Tag: Maryada Hatya

  • ಅನ್ಯ ಜಾತಿಯ ಯುವಕನ ಜೊತೆ ಬಾಲಕಿ ಓಡಿ ಹೋಗಿದ್ದಕ್ಕೆ ಮರ್ಯಾದಾ ಹತ್ಯೆ!

    ಅನ್ಯ ಜಾತಿಯ ಯುವಕನ ಜೊತೆ ಬಾಲಕಿ ಓಡಿ ಹೋಗಿದ್ದಕ್ಕೆ ಮರ್ಯಾದಾ ಹತ್ಯೆ!

    ದಾವಣಗೆರೆ: ಅನ್ಯ ಜಾತಿಯ ಯುವಕನ ಜೊತೆ ಬಾಲಕಿ ಓಡಿ ಹೋಗಿದ್ದಕ್ಕೆ ಆಕೆಯ ಅಜ್ಜಿ ಹಾಗೂ ತಂದೆ ಮರ್ಯಾದಾ ಹತ್ಯೆ ನಡೆಸಿದ್ದಾರೆ ಎನ್ನುವ ಆರೋಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಿಂದ ಕೇಳಿ ಬಂದಿದೆ.

    ಗ್ರಾಮದ ಪರಮೇಶ್ವರಪ್ಪ, ಪುಪ್ಪಾ ದಂಪತಿಗಳ ಹಿರಿಯ ಮಗಳು (ಅಪ್ರಾಪ್ತ ಬಾಲಕಿ) ಕಳೆದ ಕೆಲ ತಿಂಗಳ ಹಿಂದೆ ಅದೇ ಗ್ರಾಮದ ಅನ್ಯ ಜಾತಿಯ ಯುವಕ ಪ್ರವೀಣ್ ಎಂಬಾತನನ್ನು ಪ್ರೀತಿ ಮಾಡಿ ಆತನೊಂದಿಗೆ ಓಡಿ ಹೋಗಿದ್ದಳು.

    ಏನಿದು ಪ್ರಕರಣ?
    ಬಾಲಕಿ ಕಳೆದ ಕೆಲ ತಿಂಗಳ ಹಿಂದೆ ಅದೇ ಗ್ರಾಮದ ಅನ್ಯ ಜಾತಿಯ ಯುವಕ ಪ್ರವೀಣ್ ಎಂಬಾತನನ್ನು ಪ್ರೀತಿ ಮಾಡಿ ಆತನೊಂದಿಗೆ ಓಡಿ ಹೋಗಿದ್ದಳು. ಇದಾದ ಬಳಿಕ ಬಾಲಕಿಯ ಪೋಷಕರು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಕರೆದುಕೊಂಡು ಬಂದು ಪೋಸ್ಕೋ ಕಾಯ್ದೆಯಡಿ ಪ್ರಿಯಕರ ಪ್ರವೀಣ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದಾದ ಬಳಿಕ ಬಾಲಕಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ತಂದೆ ಪರಮೇಶ್ವರಪ್ಪ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಗುಣ ಮುಖಳಾಗಿದ್ದಳು.

    ಕೊಲೆ ಮಾಡಿದ್ದು ಹೇಗೆ?
    ಕಳೆದ ಜೂನ್ 26 ರಂದು ಬಾಲಕಿಯ ತಂದೆ ಪರಮೇಶ್ವರಪ್ಪ, ತಾಯಿ ಪುಪ್ಪಾ ಉಡುಪಿಗೆ ಹೋದಾಗ ಮತ್ತೆ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಯುವತಿಯ ಅಜ್ಜಿ ದ್ರಾಕ್ಷಾಯಣಮ್ಮ ಮಗ ಪರಮೇಶ್ವರಪ್ಪನಿಗೆ ಫೋನ್ ಮಾಡಿ ಮಗಳು ವಿಷ ಕುಡಿದಿದ್ದಾಳೆ ಎಂದು ಹೇಳಿದ್ದಾಳೆ. ಆಗ ಪರಮೇಶ್ವರಪ್ಪ ಅವಳು ಬದುಕಿದ್ದರೇ ನಮ್ಮ ಮರ್ಯಾದೆ ಕಳೆಯುತ್ತಾಳೆ. ಪದೇ ಪದೇ ಇದೇ ರೀತಿ ಮಾಡುತ್ತಾಳೆ. ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡು ಎಂದು ಹೇಳಿದ್ದಾನೆ. ಮಗ ಹೇಳಿದಂತೆ ಅಜ್ಜಿ ಮೊಮ್ಮಗಳನ್ನು ಮನೆಯಲ್ಲಿದ್ದ ದಾರದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ ಅಜ್ಜಿ ಮೊಮ್ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದರೆ ಇತ್ತ ತಂದೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಮಗಳು ಸತ್ತಿದ್ದಕ್ಕೆ ಕಣ್ಣೀರು ಸುರಿಸಿದ್ದ.

    ಸತ್ಯ ಬೆಳಕಿಗೆ ಬಂದಿದ್ದು ಹೇಗೆ?
    ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗೊಂಡ ಬಾಲಕಿಯ ತಾಯಿ ಪುಷ್ಪಾ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಎಫ್‍ಎಸ್‍ಎಲ್‍ಗೆ ಕಳುಹಿಸಿಕೊಟ್ಟಿದ್ದಾರೆ. ವರದಿಯಲ್ಲಿ ಬಾಲಕಿಯನ್ನು ಹೊಡೆದು ಕೊಲೆ ಮಾಡಲಾಗಿದೆ ಎಂದು ವರದಿ ಬಂದಿದೆ. ಆಗ ಪೊಲೀಸರು ಅಜ್ಜಿ ದ್ರಾಕ್ಷಾಯಣಮ್ಮ, ತಂದೆ ಪರಮೇಶ್ವರಪ್ಪನನ್ನು ಕರೆಯಿಸಿದ್ದಾರೆ. ಆಗ ಅಜ್ಜಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಇದಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ತಂದೆ ಪರಮೇಶ್ವರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

  • ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ಮೈಸೂರು: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಪೋಷಕರೇ ತಮ್ಮ ಮಗಳನ್ನ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾದ ಸುಷ್ಮಾ(20) ಮೃತ ಯುವತಿ. ಪೋಷಕರು ಸುಷ್ಮಾಳಿಗೆ ಜಮೀನಿನಲ್ಲಿ ವಿಷ ಕುಡಿಸಿ ಸುಟ್ಟು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸುಷ್ಮಾ ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇದಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿ, ಆಕೆಯನ್ನು ಕಾಲೇಜಿನಿಂದ ಬಿಡಿಸಿದ್ದರು ಎಂದು ತಿಳಿದುಬಂದಿದೆ.

    ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿದೆ.

    ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.