Tag: Mary kom

  • ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

    ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

    ನವದೆಹಲಿ: ಆರು ಬಾರಿ ವಿಶ್ವ ಚಾಂಪಿಯನ್ ಹಾಗೂ 2012 ರ ಒಲಿಂಪಿಕ್ ಪದಕ ವಿಜೇತೆಯಾಗಿರುವ ಮಾಂಗ್ಟೆ ಚುಂಗ್ನೈಜಾಂಗ್ ಮೇರಿ ಕೋಮ್ (Mary Kom) ಬಾಕ್ಸಿಂಗ್‌ಗೆ (Boxing) ನಿವೃತ್ತಿ ಘೋಷಿಸಿದ್ದಾರೆ.

    ಇಂಟರ್‌ ನ್ಯಾಷನಲ್‌ ಬಾಕ್ಸಿಂಗ್‌ ಅಸೋಸಿಯೇಷನ್ ​​(IBA) ನಿಯಮದ ಪ್ರಕಾರ, 40 ವರ್ಷ ವಯಸ್ಸಿನವರೆಗೆ ಮಾತ್ರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಆದರೆ ಇದೀಗ ಮೇರಿಯವರಿಗೆ 41 ವರ್ಷ ವಯಸ್ಸಾಗಿದ್ದರಿಂದ ಬುಧವಾರ ನಿವೃತ್ತಿ (Retirement) ಘೋಷಣೆ ಮಾಡಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಬಾಕ್ಸಿಂಗ್‌ ನಲ್ಲಿ ಹೋರಾಡುವ ಹಸಿವು ನನಗೆ ಇನ್ನೂ ಇದೆ. ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾನು ಬಲವಂತವಾಗಿ ತೊರೆಯುತ್ತಿದ್ದೇನೆ ನಾನು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ತುಂಬಾ ದುಃಖದಿಂದ ಇಂದು ನನ್ನ ಬಾಕ್ಸಿಂಗ್‌ ಗ್ಲೌಸ್‌ ಅನ್ನು ಬಿಚ್ಚಿಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ರಿಯಾಯಿತಿ ದರದಲ್ಲಿ ಅಯೋಧ್ಯೆಗೆ ಟೂರ್ ಪ್ಲ್ಯಾನ್- ಬಿಜೆಪಿಗೆ ಕಾಂಗ್ರೆಸ್ ಟಕ್ಕರ್

    ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊತೆಗೆ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು. ಅವರು 2005, 2006, 2008 ಮತ್ತು 2010 ಆವೃತ್ತಿಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದರು. 2008ರಲ್ಲಿ ಅವಳಿ ಮಕ್ಕಳು ಹಾಗೂ 2012 ರ ಒಲಿಂಪಿಕ್ ಪದಕವನ್ನು ಗೆದ್ದ ನಂತರ ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದರು.

  • ನಾವು ಭಾರತೀಯರಾಗಿರುವುದೇ ಹೆಮ್ಮೆ – ಅಮೃತಮಹೋತ್ಸವ ಸಂಭ್ರಮಿಸಿದ ಕ್ರೀಡಾ ತಾರೆಗಳು

    ನಾವು ಭಾರತೀಯರಾಗಿರುವುದೇ ಹೆಮ್ಮೆ – ಅಮೃತಮಹೋತ್ಸವ ಸಂಭ್ರಮಿಸಿದ ಕ್ರೀಡಾ ತಾರೆಗಳು

    ಮುಂಬೈ: 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಸಾರ್ಥಕಗೊಳಿಸಿದರು. ಬಳಿಕ ಪ್ರಧಾನಿ ಮೋದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

    ಇಡೀ ದೇಶದ ಜನರು ಮನೆ-ಮನೆಯಲ್ಲೂ ಧ್ವಜ ಹಾರಿಸುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ. ಇದಕ್ಕೆ ಭಾರತದ ಕ್ರೀಡಾ ತಾರೆಗಳೂ ಹೊರತಾಗಿಲ್ಲ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೇರಿ ಹಲವರು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ.

    ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ರಾಷ್ಟ್ರಧ್ವಜ ಹಿಡಿದ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿರುವ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, `ನಾನು ಭಾರತೀಯನೆಂದು ಹೇಳಲು ಹೆಮ್ಮೆ ಪಡುತ್ತೇನೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದ್ದಾರೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಬಜನ್ ಸಿಂಗ್, ನಮ್ಮ ರಾಷ್ಟ್ರಧ್ವಜ ಹಿಂದಿನ ತ್ಯಾಗ ಬಲಿದಾನಗಳ ಸಂಕೇತ, ವರ್ತಮಾನದ ಸಮೃದ್ಧಿ ಹಾಗೂ ಭವಿಷ್ಯದ ಭರವಸೆಗಳ ಸಂಕೇತವಾಗಿದೆ ಎಲ್ಲರೂ ಅದಕ್ಕೆ ಸಲ್ಯೂಟ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು – ರಾಸ್‌ ಟೇಲರ್‌ ರೋಚಕ ಅನುಭವ

    ಇದೇ ರೀತಿ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಚೇತೇಶ್ವರ್ ಪೂಜಾರ, ಜಸ್ಪಿತ್ ಬುಮ್ರಾ, ಶಿಖರ್ ಧವನ್, ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಕ್ಸಿಂಗ್ ಮಾಜಿ ಕ್ರೀಡಾಪಟು ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮೊದಲಾದವರು ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.

    ವಿದೇಶಿ ಕ್ರೀಡಾ ತಾರೆಗಳಿಂದಲೂ ವಿಶ್: ಇನ್ನೂ ಭಾರತೀಯರು ಮಾತ್ರವಲ್ಲದೇ ವಿದೇಶಿ ಕ್ರಿಕೆಟಿಗರೂ ಶುಭ ಕೋರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಡೇರೆನ್ ಸಾಮಿ ಶುಭ ಕೋರಿದ್ದಾರೆ. ಡೇವಿಡ್ ವಾರ್ನರ್ ನನ್ನೆಲ್ಲಾ ಭಾರತೀಯ ಕುಟುಂಬದ ಸ್ನೇಹಿತರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನೂ ಡೇರೆನ್ ಸಾಮಿ `ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು ಭಾರತದಲ್ಲೇ’ ಎಂದು ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಟೋಕಿಯೋ ಒಲಿಂಪಿಕ್ಸ್-21ನೇ ಕ್ರಮಾಂಕದಲ್ಲಿ ಧ್ವಜ ಹಿಡಿದು ಆಗಮಿಸಿದ ಭಾರತ ತಂಡ

    ಟೋಕಿಯೋ: 2021ರ ಕ್ರೀಡಾ ಜಾತ್ರೆ ಟೋಕಿಯೋ ಒಲಿಂಪಿಕ್ಸ್ ಸರಳವಾಗಿ ಇಂದು ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ 20 ಮಂದಿ ಅಥ್ಲೀಟ್ಸ್ ಗಳು ಭಾಗವಹಿಸಿದರು. 21ನೇ ಕ್ರಮಾಂಕದಲ್ಲಿ ಭಾರತ ತಂಡ ತ್ರಿವರ್ಣ ಧ್ವಜ ಹಿಡಿದು ಪಥಸಂಚಲನದಲ್ಲಿ ಭಾಗವಹಿಸಿತು.

    ಜಪಾನ್‍ನ ಟೋಕಿಯೋದಲ್ಲಿ 2020ರಲ್ಲಿ ನಡೆಯ ಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಕೊರೊನಾದಿಂದಾಗಿ ಒಂದು ವರ್ಷದ ಬಳಿಕ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡು ಆರಂಭಗೊಂಡಿದೆ. ಉದ್ಘಾಟನ ಸಮಾರಂಭದ ಪಥಸಂಚಲನದಲ್ಲಿ ಭಾರತ 20 ಮಂದಿ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಮೇರಿ ಕೋಮ್ ಭಾರತ ತ್ರಿವರ್ಣ ಧ್ವಜ ಹಿಡಿದು ಜಪಾನ್‍ನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಹೆಜ್ಜೆ ಇಟ್ಟರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಲು ಸಜ್ಜಾದ ಭಾರತೀಯ ಕ್ರೀಡಾಪಟುಗಳು

    ಜಪಾನಿನ ವರ್ಣಮಾಲೆಯ ಅಕ್ಷರದ ಕ್ರಮದಂತೆ ರಾಷ್ಟ್ರಗಳ ಪಥಸಂಚಲನ ನಡೆಯಿತು. ಈ ಪ್ರಕಾರ ಭಾರತಕ್ಕೆ ವರ್ಣಮಾಲೆಯ 21 ಅಕ್ಷರವಾಗಿ ಗಮನ ಸೆಳೆಯಿತು. ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆರಂಭಕಂಡ ಒಲಿಂಪಿಕ್ಸ್ ನಲ್ಲಿ ಕೆಲ ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆಯಿತು. ಒಲಿಂಪಿಕ್ಸ್ ರಿಂಗ್‍ನಲ್ಲಿ ನೃತ್ಯ, ಲೈಟಿಂಗ್ ಕಲರವ ಸೆರಿದಂತೆ ಕೆಲ ಅಚ್ಚುಕಟ್ಟಾದ ಕಾರ್ಯಕ್ರಮಗಳು ನೋಡುಗರ ಗಮನಸೆಳೆಯಿತು.

  • ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ಕಂಚಿನ ಪದಕಕ್ಕೆ ಮುತ್ತಿಟ್ಟ ಮೇರಿ ಕೋಮ್

    ರಷ್ಯಾ: ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಸೆಮಿಫೈನಲ್ ನಲ್ಲಿ ಯುರೋಪಿಯನ್ ಚಾಂಪಿಯನ್ ಟಿರ್ಕಿಯ ಬುಸೆನಾಜ್ ಕೈಕಿರೊಗ್ಲೂ ವಿರುದ್ಧ 4-1 ಅಂತರದಿಂದ ಮೇರಿ ಕೋಮ್ ಶರಣಾಗುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯ್ತು.

    36 ವರ್ಷದ ಮೇರಿ ಕೋಮ್ ಇಂದು ನಡೆದ ಪಂದ್ಯದಲ್ಲಿ ಆರಂಭದಿಂದ ತಾಳ್ಮೆಯ ಪ್ರದರ್ಶನ ತೋರಿದರು. ಮೊದಲ ಸುತ್ತಿನಲ್ಲಿ ಮೇರಿ ಕೋಮ್ ಅಂಕವನ್ನು ತಮ್ಮದಾಗಿಸಿಕೊಂಡರು. ಮುಂದಿನ ಮೂರು ಸುತ್ತುಗಳಲ್ಲಿ ಕೈಕಿರೊಗ್ಲೂ ಮುನ್ನಡೆ ಕಾಯ್ದುಕೊಂಡು ಫೈನಲ್ ಗೆ ಲಗ್ಗೆ ಇಟ್ಟರು. ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಕಂಚು ಸೇರಿದಂತೆ (ಚಿನ್ನ-6, ಬೆಳ್ಳಿ-1, ಕಂಚು-1) ಒಟ್ಟು ಎಂಟು ಪದಕಗಳನ್ನು ಪಡೆದುಕೊಂಡಿದ್ದಾರೆ.

    ಇತ್ತ ಭಾರತದಿಂದ ಲೊವಲಿನಾ ಬೊರಗೊಹೆನ (69 ಕೆ.ಜಿ.), ಜಮುನಾ ಬೋರೋ (54 ಕೆಜಿ) ಮತ್ತು ಮಂಜು ರಾಣಿ (48 ಕೆಜಿ) ಇಂದು ಸೆಮಿಫೈನಲ್ ನಲ್ಲಿ ಆಡಲಿದ್ದಾರೆ. ಮೇರಿಕೋಮ್ ಮೊದಲ ಬಾರಿಗೆ 2001ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2002, 2005, 2006, 2008, 2010 ಮತ್ತು 2018ರಲ್ಲಿ ಚಿನ್ನದ ಪದಕದ ಒಡತಿಯಾಗಿದ್ದಾರೆ.

  • 2019ರ ಭಾರತದ ಅತಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿ ಮೋದಿ – ಸಮೀಕ್ಷೆ

    2019ರ ಭಾರತದ ಅತಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿ ಮೋದಿ – ಸಮೀಕ್ಷೆ

    ನವದೆಹಲಿ: ಭಾರತದ ಪ್ರಧಾನಿ ಮೋದಿ ಅವರು 2019 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಯುಕೆ ಮೂಲದ ಯೂಗೂವ್ ಎಂಬ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಮೋದಿ ಅವರು ಭಾರತದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದರ ಜೊತೆಗೆ ವಿಶ್ವದಲ್ಲೇ ಅತಿ ಹೆಚ್ಚು ಮೆಚ್ಚುಗೆ ಪಡೆದವರ ಪಟ್ಟಿಯಲ್ಲಿ 6 ನೇ ಸ್ಥಾನ ಪಡೆದಿದ್ದಾರೆ.

    ಈ ಪಟ್ಟಿಯಲ್ಲಿ ಕಳೆದ ವರ್ಷ ಮೋದಿ ಅವರು ಎಂಟನೇ ಸ್ಥಾನದಲ್ಲಿ ಇದ್ದರು ಈ ವರ್ಷ ಆರನೇ ಸ್ಥಾನಕ್ಕೆ ಬಂದಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಏಕೈಕ ರಾಜಕಾರಣಿಯಾಗಿದ್ದಾರೆ. ಮಹಿಳೆ ವಿಭಾಗದಿಂದ ಬಾಕ್ಸರ್ ಮೇರಿ ಕೂಮ್ ಅವರು ಭಾರತದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯಾಗಿದ್ದಾರೆ.

    ಪ್ರಧಾನಿ ಮೋದಿ ಅವರ ಮೆಚ್ಚುಗೆಯ ಅಂಕ ವಿಶ್ವಾದ್ಯಂತ ಶೇಕಡಾ 4.8 ರಷ್ಟಿದೆ. ಮೋದಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಿಂದ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದ್ದು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದೆ ಸ್ಮೃತಿ ಇರಾನಿ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

    ಭಾರತದಲ್ಲಿ ಮೋದಿ ಅವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಎಂ.ಎಸ್ ಧೋನಿ ಅವರ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರ ನಂತರ ಮೂರನೇ ಸ್ಥಾನದಲ್ಲಿ ಉದ್ಯಮಿ ರತನ್ ಟಾಟಾ ಅವರು ಇದ್ದಾರೆ.

    ಇನ್ನೂ ಈ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ ಟಾಪ್ 20 ಪುರುಷರಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಮತ್ತು ಸುಸ್ಮಿತಾ ಸೇನ್ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ 20 ಮಹಿಳೆಯರಲ್ಲಿ ಪಟ್ಟಿಗೆ ಸೇರಿದ್ದಾರೆ.

    ಮೇರಿ ಕೋಮ್ ಅವರು ಸೇರಿದಂತೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಗಾಯಕಿ ಲತಾ ಮಂಗೇಶ್ಕರ್, ಬಿಜೆಪಿ ಮುಖಂಡೆ ಸುಷ್ಮಾ ಸ್ವರಾಜ್ ಮತ್ತು ನಟಿ ದೀಪಿಕಾ ಪಡುಕೋಣೆ ಮೊದಲ ಐದು ಹೆಚ್ಚು ಮೆಚ್ಚುಗೆ ಪಡೆದ ಭಾರತದ ಮಹಿಳೆಯರಾಗಿದ್ದಾರೆ.

    ಈ ಪಟ್ಟಿಯಲ್ಲಿ ಬಿಲಿಯನೇರ್ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವದ ಮಹಿಳಾ ವಿಭಾಗದಿಂದ ಮಾಜಿ ಪ್ರಥಮ ಮಹಿಳೆ ಮಿಷೆಲ್ ಒಬಾಮ ಮತ್ತು ಅಮೆರಿಕದ ಟಿವಿ ನಿರೂಪಕಿ ಓಪ್ರಾ ವಿನ್ಫ್ರೇ ಅವರು ವಿಶ್ವದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯರಾಗಿದ್ದಾರೆ.

  • ತನ್ನ ಜೀವನದ ರಿಯಲ್ ಚಾಂಪಿಯನ್ ಯಾರೆಂಬುದನ್ನು ತಿಳಿಸಿದ ಪ್ರಿಯಾಂಕಾ ಚೋಪ್ರಾ

    ತನ್ನ ಜೀವನದ ರಿಯಲ್ ಚಾಂಪಿಯನ್ ಯಾರೆಂಬುದನ್ನು ತಿಳಿಸಿದ ಪ್ರಿಯಾಂಕಾ ಚೋಪ್ರಾ

    ಲಾಸ್ ಏಂಜಲಿಸ್: 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಆಗಿರುತ್ತಾರೆ ಎಂದು ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ ನನ್ನ ಸ್ನೇಹಿತೆಯ ಈ ಸಾಧನೆ ನನಗೆ ಹೆಮ್ಮೆ ತಂದಿದೆ. ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಎಂದು ಶುಭಾಶಯ ಕೋರಿದ್ದಾರೆ. ಈ ಹಿಂದೆ ಪ್ರಿಯಾಂಕ ಚೋಪ್ರಾ ಅವರು ಮೇರಿ ಕೋಮ್ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಿದ್ದರು, ಈ ಚಿತ್ರವನ್ನು ನಿರ್ದೇಶನ ಮಾಡಿದ್ದ ಓಮುಂಗ್ ಕುಮಾರ್ ಸಹ ಮೇರಿ ಕೋಮ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    2008 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆದಿದ್ದ ಮೇರಿ ಕೋಮ್ ಅವರ ಜೀವನ ಪ್ರಯಾಣವನ್ನು ಆಧರಿಸಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಚಿತ್ರವೂ 2014 ರಲ್ಲಿ ತೆರೆಗೆ ಬಂದಿತ್ತು.

    ಆಸ್ಟೇಲಿಯಾದ ಗೋಲ್ಟ್ ಕಾಸ್ಟ್ ನಲ್ಲಿ ನಡೆಯುತ್ತಿರುವ 2018ರ ಕಾಮನ್ ವೆಲ್ಸ್ ಮಹಿಳೆಯರ ಬಾಕ್ಸಿಂಗ್ ನಲ್ಲಿ ಫೈನಲ್ ಪ್ರವೇಶಿದ್ದ ಮೇರಿ ಕೋಮ್ 45-48 ಕೆ.ಜಿ. ಬಾಕ್ಸಿಂಗ್ ಚಿನ್ನದ ಪದಕ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಐರ್ಲೆಂಡಿನ ಕ್ರಿಸ್ಟಿನಾ ಹೊರಾ ಅವರನ್ನು 5-0 ಅಂತರರಿಂದ ಮಣಿಸಿದ ಮೇರಿ ಕೋಮ್ ಚಿನ್ನದ ಪದಕ ಗೆದಿದ್ದರು. ಈಗಾಗಲೇ ಐದು ಬಾರಿ ವಿಶ್ವಚಾಂಪಿಯನ್ ಪಟ್ಟ ಗಳಿಸಿರುವ ಕೋಮ್ ಭಾರತ ಬಾಕ್ಸಿಂಗ್ ಶಕ್ತಿಯನ್ನು ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತೆರೆದಿಟ್ಟಿದ್ದರು.

  • ಜಾವೆಲಿನ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ-ಇತ್ತ ಸ್ವರ್ಣಕ್ಕೆ ಮುತ್ತಿಟ್ಟ ಮೇರಿ ಕೋಮ್

    ಜಾವೆಲಿನ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ-ಇತ್ತ ಸ್ವರ್ಣಕ್ಕೆ ಮುತ್ತಿಟ್ಟ ಮೇರಿ ಕೋಮ್

    ಗೋಲ್ಡ್ ಕೋಸ್ಟ್: ಮಹಿಳೆಯರ 45-48 ಕೆಜಿ ವಿಭಾಗದ ಕಾಮನ್ ವೆಲ್ತ್ ಬಾಕ್ಸಿಂಗ್ ನಲ್ಲಿ ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ.

    ಫೈನಲ್ಸ್ ನಲ್ಲಿ ಉತ್ತರ ಐರ್ಲೆಂಡ್ ನ ಕ್ರಿಸ್ಟಿನಾ ಒಹಾರಾ ಅವರನ್ನು 5-0 ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

    35ರ ಹರೆಯದ ಮೇರಿ ಕೋಮ್ ಅವರು ಭಾರತಕ್ಕೆ 18 ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ಅವರ ಕಾಮನ್ ವೆಲ್ತ್ ಗೇಮ್ಸ್ ನ ಮೊದಲ ಚಿನ್ನದ ಪದಕವಾಗಿದೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗೆಲ್ಲುವುದು ಒಂದು ಮೈಲಿಗಲ್ಲು. ಚಿನ್ನದ ಪದಕವನ್ನು ಗೆದ್ದಿರುವುದು ವಿಶೇಷ ಸಂತೋಷವಾಗಿದೆ ಎಂದು ಮೇರಿ ಕೋಮ್ ಸಂತಸ ವ್ಯಕ್ತ ಪಡಿಸಿದ್ದಾರೆ.

    ಈ ಚಿನ್ನದ ಪದಕ ಹಾಗೂ ಇಲ್ಲಿಯವರಗೆ ಗೆದ್ದಿರುವ ಎಲ್ಲಾ ಪದಕಗಳು ನನಗೆ ಬಹಳ ವಿಶೇಷ. ಪ್ರತಿ ಗೆಲುವಿಗೆ ಬಹಳಷ್ಟು ಶ್ರಮ ಹಾಕಿದ್ದೇನೆ. ಎಲ್ಲಿಯ ತನಕ ಸಧೃಡಳಾಗಿರುತ್ತೇನೋ ಅಲ್ಲಿಯ ತನಕ ಹೀಗೆ ಮುಂದುವರೆಯಲು ಇಚ್ಚಿಸುತ್ತೇನೆ ಎಂದು ತಿಳಿಸಿದರು.

    ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರ ಚಿನ್ನದ ಪದಕ ಗೆದ್ದಿದ್ದಾರೆ. 20 ವರ್ಷದ ನೀರಜ್ 86.47ಮೀ ದೂರ ಎಸೆಯುವುದರ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಜಾವೆಲಿನ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಈ ಮೂಲಕ ಭಾರತಕ್ಕೆ 21 ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.