Tag: martyrd

  • ಹುತಾತ್ಮ ಮಗನ ಫೋಟೋ ನೋಡಿ ಕಣ್ಣೀರಿಟ್ಟ ತಾಯಿ ವೀಡಿಯೋ ವೈರಲ್

    ಹುತಾತ್ಮ ಮಗನ ಫೋಟೋ ನೋಡಿ ಕಣ್ಣೀರಿಟ್ಟ ತಾಯಿ ವೀಡಿಯೋ ವೈರಲ್

    ನವದೆಹಲಿ: ಹುತಾತ್ಮ ಮಗನ ಫೋಟೋಗೆ ಮುತ್ತಿಟ್ಟು ತಾಯಿಯಬ್ಬರು ಭಾವುಕರಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಈ ವೀಡಿಯೋ ನೋಡುತ್ತಿದ್ದಂತೆಯೇ ನೆಟ್ಟಿಗರು ಕೂಡ ಕಣ್ಣೀರು ಹಾಕಿದ್ದಾರೆ.

    ಈ ಭಾವನಾತ್ಮಕ ವೀಡಿಯೋದಲ್ಲಿ, ತಾಯಿ ಪೋಸ್ಟರ್ ನಲ್ಲಿರುವ ತನ್ನ ಹುತಾತ್ಮ ಮಗನ ಚಿತ್ರವನ್ನು ಪದೇ ಪದೇ ಚುಂಬಿಸುತ್ತಿದ್ದಾರೆ. ಈ ವೀಡಿಯೋ ಎಲ್ಲರ ಮನಕರಗಿಸುವಂತಿದೆ. ಹುತಾತ್ಮ ಯೋಧನಿಗೆ ಎಲ್ಲರೂ ಗೌರವ ವಂದನೆ ಸಲ್ಲಿಸುತ್ತಿದ್ದಾರೆ.

    ತನ್ನ ಹುತಾತ್ಮ ಮಗನ ಚಿತ್ರವನ್ನು ನೋಡುತ್ತಾ ತಾಯಿ ಹೇಗೆ ಭಾವುಕರಾಗುತ್ತಾರೆ ಎಂಬುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಕೆಲವೊಮ್ಮೆ ಮಗನ ಫೋಟೋವನ್ನು ಕರವಸ್ತ್ರದಿಂದ ಒರೆಸುತ್ತಾರೆ ಮತ್ತು ಕೆಲವೊಮ್ಮೆ ಮುತ್ತಿಡುತ್ತಾರೆ. ಹುತಾತ್ಮ ಮಗನ ಮೇಲಿನ ತಾಯಿಯ ಪ್ರೀತಿ, ವಾತ್ಸಲ್ಯವನ್ನು ಕಂಡು ಸ್ಥಳದಲ್ಲಿದ್ದವರು ಭಾವುಕರಾದರು.

    ಈ ವೀಡಿಯೋ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ದೋರ್ನಪಾಲ್‍ನದ್ದಾಗಿದೆ. ಹುತಾತ್ಮ ಯೋಧರಿಗಾಗಿ ಇಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹುತಾತ್ಮರ ಕುಟುಂಬಗಳು ಆಗಮಿಸಿದ್ದರು. ಇದೇ ವೇಳೆ ಹುತಾತ್ಮ ಯೋಧನ ತಾಯಿ ತನ್ನ ಮಗನ ಫೋಟೋವನ್ನು ನೋಡುತ್ತಿದ್ದಂತೆಯೇ ಅವರ ಕಣ್ಣುಗಳಿಂದ ನೀರು ಜಿನುಗಿದೆ. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ – ಆರೋಪಿ ಗೊತ್ತಿದ್ರೂ ಕೇಸ್ ಮುಚ್ಚಾಕಿದ್ರಾ ಪೊಲೀಸರು?

    ಸದ್ಯ ಈ ವೀಡಿಯೋ ನೆಟ್ಟಿಗರ ಕಣ್ಣುಗಳನ್ನು ಕೂಡ ತೇವಗೊಳಿಸಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದನ್ನು ನೋಡಿ ನನ್ನ ಕಣ್ಣೀರು ನಿಲ್ಲುತ್ತಿಲ್ಲ ಎಂದಿದ್ದರೆ ಇನ್ನೊಬ್ಬರು ಆ ತಾಯಿಯ ದುಃಖವನ್ನು ಅನುಭವಿಸಲಾಗುವುದಿಲ್ಲ ಎಂದು ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಅನೇಕ ಮಂದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ ಯೋಧನ ತಾಯಿಗೆ ನಮನಗಳನ್ನು ತಿಳಿಸಿದ್ದಾರೆ.