Tag: maruti

  • ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

    ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

    ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಂಪನಿಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (Bharath NCAP)ನಲ್ಲಿ ಹೊಸ ಮಾರುತಿ ಸುಜುಕಿ ಡಿಸೈರ್ (Maruti Suzuki Dzire) 5-ಸ್ಟಾರ್ ಸೇಫ್ಟಿ ರೇಟಿಂಗ್ ಮತ್ತು ಮಾರುತಿ ಸುಜುಕಿ ಬಲೆನೊ (Maruti Suzuki Baleno) 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ.

    ಮಾರುತಿ ಸುಜುಕಿ ಡಿಸೈರ್
    ಭಾರತ್ ಎನ್‌ಸಿಎಪಿ (Bharath NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 32ಕ್ಕೆ 29.46 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 49ಕ್ಕೆ 41.57 ಅಂಕಗಳನ್ನು ಪಡೆದು ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿದೆ. 6 ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಸೀಟ್ ಮೌಂಟ್‌ ಸ್ಟ್ಯಾಂಡರ್ಡ್ ಫೀಚರ್ಸ್‌ಗಳಾಗಿವೆ. ಇದನ್ನೂ ಓದಿ: ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

     

    ಮಾರುತಿ ಸುಜುಕಿ ಬಲೆನೊ
    6 ಏರ್ ಬ್ಯಾಗ್ ಹೊಂದಿರುವ ಬಲೆನೊ ಕಾರು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 26.52 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್ ಪಡೆದಿದೆ ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 34.81 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.

    ಭಾರತ್ ಎನ್‌ಸಿಎಪಿ 2 ಏರ್ ಬ್ಯಾಗ್ ಹೊಂದಿರುವ ಬಲೆನೊ ಕಾರನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದ್ದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಿಗೆ 24.04 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗ್ ಪಡೆದಿದೆ ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 34.81 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

    2024ರ ನವೆಂಬರ್ ತಿಂಗಳಲ್ಲಿ ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ್ದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿತ್ತು. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿತ್ತು.

     

  • ಸಂಕ್ರಾಂತಿಗೆ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಸಂಕ್ರಾಂತಿಗೆ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಖ್ಯಾತ ನಟ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಅವರು ಹೊಸ ಸಿನಿಮಾ (New Movie) ಬಗ್ಗೆ ಅಪ್ ಡೇಟ್ ಸಿಗಲಿದೆ. ಪ್ರಭಾಸ್ ಅವರ 24ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಅನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ಸಂಕ್ರಾಂತಿ ಹಬ್ಬ ಪ್ರಭಾಸ್ ಅಭಿಮಾನಿಗಳಿಗೆ ಎಳ್ಳು ಬೆಲ್ಲ ತರಲಿದೆ.

    ಪ್ರಭಾಸ್ ಅವರ ಮುಂದಿನ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದು, ಖ್ಯಾತ ನಿರ್ದೇಶಕ ಮಾರುತಿ (Maruti) ಈ ಚಿತ್ರದ ನಿರ್ದೇಶಕರು. ಬಸ್ ಸ್ಟಾಪ್, ಎ ರೋಜುಲೋ ಸೇರಿದಂತೆ ಹಲವು ಚಿತ್ರಗಳನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರ 24ನೇ ಚಿತ್ರಕ್ಕಾಗಿ ಇವರು ಹೊಸ ಬಗೆಯ ಕಥೆಯನ್ನು ಹುಡುಕಿ ತಂದಿದ್ದಾರೆ.

     

    ಪ್ರಭಾಸ್ ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾ ಮುಗಿಸಿದ್ದಾರೆ. ಸಲಾರ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಜೊತೆಗೆ ಮತ್ತೆರಡು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಭಾಸ್ ಸತತ ಐದು ವರ್ಷಗಳ ಕಾಲ ಬ್ಯೂಸಿಯಾಗಿದ್ದಾರೆ.

  • 9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನವದೆಹಲಿ: ಮಾರುತಿ ಸುಜುಕಿ ಇಂಡಿಯಾ(Maruti Suzuki India) ಸಿಯಾಜ್, ಬ್ರೆಝಾ, ಎರ್ಟಿಗಾ, ಎಕ್ಸ್‌ಎಲ್ 6 ಮತ್ತು ಗ್ರ್ಯಾಂಡ್ ವಿಟಾರಾ ಸೇರಿ ಒಟ್ಟು 9,125 ಕಾರುಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ತಿಳಿಸಿದೆ.

    ನವೆಂಬರ್ 2 ರಿಂದ 28ರವರೆಗಿನ ಅವಧಿಯಲ್ಲಿ ಉತ್ಪಾದನೆಯಾದ ಕಾರುಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

    ಮುಂಭಾಗದ ಸಾಲಿನ ಸೀಟ್ ಬೆಲ್ಟ್‌ಗಳ(Seat Belt) ಭುಜದ ಎತ್ತರ ಹೊಂದಾಣಿಕೆಯ ಜೋಡಣೆಯ ಸಣ್ಣ ಭಾಗದಲ್ಲಿ ಒಂದು ಸಂಭವನೀಯ ದೋಷವಿದೆ ಎಂದು ಶಂಕಿಸಲಾಗಿದೆ. ಇದು ಅಪರೂಪದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಬೇರ್ಪಡಿಸಬಹುದು ಎಂದು ಹೇಳಿದೆ. ಇದನ್ನೂ ಓದಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಬಿಡುವಿಲ್ಲದ ಕೆಲಸ – ಕಚೇರಿಯಲ್ಲೇ ಮಲಗಲು ಬೆಡ್‌ರೂಂಗಳನ್ನೂ ಸಿದ್ಧಪಡಿಸಿದ ಮಸ್ಕ್

    ದೋಷಪೂರಿತ ವಾಹನಗಳನ್ನು ತಪಾಸಣೆ ಮತ್ತು ದೋಷಪೂರಿತ ಭಾಗವನ್ನು ಉಚಿತವಾಗಿ ಹಿಂಪಡೆಯಬಹುದು. ವಾಹನದ ಮಾಲೀಕರ ಜೊತೆ ಕಂಪನಿ ಸಂವಹನ ನಡೆಸಲಿದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ಪ್ರಭಾಸ್, ಅನುಷ್ಕಾ ಶೆಟ್ಟಿ ಕೊಟ್ರು ಗುಡ್‌ನ್ಯೂಸ್: ಮತ್ತೆ ಒಂದಾದ ‘ಬಾಹುಬಲಿ’ ಜೋಡಿ

    ಬಾಹುಬಲಿ ಸಿನಿಮಾ ವೇಳೆಯಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರದ್ದೇ ಮಾತು. ಸಿನಿಮಾಗೆ ಸಂಬಂಧಿಸಿದ ಸುದ್ದಿ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಇಬ್ಬರೂ ಒಟ್ಟಾಗಿ ಓಡಾಡುತ್ತಿದ್ದಾರೆ ಎಂದು ಶುರುವಾದ ಮಾತುಗಳು ಇನ್ನೇನು ಮದುವೆ ಕೂಡ ಆಗಲಿದ್ದಾರೆ ಎಂದು ದೊಡ್ಡ ಸುದ್ದಿ ಆಯಿತು. ಆನಂತರ ಈ ಜೋಡಿ ಮತ್ತೆ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.

    ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾದರೆ, ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದಲೇ ದೂರವಾದರು. ಅವರು ಅಷ್ಟೇನೂ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಅಲ್ಲದೇ, ಪ್ರಭಾಸ್ ಅವರಿಂದ ಅಂತರವನ್ನೂ ಕಾಪಾಡಿಕೊಂಡರು. ಇದೀಗ ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಕೂಡ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ತೆಲುಗಿನ ಖ್ಯಾತ ನಿರ್ದೇಶಕ ಮಾರುತಿ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು,  ಈ ಸಿನಿಮಾದಲ್ಲಿ ಪ್ರಭಾಸ್ ನಾಯಕನಾದರೆ, ಅನುಷ್ಕಾ ಶೆಟ್ಟಿ ನಾಯಕಿಯಂತೆ. ಈಗಾಗಲೇ ಇಬ್ಬರಿಗೂ ಸಿನಿಮಾದ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕರು. ಈ ಚಿತ್ರದಲ್ಲಿ ನಟಿಸಲು ಈ ಜೋಡಿ ಕೂಡ ಒಪ್ಪಿಕೊಂಡಿದೆ ಎನ್ನುವ ಸುದ್ದಿಯಿದೆ. ಅಧಿಕೃತವಾಗಿ ಇವರಾರೂ ಹೇಳದೇ ಇದ್ದರೂ, ತೆರೆ ಮರೆಯಲ್ಲಿ ಎಲ್ಲವೂ ನಡೆಯುತ್ತಿದೆಯಂತೆ. ಸದ್ಯ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ತೊಡಗಿಕೊಂಡಿದ್ದರಿಂದ, ಕೆಲವೇ ದಿನಗಳಲ್ಲಿ ಅಧಿಕೃತ ಸುದ್ದಿ ಸಿಗಬಹುದು ಎನ್ನಲಾಗುತ್ತಿದೆ.

    Live Tv

  • ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

    ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

    ಗುರುಗ್ರಾಮ: ಮಾರುತಿ ಸುಜುಕಿ ಹರ್ಯಾಣದಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕವನ್ನು ತೆರೆಯಲು ಮುಂದಾಗಿದ್ದು ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.75 ರಷ್ಟು ಮೀಸಲಾತಿ ನೀಡುವುದಾಗಿ ಪ್ರಕಟಿಸಿದೆ.

    ಮಾರುತಿ ಸುಜುಕಿ ಕಂಪನಿ ಸೋನಿಪತ್‌ ಜಿಲ್ಲೆಯ ಖರ್ಖೋಡಾದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 18 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಈ ಘಟಕದಿಂದ 13 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ.

    800 ಎಕ್ರೆ ಜಾಗದಲ್ಲಿ ತಲೆ ಎತ್ತಲಿರುವ ಈ ಘಟಕ 2025ಕ್ಕೆ ಕಾರ್ಯಾಚರಣೆ ಮಾಡಲಿದೆ. 8 ವರ್ಷದಲ್ಲಿ ಪೂರ್ಣವಾಗಿ ಕೆಲಸ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌

    ಮೀಸಲಾತಿ ನಿಯಮ ಏನು?
    ಈ ಹಿಂದೆ ತಿಂಗಳಿಗೆ ಗರಿಷ್ಠ 50 ಸಾವಿರ ರೂ. ವೇತನ ಪಡೆಯುವ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂಬ ಪ್ರಸ್ತಾಪವನ್ನು ಸರ್ಕಾರ ಮುಂದಿಟ್ಟಿತ್ತು. ಆದರೆ ಹಲವು ಸುತ್ತಿನ ಮಾತುಕತೆಯ ಬಳಿಕ ಇದು ಈಗ 30 ಸಾವಿರ ರೂ.ಗೆ ಇಳಿಕೆಯಾಗಿದೆ.

    ಈ ಹಿಂದೆ 15 ವರ್ಷದ ಹರ್ಯಾಣದಲ್ಲಿ ನೆಲೆಸಿದವರಿಗೆ ಮೀಸಲಾತಿ ನೀಡಬೇಕು ಎಂಬ ನಿಯಮ ಇತ್ತು. ಈ ನಿಯಮವನ್ನು ಸಡಿಲಿಸಲಾಗಿದ್ದು 5 ವರ್ಷ ರಾಜ್ಯದಲ್ಲಿ ನೆಲೆಸಿದವರಿಗೆ ಮೀಸಲಾತಿ ಲಾಭ ಸಿಗಲಿದೆ.

    ಈ ಹಿಂದೆ ಮಾರುತಿ ಮುಖ್ಯಸ್ಥ ಆರ್‌ಸಿ ಭಾರ್ಗವ ಅವರು ಮೀಸಲಾತಿಯನ್ನು ವಿರೋಧಿಸಿದ್ದರು. ಆದರೆ ಈಗ ಸ್ಥಳೀಯರ ರಕ್ಷಣೆಯೂ ಬೇಕು ಎಂದು ಹೇಳಿ ಮೀಸಲಾತಿ ನಿಯಮಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆಲ್ಟೋ ನಂ.1 ಕಾರು  – ಕಳೆದ ವರ್ಷ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು

    ಆಲ್ಟೋ ನಂ.1 ಕಾರು – ಕಳೆದ ವರ್ಷ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು

    ನವದೆಹಲಿ: ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು 2018-19ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೂಲಕ ಪ್ಯಾಸೆಂಜರ್ ವೆಹಿಕಲ್(ಪಿವಿ) ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಕರ ಒಕ್ಕೂಟ(ಎಸ್‍ಐಎಎಂ) ಬಿಡುಗಡೆ ಮಾಡಿದ ಪಟ್ಟಿಯಲ್ಲಿ 10 ಕಾರುಗಳ ಪೈಕಿ 7 ಮಾರುತಿ ಕಂಪನಿಯ ಕಾರುಗಳು ಸ್ಥಾನ ಪಡೆದಿದ್ದರೆ ಹುಂಡೈ ಕಂಪನಿಯ ಮೂರು ಕಾರುಗಳು ಸ್ಥಾನ ಪಡೆದಿದೆ. ಹೀಗಾಗಿ ಇಲ್ಲಿ 2018-19ರ ಹಣಕಾಸು ವರ್ಷದಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ ಎನ್ನುವ ವಿವರವನ್ನು ನೀಡಲಾಗಿದೆ.

    ಯಾವ ಕಾರು ಎಷ್ಟು?


    1. ಆಲ್ಟೋ:
    2,59,401 ಕಾರುಗಳು ಮಾರಾಟವಾಗುವ ಮೂಲಕ ಅಲ್ಟೋ ಕಾರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2017-18ರ ಅವಧಿಯಲ್ಲಿ 2,58,539 ಕಾರುಗಳು ಮಾರಾಟ ಕಂಡಿತ್ತು.

     

    2. ಡಿಸೈರ್:
    ಸೆಡಾನ್ ವಿಭಾಗದ ಡಿಸೈರ್ 2,53,859 ಕಾರುಗಳು ಮಾರಾಟಗೊಂಡಿದ್ದು ಎರಡನೇ ಸ್ಥಾನ ಸಿಕ್ಕಿದೆ. ಹೊಸ ಮತ್ತು ಹಳೆಯ ಆವೃತ್ತಿ ಸೇರಿ ಈ ಪ್ರಮಾಣದ ಕಾರು ಮಾರಾಟಗೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ 2,40,124 ಕಾರುಗಳು ಮಾರಾಟವಾಗಿತ್ತು.

    3. ಸ್ವಿಫ್ಟ್:
    ಮಾರುತಿ ಕಂಪನಿಯ ಹ್ಯಾಚ್‍ಬ್ಯಾಕ್ ಸ್ವಿಫ್ಟ್ 3ನೇ ಸ್ಥಾನ ಪಡೆದುಕೊಂಡಿದ್ದು, ಒಟ್ಟು 2,23,924 ಕಾರುಗಳನ್ನು ಮಾರಾಟವಾಗಿದೆ. 2017-18ರ ಅವಧಿಯಲ್ಲಿ 1,75,928 ಸ್ವಿಫ್ಟ್ ಕಾರು ಮಾರಾಟಗೊಂಡಿತ್ತು.

    4. ಬಲೆನೊ:
    ಬಲೆನೊ ಒಟ್ಟು 2,12,330 ಕಾರುಗಳು ಮಾರಾಟಗೊಂಡಿದ್ದು, ಕಳೆದ ಹಣಕಾಸು ವರ್ಷದಲ್ಲಿ 1,90,480 ಕಾರುಗಳು ಮಾರಾಟವಾಗಿತ್ತು.

    5. ಬ್ರಿಝಾ:
    ಮಾರುತಿ ಕಂಪನಿಯ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಳೆದ ವರ್ಷಕ್ಕೆ ಹೋಲಿಸಿದರೆ 2 ಸ್ಥಾನ ಏರಿಕೆಯಾಗಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. 2018-19 ರಲ್ಲಿ 1,57,880 ಕಾರುಗಳನ್ನು ಮಾರಾಟಗೊಂಡಿದ್ದರೆ, 2017-18ರ ಅವಧಿಯಲ್ಲಿ 1,48,462 ಕಾರುಗಳು ಮಾರಾಟಗೊಂಡಿತ್ತು.

    6.ಐ20:
    ಹುಂಡೈ ಕಂಪನಿಯ ಐ20 2018-19ರ ಅವಧಿಯಲ್ಲಿನ 6ನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದ್ದು, ಈ ಅವಧಿಯಲ್ಲಿ 1,40,225 ಕಾರುಗಳು ಮಾರಾಟಗೊಂಡಿದೆ. 2017-18ರ ಅವಧಿಯಲ್ಲಿ 1,36,182 ಕಾರುಗಳು ಮಾರಾಟವಾಗಿತ್ತು.

    7. ಗ್ರಾಂಡ್ ಐ10:
    ಹುಂಡೈ ಕಂಪನಿಯ ಎಂಟ್ರಿ ಲೆವೆಲ್ ಐ10 1,26,041 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿ 1,51,113 ಕಾರುಗಳು ಮಾರಾಟವಾಗಿತ್ತು.

    8. ಕ್ರೇಟಾ:
    ಹುಂಡೈ ಕಂಪನಿಯ ಪ್ರಸಿದ್ಧ ಎಸ್‍ಯುವಿ ಕ್ರೇಟಾ 1,24,300 ಕಾರುಗಳು ಮಾರಾಟಗೊಂಡಿದ್ದು, 8ನೇ ಸ್ಥಾನವನ್ನು ಪಡೆದುಕೊಂಡಿದೆ. 2017-18ರ ಹಣಕಾಸು ವರ್ಷದಲ್ಲಿ 1,07,136 ಕಾರುಗಳನ್ನು ಮಾರಾಟ ಮಾಡಿತ್ತು.

    9. ವ್ಯಾಗನ್ ಆರ್:
    ಮಾರುತಿ ಕಂಪನಿಯ ವ್ಯಾಗನ್ ಆರ್ ಒಟ್ಟು 1,19,649 ಕಾರುಗಳು ಮಾರಾಟಗೊಂಡಿದೆ. ಕಳೆದ ಅವಧಿಯಲ್ಲಿ ಒಟ್ಟು 1,68,644 ಕಾರುಗಳು ಮಾರಾಟವಾಗಿತ್ತು.

    10. ಸೆಲಿರಿಯೋ:
    ಒಟ್ಟು 1,03,734 ಕಾರುಗಳನ್ನು ಮಾರಾಟಗೊಳ್ಳುವ ಮೂಲಕ ಮಾರುತಿ ಕಂಪನಿಯ ಸೆಲಿರಿಯೋ ಟಾಪ್ – 10 ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. 2017-18ರ ಅವಧಿಯಲ್ಲಿ ಒಟ್ಟು 94,721 ಸೆಲಿರಿಯೋ ಮಾರಾಟ ಕಂಡಿತ್ತು.

     

  • ಫಸ್ಟ್ ಟೈಂ ಅಲ್ಟೋ ಹಿಂದಿಕ್ಕಿದ ಡಿಸೈರ್: ಆಗಸ್ಟ್ ನಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ?

    ಫಸ್ಟ್ ಟೈಂ ಅಲ್ಟೋ ಹಿಂದಿಕ್ಕಿದ ಡಿಸೈರ್: ಆಗಸ್ಟ್ ನಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ?

    ಬೆಂಗಳೂರು: ಇದೇ ಮೊದಲ ಬಾರಿಗೆ ಮಾರುತಿ ಸುಜುಕಿ ಡಿಸೈರ್ ಭಾರತದಲ್ಲಿ ಮಾರಾಟವಾದ ಟಾಪ್-10 ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ಆಗಸ್ಟ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ
    30,934 ಡಿಸೈರ್ ಕಾರುಗಳು ಮಾರಾಟವಾಗಿದ್ದರೆ, 21,521 ಆಲ್ಟೋ ಕಾರುಗಳು ಮಾರಾಟವಾಗಿದೆ.

    ಈ ಪಟ್ಟಿಯಲ್ಲಿ ಮಾರುತಿ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು ಸ್ಥಾನ ಪಡೆದುಕೊಂಡಿದ್ದರೆ, ಹುಂಡೈ ಕಂಪೆನಿಯ ಮೂರು ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಯಾವ ಕಾರುಗಳು ಎಷ್ಟು ಮಾರಾಟವಾಗಿದೆ?
    1. ಮಾರುತಿ ಸುಜುಕಿ ಡಿಸೈರ್ – 30,934


    2. ಮಾರುತಿ ಅಲ್ಟೋ – 21,521


    3. ಮಾರುತಿ ಬಲೆನೊ – 17,190


    4. ಮಾರುತಿ ವಿಟಾರಾ ಬ್ರೆಜಾ – 14,396


    5. ಮಾರುತಿ ವ್ಯಾಗನ್ ಆರ್ – 13,907


    6. ಸ್ವಿಫ್ಟ್ – 12,631


    7. ಹುಂಡೈ ಗ್ರಾಂಡ್ ಐ10 – 12,306


    8. ಹುಂಡೈ ಗ್ರಾಂಡ್ ಐ20 – 11,832


    9. ಹುಂಡೈ ಕ್ರೇಟಾ – 10,158


    10. ಸೆಲರಿಯೋ – 9,210

  • 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    ನವದೆಹಲಿ:2016-17ರ ಅವಧಿಯಲ್ಲಿ ದೇಶದಲ್ಲಿ ಮಾರುತಿ ಕಂಪೆನಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಮಾರಾಟದವಾದ ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿ ಕಂಪೆನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. 2015-16 ಅವಧಿಯಲ್ಲಿ ಮಾರಾಟವಾದ ಅತಿ ಹೆಚ್ಚು ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿಯ ಕಂಪೆನಿಯ 6 ಕಾರುಗಳು ಸ್ಥಾನ ಪಡೆದಿದ್ದರೆ ಈ ಬಾರಿ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    2016-17ರಲ್ಲಿ ಭಾರತದಲ್ಲಿ ಒಟ್ಟು 30,46,727 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಅವಧಿಯಲ್ಲಿ 27,89,208 ಕಾರುಗಳು ಮಾರಾಟವಾಗಿದ್ದು, ಶೇ.9.23 ಪ್ರಗತಿ ದರ ಸಾಧಿಸಿದೆ.

    ಒಟ್ಟು ಮಾರಾಟವಾದ ಕಾರುಗಳು ಪೈಕಿ ಶೇ.35ರಷ್ಟು ಪಾಲನ್ನು ಮಾರುತಿ ಕಂಪೆನಿಯ ಕಾರುಗಳು ಪಡೆದುಕೊಂಡಿದ್ದು, ಟ್ಟು 14,43,641 ಕಾರುಗಳು ಮಾರಾಟವಾಗಿದೆ.

    ಯಾವ ಕಾರು ಎಷ್ಟು ಮಾರಾಟವಾಗಿದೆ?
    #1 ಮಾರುತಿ ಆಲ್ಟೋ


    ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 2,41,635 ಅಲ್ಟೋ ಕಾರುಗಳು ಮಾರಾಟವಾಗಿದೆ. ಸತತ 13 ವರ್ಷಗಳಿಂದ ಈ ಪಟ್ಟಿಯಲ್ಲಿ ಅಲ್ಟೋ ನಂಬರ್ ಒನ್ ಸ್ಥಾನಗಳಿಸಿದರೂ ಈ ಹಿಂದಿನ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.8.27 ಕುಸಿತ ಕಂಡಿದೆ. ಈ ಹಿಂದಿನ ಹಣಕಾಸು ಅವಧಿಯಲ್ಲಿ 2,63,422 ಕಾರುಗಳು ಮಾರಾಟಗೊಂಡಿತ್ತು.

    #2 ವ್ಯಾಗನ್ ಆರ್:


    ಎರಡನೇ ಸ್ಥಾನದಲ್ಲಿ ಮಾರುತಿಯ ವ್ಯಾಗನ್ ಆರ್ ಕಾರು ಇದ್ದು, 1,72,346 ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 1,69,555 ವಾಗನ್ ಆರ್ ಮಾರಾಟ ಕಂಡಿತ್ತು.

    #3 ಸ್ವಿಫ್ಟ್ ಡಿಸೈರ್:


    ಕಳೆದ ವರ್ಷ 1,67,266ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,939 ಸ್ವಿಫ್ಟ್ ಡಿಸೈರ್ ಮಾರಾಟವಾಗಿತ್ತು.

    #4 ಸ್ವಿಫ್ಟ್:


    1,66,885 ಸ್ವಿಫ್ಟ್ ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,043 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್ 3 ಸ್ಥಾನವನ್ನು ಪಡೆದುಕೊಂಡಿತ್ತು.

    #5. ಗ್ರಾಂಡ್ ಐ10:


    ಹುಂಡೈ ಕಂಪೆನಿಯ ಐ10 5ನೇ ಸ್ಥಾನ ಪಡೆದುಕೊಂಡಿದೆ. ಹಣಕಾಸು ವರ್ಷದಲ್ಲಿ 1,46,228 ಕಾರುಗಳು ಮಾರಾಟವಾಗಿವೆ.

    #6 ಎಲೈಟ್ ಐ20:


    ಹುಂಡೈ ಎಲೈಟ್ ಐ20ಗೆ 6ನೇ ಸ್ಥಾನ ಸಿಕ್ಕಿದ್ದು, 1,26,304 ಕಾರುಗಳು ಮಾರಾಟ ಕಂಡಿದೆ.

    #7 ಬಲೆನೊ:


    ಮಾರುತಿ ಸುಜುಕಿ ಕಂಪೆನಿ ಬಲೆನೊ 1,20,804 ಕಾರುಗಳು ಮಾರಾಟವಾಗಿದೆ.

    #8 ಕ್ವಿಡ್:


    ರೆನಾಲ್ಟ್ ಕಂಪೆನಿಯ ಕ್ವಿಡ್ 8ನೇ ಸ್ಥಾನಗಳಿಸಿದ್ದು, 1,09,341 ಕಾರುಗಳು ಮಾರಾಟ ಕಂಡಿವೆ.

    #9 ವಿಟಾರಾ ಬ್ರೆಜಾ:


    ಮಾರುತಿ ಕಂಪೆನಿಯ ವಿಟಾರಾ ಬ್ರೆಜಾ 1,08,640 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ.

    #10 ಸೆಲರಿಯೋ


    ಮಾರುತಿಯ ಸೆಲರಿಯೋ 2016-17ರ ಹಣಕಾಸು ವರ್ಷದಲ್ಲಿ ಒಟ್ಟು 97,361 ಮಾರಾಟ ಕಂಡಿದೆ.