– ಇದೀಗ ಮಹಿಳೆಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಹುಬ್ಬಳ್ಳಿ: ಗಂಡ-ಹೆಂಡತಿ ಜಗಳ ಬಗೆಹರಿಸುವ ನೆಪದಲ್ಲಿ ವಿವಾಹಿತ ಮಹಿಳೆಯನ್ನ ಬಲೆ ಹಾಕಿಕೊಂಡ ಪೊಲೀಸ್ ಕಾನ್ಸಟೇಬಲ್ (Police Constable), ಬಳಿಕ ಆಕೆ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿರುವ ಜೊತೆಗೆ ಮಹಿಳೆಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ (Hubballi) ಪೋಲಿ ಪೋಲಿಸಪ್ಪ ಮಾಡಿರುವ ಕೆಲಸಕ್ಕೆ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಕಾಮದಾಸೆಗೆ ಸುಂದರ ಕುಟುಂಬ (Beautiful Family) ಹೊಡೆದು ಬೀದಿಗೆ ಬಂದಿದೆ. ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ: ವಿಜಯೇಂದ್ರ
ಹುಬ್ಬಳ್ಳಿಯ ಘಂಟಿಕೇರಿ ಠಾಣೆಯ ಕಾನ್ಸ್‌ಟೇಬಲ್ ಹಜರತ್ ಮಿಟ್ಟೆಖಾನ್ ವಿರುದ್ಧ ಹುಬ್ಬಳ್ಳಿ ನಗರದ ಬೆಂಡಿಗೇರಿ ಠಾಣೆಯಲ್ಲಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಪೊಲೀಸ್ ಸಹಾಯವಾಣಿ 112 ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್‌ಟೇಬಲ್ ಹಜರತ್, ಗಂಡ-ಹೆಂಡತಿ ಜಗಳದ ಕರೆ ಆಧರಿಸಿ, ವಿವಾಹಿತಳ ಮನೆಗೆ ಹೋಗಿದ್ದ. ಜಗಳ ಬಗೆಹರಿಸುವ ನೆಪದಲ್ಲಿ ಮಹಿಳೆ ಜೊತೆಗೆ ಸ್ನೇಹ ಮಾಡಿ, ಆಕೆಯ ಜೊತೆಗೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ
ಇದರ ಜೊತೆಗೆ ಮಹಿಳೆಯ 6 ವರ್ಷದ ಬಾಲಕಿಗೆ ಸಹ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಇದರಿಂದ ನೊಂದ ಮಹಿಳೆ ಗಂಡ ಹಾಗೂ ಸಂತ್ರಸ್ತೆ ಬಾಲಕಿ ತಂದೆ, ಕಾನ್ಸ್‌ಟೇಬಲ್ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟಕ್ಕಿಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ, ಗೇಟ್ ಪಾಸ್ ನೀಡೋದು ಪಕ್ಕಾ: ಆರ್. ಅಶೋಕ್ ಭವಿಷ್ಯ
– ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಸೈಕೋ ವರ್ತನೆ
– ಅಂದಕ್ಕೂ ಐಶ್ವರ್ಯಕ್ಕೂ ಕಡಿಮೆಯಿಲ್ಲದ ಸುಂದ್ರಿ ಟೆಕ್ಕಿ ಪ್ರೀತಿ ಆಸೆಗೆ ಬಿದ್ದು ಹೆಣವಾದ್ಲು
ಬೆಂಗಳೂರು: ಸೌಂದರ್ಯದ ಖನಿ ಅವಳು… ರೂಪ ಲಾವಣ್ಯದಲ್ಲಾಗಲಿ.. ಅಂದ – ಐಶ್ವರ್ಯದಲ್ಲಾಗಲಿ ಯಾರಿಗೇನು ಕಡಿಮೆ ಇರಲಿಲ್ಲ. ಗಂಡ ಇಬ್ಬರು ಹೆಣ್ಣುಮಕ್ಕಳಿದ್ದ ಸುಂದರ ಸಂಸಾರದಲ್ಲಿ ಯುವಕನೊಂದಿಗೆ ಪ್ರೇಮ, ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಪ್ರಿಯಕರನಿಂದಲೇ (Lover) ಮಂಚದ ಮೇಲೆ ಹೆಣವಾದಳು ಸುಂದ್ರಿ.. ಏನಿದು ಥ್ರಿಲ್ಲಿಂಗ್ ಸ್ಟೋರಿ ಅಂತೀರಾ ಮುಂದೆ ಓದಿ…
ಹೌದು… ಬೆಂಗಳೂರಿನ (Bengaluru) ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿನಲ್ಲಿ ಹತ್ಯೆಗೀಡಾದ ಗೃಹಿಣಿ ಹರಿಣಿ ವಯಸ್ಸು 35 ಆದ್ರೂ ನೋಡೋಕೆ ರೂಪವತಿ. ಮನೆ ಕಡೆಯೂ ಸಾಕಷ್ಟು ಸ್ಥಿತಿವಂತರಾಗಿದ್ರು. ಕೋಟಿ ಕೋಟಿ ಆಸ್ತಿ ಇರೋ ಈ ಹರಿಣಿಗೆ ಊರ ಜಾತ್ರೆಯಲ್ಲಿ 25 ವರ್ಷದ ಟೆಕ್ಕಿ ಯಶಸ್ ಪರಿಚಯವಾಗಿದ್ದ. ಇದೇ ವೇಳೆ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಜಾತ್ರೆಯಲ್ಲೇ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡು ಚಾಟಿಂಗ್, ಡೇಟಿಂಗ್ ಶುರು ಮಾಡಿದ್ರು. ಇವರಿಬ್ಬರ ಪ್ರೀತಿ (Love) ಮಂಚದವರೆಗೂ ತಲುಪಿತ್ತು. ಹೆಮ್ಮಿಗೆಪುರದ ಹರಿಣಿಯ ಗಂಡ ಸ್ಥಳೀಯ ಜಮಿನ್ದಾರ. ಹಣಕಾಸಿಗೆ ಕೊರತೆ ಇರ್ಲಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನ ಓದಿಸಿಕೊಂಡು ಹೆಂಡತಿಯನ್ನ ಚೆನ್ನಾಗಿ ನೋಡಿಕೊಂಡಿದ್ದನಂತೆ. ಇತ್ತಿಚೇಗೆ ದೊಡ್ಡ ಮನೆ ಕಟ್ಟಲು ಪಾಯ ಪೂಜೆ ಸಹ ಮಾಡಿದ್ರಂತೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್ ಬಗ್ಗೆ ಬಿಚ್ಚಿಟ್ಟ ಅತ್ತೆ
ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ಸ್ಕೆಚ್
ಹೀಗಿರುವಾಗಲೇ ಪತ್ನಿ ಹರಿಣಿ ಹಾಗೂ ಯಶಸ್ ನಡುವಿನ ಅನೈತಿಕ ಸಂಬಂಧ ಗಂಡನಿಗೆ ಗೊತ್ತಾಗಿದೆ. ಗಂಡ ಪತ್ನಿಗೆ ಬುದ್ಧಿ ಹೇಳಿ ಹರಿಣಿಯ ಫೋನ್ ಕೂಡ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದರಂತೆ ಪತಿ ದಾಸೇಗೌಡ. ಇದಾದ ನಂತರ ಪತ್ನಿ ಸರಿ ಹೋಗ್ತಾಳೆ ಅಂತ ಹೊರಗಡೆ ಬಿಟ್ಟಿದ್ದಾನೆ. ಈ ವೇಳೆ ಹರಿಣಿ ತನ್ನ ಬಾಯ್‌ಫ್ರೆಂಡ್ ಯಶಸ್‌ನ ಮತ್ತೆ ಸಂಪರ್ಕಿಸಿದ್ದಾಳೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತಾಗಿದ್ದ ಯಶಸ್, ಹರಿಣಿ ಸಿಕ್ಕರೇ ಸಾಯಿಸಲು ನಿರ್ಧಾರ ಮಾಡಿದ್ನಂತೆ. ಕೊಲೆ ಮಾಡೋ ಉದ್ದೇಶದಿಂದ ಚಾಕು ಕೂಡ ಖರೀದಿ ಮಾಡಿದ್ನಂತೆ. ಇದನ್ನೂ ಓದಿ: Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್ ಪ್ರೇಮಿ
ಎಲ್ಲಾ ಮುಗಿದ್ಮೇಲೆ ಸೈಕೋ ವರ್ತನೆ ತಾಳಿದ್ದ ಟೆಕ್ಕಿ
ಇದೇ ಸಮಯಕ್ಕೆ ಹರಿಣಿ ಯಶಸ್‌ಗೆ ಕಾಲ್ ಮಾಡಿದ್ದು ಇಬ್ಬರು ಓಯೋ ರೂಮ್‌ನಲ್ಲಿ ಸೇರೋದಾಗಿ ಮಾತು ಕತೆ ನಡೆಸಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಓಯೊ ರೂಂ ನಲ್ಲಿ (Oyo Room) ಕಳೆದ ಶುಕ್ರವಾರ ಇಬ್ಬರೂ ಸೇರಿದ್ದಾರೆ. ಲೈಗಿಂಕ ಸಂಪರ್ಕ ಮುಗಿಸಿದ ಬಳಿಕ ಯಶಸ್ ಸೈಕೋ ವರ್ತನೆ ತಾಳಿದ್ದಾನೆ. ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದು ಕೊಂದೇಬಿಟ್ಟಿದ್ದಾನೆ. ನಂತರ ಟೆಕ್ಕಿ ತಾನೂ ಕೂಡ ಎದೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಆದ್ರೆ ನೋವಾಯ್ತು ಅಂತ ಚಾಕು ಅಲ್ಲೆ ಬಿಟ್ಟು ನೇರವಾಗಿ ಕೆಂಗೇರಿ ಠಾಣೆಗೆ ಹೋಗಿ ಕೊಲೆ ವಿಚಾರ ಹೇಳಿದ್ದಾನೆ.
ಬೆಂಗಳೂರು: ಅನೈತಿಕ ಸಂಬಂಧಕ್ಕೆ ಬಿದ್ದು ವಿವಾಹಿತ ಮಹಿಳೆಯೊಬ್ಬಳು (Married Women) ಭೀಕರ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿ ಸಹ ಬಂಧನವಾಗಿದ್ದು, ಪೊಲೀಸ್ ತನಿಖೆ ವೇಳೆ ಆರೋಪಿಯ ವಿಕೃತಿ, ಕ್ರೌರ್ಯ ಬಯಲಾಗಿದೆ.
ಹರಿಣಿ (36) ಕೊಲೆಯಾದ ಪ್ರಿಯತಮೆ, ಟೆಕ್ಕಿ ಯಶಸ್ (25) ಕೊಲೆ ಆರೋಪಿ. ಬಹಳ ದಿನಗಳಿಂದ ಪ್ರಿಯತಮೆಯನ್ನ (Lovers) ಮೀಟ್ ಮಾಡದೇ ತಲೆ ಕೆಡಿಸಿಕೊಂಡಿದ್ದ ಟೆಕ್ಕಿ ಆಕೆ ಸಿಗುತ್ತಿದ್ದಂತೆ ಮುಗಿಸಿಬಿಡಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದ. ಅದರಂತೆ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿಗೆ (Oyo Room) ಕರೆದೊಯ್ದು, ಹರಿಣಿಗೆ ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆಕೆಯ ದೇಹವನ್ನ ಬೆತ್ತಲೆಗೊಳಿಸಿ ಹರಿಣಿಯ ಕತ್ತು, ಎದೆ ಭಾಗ, ಹೊಟ್ಟೆ ಸೇರಿ ದೇಹದ ಹಲವು ಭಾಗಗಳಿಗೆ ಇರಿದಿದ್ದಾನೆ.
ತಾನೂ ಆತ್ಮಹತ್ಯೆಗೆ ಯತ್ನ
ಹರಿಣಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆಗೈದಿದ್ದ ಆರೋಪಿ ಯಶಸ್ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ತಾನೇ ಕೆಂಗೇರಿ ಪೊಲೀಸ್ (Kengeri Police) ಠಾಣೆಗೆ ಹೋಗಿ ಶರಣಾಗಿದ್ದಾನೆ. ಆದ್ರೆ ಕೆಂಗೇರಿ ಪೊಲೀಸರು ನಮ್ಮ ಠಾಣೆ ವ್ಯಾಪ್ತಿಗೆ ಬರಲ್ಲ ಅಂತ ಹೇಳಿ, ಆರೋಪಿಯನ್ನ ಕರೆತಂದು ಸುಬ್ರಮಣ್ಯಪುರ ಪೊಲೀಸರಿಗೆ (Subramanyapura Police) ಒಪ್ಪಿಸಿದ್ದಾರೆ.
ಆಂಟಿ-ಯುವಕನ ಲವ್‌ಸ್ಟೋರಿ – ಕೊಲೆಯಲ್ಲಿ ಅಂತ್ಯ
ಕೆಂಗೇರಿ ಮೂಲದ ಹರಿಣಿ, ದಾಸೇಗೌಡ ಎಂಬವರ ಪತ್ನಿ. ಕೆಲ ತಿಂಗಳ ಹಿಂದೆ ಏರಿಯಾದಲ್ಲಿ ಜಾತ್ರೆ ಇತ್ತು, ಗೃಹಿಣಿ ಹರಿಣಿ ಇದ್ದ ಏರಿಯಾಗೆ ಜಾತ್ರೆಗೆ ಹೋಗಿದ್ದ ಟೆಕ್ಕಿ ಯಶಸ್, ಅಲ್ಲದೇ ಆಕೆಯನ್ನ ಪರಿಚಯ ಮಾಡಿಕೊಂಡಿದ್ದ. ಕೊನೆಗೆ ಇಬ್ಬರು ಫೋನ್ ನಂಬರ್ ಕೂಡ ಪರಸ್ಪರ ಪಡೆದುಕೊಂಡಿದ್ರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್ ಶುರು ಮಾಡಿಕೊಂಡಿದ್ರು. ಹೀಗಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತಂತೆ.
ಕ್ರಮೇಣ ಹರಿಣಿ ಗಂಡ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧದ ಗೊತ್ತಾಗಿತ್ತು. ನಂತರ ಹೆಂಡ್ತಿಯ ಫೋನ್ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ. ಕೆಲ ತಿಂಗಳ ಬಳಿಕ ಮತ್ತೆ ಹೊರ ಬಂದಿದ್ದ ಹರಿಣಿ, ತನ್ನ ಬಾಯ್ ಫ್ರೆಂಡ್ ಯಶಸ್‌ನ ಸಂಪರ್ಕಿಸಿದ್ಲು. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಯಶಸ್, ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದ. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಮತ್ತೆ ಹರಿಣಿಯನ್ನು ಮೀಟ್ ಮಾಡಿ ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಕರೆದೊಯ್ದ ಯಶಸ್, ಅವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಇರಿದು ಕೊಂಡಿದ್ದಾನೆ.
ಯಶಸ್ ಶುಕ್ರವಾರ ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಸುಬ್ರಹ್ಮಣ್ಯಪುರ ಇನ್ಸ್‌ಪೆಕ್ಟರ್ ರಾಜು ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಬಳಿಕ ಎಫ್‌ಎಸ್‌ಎಲ್ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ನನಗೂ ಆಕೆಗೂ ಅನೈತಿಕ ಸಂಬಂಧ ಇತ್ತು. ನನ್ನನ್ನ ಅವಾಯ್ಡ್ ಮಾಡ್ತಾ ಇದ್ಲು, ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ .
– ಸ್ಪರ್ಧಾತ್ಮಕ ಪರೀಕ್ಷೆ ಓದುತ್ತೇನೆಂದು ಬಾಡಿಗೆ ಮನೆಯಲ್ಲಿದ್ದ ಮಹಿಳೆ
ಧಾರವಾಡ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಗೆ ಬಿದ್ದ ಗೃಹಿಣಿ ತನ್ನ ಪತಿ ಬಿಟ್ಟು ಬಂದು ವರ್ಷದ ಬಳಿಕ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಧಾರವಾಡದ ಶ್ರೀನಗರ 1ನೇ ಕ್ರಾಸ್‌ನ ಮನೆಯಲ್ಲಿ ಘಟನೆ ನಡೆದಿದ್ದು, ಶ್ವೇತಾ ಗುದಗಾಪುರ (24) ನೇಣಿಗೆ ಶರಣಾದ ಗೃಹಿಣಿ.
ರಾಮದುರ್ಗ ಮೂಲದ ಶ್ವೇತಾ ಪತಿಯನ್ನು ಬಿಟ್ಟು ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು. ರಾಮದುರ್ಗದ ವಿಶ್ವನಾಥ ಜೊತೆಗೆ ಐದು ವರ್ಷದ ಹಿಂದೆ ವಿವಾಹವಾಗಿತ್ತು. ಆದರೆ ಎರಡು ವರ್ಷದಿಂದ ಪತಿಯಿಂದ ದೂರವಾಗಿದ್ದರು.
ಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಶ್ವೇತ ಮರುಳಾಗಿದ್ದರು. ಧಾರವಾಡ ಮೂಲದ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದರು. ಬಳಿಕ ಪತಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದರು. ಇನ್‌ಸ್ಟ್ರಾಗ್ರಾಮ್‌ನಲ್ಲಿ ಈಕೆಗೆ ಯುವಕ ಪರಿಚಯವಾಗಿದ್ದ. ಯುವಕನೊಂದಿಗಿನ ಪರಿಚಯ ಪ್ರೀತಿಗೆ ತಿರುಗಿತ್ತು.
ಯುವಕನ ನಂಬಿ ಪತಿ ಬಿಟ್ಟು ಶ್ವೇತಾ ಬಂದಿದ್ದರು. ಧಾರವಾಡದ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ: ಸ್ಥಳ ಮಹಜರ್ ವೇಳೆ ಪೊಲೀಸರಿಂದ (Kodagu Police) ತಪ್ಪಿಸಿಕೊಂಡಿದ್ದ ಕೊಲೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೈದರಾಬಾದ್‌ನ ಉಪ್ಪಳ್ (Hyderabad Uppal) ಎಂಬಲ್ಲಿ ಮಹಜರ್ ಪ್ರಕ್ರಿಯೆ ವೇಳೆ ಪರಾರಿಯಾಗಿದ್ದ ಹರಿಯಾಣ ರಾಜ್ಯದ ಕಾರ್ನಲ್‌ಗರುಂದ ನಿವಾಸಿ ಅಂಕುರ್ ರಾಣಾನನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತಂದುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್
ಇತ್ತೀಚೆಗೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಪನ್ಯ ಎಸ್ಟೇಟ್ ಎಂಬಲ್ಲಿ ಅರ್ಧಂಬರ್ಧ ಬೆಂದ ಸ್ಥಿತಿಯಲ್ಲಿ ಪುರುಷನ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಅಪರಾಧ ಪ್ರಕರಣ ಬೇಧಿಸಿ ಆರೋಪಿಗಳಾದ ಮೃತ ವ್ಯಕ್ತಿಯ ಪತ್ನಿ ನಿಹಾರಿಕಾ ಸೇರಿದಂತೆ ಆಕೆಯ ಗೆಳೆಯರಾದ ಆಂಧ್ರಪ್ರದೇಶದ ಕಡಪ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ನಿಖಿಲ್ ಮೈರೆಡ್ಡಿ ಹಾಗೂ ಅಂಕುರ್ ರಾಣಾನನ್ನು ಬಂಧಿಸಿದ್ದರು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು
ಬಂಧಿತರ ಪೈಕಿ ಅಂಕುರ್ ರಾಣಾನನ್ನು ಕೊಲೆ ಕೃತ್ಯ ನಡೆದಿದ್ದ ಸ್ಥಳದ ಮಹಜರಿಗೆಂದು 13 ಮಂದಿ ಪೊಲೀಸರು, ಸುಂಟಿಕೊಪ್ಪ ಪಂಚಾಯಿತಿಯ ಇಬ್ಬರು ಸಿಬ್ಬಂದಿಯೊಂದಿಗೆ ಹೈದರಾಬಾದ್‌ನ ಉಪ್ಪಳ್ ಎಂಬಲ್ಲಿಗೆ ಕರೆದೊಯ್ದು ಮಹಜರ್ ನಡೆಸಿದ ಬಳಿಕ ಅಲ್ಲಿನ ಲಾಡ್ಜ್‌ವೊಂದರಲ್ಲಿ ಅ.30ರಂದು ರಾತ್ರಿ ತಂಗಿದ್ದರು. ಅ.31ರ ಮುಂಜಾನೆ ಆರೋಪಿ ಅಂಕುರ್ ರಾಣಾ ಪೊಲೀಸ್‌ರೊಬ್ಬರ ಮೊಬೈಲ್ ಕಳವು ಮಾಡಿ ಕೈಗೆ ಹಾಕಿದ್ದ ಬೇಡಿಯನ್ನು ಕಳಚಿ ಪರಾರಿಯಾಗಿದ್ದ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಿಂದಲೂ ಪೊಲೀಸರ ವಿಶೇಷ ತನಿಖಾ ತಂಡ ಅಲ್ಲಿಗೆ ತೆರಳಿ ಅಂಕುರ್ ರಾಣಾನಿಗಾಗಿ ಹುಡುಕಾಟದಲ್ಲಿ ತೊಡಗಿತ್ತು.
– 8 ಕೋಟಿ ಆಸ್ತಿಗಾಗಿ ಗಂಡನನ್ನೇ ಹತ್ಯೆ ಮಾಡಿಸಿದ್ದ ಪತ್ನಿ ಸಂಚು ಬಯಲು
ಮಡಿಕೇರಿ: 8 ಕೋಟಿ ಆಸ್ತಿಗಾಗಿ ವಿವಾಹಿತ ಪ್ರಿಯತಮೆಯೊಂದಿಗೆ (Lover) ಸೇರಿ ಆಕೆಯ ಪತಿಯನ್ನ ಕೊಲೆ ಮಾಡಿದ್ದ ಆರೋಪಿಯನ್ನು ಕೊಡಗು ಪೊಲೀಸರು ಸ್ಥಳ ಮಹಜರ್‌ಗೆ ಕರೆದೊಯ್ದಾಗ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇತ್ತೀಚೆಗೆ ಕೊಡಗಿನಲ್ಲಿ ತೆಲಂಗಾಣ ಮೂಲದ ರಮೇಶ್ ಕುಮಾರ್ ಹತ್ಯೆಯಾಗಿತ್ತು. ಪತ್ನಿಯೇ 8 ಕೋಟಿ ಆಸ್ತಿಗಾಗಿ ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದ ಸಂಚು ಬಯಲಾಗಿತ್ತು. ಆಸ್ತಿಗಾಗಿ ಪತಿಯನ್ನು ಕೊಲೆ ಮಾಡಿಸಿದ್ದ ಪತ್ನಿ ನಿಹಾರಿಕಾ ಬಳಿಕ ಕಾರಿನಲ್ಲಿ ಶವ ಇಟ್ಟುಕೊಂಡು ತೆಲಂಗಾಣದಿಂದ 800 ಕಿಮೀ ದೂರದ ಕೊಡಗಿಗೆ ಬಂದಿದ್ದಳು. ಶವ ಎಸೆದು ಪೆಟ್ರೋಲ್‌ನಿಂದ ಸುಟ್ಟುಹಾಕಿ ಪರಾರಿಯಾಗಿದ್ದಳು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು
ಆರೋಪಿ ತಪ್ಪಿಸಿಕೊಂಡದ್ದು ಹೇಗೆ?
ಪ್ರಕರಣ ಸಂಬಂಧ ಮೃತ ರಮೇಶ್ ಪತ್ನಿ ನಿಹಾರಿಕಾ, ಆಕೆಯ ಪ್ರಿಯತಮ ನಿಖಿಲ್ ಹಾಗೂ ಇನ್ನೋರ್ವ ಆರೋಪಿ ಅಂಕುರ್‌ನನ್ನು ಬಂಧಿಸಲಾಗಿತ್ತು. ನಂತರ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಯ ಭಾಗವಾಗಿ ಪೊಲೀಸರು ಆರೋಪಿ ಅಂಕುರ್ ಠಾಕೂರ್‌ನನ್ನ ತೆಲಂಗಾಣದ ಉಪ್ಪಲ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅರೋಪಿಯೊಂದಿಗೆ 13 ಜನ ಪೊಲೀಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಆರೋಪಿ ಅಂಕುರ್ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕೊಡಗು ಪೊಲೀಸರು ತೆಲಂಗಾಣದ ಉಪ್ಪಳ್ ಪೊಲೀಸ್ ಠಾಣೆಗೆ ದೂರು ನೀಡಿ ಅರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಂದು ತಂಡ ತೆಲಂಗಾಣದ ಸುತ್ತಮುತ್ತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರೆ, ಮತ್ತೊಂದು ತಂಡ ದೆಹಲಿ ವಿಮಾನ ನಿಲ್ದಾಣದ ಬಳಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಮೂಲಗಳು ತಿಳಿಸಿವೆ. ಇನ್ನು 2-3 ದಿನಗಳಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ
ನವದೆಹಲಿ: ಒಬ್ಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಗಳನ್ನು ದಂಡನಾರ್ಹ ʻಅತ್ಯಾಚಾರʼ ಎಂದು ಪರಿಗಣಿಸಿದಲ್ಲಿ, ಅದು ವೈವಾಹಿಕ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಗುರುವಾರ ತಿಳಿಸಿದೆ.
ವೈವಾಹಿಕ ಸಂಬಂಧದಲ್ಲಿ ಅತ್ಯಾಚಾರ (marital rape) ನಡೆದರೆ, ಕಾನೂನಿನ ತತ್ವಗಳ ಆಧಾರದಲ್ಲಿ, ಪತಿಗೆ ಕ್ರಿಮಿನಲ್ ಕ್ರಮದಿಂದ ವಿನಾಯಿತಿ ನೀಡಿರುವುದನ್ನು ತೆಗೆದುಹಾಕಿದಲ್ಲಿ ಅದು ವೈವಾಹಿಕ ಸಂಬಂಧದ ಮೇಲೆ ಅಗಾಧ ಪರಿಣಾಮ ಬೀರಲಿದೆ. ಸಾಮಾಜಿಕ ಮತ್ತು ಕೌಟುಂಬಿಕ ಸಂರಚನೆಯಲ್ಲಿ ವೇಗದ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ, ಈ ವಿಷಯಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಮಾಡುವ ತಿದ್ದುಪಡಿಗಳು ದುರ್ಬಳಕೆಯಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದೂ ಕೇಂದ್ರ ಸರ್ಕಾರ (Union Government) ತಿಳಿಸಿದೆ.
ವೈವಾಹಿಕ ಸಂಬಂಧದಲ್ಲಿ ನಡೆಯುವ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಕೇಂದ್ರವು ಈ ಅಭಿಪ್ರಾಯ ತಿಳಿಸಿದೆ.
ಅಪ್ರಾಪ್ತ ವಯಸ್ಕಳಲ್ಲದ ತನ್ನ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೇ ಅತ್ಯಾಚಾರದ ಅಪರಾಧಕ್ಕಾಗಿ ಪತಿ ಕಾನೂನು ಕ್ರಮದಿಂದ ವಿನಾಯಿತಿ ಪಡೆಯಬೇಕೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಎತ್ತುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತ್ವರಿತಗತಿಯಲ್ಲಿ ಕೈಗೆತ್ತಿಕೊಂಡಿದೆ. ಈಗ ರದ್ದಾಗಿ ಭಾರತೀಯ ನ್ಯಾಯ ಸಂಹಿತೆ ಎಂದಾಗಿರುವ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ, ಅಪ್ರಾಪ್ತ ವಯಸ್ಕಳಲ್ಲದ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಲ್ಲ. ಹೊಸ ಕಾನೂನಿನ ಅಡಿಯಲ್ಲಿಯೂ ಸೆಕ್ಷನ್ 63 ವಿನಾಯಿತಿ 2 (ಅತ್ಯಾಚಾರ) 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ ಪುರುಷ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ. ಸಾಂವಿಧಾನಿಕ ಸಿಂಧುತ್ವದ ಆಧಾರದ ಮೇಲೆ ಐಪಿಸಿಯ ಸೆಕ್ಷನ್ 375 ರಡಿ ಪತಿಗೆ ಕ್ರಿಮಿನಲ್ ಕ್ರಮದಿಂದ ವಿನಾಯಿತಿ ನೀಡಿರುವುದನ್ನು ತೆಗೆದುಹಾಕಿದ್ದಲ್ಲಿ ಅದು ವೈವಾಹಿಕ ಸಂಬಂಧದ ಮೇಲೆ ಅಗಾಧ ಪರಿಣಾಮ ಬೀರಲಿದೆ. ಜೊತೆಗೆ ಮದುವೆ ಸಂಸ್ಥೆಯಲ್ಲಿ ಗಂಭೀರ ಅಡಚಣೆಗಳಿಗೆ ಕಾರಣವಾಗಬಹುದು ಎದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ಹೇಳಿರುವುದೇನು?
ವೈವಾಹಿಕ ಸಂಬಂಧದಲ್ಲಿ ಅತ್ಯಾಚಾರ ನಡೆದರೆ ಪತಿಗೆ ಕ್ರಿಮಿನಲ್ ಕ್ರಮದಿಂದ ವಿನಾಯಿತಿ ನೀಡಿರುವುದು ಸಮರ್ಥನೀಯವಾಗಿದೆ. ಈ ವಿಷಯವನ್ನು ಕಟ್ಟುನಿಟ್ಟಿನಿಂದ ಕಾನೂನಾತ್ಮಕ ದೃಷ್ಟಿಯಿಂದ ನೋಡುವ ಬದಲು ಸಮಗ್ರವಾಗಿ ನೋಡಬೇಕು. ಪತ್ನಿಯ ಒಪ್ಪಿಗೆ ಉಲ್ಲಂಘನೆ ಮಾಡುವ ಮೂಲಭೂತ ಹಕ್ಕನ್ನು ಪತಿ ಹೊಂದಿಲ್ಲ. ಆದರೆ ವೈವಾಹಿಕ ಸಂಬಂಧದಲ್ಲಿ ‘ಅತ್ಯಾಚಾರ’ ಸ್ವರೂಪದಲ್ಲಿ ಅಪರಾಧವಾಗಿ ಪರಿಗಣಿಸುವುದು ವಿಪರೀತ ಕಠಿಣವೆಂದೇ ಪರಿಗಣಿಸಬಹುದು. ಹೀಗಾಗಿ ಇದು ಅಳತೆಮೀರಿದ ಕ್ರಮವೆನಿಸಲಿದೆ ಎಂದಿದೆ.
ಒಬ್ಬ ವಿವಾಹಿತ ಮಹಿಳೆ ಹಾಗೂ ಆಕೆಯ ಪತಿಗೆ ಸಂಬಂಧಿಸಿದ ಪ್ರಕರಣವನ್ನು ಇತರ ಪ್ರಕರಣಗಳಂತೆ ಪರಿಗಣಿಸಬಾರದು. ಮಹಿಳೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿ ಪ್ರಕರಣಗಳಲ್ಲಿ ಕಾನೂನು ಕ್ರಮಕ್ಕೆ ಬೇರೆ ಬೇರೆ ಅವಕಾಶಗಳಿವೆ. ವೈವಾಹಿಕ ಸಂಬಂಧದಲ್ಲಿ ಲೈಂಗಿಕ ಕ್ರಿಯೆಗೆ ಸಂಬಂಧಿಸಿ ಪರಸ್ಪರರಲ್ಲಿ ನಿರಂತರ ನಿರೀಕ್ಷೆಗಳು ಇರುತ್ತವೆ. ಇಂತಹ ನಿರೀಕ್ಷೆಯು ಲೈಂಗಿಕ ಕ್ರಿಯೆಗಾಗಿ ಪತ್ನಿಯನ್ನು ಬಲವಂತ ಮಾಡುವ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುವ ಹಕ್ಕನ್ನು ಪತಿಗೆ ನೀಡುವುದಿಲ್ಲ. ಆದರೆ ಇತರ ಅನ್ನೋನ್ಯ ಸಂಬಂಧ ಅಥವಾ ಅಪರಿಚಿತನಿಂದ ಲೈಂಗಿಕ ಕ್ರಿಯೆಗೆ ಒತ್ತಾಯ ಕಂಡುಬಂದಲ್ಲಿ ಪ್ರಕರಣವೇ ಬೇರೆಯಾಗುತ್ತದೆ.
ಆಗ ವೈವಾಹಿಕ ಸಂಬಂಧದಲ್ಲಿಯೇ ಒಪ್ಪಿತ ಲೈಂಗಿಕತೆ ಹಾಗೂ ವಿವಾಹೇತರ ಸಂಬಂಧದಲ್ಲಿ ಲೈಂಗಿಕತೆ ನಡುವಿನ ವ್ಯತ್ಯಾಸವನ್ನು ನಿರೂಪಿಸಲು ಕಾನೂನು ರಚನೆಗೆ ಆಧಾರವಾಗಲಿದೆ ಎಂದು ಹೇಳಿದೆ.
ವಾಷಿಂಗ್ಟನ್: ವರ್ಜಿನಿಯಾದ ಶಾಲಾ ಶಿಕ್ಷಕಿಯೊಬ್ಬಳು 14 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಆಕೆಗೆ 50 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೆನ್ರಿಕೊ ಕೌಂಟಿಯ ಹಂಗೇರಿ ಕ್ರೀಕ್ ಮಿಡಲ್ ಸ್ಕೂಲ್‌ನ ಶಿಕ್ಷಕಿ ಮೇಗನ್ ಪಾಲಿನ್ ಜೋರ್ಡಾನ್ (25), 14 ವರ್ಷದ ವಿದ್ಯಾರ್ಥಿಯೊಂದಿಗೆ ಅನೇಕ ಬಾರಿ ಸೆಕ್ಸ್ ಮಾಡಿದ್ದೇನೆ. ಆತನೊಂದಿಗೆ ಸೆಕ್ಸ್ ಬಯಸಿ, ವಿದ್ಯಾರ್ಥಿಯ ಮನೆಗೆ ನುಗ್ಗಲು ಪ್ರಯತ್ನಿಸಿದ್ದೆ. ಆದ್ರೆ ಅದೆಲ್ಲವೂ ನನ್ನನ್ನು ಬಹಳವಾಗಿ ಕಾಡಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ವಿಚಾರಣೆ ನಡೆಸಿದ್ದ ಕೋರ್ಟ್ ಆಕೆಗೆ 50 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂಬುದಾಗಿ ಹೆನ್ರಿಕೊ ಕೌಂಟಿ ಕಾಮನ್‌ವೆಲ್ತ್‌ನ ಅಟಾರ್ನಿ ಕಚೇರಿ ತಿಳಿಸಿದೆ.
ಏನಿದು ಪ್ರಕರಣ?
2022-2023ರ ಅವಧಿಯಲ್ಲಿ ಜೋರ್ಡಾನ್ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅದೇ ಶಾಲೆಯ 14 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಶಿಕ್ಷಕಿಯೇ ಆಗಾಗ್ಗೆ ವಿದ್ಯಾರ್ಥಿಯ ಮನೆಗೆ ಹೋಗಿ ಲೈಂಗಿಕ ಕ್ರಿಯೆಯನ್ನೂ ನಡೆಸುತ್ತಿದ್ದಳು. ಇದರಿಂದ ಬೇಸತ್ತ ವಿದ್ಯಾರ್ಥಿ ದೂರು ನೀಡಿದ್ದ. ಬಳಿಕ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿ ಮತ್ತು ಶಿಕ್ಷಕಿ ಇಬ್ಬರ ಡಿಎನ್‌ಎ ಹಾಗೂ ಅವರಿಬ್ಬರು ಮಲಗಿದ್ದ ಹಾಸಿಗೆಗಳನ್ನೂ ತಪಾಸಣೆ ನಡೆಸಿದಾಗ ಸಾಕ್ಷ್ಯಾಧಾರಗಳು ಪತ್ತೆಯಾಗಿತ್ತು. ನಂತರ ಶಿಕ್ಷಕಿಯನ್ನ ಬಂಧಿಸಲಾಗಿತ್ತು.
ಹೆನ್ರಿಕೊ ಕೌಂಟಿ ಪೊಲೀಸರ ಪ್ರಕಾರ, 2023ರಲ್ಲಿ ಶಿಕ್ಷಕಿಯನ್ನ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿತ್ತು. ಕೊನೆಗೆ ಆಕೆಯೇ ತಪ್ಪೊಪ್ಪಿಕೊಂಡಿದ್ದಾಳೆ. ಬಳಿಕ ಸ್ಥಳೀಯ ಕೋರ್ಟ್ ವರ್ಜೀನಿಯಾ ಕೋಡ್ ಅಡಿಯಲ್ಲಿ, 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲೈಂಗಿಕ ಚಟುವಟಿಕೆಗೆ ಕಾನೂನು ಬದ್ಧವಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಿ ಶಿಕ್ಷೆ ವಿಧಿಸಿತು. ಇದನ್ನೂ ಓದಿ: ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬಿಜೆಪಿ ಸರ್ಕಾರ ಇಲ್ಲದ ರಾಜ್ಯಕ್ಕೆ ಅನುದಾನ ಇಲ್ಲ: ಖರ್ಗೆಯಿಂದ ಕಪ್ಪು ಪತ್ರ ಬಿಡುಗಡೆ
ಇದೇ ಮೊದಲೇನಲ್ಲ:
ಯುಎಸ್‌ನಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಕಳೆದ ತಿಂಗಳು ಅರ್ಕಾನ್ಸಾಸ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಹೈಸ್ಕೂಲ್ ಹುಡುಗನೊಂದಿಗೆ 30 ಬಾರಿ ಸೆಕ್ಸ್ ಮಾಡಿದ್ದಳು. ನಂತರ ವಿದ್ಯಾರ್ಥಿಯಿಂದ ದೂರವಾಗಿದ್ದಳು, ಮತ್ತೆ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಬಯಸಿದಾಗ ವಿದ್ಯಾರ್ಥಿ ದೂರು ನೀಡಲಾಗಿ, ಪೊಲೀಸರು ಬಂಧಿಸಿದ್ದರು. ಅಲ್ಲದೇ 33 ವರ್ಷದ ಮಹಿಳೆ ಹಲವು ವಿದ್ಯಾರ್ಥಿಗಳೊಂದಿಗೆ ಈ ರೀತಿ ಲೈಂಗಿಕ ಸಂಭೋಗ ನಡೆಸಿರುವುದಾಗಿ ಕಂಡುಬಂದಿತ್ತು. ಇದರಿಂದ ಆಕೆಯನ್ನು ತಪ್ಪಿತಸ್ಥಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನೂ ಓದಿ: ಮೀಸಲಾತಿ ಪಡೆದವರು ಅದರಿಂದ ಹೊರಬಂದು ಹಿಂದುಳಿದವರಿಗೆ ಅವಕಾಶ ಕೊಡಲಿ: ಸುಪ್ರೀಂ
ಬೆಂಗಳೂರು: ಇದು ಸಿನಿಮಾ ಶೈಲಿಯಂತೆ ಒನ್ ವೇ ಲವ್ ಸ್ಟೋರಿ (Love Storty). ಆದ್ರೆ ಕಥೆಯಲ್ಲಿ ಪ್ರೇಮಿಯೇ ವಿಲನ್ ಆಗಿದ್ದಾನೆ. ಜೈಲಿನಿಂದಲೇ ಪ್ರಿಯತಮೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಮತ್ತೆ ಅಕ್ರಮಗಳ ಅಡ್ಡೆಯಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.
ಇದು ಒಂಥರಾ ಒನ್‌ವೇ ಲವ್‌ಸ್ಟೋರಿ ಪತಿಯಿಂದ ದೂರವಾಗಿದ್ದ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ, ಪ್ರೀತಿ ಮಾಡುವಂತೆ ಆಕೆಯನ್ನ ಕಾಡತೊಡಗಿಸಿದ್ದ. ಶ್ರೀನಿವಾಸ ಎಂಬಾತ ಮಹಿಳೆಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡತೊಡಗಿದ್ದ. ಪ್ರೀತಿಸದೇ ಇದ್ರೆ ಆ್ಯಸಿಡ್ ಹಾಕ್ತೀನಿ ಅಂತಾನೂ ಬೆದರಿಕೆ ಹಾಕಿದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿಗೆ ಸಮ್ಮತಿಸಿದ್ದಳು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದಾರೆ. ಆದ್ರೆ ಮಹಿಳೆ ಮದುವೆ (Marriage) ವಿಚಾರ ತೆಗೆದಿದ್ದೇ ತಡ ಶ್ರೀನಿವಾಸ ಉಲ್ಟಾ ಹೊಡೆದಿದ್ದಾನೆ. ನಿನ್ನನ್ನ ಮದುವೆ ಆಗಲ್ಲ ಜೊತೆಯಲ್ಲೇ ಇರು ಸಾಕು ಅಂದಿದ್ದನಂತೆ. ಇದರೊಂದಿಗೆ ಶ್ರೀನಿವಾಸ ಮತ್ತು ಆತನ ತಾಯಿ ಸೇರ್ಕೊಂಡು ಮಹಿಳೆ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇದರಿಂದ ನೊಂದ ಮಹಿಳೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಶ್ರೀನಿವಾಸನನ್ನ ಜೈಲಿಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಇತ್ತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶ್ರೀನಿವಾಸ ಜೈಲಿನಲ್ಲಿದ್ದುಕೊಂಡೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ಮತ್ತೊಂದು ಆರೋಪ ಮಾಡಿದ್ದಾರೆ. ಶ್ರೀನಿವಾಸ ಜೈಲಿನಿಂದಲೇ ವಾಟ್ಸಪ್ ಕರೆ ಮಾಡಿ ತನ್ನನ್ನ ನೋಡಲು ಜೈಲಿಗೆ ಬರಬೇಕು ಅಂತಾ ಧಮ್ಕಿ ಹಾಕಿದ್ದನಂತೆ. ನನ್ನನ್ನ ಜೈಲಿಗೆ ಹಾಕಿಸಿದ್ದೀಯಾ ಅಲ್ವಾ, ನೀನು ಜೈಲಿಗೆ ಬಾ ನನ್ನೊಟ್ಟಿಗೆ ಇರು, ಇಲ್ಲದಿದ್ದರೆ ಹೊರಗೆ ಬಂದು ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿದ್ದಾಳೆ.
ಇದೀಗ ಮತ್ತೆ ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಇದರಿಂದ ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಆರಾಮಾಗಿ ಸಿಗ್ತಿದೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿಂತಾಗಿದೆ .
ಇಂಫಾಲ್: ಅಂದು ನೆರೆಹೊರೆಯ ಮನೆಗಳಿಗೆಲ್ಲಾ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು, ನನ್ನ ಮನೆಗೂ ಬೆಂಕಿ ಬಿದ್ದಿತ್ತು. ಇಬ್ಬರು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು, ಸೊಸೆ, ನಾದಿನಿಯನ್ನ ಕರೆದುಕೊಂಡು ಬೆಂಕಿಬಿದ್ದ ಮನೆಯಿಂದ ತಪ್ಪಿಸಿಕೊಂಡು ಓಡುತ್ತಿದೆ. ವೇಗವಾಗಿ ಓಡುತ್ತಿದ್ದರಿಂದ ಕಾಲು ತಡವರಿಸಿ ಎಡವಿ ಬಿದ್ದೆ. ಅಷ್ಟರಲ್ಲಿ ಯಮಸ್ವರೂಪಿಗಳಂತೆ ಬಂದ ದುಷ್ಕರ್ಮಿಗಳು ನನ್ನನ್ನ ಹಿಡಿದು ಎಳೆದಾಡಿ, ಮನಸ್ಸೋ ಇಚ್ಚೆ ಎಳೆದಾಡಿದ್ರು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರು. ಇದು ಮಣಿಪುರದ ಸಂಘರ್ಷದಲ್ಲಿ (Manipur Violence) ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಕಹಿ ಅನುಭವವನ್ನು ಬಿಚ್ಚಿಟ್ಟ ಪರಿ.
ಮಣಿಪುರದಲ್ಲಿ (Manipur) ಜನಾಂಗೀಯ ಘರ್ಷಣೆ ನಡೆಯುತ್ತಿದ್ದು ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಮಹಿಳೆಯರು ಆಘಾತಕಾರಿ ಘಟನೆಗಳಲ್ಲಿ ತಾವು ಅನುಭವಿಸಿದ ಕಹಿ ಸತ್ಯಗಳನ್ನ ಬಿಚ್ಚಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಭಯಾಕನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಹಾಗೂ ಅಧಿಕಾರಿಗಳು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನೊಂದ ಜೀವಗಳು ಕಷ್ಟ ಹೇಳಿಕೊಳ್ಳಲು ಮುಂದೆ ಬರುತ್ತಿವೆ.
ಮಣಿಪುರದಲ್ಲಿ ಸಂಘರ್ಷ ಭುಗಿಲೇಳುತ್ತಿದ್ದಂತೆ ಹಲವು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು. ಇಂತಹ ಸಂದರ್ಭದಲ್ಲಿ ಸುಟ್ಟು ಹೋದ ಮನೆಯಿಂದ 37ರ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ಓಡಿ ಹೋಗುತ್ತಿದ್ದ ವೇಳೆ ಪುರುಷರಿಂದ ಗುಂಪಿಗೆ ಸಿಕ್ಕಿಬಿದ್ದು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ CJI ಹೊರಗೆ – ರಾಜ್ಯಸಭೆಯಲ್ಲಿ ಮಸೂದೆ ಮಂಡನೆ
ನನ್ನ, ನನ್ನ ಕುಟುಂಬದ ಘನತೆ ಗೌರವ ಹಾಳಾಗುತ್ತದೆ, ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಘಟನೆಯನ್ನು ಬಹಿರಂಗಪಡಿಸಿರಲಿಲ್ಲ. ಸಾಮಾಜಿಕ ಕಳಂಕದಿಂದ ತಪ್ಪಿಸಿಕೊಳ್ಳೋದಕ್ಕಾಗಿ ಅತ್ಯಾಚಾರ ಆಗಿದ್ದರೂ ವಿಷಯವನ್ನ ಮುಚ್ಚಿಟ್ಟಿದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಆದ್ರೆ ಕುಟುಂಬಸ್ಥರು ಧೈರ್ಯತುಂಬಿದ್ದರಿAದ ದೂರು ನೀಡುತ್ತಿದ್ದೇನೆ ಎಂದು ಬಿಷ್ಣುಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಮಹಿಳೆ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಸದ್ಯ ಸಂತ್ರಸ್ತ ಕುಟುಂಬಸ್ಥರು ಪರಿಹಾರ ಶಿಬಿರದಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್ ಪಕ್ಕಾ!
ಆ ಕರಳ ದಿನದಲ್ಲಿ ನಡೆದಿದ್ದೇನು?
ಮೇ 3 ರಂದು ಸಂಜೆ 6:30ರ ವೇಳೆ ದುಷ್ಕರ್ಮಿಗಳ ಗುಂಪೊಂದು ಆಕೆಯ ಮನೆ ಹಾಗೂ ನೆರೆಹೊರೆಯ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾದ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಳು. ವೇಗವಾಗಿ ಓಡುತ್ತಿದ್ದ ವೇಳೆ ರಸ್ತೆಯಲ್ಲಿ ಎಡವಿ ಬಿದ್ದಿದ್ದಾಳೆ. ಅಷ್ಟರಲ್ಲಿ ಸೊಸೆ ಇಬ್ಬರು ಗಂಡುಮಕ್ಕಳನ್ನು ಕರೆದುಕೊಂಡು ಓಡಿ ಹೋಗಿದ್ದಾಳೆ. ಆದ್ರೆ ಎಡವಿ ಬಿದ್ದ ಮಹಿಳೆ ಚೇತರಿಸಿಕೊಂಡು ಎದ್ದೇಳುತ್ತಿದ್ದಂತೆ ಐದಾರು ದುಷ್ಕರ್ಮಿಗಳು ಆಕೆಯನ್ನ ಹಿಡಿದು ಎಳೆದಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ, ಆಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶೂನ್ಯ ಎಫ್‌ಐಆರ್‌ನಲ್ಲಿ ಹೇಳಿಕೆ ದಾಖಲಿಸಿದ್ದಾಳೆ.
ಶೂನ್ಯ ಎಫ್‌ಐಆರ್ ಅನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ಬೇಕಾದರೂ ದಾಖಲಿಸಬಹುದು. ಪ್ರಕರಣ ದಾಖಲಾದ ಪೊಲೀಸ್ ಠಾಣೆಯು ಎಫ್‌ಐಆರ್ ಅನ್ನು ಸರಿಯಾದ ನ್ಯಾಯವ್ಯಾಪ್ತಿಗೆ ಕಳುಹಿಸಬೇಕು, ನಂತರ ಅದನ್ನು ತನಿಖೆ ಮಾಡಲಾಗುತ್ತದೆ ಎಂದು ಚುರಚಂದಪುರದ ಪೊಲೀಸರು ತಿಳಿಸಿದ್ದಾರೆ.
ಇದುವರೆಗೆ ಮಣಿಪುರದಲ್ಲಿ ಸಾವಿರಾರು ಎಫ್‌ಐಆರ್‌ಗಳು ದಾಖಲಾಗಿದೆ. ಅದರಲ್ಲಿ ಒಂದೇ ಪ್ರಕರಣದ ಮೇಲೆ ಅನೇಕ ಝೀರೋ ಎಫ್‌ಐಆರ್‌ಗಳು ದಾಖಲಾಗಿವೆ. ಬೆಂಕಿ ಹಚ್ಚಿ ದಾಳಿ ಮಾಡಿರುವ ಸಂಬಂಧ 4,454 ಕೇಸ್, 4,148 ಲೂಟಿ ಕೇಸ್, ಮನೆ ಆಸ್ತಿ ನಾಶಕ್ಕೆ ಸಂಬಂಧಿಸಿದಂತೆ 4,694 ಕೇಸ್ ಹಾಗೂ ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ 584 ಕೇಸ್‌ಗಳು ದಾಖಲಾಗಿವೆ.