Tag: Married Man

  • ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ನವದೆಹಲಿ: ಯುವತಿಯೊಬ್ಬಳನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ವಿವಾಹಿತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ರೋಹಿತ್ ಗುಪ್ತಾ ಹಾಗೂ ಮೃತ ದುರ್ದೈವಿಯನ್ನು ಸಲ್ಮಾ ಎಂದು ಗುರುತಿಸಲಾಗಿದೆ. ಈತ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಕರೋಲ್ ಭಾಗ್‍ನಲ್ಲಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

    ರೋಹಿತ್ ಮೃತ ಯುವತಿ ಜೊತೆ ಸಂಬಂಧ ಹೊಂದಿದ್ದನು. ಆದರೆ ಇದೀಗ ಆಕೆಯ ಜೊತೆಗಿನ ಸಂಬಂಧ ಬೇರ್ಪಟ್ಟಿದೆ. ಹೀಗಾಗಿ ಹತಾಶೆಗೊಂಡ ರೋಹಿತ್ ಯುವತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    ಅಕ್ಟೋಬರ್ 28ರಂದು ಜೆಜೆ ಕಾಲೋನಿಯಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿರುವ ವಿಚಾರವೊಂದು ಪೊಲೀಸರಿಗೆ ತಿಳಿಯುತ್ತಿದೆ. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದಾಗ ಶೂಟೌಟ್‍ಗೊಳಗಾದ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತ ಆರೋಪಿಗಳ ಪತ್ತೆಗಾಗಿ ಸಿಸಿಟಿವಿ (CCTV) ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ವಿವಿಧ ಸ್ಥಳಗಳು ಮತ್ತು ಸಂಭವನೀಯ ಅಡಗುತಾಣಗಳಲ್ಲಿ ದಾಳಿ ನಡೆಸಲಾಯಿತು. ವಿವರವಾದ ತನಿಖೆಯ ನಂತರ, ಆರೋಪಿಯನ್ನು ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ನಿರಂತರ ವಿಚಾರಣೆಯ ವೇಳೆ, ಅವನು ಸಾವಿಗೀಡಾದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನೆಂದು ಬಹಿರಂಗಪಡಿಸಿದನು. ಆಕೆ ನನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರಿಂದ ಹತಾಶೆಗೊಂಡು ಕೊಲೆ ಮಾಡಲು ನಿರ್ಧರಿಸಿದನು. ಅಪರಾಧ ಎಸಗಿದ ಬಳಿಕ ಬೇರೆ ಬೇರೆ ಹೊಟೇಲ್‍ಗಳಲ್ಲಿ ತಲೆಮರೆಸಿಕೊಂಡಿದ್ದ. ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸ್ಥಳ ಬದಲಿಸುತ್ತಿದ್ದನು. ಕೊಲೆಗೆ ಬಳಸಲಾದ ಆಯುಧವನ್ನು ಚರಂಡಿಗೆ ಎಸೆದಿರುವುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಗೃಹಿಣಿಯನ್ನು ಕೊಲೆಗೈದ ವಿವಾಹಿತ!

    ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಗೃಹಿಣಿಯನ್ನು ಕೊಲೆಗೈದ ವಿವಾಹಿತ!

    – ಮಹಿಳೆಯನ್ನು ಅಡ್ಡಗಟ್ಟಿ ಕೊಚ್ಚಿ ಕೊಂದ

    ಹಾಸನ: ಮದುವೆಯಾಗುವಂತೆ ಪೀಡಿಸಿ ಗೃಹಿಣಿಯನ್ನು ಕೊಲೆಗೈದ ಘಟನೆಯೊಂದು ಹಾಸನ ತಾಲೂಕಿನ ಚಿಕ್ಕ ಬೂವನಹಳ್ಳಿ ಬಳಿ ನಡೆದಿದೆ.

    ಗಾಯತ್ರಿ (30) ಕೊಲೆಯಾದ ಮಹಿಳೆ. ಈ ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸಿ ಮಂಜುನಾಥ್ ಬೆನ್ನು ಬಿದ್ದಿದ್ದ. ಮಕ್ಕಳನ್ನು ಬಿಟ್ಟು ತನ್ನೊಟ್ಟಿಗೆ ಬರುವಂತೆ ಒತ್ತಡ ಹಾಕಿದ್ದನು. ಆದರೆ ಇದಕ್ಕೆ ಗಾಯತ್ರಿ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಕೆಲಸಕ್ಕೆ ಹೋಗಿದ್ದ ಗಾಯತ್ರಿಯನ್ನು ಅಡ್ಡಗಟ್ಟಿ ಕೊಚ್ಚಿ ಕೊಂದಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ್ ನನ್ನ ಪೊಲೀಸರು ಬಂಧಿಸಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ತುಮಕೂರು: ಪತ್ನಿ ಅತ್ತೆ ಹಾಗೂ ಮಾವನ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತುರುವೇಕೆರೆ ತಾಲೂಕು ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.

    ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸೆಲ್ಫಿ ವೀಡಿಯೋ ಮಾಡಿ ಕೀಟನಾಶಕ ಸೇವಿಸಿ ಆತ್ಮಹತೆಗೆ ಶರಣಾಗಿದ್ದಾನೆ. ಈ ಘಟನೆ ನವೆಂಬರ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ವೀಡಿಯೋದಲ್ಲಿ ಲೋಕೇಶ್ ಹೇಳಿದ್ದೇನು..?
    ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ. ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಹೇಗೆ ಬದುಕಲಿ ಎಂದು ಲೋಕೇಶ್ ಅಳಲು ತೋಡಿಕೊಂಡಿದ್ದಾನೆ.

    ವಿಡಿಯೋ ಮಾಡಿಟ್ಟು ಲೋಕೇಶ್ ಕೀಟನಾಶಕ ಸೇವಿಸಿದ್ದಾನೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಪೊಲೀಸರು ಪ್ರಕರಣದ ತನಿಖೆಯನ್ನೇ ಮಾಡುತ್ತಿಲ್ಲ ಅಂತ ಮೃತನ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

  • ಮೂರನೇ ಪತ್ನಿಯನ್ನ ಕೊಂದು ಅಪಘಾತದ ಕಥೆ ಕಟ್ಟಿ ಸಿಕ್ಕಿಬಿದ್ದ ಪತಿ

    ಮೂರನೇ ಪತ್ನಿಯನ್ನ ಕೊಂದು ಅಪಘಾತದ ಕಥೆ ಕಟ್ಟಿ ಸಿಕ್ಕಿಬಿದ್ದ ಪತಿ

    – ತನಗಿಂತ 20 ವರ್ಷ ಚಿಕ್ಕವಳನ್ನು ಪ್ರೀತಿಸಿ ಮದುವೆಯಾಗಿದ್ದ ಪಾಪಿ

    ಚಾಮರಾಜನಗರ: ಮೂರನೇ ಪತ್ನಿಯನ್ನು ಕೊಲೆಗೈದು ಅಪಘಾತದ ಕಥೆ ಕಟ್ಟಿದ್ದ ಆರೋಪಿ ಪತಿಯೊಬ್ಬನ ಕೃತ್ಯ ಎಂಟು ತಿಂಗಳ ಬಳಿಕ ಬೆಳಕಿಗೆ ಬಂದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಾಮರಾಜನಗರ ತಾಲೂಕಿನ ಮಸಣಾಪುರದ ಮಮತಾ (22) ಕೊಲೆಯಾದ ಪತ್ನಿ. ಹೊಂಗನೂರು ಗ್ರಾಮದ ಸಿದ್ದರಾಜು (42) ಕೊಲೆಗೈದಿದ್ದ ಪಾಪಿ ಪತಿ. ರಾಮಸಮುದ್ರ ರಸ್ತೆಯಲ್ಲಿ ಎಂಟು ತಿಂಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣವೊಂದನ್ನು ಚಾಮರಾಜನಗರ ಪೊಲೀಸರು ಬೇಧಿಸಿದ್ದಾರೆ. ಈ ಮೂಲಕ ಆರೋಪಿಯ ಕೃತ್ಯ ಬಯಲಾಗಿದೆ.

    ಆಟೋ ಚಾಲಕನಾಗಿರುವ ವಿವಾಹಿತ ಸಿದ್ದರಾಜು ತನಗಿಂತ 20 ವರ್ಷದ ಚಿಕ್ಕವಳಾದ ಮಮತಾಳನ್ನು ಪ್ರೀತಿಸಿದ್ದ. ಆದರೆ ಮಮತಾಳಿಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗುತ್ತಿತ್ತು. ಹೀಗಾಗಿ ಆ ಯುವಕನ ಜೊತೆಗೆ ಮಾತನಾಡಿದ್ದ ಸಿದ್ದರಾಜು, ನಾನು ಮಮತಾಳನ್ನು ಪ್ರೀತಿಸುತ್ತಿದ್ದೇನೆ. ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿ, ಮಮತಾಳನ್ನ ಬೆಂಗಳೂರಿಗೆ ಕರೆದೊಯ್ದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ. ಬಳಿಕ ಆಕೆಯನ್ನು ಚಾಮರಾಜನಗರಕ್ಕೆ ಕರೆತಂದು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಸಿದ್ದ.

    ಆದರೆ ಸಿದ್ದರಾಜುಗೆ ಅದಾಗಲೇ ಇಬ್ಬರು ಹೆಂಡತಿಯರಿದ್ದ ಕಾರಣ ಮಮತಾಳ ಜೊತೆ ಹೆಚ್ಚಾಗಿ ಇರುತ್ತಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಮಮತಾ ಮತ್ತು ಸಿದ್ದರಾಜು ನಡುವೆ ಗಲಾಟೆ ನಡೆಯುತ್ತಿತ್ತು. ಕೊನೆಗೆ ಮಮತಾಳನ್ನು ಮುಗಿಸಲು ಸಂಚು ರೂಪಿಸಿದ ಸಿದ್ದರಾಜು, ಆಕೆಯನ್ನು 2019ರ ಮೇ 26ರಂದು ತನ್ನ ಆಟೋದಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿ ಆಟೋದಿಂದ ಹೊರಕ್ಕೆ ತಳ್ಳಿ ಕೊಲೆಗೆ ಯತ್ನಿಸಿದ್ದ. ಹಲ್ಲೆಯಿಂದ ಗಾಯಗೊಂಡ ಮಮತಾಳನ್ನು ತಾನೇ ತನ್ನ ಆಟೋದಲ್ಲಿ ಕರೆದುಕೊಂಡು ಬಂದು ಅಪಘಾತ ಎಂದು ಕಥೆ ಕಟ್ಟಿ ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದ.

    ಮಮತಾಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾಗ ಪೊಲೀಸರು, ಮಮತಾಳ ವಿಳಾಸ ಪತ್ತೆ ಹಚ್ಚಿ ಆಕೆಯ ಪೋಷಕರನ್ನು ವಿಚಾರಿಸಿದಾಗ ಆರೋಪಿ ಸಿದ್ದರಾಜು ಕೃತ್ಯ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ಸಿದ್ದರಾಜುಗೆ ತೀವ್ರ ಶೋಧ ನಡೆಸಿ ಬಂಧಿಸಿರುವ ಪೊಲೀಸರು, ಆತನನ್ನು ಜೈಲಿಗಟ್ಟಿದ್ದಾರೆ.

  • ಇಡ್ಲಿ ಆಸೆ ತೋರಿಸಿ 5ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

    ಇಡ್ಲಿ ಆಸೆ ತೋರಿಸಿ 5ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾಹಿತ

    ಚಾಮರಾಜನಗರ: ವಿವಾಹಿತನೊಬ್ಬ ಇಡ್ಲಿ ಆಸೆ ತೋರಿಸಿ 5 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.

    ಹನೂರು ತಾಲೂಕಿನ ಬಸವರಾಜು (35) ಅತ್ಯಾಚಾರ ಎಸಗಿದ ಆರೋಪಿ. ಬಸವರಾಜು ಸೋಮವಾರ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸು ಬಂಧಿಸಿದ್ದು, ವಿಚಾರಣೆ ನಡೆದುತ್ತಿದ್ದಾರೆ. ಇದನ್ನೂ ಓದಿ: ಆಟವಾಡುತ್ತಿದ್ದ 7ರ ಬಾಲೆಯನ್ನ ಕೊಟ್ಟಿಗೆಗೆ ಹೊತ್ತೊಯ್ದು ರೇಪ್

    ಬಾಲಕಿ ಸೋಮವಾರ ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಬಸವರಾಜು ಇಡ್ಲಿ ಕೊಡಿಸುವುದಾಗಿ ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿ, ಮನೆಯಿಂದ ಹೊರಗೆ ಕಳುಹಿಸಿದ್ದಾನೆ.

    ಆರೋಪಿಯ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಬಾಲಕಿ ಮನೆಗೆ ಬಂದು ಮಲಗಿದ್ದಳು. ಇದನ್ನು ಗಮನಿಸಿದ ಪೋಷಕರು ವಿಚಾರಸಿದಾಗ ಬಾಲಕಿ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಪೋಷಕರು ಆರೋಪಿಯನ್ನು ಹಿಡಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಗ್ರಾಮಕ್ಕೆ ಕೊಳ್ಳೇಗಾಲ ಡಿವೈಎಸ್‍ಪಿ ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಸವರಾಜು ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಮಕ್ಕಳನ್ನು ಬಿಟ್ಟು ಲವರ್ ಜೊತೆಗೆ ಆತ್ಮಹತ್ಯೆಗೆ ಶರಣಾದ

    ಪತ್ನಿ, ಮಕ್ಕಳನ್ನು ಬಿಟ್ಟು ಲವರ್ ಜೊತೆಗೆ ಆತ್ಮಹತ್ಯೆಗೆ ಶರಣಾದ

    ಹೈದರಾಬಾದ್: ಪತ್ನಿ ಇಬ್ಬರು ಮಕ್ಕಳನ್ನು ಬಿಟ್ಟು ಪ್ರೀತಿ ಹಿಂದೆಬಿದ್ದ ವ್ಯಕ್ತಿಯೊಬ್ಬ ತನ್ನ ಲವರ್ ಜೊತೆಗೂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಇಂದು ನಡೆದಿದೆ.

    ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿ ಪಟ್ಟಣದ ತಿಲಕ್‍ನಗರದ ನಿವಾಸಿ ವೆಂಕಟೇಶ್ (30), ಜೈಪೂರ್ ತಾಲೂಕಿನ ಮಂದಮರ್ರಿ ನಿವಾಸಿ ಶ್ರೀವಿದ್ಯಾ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಘಟನೆ ನಡೆದಿದೆ.

    ಮೃತ ಶ್ರೀವಿದ್ಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ವೆಂಕಟೇಶ್‍ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಶ್ರೀವಿದ್ಯಾ ಇತ್ತೀಚೆಗೆ ಗೋದಾವರಿಖನಿಯ ಸೋದರ ಮಾವನ ಮನೆಗೆ ಹೋಗಿದ್ದಾಗ ವೆಂಕಟೇಶ್‍ನನ್ನು ನೋಡಿದ್ದಳು. ಕೆಲ ದಿನಗಳ ನಂತರ ವೆಂಕಟೇಶ್ ಸಂಬಂಧಿಯೊಬ್ಬರ ಮದುವೆಗಾಗಿ ಮಂದಮರಿಗೆ ಹೋಗಿದ್ದ. ಈ ವೇಳೆ ಶ್ರೀವಿದ್ಯಾ ಮತ್ತೆ ಭೇಟಿಯಾಗಿದ್ದಳು. ಆಗ ಆಕೆಯ ಫೋನ್ ನಂಬರ್ ಪಡೆದಿದ್ದ ವೆಂಕಟೇಶ್ ಆಗಾಗ ಮೆಸೇಜ್ ಹಾಗೂ ಕಾಲ್ ಮಾಡುತ್ತಿದ್ದ.

    ವೆಂಕಟೇಶ್ ಹಾಗೂ ಶ್ರೀವಿದ್ಯಾ ಮಧ್ಯದ ಸ್ನೇಹ ಪ್ರೇಮವಾಗಿ ತಿರುಗಿತ್ತು. ಆದರೆ ಇದಕ್ಕೆ ಪೋಷಕರು ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ಮನೆ ಬಿಟ್ಟು ಬಂದಿದ್ದರು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬೆಳಗ್ಗೆ 6 ಗಂಟೆಗೆ ವಿಷ ಸೇವಿಸಿದ್ದರು. ಪ್ರೇಮಿಗಳು ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದರು.

    ವೆಂಕಟೇಶ್ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದ. ಶ್ರೀವಿದ್ಯಾ ಉಸಿರಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಶ್ರೀವಿದ್ಯಾ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಲವ್ ರಿಜೆಕ್ಟ್ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಾರು ಹರಿಸಲು ಯತ್ನಿಸಿದ ವಿವಾಹಿತ!

    ಲವ್ ರಿಜೆಕ್ಟ್ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಕಾರು ಹರಿಸಲು ಯತ್ನಿಸಿದ ವಿವಾಹಿತ!

    ಬೆಂಗಳೂರು: ಲವ್ ಪ್ರಪೊಸ್ ರಿಜೆಕ್ಟ್ ಮಾಡಿದ್ದಕ್ಕೆ ವಿದ್ಯಾರ್ಥಿಯೊಬ್ಬಳ ಮೇಲೆ ವಿವಾಹಿತ ವ್ಯಕ್ತಿಯೊಬ್ಬ ಕಾರು ಹರಿಸಲು ಮುಂದಾದ ಘಟನೆ ಸಿಲಿಕಾನ್ ಸಿಟಿಯ ಯಲಹಂಕದ ಗಾಂಧಿನಗರದಲ್ಲಿ ನಡೆದಿದೆ.

    ಗಾಂಧಿನಗರದ ನಿವಾಸಿ ಶಶಾಂಕ್ ಎಂಬಾತನೇ ವಿದ್ಯಾರ್ಥಿನಿ ಕಾರು ಹತ್ತಿಸಲು ಯತ್ನಿಸಿದ ವ್ಯಕ್ತಿ. ಬಹಳಷ್ಟು ದಿನದಿಂದ ವಿದ್ಯಾರ್ಥಿನಿಗೆ ಪ್ರೇಮಿಸುವಂತೆ ಶಶಾಂಕ್ ಕಿರುಕುಳ ನೀಡುತ್ತಿದ್ದ. ಅಲ್ಲದೇ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಆದ್ರೆ ಶಶಾಂಕ್ ಪ್ರೀತಿಯನ್ನು ಯುವತಿ ಒಪ್ಪದಿದ್ದಾಗ ಕೋಪಗೊಂಡು ಆಕೆಯ ಮೇಲೆ ಕಾರು ಹರಿಸಲು ಮುಂದಾಗಿದ್ದಾನೆ.

    ಘಟನೆಯಲ್ಲಿ ಯುವತಿಯ ಕೈ ಹಾಗೂ ತಲೆಗೆ ಪೆಟ್ಟುಬಿದ್ದಿದ್ದು, ಗಾಯಗೊಂಡ ಯುವತಿಗೆ ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಸಂಜೆ ಕಾಲೇಜಿನಿಂದ ಬರೋ ವೇಳೆ ಯುವತಿಯನ್ನ ಹಿಂಬಾಲಿಸಿದ್ದಾನೆ. ನಂತರ ಯಲಹಂಕದ ಬಳಿ ಯುವತಿಯನ್ನ ಅಡ್ಡಗಟ್ಟಿ ಪ್ರೇಮ ನಿವೇದನೆ ಮಾಡಿದ್ದಾನೆ. ಈಗಾಗಲೇ ಒಂದು ಮದುವೆಯಾಗಿ ಹೆಂಡತಿಯನ್ನ ಬಿಟ್ಟಿರೋ ಶಶಾಂಕ್ ಹೀಗೆ ಪ್ರೀತಿಯನ್ನ ನಿರಾಕರಿಸಿದ್ದಕ್ಕೆ ಕೋಪಗೊಂಡ, ಯುವತಿ ಹಿಂದಿರುಗುವ ವೇಳೆ ತನ್ನ ಕಾರನ್ನ ಆಕೆಯ ಮೇಲೆ ಹರಿಸಲು ಯತ್ನಿಸಿದ್ದಾನೆ.

    ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ದೂರು ದಾಖಲಾಗ್ತಿದ್ದಂತೆ ಪಾಗಲ್ ಪ್ರೇಮಿ ಎಸ್ಕೇಪ್ ಆಗಿದ್ದಾನೆ. ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಿವಾಹಿತ ವ್ಯಕ್ತಿಯ ಕಿರುಕುಳ- 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

    ವಿವಾಹಿತ ವ್ಯಕ್ತಿಯ ಕಿರುಕುಳ- 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

    ನವದೆಹಲಿ: ಶಾಲೆಗೆ ಹೋಗುವಾಗ ವಿವಾಹಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದರಿಂದ ಮನನೊಂದ 15 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಸುಲ್ತಾನ್‍ಪುರಿಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಸೆಪ್ಟೆಂಬರ್ 19ರಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಬಾಲಕಿಯ ಪೋಷಕರು ಶನಿವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ನಡೆದದ್ದು ಏನು?
    ಬಾಲಕಿ ಶಾಲೆ ಹಾಗೂ ಟ್ಯೂಷನ್‍ಗೆ ಹೋಗುವಾಗ ಸ್ಥಳೀಯ ವಿವಾಹಿತ ವ್ಯಕ್ತಿಯೊಬ್ಬ ಆಕೆಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಬಾಲಕಿಯ ಜೊತೆಗೆ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ ಆಕೆಯ ಸಹೋದರರನ್ನು ಥಳಿಸಿದ್ದ. ಮದುವೆ ಆಗುತ್ತೇನೆ ಅಂತ ಪ್ರಸ್ತಾಪ ಮಾಡಿದ್ದನು. ಈ ಎಲ್ಲಾ ಘಟನೆಗಳಿಂದ ವಿದ್ಯಾರ್ಥಿನಿ ಮಾನಸಿಕವಾಗಿ ನೊಂದಿದ್ದಳು ಎಂಬುದಾಗಿ ವರದಿಯಾಗಿದೆ.

    ವಿವಾಹಿತ ವ್ಯಕ್ತಿಯ ವರ್ತನೆಯಿಂದ ಮನನೊಂದ ವಿದ್ಯಾರ್ಥಿನಿ, ಶನಿವಾರ ಮನೆಯ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv