ನಟಿ ಮಾನ್ವಿತಾ ಕಾಮತ್ (Manvita Kamath) ಮದುವೆ ಇಂದು ಚಿಕ್ಕಮಗಳೂರಿನ ಕಳಸದಲ್ಲಿ ನೆರವೇರಿದೆ. ಮೈಸೂರು ಹುಡುಗ ಅರುಣ್ ಕುಮಾರ್ (Arun) ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ. ಎರಡು ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ನಿನ್ನೆ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದರು. ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ(Nidhi Subbaiah), ಶ್ರುತಿ ಹರಿಹರನ್ (Shruti Hariharan), ರಿಲಾಕ್ಸ್ ಸತ್ಯ ನಟ ಪ್ರಭು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.
ಹಾಸನ: ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan Woman Death) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸುರಭಿ (24) ಮೃತ ಮಹಿಳೆ. ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸುರಭಿ ಸಾವಿಗೆ ಪತಿ ದರ್ಶನ್ ಕಾರಣವಾಗಿದ್ದು, ಆತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣದ ವಿವರ: ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ಹುಣಸೂರಿನ ಸುರಭಿಯನ್ನು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣುಮಗುವಿದ್ದು, ಪತಿ ದರ್ಶನ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: 6 ವರ್ಷ ಪ್ರೀತಿಸಿ ಕೈಕೊಟ್ಟ, ಸಪ್ತಪದಿ ತುಳಿದವನೂ ಬೇಡವೆಂದ- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಕಂಗಾಲು
ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಗುರುವಾರ ಸುರಭಿ ಪೋಷಕರಿಗೆ ಕರೆ ಮಾಡಿದ್ದಾನೆ. ನಂತರ ನಾಗಯ್ಯನಕೊಪ್ಪಲಿಗೆ ಬಂದ ಪೋಷಕರು, ಸುರಭಿ ಲೋಬಿಪಿಯಿಂದ ಸತ್ತಿಲ್ಲ. ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ. ಸುರಭಿ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಗರ್ಭಿಣಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಇಲಿಯಾನಾ. ಮದುವೆ ಆಗದೇ ಅದು ಹೇಗೆ ಮಗು ಹುಟ್ಟಲು ಸಾಧ್ಯ? ಎಂದು ಹಲವರು ಪ್ರಶ್ನೆ ಮಾಡಿದ್ದರು. ನೀವು ಸಿಂಗಲ್ ಪೇರೆಂಟಾ? ಎಂದು ಕೇಳಿದ್ದರು. ಈಗ ಎಲ್ಲದಕ್ಕೂ ಇಲಿಯಾನಾ ಉತ್ತರಿಸಿದ್ದಾರೆ. ತಮ್ಮ ಗಂಡನ ಫೋಟೋವನ್ನು ಶೇರ್ ಮಾಡಿ, ತಾವು ಸಿಂಗಲ್ ಪೇರೆಂಟ್ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಇಲಿಯಾನಾ(Ileana) ಅವರು ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ಸುದ್ದಿ ರಿವೀಲ್ ಆಗಿರುವ ಬೆನ್ನಲ್ಲೇ ನಟಿಯ ಬಗ್ಗೆ ಮತ್ತೊಂದು ಬ್ಲಾಸ್ಟಿಂಗ್ ಸುದ್ದಿಯೊಂದು ಸಿಕ್ಕಿತ್ತು. ಸಿನಿಮಾರಂಗ, ಅಭಿಮಾನಿಗಳು ಸೇರಿದಂತೆ ಅನೇಕರು ಇಲಿಯಾನಾ ಮದುವೆಯಾಗಿಲ್ಲ ಎಂದು ಭಾವಿಸಿದ್ದರು. ಆದರೆ ಈ ಸುದ್ದಿಗೆ ನಯಾ ಟ್ವಿಸ್ಟ್ ಸಿಕ್ಕಿತ್ತು.
ತಮ್ಮ ಮಗುವಿಗೆ ಕೋವಾ ಫೀನಕ್ಸ್ ಡೋಲನ್ (Koa Phoenix Dolan) ಎಂದು ಹೆಸರಿಟ್ಟಾಗಲೂ ಮಗುವಿನ ತಂದೆ ಯಾರು ರಿವೀಲ್ ಮಾಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದರು. ಇದೀಗ ಎಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾರೆ ನಟಿ.
ಮೈಕಲ್ ಡೋಲನ್ (Michael Dolan) ಎಂಬುವವರ ಜೊತೆ ಇಲಿಯಾನಾ ಮೇ 13, 2023ರಂದು ವಿವಾಹವಾಗಿದ್ದಾರೆ ಎಂದು ರಿವೀಲ್ ಆಗಿತ್ತು. ಆದರೆ ಅಧಿಕೃತ ಮದುವೆ ಬಗ್ಗೆ ಯಾವುದನ್ನ ನಟಿ ತಿಳಿಸಿರಲಿಲ್ಲ. ಕಳೆದ ತಿಂಗಳು ತನ್ನ ಮಸ್ಟರಿ ಮ್ಯಾನ್ ಮೈಕಲ್ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆತನ ಪರಿಚಯವನ್ನ ನಟಿ ತಿಳಿಸಿರಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಮದುವೆ ಮಾತನಾಡುತ್ತಾರಾ? ಮೇ 13ರಂದು ಮದುವೆ ಆಗಿರೋದು ನಿಜಾನಾ ಈ ಎಲ್ಲದರ ಬಗ್ಗೆ ಇಲಿಯಾನಾ ಅಧಿಕೃತ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿತ್ತು. ಈಗ ಎಲ್ಲವೂ ಬಟಾಬಯಲಾಗಿದೆ.
ನವದೆಹಲಿ: ಮುಂಗಾರು ಸಂಸತ್ ಅಧಿವೇಶನಕ್ಕೆ ಮಣಿಪುರ ಹಿಂಸಾಚಾರ (Manipur Violence) ವಿಚಾರ ಕಂಟಕವಾಗಿ ಪರಿಣಮಿಸಿದೆ. ಗುರುವಾರವೂ ಉಭಯ ಸದನಗಳಲ್ಲಿ ಗದ್ದಲ ಏರ್ಪಟ್ಟಿದೆ.
ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ (Jagdeep Dhankhar) ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಡುವೆ ವಾಗ್ಯುದ್ಧ ನಡೆದಿದೆ. ಪ್ರಧಾನಿಯನ್ನ ಅಷ್ಟೇಕೆ ಸಮರ್ಥಿಸಿ ಮಾತಾಡ್ತಿದ್ದೀರಿ? ಮಣಿಪುರ ವಿಚಾರದಲ್ಲಿ ಪ್ರಧಾನಿಯನ್ನ ಏಕೆ ರಕ್ಷಣೆ ಮಾಡ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಧನಕರ್, ಯಾರನ್ನೂ ರಕ್ಷಿಸುವ ಅಗತ್ಯ ನನಗಿಲ್ಲ. ಸಂವಿಧಾನ ಮತ್ತು ಸದಸ್ಯರ ಹಕ್ಕುಗಳನ್ನು ರಕ್ಷಣೆ ಮಾಡುವುದು ನನ್ನ ಕೆಲಸ. ನಿಮ್ಮಂಥವರಿಂದ ಇಂಥಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ `ಸಭಾಪತಿ ಅವರಿಗೆ ಮದುವೆಯಾಗಿ 45 ವರ್ಷಗಳಾಗಿದೆ. ಆದರೂ ಪ್ರತಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸುವಾಗ ಏಕೆ ಸಿಡಿಮಿಡಿಗೊಳ್ಳುತ್ತಾರೆ ಅನ್ನೋದೇ ಅರ್ಥವಾಗುತ್ತಿಲ್ಲ’ ಎಂದು ಕುಳಿತುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್, ನಾನು ಮದುವೆಯಾಗಿ 45 ವರ್ಷ ಕಳೆದಿದೆ. ಹಾಗಾಗಿ ನನಗೆ ಕೋಪವೇ ಬರೋದಿಲ್ಲ ಎಂದು ಚಟಾಕಿ ಹಾರಿಸಿದರು. ಇದನ್ನೂ ಓದಿ: ಟ್ರೈನಿಂಗ್ ನೆಪದಲ್ಲಿ ಜ್ಯೂನಿಯರ್‌ಗಳಿಗೆ ಥಳಿಸಿದ NCC ಸೀನಿಯರ್ ಕೆಡೆಟ್- ವೀಡಿಯೋ ವೈರಲ್
ಇನ್ನು, ಆಡಳಿತ ಮತ್ತು ವಿಪಕ್ಷಗಳ ಧೋರಣೆಗೆ ಬೆಸತ್ತ ಸ್ಪೀಕರ್ ಓಂಬಿರ್ಲಾ ಇವತ್ತು ಕಲಾಪದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, ಸ್ಪೀಕರ್ ಸದನದ ಸಂರಕ್ಷರು, ಅವರು ಬರಬೇಕು ಎಂದು ಕೋರಿದರು. ಇದನ್ನು ಮನ್ನಿಸಿದ ಸ್ಪೀಕರ್ ಮಧ್ಯಾಹ್ನದ ಕಲಾಪವನ್ನ ನಿರ್ವಹಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗೀಕಾರ – ಆಪ್‌ಗೆ ಭಾರೀ ಹಿನ್ನಡೆ
ಅಲ್ಲದೇ ಗುರುವಾರ ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ದೆಹಲಿ ಸೇವಾ ಮಸೂದೆ ವಿಧೇಯಕವನ್ನು ಮಂಡನೆ ಮಾಡಲಾಯಿತು. ಈ ವೇಳೆ ವಿಧೇಯಕದ ಪ್ರತಿ ಹರಿದೆಸೆದ ಎಎಪಿ ಸಂಸದ ಸುಶೀಲ್ ಸದನದಿಂದ ಅಮಾನಾತಾದರು. ಕೇಂದ್ರದ ವಿರುದ್ಧ ಎಎಪಿ ವಾಗ್ದಾಳಿ ನಡೆಸಿದೆ. ಇದೇ ವೇಳೆ, ಡಿಜಿಟಲ್ ದತ್ತಾಂಶಗಳ ಸಂರಕ್ಷಣಾ ವಿಧೇಯಕವನ್ನು ಸರ್ಕಾರ ಮಂಡಿಸಿದ್ದು, ಲೋಕಸಭೆಯಲ್ಲಿ ಗದ್ದಲ ಉಂಟಾಯ್ತು.
ಬ್ರೆಸಿಲಿಯಾ: ಬ್ರೆಜಿಲ್‍ನ ಮಾಡೆಲ್‍ವೊಬ್ಬ 9 ಮಂದಿ ಯುವತಿಯರನ್ನು ಮದುವೆಯಾಗಿದ್ದನು. ಇದೀಗ ಅವರ ಪತ್ನಿಯಲ್ಲಿ ಒಬ್ಬರು ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.
ಬ್ರೆಜಿಲ್‍ನ ಈ ಮಾಡೆಲ್ ಹೆಸರು ಆರ್ಥರ್ ಒ ಉರ್ಸೋ. 9 ಯುವತಿಯರನ್ನು ಏಕಕಾಲದಲ್ಲಿ ಮದುವೆಯಾಗಿದ್ದನು. ಹಾಗೇ, ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ 10 ಹೆಂಡಿರ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನೂ ಹೊಂದಿದ್ದರು. ಆದರೆ ಇವರ ಪತ್ನಿಯರಲ್ಲಿ ಒಬ್ಬರಾದ ಅಗಾಥಾ ಉರ್ಸೋರನ್ನು ಬಿಟ್ಟು ಹೊರಟಿದ್ದಾರೆ.
ಬ್ರೆಜಿಲ್‍ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲದೆ ಇದ್ದರೂ ಕೂಡ, ತಾನು ಬಹುಪತ್ನಿತ್ವವನ್ನೇ ಇಷ್ಟಪಡುತ್ತೇನೆ. ಏಕಪತ್ನಿತ್ವದ ವಿರುದ್ಧ ಪ್ರತಿಭಟಿಸುತ್ತೇನೆ. 10 ಪತ್ನಿಯರನ್ನು ಹೊಂದುವ ನನ್ನ ಕನಸನ್ನು ನನಸು ಮಾಡಿಕೊಳ್ಳದೆ ಬಿಡುವುದಿಲ್ಲ. ಆಕೆಯ ನಿರ್ಧಾರದಿಂದ ಬೇಸರಗೊಂಡಿದ್ದೇನೆ. ಈ ಬಗ್ಗೆ ನೋವಾದರೂ ಡಿವೋರ್ಸ್‍ಗೆ ಸಮ್ಮತಿ ನೀಡುವುದಾಗಿ ಉರ್ಸೋ ಹೇಳಿಕೊಂಡಿದ್ದಾರೆ.
ನಾನು ಅವಳಿಗೊಬ್ಬಳಿಗೇ ಮಾತ್ರ ಸೇರಿದವನಾಗಿರಬೇಕು ಎಂದು ನನ್ನ ಪತ್ನಿ ಬಯಸುತ್ತಾಳೆ. ಏಕಪತ್ನಿತ್ವ ಅನುಸರಿಸಬೇಕು ಎಂಬುದು ಆಕೆ ಬಯಕೆ. ಆದರೆ ನಾನಿದಕ್ಕೆ ಒಪ್ಪುವುದಿಲ್ಲ. ನಾನು 9 ಪತ್ನಿಯರೊಂದಿಗೆ ಇರಲು ಇಷ್ಟಪಡುತ್ತೇನೆ. ಎಲ್ಲವನ್ನೂ ಹಂಚಿಕೊಳ್ಳಲೇಬೇಕು. ಆಕೆಗೆ ಡಿವೋರ್ಸ್ ಕೊಡುವ ಬಗ್ಗೆ ಬೇಸರವಿದೆ. ಹಾಗಂತ ವಿಚ್ಛೇದನ ನೀಡದೆ ಇರುವುದಿಲ್ಲ. ಆದರೆ ಹೀಗೆ ದಾಂಪತ್ಯ ಜೀವನ ನಡೆಸುವುದರಿಂದ ನಾನು ಏಕಪತ್ನಿತ್ವದ ಸುಖದಿಂದ ವಂಚಿತಳಾಗುತ್ತಿದ್ದೇನೆ ಎಂದು ಆಕೆ ಹೇಳಿದ್ದು ಕೇಳಿ ನನಗೆ ಅಚ್ಚರಿಯಾಯಿತು. ಶೀಘ್ರದಲ್ಲೇ ಇನ್ನಿಬ್ಬರು ಮದುವೆಯಾಗುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ
ಒಬ್ಬಳ ನಿರ್ಧಾರಕ್ಕೆ ಉರ್ಸೋ ಉಳಿದ 8 ಪತ್ನಿಯರು ವಿರೋಧ ವ್ಯಕ್ತಪಡಿಸಿರೆ. ಆಕೆ ಕೇವಲ ಒಂದು ಪ್ರಯೋಗಕ್ಕಾಗಿ ಉರ್ಸೋನನ್ನು ವಿವಾಹವಾಗಿದ್ದಾಳೆ ಬಿಟ್ಟರೆ, ಆಕೆಗೆ ನಿಜಕ್ಕೂ ಉರ್ಸೋ ಮೇಲೆ ಪ್ರೀತಿಯಿಲ್ಲ ಎನ್ನುತ್ತಿದ್ದಾರೆ.
ಜೈಪುರ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿವಾಹಿತ ಮಹಿಳೆಯನ್ನು ದುಷ್ಕರ್ಮಿಗಳು ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಝಡೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗ್‍ಪುರ ಚೆಕ್ ಪೋಸ್ಟ್‌ನಿಂದ ಕೇವಲ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಇಬ್ಬರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ
ವಿವಾಹಿತ ಮಹಿಳೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಮೂವರು ಯುವಕರು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ದಾರಿ ಮಧ್ಯೆ ಆಕೆಯನ್ನು ತಡೆದು ಅಸಭ್ಯವಾಗಿ ವರ್ತಿಸಿದ್ದಾರೆ. ಬಳಿಕ ಇಬ್ಬರು ಯುವಕರು ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು
ದೂರು ದಾಖಲಸಿಕೊಂಡಿರುವ ಪೊಲೀಸರು. ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳು ಸುತ್ತಮುತ್ತಲಿನ ಊರಿನವರು ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವದೆಹಲಿ: ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲೂ ಪ್ರಸಾದ್ ಅವರ ಕೊನೆಯ ಪುತ್ರ ತೇಜಸ್ವಿ ಯಾದವ್ ಬಾಲ್ಯದ ಗೆಳತಿ ರಾಜೇಶ್ವರಿ,ಎಕೆಎ ರೇಚೆಲ್ ಅವರ ಜೊತೆಗೆ ದಾಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೇಜಸ್ವಿ ಯಾದವ್ ಹರಿಯಾಣ ಮೂಲದ ತಮ್ಮ ಬಾಲ್ಯದ ಗೆಳತಿ ರಾಜೇಶ್ವರಿ, ಎಕೆಎ ರೇಚೆಲ್ ಅವರನ್ನು ಇಂದು ನವದೆಹಲಿಯಲ್ಲಿ ವಿವಾಹವಾಗಿದ್ದಾರೆ. ರಾಜೇಶ್ವರಿ ಮತ್ತು ತೇಜಸ್ವಿ ಇಬ್ಬರೂ ದೆಹಲಿಯ ಆಕೆಎ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದರು ಮತ್ತು ಈಗ 6-7 ವರ್ಷಗಳಿಂದ ಸ್ನೇಹಿತರಾಗಿದ್ದರು ಎನ್ನಲಾಗಿದೆ.
ಗುರುವಾರ ಬೆಳಗ್ಗೆ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಮದುವೆ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಂಡಿತ್ತು. ಆದರೆ ರಾಜೇಶ್ವರಿ ಸಹೋದರಿ ರೋಹಿಣಿ ಆಚಾರ್ಯ ತಮ್ಮ ಟ್ವಿಟ್‌ನಲ್ಲಿ ವಿವಾಹದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದಾಗ ಮದುವೆ ವಿಚಾರ ಬಹಿರಂಗವಾಗಿದೆ.
हम नही है पास फिर भी मेरा आशीर्वाद है दोनो के साथ???????? congratulations tutu nd Rachel ????Wishing you both a lifetime of happiness!???????? pic.twitter.com/JF567vMqyL
ನಾನು ನಿನ್ನ ಮದುವೆಯಲ್ಲಿ ಇಲ್ಲ. ಆದರೆ ನನ್ನ ಆಶೀರ್ವಾದ ನಿಮ್ಮಿಬ್ಬರ ಮೇಲಿದೆ. ಟುಟು ಮತ್ತು ರೇಚೆಲ್‍ಗೆ ಮದುವೆಯ ಶುಭಾಶಯಗಳು ನಿಮ್ಮಿಬ್ಬರ ಜೀವನ ಉಸಿರಿರುವವರೆಗೂ ಸಂತೋಷವಾಗಿರಲೆಂದು ಆಶಿಸುತ್ತೇನೆ ಎಂದು ಟ್ವಿಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ – ವೀಡಿಯೋ ವೈರಲ್
भाई के सिर पर सेहरा है सजने वाला
खुशियों से गुलजार घर का आँगन है होने वाला????????
ತೇಜಸ್ವಿ ಯಾದವ್ ಮದುವೆಯಲ್ಲಿ ಕೇವಲ 50 ಮಂದಿ ಮಾತ್ರ ಭಾಗಿಯಾಗಿದ್ದಾರೆ. ಆಮಂತ್ರಿತರಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಗಿತ್ತು. ದೆಹಲಿಯ ಸೈನಿಕ್ ಫಾಮ್ರ್ಸ್‍ನಲ್ಲಿ ನಡೆದ ಸಮಾರಂಭದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್, ರಾಜ್ಯಸಭಾ ಸಂಸದೆ ಮಿಸಾ ಭಾರತಿ ಇತರರು ಸೇರಿದಂತೆ ಉನ್ನತ ರಾಜಕೀಯ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರತಿಭಟನೆ ಮುಂದುವರಿಯಲಿದೆ: ನಾಳೆ ಮತ್ತೆ ರೈತರ ಸಭೆ
ಕಾಂಬೋಡಿಯಾ: ವೃದ್ಧೆಯೊಬ್ಬಳು ತನ್ನ ತೀರಿ ಹೋದ ಪತಿಯ ಎಲ್ಲಾ ಗುಣ ಲಕ್ಷಣಗಳು ಈ ಹಸುವಿನಲ್ಲಿ ಇದೆ ಎಂದು ಅದರ ಜೊತೆಗೆ ವಿವಾಹವಾಗಿರುವುದು ಸುದ್ದಿಯಾಗಿದೆ.
ಕಾಂಬೋಡಿಯಾದ ಕ್ರಾತಿ ಪ್ರಾಂತ್ಯದಲ್ಲಿ ವಾಸಿಸುವ 74 ವರ್ಷದ ಖಿಮ್ ಹ್ಯಾಂಗ್ ಹೆಸರಿನ ವೃದ್ಧೆ ತೀರಿ ಹೋದ ತನ್ನ ಪತಿಯ ಎಲ್ಲಾ ಗುಣಲಕ್ಷಣಗಳನ್ನು ಒಂದು ಹಸುವಿನಲ್ಲಿ ಕಂಡಿದ್ದಾಳೆ. ಆ ಹಸುವನ್ನು ಮದುವೆಯಾಗಿದ್ದಾಳೆ. ಈಕೆ ವಯೋವೃದ್ಧೆಯಾಗಿದ್ದು, ಮದುವೆಯಾಗಿರುವುದಕ್ಕೆ ಯಾವುದೇ ವೀಡಿಯೋ ಸಾಕ್ಷಿಗಳಿಲ್ಲ. ಆದರೆ ಗ್ರಾಮದ ಅನೇಕ ಜನರು ಮದುವೆಯನ್ನು ನೋಡಿದ್ದೇವೆ, ಮದುವೆಯಲ್ಲಿ ಭಾಗವಹಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ
ಮರುಜನ್ಮ ಪಡೆದು ತನ್ನ ಪತಿ ಹಸುವಿನ ರೂಪದಲ್ಲಿ ಮರಳಿದ್ದಾನೆ ಎಂದು ಮಹಿಳೆಗೆ ಹೇಗೆ ಅನಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಇದಕ್ಕೆ ಉತ್ತರವನ್ನು ನೋಡೋದಾದರೆ ಹಸು ಜನಿಸಿದಾಗ, ಮಹಿಳೆ ಅದರೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಳು. ಆಗ ಹಸು ಆಕೆಯ ಕೈ ಮತ್ತು ಮುಖವನ್ನು ನೆಕ್ಕುತ್ತಿತ್ತು ಮತ್ತು ಅನೇಕ ಬಾರಿ ಮುಖಕ್ಕೆ ಮುತ್ತು ನೀಡುತ್ತಿತ್ತು. ತನ್ನ ಪತಿ ತನ್ನನ್ನು ಹೇಗೆ ಪ್ರೀತಿಸುತ್ತಿದ್ದನೋ ಅದೇ ರೀತಿ ಹಸು ತನ್ನನ್ನು ಪ್ರೀತಿಸುತ್ತದೆ ಎಂದು ಅಂದುಕೊಂಡು ಹಸುವನ್ನು ತನ್ನ ಗಂಡನಂತೆ ಪ್ರೀತಿಸುತ್ತಾಳೆ. ಇದನ್ನೂ ಓದಿ: ನಾಗರಹಾವಿನೊಂದಿಗೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ
ಗಂಡನ ಕೋಣೆಯಲ್ಲಿ ಇಟ್ಟಿದ್ದ ದಿಂಬನ್ನು ಹಸುವಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಆಕೆ ಹಸು ಒಟ್ಟಿಗೆ ವಾಸವಾಗಿದ್ದಾಳೆ. ಖಿಮ್ ಮಕ್ಕಳೂ ಈ ಹಸುವೇ ತಮ್ಮ ತಂದೆ ಎಂದು ನಂಬಿಕೊಂಡಿದ್ದಾರೆ. ಅವರು ಗೋವಿಗೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಮರಣದ ನಂತರ ಹಸುವನ್ನು ತಂದೆಯಂತೆ ಪ್ರೀತಿಸಬೇಕು, ಅದನ್ನು ಮಾರಾಟ ಮಾಡಬಾರದು, ಅದು ಮರಣ ಹೊಂದಿದರೆ ಅಂತ್ಯಕ್ರಿಯೆಯನ್ನು ಮಾಡಬೇಕು. ಚೆನ್ನಾಗಿ ಮೇವು ನೀಡಬೇಕು ಎಂದು ಖಿಮ್ ಆಣೆ ಪ್ರಮಾಣವನ್ನು ತನ್ನ ಮಕ್ಕಳಿಂದ ಮಾಡಿಸಿಕೊಂಡಿದ್ದಾಳೆ ಎನ್ನಲಾಗಿದೆ.
ಹುಬ್ಬಳ್ಳಿ: ತನ್ನ ಜೊತೆ ಮದುವೆ ಆಗದಿದ್ದರೆ ಜೊತೆಗೆ ತೆಗೆಸಿಕೊಂಡಿರುವ ಎಲ್ಲ ಫೋಟೋಗಳನ್ನು ಎಲ್ಲರಿಗೂ ಕಳುಹಿಸುತ್ತೇನೆ. ಹೀಗೆಂದು ಯುವತಿಯೊಬ್ಬಳಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿರುವ ಕುರಿತು ಯುವತಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ರಾಯಚೂರು ಮೂಲದ ಆನಂದಕುಮಾರ ಭೋವಿ ಯುವತಿಗೆ ವಂಚಿಸಿದ ಆರೋಪಿಯಾಗಿದ್ದಾನೆ. ಈತ ಮೊದಲೇ ಮದುವೆಯಾಗಿದ್ದ ವಿಷಯ ಮುಚ್ಚಿಟ್ಟು, ಹತ್ತು ತಿಂಗಳ ಹಿಂದೆ ನಗರದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಪ್ರೀತಿಸಿದ್ದ. ಈತನ ಮದುವೆ ವಿಷಯ ಗೊತ್ತಾದ ಬಳಿಕ ಯುವತಿ ಈತನಿಂದ ದೂರವಾಗಿದ್ದಳು. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!
ಆನಂದ ಯುವತಿಯನ್ನು ಹಿಂಬಾಲಿಸುವುದು, ಆಕೆಯ ಜೊತೆಗಿನ ಫೋಟೋಗಳನ್ನು ಸಂಬಂಧಿಕರಿಗೆ ಕಳುಹಿಸುವುದು ಇತ್ಯಾದಿ ಕಿರಿಕಿರಿ ಮಾಡುತ್ತಾ ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ನವಂಬರ್ 14 ರಂದು ವೀರಾಪುರ ಓಣಿಯಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಯುವತಿ ದೂರಿ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.
ತುಮಕೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ನವದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು
ಪತ್ನಿ ವರಲಕ್ಷ್ಮೀ(23) ಪತಿ ಮುನಿಸ್ವಾಮಿ (30) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರಿಗೆ ಆರು ತಿಂಗಳ ಹಿಂದಷ್ಟೆ ಮದುವೆಯಾಗಿತ್ತು. ವರಲಕ್ಷ್ಮಿ ಅವರು ಸಂಬಂಧಿಕ ಮುನಿಸ್ವಾಮಿಯನ್ನೇ ಮದುವೆಯಾಗಿದ್ದರು. ಇದೀಗ ಅವರು ಕೌಟುಂಬಿಕ ಕಲಹದಿಂದ ಬೇಸತ್ತು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.