Tag: martin film

  • ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಅತ್ಯಾಚಾರ ಎಸಗಿರೋರ ವಿರುದ್ಧ ಕಿಡಿಕಾರಿದ ಧ್ರುವ ಸರ್ಜಾ

    ಟ್ರೈನಿ ವೈದ್ಯೆ ಹತ್ಯೆ ಪ್ರಕರಣ: ಅತ್ಯಾಚಾರ ಎಸಗಿರೋರ ವಿರುದ್ಧ ಕಿಡಿಕಾರಿದ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ಕೋಲ್ಕತ್ತಾ ಟ್ರೈನಿ ವೈದ್ಯೆ (Kolkata Rape Murder Case) ಅತ್ಯಾಚಾರದ ಬಗ್ಗೆ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಎಸಗಿರೋರನ್ನು ನಡು ರಸ್ತೆಯಲ್ಲಿ ಸುಟ್ಟಾಕಬೇಕು ಎಂದು ಧ್ರುವ ಸರ್ಜಾ (Actor Dhruva Sarja) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ‘ಎಲ್ಲರಿಗೂ ನಮಸ್ಕಾರ. ನಾನು ಮಾರ್ಟಿನ್​ ಸಿನಿಮಾದ ಪ್ರಚಾರದಲ್ಲಿ ಇದ್ದೇನೆ ಎಂಬುದು ಹೌದು. ಮಾರ್ಟಿನ್​ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟುಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ, 2024ರ ಆಗಸ್ಟ್​ 14ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

    ಗಂಡು ಮಕ್ಕಳನ್ನು ಬೆಳೆಸುವಾಗ ಅವರಿಗೆ 3 ವಿಷಯಗಳನ್ನು ಹೇಳಿ ಕೊಡಬೇಕು. ಮೊದಲು ಹೆಣ್ಣು ಮಕ್ಕಳನ್ನು ಹೇಗೆ ಸೇಫ್ ಆಗಿ ನೋಡಿಕೊಳ್ಳಬೇಕು. ಹೆಣ್ಣಿಗೆ ಬೆಂಬಲವಾಗಿ ನಿಲ್ಲಬೇಕು. ಆ ನಂತರ ಹೆಣ್ಣು ಮಗಳಿಗೆ ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿ ಕೊಡಬೇಕು ಎಂದಿದ್ದಾರೆ ನಟ ಧ್ರುವ.

    ಈ ರೇಪಿಸ್ಟ್‌ಗಳು ಕಾನೂನು ಕೈಗೆ ಸಿಕ್ಕಿ ಕಾನೂನ್ಮತಕವಾಗಿ ಶಿಕ್ಷೆಯಾಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರಿಗೆ ಈ ರೀತಿ ಶಿಕ್ಷೆ ಕೊಡುವುದರಿಂದ ತೃಪ್ತಿ ಅನ್ನೋದು ಆಗುವುದಿಲ್ಲ. ಇಂತಹವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟು ಹಾಕಬೇಕು. ಅದು ಆದ್ರೂನು ತೃಪ್ತಿ ಅನ್ನೋದು ಆಗಲ್ಲ. ನಮ್ಮ ಮನೆಯಲ್ಲಿ ನನಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ಯಾರದ್ದೋ ಮನೆ ಮಗಳಿಗೆ ಅನ್ಯಾಯವಾಗಿದೆ ಎಂದಾಗ ನಾವು ಅವರ ಜೊತೆ ನಿಲ್ಲಬೇಕು. ಅತ್ಯಾಚಾರ ಆಗಿರುವ ವೈದ್ಯೆ ಹುಡುಗಿಗೆ ನ್ಯಾಯ ಸಿಗಬೇಕು. ನಾವೆಲ್ಲಾ ಒಗ್ಗಟಾಗಿ ನಿಲ್ಲಬೇಕು ಎಂದು ಧ್ರುವ ಸರ್ಜಾ ಕೋಲ್ಕತ್ತಾ ಪ್ರಕರಣದ ಬಗ್ಗೆ ಖಂಡಿಸಿ ಮಾತನಾಡಿದ್ದಾರೆ.

    ಅಂದಹಾಗೆ, ಕೆಲ ದಿನಗಳ ಹಿಂದೆ ಕೋಲ್ಕತ್ತಾದ ಪ್ರಕರಣದ ಬಗ್ಗೆ ನಟಿ ಆಶಿಕಾ ರಂಗನಾಥ್‌ (Ashika Ranganath) ಕಿಡಿಕಾರಿದ್ದರು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದರು.

  • ನಮ್ಮದು, ನಿರ್ಮಾಪಕರದ್ದು ಒಪ್ಪಂದಗಳು ಕಾನೂನಾತ್ಮಕವಾಗಿದೆ- 50 ಲಕ್ಷ ಕಮಿಷನ್ ಆರೋಪಕ್ಕೆ ಎಪಿ ಅರ್ಜುನ್ ಸ್ಪಷ್ಟನೆ

    ನಮ್ಮದು, ನಿರ್ಮಾಪಕರದ್ದು ಒಪ್ಪಂದಗಳು ಕಾನೂನಾತ್ಮಕವಾಗಿದೆ- 50 ಲಕ್ಷ ಕಮಿಷನ್ ಆರೋಪಕ್ಕೆ ಎಪಿ ಅರ್ಜುನ್ ಸ್ಪಷ್ಟನೆ

    ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Film) ಸಿನಿಮಾ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಮಾರ್ಟಿನ್‌ ಸಿನಿಮಾ ವಿಷ್ಯವಾಗಿ ನಿರ್ದೇಶಕ ಎ.ಪಿ ಅರ್ಜುನ್ 50 ಲಕ್ಷ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ಆರೋಪಕ್ಕೆಲ್ಲಾ ಎಪಿ ಅರ್ಜುನ್ (Ap Arjun) ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೊಮ್ಮೆ 50 ಲಕ್ಷ ಕಮಿಷನ್ ವಿಚಾರಕ್ಕೆ ನಿರ್ದೇಶಕ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ

    ‘ಮಾರ್ಟಿನ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಎಪಿ ಅರ್ಜುನ್ ಮಾತನಾಡಿ, ನಮ್ಮದು ಹಾಗೂ ನಿರ್ಮಾಪಕ ಉದಯ್ ಮೆಹ್ತಾರದ್ದು ಒಪ್ಪಂದಗಳು ಏನಿವೆ ಅದು ಕಾನೂನಾತ್ಮಕವಾಗಿದೆ. ಬಾಯಿ ಮಾತಿನಲ್ಲಿ ಹೇಳಿದರೆ ಮಾತು ತಪ್ಪಬಹುದು. ಅದಕ್ಕೆ ಲೀಗಲ್ ಆಗಿಯೇ ಎಲ್ಲವೂ ನಡೆದಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಒಬ್ಬರು 50 ಲಕ್ಷ ಅಂದರು, ಇನ್ನೊಬ್ಬರು ಒಂದು ಕೋಟಿ ಅಂದರೆ, ಮತ್ತೊಬ್ಬರು 20 ಕೋಟಿ ಅಂತ ಹೇಳುತ್ತಿದ್ದಾರಲ್ಲ. ನಾನು ಐದು ಸಾವಿರ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದೇನೆ ಅಂತ ಹೇಳಿದರೆ, ನಾನು ಒಂದು ಕೋಟಿ ರೂಪಾಯಿ ಕೊಡುತ್ತೇನೆ ಎಂದು ಮಾಧ್ಯಮದ ಮುಂದೆ ಎಪಿ ಅರ್ಜುನ್ ಸವಾಲು ಹಾಕಿದ್ದಾರೆ.

    ಇದೇ ವೇಳೆ ನಿರ್ಮಾಪಕ ಉದಯ್ ಮೆಹ್ತಾ (Uday Mehta) ಮಾತನಾಡಿ, ‘ಡಿಜಿಟಲ್ ಟರೇನ್’ ಅನ್ನೋ ಕಂಪನಿಯ ಸತ್ಯ ರೆಡ್ಡಿ, ಸುನೀಲ್ ರೆಡ್ಡಿ ಮೇಲೆ ಕಂಪ್ಲೇಟ್ ಕೊಟ್ಟಿದ್ದೇನೆ. ನಮ್ಮ ಟೀಂ ಅವರ ಮೇಲೆ ದೂರು ಕೊಟ್ಟಿಲ್ಲ. ಇಲ್ಲಿಯವರೆಗೂ ಯಾವ ಕಾಂಟ್ರವರ್ಸಿ ಇರಲಿಲ್ಲ, ಈಗಲೂ ಇಲ್ಲ. ಅಂದು ಎಪಿ ಅರ್ಜುನ್ ಪ್ರೇಸ್ ಮೀಟ್ ಮಾಡಿದಾಗ ನಾನು ಊರಲ್ಲಿ ಇರಲಿಲ್ಲ. ಎಷ್ಟೇ ಅಡೆತಡೆಯಾದ್ರೂ ಅಂದುಕೊಂಡಂತೆ ‘ಮಾರ್ಟಿನ್’ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ಮಾತನಾಡಿದ್ದಾರೆ.

  • ‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

    ‘ಕಂಗುವ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್- ದೇವರ, ಮಾರ್ಟಿನ್ ಜೊತೆ ಕ್ಲ್ಯಾಶ್

    ಮಿಳು ನಟ ಸೂರ್ಯ (Suriya) ನಟನೆಯ ‘ಕಂಗುವ’ (Kanguva) ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ದಸರಾ ಪ್ರಯುಕ್ತ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಧ್ರುವ ಸರ್ಜಾ ನಟನೆಯ `ಮಾರ್ಟಿನ್’ಗೆ (Martin), ದೇವರ ಸಿನಿಮಾಗೆ ಠಕ್ಕರ್ ಕೊಡಲು ರೆಡಿಯಾಗಿದೆ.

    ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ‘ಕಂಗುವ’ ಸಿನಿಮಾ ರಿಲೀಸ್ ಆಗ್ತಿದೆ. ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಫ್ಯಾಂಟಸಿ ಸಿನಿಮಾವು ದಸರಾ ಹಬ್ಬದ ಸಂದರ್ಭದಲ್ಲಿ ಮನರಂಜನೆ ಕೊಡಲು ರೆಡಿಯಾಗಿದೆ. ಇದನ್ನೂ ಓದಿ:ಪ್ಯಾನ್ ಇಂಡಿಯಾ ಚಿತ್ರ ಘೋಷಿಸಿದ ಸಾಯಿ ಧರಮ್ ತೇಜ್ ಹೀರೋ

    ಜ್ಯೂ.ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ನಟನೆಯ ‘ದೇವರ’ (Devara)ಕೂಡ ಅಕ್ಟೋಬರ್ 10ರಂದು ರಿಲೀಸ್‌ಗೆ ಸಿದ್ಧವಾಗಿದೆ. ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬರಲಿದೆ. ಈ ಮೂರು ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್ ಆಗಲಿದೆ.

    ಇದೀಗ ಪರಭಾಷಾ ಸಿನಿಮಾದ ಮುಂದೆ ಬಹುನಿರೀಕ್ಷಿತ ‘ಮಾರ್ಟಿನ್’ ಪೈಪೋಟಿ ಕೊಡಲಿದೆಯಾ ಕಾದುನೋಡಬೇಕಿದೆ. ಈ ಸಿನಿಮಾಗಳ ಸ್ಪರ್ಧೆಯಲ್ಲಿ ಗೆಲ್ಲೋರು ಯಾರು? ಸೋಲೋರು ಯಾರು ಎಂದು ಕಾಯಬೇಕಿದೆ.

  • ವಿಮಾನ ದುರಂತದಿಂದ ಧ್ರುವ ಸೇಫ್‌- Thank God ಅಂದ್ರು ಮೇಘನಾ ರಾಜ್‌

    ವಿಮಾನ ದುರಂತದಿಂದ ಧ್ರುವ ಸೇಫ್‌- Thank God ಅಂದ್ರು ಮೇಘನಾ ರಾಜ್‌

    ಟ ಧ್ರುವ ಸರ್ಜಾ (Dhruva Sarja) ಅವರು ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಬೆನ್ನಲ್ಲೇ ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಪ್ರತಿಕ್ರಿಯೆ ನೀಡಿದ್ದಾರೆ. ಧ್ರುವ ಸರ್ಜಾ ಸೇಫ್ ಆಗಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಅವತಾರದಲ್ಲಿ ಸೋನಾಲಿ- ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ನಟಿ

    ಧ್ರುವ ಸರ್ಜಾ, ಎಪಿ ಅರ್ಜುನ್, ನಾಯಕಿ ವೈಭವಿ ಸೇರಿದಂತೆ ‘ಮಾರ್ಟಿನ್’ (Martin Film) ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಸದ್ಯ ಚಿತ್ರತಂಡ ಸೇರಿದಂತೆ ವಿಮಾನ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಈ ಘಟನೆ ಸಂಭವಿಸಿದ ಬೆನ್ನಲ್ಲೇ ಧ್ರುವ ಕುರಿತು ಅಭಿಮಾನಿಗಳಿಗೆ ಅಪ್‌ಡೇಟ್ ನೀಡಿದ್ದಾರೆ. ಈಗಷ್ಟೇ ಧ್ರುವ ಬಳಿ ಮಾತನಾಡಿದೆ. ಅವರು ಸೇಫ್ ಆಗಿದ್ದಾರೆ. ಮೇಲಿರುವ ದೈವಿಕ ಶಕ್ತಿಗಳಿಗೆ ಧನ್ಯವಾದಗಳು ಎಂದು ಮೇಘನಾ ರಾಜ್‌ ತಿಳಿಸಿದ್ದಾರೆ. ನಟಿಯ ಮಾತು ಕೇಳಿ ಫ್ಯಾನ್ಸ್‌ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಅಂತಿಮ ಚಿತ್ರೀಕರಣದಲ್ಲಿದ್ದ ‘ಮಾರ್ಟಿನ್’ ಚಿತ್ರತಂಡವು ಸೋಮವಾರ (ಫೆ.19) ಸಂಜೆ ಸಾಂಗ್ ಶೂಟಿಂಗ್‌ಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಪೈಲಟ್ ಪರದಾಡಿದ್ದಾರೆ. ಇದನ್ನೂ ಓದಿ:ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ & ಮಾರ್ಟಿನ್ ಟೀಂ ಪಾರು!

     

    View this post on Instagram

     

    A post shared by Dhruva Sarja (@dhruva_sarjaa)

    ಸೀಟ್‌ಗಳು ನಡುಗಿದೆ, ಪ್ರಯಾಣಿಕರು ಗಾಬರಿ ಆಗಿದ್ದಾರೆ. ಕೊನೆಗೆ ಪೈಲಟ್‌ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವೀಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ. ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದು, ಇದಕ್ಕೆ ಮಾರ್ಟಿನ್ ತಂಡವೂ ದನಿಗೂಡಿಸಿದೆ.

    ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ಬಗ್ಗೆ ನಟ ಧ್ರುವ ಸರ್ಜಾ ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಸಿಕ್ಕಂತಾಗಿದೆ. ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಅವರ ಸಂಪೂರ್ಣ ಆಶೀರ್ವಾದದ ಫಲ. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ. ಜೈ ಆಂಜನೇಯ ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ.

  • ಥೈಲ್ಯಾಂಡ್‌ಗೆ ಧ್ರುವ ಸರ್ಜಾ- ‘ಮಾರ್ಟಿನ್’ ಬಿಗ್ ಅಪ್‌ಡೇಟ್

    ಥೈಲ್ಯಾಂಡ್‌ಗೆ ಧ್ರುವ ಸರ್ಜಾ- ‘ಮಾರ್ಟಿನ್’ ಬಿಗ್ ಅಪ್‌ಡೇಟ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ವಿದೇಶಕ್ಕೆ ಹಾರಲು ರೆಡಿಯಾಗಿದ್ದಾರೆ. ವಿಶ್ವದ ದುಬಾರಿ ಕಾರುಗಳಲ್ಲಿ ಧ್ರುವ ಸವಾರಿ ಮಾಡಲು ಅಣಿಯಾಗಿದ್ದಾರೆ. 500 ಮಾಡೆಲ್ಸ್, ಸೂಪರ್ ಕಾರು, ಸ್ಪೀಡ್ ಬೋಟ್, ಚಾಪರ್ ಕತೆಯ ಬಗ್ಗೆ ಇಲ್ಲಿದೆ ಮಾಹಿತಿ.

    ಧ್ರುವ ಸರ್ಜಾ ಲಗೇಜ್ ಪ್ಯಾಕ್ ಮಾಡಿ ರೆಡಿಯಾಗಿದ್ದಾರೆ. ‘ಮಾರ್ಟಿನ್ (Martin) ಫೈನಲ್ ಶೂಟ್ ಮಾಡಲು ರೆಡಿಯಾಗ್ತಿದ್ದಾರೆ. ಮಾರ್ಟಿನ್ ಸಿನಿಮಾದ ಒಂದು ಹಾಡಿಗೆ ಕೋಟಿ ಕೋಟಿ ಬಂಡವಾಳ ಹಾಕ್ತಿದ್ದಾರೆ ನಿರ್ಮಾಪಕ ಉದಯ್ ಮೆಹ್ತಾ. ಮಲೇಶಿಯಾದಲ್ಲಿ ಮಾರ್ಟಿನ್ ಇಂಟ್ರೊಡಕ್ಷನ್ ಸಾಂಗ್ ಶೂಟ್ ಮಾಡಲು ಪ್ಲ್ಯಾನ್ ಆಗಿದೆ. 500 ಜನ ಟಾಪ್ ಮಾಡೆಲ್ಸ್ ಈ ಹಾಡಿನಲ್ಲಿ ಸೊಂಟ ಬಳುಕಿಸಲಿದ್ದಾರೆ. ದುನಿಯಾದ ಕಾಸ್ಟ್ಲಿ ಕಾರುಗಳನ್ನ ಈ ಸಾಂಗ್ ಶೂಟ್‌ನಲ್ಲಿ ಬಳಸಲಾಗ್ತಿದೆ. ಇದನ್ನೂ ಓದಿ:ಚಡ್ಡಿ ಚಿಕ್ಕಿ ಸೋನು ಗೌಡ: ಏನ್ ಹಾವಳಿ ಗುರು ಎಂದಿದ್ದಾರೆ ಫ್ಯಾನ್ಸ್

    Dhruva Sarja

    ಇಷ್ಟೂ ಕಲರ್‌ಫುಲ್ ವಿಶ್ಯುವಲ್ಸ್ ಸೆರೆ ಹಿಡಿಯಲು ಚಾಪರ್ ಕೂಡ ಸಿದ್ದವಾಗಿದೆ. 7 ದಿನಗಳ ಶೂಟಿಂಗ್ ಪ್ಲ್ಯಾನ್ ಕೂಡ ಫೈನಲ್ ಆಗಿದೆ. ಸಾಂಗ್ ಜೊತೆಗೆ ಒಂದಿಷ್ಟು ಆ್ಯಕ್ಷನ್ ಸೀನ್‌ಗಳನ್ನ ಕೂಡ ಥೈಲ್ಯಾಂಡ್‌ನಲ್ಲಿ ಮಾರ್ಟಿನ್ ಟೀಮ್ ಶೂಟ್ ಮಾಡಲಿದೆ. ವಿದೇಶ ನೆಲದಲ್ಲಿ ಮಾರ್ಟಿನ್ ಆಟ ಶುರುವಾಗಲಿದೆ. ಧ್ರುವ ಪಕ್ಕಾ ಮಾಸ್ ಮಸಾಲ ಸಿನಿಮಾ ಕೊಡಲು ಬೆವರು ಹರಿಸ್ತಿದ್ದಾರೆ. ಕಷ್ಟಕ್ಕೆ ತಕ್ಕ ಬೆಲೆ ಸಿಗಲಿದೆ ಅಂತಿದೆ ಗಾಂಧಿನಗರ. ಮಾರ್ಟಿನ್ ಪಕ್ಕಾ ಹಬ್ಬದೂಟ ಅಂತಿದ್ದಾರೆ ಫ್ಯಾನ್ಸ್.

    ಎ.ಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ ಹಬ್ಬದಂದು ಮಗ ಮನೆಗೆ ಬಂದಿದ್ದಾನೆ- ಧ್ರುವ ಸರ್ಜಾ

    ಗಣೇಶ ಹಬ್ಬದಂದು ಮಗ ಮನೆಗೆ ಬಂದಿದ್ದಾನೆ- ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಗಣೇಶ ಹಬ್ಬದಂದು (Ganesha Festival) ಧ್ರುವ ಪತ್ನಿ ಪ್ರೇರಣಾ(Prerana) ಗಂಡು ಮಗುವಿಗೆ(Baby Boy)  ಜನ್ಮ ನೀಡಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

    ಮಗನ ಆಗಮನದ ಸಂತಸದ ಬಗ್ಗೆ ಧ್ರುವ ಮಾತನಾಡಿ, ಗಣೇಶ ಹಬ್ಬದ ದಿನ ಮನೆಗೆ ಮಗ ಬಂದಿದ್ದಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು ಎಂದು ನಟ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಯಂಗ್ ಮ್ಯಾನ್’ ಇದು ಸಿಂಗಲ್ ಟೇಕ್ ಸಿನಿಮಾ

    ಇವತ್ತು 11 ಕಡೆ ಗಣೇಶನ ದರ್ಶನ ಮಾಡಲು ಹೋಗಬೇಕಿತ್ತು. ಆದರೆ ಮುಂದೆ ಮಾಡ್ತಿನಿ, ಮಗನ ಆಗಮನ ಖುಷಿ ಕೊಟ್ಟಿದೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಮಾತನಾಡಿದ್ದಾರೆ.

    ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೀಮಂತದ ಸಂಭ್ರಮದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ಸೀಮಂತದ ಸಂಭ್ರಮದಲ್ಲಿ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ದಂಪತಿ ಸದ್ಯ 2ನೇ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಸಿಹಿಸುದ್ದಿ ಜೊತೆ ಇತ್ತೀಚಿಗೆ ಧ್ರುವ ಪತ್ನಿ ಪ್ರೇರಣಾಗೆ (Prerana) ಸೀಮಂತ (Baby Shower) ಕಾರ್ಯಕ್ರಮ ನೆರವೇರಿದ್ದು, ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದಾರೆ.

    ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದಾರೆ. ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ.

    ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ (Chiru) ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ. ಧ್ರುವ ದಂಪತಿ, ಮಗಳಿಗೆ ಚಿರು ಅಂತ ಹೆಸರು ಹೇಳಿ ಕೊಡುತ್ತಿರೋದು ಮುದ್ದಾಗಿದೆ.ಇದನ್ನೂ ಓದಿ:3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ? ವೈರಲ್‌‌ ಆಯ್ತು ಫೋಟೋ

    ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರೇರಣಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ.  ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್‌ ಮಾಡಿದ್ದಾರೆ.

    ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮಾರ್ಟಿನ್’ ಧ್ರುವ ಜೊತೆ ಸೊಂಟ ಬಳುಕಿಸಿದ ಜಾರ್ಜಿಯಾ ಆಂಡ್ರಿಯಾನಿ

    ‘ಮಾರ್ಟಿನ್’ ಧ್ರುವ ಜೊತೆ ಸೊಂಟ ಬಳುಕಿಸಿದ ಜಾರ್ಜಿಯಾ ಆಂಡ್ರಿಯಾನಿ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ (Martin Film) ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಟಾಲಿಯನ್ ಸುಂದರಿ ಜಾರ್ಜಿಯಾ (Giorgia Andriani)  ಜೊತೆ ಧ್ರುವ ಸರ್ಜಾ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಬಾಲಿವುಡ್‌ ನಟಿ ಜಾರ್ಜಿಯಾ ಕನ್ನಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ.

    ‘ಮಾರ್ಟಿನ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಇದರೊಟ್ಟಿಗೆ ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ಶೂಟ್ ಕೂಡ ಮುಕ್ತಾಯವಾಗಿದೆ. ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಬಿಂದಾಸ್ ಹಾಡಿಗೆ ಚಿತ್ರೀಕರಣ ಮಾಡಲಾಗಿದೆ. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾವಾಗಿದೆ. ಮಣಿ ಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. 300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. 3.5 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಗ್ ಶೂಟಿಂಗ್ ನಡೆದಿದೆ. ಇನ್ನು 2 ಸಾಂಗ್ ಶೂಟಿಂಗ್ ಬಾಕಿಯಿದೆ.

    ‘ಪೊಗರು’ ಸಿನಿಮಾ ನಂತರ ಮಾರ್ಟಿನ್ ಆಗಿ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಾರೆ. ಅದ್ದೂರಿ ಚಿತ್ರದ ನಂತರ 2ನೇ ಬಾರಿ ಧ್ರುವಗೆ ಎ.ಪಿ ಅರ್ಜುನ್ (A.p Arjun) ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಟಿನ್‌ಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ. ಇದನ್ನೂ ಓದಿ:ಇಂಡಿಯಾ ಬದಲು ‘ಭಾರತ್‌’ ಎಂದು ಹೆಸರಿಡಲು ಬಿಗ್ ಬಿ ಬೆಂಬಲ

    ಕಳೆದ ವರ್ಷ ಮಾರ್ಟಿನ್ (Martin) ಟೀಸರ್‌ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ದುಬಾರಿ ಕಾರು ಗಿಫ್ಟ್‌ ನೀಡಿದ ‘ಮಾರ್ಟಿನ್‌’ ಹೀರೋ ಧ್ರುವ ಸರ್ಜಾ

    ಸ್ನೇಹಿತನ ಹುಟ್ಟುಹಬ್ಬಕ್ಕೆ 52 ಲಕ್ಷ ಮೌಲ್ಯದ ದುಬಾರಿ ಕಾರು ಗಿಫ್ಟ್‌ ನೀಡಿದ ‘ಮಾರ್ಟಿನ್‌’ ಹೀರೋ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ (Sandalwood) ನಟ ಧ್ರುವ ಸರ್ಜಾ ಅವರು ಆಪ್ತ ಸ್ನೇಹಿತನಿಗೆ ದುಬಾರಿ ಗಿಫ್ಟ್‌ವೊಂದನ್ನ ಕೊಟ್ಟಿದ್ದಾರೆ. ಧ್ರುವ ಸರ್ಜಾ (Dhruva Sarja)  ನಡೆಗೆ ಸ್ನೇಹಿತ್ ಅಚ್ಚರಿ ಪಟ್ಟಿದ್ದಾರೆ. ಅದಷ್ಟೇ ಅಲ್ಲ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ‘ಮಾರ್ಟಿನ್’, ‘ಕೆಡಿ’ (Kd Film) ಸಿನಿಮಾದ ಶೂಟಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಬಿಟ್ಟು ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸ್ನೇಹಿತ ಅಶ್ವಿನ್, ಧ್ರುವ ಸರ್ಜಾ (Dhruva Sarja)  ಸಿನಿಮಾಗಳಿಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅಶ್ವಿನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ದಿನದಂದು ಧ್ರುವ ಸರ್ಜಾ ದಿಢೀರನೇ ಕೊಟ್ಟ ಸರ್ಪ್ರೈಸ್ ಗಿಫ್ಟ್‌ಗೆ (Gift)  ಅವರ ಕಣ್ಣುಗಳು ಒದ್ದೆಯಾಗಿವೆ.

    ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ನಟ ಧ್ರುವ ಸರ್ಜಾ, ನಟಿಸಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿವೆ. ಶೀಘ್ರದಲ್ಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಕೂಡ ಆಗುತ್ತೆ. ಹೀಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ತನ್ನ ಆತ್ಮೀಯರ ಸುಖ-ಸಂತೋಷದಲ್ಲೂ ಭಾಗಿಯಾಗಿದ್ದಾರೆ. ತನ್ನ ಆತ್ಮೀಯ ಗೆಳೆಯ ಅಶ್ವಿನ್‌ಗೆ ದುಬಾರಿ ಮೊತ್ತ ಕಾರನ್ನು ಗಿಫ್ಟ್ ಮಾಡಿದ್ದಾರೆ. ಅಶ್ವಿನ್ ಹುಟ್ಟುಹಬ್ಬದಂದು, 52 ಲಕ್ಷ ರೂ. ದುಬಾರಿ ಬೆಲೆ ಬಾಳುವ ಕಾರನ್ನು ಧ್ರುವ ಸರ್ಜಾ ಉಡುಗೊರೆಯಾಗಿ ನೀಡಿದ್ದಾರೆ. ದುಬಾರಿ ಟೊಯೊಟಾ ಫಾರ್ಚುನರ್ (Toyota Fortuner) ಕಾರನ್ನು ನೀಡಿದ್ದಷ್ಟೇ ಅಲ್ಲ, ಬಾಲ್ಯದಲ್ಲೇ ನಿಧನರಾಗಿರೋ ಅಶ್ವಿನ್ ತಂದೆ-ತಾಯಿಯ ಫೋಟೋವನ್ನೂ ಹುಡುಕಿ ಕಾರಿನಲ್ಲಿಟ್ಟು ಗಿಫ್ಟ್ ಮಾಡಿದ್ದಾರೆ.

    ಧ್ರುವ ಸರ್ಜಾ ಖುದ್ದಾಗಿ ಅಶ್ವಿನ್ ಜೊತೆ ಶೋ ರೂಮ್‌ಗೆ ಬಂದಿದ್ದರು. ದುಬಾರಿ ಕಾರನ್ನು ಸರ್ಪ್ರೈಸ್ ಗಿಫ್ಟ್ ಮಾಡಿದ್ದರು. ಆ ಸಂದರ್ಭದಲ್ಲಿ ಅಶ್ವಿನ್ ಕಣ್ಣುಗಳು ಖುಷಿಗೆ ಒದ್ದೆಯಾಗಿದ್ದವು. ಇದೇ ವೇಳೆ ಶೋ ರೂಮ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಸಂಕಷ್ಟದಲ್ಲಿ ಅಶ್ವಿನ್‌ರನ್ನು ಕರೆತಂದು ತನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ ಧ್ರುವ ಸರ್ಜಾ. ಅಲ್ಲದೆ ಅವರ ಜೀವನಕ್ಕೆ ದಾರಿಯನ್ನೂ ಮಾಡಿಕೊಟ್ಟಿದ್ದಾರೆ.

  • ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಅವರು ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD) ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಗಳ ಜೊತೆಗಿನ ಫೋಟೋವನ್ನ ನಟ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗಿನ ಚೆಂದದ ವೀಡಿಯೋವೊಂದನ್ನ ಧ್ರುವ ಶೇರ್ ಮಾಡಿದ್ದಾರೆ.

    ಧ್ರುವ ಸರ್ಜಾ- ಪ್ರೇರಣಾ (Prerana) ಬದುಕಲ್ಲಿ ಪುಟ್ಟ ಲಕ್ಷ್ಮಿಯ ಆಗಮನವಾದ ಮೇಲೆ ಬದುಕು ಬದಲಾಗಿದೆ. ಮನೆಯಲ್ಲಿ ಸಂತಸ ಮನೆ ಮಾಡಿದೆ. ಕಳೆದ ವರ್ಷ ಅಕ್ಟೋಬರ್ 5ರಂದು ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗಳ ಮುಖ ತೋರಿಸಿರಲಿಲ್ಲ. ಇತ್ತೀಚಿಗೆ ಮಗಳ ಮುದ್ದಾದ ಫೋಟೋವನ್ನ ಧ್ರುವ ಸರ್ಜಾ ರಿವೀಲ್ ಮಾಡಿದ್ದಾರೆ.

    ಈಗ ಧ್ರುವ ಶೇರ್ ಮಾಡಿರುವ ಮುದ್ದು ಮಗಳ ವೀಡಿಯೋಗೆ ಅಭಿಮಾನಿಗಳಿಂದ ಮೆಚ್ಚಿಗೆ ವ್ಯಕ್ತವಾಗಿದೆ. ಪರಿಸರ ನಡುವೆ ಚೆಂದದ ಫೋಟೋಶೂಟ್ ಮಾಡಿಸಿ, ಬಳಿಕ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವ ದೃಶ್ಯಗಳು ಈ ವೀಡಿಯೋದಲ್ಲಿದೆ. ಮಗಳ 7 ತಿಂಗಳ ಸುಂದರ ಜರ್ನಿಯನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ

     

    View this post on Instagram

     

    A post shared by Dhruva Sarja (@dhruva_sarjaa)

    ಧ್ರುವ ಸರ್ಜಾ – ಪ್ರೇರಣಾ ಮುಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. 7 ತಿಂಗಳ ನಂತರ ಫೋಟೋ ರಿವೀಲ್ ಮಾಡಿರೋ ನಟ ಮುಂದೆ ಮಗಳಿಗೆ ಏನು ಹೆಸರಿಡಬಹುದು ಎಂದು ಎದುರುನೋಡ್ತಿದ್ದಾರೆ. ಪಕ್ಕಾ ಫ್ಯಾಮಿಲಿ ಮೆನ್ ಆಗಿರೋ ಧ್ರುವ- ಪುಟ್ಟ ಮಗಳ ವೀಡಿಯೋ ಫ್ಯಾನ್ಸ್ ಖುಷಿಪಡ್ತಿದ್ದಾರೆ.