Tag: marrying

  • ಬಣ್ಣದ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆ

    ಬಣ್ಣದ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆ

    ಸ್ಯಾಕ್ರಮೆಂಟೊ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಯಾರ ಹಣೆಯ ಬರಹದಲ್ಲಿ ಯಾರು, ಯಾರ ಬಾಳಲ್ಲಿ ಯಾರು ಬರಬೇಕು ಎಂದು ಬರೆದಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಒಂದು ಹೆಣ್ಣಿಗೆ, ಗಂಡು ಎಂದು ದೇವರು ಬರೆದಿರುತ್ತಾನೆ. ಆದರೆ ಇಲ್ಲೊಬ್ಬ ಮಹಿಳೆ ತಾನು ತುಂಬಾ ಇಷ್ಟಪಡುವ ಬಣ್ಣದ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವಿಚಾರ ಇದೀಗ ಸಖತ್ ಸುದ್ದಿಯಲ್ಲಿದೆ.

    ಕ್ಯಾಲಿಫೋರ್ನಿಯಾದ ಕಿಟನ್ ಕೇಸೆರಾ ಎನ್ನುವ ಮಹಿಳೆಗೆ ಗುಲಾಬಿ ಬಣ್ಣ ಕಂಡರೆ ಎಲ್ಲಿಲ್ಲದ ಪ್ರೀತಿ. 40 ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದಾರೆ. ಈ ಬಣ್ಣದ ಜೊತೆಗೆ ತುಂಬಾ ಆತ್ಮೀಯವಾದ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಬಣ್ಣದ ಜೊತೆಗೆ ಮದುವೆಯಾಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

     

    View this post on Instagram

     

    A post shared by Kitten Kay Sera (@kittenkaysera)

    ನಾನು ಪಿಂಕ್ ಬಣ್ಣದ ಜೊತೆಗೆ ವಿವಾಹವಾಗಿದ್ದೇನೆ. 40 ವರ್ಷಗಳ ಡೇಟಿಂಗ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ನನಗೆ ಗುಲಾಬಿ ಬಣ್ಣ ಎಂದರೆ ಮೊದಲಿನಿಂದ ಪ್ರೀತಿ, ಆದರೆ ಯಾಕೆ ಈ ಬಣ್ಣ ಇಷ್ಟೊಂದು ಪ್ರೀತಿ ಎಂದು ನನಗೆ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಕಿಟನ್ ಕೇಸೆರಾ ಇತ್ತೀಚೆಗೆ ತಮ್ಮ ನೆಚ್ಚಿನ ಗುಲಾಬಿ ಬಣ್ಣದ ಜೊತೆಗೆ ಲಾಸ್ ವೇಗಾಸ್‍ನಲ್ಲಿ ವಿವಾಹವಾಗಿದ್ದಾರೆ. ಇವರ ಮದುವೆಯಲ್ಲಿ ಬಟ್ಟೆಯಿಂದ ಹಿಡಿದು ಕೇಕ್‍ವರೆಗೂ ಎಲ್ಲದರ ಬಣ್ಣವೂ ಪಿಂಕ್ ಆಗಿರುವುದು ವಿಶೇಷವಾಗಿತ್ತು. ತಮ್ಮ ವಿವಾಹವನ್ನು ಗುಲಾಬಿ ಬಣ್ಣದ ಗೌನ್, ಗುಲಾಬಿ ಬಣ್ಣದ ಕೋಟ್ ಮತ್ತು ಗುಲಾಬಿ ಕಿರೀಟವನ್ನು ಧರಿಸಿದ್ದರು. ಕೂದಲಿಗೆ ಕೂಡ ಪಿಂಕ್ ಬಣ್ಣವನ್ನು ಹಾಕಿಕೊಂಡಿದ್ದಾರೆ. ಮದುವೆ ಅಲಂಕಾರ ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ತುಂಬಿತ್ತು.

  • ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪ್ರೇಮಾ ಅವರ ವೈಯಕ್ತಿಕ ಜೀವನದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಸುದ್ದಿಗಳ ಕುರಿತಾಗಿ ಕೊನೆಗೂ ಮನಸ್ಸುಬಿಚ್ಚಿ  ಮಾತನಾಡಿದ್ದಾರೆ.

    ನಟಿ ಪ್ರೇಮಾ ಮೊದಲ ಮದುವೆ ಮುರಿದು ಬಿದ್ದ ನಂತರದಲ್ಲಿ ಅವರ ತಂದೆ ನಿಧನರಾದರು. ಪ್ರೇಮಾರಿಗೆ ಎರಡನೇ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ತುಂಬ ಒತ್ತಾಯ ಮಾಡಲಾಗುತ್ತಿದೆ. ಈಗ ಅವರು ಮದುವೆಯಾಗಲಿದ್ದಾರೆ. ಪ್ರೇಮಾರಿಗೆ ಖಿನ್ನತೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಮಾ ಅವರು ಮತ್ತೆ ಮದುವೆಯಾಲಿದ್ದಾರೆ  ಎಂದೆಲ್ಲ ಗಾಸಿಪ್‍ಗಳು ಹರಡುತ್ತಿವೆಯಂತೆ. ಇದನ್ನೂ ಓದಿ: ಮಗ ಇವುಗಳನ್ನು ಮಿಸ್ ಮಾಡಿಕೊಳ್ತಿದ್ದಾನೆ ಅಂದ್ರು ಕ್ರೇಜಿ ಕ್ವೀನ್..!

    ಎರಡನೇ ಮದುವೆಯಾಗುತ್ತಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆಯಂತೆ, ಇದೆಲ್ಲವೂ ಸುಳ್ಳು ಸುದ್ದಿ, ಇದನ್ನು ನಂಬಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ನಟಿ ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಕೂಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದಾಗ ಖಾಸಗಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೇಮಾ ಅವರು ಮದುವೆ ವಿಚಾರ ಏನಾಯ್ತು ಅಂತ ಹೇಳಲು ಇಷ್ಟವಿಲ್ಲ, ನಾನು ಆರೋಗ್ಯವಾಗಿದ್ದೇನೆ, ನನಗೆ ಮಕ್ಕಳಿಲ್ಲ ಎಂದು ಹೇಳಿದ್ದರು.

    ಓಂ, ಕನಸುಗಾರ, ನಮ್ಮೂರ ಮಂದಾರ ಹೂವೇ ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾ ನೀಡಿರುವ ನಟಿ ಪ್ರೇಮಾ ಅವರು ಸದ್ಯ ಯಾವುದೇ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ. 2009ರಲ್ಲಿ ಶಿಶಿರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಪ್ರೇಮಾ ಅವರು 2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರದಲ್ಲಿ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿಯಾದರೂ ಪ್ರೇಮಾ ಅವರು ತೆರೆ ಮೇಲೆ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.