Tag: Marriage Ceremony

  • ಮದುವೆಗೆ ಬಂದ ಅತಿಥಿಗಳ ಮೇಲೆ ಬಿತ್ತು ಮುಸುರೆ ತಟ್ಟೆ – ವೈಟರ್‌ನನ್ನೇ ಹೊಡೆದು ಕೊಂದ್ರು

    ಮದುವೆಗೆ ಬಂದ ಅತಿಥಿಗಳ ಮೇಲೆ ಬಿತ್ತು ಮುಸುರೆ ತಟ್ಟೆ – ವೈಟರ್‌ನನ್ನೇ ಹೊಡೆದು ಕೊಂದ್ರು

    – ಶವವನ್ನು ಕಾಡಿನಲ್ಲಿ ಬಚ್ಚಿಟ್ರು

    ಲಕ್ನೋ: ಸಂಭ್ರಮದಿಂದ ಕೂಡಿರಬೇಕಾಗಿದ್ದ ಮದುವೆ ಮನೆಯಲ್ಲಿ ರಕ್ತ ಹರಿದಿರುವ ಘಟನೆಯೊಂದು ನಡೆದಿದೆ. ಮದುವೆಗೆ ಬಂದ ಅಥಿತಿಗಳ ಮೇಲೆ ಮುಸುರೆ ತಟ್ಟೆಗಳು ಬಿತ್ತು ಎಂದು ವೈಟರ್‌ನನ್ನೇ (Waiter) ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾದ ವ್ಯಕ್ತಿ. ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮುಸುರೆ ತಟ್ಟೆಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು.

    ಮುಸುರೆ ತಟ್ಟೆಗಳು ತಮ್ಮ ಮೇಲೆ ಬಿದ್ದ ಪರಿಣಾಮ ರಿಷಬ್ ಸಿಟ್ಟಾಗಿ ವೈಟರ್ ಪಂಕಜ್‌ನೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದಿದ್ದು, ಈ ವೇಳೆ ಪಂಕಜ್‌ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಂದಿದ್ದಾನೆ. ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

    ಕೊಲೆ ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್‌ನ ಶವವನ್ನು ಹತ್ತಿರದ ಕಾಡಿಗೆ ಕೊಂಡುಹೋಗಿ ಅಲ್ಲಿ ಬಚ್ಚಿಟ್ಟಿದಾರೆ. ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರು ಪಂಕಜ್‌ನ ಶವವನ್ನು ಕಾಡಿನಿಂದ ವಶಪಡಿಸಿಕೊಂಡಿದ್ದಾರೆ.

    ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚಿನ್ನ, ಜಮೀನು, ಬಿಎಂಡಬ್ಲ್ಯು ಕಾರಿಗೆ ಬೇಡಿಕೆ- ವೈದ್ಯೆ ಆತ್ಮಹತ್ಯೆಗೆ ಶರಣು

  • ಮದುವೆಯಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಅರೆಸ್ಟ್

    ಮದುವೆಯಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಅರೆಸ್ಟ್

    ದೆಹಲಿ: ಮದುವೆ ಸಮಾರಂಭವೊಂದರಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಗುರುವಾರ ದೆಹಲಿಯಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಈ ವೀಡಿಯೋದಲ್ಲಿ ಆರೋಪಿ ಪಾರ್ಟಿ ಡ್ರೆಸ್ ಧರಿಸಿದ್ದು, ಕೈಯಲ್ಲಿ ಕಪ್ಪು ಬಣ್ಣದ ಬಂದೂಕು ಹಿಡಿದು, ವೀಡಿಯೋ ಮಾಡಿ(ವೀಡಿಯೋ ಬನಾವೋ) ಎಂದು ಹೇಳುವ ಮೂಲಕ ಗಾಳಿಯಲ್ಲಿ ಗುಂಡು ಹಾರಿಸುತ್ತಾನೆ. ವೀಡಿಯೋದಲ್ಲಿ ಈತ ಗುಂಡು ಹಾರಿಸಲು ಮುಂದಾದಾಗ ಅಲ್ಲಿದ್ದವರು ನೀನು ಇದನ್ನು ಮತ್ತೆ ಶುರು ಮಾಡಿದೆಯಾ ಎಂದು ಆತನನ್ನು ಗದರಿಸುತ್ತಿರುವುದು ಕಾಣಿಸುತ್ತದೆ.

    ಘಟನೆ ಕುರಿತಂತೆ ಪೊಲೀಸರು ಆರೋಪಿಯನ್ನು ಲೋಕಲ್ ರೌಡಿ ಆಶಿಶ್ ಅಲಿಯಾಸ್ ಮನೀಶ್(32) ಎಂದು ಗುರುತಿಸಿದ್ದು, ಮದುವೆ ಸಮಾರಂಭದಲ್ಲಿ ಅಕ್ರಮ ಬಂದೂಕನ್ನು ಬಳಸಿ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.

    ಆರೋಪಿ ತನ್ನ ಸೋದರ ಸಂಬಂಧಿ ಮದುವೆ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ್ದು, ಪೊಲೀಸರು ನಿನ್ನೆ ಆಶಿಶ್‍ನನ್ನು ಬಂಧಿಸಿದ್ದಾರೆ ಹಾಗೂ ಆತನ ಬಳಿ ಇದ್ದ ಸೆಮಿ-ಆಟೋಮಿಟಿಕ್ ಗನ್ ಮತ್ತು ಲೈವ್ ಕಾಟ್ರ್ರಿಜ್‍ಗಳನ್ನು ವಶಪಡಿಸಿಕೊಂಡಿದ್ದಾರೆ.