Tag: martyr Siddharth Vashisht

  • ಅಂತ್ಯಕ್ರಿಯೆಯ ವೇಳೆ ಕಲ್ಲಿನಂತೆ ನಿಂತ್ರು ಹುತಾತ್ಮ ಪೈಲಟ್ ಸಿದ್ದಾರ್ಥ್ ಪತ್ನಿ

    ಅಂತ್ಯಕ್ರಿಯೆಯ ವೇಳೆ ಕಲ್ಲಿನಂತೆ ನಿಂತ್ರು ಹುತಾತ್ಮ ಪೈಲಟ್ ಸಿದ್ದಾರ್ಥ್ ಪತ್ನಿ

    – ದೇಶಾಭಿಮಾನಿಗಳ ದುಃಖ ಇಮ್ಮಡಿಗೊಳಿಸ್ತು ಈ ದೃಶ್ಯ

    ಚಂಡೀಗಢ: ಭಾರತೀಯ ವಾಯು ಪಡೆಯ ಮಿಗ್ 17 ಹೆಲಿಕಾಪ್ಟರ್ ಪತನಗೊಂಡು ಹುತಾತ್ಮರಾಗಿದ್ದ ಪೈಲಟ್ ಸಿದ್ದಾರ್ಥ್ ವಶಿಷ್ಠ ಅಂತ್ಯಕ್ರಿಯೆ ಶುಕ್ರವಾರ ಚಂಡೀಗಢದಲ್ಲಿ ನಡೆದಿದೆ. ಸಿದ್ದಾರ್ಥ್ ವಸಿಷ್ಠ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅವರ ಪತ್ನಿ ಆರತಿ ಸಿಂಗ್ ಅವರು ಕಲ್ಲಿನಂತೆ ನಿಂತಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಾಯು ಪಡೆಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಪೈಲಟ್ ಸಿದ್ದಾರ್ಥ್ ವಶಿಷ್ಠ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಸಿದ್ದಾರ್ಥ್ ಪತ್ನಿ ಆರತಿ ಅವರು ಪತಿಯ ಪಾರ್ಥಿವ ಶರೀರವನ್ನೇ ನೋಡುತ್ತಾ ಅಳಲು ಸಾಧ್ಯವಾಗದೇ ಅಸಹಾಯಕರಾಗಿ ನಿರ್ಲಿಪ್ತರಾಗಿ ನಿಂತಿದ್ದರು. ಅವರ ನೋವವನ್ನು ನೋಡಿದರೆ ಕರುಳು ಹಿಂಡುವಂತಿದ್ದು, ಸೇರಿದ್ದ ದೇಶಾಭಿಮಾನಿಗಳ ಕಣ್ಣಾಲಿಗಳು ತುಂಬಿದ್ದವು.

    ಅಂತಿಮ ವಿಧಿ-ವಿಧಾನ ನಡೆಯುವಾಗಲೂ ಸ್ವಲ್ಪವೂ ಅಲುಗಾಡದೆ ಮನಸ್ಸಿನ ಜೊತೆ ದೇಹವನ್ನು ಕಲ್ಲಿನಂತೆ ಮಾಡಿಕೊಂಡು ನಿಂತಿದ್ದರು. ಅವರು ಕಲ್ಲಿನಂತೆ ನಿಂತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಮಿ-17 ಯುದ್ಧ ಹೆಲಿಕಾಪ್ಟರ್ ಹಾರಾಟದ ವೇಳೆ ಬುಧವಾರ ಪತನಗೊಂಡು, ಜಮ್ಮು-ಕಾಶ್ಮೀರದ ಬದ್ಗಾಮ್ ಪ್ರದೇಶದಲ್ಲಿ ಬಿದ್ದಿತ್ತು. ಈ ದುರಂತದಲ್ಲಿ ಪೈಲಟ್ ಸಿದ್ದಾರ್ಥ್ ವಶಿಷ್ಠ ಅವರನ್ನು ಸೇರಿದಂತೆ ಒಟ್ಟು ಆರು ಜನರು ಹುತಾತ್ಮರಾಗಿದ್ದರು.

    ಆರತಿ ಸಿಂಗ್ ಅವರು ಕೂಡ ಐಎಎಫ್‍ನ ಶ್ರೀನಗರ ಪಡೆಯ ಸಿಬ್ಬಂದಿಯಾಗಿದ್ದಾರೆ. ಹುತಾತ್ಮ ಸಿದ್ದಾರ್ಥ್ ಹಾಗೂ ಆರತಿ ಸಿಂಗ್ ದಂಪತಿಗೆ ಎರಡು ವರ್ಷದ ಪುತ್ರನಿದ್ದಾನೆ. ಹುತಾತ್ಮ ಸಿದ್ದಾರ್ಥ್ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಕೇರಳದಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರವಾಹದ ವೇಳೆ ಸಿದ್ದಾರ್ಥ್ ಅವರು ಕಾರ್ಯನಿರ್ವಹಿಸಿದ್ದು, ಅವರಿಗೆ ಜನವರಿ 26ರಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿರುವುದನ್ನು ನಾವಿಲ್ಲಿ ಸ್ಮರಿಸಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv