Tag: married woman

  • ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    – ಹೆಂಡ್ತಿ ದೆವ್ವ ಆಗಬಾರದು, ತಾನು ಪೊಲೀಸರಿಗೆ ಸಿಗಬಾರ್ದು ಅಂತ ಪ್ರಾಣಿಬಲಿ

    ಚಿಕ್ಕಮಗಳೂರು: ಹೆಂಡತಿ ಕೊಂದು ಕೊಳವೆ ಬಾವಿಗೆ ಹಾಕಿ ದಫನ್ ಮಾಡಿ ದೇವರಿಗೆ ಮೂರು ಪ್ರಾಣಿ ಬಲಿ (Animal sacrifice) ನೀಡಿ, ಕಬ್ಬಿಣದ ತಗಡಿಗೆ ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವೈಫಲ್ಯ ಆಗಬೇಕು, ಕೋರ್ಟಿನಿಲ್ಲಿ ಕೇಸ್ ನಿಲ್ಲಬಾರದು ಎಂದು ಬರೆದು ಹೆಂಡತಿ ಫೋಟೋವನ್ನ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಕೇಡಿ-ಕಿರಾತಕ ಪತಿ ಬಂಧನವಾಗಿರೋ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ 28 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಹೆಂಡತಿಯನ್ನ ಕೊಂದಿದ್ದ ಗಂಡ ವಿಜಯ್ ಯಾರಿಗೂ ತಿಳಿಯಂತೆ ತಮ್ಮ ತೋಟದ ಕೊಳವೆ ಬಾವಿಯಲ್ಲಿ ಆಕೆಯನ್ನ ಹೂತಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಎಲ್ಲೋ ಹೋಗಿದ್ದಾಳೆ. ಹುಡುಕಿಕೊಡಿ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಆದ್ರೆ, ಒಂದೂವರೆ ತಿಂಗಳ ಹಿಂದೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ಬೆನ್ನು ಬಿದ್ದಿದ್ದರು. ಹುಡುಗಿಯ ಪೋಷಕರು ಕೂಡ ನಮಗೆ ನಮ್ಮ ಮಗಳನ್ನ ಹುಡುಕಿಕೊಂಡು ಎಂದು ಕೈಮುಗಿದಿದ್ದರು. ಇದೀಗ ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂಬುದು ಸಾಬೀತಾಗಿದ್ದು, ಗಂಡ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಏನಿದು ಹಾರರ್‌ ಸ್ಟೋರಿ?
    ಮೃತ ಭಾರತಿ ತನ್ನ ಅಜ್ಜಿ ನೋಡಲು ಶಿವಮೊಗ್ಗಕ್ಕೆ ಹೋದವಳು ವಾಪಸ್ಸು ಬಾರದೇ ಕಾಣೆಯಾಗಿದ್ದಾಳೆ ಎಂದು ಸೆಪ್ಟೆಂಬರ್ 5ರಂದು ಪಾಪಿ ಗಂಡ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪೋಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಸುಮಾರು ಒಂದೂವರೆ ತಿಂಗಳ ಬಳಿಕ ಅಕ್ಟೋಬರ್ 13 ರಂದು ಭಾರತಿಯ ತಾಯಿ ಎಮ್ಮೆದೊಡ್ಡಿ ಪ್ರದೇಶದ ಪರದೇಶಿಹಾಳ್ ನಿವಾಸಿ ಲಲಿತಮ್ಮ ಅವರು ಕಡೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ನನ್ನ ಮಗಳು ಭಾರತಿಯನ್ನ 6 ವರ್ಷಗಳ ಹಿಂದೆ ಆಲಘಟ್ಟದ ವಿಜಯಕುಮಾರ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದೆವು. ನಂತರ ಹಲವಾರು ಬಾರಿ ವರದಕ್ಷಿಣೆ ವಿಚಾರವಾಗಿ ಭಾರತಿಗೆ ಹೊಡೆದು ಹಿಂಸೆ ನೀಡಿದ್ದರು. ಈಗ ಕೆಲ ದಿನಗಳ ಹಿಂದೆಯೂ ವರದಕ್ಷಿಣೆ ವಿಚಾರವಾಗಿ ಆಕೆಯ ಕಾಲು ಮುರಿಯುವಂತೆ ಹೊಡೆದಿದ್ದರು. ರಾಜಿ ಪಂಚಾಯಿತಿ ಮಾಡಿ ಆಕೆಯನ್ನು ಗಂಡನ ಮನೆಗೆ ಕಳುಹಿಸಿದ್ದೆವು. ಹತ್ತು ದಿನಗಳ ಹಿಂದೆ ಮತ್ತೆ ಭಾರತಿಗೆ ಬಹಳ ಹಿಂಸೆ ನೀಡಿದ್ದಾರೆಂಬ ವಿಚಾರ ತಿಳಿದು ಅವರ ಮನೆಗೆ ಹೋದಾಗ ಅವರ ಅಜ್ಜಿಗೆ ಹುಷಾರಿಲ್ಲ. ಹಾಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನೋಡಲು ಹೋಗಿದ್ದಾಳೆ ಎಂದು ಹೇಳಿದ್ದರು.

    ಆ ನಂತರ ನಮಗೆ ತಿಳಿಯದಂತೆ ಭಾರತಿ ನಾಪತ್ತೆಯಾಗಿದ್ದಾಳೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ತಿಳಿದು ಮತ್ತೆ ಆಲಘಟ್ಟಕ್ಕೆ ಹೋಗಿ ಕೇಳಿದಾಗ ನಿಮ್ಮ ಮಗಳು ಬರುವುದಿಲ್ಲ. ಆಕೆಯನ್ನು ಮರೆತು ಬಿಡಿ ಎಂದು ಹೇಳಿದ್ದರಂತೆ. ನನ್ನ ಮಗಳನ್ನು ಇವರು ಕೊಲೆ ಮಾಡಿದ್ದಾರೆ. ಶವ ಎಲ್ಲಿದೆ? ಎಂದು ಹೇಳಿಲ್ಲ ಎಂದು ಭಾರತಿಯ ಪತಿ ವಿಜಯ ಕುಮಾರ್, ಆತನ ತಂದೆ ಗೋವಿಂದಪ್ಪ ಹಾಗೂ ತಾಯಿ ತಾಯಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಅಂತಿಮವಾಗಿ ದೂರು ನೀಡಿದ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿ ಕಾಣೆಯಾಗಿರುವ ಬಗ್ಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಆತನ ತಂದೆ ತಾಯಿಯನ್ನೂ ಬಂಧಿಸಲಾಗಿದೆ.

    ಆರೋಪಿಗಳನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಕೊಲೆ ಮಾಡಿದ ನಂತರ ಹೆಂಡತಿಯ ಮೃತ ದೇಹವನ್ನು ತನ್ನದೇ ಜಮೀನಿನಲ್ಲಿ ಹಿಂದೆ ತೆಗೆಸಿ ನೀರು ಬಾರದೇ ಹಾಗೆಯೇ ಮುಚ್ಚದೇ ಬಿಟ್ಟಿದ್ದ ಕೊಳವೆ ಬಾವಿಗೆ ಹಾಕಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಡೂರು ಪೊಲೀಸರು ಮೃತದೇಹ ಹಾಕಿದ್ದಾರೆ ಎನ್ನಲಾದ ಕೊಳವೆ ಬಾವಿ ಮುಂತಾದೆಡೆ ಮಹಜರು ನಡೆಸಿದರು. ಮೃತದೇಹವನ್ನು ಹೊರತೆಗೆಯಲು ಅಗತ್ಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಚಿಕ್ಕಬಳ್ಳಾಪುರ: ಫೇಸ್‌ಬುಕ್‌ನಲ್ಲಿ ಡೆತ್‌ ನೋಟ್‌ ಬರೆದು, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

    ಚಿಕ್ಕಬಳ್ಳಾಪುರ: ಫೇಸ್‌ಬುಕ್‌ನಲ್ಲಿ ಡೆತ್‌ ನೋಟ್‌ ಬರೆದು, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

    – ಬೇರೆ ಯುವತಿಯೊಂದಿಗೆ ಪತಿ ಸರಸ

    ಚಿಕ್ಕಬಳ್ಳಾಪುರ: ಅವರಿಬ್ಬರಿಗೂ ಮದುವೆಯಾಗಿ (Marriage) ಇನ್ನೂ ಆರು ತಿಂಗಳಷ್ಟೇ ಆಗಿತ್ತು. ಆದ್ರೆ ಗಂಡ ತನ್ನ ಜೊತೆ ಮಾತನಾಡೋದು ಬಿಟ್ಟು ಯಾವಾಗಲೂ ಆದ್ಯಾರೋ ಯುವತಿಯ ಜೊತೆಯಲ್ಲಿ ಚಾಟಿಂಗ್-ಟಾಕಿಂಗ್ ಆಂತ ಕಾಲ ಕಳೆಯುತ್ತಿದ್ದನಂತೆ. ಇದೇ ವಿಚಾರದಲ್ಲಿ ಉಂಟಾದ ಮನಸ್ಥಾಪದಿಂದ ನವವಿವಾಹಿತೆ ಫೇಸ್‌ಬುಕ್‌ನಲ್ಲಿ ಡೆತ್‌ನೋಟ್‌ (Facebook Death Note) ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ತವರು ಮನೆಯಲ್ಲಿ ಮನೆಯ ಹೊರಭಾಗದ ಶೌಚಾಲಯದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ನಿವಾಸಿ ಜಯಶ್ರೀಯನ್ನ ಕಳೆದ 6 ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಹಳ್ಳಿಯ ನಿವಾಸಿ ಚಂದ್ರಶೇಖರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ಇಬ್ಬರು ಸುಂದರ ಸಂಸಾರ ಸಾಗಿಸುವ ಬದಲು ಗಂಡ ಮತ್ತೊಬ್ಬಳು ಯುವತಿ ಜೊತೆಯಲ್ಲಿ ಯಾವಾಗ್ಲೂ ಚಾಟಿಂಗ್ ಮಾಡ್ತಾ, ಮಾತಾಡಿಕೊಂಡು ಕಾಲ ಕಳೀತಿದ್ದನಂತೆ.

    ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಮನಸ್ತಾಪಗಳಾಗಿ ಮನನೊಂದ ಜಯಶ್ರೀ ತನ್ನ ನೋವನ್ನ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಜಯಶ್ರೀ ತಂದೆ ಶ್ರೀಧರ್ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಜಯಶ್ರೀ ಗಂಡ ಚಂದ್ರಶೇಖರ್ ಹಾಗೂ ಯುವತಿ ಬಿಂದು ವಿರುದ್ಧ ದೂರು ದಾಖಲಾಗಿದೆ.

    ಆತ್ಮಹತ್ಯೆಗೆ ಮುನ್ನ ಜಯಶ್ರೀ ತನ್ನ ಫೇಸ್ ಬುಕ್ ಖಾತೆಯಲ್ಲಿ ನನ್ನ ಸಾವಿಗೆ ಆ ಹುಡುಗಿ ಮತ್ತು ನನ್ನ ಗಂಡ ಕಾರಣ ಅಂತ ಬರೆದಿದ್ದಾಳೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು ಗಂಡ ಹಾಗೂ ಯುವತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

  • 3 ಮಕ್ಕಳ ತಂದೆ, 2 ಮಕ್ಕಳ ತಾಯಿ ಲವ್ವಿಡವ್ವಿ – ಪ್ರೇಯಸಿಯನ್ನ ಇರಿದು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

    3 ಮಕ್ಕಳ ತಂದೆ, 2 ಮಕ್ಕಳ ತಾಯಿ ಲವ್ವಿಡವ್ವಿ – ಪ್ರೇಯಸಿಯನ್ನ ಇರಿದು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

    – 9 ಬಾರಿ ಪ್ರೇಯಸಿಗೆ ಇರಿದ ಪಾಗಲ್‌

    ಬೆಳಗಾವಿ:‌ ತನ್ನ ವಿವಾಹಿತ ಪ್ರೇಯಸಿಗೆ (Lover) 9 ಬಾರಿ ಚಾಕುವಿನಿಂದ ಇರಿದು ಕೊಂದ ಬಳಿಕ ಪಾಗಲ್‌ ಪ್ರೇಮಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.

    ರೇಷ್ಮಾ (29), ಆನಂದ ಸತಾರ್‌ನನ್ನು (31) ಮೃತ ಪ್ರೇಮಿಗಳು. ಆನಂದ ಮೂರು ಮಕ್ಕಳ ತಂದೆಯಾಗಿದ್ದರೆ, ರೇಷ್ಮಾ 2 ಮಕ್ಕಳ ತಾಯಿಯಾಗಿದ್ದಳು. ಇದನ್ನೂ ಓದಿ: ಬೆಂಗಳೂರು | ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ – ಓರ್ವ ಸುಟ್ಟು ಕರಕಲು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

    ಪಾಗಲ್‌ ಪ್ರೇಮಿ ಆನಂದ ಮದ್ವೆ ಬಳಿಕವೂ ವಿವಾಹಿತೆ ರೇಷ್ಮಾ ಜೊತೆಗೆ ಅನೈತಿಕ ಸಂಬಂದ ಹೊಂದಿದ್ದ. ನನ್ನ ಹೆಂಡ್ತಿಯಂತೆ ನೀನೂ ನನ್ನ ಮಾತು ಕೇಳಬೇಕು ಅಂತ ಆಕೆಯನ್ನ ಪೀಡಿಸುತ್ತಲೇ ಇದ್ದ. ಇದೀಗ ಪ್ರೇಯಸಿಯನ್ನ 9 ಬಾರಿ ಇರಿದು ಕೊಂದಿದ್ದಾನೆ. ಆಕೆ ಸಾವನಪ್ಪುತ್ತಿದ್ದಂತೆ ಭಯಗೊಂಡು ತಾನೂ ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಸಾವನ್ನಪ್ಪಿದ್ದಾನೆ.

    ಆಂಟಿ-ಅಂಕಲ್‌ ಲವ್ವಿಡವ್ವಿ ಸ್ವಾರಸ್ಯ ಏನು?
    ಆನಂದ ಮದುವೆ ಬಳಿಕವೂ ರೇಷ್ಮಾ ಜೊತೆಗೆ 3 ವರ್ಷಗಳಿಂದ ಸಲುಗೆ ಹೊಂದಿದ್ದ. ಒಂದೇ ಊರಿನ, ಒಂದೇ ಕಾಲೊನಿಯ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹ ಇತ್ತು. ಮದುವೆ ಬಳಿಕ ಸಲುಹೆ ಹೆಚ್ಚಾಗಿ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕಳೆದ ತಿಂಗಳಷ್ಟೇ ರೇಷ್ಮಾ ಪತಿ ಕೈಗೆ ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ನಂದಗಡ ಪೊಲೀಸರಿಗೆ ಮಾಹಿತಿ ರೇಷ್ಮಾ ಪತಿ ಶೀವು ತಿರವಿರ ಮಾಹಿತಿ ನೀಡಿದ್ದ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ಪೊಲೀಸರ ವಾರ್ನ್ ಬಳಿಕ ಆನಂದನಿಂದ ರೇಷ್ಮಾ ಅಂತರ ಕಾಯ್ದುಕೊಂಡಿದ್ದಳಿ. ಇದರಿಂದ ಸಿಟ್ಟಿಗೆದ್ದ ಪಾಗಲ್‌ ಆನಂದ ಮನೆಯ ಹಿಂಬಾಗಿಲಿನಿಂದ ಹೋಗಿ ರೇಷ್ಮಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರೇಷ್ಮಾ ಪುತ್ರಿಯ ಎದುರೇ ಚಾಕುವಿನಿಂದ 9 ಸಲ ಚುಚ್ಚಿ ಹತ್ಯೆಗೈದಿದ್ದಾನೆ. ಬಳಿಕ ಹೆದರಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ:ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ  ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

  • ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ

    ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ

    ಬೆಂಗಳೂರು: ತಮ್ಮ ಪ್ರೇಮಕ್ಕೆ (Love) ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರೆಂದು ಬೆಂಕಿ ಹಚ್ಚಿಕೊಂಡು ಪ್ರೇಮಿಯೊಂದಿಗೆ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ದೊಡ್ಡಗುಬ್ಬಿ ನಿವಾಸದ ಅಪಾರ್ಟ್ಮೆಂಟ್‌ನಲ್ಲಿ (Apartment) ನಡೆದಿದೆ.

    ಸೌಮಿನಿ ದಾಸ್ (20), ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಫ್ಲ್ಯಾಟ್‌ನಲ್ಲಿ ಬೆಂಕಿ ಕಂಡು ಅಪಾರ್ಟ್ಮೆಂಟ್ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯಲ್ಲಿ ಬೆಂದು ಸೌಮಿನಿ ಕೊನೆಯುಸಿರೆಳೆದಿದ್ದಾಳೆ. ಭಾಗಶಃ ಸುಟ್ಟು ಹೋಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಬ್ರಾಹಂ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ಮೃತ ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವಳಾಗಿದ್ದು, ಕರಿಯಮ್ಮ ಆಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ (Nursing) ಓದುತ್ತಿದ್ದಳು. ಎರಡು ವರ್ಷಗಳ ಹಿಂದೆಯೇ ಆಕೆಗೆ ವಿವಾಹವಾಗಿತ್ತು. ಇನ್ನು ನರ್ಸ್ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿಯ ಪರಿಚಯವಾಗಿತ್ತು. ರಜೆ ಇದ್ದಂತಹ ಸಂದರ್ಭದಲ್ಲಿ ಮತ್ತು ಬಿಡುವಿನಲ್ಲಿ ಸೌಮಿನಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು. 3 ತಿಂಗಳ ಹಿಂದೆ ಅಬ್ರಾಹಂನನ್ನು ತನ್ನ ಪತಿಗೆ ಸೌಮಿನಿ ಪರಿಚಯ ಮಾಡಿಸಿದ್ದಳು. ದಿನಗಳು ಕಳೆಯುತ್ತಾ ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಇದನ್ನೂ ಓದಿ: ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಿನ್ ಪಡೆದು ವಂಚನೆ – ಅಂತರಾಜ್ಯ ಕಳ್ಳರ ಬಂಧನ

    ಕೆಲ ದಿನಗಳ ಹಿಂದೆ ಸೌಮಿನಿ ಕೋಲ್ಕತ್ತಾಗೆ ಹೋಗಿದ್ದಳು. ಇದಾದ ಬಳಿಕ ಬೆಂಗಳೂರಿಗೆ ಬಂದಿದ್ದಳು. ನಂತರ ಇಬ್ಬರೂ 14 ದಿನಕ್ಕೆ ಫ್ಲ್ಯಾಟ್‌ವೊಂದನ್ನು ಬಾಡಿಗೆ ಪಡೆದಿದ್ದರು. ಬಳಿಕ ಸೌಮಿನಿ ಪ್ರೇಮದ ವಿಚಾರವನ್ನು ತನ್ನ ಪತಿಗೆ ತಿಳಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸೌಮಿನಿ ಹಾಗೂ ಅಬ್ರಾಹಂ ಇಬ್ಬರೂ ಸಾಯಲು ತೀರ್ಮಾನ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ವೇಳೆಗೆ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್‌ನಲ್ಲಿ ಪೆಟ್ರೋಲ್ (Petrol) ಸುರಿದುಕೊಂಡು ಇಬ್ಬರೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್

  • ಪ್ರಿಯಕರನಿಂದ ಕಿರುಕುಳ – ವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆ

    ಪ್ರಿಯಕರನಿಂದ ಕಿರುಕುಳ – ವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆ

    ಹಾಸನ: ವಿವಾಹಿತೆ ಮಹಿಳೆ (Married Woman) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ರಾಜ್‌ಕುಮಾರ್ ನಗರದಲ್ಲಿ ನಡೆದಿದೆ.

    ರಾಜ್‌ಕುಮಾರ್‌ ನಗರದ ನಿವಾಸಿ ಇರ್ಫಾನ್ ಎಂಬಾತನ ಪತ್ನಿ ಶಬಾನಂ ಸುನಾಂ (32) ಮೃತ ಮಹಿಳೆ. ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಹಾಸ್ಟೆಲ್ ಅಡುಗೆಯಾತ, ನಿರ್ವಾಹಕ ಅರೆಸ್ಟ್

    ಶಬಾನಂ ಸುನಾಂ ಕಳೆದ 15 ದಿನಗಳ ಹಿಂದೆ ಪತಿಯನ್ನು ತೊರೆದು ಇಸ್ಮಾಯಿಲ್ ಎಂಬಾತನೊಂದಿಗೆ ತೆರಳಿ ಪ್ರತ್ಯೇಕ ವಾಸವಿದ್ದಳು. ಆದ್ರೆ ಪತ್ನಿ ಕಾಣೆಯಾಗಿರುವುದಾಗಿ ಪತಿ ಇರ್ಫಾನ್ ನಗರದ ಪೆನ‌್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ (Police Station) ದೂರು ನೀಡಿದ್ದಋು. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಯನ್ನ ಪತ್ತೆ ಮಾಡಿ ಕರೆಸಿ ಸಂಧಾನ ನಡೆಸಿ ಪುನಃ ಪತಿಯೊಂದಿಗೆ ಕಳುಹಿಸಿದ್ದರು. ಪತಿ ನಮಾಜ್‌ಗೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ವ್ಯತ್ಯಯ; Ind Vs Pak ಮ್ಯಾಚ್ ನೋಡುವ ಫ್ಯಾನ್ಸ್‌ಗೆ ನಿರಾಸೆ ಸಾಧ್ಯತೆ

    ಈ ನಡುವೆ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದರೂ ಪೊಲೀಸರು ಅರೋಪಿ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆತ ಆಗಾಗ್ಗೆ ಶಬಾನಂ ಸುನಾಂಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ, ಇದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಗಲಾದರೂ ಕ್ರಮ ವಹಿಸಿ ಆರೋಪಿಯನ್ನು ಬಂಧಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೈವದ ಹೆಸರಿನಲ್ಲಿ ಮಹಿಳೆಗೆ ಮದುವೆ ಅಭಯ- ಜನಾಕ್ರೋಶದ ಬೆನ್ನಲ್ಲೇ ನರ್ತಕ ಪಲಾಯನ

    ದೈವದ ಹೆಸರಿನಲ್ಲಿ ಮಹಿಳೆಗೆ ಮದುವೆ ಅಭಯ- ಜನಾಕ್ರೋಶದ ಬೆನ್ನಲ್ಲೇ ನರ್ತಕ ಪಲಾಯನ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೊಲದ ಅಂಬಾರಕೊಡ್ಲನಲ್ಲಿ ದೈವನರ್ತಕ ತನ್ನ ಸ್ವಾರ್ಥಕ್ಕಾಗಿ ವಿವಾಹಿತ ಮಹಿಳೆಯೊಬ್ಬಳಿಗೆ ದೈವದ ಹೆಸರಿನಲ್ಲಿ ತಾನೇ ಮದುವೆಯಾಗುವ ಅಭಯ ನೀಡಿದ ಪ್ರಕರಣವೀಗ ಜನರ ತೀವ್ರ ವಿರೋಧದ ನಂತರ ಮತ್ತೊಂದು ತಿರುವು ಪಡೆದುಕೊಂಡಿದೆ.

    ಹೌದು. ದೈವನರ್ತಕರೊಬ್ಬರು ವಿವಾಹಿತ (Married Woman) ಮಹಿಳೆಯೊಬ್ಬರಿಗೆ ದೈವದ ಹೆಸರಿನಲ್ಲಿ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಬದುಕಿನ ಕಷ್ಟ ಹೇಳಿಕೊಳ್ಳಲು ಬಂದ ಬೆಳಗಾವಿ ಮೂಲದ ಮಹಿಳೆಗೆ ಅಂಬಾರಕೊಡ್ಲ ಗ್ರಾಮದ ದೈವನರ್ತಕ ಚಂದ್ರಹಾಸ, ತುಂಬಿದ ಸಭೆಯಲ್ಲಿ ಮದ್ವೆ ಮಾಡಿಕೊಳ್ಳುವ ಮಾತಾಡಿರೋದು ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಇವತ್ತಿಂದ ಈಕೆ ನನ್ನ ಅರ್ಧಾಂಗಿ – ಇದು ಸತ್ಯ..ಸತ್ಯ ಮಹಿಳೆಗೆ ಮದುವೆ ಅಭಯಕೊಟ್ಟ ದೈವನರ್ತಕ

    ದೈವದ ಹೆಸರಿನಲ್ಲಿ ವಿವಾಹಿತ ಮಹಿಳೆಗೆ ತಾನೇ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಜನರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಅಂಕೋಲದ ಅಂಬಾರಕೊಡ್ಲನಲ್ಲಿನ ತನ್ನ ನಿವಾಸದಿಂದ ದೈವ ನರ್ತಕ ಚಂದ್ರಹಾಸ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಕೆಂಡದಮಾಸ್ತಿ ದುರ್ಗಾ ದೇವಸ್ಥಾನ ಖಾಲಿ ಹೊಡೆಯುತ್ತಿದ್ದು, ಸಹೋದರ ಹಾಗೂ ಆತನ ತಾಯಿ ಮಾತ್ರ ಸ್ಥಳದಲ್ಲಿದ್ದರು. ಈತ ಬೆಳಗಾವಿ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ರೆ ಆತನ ಕುಟುಂಬಸ್ಥರು ಹೇಳೋದೆ ಬೇರೆ.

    ಒಂದೆಡೆ ದೈವ ನರ್ತಕನ ಮಾತುಗಳು ಸಾಕಷ್ಟು ಅನುಮಾನ ಸೃಷ್ಟಿಸಿದೆ. ಇತ್ತ ದೈವ ನರ್ತನನಿಂದ ಅಭಯ ಪಡೆದ ಬೆಳಗಾವಿಯ ವಿವಾಹಿತ ಮಹಿಳೆ ಸಹ ನಾಪತ್ತೆಯಾಗಿದ್ದಾಳೆ. ದೈವ ನರ್ತಕ ಚಂದ್ರಹಾಸನಿಗೆ ಪತ್ನಿ ಹಾಗೂ ಓರ್ವ ಮಗಳು ಸಹ ಇದ್ದಾರೆ. ಆದರೆ ಅವರು ದೂರವಿದ್ದಾರೆ. ಇವರು ದೈವ ನರ್ತನದ ವೇಳೆ ಹೇಳಿದಂತೆ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಹ ಇದೆ. ಆದರೆ ಇದ್ಯಾವುದಕ್ಕೂ ಸ್ಪಷ್ಟ ಉತ್ತರ ಅವರ ಕುಟುಂಬದವರು ಸ್ಪಷ್ಟನೆ ನೀಡಲು ಸಿದ್ಧರಿಲ್ಲ. ಇನ್ನು ದೈವನರ್ತಕನ ವಿರುದ್ಧ ಜನಶಕ್ತಿ ವೇದಿಕೆ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದೆ.

    ಸದ್ಯಕ್ಕಂತೂ ದೈವ ನರ್ತಕನ ವಿವಾಹಿತ ಮಹಿಳೆಗೆ ನೀಡಿದ ಅಭಯ ದೊಡ್ಡ ಸದ್ದು ಮಾಡುತ್ತಿದ್ದು ಜನರ ಆಕ್ರೋಶ ಹೆಚ್ಚಾಗಿದೆ. ಇವೆಲ್ಲವುದಕ್ಕೆ ತೆರೆಎಳೆಯಬೇಕು ಎಂದರೆ ದೈವನರ್ತಕನ ಪತ್ನಿ ಹಾಗೂ ಆತನೇ ಸ್ಪಷ್ಟನೆ ನೀಡಿ ಈ ಪ್ರಕರಣಕ್ಕೆ ತೆರೆಎಳೆಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೀತಿಸಿ ಮದುವೆಯಾಗಿದ್ದಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಪ್ರೀತಿಸಿ ಮದುವೆಯಾಗಿದ್ದಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಮಂಗಳೂರು: ನೇಣು ಬಿಗಿದುಕೊಂಡು ವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಸುರತ್ಕಲ್‍ (Mangaluru Suratkal) ನ ಬಾಳ ಗ್ರಾಮದಲ್ಲಿ ನಡೆದಿದೆ.

    ಬಾಳ ನಿವಾಸಿ ದಿವ್ಯಾ (26) ಮೃತ ಮಹಿಳೆ. ದಿವ್ಯಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.

    ಏನಿದು ಪ್ರಕರಣ..?: ದಿವ್ಯಾ ತನ್ನ ಪತಿ ಜೊತೆ ನೆರೆ ಮನೆಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ದಿವ್ಯಾ ಒಬ್ಬರೇ ಮನೆಗೆ ವಾಪಸ್ಸಾಗಿದ್ದರು. ಇದನ್ನೂ ಓದಿ: `ಖಲಿಸ್ತಾನ್ ಜಿಂದಾಬಾದ್’ ಘೋಷಣೆ ಬರೆದು ಇಸ್ಕಾನ್ ದೇವಾಲಯದ ಗೋಡೆ ವಿರೂಪ

    ಪತಿ ಸ್ವಲ್ಪ ತಡವಾಗಿ ಕಾರ್ಯಕ್ರಮದಿಂದ ಹೊರಟು ಬಂದರು. ಮನೆಗೆ ಬಂದಾಗಿ ದಿವ್ಯಾ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.

    ಪ್ರೀತಿಸಿ ಮದುವೆ: ಮೃತ ದಿವ್ಯಾ ಮೆಡಿಕಲ್ ಶಾಪ್ (Medical Shop) ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿ ಹರೀಶ್ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿವಾಹಿತೆಯ ಅನುಮಾನಾಸ್ಪದ ಸಾವು

    ವಿವಾಹಿತೆಯ ಅನುಮಾನಾಸ್ಪದ ಸಾವು

    ದಾವಣಗೆರೆ: ಮನೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ದಾವಣಗೆರೆಯ ಎಸ್.ಎಂ ಕೃಷ್ಣಾ ನಗರದಲ್ಲಿ ನಡೆದಿದೆ.

    ಯಶೋಧ(30) ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ ಮಹಿಳೆ. ಧನ್ಯಕುಮಾರ್ ಜೊತೆ 9 ವರ್ಷಗಳ ಹಿಂದೆ ಯಶೋಧ ವಿವಾಹವಾಗಿತ್ತು. ಮದುವೆಯಾದಾಗಿನಿಂದ ಪತಿ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅಕ್ಷಯ್ ಕುಮಾರ್ ಗೆ ಕೊರೋನಾ: ಕೇನ್ಸ್ ಚಿತ್ರೋತ್ಸವದಿಂದ ದೂರ

    MARRIAGE

    ತವರು ಮನೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಿಂದ ಯಶೋಧ ಭಾನುವಾರ ಗಂಡನ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಗಂಡನೇ ಹೊಡೆದು ಸಾಯಿಸಿ ನೇಣು ಹಾಕಿದ್ದಾನೆ ಎಂದು ಮಹಿಳೆಯ ಮನೆಯವರು ಗಂಭೀರ ಆರೋಪ ಮಾಡುತ್ತಿದ್ದಾರೆ. ಸ್ಥಳಕ್ಕೆ ಗಾಂಧಿನಗರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

  • ಪ್ರಿಯಕರನಿಂದಲೇ ವಿವಾಹಿತ ಮಹಿಳೆಯ ಬರ್ಬರ ಕೊಲೆ!

    ಪ್ರಿಯಕರನಿಂದಲೇ ವಿವಾಹಿತ ಮಹಿಳೆಯ ಬರ್ಬರ ಕೊಲೆ!

    ದಾವಣಗೆರೆ: ವಿವಾಹಿತ ಮಹಿಳೆಯೊಬ್ಬರು ಬರ್ಬರವಾಗಿ ಕೊಲೆಯಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಗ್ರಾಮದೇವತೆ ದೇವಸ್ಥಾನದ ನರ್ತಕಿ ಬಾರ್ ಬಳಿ ನಡೆದಿದೆ.

    ಹರಿಹರದ ನಿವಾಸಿ ರೇಖಾ (25) ಕೊಲೆಯಾದ ವಿವಾಹಿತ ಮಹಿಳೆ. ಕುರುಬರ ಕೇರಿ ನಿವಾಸಿಯಾದ ರೇಖಾಳನ್ನು ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಿಯಕರ ಚೇತನ್ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಸದ್ಯ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರೇಖಾಳಿಗೆ ಈಗಾಗಲೇ ನಾಗರಾಜ್ ಎಂಬಾತನ ಜೊತೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಸ್ಥಳಕ್ಕೆ ಎಸ್ ಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸಾಯ್ತೀನಿ ಅಂತಿದ್ದೋಳು ಸತ್ತೇ ಹೋದ್ಳು- ಬದುಕಿಸಲು ಹೊರಟವ ಎರಡೂ ಕೈ ಸುಟ್ಕೊಂಡ!

    ಸಾಯ್ತೀನಿ ಅಂತಿದ್ದೋಳು ಸತ್ತೇ ಹೋದ್ಳು- ಬದುಕಿಸಲು ಹೊರಟವ ಎರಡೂ ಕೈ ಸುಟ್ಕೊಂಡ!

    ಚಿಕ್ಕಮಗಳೂರು: ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ರೀತಿಯಲ್ಲಿ ವಿವಾಹಿತೆಯೊಬ್ಬಳ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋದು ಪೊಲೀಸರಿಗೆ ತಲೆನೋವಾಗಿದೆ.

    ಈ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ನಡೆದಿದೆ. ಮೃತಳನ್ನ ಸವಿತ(40) ಎಂದು ಗುರುತಿಸಲಾಗಿದೆ. ಮೂಲತಃ ಮೂಡಿಗೆರೆ ತಾಲೂಕಿನ ಬಿಳಗುಳ ನಿವಾಸಿ ಸವಿತಾಳನ್ನ ಜಿಲ್ಲೆಯ ಕೊಪ್ಪ ತಾಲೂಕಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ಸವಿತಾ ತನ್ನ ತವರು ಸೇರಿದ್ದಳು.

    ಗಂಡನ ಮನೆಯಿಂದ ಬಂದ ಸವಿತಾ ಬಿಳುಗುಳ ಸಮೀಪದ ಹೋಂಸ್ಟೇವೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಈ ಮಧ್ಯೆ ಬಿಳುಗುಳ ಪಕ್ಕದ ಗ್ರಾಮ ಕೊಲ್ಲಿಬೈಲ್ ಗ್ರಾಮದ ನಂದೀಶ್ ಗೌಡ ಎಂಬವನ ಜೊತೆ ಸವಿತಾಳಿಗೆ ಸ್ನೇಹ ಆರಂಭವಾಯಿತು. ಇಬ್ಬರ ಮಧ್ಯೆ ಇದ್ದದ್ದು ಯಾವ ರೀತಿಯ ಸ್ನೇಹ ಎಂದು ಯಾರಿಗೂ ಗೊತ್ತಿಲ್ಲ. ಕೆಲಸಕ್ಕೆ ಹೋಗಿ ಬರುವಾಗ ಈತನೇ ಡ್ರಾಪ್-ಪಿಕಪ್ ಮಾಡುತ್ತಿದ್ದ. ಈತ ಕೂಡ ಅಲ್ಲೇ ಸಮೀಪದ ಎಸ್ಟೇಟ್ ವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ.

    ಅನ್ಯೋನ್ಯವಾಗಿದ್ದ ಇವರ ಸಂಬಂಧ ಇತ್ತೀಚೆಗೆ ಮುರಿದು ಬಿದ್ದಿತ್ತು. ಎಲ್ಲಿವರೆಗೆ ಅಂದರೆ ಆಕೆ ನಾನು ಪೆಟ್ರೋಲ್ ಸುರಿದುಕೊಂಡು ಸಾಯ್ತಿನಿ ಎನ್ನುವಷ್ಟು. ಆಗ ನಂದೀಶ್ ನಿಂದು ಬರೀ ಇದೇ ಆಯ್ತು. ಸಾಯಿ ನೋಡೋಣ ನಾನೇ ಬೆಂಕಿ ಪಟ್ಟಣ ತರ್ತೀನಿ ಅಂತ ಎಂದಿದ್ದನಂತೆ. ಮೂರು ದಿನಗಳ ಹಿಂದೆ ಕೆಲಸಕ್ಕೆ ಹೋಗಿ ಬರುವ ಮಾರ್ಗದ ಮಧ್ಯೆ ಸವಿತಾಳ ದೇಹ ಹೊತ್ತಿ ಉರಿದು ಭಾಗಶಃ ಸುಟ್ಟಿತ್ತು. ಆಗ ಇದೇ ನಂದೀಶ್ ಆಕೆಯನ್ನ ಜೀಪ್ ತಂದು ಆಸ್ಪತ್ರೆಗೆ ಸೇರಿಸಿದ್ದ. ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಸವಿತಾಳನ್ನ ಮಂಗಳೂರಿಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು.

    ಸವಿತಾಳ ದೇಹ ಹೊತ್ತಿ ಉರಿಯುವಾಗ ಆಕೆಯನ್ನ ರಕ್ಷಿಸಲು ಮುಂದಾದ ನಂದೀಶ್ ಗೌಡನ ಎರಡೂ ಕೈಗಳು ಸುಟ್ಟು ಆತ ಕೂಡ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರ ನಡುವೆ ಇದ್ದದ್ದು ಎಂಥ ಸಂಬಂಧವೋ ಗೊತ್ತಿಲ್ಲ. ಆದರೆ ಆಕೆ ಸಾಯ್ತಿನಿ ಅಂತಿದ್ಲು. ಈತ ಸಾಯಿ ಅಂತಿದ್ದ. ಕೊನೆಗೊಂದು ದಿನ ಅದು ನಡೆದೇ ಹೋಯ್ತು. ಆಕೆಯೇ ಬೆಂಕಿ ಹಚ್ಚಿಕೊಂಡಳೋ ಅಥವಾ ನಂದೀಶ್ ಗೌಡನೇ ಹಚ್ಚಿದ್ನೋ ಗೊತ್ತಿಲ್ಲ. ಆದರೆ ಆತ ಆಕೆಯನ್ನ ರಕ್ಷಿಸಲು ಹೋದಾಗ ನನ್ನ ಕೈಗಳು ಸುಟ್ಟುಹೋಗಿವೆ ಎಂದು ಪೊಲೀಸರಿಗೆ ಹೇಳಿದ್ದಾನೆ.

    ಇತ್ತ ಮೃತ ಸವಿತಾಳ ಸಹೋದರ ನಾಗೇಶ್ ನಂದೀಶ್ ಗೌಡನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಎಫ್.ಐ.ಆರ್. ಕೂಡ ದಾಖಲಾಗಿದೆ. ಎರಡೂ ಕೈಗಳನ್ನ ಸುಟ್ಟುಕೊಂಡು ಆಸ್ಪತ್ರೆ ಪಾಲಾಗಿರೋ ನಂದೀಶ್ ಗೌಡ ಗುಣಮುಖರಾಗೋದನ್ನ ಪೊಲೀಸರು ಕಾಯ್ತಿದ್ದಾರೆ. ಸವಿತಾ ಹಾಗೂ ನಂದೀಶ್ ಗೌಡ ಮೊಬೈಲ್ನಲ್ಲಿ ನಡೆಸಿರೋ ಸಾಯ್ತೀನಿ, ನಾನೇ ಬೆಂಕಿ ಪೊಟ್ಟಣ ತರ್ತೀನಿ ಎಂಬ ಆಡಿಯೋ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆ.

    ನಂದೀಶ್ ಗೌಡ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಲಿದ್ದಾರೆ. ಸವಿತಾಳಿಗಿದ್ದ ಎರಡು ಮಕ್ಕಳು ಅತ್ತ ಅಪ್ಪನೂ ಇಲ್ಲ. ಇತ್ತ ಅಮ್ಮನೂ ಇಲ್ಲ ಎಂಬಂತಾಗಿದೆ. ನಂದೀಶ್ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೂಡಲೇ ತನಿಖೆ ಆರಂಭಿಸೋ ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನೋದನ್ನ ಸಾಬೀತುಪಡಿಸಬೇಕಿದೆ.