Tag: Martyrs

  • ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ

    ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ

    ಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆಯುತ್ತಿರುವ ಯುಎನ್ ವಿರೋಧಿ ಪ್ರತಿಭಟನೆಯಲ್ಲಿ ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮರಾಗಿದ್ದಾರೆ.

    ಈ ಕುರಿತು ಬಾರ್ಡರ್ ಸೆಕ್ಯುರಿಟಿ ಫೋರ್ಸ್(ಬಿಎಸ್‍ಎಫ್) ಟ್ವೀಟ್ ಮಾಡಿದ್ದು, 26 ಜುಲೈ ರಂದು ಎಚ್‍ಸಿ ಶಿಶುಪಾಲ್ ಸಿಂಗ್ ಮತ್ತು ಎಚ್‍ಸಿ ಸನ್ವಾಲಾ ರಾಮ್ ವಿಷ್ಣೋಯ್ ಅವರು ನಿಧನರಾಗಿದ್ದಾರೆ. ಅವರಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಡೆಯಲು ಯುಎನ್ ಶಾಂತಿಪಾಲನಾ ತಂಡದೊಂದಿಗೆ ಇವರನ್ನು ನಿಯೋಜಿಸಲಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ನಾವು ಮೃತರ ಕುಟುಂಬದೊಂದಿಗೆ ಇದ್ದೇವೆ. ಜೈಹಿಂದ್ ಎಂದು ಬರೆದು ಮಾಹಿತಿ ತಿಳಿಸಿದೆ.  ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: 3 ಶಾಂತಿಪಾಲಕರು, 12 ನಾಗರಿಕರು ಮೃತ 

    ಏನಿದು ಘಟನೆ?
    MONUSCO ಎಂದು ಕರೆಯಲ್ಪಡುವ ಯುಎನ್ ಮಿಷನ್, ಮಿಲಿಟರಿಯ ಹಿಂಸಾಚಾರದ ವಿರುದ್ಧ ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಯುಎನ್ ಉಪ ವಕ್ತಾರ ಫರ್ಹಾನ್ ಹಕ್ ಈ ಕುರಿತು ಮಾತನಾಡಿದ್ದು, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • 22 ವರ್ಷ ದೇಶ ಸೇವೆ, ಮುಂದಿನ ವರ್ಷ ನಿವೃತ್ತಿ- ಕನಸಿನ ಮನೆಗೆ ಬರೋ ಮುನ್ನ ಯೋಧ ಹುತಾತ್ಮ

    22 ವರ್ಷ ದೇಶ ಸೇವೆ, ಮುಂದಿನ ವರ್ಷ ನಿವೃತ್ತಿ- ಕನಸಿನ ಮನೆಗೆ ಬರೋ ಮುನ್ನ ಯೋಧ ಹುತಾತ್ಮ

    – ಕುಟುಂಬಕ್ಕಾಗಿ 18ನೇ ವಯಸ್ಸಿಗೆ ಸೇನೆ ಸೇರಿದ್ರು
    – ಜೂನ್ 3ರಂದು ಕನಸಿನ ಮನೆಯ ಗೃಹಪ್ರವೇಶ

    ಚೆನ್ನೈ: ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಅಟ್ಟಹಾಸಕ್ಕೆ ಹುತಾತ್ಮರಾದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕಲೂರು ಗ್ರಾಮದ 40 ವರ್ಷದ ಭಾರತೀಯ ಸೇನಾ ಸೈನಿಕ ಕೆ.ಪಳನಿ ಮುಂದಿನ ವರ್ಷ ಸೇನೆಯಿಂದ ನಿವೃತ್ತಿಯಾಗಬೇಕಿತ್ತು.

    ಕೆ.ಪಳನಿ ಅವರು 22 ವರ್ಷಗಳ ಕಾಲ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ್ದು, ಮುಂದಿನ ವರ್ಷ ಸೇನೆಯಿಂದ ನಿವೃತ್ತಿ ಹೊಂದಲು ಯೋಜಿಸಿದ್ದರು. ಆದರೆ ಸೋಮವಾರ ರಾತ್ರಿ ಲಡಾಖ್‍ನ ಇಂಡೋ-ಚೀನೀ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಲ್ಲಿ ಇವರು ಒಬ್ಬರಾಗಿದ್ದಾರೆ.

    ಯೋಧ ಪಳನಿ:
    ಕಡುಕಲೂರು ಗ್ರಾಮದಲ್ಲಿ ರೈತ ದಂಪತಿಯಾದ ಕಾಲಿಮುತ್ತು ಮತ್ತು ಲೋಗಂಬಲ್ ಅವರ ಹಿರಿಯ ಪುತ್ರರಾಗಿದ್ದರು. ಇವರು ಪತ್ನಿ ವನತಿ ದೇವಿ (35) ಮತ್ತು 10 ವರ್ಷದ ಮಗ ಮತ್ತು 8 ವರ್ಷದ ಮಗಳನ್ನು ಅಗಲಿದ್ದಾರೆ. ಪಳನಿ ಅವರು ಬಡಕುಟುಂಬದಿಂದ ಬಂದವರಾಗಿದ್ದು, 12ನೇ ತರಗತಿವರೆಗೂ ಹಳ್ಳಿಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಪಳನಿ ತಮ್ಮ ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದು, 18 ವಯಸ್ಸಿನಲ್ಲೇ ಸಶಸ್ತ್ರ ಪಡೆಗೆ ಸೇರಲು ನಿರ್ಧರಿಸಿದ್ದರು.

    ಪಳನಿ ತನ್ನ ಬಡತನ ಕುಟುಂಬವನ್ನು ಉನ್ನತ ಮಟ್ಟಗೇರಿಸಲು ಸೇನೆಗೆ ಸೇರಲು ತೀರ್ಮಾನಿಸಿದ್ದರು. ಅದರಂತೆಯೇ 18ನೇ ವಯಸ್ಸಿನಲ್ಲಿ ಸೇನೆಗೆ ಸೇರಿದರು. ಪಳನಿ ತಮ್ಮ ಸಹೋದರ ಮತ್ತು ತಂಗಿಗೆ ತಂದೆಯಾಗಿ ಅವರನ್ನು ನೋಡಿಕೊಳ್ಳುತ್ತಿದ್ದರು. ಪಳನಿ ಸಹೋದರನಿಗೆ ಶಿಕ್ಷಣ ಕೊಡಿಸಲು ಮತ್ತು ಸಹೋದರಿಯನ್ನು ಮದುವೆ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಸಹೋದರ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ರಾಜಸ್ಥಾನದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ಸಂಬಂಧಿಯೊಬ್ಬರು ಹೇಳಿದರು.

    ದೇಶ ಸೇವೆ ಮಾಡುವ ಬಗ್ಗೆ ಪಳನಿ ತುಂಬಾ ಹೆಮ್ಮೆ ಪಡುತ್ತಿದ್ದರು. ಅವರ ಮಕ್ಕಳು ದೊಡ್ಡವರಾದ ಮೇಲೆ ಸೇನೆಗೆ ಸೇರುವಂತೆ ಮಾಡುವ ಬಗ್ಗೆ ಕನಸು ಕಂಡಿದ್ದರು. ಪಳನಿ ಅವರು ಪಿಯುಸಿ ಮುಗಿಯುತ್ತಿದ್ದಂತೆ ಸೇನೆಗೆ ಸೇರಿದ್ದರು. ಹೀಗಾಗಿ ದೂರ ಶಿಕ್ಷಣದ ಮೂಲಕ ಇತಿಹಾಸದಲ್ಲಿ ಬಿಎ ಪೂರ್ಣಗೊಳಿಸಿದರು. ಮದುವೆಯ ನಂತರ ಅವರ ಪತ್ನಿಗೆ ಬಿ.ಎಡ್ ಕೋರ್ಸ್ ಪೂರ್ಣಗೊಳಿಸಲು ಪ್ರೋತ್ಸಾಹ ನೀಡಿದರು ಎಂದು ಕುಟುಂಬದವರು ತಿಳಿಸಿದ್ದಾರೆ.

    ಪಳನಿ ರಜಾದಿನದಲ್ಲಿ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರು. ಅವರೇ ಅಡುಗೆ ಮಾಡಿಕೊಡುತ್ತಿದ್ದರು. ಮಕ್ಕಳೊಂದಿಗೆ ಆಟವಾಡುವ ಮೂಲಕ ತುಂಬಾ ಆನಂದದಿಂದ ಇರುತ್ತಿದ್ದರು. ಭಾರತದ ಗಡಿಯಲ್ಲಿ 22 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಜೂನ್ 3 ರಂದು ಅವರ ಕನಸಿನ ಮನೆಗೆ ಗೃಹ ಪ್ರವೇಶ ಕೂಡ ಮಾಡಿದ್ದರು.

     

    ಪಳನಿ ಜನವರಿ ಬಳಿಕ ಕುಟುಂಬದ ಜೊತೆ ಇರಲು ಬರಲಿದ್ದರು. ಆದರೆ ಹೋರಾಟಗಳಿಂದ ತುಂಬಿದ ಜೀವನವನ್ನು ನಡೆಸಿ, ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇನ್ನೂ ಮುಂದೆ ಪಳನಿ ಅವರಿಗೆ ಒಳ್ಳೆಯದಾಗುತ್ತದೆ ಎಂದು ನಾವು ಭಾವಿಸಿದ್ದೇವು. ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದರು. ಆದರೆ ಅಷ್ಟರಲ್ಲಿಯೇ ಹುತಾತ್ಮರಾಗಿದ್ದಾರೆ. ಇದರಿಂದ ಕುಟುಂಬಕ್ಕೆ ಶಕ್ತಿ, ಆಧಾರಸ್ತಂಭವಾಗಿದ್ದ ಅವರನ್ನು ಕಳೆದುಕೊಂಡು ಕುಟುಂಬದವರು ದುಃಖ ಪಡುತ್ತಿದ್ದಾರೆ ಎಂದು ಗ್ರಾಮಸ್ಥರು ನೋವಿನಿಂದ ಹೇಳಿದ್ದಾರೆ.

  • ಹೊಸ ವರ್ಷಾಚರಣೆಯಂದೇ ಉಗ್ರರ ಅಟ್ಟಹಾಸ- ಯೋಧರಿಬ್ಬರು ಹುತಾತ್ಮ

    ಹೊಸ ವರ್ಷಾಚರಣೆಯಂದೇ ಉಗ್ರರ ಅಟ್ಟಹಾಸ- ಯೋಧರಿಬ್ಬರು ಹುತಾತ್ಮ

    ಶ್ರೀನಗರ: ಹೊಸ ವರ್ಷಾಚರಣೆ ಆರಂಭದಲ್ಲೇ ಪಾಕ್ ಗಡಿ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ನೌಶೇರಾ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

    ಉಗ್ರರ ತಾಣಗಳ ಮೇಲೆ ಯೋಧರು ನಡೆಸಿದ್ದ ಕಾರ್ಯಾಚರಣೆಯ ವೇಳೆ ಘಟನೆ ನಡೆದಿದ್ದು, ಸದ್ಯ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ನೌಶೇರಾ ಪ್ರದೇಶದ ಖಾರಿ ತ್ರಾಯತ್‍ನಲ್ಲಿ ಉಗ್ರರು ಪಾಕ್ ಆಕ್ರಮಿತ ಪ್ರದೇಶದಿಂದ ಭಾರತದೊಳಗೆ ನುಸುಳಲು ಯತ್ನಿಸಿದ್ದರು. ಈ ವೇಳೆ ಯೋಧರು ಕಾರ್ಯಾಚರಣೆ ನಡೆಸಿದ್ದರು.

    ಘಟನೆ ಕುರಿತು ಮಾಹಿತಿ ನೀಡಿರುವ ಜಮ್ಮು ಮೂಲದ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಅವರು, ನೌಶೇರಾ ಸೆಕ್ಟರ್ ನಲ್ಲಿ ನಡೆದ ಶೋಧ ಕಾರ್ಯಾಚರಣೆಯ ವೇಳೆ ಇಬ್ಬರು ಸೇನಾ ಯೋಧರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

    ಗಡಿ ಪ್ರದೇಶದೊಳಗೆ ನುಸುಳಿದ್ದ ಉಗ್ರರ ಗುಂಪನ್ನು ಭಾರತೀಯ ಸೇನಾ ಪಡೆ ಸುತ್ತುವರಿದಿತ್ತು. ಶೋಧ ಕಾರ್ಯಾಚರಣೆ ಆರಂಭಿಸಿದ ಕೂಡಲೇ ಒಳನುಸುಳುಕೋರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬೃಹತ್ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • 370ನೇ ವಿಧಿ ರದ್ದು, ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ: ಅಮಿತ್ ಶಾ

    370ನೇ ವಿಧಿ ರದ್ದು, ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ: ಅಮಿತ್ ಶಾ

    ಅಹಮದಾಬಾದ್: 370ನೇ ವಿಧಿ ರದ್ದು ಮಾಡಿದ್ದು, ಪ್ರಧಾನಿ ಮೋದಿ ಅವರು ಭಾರತೀಯ ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.

    ಇಂದು ಅಹಮದಾಬಾದ್‍ನಲ್ಲಿ ನಡೆದ ಕ್ಷಿಪ್ರ ಕ್ರಿಯ ಪಡೆ (ಆರ್‍ಎಎಫ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿ ರಾಷ್ಟ್ರವನ್ನು ಬಲಪಡಿಸಿದ್ದಾರೆ. ಇದು ಭಾರತೀಯ ಹುತಾತ್ಮ ಸೈನಿಕರಿಗೆ ಮೋದಿ ಸಲ್ಲಿಸಿದ ಗೌರವ ಎಂದು ತಿಳಿಸಿದರು.

    ಅಹಮದಾಬಾದ್‍ನಲ್ಲಿ ನಡೆದ ಆರ್‍ಎಎಫ್‍ನ 27 ರೈಸಿಂಗ್ ಡೇ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಮಿತ್ ಶಾ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಹಿಂದೆ ಇದ್ದ ಯಾವ ಸರ್ಕಾರವು ನಮ್ಮ ಸೈನಿಕರಿಗೆ ಈ ರೀತಿಯ ಗೌರವ ನೀಡಲು ಯೋಚಿಸಿರಲಿಲ್ಲ. ಆದರೆ ನಮ್ಮ ಸರ್ಕಾರ 370 ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ನಮ್ಮ ಹುತಾತ್ಮ ಸೈನಿಕರಿಗೆ ಆ ಗೌರವನ್ನು ನೀಡಿದ್ದೇವೆ ಎಂದರು.

    ನಾವು 370 ನೇ ವಿಧಿ ರದ್ದು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದು, ನಾವು ದೇಶಕ್ಕಾಗಿ ಮಾಡಿದ ಮೊದಲ ಕೆಲಸ. ಇದರಿಂದ ಕಾಶ್ಮೀರ ಅಭಿವೃದ್ಧಿಯ ಹಾದಿಯಲ್ಲಿ ಸಾಗಲಿದೆ. ಈಗ ಕಾಶ್ಮೀರದಲ್ಲಿ ಯಾರಾದರೂ ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ನಮ್ಮ ಭಾರತೀಯ ಸೈನಿಕರು ಅಲ್ಲಿ ಕಾವಲು ಕಾಯುತ್ತಿದ್ದಾರೆ ಎಂದು ನನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.