Tag: marriage hall

  • ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ- 100 ಮಂದಿ ದುರ್ಮರಣ

    ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ- 100 ಮಂದಿ ದುರ್ಮರಣ

    ಬಾಗ್ದಾದ್: ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 100 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಇರಾಕ್‍ನಲ್ಲಿ (Northern Iraq) ನಡೆದಿದೆ.

    ಇರಾಕ್‍ನ ನಿನೆವೆ ಪ್ರಾಂತ್ಯದ ಹಮ್ದನಿಯಾ (Nineveh Province) ಪ್ರದೇಶದಲ್ಲಿ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಪ್ರಧಾನವಾಗಿ ಕ್ರಿಶ್ಚಿಯನ್ ಪ್ರದೇಶವಾಗಿದ್ದು, ಮೊಸುಲ್ ನಗರದ ಹೊರಗೆ ರಾಜಧಾನಿ ಬಾಗ್ದಾದ್‍ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲುಗಳು) ದೂರದಲ್ಲಿದೆ.

    ಈ ಎಲ್ಲಾ ದೃಶ್ಯಗಳು ಹಾಲ್‍ನಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರಲ್ಲಿ ಕೆಲವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ನಿನೆವೆ ಪ್ರಾಂತೀಯ ಗವರ್ನರ್ ನಜೀಮ್ ಅಲ್-ಜುಬೌರಿ ಹೇಳಿದ್ದಾರೆ. ಇದನ್ನೂ ಓದಿ: ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

    ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪಟಾಕಿಯಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಒದ್ದಾಡುತ್ತಿರುವ ನೆರೆಯ ಪಾಕಿಸ್ತಾನ (Pakistan) ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಒದ್ದಾಡುತ್ತಿದೆ. ಈ ಹಿನ್ನೆಲೆ ಪಾಕಿಸ್ತಾನದ ಸರ್ಕಾರ ಇಂಧನ (Energy) ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿದೆ.

    ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ಮಾರುಕಟ್ಟೆ ಹಾಗೂ ಮಾಲ್‌ಗಳನ್ನು ಈಗ ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ. ಮದುವೆ ಮಂಟಪಗಳನ್ನು ರಾತ್ರಿ 10:00 ಗಂಟೆಗೆ ಮುಚ್ಚಲಾಗುತ್ತದೆ. ಈ ಕ್ರಮದಿಂದ ನಮಗೆ 60 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ.

    ದೇಶದ ಪರಿಸ್ಥಿತಿಯನ್ನು ನಿಭಾಯಿಸಲು ಪಾಕ್ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಕಾಶಮಾನವಾದ ಬಲ್ಬ್ ಉತ್ಪಾದನೆಯನ್ನು ಫೆಬ್ರವರಿ 1 ರಿಂದ ಸ್ಥಗಿತಗೊಳಿಸಲು ಸೂಚಿಸಲಾಗಿದ್ದು, ಜುಲೈ ತಿಂಗಳಿನಿಂದ ಅಸಮರ್ಥ ಫ್ಯಾನ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎನ್ನಲಾಗಿದೆ. ಈ ಕ್ರಮದಿಂದ 22 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ಆಸಿಫ್ ತಿಳಿಸಿದ್ದಾರೆ.

    ಪಾಕ್ ಸರ್ಕಾರ 1 ವರ್ಷದೊಳಗೆ ಕಡಿಮೆ ವಿದ್ಯುತ್ ಬಳಸುವ ಗೀಸರ್‌ಗಳನ್ನು ಬಳಸಲು ಹಾಗೂ ಹಳೆಯದನ್ನು ಅಥವಾ ಹೆಚ್ಚು ವಿದ್ಯುತ್ ಉಪಯೋಗಿಸುವ ಗೀಸರ್‌ಗಳನ್ನು ಬದಲಿಲು ಜನರಿಗೆ ಕಡ್ಡಾಯವಾದ ಸೂಚನೆ ನೀಡಿದೆ. ಇದರಿಂದ 92 ಶತಕೋಟಿ ರೂ. ಉಳಿತಾಯವಾಗುತ್ತದೆ. ಬೀದಿ ದೀಪಗಳ ಬದಲು ಪರ್ಯಾಯ ದೀಪ ಬಳಕೆಯಿಂದ 4 ಶತಕೋಟಿ ರೂ. ಉಳಿಸಬಹುದು ಎಂದಿದೆ. ಇದನ್ನೂ ಓದಿ: ಹತ್ಯೆ ಕೇಸ್- ಅಮಾನತುಗೊಂಡ ಬಿಜೆಪಿ ನಾಯಕನ ಅಕ್ರಮ ಹೋಟೆಲ್ ನೆಲಸಮ

    ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಕಚೇರಿಗಳಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲಾಗುತ್ತಿದ್ದು, ಆದಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ಮಂಗಳವಾರ ನಡೆದ ಸಂಪುಟ ಸಭೆಯಲ್ಲೂ ಯಾವುದೇ ವಿದ್ಯುತ್ ದೀಪಗಳು ಉರಿಯದೇ ಇದ್ದುದು ವಿಶೇಷವಾಗಿತ್ತು. ಕೇವಲ ಸೂರ್ಯನ ಬೆಳಕಿನಿಂದಲೇ ಸಭೆಯನ್ನು ನಡೆಸಲಾಗಿತ್ತು. ಇದು ಇಡೀ ದೇಶ ಅನುಸರಿಸಲು ಒಂದು ಅತ್ಯುತ್ತಮ ಉದಾಹರಣೆ ಎಂದು ಆಸಿಫ್ ಹೇಳಿದ್ದಾರೆ. ಇದನ್ನೂ ಓದಿ: ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    Live Tv
    [brid partner=56869869 player=32851 video=960834 autoplay=true]

  • ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

    ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

    ಲಕ್ನೋ: ಮದುವೆ ಮಂಟಪದೊಳಗೆ ನುಗ್ಗಿದ ಪಾಗಲ್ ಪ್ರೇಮಿ ತನ್ನ ಪ್ರೇಯಸಿಗೆ ಸಿಂಧೂರವನ್ನು ಇಟ್ಟ ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

    ಹೀರೋಯಿನ್ ಅನ್ನು ಹೀರೋ, ಮದುವೆ ಸಮಯದಲ್ಲಿ ಹೇಗಾದರೂ ಮಾಡಿ ವಿವಾಹ ಆಗುವ ದೃಶ್ಯಗಳನ್ನು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯ ಮದುವೆ ನಿಲ್ಲಿಸಲು ಬಂದಿದ್ದಾನೆ. ಈ ವೇಳೆ ವಧುವಿನ ಕಡೆಯವರು ಪ್ರೇಮಿಯನ್ನು ತಡೆಯಲು ಮುಂದಾದಾಗ ವಧುವಿಗೆ ಬಲವಂತವಾಗಿ ಸಿಂಧೂರವನ್ನು ಇಟ್ಟಿದ್ದಾನೆ. ಈಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು

    ಡಿಸೆಂಬರ್ 1 ರಂದು ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಈ ಘಟನೆ ನಡೆದಿದ್ದು, ವಧು-ವರರು ಮಾಲೆ ಹಾಕಿಕೊಳ್ಳುತ್ತಿದ್ದ ವೇಳೆ ವಧುವಿನ ಪ್ರೇಮಿ ಸ್ಥಳಕ್ಕೆ ಬಂದಿದ್ದಾನೆ. ಅಲ್ಲದೇ ಅವನು ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಮುಖವನ್ನು ಮರೆಮಾಚುತ್ತಾ, ವಧುವಿನ ಹಣೆಯ ಮೇಲೆ ಬಲವಂತವಾಗಿ ಸಿಂಧೂರವನ್ನು ಹಾಕಲು ಪ್ರಯತ್ನಿಸಿದ್ದಾನೆ. ಇದನ್ನು ತಡೆಯಲು ಕುಟುಂಬದವರು ಮುಂದಾಗಿದ್ದು, ಜೇಬಿನಲ್ಲಿ ಇದ್ದ ಸಿಂಧೂರವನ್ನು ತೆಗೆದು ವಧುವಿನ ಹಣೆಗೆ ಇಟ್ಟಿದ್ದಾನೆ.

    ವರದಿಗಳ ಪ್ರಕಾರ, ಆ ವ್ಯಕ್ತಿ ವಧುವಿನ ಮಾಜಿ ಪ್ರೇಮಿಯಾಗಿದ್ದು, ಹಣ ಸಂಪಾದಿಸಲು ಬೇರೆ ನಗರಕ್ಕೆ ಹೋಗಿದ್ದನು. ಅವನು ಇಲ್ಲದೇ ಇರುವುದನ್ನು ತಿಳಿದ ಯುವತಿಯ ಕುಟುಂಬ ಅವಳನ್ನು ಬೇರೆಯವರಿಗೆ ಮದುವೆ ಮಾಡಲು ನಿಶ್ಚಯಿಸಿದೆ. ಆದರೆ ಯುವತಿ ತನ್ನ ಹೆತ್ತವರಿಗೆ ಅರ್ಥಮಾಡಿಸಲು ಪ್ರಯತ್ನಿಸಿದರೂ, ಅವರು ಆಕೆಯ ಮಾತನ್ನು ಕೇಳಲಿಲ್ಲ. ಈ ಹಿನ್ನೆಲೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾಮಿಸಿದ ಪ್ರೇಮಿ ಮದುವೆಯನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ

    ವಿವಾಹದ ವೇಳೆ ಪ್ರೇಮಿ ವೇದಿಕೆಯ ಮೇಲೆ ಗಲಾಟೆ ಮಾಡಿದ್ದರಿಂದ ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅದು ಅಲ್ಲದೇ ಯುವತಿ ಮದುವೆಯಾದ ನಂತರ ಆತನನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

  • ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

    ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

    – ಸಿಟ್ಟುಮಾಡ್ಕೊಂಡಿರೋ ವಧು ವೀಡಿಯೋ ವೈರಲ್

    ಲ್ಲರ ಜೀವನದಲ್ಲೂ ಮದುವೆ ಎಂಬುದು ಬಹಳ ಪ್ರಮುಖವಾದ ಘಟ್ಟ. ಹೀಗಾಗಿ ವಿವಾಹದ ದಿನದ ಪ್ರತಿ ಸೆಕೆಂಡನ್ನು ಸ್ಮರಣೀಯ ಮತ್ತು ತುಂಬಾ ವಿಶೇಷವಾಗಿಸಲು, ವಧು-ವರರು ಪ್ರಯತ್ನವನ್ನು ಪಡುತ್ತಾರೆ. ಅಂತಹ ಒಂದು ಘಟನೆಯಲ್ಲಿ ವಧು ಮಂಟಪ ಪ್ರವೇಶಕ್ಕೆ ಆಯ್ಕೆ ಮಾಡಿದ ಹಾಡನ್ನು ಹಾಕುವವರೆಗೂ ಹಾಲ್ ಪ್ರವೇಶಿಸಲು ನಿರಾಕರಿಸಿರುವ ಪ್ರಸಂಗವೊಂದು ನಡೆದಿದೆ.

    ಈ ಘಟನೆಯ ವಿಡಿಯೋ ತುಣುಕು ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋಗ್ರಫಿ ಪೇಜ್‍ನಿಂದ “ದಿ ವೆಡ್ಡಿಂಗ್‍ಬ್ರಿಗೇಡ್” ಹೆಸರಿನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

    ವೀಡಿಯೋದಲ್ಲೇನಿದೆ..?: ವಧು ತನ್ನ ಸ್ನೇಹಿತರು, ಒಡಹುಟ್ಟಿದವರು ಮತ್ತು ಸೋದರಸಂಬಂಧಿಗಳೊಂದಿಗೆ ಮದುವೆ ಹಾಲ್ ಗೆ ಎಂಟ್ರಿ ಕೊಡಲು ಮುಂದಾಗಿದ್ದಾಳೆ. ಆದರೆ ಇದ್ದಕ್ಕಿಂದತೆ ಮುಂದೆ ಚಲಿಸಲು ನಿರಾಕರಿಸುತ್ತಾಳೆ. ಯಾಕಂದರೆ ಕೆ ತಾನು ಸೆಲೆಕ್ಟ್ ಮಾಡಿಟ್ಟ ಹಾಡನ್ನು ಅಲ್ಲಿ ಪ್ಲೇ ಮಾಡಲಿಲ್ಲ. ಇದರಿಂದ ಸಿಟ್ಟಿಗೆದ್ದ ವಧು, ನಾನು ಆಯ್ಕೆ ಮಾಡಿರುವ ಹಾಡನ್ನು ಪ್ಲೇ ಮಾಡುವವರೆಗೂ ನಾನು ಹಾಲ್ ಗೆ ತೆರಳಲ್ಲಿ ಎಂದು ಹಠ ಹಿಡಿಯುತ್ತಾಳೆ. ಅಲ್ಲದೆ ತಾನು ಮೊದಲೇ ಹೇಳಿದ ಹಾಡನ್ನು ಯಾಕೆ ಹಾಕಲಿಲ್ಲ ಎಂದು ಹೇಳುತ್ತಾ ತನ್ನ ಜೊತೆಗಿದ್ದವರ ಮುಂದೆ ಭಾವುಕಳಾಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಈ ವಿಡಿಯೋ ಇದುವರೆಗೆ 17 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದುಕೊಂಡಿದೆ. ಸುಮಾರು 316 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಕೂಡ ಬಂದಿದ್ದು, ನೆಟ್ಟಿಗರು ವಧುವಿನ ಬೆಂಬಲಕ್ಕೆ ಸಂಪೂರ್ಣವಾಗಿ ನಿಂತಿದ್ದಾರೆ. ವಧು ಆಯ್ಕೆ ಮಾಡಿದ ಹಾಡನ್ನು ಪ್ಲೇ ಮಾಡಬೇಕಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅವಳು ನಾಟಕದ ರಾಣಿ ಎಂದು ಜರಿದಿದ್ದಾರೆ. ಮತ್ತೆ ಕೆಲವರು ಇದೊಂದು ಸ್ಕ್ರಿಪ್ಟ್ ಮಾಡಿದ ಮದುವೆ ಎಂದೂ ಕರೆದರು.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಛತ್ರಗಳ ಮುಂಗಡ ಹಣ ವಾಪಸ್ಸಿಗೆ ಆದೇಶ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಛತ್ರಗಳ ಮುಂಗಡ ಹಣ ವಾಪಸ್ಸಿಗೆ ಆದೇಶ

    ಬೆಂಗಳೂರು: ಕಲ್ಯಾಣ ಮಂಟಪಕ್ಕೆ ನೀಡಲಾಗಿದ್ದ ಹಣವನ್ನು ವಾಪಸ್ ಹಿಂದಿರುಗಿಸುವಂತೆ ಮಾಲೀಕರಿಗೆ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ.

    ಹೌದು. ಲಾಕ್‍ಡೌನ್ ಹೊತ್ತಲ್ಲಿ ಮದುವೆ ಸೇರಿ ಅನೇಕ ಶುಭ ಕಾರ್ಯಗಳು ರದ್ದಾಗಿದ್ದವು. ಆದರೆ ಕಲ್ಯಾಣ ಮಂಟಪಗಳಿಗೆ ನೀಡಿದ್ದ ಅಡ್ವಾನ್ಸ್ ಹಣ ವಾಪಸ್ ಆಗಿರಲಿಲ್ಲ. ಈ ಬಗ್ಗೆ ಅನೇಕ ಮಂದಿ, ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ಸಮಸ್ಯೆ ಹೇಳಿಕೊಂಡಿದ್ದರು.

    ಸಾಲ-ಸೋಲ ಮಾಡಿ ನೀಡಿದ್ದ ಮುಂಗಡ ಹಣವನ್ನು ದಯಮಾಡಿ ಕಲ್ಯಾಣ ಮಂಟಪಗಳ ಮಾಲೀಕರಿಂದ ವಾಪಸ್ ಕೊಡಿಸಿ ಎಂದು ಮನವಿ ಮಾಡಿದ್ರು. ಇದನ್ನು ನಿಮ್ಮ ಪಬ್ಲಿಕ್ ಟಿವಿ ಸರ್ಕಾರಕ್ಕೆ ಗಮನಕ್ಕೆ ತಂದಿತ್ತು. ಇದಕ್ಕೆ ಇಂದು ಸ್ಪಂದಿಸಿದ ಸಚಿವ ಆರ್ ಅಶೋಕ್, ತೆರಿಗೆ ಮುರಿದುಕೊಂಡು ಉಳಿದ ಮುಂಗಡ ಹಣ ವಾಪಸ್ ಮಾಡುವಂತೆ ಮದುವೆ ಛತ್ರದ ಮಾಲೀಕರಿಗೆ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದ್ದಾರೆ.

  • ಮದುವೆ ಮನೆಯಲ್ಲಿ ಕೋತಿ ಕಾಟ – ಅರಣ್ಯ ಇಲಾಖೆ ಸಿಬ್ಬಂದಿ ಕೈಗೂ ಸಿಗದೆ ಚಮಕ್

    ಮದುವೆ ಮನೆಯಲ್ಲಿ ಕೋತಿ ಕಾಟ – ಅರಣ್ಯ ಇಲಾಖೆ ಸಿಬ್ಬಂದಿ ಕೈಗೂ ಸಿಗದೆ ಚಮಕ್

    ಬಾಗಲಕೋಟೆ: ಕಲ್ಯಾಣ ಮಂಟಪವೊಂದಕ್ಕೆ ನಿತ್ಯ ಕೋತಿಯ ಕಿರಿಕಿರಿ ಶುರುವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೈಗೂ ಸಿಗದೆ ಚಮಕ್ ನೀಡುತ್ತಿದೆ.

    ಬಾಗಲಕೋಟೆಯ ಎಪಿಎಂಸಿ ಬಳಿಯಿರುವ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಕಳೆದ 15 ದಿನಗಳಿಂದ ಮದುವೆಗಳಿಗೆ ಎಂಟ್ರಿ ಕೊಡುವ ಮೂಲಕ ಕೋತಿ ತಲೆ ನೋವಾಗಿ ಪರಿಣಮಿಸಿದೆ. ಈಗಾಗಲೇ ಕುಚೇಷ್ಟೇ ಮಾಡುತ್ತಿರುವ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಬಲೆ, ಬೋನ್ ಹಿಡಿದು ಹರಸಾಹಸಪಟ್ಟರೂ ಇಂದಿಗೂ ಮಂಗ ಸಿಕ್ಕಿಲ್ಲ.

    ಸೋಮವಾರ ನಡೆದ ಮದುವೆ ಸಂಭ್ರಮದಲ್ಲಿ ಕೋತಿ ಎಂಟ್ರಿ ಕೊಟ್ಟಿದೆ. ಅಲ್ಲದೆ ಅತಿಥಿಗಳ ಜೊತೆ ಖುರ್ಚಿ ಮೇಲೆ ಕುಳಿತು ಕೋತಿಯ ಚೇಷ್ಟೆ ಇದೀಗ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಸೋಮವಾರ ನಡೆದ ದಿಶಾ ಹಾಗೂ ದೀನಾನಾಥ ಎಂಬವರ ಮದುವೆ ಸಮಾರಂಭಕ್ಕೆ ಅತಿಥಿಗಳಂತೆ ಬಂದ ಕೋತಿ, ಇಡೀ ದಿನ ಕಲ್ಯಾಣ ಮಂಟಪ ಬಿಟ್ಟು ಹೊರಗೆ ಹೋಗಿಲ್ಲ.

    ಈ ವೇಳೆ ಕೋತಿ ಬಂದ ಹಿನ್ನೆಲೆ ಕೆಲವರು ಗಾಬರಿ ಆದರೆ, ಕೆಲವರಿಗೆ ಇದು ಮಜಾ ಎನಿಸಿತ್ತು. ಗಾಬರಿಯಿಂದಲೇ ಕಲ್ಯಾಣ ಮಂಟಪದ ಬಾಗಿಲು ಹಾಕಿಕೊಂಡರೂ ಕಿಟಕಿ ಬಳಿ ಕುಳಿತ ಕೋತಿ ಮದುವೆ ವೀಕ್ಷಣೆ ಮಾಡಿದೆ. ಇನ್ನು ಕೋತಿ ಪ್ರವೇಶ ಶುಭ ಸಂಕೇತ, ಮಾರುತಿ ದೇವರು ಮದುವೆಗೆ ಬಂದ ಹಾಗೆ ಎಂದು ಕುಟುಂಬಸ್ಥರು ಮಾತನಾಡಿಕೊಂಡಿದ್ದಾರೆ.

  • ಮನ್ ಕೀ ಬಾತ್ ಕೇಳುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕಾರ್ಯಕರ್ತ

    ಮನ್ ಕೀ ಬಾತ್ ಕೇಳುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕಾರ್ಯಕರ್ತ

    ಮಂಗಳೂರು: ಮದುವೆ ಮನೆ ಎಂದರೆ ಪರಸ್ಪರ ಮಾತು, ನಗು, ಮಕ್ಕಳ ಹರಟೆ ಎಲ್ಲವೂ ಇರುತ್ತೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮದುವೆ ಹಾಲ್ ನಲ್ಲಿ ಮಾತ್ರ ಮೋದಿ ಅವರ ಮನ್ ಕೀ ಬಾತ್ ಕೇಳಿಸುತಿತ್ತು.

    ಹೌದು. ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಜಯರಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ 53ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಭಾನುವಾರ ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ ಹಸೆಮಣೆ ಏರಿದ್ದರು.

    ಮೋದಿಯ ಮನ್ ಕೀ ಬಾತ್ ದಿನವಾಗಿದ್ದರಿಂದ ಮದುವೆಗೆ ಆಗಮಿಸಿದ್ದ ಜನರಿಗೆ ಮೋದಿಯ ರೇಡಿಯೋ ಮಾತು ಕೇಳುವಂತೆ ವ್ಯವಸ್ಥೆ ಮಾಡಿದ್ದರು. 11.30ರ ವೇಳೆಗೆ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ, ಅತ್ತ ಮೋದಿ ಮಾತು ಕೇಳುತ್ತಲೇ ಹಸೆಮಣೆ ತುಳಿದಿದ್ದಾರೆ.

    ನವ ವಧುವರರು ಪ್ರಧಾನಿ `ಮನ್ ಕಿ ಬಾತ್’ ಆಲಿಸಲು ಮಂಟಪ ಬಿಟ್ಟು ರೇಡಿಯೋ ಬಳಿ ಬಂದು ಸೇರಿದ ಎಲ್ಲ ಬಂಧುಗಳೊಂದಿಗೆ ಕುಳಿತು ಮೋದಿಯ ಮನದ ಮಾತಿಗೆ ಸಾಕ್ಷಿಗಳಾದರು. ಮನದ ಮಾತು ಕೇಳಿಸುವುದಕ್ಕಾಗಿ ವಿಶೇಷವಾಗಿ ರೇಡಿಯೋ ಮತ್ತು ಸ್ಪೀಕರ್ ವ್ಯವಸ್ಥೆ ಮಾಡಿದ್ದರು. ಸೇರಿದ ನೂರಾರು ಬಂಧು ಮಿತ್ರರು ಒಂದೆಡೆ ಕೂತು ಮನದ ಮಾತನ್ನು ಆಲಿಸಿ ನವ ಜೋಡಿಯನ್ನು ಆಶೀರ್ವದಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನಲ್ಲಿ ನಾಳೆ ಕಲ್ಯಾಣ ಮಂಟಪ ಹೌಸ್‍ಫುಲ್..!

    ಬೆಂಗ್ಳೂರಿನಲ್ಲಿ ನಾಳೆ ಕಲ್ಯಾಣ ಮಂಟಪ ಹೌಸ್‍ಫುಲ್..!

    ಬೆಂಗಳೂರು: ಫೆಬ್ರವರಿ 14ರಂದು ಮದುವೆ ಆಗುವುದಕ್ಕೆ ನವವಧು-ವರರು ಕ್ಯೂ ನಿಂತಿರುತ್ತಾರೆ. ಅಷ್ಟೇ ಅಲ್ಲ ಫೆ. 14ಕ್ಕೆ ಮದುವೆ ಹಾಲ್‍ಗಳು ನಿಮಗೆ ಸಿಗಬೇಕಾದರೆ ಬರೋಬ್ಬರಿ ಏಳೆಂಟು ತಿಂಗಳ ಹಿಂದೆನೇ ಬುಕ್ ಮಾಡಿಕೊಳ್ಳಬೇಕು. ಬೆಂಗಳೂರಿನ ಅಷ್ಟು ಚೌಟ್ರಿಗಳು ಗುರುವಾರದ ದಿನಕ್ಕೆ ಅದ್ಧೂರಿಯಾಗಿ ಹೌಸ್‍ಫುಲ್ ಆಗಿ ರೆಡಿಯಾಗುತ್ತಿದೆ.

    ಗುರುವಾರ ಬೆಂಗಳೂರಿನ ಯಾವ ಕಲ್ಯಾಣ ಮಂಟಪದಲ್ಲೂ ಹಾಲ್ ಖಾಲಿ ಇರುವುದಿಲ್ಲ. ನೀವು ಆರೇಳು ತಿಂಗಳ ಹಿಂದೆ ನಾಳೆಯ ದಿನಕ್ಕೆ ಬುಕ್ ಮಾಡಿಸಿಕೊಳ್ಳೋಕೂ ಆಗುತ್ತಿರಲಿಲ್ಲ. ಗುರುವಾರ ಮದುವೆ ಆಗುವುದಕ್ಕೆ ಫುಲ್ ಡಿಮ್ಯಾಂಡ್. ಅಷ್ಟಕ್ಕೂ ಗುರುವಾರ ಏನಪ್ಪ ಸ್ಪೆಷಲ್ ಎಂದು ಯೋಚನೆ ಮಾಡುತ್ತಿದ್ದೀರಾ.

    ನಾಳೆ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ಪ್ರೇಮಿಗಳ ದಿನಾಚರಣೆಯ ದಿನವೇ ಮದುವೆ ಟ್ರೆಂಡ್ ಹೆಚ್ಚುತ್ತಿದ್ದು ಈ ವರ್ಷವಂತೂ ಈ ದಿನ ಎಲ್ಲಾ ಚೌಟ್ರಿಗಳು ಹೌಸ್‍ಫುಲ್. ಅದರಲ್ಲೂ ಆರೇಳು ತಿಂಗಳ ಹಿಂದೆಯೇ ಈ ದಿನಕ್ಕಾಗಿ ಹಾಲ್ ಬುಕ್ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

    ಪ್ರೇಮಿಗಳ ದಿನವಾದರೂ ಮಹೂರ್ತ ಕೂಡಿಬಾರದೇ ಇದರೆ ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಆದರೆ ಈ ವರ್ಷ ಮೂಹೂರ್ತ ಪ್ರೇಮಿಗಳ ದಿನಕ್ಕೆ ಅದ್ಭುತವಾಗಿ ಕೂಡಿಬಂದಿರುವುದರಿಂದ ಮದುವೆ ಆಗುವುದಕ್ಕೆ ಬಯಸೋರು ಇದೇ ದಿನಕ್ಕೆ ಜೈ ಅಂದಿದ್ದಾರೆ.

    ವರ್ಷದ ಅಷ್ಟು ದಿನಗಳಲ್ಲಿ ಇರದ ಡಿಮ್ಯಾಂಡ್ ಮದ್ವೆ ಹಾಲ್‍ಗಳಿಗೆ ಪ್ರೇಮಿಗಳ ದಿನ ಇರುತ್ತೆ. ಪ್ರೇಮಿಗಳ ದಿನ ಸಪ್ತಪದಿ ತುಳಿದು ಗಟ್ಟಿಮೇಳ ಮೊಳಗಿಸಿಕೊಳ್ಳುವ ಜೋಡಿಗಳಿಗೆ ಮದ್ವೆ ದಿನ ಇನ್ನಷ್ಟು ಸ್ಪೆಷಲ್ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದು ಗಾಡಿ ಓಡ್ಸಿದ್ರೆ ಕಲ್ಯಾಣ ಮಂಟಪ ಫಿಕ್ಸ್!

    ಕುಡಿದು ಗಾಡಿ ಓಡ್ಸಿದ್ರೆ ಕಲ್ಯಾಣ ಮಂಟಪ ಫಿಕ್ಸ್!

    ಬೆಂಗಳೂರು: ಹೊಸ ವರ್ಷದಲ್ಲಿ ಕುಡಿದು ವಾಹನ ಚಲಾಯಿಸುವ ಸವಾರರೇ ಎಚ್ಚರ, ಯಾಕೆಂದರೆ ಕುಡಿದು ವಾಹನ ಚಲಾಯಿಸಿದರೇ ರಾತ್ರಿ ಪೂರ್ತಿ ಜಾಗರಣೆ ಮಾಡಬೇಕಾಗುತ್ತದೆ.

    ಹೌದು.ಹೊಸ ವರ್ಷಕ್ಕೆ ಮುಂಜಾಗೃತ ಕ್ರಮವಾಗಿ ಬೆಂಗಳೂರು ಸಂಚಾರಿ ಪೊಲೀಸರು ಹೊಸ ತಂತ್ರ ರೂಪಿಸಿದ್ದು, ಕುಡಿದು ವಾಹನ ಚಲಾಯಿಸುವವರಿಗಾಗಿ ಪೊಲೀಸರು ಕಲ್ಯಾಣ ಮಂಟಪವನ್ನು ಬುಕ್ ಮಾಡಿದ್ದಾರೆ. ಒಂದು ವೇಳೆ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ರಾತ್ರಿಯೆಲ್ಲಾ ಮದುವೆ ಮನೆಯಲ್ಲಿ ಲಾಕ್ ಆಗಬೇಕಾಗುತ್ತದೆ.

    ಈಗಾಗಲೇ ಸಂಚಾರಿ ಪೊಲೀಸರು 8 ಕಲ್ಯಾಣ ಮಂಟಪಗಳನ್ನ ಬುಕ್ ಮಾಡಿದ್ದಾರೆ. ಕುಡಿದು ಸಿಕ್ಕಿ ಬಿದ್ದವರನ್ನ ಕಲ್ಯಾಣ ಮಂಟಪದಲ್ಲಿ ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ರಾತ್ರಿಯಿಡಿ ಕಲ್ಯಾಣ ಮಂಟಪದಲ್ಲಿ ಜಾಗರಣೆ ಮಾಡಿಸಿ ಬೆಳಗ್ಗೆ ಮದ್ಯದ ಅಮಲು ಇಳಿದ ನಂತರ ಬಿಟ್ಟು ಕಳಿಸಲಾಗುತ್ತದೆ. ಹೊಸ ವರ್ಷ ಕುಡಿದು ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಹೊಸ ಪ್ಲಾನ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ರಾತ್ರಿ ಜಾಗರಣೆ ಜೊತೆಗೆ ಸಾವಿರಾರು ರೂಪಾಯಿ ದಂಡ ಹಾಕಲು ಪೊಲೀಸರು ಸನ್ನದಾಗಿದ್ದಾರೆ. ಇದರ ಜೊತೆಗೆ ತುರ್ತು ಸಂದರ್ಭಕ್ಕಾಗಿ 100 ಅಂಬುಲೆನ್ಸ್ ಗಳನ್ನು ಸಹ ಬುಕ್ ಮಾಡಿದ್ದಾರೆ. ಅಂಬುಲೆನ್ಸ್ ನಿರ್ವಹಣೆಗೆ ಓರ್ವ ಅಧಿಕಾರಿ ನೇಮಕ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅಂಬುಲೆನ್ಸ್ ನಿಲ್ಲಿಸಲು ಸೂಚನೆಯನ್ನು ನೀಡಲಾಗಿದೆ. ಇನ್ನೂ ಸಂಜೆ 4 ಗಂಟೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಕಾಮರಾಜ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ 8 ಪ್ರಮುಖ ರಸ್ತೆಗಳು ಬಂದ್ ಆಗಲಿವೆ.

    ಈ ಪ್ರಮುಖ ರಸ್ತೆಯಲ್ಲಿ ಸಂಜೆ 4 ಗಂಟೆಯಿಂದ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದ್ದು, ಡ್ರಿಂಕ್ ಆಂಡ್ ಡ್ರೈವ್ ಕೇಸ್ ತಪಾಸಣೆ ವೇಳೆ ಸಂಪೂರ್ಣ ಚಿತ್ರೀಕರಣ ಮಾಡಲು ಸೂಚನೆ ನೀಡಲಾಗಿದೆ. ಯಾರೇ ಗಲಾಟೆ ಮಾಡಿದರೂ ರೆಕಾರ್ಡ್ ಮಾಡಬೇಕಾಗುತ್ತದೆ. ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಗೆ ಪ್ರತ್ಯೇಕ 200 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಹೇಳಿದ್ದಾರೆ.

    https://www.youtube.com/watch?v=lC6lrjh7AHk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಲ್ಯಾಣ ಮಂಟಪ ಅಲಂಕರಿಸುತ್ತಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶ- ಸಾವು!

    ಕಲ್ಯಾಣ ಮಂಟಪ ಅಲಂಕರಿಸುತ್ತಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶ- ಸಾವು!

    ಚಿಕ್ಕಬಳ್ಳಾಪುರ: ಬುಧವಾರ ನಡೆಯಲಿದ್ದ ಮದುವೆಗಾಗಿ ಕಲ್ಯಾಣ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.

    ರೆಡ್ಡಿಗೊಲ್ಲವಾರಹಳ್ಳಿ ನಿವಾಸಿ ಗೋಪಿನಾಥ್ (50) ಮೃತ ದುರ್ದೈವಿ. ಪೇರೇಸಂದ್ರ ಗ್ರಾಮದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಆರತಕ್ಷತೆ ನಿಗದಿಯಾಗಿತ್ತು. ಹೀಗಾಗಿ ಗೋಪಿನಾಥ್ ಕಲ್ಯಾಣ ಮಂಟಪದಲ್ಲಿದ್ದ ನೇಮ್ ಬೋರ್ಡ್ ಗೆ ಹೂವಿನಿಂದ ಅಲಂಕಾರ ಮಾಡುತ್ತಿದ್ದರು.

    ಬೋರ್ಡ್ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗೋಪಿನಾಥ್ ಅವರು ಸ್ಪರ್ಶಿಸಿದ್ದು, ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಲೆಗೆ ಬಲವಾಗಿ ಪೆಟ್ಟುಬಿದ್ದಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಗೋಪಿನಾಥ್ ಮೃತಪಟ್ಟಿದ್ದಾರೆ.

    ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಅದೇ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv