Tag: Marriage Anniversary

  • ಮದ್ವೆ ವಾರ್ಷಿಕೋತ್ಸವಕ್ಕೆ ಬಿಗ್‍ಬಾಸ್ ಸ್ಪರ್ಧಿಗೆ ಬಂತು ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಮದ್ವೆ ವಾರ್ಷಿಕೋತ್ಸವಕ್ಕೆ ಬಿಗ್‍ಬಾಸ್ ಸ್ಪರ್ಧಿಗೆ ಬಂತು ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿಗಳು ಸಾಮಾನ್ಯವಾಗಿ ಹೊರಜಗತ್ತಿನಿಂದ ದೂರವಿದ್ದು, ಒಂದು ಮನೆಯಲ್ಲಿ ಇರುತ್ತಾರೆ. ಸ್ಪರ್ಧಿಗಳು ಮನೆಯವರು, ಸ್ನೇಹಿತರ ಜೊತೆ ಯಾವುದೇ ಸಂಪರ್ಕ ಹೊಂದಿರುವುದಿಲ್ಲ. ಆದರೆ ಬಿಗ್‍ಬಾಸ್ ಸೀಸನ್ 6ರ ಸ್ಪರ್ಧಿ ಧನ್‍ರಾಜ್ ಅವರ ಮದುವೆ ವಾರ್ಷಿಕೋತ್ಸವ ಡಿಸೆಂಬರ್ 20ರಂದು ಇತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಅನ್ನು ಬಿಗ್‍ಬಾಸ್ ನೀಡಿದೆ.

    ಸ್ಪರ್ಧಿ ಧನ್‍ರಾಜ್ ದಿನಾಂಕ 20 ಅಂದರೆ ಗುರುವಾರ ಎಂದಿನಂತೆ ಎದ್ದು ಹೊರ ಬಂದಿದ್ದಾರೆ. ಆಗ ಅವರ ಪತ್ನಿ ಶಾಲಿನಿಯ ಧ್ವನಿ ಕೇಳಿಸಿದ್ದಾರೆ. ಪತ್ನಿ ಶಾಲಿನಿ, ಇಂದು ನಮ್ಮ ಮದುವೆ ವಾರ್ಷಿಕೋತ್ಸವ ದಿನ. ಈ ಜೀವನದಲ್ಲಿ ನಿನ್ನನ್ನು ಪಡೆಯಲು ತುಂಬಾ ಪುಣ್ಯ ಮಾಡಿದ್ದೇನೆ. ನನಗೆ ಎಲ್ಲವೂ ನೀನೇ ಎಂದು ಮದುವೆ ವಾರ್ಷಿಕೋತ್ಸವ ದಿನದ ಶುಭಾಶಯವನ್ನು ತಿಳಿಸಿದರು.

    ಪತ್ನಿಯ ಧ್ವನಿ ಕೇಳಿ ಧನ್‍ರಾಜ್ ಏನು ಮಾತನಾಡಲು ಸಾಧ್ಯವಾಗದೇ ಅವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಬಳಿಕ ನಾವು ಪ್ರೀತಿ ಮಾಡಿ ಮದುವೆ ಆದಗಿನಿಂದ ಇಷ್ಟು ದಿನ ಬಿಟ್ಟು ಇರುತ್ತಿರಲಿಲ್ಲ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐ ಲವ್ ಯೂ ಶಾಲಿನಿ ಎಂದು ಕ್ಯಾಮೆರಾ ಮುಂದೆ ಧನ್‍ರಾಜ್ ಪತ್ನಿಗೆ ಹೇಳಿದರು. ಮದುವೆ ವಾರ್ಷಿಕೋತ್ಸವಕ್ಕಾಗಿ ಪತ್ನಿಯ ಧ್ವನಿ ಕೇಳಿಸುವ ಮೂಲಕ ಮೊದಲನೇ ಸರ್ಪ್ರೈಸ್ ನೀಡಿದ್ದಾರೆ. ಬಳಿಕ ಧನರಾಜ್ ಅವರಿಗೆ ಇಷ್ಟವಾದ ಊಟ ಕಳುಹಿಸಿ ಬಿಗ್‍ಬಾಸ್ ಎರಡನೇ ಸರ್ಪ್ರೈಸ್ ನೀಡಿದ್ದಾರೆ.

    ಧನ್ ರಾಜ್ ಪತ್ನಿ ಮನೆಯಿಂದ ನೀರ್ ದೋಸೆ ಮತ್ತು ಫಿಶ್ ಫ್ರೈ ಮಾಡಿ ಪತಿಗೆ ಕಳುಹಿಸಿದ್ದರು. ಅದನ್ನು ಬಿಗ್‍ಬಾಸ್, ಮನೆಯಲ್ಲಿ ಉಳಿದ ಯಾವ ಸ್ಪರ್ಧಿಗೂ ಕೊಡದೆ ಒಬ್ಬರೆ ತಿನ್ನಬೇಕು ಎಂದು ಸೂಚನೆ ಕೊಟ್ಟು ನೀಡಿದೆ. ಆದರೆ ಧನ್‍ರಾಜ್ ಒಬ್ಬನಿಗೆ ತಿನ್ನಲು ಬೇಸರವಾಗುತ್ತದೆ. ಎಲ್ಲರಿಗೂ ಒಂದು ತುತ್ತು ತಿನ್ನಿಸುತ್ತೇನೆ ಎಂದು ಬಿಗ್‍ಬಾಸ್ ಬಳಿ ಮನವಿ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ಫೋಟೋ, ಸಾವಿರ ಭಾವನೆ – ಯಶ್ ಇನ್‍ಸ್ಟಾಗ್ರಾಂನಲ್ಲಿ ಮೊದ್ಲ ಸೆನ್ಸೇಷನಲ್ ಫೋಟೋ

    ಒಂದು ಫೋಟೋ, ಸಾವಿರ ಭಾವನೆ – ಯಶ್ ಇನ್‍ಸ್ಟಾಗ್ರಾಂನಲ್ಲಿ ಮೊದ್ಲ ಸೆನ್ಸೇಷನಲ್ ಫೋಟೋ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಎರಡು ದಿನಗಳ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆಗೆದು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈಗ ಇನ್‍ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟನ್ನು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ನಟ ಯಶ್ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಹಾಕುವ ಮೂಲಕ ತಮ್ಮ ಖಾತೆಯನ್ನು ಓಪನ್ ಮಾಡಿದ್ದರು. ಭಾನುವಾರ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಇತ್ತು. ಆದ್ದರಿಂದ ಅಂದಿನ ದಿನವೇ ತಮ್ಮ ಮುದ್ದಿನ ಮಗಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮದುವೆ ವಾರ್ಷಿಕೋತ್ಸವದ ಶುಭಾಶಯವನ್ನು ಸಾವಿರಾರು ಭಾವನೆಯನ್ನು ಹೇಳುವಂತಹ ಒಂದು ಫೋಟೋವನ್ನು ಪೋಸ್ಟ್ ಮಾಡಿ ಪತ್ನಿ ರಾಧಿಕಾ ಅವರಿಗೆ ತಿಳಿಸಿದ್ದಾರೆ.

    ಯಶ್ ಅವರು ರಾಧಿಕಾ ಪಂಡಿತ್ ಗರ್ಭಿಣಿಯಾಗಿದ್ದಾಗ ಮಾಲ್ಡೀವ್ಸ್ ಗೆ ಹೋಗಿ ಬೇಬಿ ಮೂನ್ ಫೋಟೋ ಶೂಟ್ ಮಾಡಿಸಿದ್ದರು. ಕಡಲತೀರದಲ್ಲಿ ಚಂದಿರ ಅವರಿಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ಕಾಣುತ್ತಿದ್ದು, ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜನೆ ಮಾಡಲಾಗಿತ್ತು. ಅಲ್ಲಿ ಯಶ್ ತಮ್ಮ ಎರಡು ಕೈಗಳನ್ನು ರಾಧಿಕಾರ ಹೊಟ್ಟೆ ಮೇಲೆ ಇಟ್ಟು, ರಾಧಿಕಾ ಪಂಡಿತ್ ಅವರ ಹಣೆಗೆ ಮುತ್ತು ಕೊಟ್ಟಿದ್ದಾರೆ. ಇದು ಫೋಟೋದಲ್ಲಿ ಸೆರೆಯಾಗಿದೆ. ಈ ಮೂಲಕ ಸದಾ ನಿನ್ನನ್ನು ಮತ್ತು ಮಗುವನ್ನು ಪ್ರೀತಿಯಿಂದ ಕಾಪಾಡುತ್ತೇನೆ ಅಥವಾ ನೀವಿಬ್ಬರು ನನ್ನ ಜೀವನದಲ್ಲಿ ಮುಖ್ಯವಾಗಿದ್ದೀರಿ ಎಂಬ ಭಾವನೆಯನ್ನು ಫೋಟೋ ಹೇಳುತ್ತಿದೆ. ಈ ಕಡಲತೀರದಲ್ಲಿ ಆ ಚಂದ್ರನ ಸಾಕ್ಷಿಯಾಗಿ ನಿನ್ನನ್ನು ಮತ್ತು ಮಗುವನ್ನು ಕಾಪಾಡುವ ಹೊಣೆ ನನ್ನದು. ಈ ಸುಂದರ ಕ್ಷಣಕ್ಕೆ ಈ ಮುತ್ತು ನೀಡುವ ಮೂಲಕ ಮಾತುಕೊಡುತ್ತಿದ್ದೇನೆ ಎಂಬದನ್ನು ಫೋಟೋದಲ್ಲಿ ನಾವು ಕಾಣಬಹುದು.

    https://www.instagram.com/p/BrKZsZ4hbaR/

    ಈ ಫೋಟೋ ಹಾಕಿ, “ಈ ಎರಡು ವರ್ಷ ನನ್ನ ಜೀವನದ ಅತ್ಯುತ್ತಮ ವರ್ಷಗಳಾಗಿದೆ. ನೀನು ನನಗೆ ಉತ್ತಮವಾದ ಉಡುಗೊರೆ ಕೊಟ್ಟಿದ್ದೀಯಾ, ಇದು ನನ್ನ ಹೊಸ ಜೀವನ ಮತ್ತು ಹೊಸ ಜೀವನದ ಪ್ರಯಾಣವಾಗಿದೆ. ನನ್ನ ಪ್ರೀತಿಗೆ ಮದುವೆ ಶುಭಾಶಯಗಳು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇದೇ ಡಿಸೆಂಬರ್ 2 ರಂದು ಹೆಣ್ಣು ಮಗುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಗಳು, ಪತ್ನಿ ಜೊತೆ ರಾಕಿಂಗ್ ಸ್ಟಾರ್ ಮಾತು

    ಮಗಳು, ಪತ್ನಿ ಜೊತೆ ರಾಕಿಂಗ್ ಸ್ಟಾರ್ ಮಾತು

    ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ಮದುವೆ ವಾರ್ಷಿಕೋತ್ಸವವಾಗಿದೆ. ಆದರೆ ಇಂದೇ ತಮ್ಮ ಮುದ್ದಿನ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್, ಅಂದಿನ ದಿನ ನಾನು ಬೇರೆ ಕೆಲಸದಲ್ಲಿದ್ದೆ. ಆದ್ದರಿಂದ ನಾನು ಬಂದು ಯಾರನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಆದರೆ ನೀವು ನಮ್ಮ ಮಾತಿಗೆ ಗೌರವ ಕೊಟ್ಟಿದ್ದೀರಿ. ಆದ್ದರಿಂದ ಮೊದಲೇಯದಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಮಾಧ್ಯಮದವರಿಗೆ ತಿಳಿಸಿದರು.

    ನನ್ನ ಜೀವನದಲ್ಲಿ ಇದೊಂದು ಸ್ಪೆಷಲ್ ಅನುಭವವಾಗಿದೆ. ನಾವು ನಟರು, ಯಾವುದೇ ಭಾವನೆಗಳಿದ್ದರು ಅದನ್ನು ಎಕ್ಸ್ ಪ್ರೆಸ್ ಮಾಡುವುದೇ ನಮ್ಮ ಕೆಲಸವಾಗಿದೆ. ಆದರೆ ಈ ಭಾವನೆ, ಅನುಭವವನ್ನು ಹೇಳಿಕೊಳ್ಳುವ ಶಕ್ತಿ ಇಲ್ಲ. ಅದು ಸಾಧ್ಯನೂ ಇಲ್ಲ, ಇದೆಲ್ಲವನ್ನು ಮೀರಿದ ಅನುಭವವಾಗಿದ್ದು, ತುಂಬಾ ಖುಷಿಯಾಗಿದೆ ಎಂದು ಯಶ್ ಹೇಳಿದರು.

    ಹೆಣ್ಣು ಮಕ್ಕಳು ಅಂದರೆ ನಮಗೆ ತುಂಬಾ ತುಂಬಾ ಆಸೆ ಇತ್ತು. ಆ ದೇವರು ಹೆಣ್ಣು ಮಗುವನ್ನೇ ಕೊಟ್ಟಿದ್ದು, ನನ್ನ ಆಸೆ ನೆರವೇರಿದೆ. ಆದ್ದರಿಂದ ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಅಪ್ಪ-ಅಮ್ಮ ಮೊಮ್ಮಗಳನ್ನು ನೋಡಿದಾಗ ಪಟ್ಟ ಖುಷಿಗೆ ಬೆಲೆ ಕಟ್ಟೋಕೆ ಹಾಗಲ್ಲ. ಇಬ್ಬರು ಆರೋಗ್ಯವಾಗಿದ್ದಾರೆ, ಎಲ್ಲರೂ ಖುಷಿಯಾಗಿದ್ದೇವೆ ಎಂದು ಹೇಳಿದರು.

    ಆಸ್ಪತ್ರೆಯ ಎಲ್ಲಾ ಸಿಬ್ಬಂದಿ, ವೈದ್ಯರು ಕಾಳಜಿಯಿಂದ ಚೆನ್ನಾಗಿ ನೋಡಿಕೊಂಡಿದ್ದಾರೆ. ಅಭಿಮಾನಿಗಳು ವಿಶ್ ಮಾಡಿದ್ದರು. ಆದರೆ ನಾನು ಯಾರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಕೈಮುಗಿದರು. ಈ ವೇಳೆ ರಾಧಿಕಾ ಅವರು ಮಗು ಅವರ ಅಪ್ಪ ಯಶ್ ತರಹ ಇದೆ. ನನ್ನ ಯಾವುದೇ ಲಕ್ಷಣವೂ ಇಲ್ಲ ಎಂದು ಖುಷಿಪಟ್ಟು ಹೇಳಿದರು.

    ಸದ್ಯಕ್ಕೆ ಇಂದು ಸಂಜೆ ಮತ್ತೆ ನಾನು ಹೈದರಾಬಾದ್ ಹೋಗುತ್ತಿದ್ದೇನೆ. ಮಗುವಿನ ಹೆಸರಿನ ಬಗ್ಗೆ ಚರ್ಚೆ ಮಾಡಿಲ್ಲ. ನಾಮಕರಣ ದಿನದಂದೂ ಹೆಸರು ಹೇಳುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ಮಗಳಿಗಾಗಿ ಅಂಬರೀಶ್ ತೊಟ್ಟಿಲು ಮಾಡಿಸಿದ್ದ ಬಗ್ಗೆ ಮಾತನಾಡಿದರು.

    ಇಂದು ನಮ್ಮಿಬ್ಬರ ಜೀವನದಲ್ಲಿ ಹೊಸ ಪ್ರಯಾಣವಾಗಿದೆ. ಅದರಲ್ಲೂ ನಾನು ಮುಖ್ಯವಾದ ಪಾತ್ರ ಮಾಡುತ್ತಿದ್ದೇನೆ. ಇಂದು ನಮ್ಮ ಮದುವೆ ವಾರ್ಷಿಕೋತ್ಸವದ ದಿನವಾಗಿದೆ. ನಾನು ಗರ್ಭಿಣಿಯಾಗಿನಿಂದ ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲ. ಮಗುವಾದಾಗ ಹೇಗೆ ಎತ್ತಿಕೊಳ್ಳಬೇಕು ಎಂದು ಗೊತ್ತಿರಲಿಲ್ಲ, ಭಯವಾಗುತ್ತಿತ್ತು. ಆಗ ಅಮ್ಮ ಹೇಳಿಕೊಟ್ಟರು. ಎಲ್ಲವೂ ನನ್ನ ಜೀವನದಲ್ಲಿ ಒಂದೊಂದು ಅನುಭವವಾಗುತ್ತಿದೆ ಎಂದು ರಾಧಿಕಾ ಹೇಳಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈ ಲವ್ ಎಂದು ಶುಭಾಶಯ ತಿಳಿಸಿದ್ರು ರಾಧಿಕಾ ಪಂಡಿತ್

    ಮೈ ಲವ್ ಎಂದು ಶುಭಾಶಯ ತಿಳಿಸಿದ್ರು ರಾಧಿಕಾ ಪಂಡಿತ್

    ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಕ್ವೀನ್ ರಾಧಿಕಾ ಪಂಡಿತ್ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಪತಿಗೆ ಪ್ರೀತಿಯ ಶುಭಾಶಯವನ್ನು ರಾಧಿಕಾ ತಿಳಿಸಿದ್ದಾರೆ.

    ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಪತಿ ಯಶ್ ಗೆ ತಿಳಿಸಿದ್ದಾರೆ. ತಮ್ಮ ಫೇಸ್‍ಬುಕ್ ನಲ್ಲಿ ಎರಡು ಫೋಟೋ ಪೋಸ್ಟ್ ಮಾಡಿದ್ದು, “ಎರಡು ವರ್ಷದ ಹಿಂದೆ ಹೀಗಿದ್ದೆವು. ಇಂದು ಹೀಗಿದ್ದೇವೆ. ನಮ್ಮ ಜೀವನದ ಹೊಸ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ನನ್ನ ಪ್ರೀತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ರಾಧಿಕಾ ಅವರು ಮೊದಲಿಗೆ ತಮ್ಮ ಮದುವೆಯ ಫೋಟೋ ಹಾಗೂ ಅದರ ಪಕ್ಕ ತಮ್ಮ ಸೀಮಂತದ ಫೋಟೋವನ್ನು ಹಾಕಿ ಶುಭಾಶಯವನ್ನು ತಿಳಿಸಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಅವರು 2016 ಡಿಸೆಂಬರ್ 6ರಂದು ತಾಜ್ ವೆಸ್ಟೆಂಡ್ ನಲ್ಲಿ ಅದ್ದೂರಿಯಾಗಿ ಗುರು-ಹಿರಿಯರು, ಸ್ನೇಹಿತರ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ರಾಧಿಕಾ ಅವರ ಸೀಮಂತವನ್ನು ಕೂಡ ತಾಜ್ ವೆಸ್ಟೆಂಡ್ ನಲ್ಲಿ ಕುಟುಂಬಸ್ಥರು ಅದ್ಧೂರಿಯಾಗಿ ಮಾಡಿದ್ದರು. ಡಿಸೆಂಬರ್ 2 ರಂದು ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ವರ್ಷದ ಮದುವೆ ವಾರ್ಷಿಕೋತ್ಸವದ ಆಚರಣೆಗೆ ಈ ಜೋಡಿ ವಿದೇಶಕ್ಕೆ ಹೋಗಿ ಸುತ್ತಾಡಿಕೊಂಡು ಬಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಹುಟ್ಟೂರಿಗೆ ಸುಮಲತಾ, ಅಭಿಷೇಕ್ ಭೇಟಿ – ಕಾಲಭೈರವೇಶ್ವರನಿಗೆ ಪ್ರಾರ್ಥನೆ, ಸಮಾಧಿಗೆ ಪೂಜೆ

    ಅಂಬಿ ಹುಟ್ಟೂರಿಗೆ ಸುಮಲತಾ, ಅಭಿಷೇಕ್ ಭೇಟಿ – ಕಾಲಭೈರವೇಶ್ವರನಿಗೆ ಪ್ರಾರ್ಥನೆ, ಸಮಾಧಿಗೆ ಪೂಜೆ

    ಮಂಡ್ಯ: ಇಂದು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ 27ನೇ ವರ್ಷದ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸುಮಲತಾ, ಅಭಿಷೇಕ್ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರು ಮಂಡ್ಯದ ಕಾಲಭೈರವೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

    ಅಭಿಷೇಕ್ ಮತ್ತು ಸುಮಲತಾ ಮನೆ ದೇವರಾದ ಗಂಡು ದೇವರು ಚಿಕ್ಕರಸಿನಕೆರೆ ಕಾಲಭೈರವೇಶ್ವರ ಸ್ವಾಮಿ ಮತ್ತು ಹೆಣ್ಣು ದೇವರಾದ ಮುತ್ತೆಗೆರೆ ಮಾಯಮ್ಮ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಈಗಾಗಲೇ ದೊಡ್ಡರಸಿನಕೆರೆ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಅಭಿಷೇಕ್ ಹಾಗೂ ಸುಮಲತಾ ಮುತ್ತೇಗೆರೆ ಮಾಯಮ್ಮ ದೇವಾಲಯಕ್ಕೆ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಿದ್ದಾರೆ.

    ಅಂಬಿ ನಿಧನದ ನಂತರ ಇದೇ ಮೊದಲ ಬಾರಿಗೆ ಸುಮಲತಾ ಹಾಗೂ ಅಭಿಷೇಕ್ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದು, ಸ್ವಗ್ರಾಮದಲ್ಲಿ ಮಾಯಮ್ಮನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ. ನಂತರ ದೇವಾಲಯದ ಬಸವನಿಗೆ ಇಬ್ಬರು ನಮಸ್ಕರಿಸಿದ್ದಾರೆ. ಇಲ್ಲಿರುವ ಬಸವ ದೈವಿಕವಾಗಿ ತುಂಬಾ ಶಕ್ತಿಯನ್ನು ಹೊಂದಿದ್ದು ಹಾಗೂ ಬೇಡಿದ್ದನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಗ್ರಾಮದಲ್ಲಿ ಅಭಿಮಾನಿಗಳು ತಾತ್ಕಾಲಿಕವಾಗಿ ನಿರ್ಮಿಸಿದ್ದ ಅಂಬಿ ಸಮಾಧಿಗೆ ಹಾರ ಹಾಕಿ ನಮಸ್ಕರಿಸಿದರು. ಈ ವೇಳೆ ಸುಮಲತಾ ಹಾಗೂ ಅಭಿಷೇಕ್ ಭಾವುಕರಾದರು. ಡಿಸೆಂಬರ್ 6ರಂದು ಗ್ರಾಮಸ್ಥರು ದೊಡ್ಡರಸಿನಕೆರೆ ಗ್ರಾಮದಲ್ಲಿ ಊರ ಮಗನ ತಿಥಿ ಕಾರ್ಯವನ್ನು ಗ್ರಾಮದ ಸಂಪ್ರದಾಯಕ್ಕೆ ತಕ್ಕಂತೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ವಾರ್ಷಿಕೋತ್ಸವದಂದು ಸುಮಲತಾ ಅಂಬರೀಶ್ ಭಾವನಾತ್ಮಕ ಪೋಸ್ಟ್

    ಮದ್ವೆ ವಾರ್ಷಿಕೋತ್ಸವದಂದು ಸುಮಲತಾ ಅಂಬರೀಶ್ ಭಾವನಾತ್ಮಕ ಪೋಸ್ಟ್

    ಬೆಂಗಳೂರು: ಇಂದು ದಿವಂಗತ ಹಿರಿಯ ನಟ ಅಂಬರೀಶ್ ಮತ್ತು ಸುಮಲತಾ ಅವರ 27ನೇ ಮದುವೆ ವಾರ್ಷಿಕೋತ್ಸವವಾಗಿದ್ದು, ಸುಮಲತಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಅಂಬಿ ಪ್ರೀತಿಯ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

    ”ಇಂದು ಮೊದಲ ಬಾರಿಗೆ ನೀವು ನನ್ನೊಂದಿಗಿಲ್ಲ. 27 ವರ್ಷಗಳ ಕಾಲ ನಿಮ್ಮಂತ ಸಿಂಹ ಹೃದಯದ ಜೊತೆ ನನ್ನ ಜೀವನವನ್ನು ಹಂಚಿಕೊಂಡಿದ್ದಕ್ಕೆ ನಾನು ನಿಜಕ್ಕೂ ಹೆಮ್ಮೆ ಪಡುತ್ತೇನೆ. ನೀವೇ ನನಗೆ ಸ್ಪೂರ್ತಿ, ಕೋಟಿಗಳಲ್ಲಿ ನೀವು ಒಬ್ಬರು” ಎಂದು ಬರೆದುಕೊಂಡಿದ್ದು ನಿಜಕ್ಕೂ ಕಣ್ಣೀರು ತರಿಸುವಂತಿದೆ.

    ಪೋಸ್ಟ್ ನಲ್ಲೇನಿದೆ?:
    ನನ್ನ ಪ್ರೀತಿಯ ಎ..
    ಡಿಸೆಂಬರ್ 8. 27 ವರ್ಷಗಳ ನಮ್ಮ ವೈವಾಹಿಕ ಜೀವನ ಪಯಣದಲ್ಲಿ ಮೊದಲ ಬಾರಿಗೆ ನೀವು ನನ್ನೊಂದಿಗಿಲ್ಲ. ನಮ್ಮ ದಿನದಲ್ಲಿ. ನನ್ನ ಜಗತ್ತಿಗೆ ಮಾತ್ರ ನೀನು ಪ್ರಮುಖನಾಗಿರಲಿಲ್ಲ. ನೀವೇ ನನ್ನ ಜಗತ್ತಾಗಿದ್ರಿ. ನನ್ನ ಕೈ ಹಿಡಿದು ನಡೆಸಿದ್ದೀರಾ. ನಿಮ್ಮ ಹೃದಯದಲ್ಲಿ ಅದ್ಭುತ ಪ್ರೀತಿ ಇತ್ತು. ಅದು ನನ್ನೊಬ್ಬಳಿಗೆ ಮಾತ್ರವಲ್ಲ. ಲಕ್ಷಗಟ್ಟಲೆ ಜನರಿಗೆ ಆ ಪ್ರೀತಿ ಸಿಕ್ಕಿತ್ತು. ಅದೇ ಪ್ರೀತಿ ನನ್ನಲ್ಲೇ ತುಂಬಿಕೊಂಡಿತ್ತು. ಆ ಪ್ರೀತಿಯೇ ನನ್ನ ಬದುಕನ್ನು ಕೈ ಹಿಡಿದು ನಡೆಸಿದೆ. 27 ವರ್ಷಾನಾ? ನನ್ನ ಬದುಕು ಅಂತಾ ಆರಂಭವಾಗಿದ್ದೇ, ನೀನು ನನ್ನನ್ನು ಪ್ರೀತಿಸಿದ ಮೇಲೆ. ನಿಮ್ಮ ನಗು ನನ್ನನ್ನು ಅದೇ ಸಂತೋಷದಲ್ಲಿ ಮುಂದುವರಿಸಿದೆ. ಜಗತ್ತಿನ ಯಾವುದೇ ವಸ್ತು, ಯಾರೇ ಆಗಲಿ, ನಿನಗೆ ನನ್ನ ಮೇಲೆ ಇದ್ದ ಪ್ರೀತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಆ ನಿನ್ನ ಪ್ರೀತಿ ನನ್ನನ್ನು, ನನ್ನ ಬದುಕನ್ನು ಸುರಕ್ಷಿತವಾಗಿರುವಂತೆ ಮಾಡಿದೆ.

    ಎಲ್ಲದರಿಂದ ನನ್ನನ್ನು ಕಾಪಾಡಿದೆ. ಯಾವ ರೀತಿ ಅಂದ್ರೆ. ತುಂಬಾ ಚಳಿ ಇದ್ದಾಗ. ಬೆಚ್ಚಗಿನ ಬ್ಲಾಂಕೆಟ್ ಹೊಂದುಕೊಂಡ ರೀತಿ. ಮಳೆಯಲ್ಲಿ ಬಿಸಿಲಲ್ಲಿ ಕಾಪಾಡುವ ದೊಡ್ಡ ಕೊಡೆಯಂತೆ ನನ್ನನ್ನು ಕಾಪಾಡಿದ್ದೀಯಾ. ಈ ಕ್ಷಣ ನೀನು ಎಲ್ಲಾದ್ರೂ ಇರು.. ಆದ್ರೆ ನನಗೆ ಗೊತ್ತು.. ನೀನು ನನ್ನನ್ನೇ ಹುಡುಕ್ತಿರ್ತೀಯಾ.. ಈಗಲೂ ನಿನಗೆ ನಮ್ಮ ಮಗನ ಬಗ್ಗೆ ಆತಂಕ ಇದೆ.. ಈಗಲೂ, ಇನ್ನು ಮುಂದೆಯೂ ನೀನು ನಮ್ಮನ್ನು ರಕ್ಷಿಸುತ್ತೀಯಾ.. ನನ್ನ ಸುತ್ತಲಿರುವ ಹಲವಾರು ಕಣ್ಣುಗಳಲ್ಲಿ ಈಗಲೂ ಕೂಡ ಆ ನಿನ್ನ ಪ್ರೀತಿಯ ಪ್ರತಿಬಿಂಬವನ್ನು ಕಾಣುತ್ತೇನೆ.. ಅದು ನನ್ನ ಮತ್ತು ಅಭಿಯನ್ನು ಆ ಕಣ್ಣುಗಳು ಹರಸುತ್ತಿರುತ್ತವೆ..

    ಇನ್ಮುಂದೆ ಒಡೆದ ನನ್ನ ಹೃದಯ ಕಟ್ಟಿಕೊಳ್ಳಲು, ಸಂತೈಸಲು ಜೊತೆಗೆ ಮುಂದಿನ ದಾರಿಯಲ್ಲಿ ನಡೆಯಲು ನಿನ್ನ ಶಕ್ತಿ ಬೇಕು.. ನಿನ್ನಿಂದ ಆ ಶಕ್ತಿ ಬೇಕು.. ನೀನು ಕಟ್ಟಿದ ಆ ಸುಂದರ ಬದುಕು.. ನಿನ್ನ ಆದರ್ಶಗಳನ್ನು ಹಾಗೆ ಕೊನೆವರೆಗೂ ಉಳಿಸಿಕೊಳ್ಳಲು ನಿನ್ನ ಆಶೀರ್ವಾದ ಬೇಕು.. ನಾನು ಬದುಕಿರಲು ನಿನ್ನ ಪ್ರೀತಿ ನನಗೆ ಬೇಕೇ ಬೇಕು.. ನಾನು ಇನ್ಮುಂದೆ ಮುಂದೆ ಸಾಗಲು ಹೆಮ್ಮೆಯಿಂದ ಬದುಕಲು ನಿನ್ನ ಸ್ಪೂರ್ತಿಯಿಂದ ಮುನ್ನಡೆಯುತ್ತೇನೆ.. ನಿನ್ನ ಜೊತೆ ಹಂಚಿಕೊಂಡಿರುವ ಆ 27 ವರ್ಷಗಳಲ್ಲಿ ಸಿಂಹದ ಹೃದಯ.. ಅತ್ಯಧ್ಬುತ ಮಾನವೀಯ ಗುಣಗಳನ್ನು ಹೊಂದಿದ್ದ ಕೋಟಿಗೊಬ್ಬ ನೀನು..

    ಎಂದೆಂದಿಗೂ ನನ್ನಜೊತೆಗಿರು..
    ನಮ್ಮ ಬದುಕಲ್ಲಿ ನೀನು ಎಂದೆಂದಿಗೂ ಹೊಳೆಯುತ್ತಿರು..
    ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..

    ಈ ಪತ್ರ ಓದಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ. ರೆಬೆಲ್-ಸುಮಕ್ಕನ ಸುಮಧುರ ಪ್ರೀತಿಗೆ ಸೆಲ್ಯೂಟ್ ಹೊಡಿಬೇಕು ಅನ್ಸುತ್ತೆ.

    ಪ್ರೊಫೈಲ್ ಚೇಂಚ್:
    ಅಂಬರೀಶ್ ನಿಧನದ ನಂತರ ಅವರ ಅಂತಿಮ ವಿಧಿವಿಧಾನ ನಡೆಯುವ ವೇಳೆ ಇರಿಸಿದ್ದ ಫೋಟೋವನ್ನು ಸುಮಲತಾ ತಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೋವಾಗಿ ಬದಲಾಯಿಸಿದ್ದರು. ಅಲ್ಲದೇ ಕವರ್ ಫೋಟೋ ಆಗಿ ಮಲೇಷಿಯಾದಲ್ಲಿ ನಡೆದ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ತೆಗೆಸಿದ್ದ ಫೋಟೋವನ್ನು ಹಾಕಿದ್ದರು. ಇದೀಗ ಮತ್ತೆ ಅವರು ತಮ್ಮ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ್ದು, ಮಲೇಷಿಯಾದಲ್ಲಿ ತೆಗೆದ ಫೋಟೋವನ್ನೇ ಎಡಿಟ್ ಮಾಡಿ ಅಪ್ ಡೇಟ್ ಮಾಡಿದ್ದಾರೆ.

    ಫೋಟೋ ಜೊತೆ ತಾವು ಅಂಬರೀಶ್ ಜೊತೆ ಅಭಿನಯಿಸಿದ್ದ ಸಿನಿಮಾ ಹಾಡುಗಳನ್ನು ಪೋಸ್ಟ್ ಮಾಡಿ ಶೇರ್ ಮಾಡಿದ್ದಾರೆ. ‘ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್’ ಸಿನಿಮಾ ‘ಹೆಲೋ ನನ್ನ ಪ್ರೇಯಸಿ’ ಎಂಬ ಹಾಡನ್ನು ಪೋಸ್ಟ್ ಮಾಡಿ ನನ್ನ ಫೇವರೆಟ್ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಅಂಬರೀಶ್ ಜೊತೆ ಅಭಿನಯಿಸಿದ್ದ ‘ತಾಯಿಗೊಬ್ಬ ಕರ್ಣ’ ಸಿನಿಮಾದ ‘ಅಂದ ಚಂದ ತಂದ ಕಲ್ಪನಾ’ ಹಾಡನ್ನು ಪೋಸ್ಟ್ ಮಾಡಿ’ ಇದು ನಮ್ಮ ಫೇವ್‍ರೆಟ್ ಸಾಂಗ್ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಬೇರೆ ಬೇರೆ ಸಿನಿಮಾದ ಹಾಡುಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

    1984 ರಲ್ಲಿ ಬಂದ ಕನ್ನಡ `ಆಹುತಿ’ ಸಿನಿಮಾದಲ್ಲಿ ಅಂಬರೀಶ್ ಹಾಗೂ ಸುಮಲತಾ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಸುಮಾರು ಆರೇಳು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿ 1991 ರ ಡಿಸೆಂಬರ್ 8 ರಂದು ಮದುವೆಯಾಗಿದ್ದರು. 27 ವರ್ಷ ಸಂತಸದ ಸಂಸಾರ ನಡೆಸಿದ್ದ ಈ ಜೋಡಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಮಲೇಷಿಯಾದಲ್ಲಿ ಆಚರಣೆ ಮಾಡಿ ಸಂಭ್ರಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ವಾರ್ಷಿಕೋತ್ಸವಕ್ಕೆ ಭಾವಾನಾತ್ಮಕ ಪೋಸ್ಟ್ ಹಾಕಿದ ನಟಿ ಸೋನಾಲಿ

    ಮದ್ವೆ ವಾರ್ಷಿಕೋತ್ಸವಕ್ಕೆ ಭಾವಾನಾತ್ಮಕ ಪೋಸ್ಟ್ ಹಾಕಿದ ನಟಿ ಸೋನಾಲಿ

    ಮುಂಬೈ: ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರು ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಸೋನಾಲಿ ಅವರು ತಮ್ಮ ಪತಿಗಾಗಿ ಒಂದು ಭಾವಾನಾತ್ಮಕ ಪೋಸ್ಟ್ ಹಾಕಿದ್ದಾರೆ.

    ಸೋನಾಲಿ ಬೇಂದ್ರೆ ಹಾಗೂ ಅವರ ಪತಿ ಗೋಲ್ಡಿ ಬೆಲ್ ಇಂದು 16ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸದ್ಯ ಸೋನಾಲಿ ನ್ಯೂಯಾರ್ಕ್‍ನ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಸೋನಾಲಿ ಅವರು ತಮ್ಮ ಮದುವೆಯ ಫೋಟೋವನ್ನು ಹಾಕಿ ತಮ್ಮ ಪತಿಯನ್ನು ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನಾನು ಇದನ್ನು ಬರೆಯಲು ಶುರು ಮಾಡಿದಾಗ ನನ್ನ ತಲೆಯಲ್ಲಿ ಓಡುತ್ತಿರುವ ಎಲ್ಲ ಭಾವನೆಗಳು ಹಾಗೂ ಅಲೋಚನೆಗಳು ಪದಗಳಲ್ಲಿ ತಕ್ಷಣ ಬರೆಯುವುದಕ್ಕೆ ಸಾಧ್ಯವಿಲ್ಲ. ನೀವು ನನಗೆ ಪತಿ, ಒಡನಾಡಿ, ಬೆಸ್ಟ್ ಫ್ರೆಂಡ್. ಮದುವೆಯೆಂದರೆ ಒಬ್ಬರನೊಬ್ಬರು ಕಷ್ಟದ ಸಮಯದಲ್ಲಿ ಇರುವುದು. ನೀವು ನನ್ನ ಆರೋಗ್ಯದ ವಿಷಯದಲ್ಲಿ ನನ್ನ ಜೊತೆಯಲ್ಲಿದ್ದೀರಿ. ನಮ್ಮ ಈ ವರ್ಷ ಹೇಗೆ ಇತ್ತು ಎಂಬುದು ದೇವರಿಗೆ ಗೊತ್ತು.

    ಕ್ಯಾನ್ಸರ್ ವಿರುದ್ಧ ಒಬ್ಬರೇ ಹೋರಾಡಿ ಗೆಲ್ಲಬೇಕು ಎಂದು ಸಾಕಷ್ಟು ಜನ ಎಂದುಕೊಂಡಿರುತ್ತಾರೆ. ಆದರೆ ಅವರ ಕುಟುಂಬದವರು ಕೂಡ ಅವರ ಜೊತೆ ಎಲ್ಲ ಕಷ್ಟಗಳಲ್ಲಿ ಭಾಗಿಯಾಗಿರುತ್ತಾರೆ. ನೀವು ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತೀಯಾ ಎಂಬ ನಂಬಿಕೆಯಿಂದಲೇ ನಾನು ಈ ಪ್ರಯಾಣ ಶುರು ಮಾಡಿದೆ. ನೀವು ನಿಮ್ಮ ಎಲ್ಲ ಜವಾಬ್ದಾರಿಯನ್ನು ತಿಳಿದುಕೊಂಡು ಕೆಲವೊಂದು ತೆಗೆದುಕೊಂಡು ಮತ್ತೆ ಮನೆಗೆ ವಾಪಸ್ ನೀಡುತ್ತೀರಿ. ಇದೆಲ್ಲಾ ಎರಡು ಖಂಡಗಳ ನಡುವೆ ಸ್ಥಗಿತವಾಗಿದೆ.

     

    View this post on Instagram

     

    As soon I began to write this… I knew instantly that I wouldn’t be able to put down in words all the emotions and thoughts that were running through my head. Husband. Companion. Best friend. My rock. For me, that’s @goldiebehl. Marriage is standing by each other, through thick and thin, in sickness and in health… and god knows, how we’ve been through that this year. What not many people realize is that cancer is not just an individual battle… it’s something that a family collectively goes through. I was also able to go on this journey, knowing that you’d juggle all your responsibilities, and take on some more and hold fort back home… all this while shuttling between two continents. Thank you for being my source of strength, love and joy, for being with me every single step of the way… thank you is such an understatement for how I feel. What do I say about someone who is a part of you, who is yours and nothing and nobody else matters? Happy anniversary Goldie! ♥????

    A post shared by Sonali Bendre (@iamsonalibendre) on

    ನನ್ನ ಶಕ್ತಿ, ಪ್ರೀತಿ ಹಾಗೂ ಸಂತೋಷಕ್ಕೆ ನೀವೇ ಕಾರಣ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿದ್ದಿದ್ದಕ್ಕೆ ಧನ್ಯವಾದಗಳು. ನಾನು ಏನೂ ಅನುಭವಿಸುತ್ತಿದ್ದೇನೆ ಎಂಬುದು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಾ. ನನ್ನ ಜೀವನದ ಒಂದು ಭಾಗವೇ ನೀವು. ಹಾಗಾಗಿ ನಿಮ್ಮ ಬಗ್ಗೆ ನಾನೇನು ಹೇಳಲಿ. ನನ್ನ ಜೀವನದಲ್ಲಿ ಪ್ರಮುಖವಾದ ವ್ಯಕ್ತಿ ನೀವು. ನಿಮ್ಮನ್ನು ಹೊರತುಪಡಿಸಿ ಬೇರೆ ಯಾವ ವಿಚಾರವೂ ನನಗೆ ಅಮೂಲ್ಯವಾದುದ್ದಲ್ಲ. ನನ್ನ ಜೀವನದಲ್ಲಿ ನೀವು ಅಮೂಲ್ಯರಾಗಿರುವವರು ಎಂದು ಸೋನಾಲಿ ಬೇಂದ್ರೆ ಭಾವಾನಾತ್ಮಕ ಪೋಸ್ಟ್ ಹಾಕಿದ್ದಾರೆ.

    ಸದ್ಯ ಸೋನಾಲಿ ಬೇಂದ್ರೆ ನವೆಂಬರ್ 12, 2002ರಂದು ಗೋಲ್ಡಿ ಬೆಲ್ ಜೊತೆ ಮದುವೆಯಾಗಿದ್ದರು. ಸೋನಾಲಿ ಅವರಿಗೆ ಈಗ 13 ವರ್ಷದ ಮಗು ಕೂಡ ಇದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ವೆ ವಾರ್ಷಿಕೋತ್ಸವದ ದಿನವೇ ಟೆಕ್ಕಿ ಪತ್ನಿ ನೇಣಿಗೆ ಶರಣು

    ಮದ್ವೆ ವಾರ್ಷಿಕೋತ್ಸವದ ದಿನವೇ ಟೆಕ್ಕಿ ಪತ್ನಿ ನೇಣಿಗೆ ಶರಣು

    ಬೆಂಗಳೂರು: ಗೃಹಿಣಿಯೊಬ್ಬರು ಮದುವೆ ವಾರ್ಷಿಕೋತ್ಸವ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನವ್ಯಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈ ಘಟನೆ ಹೆಬ್ಬಾಳ ಸಮೀಪದ ಕೆಂಪಾಪುರದಲ್ಲಿ ನಡೆದಿದೆ. ರಮೇಶ್ ಬಾಬು ಮತ್ತು ನವ್ಯಾ ಮದುವೆಯಾಗಿ ಹತ್ತು ವರ್ಷಗಳಾಗಿತ್ತು. ರಮೇಶ್ ಬಾಬು ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದನು. ಮಂಗಳವಾರ ಇವರ ಮದುವೆ ವಾರ್ಷಿಕೋತ್ಸವ ಇತ್ತು. ಆದ್ದರಿಂದ ಮದುವೆ ವಾರ್ಷಿಕೋತ್ಸವಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದರು. ಆದರೆ ಸಂಜೆವರೆಗೂ ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದ ಪತ್ನಿ ನವ್ಯಾ, ಏಕಾಏಕಿ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನ್ನ ಮಗಳ ಮೇಲೆ ಗಂಡ ರಮೇಶ್ ಬಾಬು ಯಾವಾಗಲೂ ಅನುಮಾನ ಪಡುತ್ತಿದ್ದನು. ಅಷ್ಟೇ ಅಲ್ಲದೇ ಮಾನಸಿಕ ಕಿರುಕುಳ ನೀಡುತ್ತಿದ್ದನು. ಸಾಕಷ್ಟು ಬಾರಿ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು. ಈಗ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಪತಿ ರಮೇಶ್ ಬಾಬುನೇ ಕಾರಣ ಎಂದು ಮೃತ ನವ್ಯಾಳ ಪೋಷಕರು ಆರೋಪಿಸುತ್ತಿದ್ದಾರೆ.

    ಸದ್ಯ ಈ ಸಂಬಂಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ರಮೇಶ್ ಬಾಬುವನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆ ನಂತರ ಪತ್ನಿ ಜೊತೆ ಅರ್ಧಶತಕ ಬಾರಿಸಿದ ಖರ್ಗೆ!

    ಚುನಾವಣೆ ನಂತರ ಪತ್ನಿ ಜೊತೆ ಅರ್ಧಶತಕ ಬಾರಿಸಿದ ಖರ್ಗೆ!

    ಕಲಬುರಗಿ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಎಲೆಕ್ಷನ್ ಮೂಡ್ ನಿಂದ ಆನಿವರ್ಸರಿ ಮೂಡ್‍ಗೆ ತೆರಳಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆ ಚುನಾವಣೆ ಬಳಿಕ ಕುಟುಂಬದೊಂದಿಗೆ ತಮ್ಮ 50ನೇ ವರ್ಷದ ಮದುವೆಯ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಲಬುರಗಿಯ ಲುಂಬಿನಿ ನಿವಾಸದಲ್ಲಿ ಖರ್ಗೆ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆ ಹಾಗೂ ತನ್ನ ಪತ್ನಿ ರಾಧಾಬಾಯಿ 50ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿವಾಹ ವಾರ್ಷಿಕೋತ್ಸವದಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಅಫಜಲ್ ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ ಪಾಟೀಲ್ ಕೂಡ ಭಾಗಿಯಾಗಿದ್ದಾರೆ.

    ಸಮೀಕ್ಷೆಗಳೆಲ್ಲವು ಸುಳ್ಳಾಗಲಿವೆ. ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. 120ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಏರಿದರೆ ಸಿಎಂ ಯಾರಾಗುತ್ತಾರೆ ಎಂದು ಕೇಳಿದ್ದಕ್ಕೆ, ಸಿಎಂ ಅಭ್ಯರ್ಥಿ ಬಗ್ಗೆ ನಾ ಕಮೆಂಟ್ ಮಾಡಲ್ಲ, ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಉತ್ತರಿಸಿದರು.

  • 7ನೇ ಮದುವೆ ವಾರ್ಷಿಕೋತ್ಸವಕ್ಕೆ ಪತಿ ಡೇನಿಯಲ್‍ಗೆ ಸಂದೇಶ ರವಾನಿಸಿದ ಸನ್ನಿ ಲಿಯೋನ್!

    7ನೇ ಮದುವೆ ವಾರ್ಷಿಕೋತ್ಸವಕ್ಕೆ ಪತಿ ಡೇನಿಯಲ್‍ಗೆ ಸಂದೇಶ ರವಾನಿಸಿದ ಸನ್ನಿ ಲಿಯೋನ್!

    ಮುಂಬೈ: ಹೆಸರಲ್ಲೆ ಮಾದಕತೆ ತುಂಬಿಕೊಂಡಿರುವ ನಟಿ ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಸಾಂಸರಿಕ ಜೀವನಕ್ಕೆ ಕಾಲಿರಿಸಿ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಮದುವೆ ವಾರ್ಷಿಕೋತ್ಸವದಲ್ಲಿರುವ ಸನ್ನಿ ಪತಿ ಡೇನಿಯಲ್ ವೆಬರ್ ಗೆ ಭಾವನಾತ್ಮಕವಾಗಿ ಟ್ವಿಟ್ಟರ್ ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ.

    ಏನದು ಸಂದೇಶ?: ನಾವಿಬ್ಬರು ದೇವರ ಮುಂದೆ ನಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಂಡು ಇಂದಿಗೆ 7 ವರ್ಷಗಳು ಕಳೆದಿವೆ. ಇಬ್ಬರಲ್ಲಿಯೂ ಅಂದಿನ ಪ್ರೀತಿ ಇಂದಿಗೂ ಹಾಗೆ ಇದೆ. ಅಂದು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೇನೋ, ಇಂದು ಆ ಪ್ರೀತಿ ಇನ್ನು ಹೆಚ್ಚಾಗಿದೆ. ಹೀಗೆ ಇಬ್ಬರು ಸಂತೋಷದಿಂದ ಜೀವನದ ಪಯಣ ಮುಂದುವರೆಸೋಣ. ಲವ್ ಯೂ ಸೋ ಮಚ್. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಡೇನಿಯಲ್ ಎಂದು ಬರೆದುಕೊಂಡಿದ್ದಾರೆ.

    ಪತ್ನಿ ಸನ್ನಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡೇನಿಯಲ್, ಇಂದಿಗೆ ನಾವಿಬ್ಬರು ನಮ್ಮ ಪಯಣ ಆರಂಭಿಸಿ 7 ವರ್ಷಗಳು ಕಳೆದಿವೆ. ನಾನು ಫಸ್ಟ್ ಡೇ ನಿನ್ನ ಭೇಟಿಯಾದ ದಿನದಂತೆ ಎಲ್ಲ ದಿನಗಳು ಹಾಗಿರಲಿ ಅಂತಾ ಇಷ್ಟಪಡುತ್ತೇನೆ ಅಂತಾ ಬರೆದು ಸನ್ನಿಯನ್ನು ಎತ್ತಿಕೊಂಡಿರುವ ಫೋಟೋ ಹಾಕಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ 2017ರಲ್ಲಿ ಹೆಣ್ಣು ಮಗುವೊಂದನ್ನ ದತ್ತು ಪಡೆದಿದ್ದರು. ಈ ವರ್ಷ ಆಶೆರ್ ಸಿಂಗ್ ವೆಬರ್ ಮತ್ತು ನೋವಾ ಸಿಂಗ್ ವೆಬರ್ ಮುದ್ದಾದ ಮಕ್ಕಳಿಗೆ ಸನ್ನಿ ತಾಯಿಯಾಗಿದ್ದಾರೆ. ಇದು ನಿಜಕ್ಕೂ ದೇವರ ಇಚ್ಛೆ. ಇಷ್ಟು ಸುಂದರವಾದ ದೊಡ್ಡ ಕುಟುಂಬವನ್ನ ಹೊಂದುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಹಾಗೂ ನಮ್ಮ ಜೀವನದಲ್ಲಿ ಈ ಮೂರು ಪವಾಡಗಳನ್ನ ಹೊಂದಿರೋದು ನಮ್ಮ ಅದೃಷ್ಟ. ಈಗ ನಮ್ಮ ಕುಟುಂಬ ಸಂಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಹೇಳಿದ್ದರು.

    ನಾವು ಡೇನಿಯಲ್ ನ ಜೀನ್ ಮತ್ತು ನನ್ನ ಜೀನ್‍ಗಳಿಂದ ಮಾಡಿದ ಅಂಡಾಣುವಿನಿಂದ ಬಾಡಿಗೆ ತಾಯ್ತನದ ಮೊರೆ ಹೋದೆವು. ಬಾಡಿಗೆ ತಾಯಿಯ ಮೂಲಕ ಆಶೆರ್ ಮತ್ತು ನೋವಾ ಜನಿಸಿದ್ದಾರೆ. ಬಾಡಿಗೆ ತಾಯ್ತನದ ಬಗ್ಗೆ ನಾವು ಹಲವು ವರ್ಷಗಳ ಹಿಂದೆಯೇ ಚಿಂತಿಸಿದ್ದೆವು. ಈಗ ಅದು ಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.

    ಏಳನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸನ್ನಿ ಮತ್ತು ವೆಬರ್ ದಂಪತಿಗೆ ಬಾಲಿವುಡ್ ಗಣ್ಯರೆಲ್ಲ ಶುಭಕೋರಿದ್ದಾರೆ.