೆ. ನಂತರ ಐಸ್‍ಕ್ರೀಂನ್ನು ರೋಲ್ ಮಾಡಿ ಅದಕ್ಕೆ ಚಟ್ನಿ ಮತ್ತು ಪಲ್ಯವನ್ನು ಸೇರಿಸುತ್ತಿರುವ ಈ ವೀಡಿಯೋಕ್ಕೆ ನೆಟ್ಟಿಗರು ಫುಲ್ ಫೀದಾ ಆಗಿದ್ದಾರೆ. ಇದನ್ನೂ ಓದಿ: ರಾಜಪಥ್‍ನಲ್ಲಿ ಗಣರಾಜ್ಯೋತ್ಸವ ಪರೇಡ್‍ಗೆ ಭರ್ಜರಿ ಸಿದ್ಧತೆ

    ಈ ಮಸಾಲಾ ದೋಸೆ ಐಸ್‍ಕ್ರೀಂ ಅನ್ನು ದೆಹಲಿಯ ವ್ಯಾಪಾರಸ್ಥರೊಬ್ಬರು ಮಾಡಿಕೊಡುತ್ತಾರೆ. ಈ ವೀಡಿಯೋವನ್ನು ದಿ ಗ್ರೇಟ್ ಇಂಡಿಯಾ ಫುಡೀ ಎಂಬ ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, 18 ಸಾವಿರಕ್ಕೂ ಅಧಿಕ ಲೈಕ್ ಬಂದಿದೆ. ಇದನ್ನೂ ಓದಿ:  ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ