Tag: Marriages

  • ಮದುವೆ, ಸಮಾರಂಭಕ್ಕೆ ಟಫ್ ರೂಲ್ಸ್ – ಉಲ್ಲಂಘನೆ ಮಾಡಿದ್ರೆ ಅಂಗಡಿ ಮಾಲೀಕನಿಗೆ ದಂಡ

    ಮದುವೆ, ಸಮಾರಂಭಕ್ಕೆ ಟಫ್ ರೂಲ್ಸ್ – ಉಲ್ಲಂಘನೆ ಮಾಡಿದ್ರೆ ಅಂಗಡಿ ಮಾಲೀಕನಿಗೆ ದಂಡ

    ಬೆಂಗಳೂರು: ಇನ್ನು ಮುಂದೆ ಮಾರ್ಕೆಟ್, ಮಾಲ್, ಅಂಗಡಿ ಮುಂದೆ ಕ್ಯೂ ಕಡ್ಡಾಯ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ. ಸಾಮಾಜಿಕ ಅಂತರ ಮರೆತರೆ ಕಟ್ಟುನಿಟ್ಟನ ಕ್ರಮ ಗ್ಯಾರೆಂಟಿ.

    ಮಾಲ್, ಮಾರ್ಕೆಟ್‍ಗಳಲ್ಲೂ ಕೊರೋನಾ ನಿಯಮ ಬಿಗಿಯಾಗಿದ್ದು ಅಂಗಡಿ ಎದುರು ಕನಿಷ್ಠ 6 ಅಡಿ ಅಂತರ ಇರಬೇಕು. ಸಾಮಾಜಿಕ ಅಂತರ ಪಾಲಿಸದಿದ್ರೆ ಗ್ರಾಹಕರಿಗೆ ದಂಡ ಹಾಕಲಾಗುತ್ತದೆ. ಗ್ರಾಹಕರ ಜೊತೆಗೆ ಮಾಲೀಕರಿಗೂ ದಂಡ ಹಾಕಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಇದನ್ನೂ ಓದಿ: 20 ರೂ. ಮಾಸ್ಕ್‌ಗೋಸ್ಕರ 1 ಸಾವಿರ ದುಡ್ಡು ಕಳ್ಕೊಬೇಕಾದಿತು ಹುಷಾರ್

    ಮದುವೆ ಸಮಾರಂಭಕ್ಕೆ 50 ಮಂದಿಗಷ್ಟೇ ಅವಕಾಶ ನೀಡಲಾಗಿದೆ. ಸಭೆ ಸಮಾರಂಭಗಳಲ್ಲೂ 50 ಜನ ಮೀರುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕವಾಗಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಅಂತ್ಯಸಂಸ್ಕಾರದ ಮನೆಯಲ್ಲಿ 20 ಜನರಿಗಷ್ಟೇ ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಪ್ರಯಾಣಿಕರೇ, ಬಸ್‌ ಹತ್ತೋ ಮುನ್ನ ಕೊರೊನಾ ನಿಯಮಗಳನ್ನು ತಿಳಿದುಕೊಳ್ಳಿ

    ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ. ಬುಧವಾರ 8,856 ಮಂದಿಗೆ ಸೋಂಕು ತಗುಲಿದ್ದು, 8,890 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,01,767ಕ್ಕೆ ಏರಿಕೆಯಾಗಿದೆ. ಈ ಪೈಕಿ 1,07,616 ಸಕ್ರಿಯ ಪ್ರಕರಣಗಳಿದ್ದು, 821 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಕೊರೊನಾದಿಂದಾಗಿ ರಾಜ್ಯದಲ್ಲಿ 8,864 ಜರನು ಪ್ರಾಣ ಕಳೆದುಕೊಂಡಿದ್ದಾರೆ.

  • ಅಲಹಾಬಾದ್‍ನಲ್ಲಿ ಮೂರು ತಿಂಗಳ ಕಾಲ ಮದುವೆಗೆ ನಿರ್ಬಂಧ!

    ಅಲಹಾಬಾದ್‍ನಲ್ಲಿ ಮೂರು ತಿಂಗಳ ಕಾಲ ಮದುವೆಗೆ ನಿರ್ಬಂಧ!

    ಲಕ್ನೋ: ಕುಂಭಮೇಳದ ಹಿನ್ನೆಲೆಯಲ್ಲಿ ಅಲಹಾಬಾದ್‍ನಲ್ಲಿ 3 ತಿಂಗಳ ಕಾಲ ಕಲ್ಯಾಣ ಮಂಟಪದಲ್ಲಿ ಮದುವೆಯನ್ನು ನಿರ್ಬಂಧಿಸಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.

    ಉತ್ತರ ಪ್ರದೇಶದ ಅಲಹಬಾದ್‍ನಲ್ಲಿ 2019ರ ಜನವರಿ 15ರಿಂದ ಮಾರ್ಚ್ 4ರವರೆಗೆ ಕುಂಭಮೇಳ ನಡೆಯಲಿದೆ. ಈ ನಿಟ್ಟಿನಲ್ಲಿ ಭಕ್ತರಿಗೆ ವಸತಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಲ್ಯಾಣ ಮಂಟಪ, ಸಭಾಭವನ ಹಾಗೂ ಛತ್ರಗಳಲ್ಲಿ ಯಾವುದೇ ಕಾರ್ಯಕ್ರಮ, ಮದುವೆ ನಡೆಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.

    ಕುಂಭಮೇಳದ ವೇಳೆ ಕಲ್ಯಾಣ ಮಂಟಪಗಳಲ್ಲಿ ಯಾವುದೇ ವಿವಾಹ ಹಾಗೂ ಕಾರ್ಯಕ್ರಮ ನಡೆಸಲು ಅವಕಾಶ ನೀಡಿಲ್ಲ. ಈಗಾಗಲೇ ಮದುವೆ ನಿಶ್ಚಯವಾಗಿದ್ದರೆ ದಿನಾಂಕವನ್ನು ಮುಂದೂಡಬೇಕು. ಇಲ್ಲವೇ ಬೇರೆ ಪ್ರದೇಶದಲ್ಲಿ ವಿವಾಹವಾಗಬಹುದು ಎಂದು ತಿಳಿಸಲಾಗಿದೆ.

    ಸರ್ಕಾರದ ಈ ನಿರ್ಧಾರದಿಂದಾಗಿ ಅಂದಾಜು 300 ವಿವಾಹಗಳಿಗೆ ತಡೆ ಬೀಳಲಿದೆ. ಅಲಹಾಬಾದ್‍ನಲ್ಲಿ 106 ಗೆಸ್ಟ್ ಹೌಸ್, ಕಲ್ಯಾಣ ಮಂಟಪ, ಸಭಾಭವನಗಳಿದ್ದು ಎಲ್ಲವನ್ನೂ ಸರ್ಕಾರ ಕಾಯ್ದಿರಿಸಿಕೊಂಡಿದೆ. ಹೀಗಾಗಿ ಮದುವೆ ನಿಶ್ಚಯ ಮಾಡಿಕೊಂಡಿದ್ದವರು ಪರದಾಡುವಂತಾಗಿದೆ.

    ನಮಗೆ ಯಾವುದೇ ಆಯ್ಕೆಯನ್ನು ಸರ್ಕಾರ ನೀಡಿಲ್ಲ. ಈಗಾಗಲೇ ಕಾಯ್ದಿರಿಸಿದ್ದ ಕಲ್ಯಾಣ ಮಂಟಪವನ್ನು ರದ್ದು ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಸಾಮಾನ್ಯವಾಗಿ ವಿವಾಹ ನಡೆಯುವ ತಿಂಗಳಿನಲ್ಲಿಯೇ ಕುಂಭಮೇಳ ನಡೆಯುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ನಾವು ಬೇರೆ ಕಡೆಗೆ ಹೋಗಿ ಮದುವೆ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಕಲ್ಯಾಣ ಮಂಟಪ ಕಾಯ್ದಿರಿಸಿದ್ದ ರವಿಕುಮಾರ್ ಕೆಸರ್ವಾನಿ ಎಂಬವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv