Tag: Marry

  • ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ

    ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ

    ಲಕ್ನೋ: ಕ್ರೈಸ್ತ ಸಮುದಾಯದ ವರ, ಮುಸ್ಲಿಂ ಯುವತಿ ಇವರಿಬ್ಬರೂ ಹಿಂದೂ ಪದ್ಧತಿಯಂತೆ ವಿವಾಹವಾಗಿ ಹೊಸ ಜೀವನಕ್ಕೆ ಪ್ರವೇಶಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ವಿಶಿಷ್ಟ ವಿವಾಹ ನಡೆದಿದೆ.

    2022 ಮಾರ್ಚ್ 30 ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ವಿಶಿಷ್ಟ ವಿವಾಹ ನಡೆದಿದೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸುಮಿತ್ ಮತ್ತು ನೂರ್ ಪರಿಚಯವಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದಾಗ ಇಬ್ಬರ ಕಡೆಯಿಂದಲೂ ಧರ್ಮ ಅಡ್ಡಿಯಾಯಿತು. ಸನಾತನ ಪದ್ಧತಿಗಳ ಬಗ್ಗೆ ಅದಾಗಲೇ ಅರಿವು ಮತ್ತು ಪ್ರೀತಿ ಹೊಂದಿದ್ದ ಸುಮಿತ್ ತಾವಿಬ್ಬರೂ ಹಿಂದೂ ಧರ್ಮಕ್ಕೆ ಮರಳುವ ಪ್ರಸ್ತಾಪ ಇಟ್ಟಾಗ ಅದು ನೂರ್‌ಗೆ ಒಪ್ಪಿಗೆಯಾಯಿತು. ಆಕೆ ನಿಶಾ ಆಗಿ ಬದಲಾಗಿದ್ದಾಳೆ.

    ವಿವಾಹ ಸಂದರ್ಭದಲ್ಲಿ ತಾವಿಬ್ಬರೂ ಸನಾತನ ಧರ್ಮದ ಪದ್ಧತಿಗಳನ್ನು ಜೀವನಪೂರ್ತಿ ಅನುಸರಿಸುವುದಾಗಿ ಘೋಷಿಸಿಕೊಂಡಿರುವ ನಿಶಾ, ತಾನು ಈ ಹಿಂದಿನಿಂದಲೇ ದುರ್ಗೆಯ ಭಕ್ತೆ ಎಂದು ಹೇಳಿಕೊಂಡಿದ್ದಾರೆ. ಈ ವಿವಾಹದ ನಂತರ ಹುಡುಗಿಯ ಕುಟುಂಬವು ದೂರು ದಾಖಲಿಸಿದ್ದು, ಸುಮಿತ್ ತಮ್ಮ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆಯಾಗಿರುವುದಾಗಿ ವಧು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್

  • ಪ್ರೇಯಸಿ ಭೇಟಿಯಾಗಿದ್ದಕ್ಕೆ ಬಲವಂತವಾಗಿ ವಿವಾಹ!

    ಪ್ರೇಯಸಿ ಭೇಟಿಯಾಗಿದ್ದಕ್ಕೆ ಬಲವಂತವಾಗಿ ವಿವಾಹ!

    ಪಾಟ್ನಾ: ಪ್ರೇಯಸಿಯನ್ನು ಭೇಟಿಯಾಗಲು ಹೋದ ಯುವಕನನ್ನು ಬಲವಂತವಾಗಿ ವಿವಾಹ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

    ಆದಿತ್ಯ ಕುಮಾರ್ ತನ್ನ ಪ್ರೇಯಸಿಯನ್ನು ಹೊಲದಲ್ಲಿ ಭೇಟಿಯಾಗಲು ಹೋಗಿದ್ದನು. ಇಬ್ಬರು ಜೊತೆಯಲ್ಲಿರುವುದನ್ನು ಗಮನಿಸಿದ ಗ್ರಾಮಸ್ಥರು ಯುವಕನನ್ನು ಥಳಿಸಿ, ಅವನನ್ನು ಬಂಧನದಲ್ಲಿಟ್ಟು ಕೊಂಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ನಂತರ ಆದಿತ್ಯ ಕುಮಾರ್‌ಗೆ ಆತನ ಪ್ರೇಯಸಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ವಧುವಿನ ಪಾಲಕರು ಸ್ಥಳಕ್ಕೆ ಆಗಮಿಸಿ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಯುವಕನ ಕುಟುಂಬಕ್ಕೂ ಈ ಕುರಿತು ತಿಳಿಸಲಾಗಿದೆ. ಬಿಹಾರದಲ್ಲಿ ಇಂತಹ ಬಲವಂತದ ವಿವಹಾಗಳು ಸಾಮನ್ಯವಾಗಿದೆ. ಆದರೆ ಈ ಘಟನೆಯ ಕುರಿತಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ.

  • ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಟೋಕಿಯೋ: ರಾಜಕುಮಾರಿ ಮಾಕೋ ರಾಜಮನೆತನಕ್ಕೆ ಸೇರದ ಕಾಲೇಜು ದಿನಗಳಲ್ಲಿ ಸಹಪಾಠಿಯಾಗಿದ್ದ ಕಿ ಕೊಮೊರೋ ಅವರನ್ನು ಮದುವೆಯಾಗಿದ್ದಾರೆ. ಈ ಮೂಲಕವಾಗಿ ರಾಜ ಮನೆತನಕ್ಕೆ ಸಿಗುವ ಸ್ಥಾನಮಾನ ಕಳೆದುಕೊಂಡಿದ್ದಾರೆ.

    ರಾಜಮನೆತನದಲ್ಲಿ ಜನಿಸಿದ್ದಕ್ಕಾಗಿ ಸಿಗುವ ಎಲ್ಲಾ ಸರ್ಕಾರ ಪದವಿ ಗೌರಗಳನ್ನು ಅಧಿಕೃತವಾಗಿ ಕಳೆದುಕೊಂಡಿದ್ದಾರೆ. ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ರಾಜಕುಮಾರಿಯ ಸ್ಥಾನಮಾನಗಳನ್ನು ಅರಮನೆ ಹಿಂಪಡೆದಿದೆ. ಇದನ್ನೂ ಓದಿ:  ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ರಾಜ ಕುಟುಂಬದ ಹೊರಗಿನವರನ್ನು ರಾಜ ಕುಟುಂಬದ ಸ್ತ್ರೀಯರು ಮದುವೆಯಾದರೆ ಅವರಿಗೆ ರಾಜಮನೆತನದಿಂದ ನೀಡುವ ರಾಯಲ್ಟಿಯನ್ನು ಮಾಕೋ ತಿರಸ್ಕರಿಸಿದ್ದಾರೆ. ಜಪಾನ್‍ನ ಚಕ್ರವರ್ತಿ ಅಕಿಹಿಟೊರವರ ಮರಿ ಮೊಮ್ಮಗಳಾದ ಮಾಕೋ ಆಕೆಯ ಕಾಲೇಜಿನ ಸಹಪಾಠಿಯಾಗಿದ್ದ ಕೆಯಿ ಕೊಮುರೊ ಜೊತೆಗೆ ವಿವಾಹವಾಗಿದ್ದಾರೆ. ಸುಮಾರು 153 ಮಿಲಿಯನ್ ಭಾರತದ ಕರೆನ್ಸಿ ಪ್ರಕಾರ 10 ಕೋಟಿ ರೂಪಾಯಿ ಹಣವನ್ನು ಮಾಕೋ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

    ರಾಣಿ ಮಾಕೋ ಮದುವೆಗೆ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕವೂ ರಾಜಕುಮಾರಿ ಮಾತ್ರ ಆಕೆಯ ಸಹಪಾಠಿಯನ್ನು ವಿವಾಹವಾಗುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಸಾಮಾನ್ಯ ಹುಡುಗನನ್ನು ಮದುವೆಯಾಗುವ ಮೂಲಕವಾಗಿ ರಾಜಮನೆತನದ ಸ್ಥಾನಮಾನ ಕಳೆದುಕೊಂಡಿದ್ದಾರೆ.

  • ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಚೆನ್ನೈ: ಅವಳಿ-ಜವಳಿ ಕಥೆ ಹೇಳಿ ಎರಡನೇ ಮದುವೆಯಾಗಲು ಹೋಗಿ ವರ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎರಡನೇ ಮದುವೆಯಾಗಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದ. ಅದು ಕೂಡ ಸಿನಿಮೀಯ ಶೈಲಿಯ ಡಬಲ್ ಆ್ಯಕ್ಟಿಂಗ್ ಮೂಲಕ ಎಂಬುದು ವಿಶೇಷ. ಆದರೆ ಈತ ಇದೀ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ:  ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

    ಆರೋಪಿ ರಾಯನ್‍ಗೆ ಈ ಹಿಂದೆಯೇ ಮದುವೆಯಾಗಿತ್ತು. ಈ ದಂಪತಿಗೆ ಒಂದು ಮಗು ಇದೆ. ಇದಾಗ್ಯೂ 30 ವರ್ಷದ ರಾಯನ್ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೆ ಮೊದಲ ಪತ್ನಿ ಹಾಗೂ ಮಗುವಿರುವ ವಿಷಯವನ್ನು ರಾಯನ್ ಆಕೆಯೊಂದಿಗೆ ಮರೆಮಾಚಿದ್ದ. ಅಲ್ಲದೆ ತನ್ನ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದನು. ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ತನ್ನ ಮೊದಲ ಮದುವೆ ವಿಚಾರ ಬಹಿರಂಗವಾದರೂ ಸಂಶಯ ಮೂಡದಂತೆ ಮಾಡಲು ತನಗೆ ಸಹೋದರನೊಬ್ಬನಿದ್ದಾನೆ ಎಂದು ಮೊದಲೇ ಕಥೆ ಕಟ್ಟಿದ್ದ.

    ನಾವಿಬ್ಬರೂ ಅವಳಿ-ಜವಳಿ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದನು. ಈಗ ಅವನು ದುಬೈನಲ್ಲಿದ್ದಾನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮತ್ತಷ್ಟು ನಂಬಿಸಲು ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದನು. ಆದರೆ ಮದುವೆಗೆ ಇನ್ನೇನು ದಿನಗಳಿರುವಾಗ ಸಂಬಂಧಿಕರೊಬ್ಬರು ರಾಯನ್‍ಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿದ್ದಾರೆ.

    ಇದರಿಂದ ಸಂಶಯಗೊಂಡ ಯುವತಿ ಪ್ರಶ್ನಿಸಿದಾಗ, ನಕಲಿ ದಾಖಲೆಗಳನ್ನು ಮುಂದಿಟ್ಟಿದ್ದಾನೆ. ಆದರೆ ಆತನ ನಡವಳಿಕೆ ಬಗ್ಗೆ ಮತ್ತಷ್ಟು ಅನುಮಾನಗೊಂಡ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯುವತಿಗೆ ತನ್ನ ಪ್ರಿಯಕರನ ಅಸಲಿಯತ್ತು ಗೊತ್ತಾಗಿದೆ. ಇದೀಗ ಮೋಸ ಹೋದ ಯುವತಿಯ ಕುಟುಂಬ ನೀಡಿದ ದೂರಿನಂತೆ ಅಡಿ ಪೊಲೀಸರು ರಯಾನ್ ಹಾಗೂ ಆತನ ತಾಯಿ ಸೆಲಿನಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿ ಆರೋಪ

    ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಗೂಂಡಾಗಳನ್ನು ಛೂಬಿಟ್ಟ ಬಿಜೆಪಿ ಶಾಸಕ: ಪುತ್ರಿ ಆರೋಪ

    – ಗೂಂಡಾಗಳು ನಮ್ಮನ್ನು ಖಂಡಿತ ಕೊಲೆ ಮಾಡ್ತಾರೆ
    – ಬಿಜೆಪಿ ಶಾಸಕನ ಮಗಳ ವಿಡಿಯೋ ವೈರಲ್

    ಲಕ್ನೋ: ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳು-ಅಳಿಯನ ಮೇಲೆ ಗೂಂಡಾಗಳನ್ನು ಛೂಬಿಟ್ಟ ಆರೋಪ ಬಿಜೆಪಿ ಶಾಸಕರ ಮೇಲೆ ಕೇಳಿ ಬಂದಿದೆ.

    ‘ಪೋಷಕರಿಗೆ ಇಷ್ಟವಿಲ್ಲದ ಮದುವೆ ಮಾಡಿಕೊಂಡಿದ್ದೇನೆ. ಹೀಗಾಗಿ ಗೂಂಡಾಗಳು ನಮ್ಮನ್ನು ಖಂಡಿತ ಕೊಲೆ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ.

    23 ವರ್ಷದ ಸಾಕ್ಷಿ ಮಿಶ್ರಾ ವಿಡಿಯೋದಲ್ಲಿ ತಂದೆ ಹಾಗೂ ಸಹೋದರನನ್ನು ಅಡ್ಡ ಹೆಸರಿನಿಂದ ಪಪ್ಪು ಭರ್ತೌಲ್ ಮತ್ತು ವಿಕ್ಕಿ ಭರ್ತೌಲ್ ಎಂದು ಉಲ್ಲೇಖಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಪಪ್ಪು ಭರ್ತೌಲ್ ಜಿ ಹಾಗೂ ವಿಕ್ಕಿ ಭರ್ತೌಲ್ ಜಿ, ದಯವಿಟ್ಟು ನೀವೂ ಬದುಕಿ. ನಮ್ಮನ್ನೂ ಶಾಂತಿಯಿಂದ ಬದುಕಲು ಬಿಡಿ. ನನಗೆ ನಿಜವಾಗಿಯೂ ಮದುವೆಯಾಗಿದೆ. ಫ್ಯಾಶನ್‍ಗಾಗಿ ನಾನು ಸಿಂಧೂರ (ಕುಂಕುಮ) ಹಚ್ಚಿಕೊಂಡಿಲ್ಲ ಎಂದು ಸಾಕ್ಷಿ ತಂದೆಗೆ ಮನವಿ ಮಾಡಿಕೊಂಡಿದ್ದಾರೆ.

    ಪಾಪಾ, ನೀವು ರಾಜೀವ್ ರಾಣಾ ಅವರಂತಯೇ ನಮ್ಮ ಹಿಂದೆ ನಿಮ್ಮ ನಾಯಿ (ಗೂಂಡಾಗಳನ್ನು) ಕಳುಹಿಸಿದ್ದೀರಿ. ನಿಮ್ಮ ಈ ವರ್ತನೆಯಿಂದ ಬೇಸತ್ತು ಹೋಗಿದ್ದೇನೆ. ನನಗೆ ಏನದರೂ ಆದರೆ ನಿಮ್ಮ ಕುಟುಂಬದ ಪ್ರತಿಯೊಬ್ಬರೂ ಜೈಲಿಗೆ ಹೋಗಬೇಕಾಗುತ್ತದೆ. ಅಡಗಿ ಕುಳಿತು ಕಾಲ ಕಳೆಯಲು ನನ್ನಿಂದ ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಪತಿ ಅಭಿತೇಜ್ ಕುಟುಂಬದವರ ತಪ್ಪು ಏನೂ ಇಲ್ಲ. ಅವರಿಗೆ ಕಿರುಕುಳ ಕೊಡಬೇಡಿ. ನೀವು ಶಾಂತಿಯಿಂದ ಬದುಕಿದರೆ ನಾನು ಖುಷಿಯಿಂದ ಬದುಕಲು ಸಾಧ್ಯವಾಗುತ್ತದೆ. ನನಗೆ ಹಾಗೂ ಪತಿ ಅಭಿಗೆ ಏನಾದರೂ ಆದರೆ ಅದಕ್ಕೆ ಸಂಪೂರ್ಣ ಕಾರಣ ಪಾಪಾ ಮತ್ತು ವಿಕ್ಕಿ ಅಂತ ಈ ವಿಡಿಯೋ ಮೂಲಕ ಹೇಳುತ್ತಿರುವೆ ಎಂದು ತಿಳಿಸಿದ್ದಾರೆ.

    ನಮ್ಮ ತಂದೆ ರಾಜೇಶ್ ಮಿಶ್ರಾ ಅವರಿಗೆ ಯಾವುದೇ ರೀತಿಯ ಸಹಕಾರ ನೀಡಬೇಡಿ. ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ಒದಗಿಸಿ ಎಂದು ಸಾಕ್ಷಿ, ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಾಜೇಶ್ ಮಿಶ್ರಾ ಅವರು ಪುತ್ರಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ನನ್ನ ಪುತ್ರಿ ಸ್ವತಂತ್ರಳಾಗಿದ್ದಾಳೆ. ಅವಳು ತನ್ನ ತೀರ್ಮಾನವನ್ನು ತೆಗೆದುಕೊಳ್ಳಬಹುದು. ನಾನು ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ. ಪುತ್ರಿಯನ್ನು ಕೊಲೆ ಮಾಡಲು, ಬೆದರಿಕೆ ಹಾಕಲು ಯಾರನ್ನೂ ಕಳುಹಿಸಿಲ್ಲ ಎಂದು ಹೇಳಿದ್ದಾರೆ.

    ಪ್ರೇಮಿಗಳು ಎಲ್ಲಿದ್ದಾರೆ ಎನ್ನುವುದು ನಮಗೆ ತಿಳಿದುಬಂದಿಲ್ಲ. ಅವರಿಗೆ ರಕ್ಷಣೆ ಒದಗಿಸುತ್ತೇವೆ. ಈಗಾಗಲೇ ಅಭಿತೇಜ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುನಿರಾಜ್ ಜಿ ತಿಳಿಸಿದ್ದಾರೆ.