Tag: Marriage Anniversary

  • ಯಶ್ ಜೊತೆ ಸೆಲ್ಫಿಗಾಗಿ ಕಷ್ಟ ಪಟ್ಟ ರಾಧಿಕಾ ಪಂಡಿತ್

    ಯಶ್ ಜೊತೆ ಸೆಲ್ಫಿಗಾಗಿ ಕಷ್ಟ ಪಟ್ಟ ರಾಧಿಕಾ ಪಂಡಿತ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ನಿನ್ನೆ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿತ್ತು. ಇದೀಗ ಮತ್ತೆ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಛೆ.. ಯಶ್ ಜೊತೆಗೆ ನಾನು ಸೆಲ್ಫಿ ತೆಗೆದುಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದೇನೆ. ಈಗ ನಮಗೆ ಟಾಸ್ಕ್‌ಮಾಸ್ಟರ್‌ ಯಾರೆಂದು ತಿಳಿದಿದೆ ಎಂದು ಬರೆದುಕೊಂದಿದ್ದಾರೆ. ಫೋಟೋನಲ್ಲಿ ಯಶ್, ರಾಧಿಕಾ ಬೋಟ್‍ನಲ್ಲಿ ಇರುವಂತೆ ಕಾಣಿಸುತ್ತದೆ. ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ಕಿಸುವ ವೇಳೆ ಯಶ್ ಮೊದಲ ಫೋಟೋನಲ್ಲಿ ಮುಖದ ಮೇಲೆ ಟವೆಲ್ ಹಾಕಿ ಕುಳಿತಿದ್ದಾರೆ. ತಲೆ ಮೇಲೆ ಕೈ ಇಟ್ಟು, ಕಳ್ಳನಂತೆ ಇಣುಕಿ ನೋಡುವಂತೆ, ಕೊನೆಯ ಫೋಟೋದಲ್ಲಿ ರಾಧಿಕಾ ಅವರ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ದಂಪತಿಯ ಈ ಕ್ಯೂಟ್ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಇನ್‍ಸ್ಟಾಗ್ರಾಮ್‍ನಲ್ಲಿ ರಾಧಿಕಾ, ಯಶ್ ಜೊತೆಗೆ ಬೀಚ್‍ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋವನ್ನು ನಿನ್ನೆ ಶೇರ್ ಮಾಡಿದ್ದು, ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಯಶ್‍ಗೆ ಅರ್ಪಿಸಿದ್ದರು. ಈ ಸಾಲುಗಳ ಮೂಲಕ ಯಶ್ ನನಗೆ ಎಷ್ಟು ಪರ್ಫೆಕ್ಟ್ ಜೋಡಿ ಎಂದು ಹೇಳಿದ್ದರು, ಇದೀಗ ಯಶ್ ಅವರ ಜೊತೆಗೆ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಈ ಜೋಡಿ 2016ರ ಡಿಸೆಂಬರ್ 9 ರಂದು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಐರಾ ಎಂದು ಹೆಸರಿಟ್ಟರು. ನಂತರ 2019 ರಲ್ಲಿ ಗಂಡು ಮಗು ಜನಿಸಿದ್ದು, ಆ ಮಗುವಿಗೆ ಯಥರ್ವ್ ಎಂದು ಹೆಸರಿಟ್ಟಿದ್ದಾರೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

  • ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಪ್ರಕಾಶ್ ರೈ

    ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಪ್ರಕಾಶ್ ರೈ

    ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಅವರು ಇಂದು ತಮ್ಮ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ನಟ ಹಂಚಿಕೊಂಡಿದ್ದಾರೆ.

    ಹೌದು. ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಜೊತೆಗಿನ ಮದುವೆ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಪ್ರಕಾಶ್ ರೈ, ಪತ್ನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ ಜೀವನ ಪಯಣದಲ್ಲಿ ಒಬ್ಬ ಒಳ್ಳೆಯ ಗೆಳತಿ, ಪ್ರಿಯತಮೆ ಹಾಗೂ ಜೀವನದ ಸಹ ಪ್ರಯಾಣಿಕೆಯಾಗಿ ಇರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಪ್ರಕಾಶ್ ರೈ ಅವರು ಎರಡನೇ ಮದುವೆಯಾದ ವಿಷಯ ತುಂಬಾ ಹಳೆಯದು. ಮೊದಲ ಪತ್ನಿಯಿಂದ ದೂರಾಗಿ ರೈ ನಂತರ ಪೋನಿ ಅವರನ್ನು ವಿವಾಹವಾದರು. ಪೋನಿಯವರು ಬಾಲಿವುಡ್‍ನಲ್ಲಿ ಕೊರಿಯೋಗ್ರಾಫರ್ ಆಗಿದ್ದರು. ಈ ವೇಳೆ ಪ್ರಕಾಶ್ ರೈ, ಪೋನಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಮುದ್ದಾದ ಮಗನಿದ್ದಾನೆ. ಇದನ್ನೂ ಓದಿ: ನಿಮ್ಮನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ: ಪ್ರಕಾಶ್ ರೈ

    ಇತ್ತೀಚೆಗೆ ಚಿತ್ರೀಕರಣದ ವೇಳೆ ನಟ ಗಾಯಗೊಂಡಿದ್ದರು. ಕಾಲಿವುಡ್ ನಟ ಧನುಷ್ ಅಭಿನಯದ `ಡಿ44′ ಚಿತ್ರ ಇತ್ತೀಚೆಗಷ್ಟೇ ಆಗಸ್ಟ್ 5 ರಂದು ಸೆಟ್ಟೇರಿದ್ದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ರೈ ಅಭಿನಯಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದ್ದು, ಶೂಟಿಂಗ್ ವೇಳೆ ಆಗಸ್ಟ್ 10ರಂದು ಪ್ರಕಾಶ್ ರೈ ಕೆಳಗೆ ಬಿದ್ದು ಗಾಯಗೊಂಡಿದ್ದರು. ಹೀಗಾಗಿ ತಕ್ಷಣ ಅವರನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಕರೆದೊಯ್ಯಲಾಗಿತ್ತು. ಸದ್ಯ ನಟ ಆರೋಗ್ಯವಾಗಿದ್ದು, ಶೀಘ್ರವೇ ಚಿತ್ರೀಕರಣಕ್ಕೆ ಮರಳುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಡೆವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ: ಪ್ರಕಾಶ್ ರೈ

  • ಮದ್ವೆ ವಾರ್ಷಿಕೋತ್ಸವಕ್ಕೆ ಶುಭಕೋರಿ ತಂದೆ-ತಾಯಿಗೆ ರಾಧಿಕಾ ಪಂಡಿತ್ ಧನ್ಯವಾದ

    ಮದ್ವೆ ವಾರ್ಷಿಕೋತ್ಸವಕ್ಕೆ ಶುಭಕೋರಿ ತಂದೆ-ತಾಯಿಗೆ ರಾಧಿಕಾ ಪಂಡಿತ್ ಧನ್ಯವಾದ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ತಂದೆ ಹಾಗೂ ತಾಯಿಯ ಮದುವೆ ವಾರ್ಷಿಕೋತ್ಸವವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಅಪ್ಪ-ಅಮ್ಮನಿಗೆ ಶುಭಕೋರುವ ಜೊತೆಗೆ ಧನ್ಯವಾದವನ್ನು ತಿಳಿಸಿದ್ದಾರೆ.

    ಹೌದು. ಈ ಸಂಬಂಧ ತಮ್ಮ ಇನ್ ಸ್ಟಾ ಖಾತೆಯಲ್ಲಿ ಭಾವನಾತ್ಮಕವಾಗಿ ರಾಧಿಕಾ ಬರೆದುಕೊಂಡು ವಿಶ್ ಮಾಡಿದ್ದಾರೆ. ಅಲ್ಲದೆ ನಿಮ್ಮ ಮಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಎಷ್ಟನೇ ವರ್ಷದ ವಿವಾಹ ವಾರ್ಷಿಕೋತ್ಸವ ಎಂಬುದನ್ನು ನಟಿ ತಿಳಿಸಿಲ್ಲ. ರಾಧಿಕಾ ಅವರು ತಂದೆ-ತಾಯಿ ಫೋಟೋ ಅಪ್ಲೋಡ್ ಮಾಡಿ ವಿಶ್ ಮಾಡುತ್ತಿದ್ದಂತೆಯೇ ನಟಿಯ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ. ಅಲ್ಲದೆ ಯಶ್ ಹಾಗೂ ರಾಧಿಕಾರಂತೆ ಇವರು ಕೂಡ ಕ್ಯೂಟ್ ಜೋಡಿ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ.

    ಆತ್ಮೀಯ ಮಾ ಮತ್ತು ಪಪ್ಪಾ, ನಾವು ನಿಮ್ಮನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ವಿವರಿಸಲು ಪದಗಳೇ ಸಾಲಲ್ಲ. ನನ್ನ ಮಕ್ಕಳನ್ನು ಬೆಳೆಸಲು ನೀವು ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾವು ಇಂದು ಏನಾಗಿದ್ದೇವೆ, ಅದಕ್ಕೆ ನಿಮ್ಮ ಆಶೀರ್ವಾದವಿದೆ. ನಿಮಗೆ ನಾವು ಯಾವತ್ತೂ ಚಿರಖುಣಿಯಾಗಿರುತ್ತೇವೆ. ನನಗೆ ಹಾಗೂ ಗೌರಂಗ್ ಪಂಡಿತ್‍ಗೆ ನೀವು ಹೆತ್ತವರಾಗಿರುವುದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಎಂದು ರಾಧಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?

    ಒಟ್ಟನಲ್ಲಿ ನಟಿ ರಾಧಿಕಾ ಪಂಡಿತ್ ಅವರು ಸದ್ಯ ಮಕ್ಕಳ ಲಾಲನೆ-ಪಾಲನೆಯಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಲಾಕ್‍ಡೌನ್‍ನಿಂದಾಗಿ ನಟ ಯಶ್ ಕೂಡ ಯಾವುದೇ ಶೂಟಿಂಗ್‍ಗೆ ಹೋಗದೆ ಮನೆಯಲ್ಲೇ ಇದ್ದಾರೆ. ಅವರು ಕೂಡ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

  • ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ – ಕಿಚ್ಚನಿಂದ ಪತ್ನಿಗೆ ಮದ್ವೆ ವಾರ್ಷಿಕೋತ್ಸವದ ವಿಶ್

    ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ – ಕಿಚ್ಚನಿಂದ ಪತ್ನಿಗೆ ಮದ್ವೆ ವಾರ್ಷಿಕೋತ್ಸವದ ವಿಶ್

    ಬೆಂಗಳೂರು: ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.

    ಇಂದು ಸ್ಯಾಂಡಲ್‍ವುಡ್‍ನ ಕಿಚ್ಚ, ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಪ್ರಿಯಾ ಸುದೀಪ್ 19ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಮದುವೆ ವಾರ್ಷಿಕೋತ್ಸಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

    ತಮ್ಮ ಮದುವೆ ವಾರ್ಷಿಕೋತ್ಸಕ್ಕೆ ತಮ್ಮ ಪತ್ನಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಸುದೀಪ್ ಅವರು, ನಾನು ನನ್ನ ಜೀವನದ ಅರ್ಧಭಾಗಕ್ಕೂ ಹೆಚ್ಚಿನ ಕಾಲದಿಂದ ನಿನ್ನನ್ನು ಬಲ್ಲೆ. ಈ 19ನೇ ಮದುವೆ ವಾರ್ಷಿಕೋತ್ಸವದಂದು ನೀನು ನನಗೆ ಸ್ನೇಹಿತೆಯಾಗಿ ಜೊತೆಗೆ ಇದಿದ್ದಕ್ಕೆ ಧನ್ಯವಾದ. ಓರ್ವ ಒಳ್ಳೆಯ ಸ್ನೇಹಿತೆಯನ್ನು ಹುಡುಕುವುದು ಕಷ್ಟ. ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ. ಯಾವಗಲೂ ಒಳ್ಳೆಯದನ್ನೇ ಕೋರುತ್ತೇನೆ. ತುಂಬು ಹೃದಯದ ಪ್ರೀತಿ ಪ್ರಿಯ. ಹ್ಯಾಪಿ 19 ಎಂದು ಬರೆದುಕೊಂಡಿದ್ದಾರೆ.

    ಕಿಚ್ಚ ಅವರ ಟ್ವೀಟಿಗೆ ಮಡದಿ ಪ್ರಿಯಾ ಅವರು ಟ್ವಿಟ್ಟರ್ ಮೂಲಕವೇ ಉತ್ತರ ನೀಡಿದ್ದು, ನಿಮ್ಮ ಸಾಮಥ್ರ್ಯಕ್ಕೂ ಮೀರಿ ನಮ್ಮನ್ನು ಖುಷಿಯಾಗಿಡಲು ಪ್ರಯತ್ನ ಮಾಡುತ್ತಿರುವ ಡಾರ್ಲಿಂಗ್ ಪತಿಗೆ ಧನ್ಯವಾದಗಳು. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಹ್ಯಾಪಿ 19 ನಮಗೆ ಎಂದು ಬರೆದುಕೊಂಡಿದ್ದಾರೆ. ಚಂದನವನದ ನಟ-ನಟಿಯರು ಕಿಚ್ಚ ಮತ್ತು ಪ್ರಿಯಾ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದಾರೆ.

    ಕಿಚ್ಚದ ಮದುವೆ ವಾರ್ಷಿಕೋತ್ಸಕ್ಕೆ ವಿಶ್ ಮಾಡಿರುವ ಬಾಲಿವುಡ್ ಹೀರೋ ರಿತೇಶ್ ದೇಶ್‍ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ, ಸುಂದರವಾದ ವ್ಯಕ್ತಿಗಳಾದ ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮಿಬ್ಬರ ನಡುವೆ ಇರುವ ಸಂಬಂಧ ಹಲವರಿಗೆ ಸ್ಫೂರ್ತಿಯಾಗಿದೆ. ನಿಮಗೆ ದೇವರ ಒಳ್ಳೆಯದನ್ನು ಮಾಡಲಿ. ಜೊತೆಗೆ ಹೇರಳವಾದ ಪ್ರೀತಿ ನಿಮ್ಮಬ್ಬರಿಗೆ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು 2001ರ ಅಕ್ಟೋಬರ್ 18ರಂದು ವಿವಾಹವಾಗಿದ್ದರು. ಇವರಿಗೆ 2004ರಲ್ಲಿ ಒಂದು ಹೆಣ್ಣುಮಗು ಜನಿಸಿತ್ತು. ಇಂದಿಗೆ ಈ ಜೋಡಿ ಮದುವೆಯಾಗಿ 19 ವರ್ಷಗಳಾಗಿವೆ. ಸದ್ಯ ಕಿಚ್ಚ ಸುದೀಪ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದು, ಅವರ ನಟನೆಯ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ಸುದೀಪ್ ಅವರು ಫ್ಯಾಂಟಮ್ ಚಿತ್ರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

  • ಸಹೋದರಿಯರಿಂದ ತಂದೆ-ತಾಯಿಯ ಮದುವೆ ದಿನದ ವಿಡಿಯೋ ಮರುಸೃಷ್ಟಿ

    ಸಹೋದರಿಯರಿಂದ ತಂದೆ-ತಾಯಿಯ ಮದುವೆ ದಿನದ ವಿಡಿಯೋ ಮರುಸೃಷ್ಟಿ

    – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
    – ಪೋಷಕರಂತೆ ಉಡುಗೆ ಧರಿಸಿದ್ದ ಅಕ್ಕ-ತಂಗಿ

    ಚೆನ್ನೈ: ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಸಹೋದರಿಯರಿಬ್ಬರು ತಮ್ಮ ತಂದೆ-ತಾಯಿ ಮದುವೆ ವಿಡಿಯೋವನ್ನು ಮರುಸೃಷ್ಟಿ ಮಾಡುವ ಮೂಲಕ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.

    ಗೋಪಿಕಾ ಮತ್ತು ದೇವಿಕಾ ಸಹೋದರಿಯರು ತಮ್ಮ ಪೋಷಕರ 24ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಲು ಬಯಸಿದ್ದರು. ಆದರೆ ಕೊರೊನಾದಿಂದ ಅದು ಸಾಧ್ಯವಾಗಿಲ್ಲ. ಆಗ ತಮ್ಮ ತಂದೆ-ತಾಯಿ ಮದುವೆಯ ದಿನದ ವೀಡಿಯೊವನ್ನು ಮರುಸೃಷ್ಟಿಸಲು ನಿರ್ಧರಿಸಿದ್ದರು. ಅದರಂತೆಯೇ ಗೋಪಿಕಾ ಮತ್ತು ದೇವಿಕಾ ಈ ವಿಡಿಯೋವನ್ನು ಸೀಕ್ರೆಟ್ ಆಗಿ ರೆಕಾರ್ಡ್ ಮಾಡಿದ್ದು, ಆಗಸ್ಟ್ 28 ರಂದು ವಿವಾಹ ವಾರ್ಷಿಕೋತ್ಸವದಂದು ಅದನ್ನು ಪೋಷಕರಿಗೆ ತೋರಿಸಿದ್ದಾರೆ.

    ದೇವಿಕಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೋಪಿಕಾ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಷಕರಾದ ಗೋಪಾಲಕೃಷ್ಣನ್ ನಾಯರ್ ಮತ್ತು ರಾಧಿಕಾ ಅವರ ವಿವಾಹ ಸಂದರ್ಭದಲ್ಲಿ ಹೇಗಿದ್ದರು ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವಧು-ವರ ನಗುವುದು, ನಾಚಿಕೆ ಪಡುವುದು, ಪರಸ್ಪರ ಸಿಹಿ ತಿನಿಸುವುದು. ಅಲ್ಲದೇ ವರ (ತಂದೆ) ಕನ್ನಡಿಯಲ್ಲಿ ಮುಂದೆ ನಿಂತುಕೊಂಡು ನೋಡಿಕೊಳ್ಳುವುದು, ವಧು (ತಾಯಿ) ತನ್ನ ಸೀರೆಯನ್ನು ಸರಿ ಮಾಡಿಕೊಳ್ಳುವುದು. ಹೀಗೆ ಎಲ್ಲವನ್ನು ಸಹೋದರಿಯರು ವಿಡಿಯೋದಲ್ಲಿ ಮರುಸೃಷ್ಟಿ ಮಾಡಿರುವುದನ್ನು ಕಾಣಬಹುದಾಗಿದೆ.

    ಗೋಪಿಕಾ ಮತ್ತು ದೇವಿಕಾ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ತಂದೆ ಎಲೆಕ್ಟ್ರಿಕಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರಿಯರು ಮದುವೆಯಲ್ಲಿ ತಮ್ಮ ಪೋಷಕರು ಧರಿಸಿದ್ದ ರೇಷ್ಮೆ ಸೀರೆ ಮತ್ತು ಬಿಳಿ ಪಂಜೆ, ಶರ್ಟ್ ಅನ್ನು ಹಾಗೆಯೇ ಧರಿಸಿದ್ದಾರೆ. ಮೇಕಪ್ ಸಹ ಹಾಗೇ ಮಾಡಿಕೊಂಡಿದ್ದಾರೆ. ವಿಡಿಯೋ ಕೇವಲ 1.5 ನಿಮಿಷವಿದ್ದು, ಸಹೋದರಿಯ ಅದ್ಭುತವಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಹೋದರಿಯರು ಹಂಚಿಕೊಂಡಿದ್ದಾರೆ.

  • ಮದ್ವೆ ವಾರ್ಷಿಕೋತ್ಸವದಂದು ‘ಜೇನಿನಗೂಡು ನಾವೆಲ್ಲ’ ಎಂದಿದ್ದ ಚಿರು

    ಮದ್ವೆ ವಾರ್ಷಿಕೋತ್ಸವದಂದು ‘ಜೇನಿನಗೂಡು ನಾವೆಲ್ಲ’ ಎಂದಿದ್ದ ಚಿರು

    ಬೆಂಗಳೂರು: ಸಿನಿಮಾ ಜಗತ್ತಿನಲ್ಲಿ ಸರ್ಜಾ ಕುಟುಂಬ ಎಂದರೇ ಜೇನಿನಗೂಡು ಕುಟುಂಬ ಎಂದೇ ಫೇಮಸ್. ಎಲ್ಲರೂ ಬಹಳ ಅನ್ಯೋನ್ಯತೆಯಲ್ಲಿರುವುದು ಈ ಕುಟುಂಬದ ವಿಶೇಷ. ಇಂದು ಮೃತಪಟ್ಟ ಚಿರಂಜೀವಿ ಸರ್ಜಾ ಅವರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ತಮ್ಮ ಜೇನುಗೂಡಿನಂತೆ ಇರುವ ಕುಟುಂಬದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

    ನಟ ಚಿರು ಅವರು ನಟಿ ಮೇಘನಾ ರಾಜ್ ಅವರುನ್ನು ಸುಮಾರು 10 ವರ್ಷಗಳ ಕಾಲ ಪ್ರೀತಿಸಿ 2 ವರ್ಷದ ಹಿಂದೆ ಎಂದರೆ 2018 ಮೇ 3ರಂದು ವಿವಾಹವಾಗಿದ್ದರು. ಸದ್ಯ ಮೇಘನಾ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ.

    https://www.instagram.com/p/B_uDQ-pH_yR/

    ಕಳೆದ ಮೇ 2ಕ್ಕೆ ಚಿರು ಮತ್ತು ಮೇಘನಾ ಮದುವೆಯಾಗಿ ಎರಡು ವರ್ಷ ತುಂಬಿದ್ದು, ಈ ವೇಳೆ ಲಾಕ್‍ಡೌನ್ ಇದ್ದ ಕಾರಣ ಚಿರು ಮತ್ತು ಮೇಘನಾ ಹೊರಗೆ ಹೋಗಿರಲಿಲ್ಲ. ಇದರಿಂದ ಮನೆಯಲ್ಲಿ ಇದ್ದು, ಸರಳವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಜೊತೆಗೆ ಮನೆಯಲ್ಲಿ ಚಿರು ಕುಟುಂಬ ಮತ್ತು ಮೇಘನಾ ಕುಟುಂಬ ಒಟ್ಟಿಗೆ ಇರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

    https://www.instagram.com/p/B_sMVp5nSKo/

    ಈ ಫೋಟೋವನ್ನು ಚಿರು ಮತ್ತು ಮೇಘನಾ ಇಬ್ಬರು ಒಟ್ಟಿಗೆ ತಮ್ಮ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಚಿರು ಅವರು ಫೋಟೋ ಹಾಕಿ ಸರ್ಜಾ ಫ್ಯಾಮಿಲಿ ಎಂದು ಬರೆದುಕೊಂಡಿದ್ದರು. ಇನ್ನೂ ಈ ಫೋಟೋವನ್ನು ಹಂಚಿಕೊಂಡಿರುವ ಮೇಘಾನ ಅವರು, ನಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಶುಭಕೋರಿದ ಎಲ್ಲರಿಗೂ ಧನ್ಯವಾದಗಳು. ಚಿರು ಹಾಗೂ ನಾನು ನಮ್ಮ ಕೈಯಲ್ಲಿ ಆದಷ್ಟೂ ಜನರಿಗೆ ಮೆಸೇಜ್ ಮೂಲಕ ರೀಪ್ಲೇ ಮಾಡಿದ್ದೇವೆ. ನಿಮ್ಮ ಪ್ರೀತಿಗೆ ನಾವು ಋಣಿಯಾಗಿದ್ದೇವೆ ಎಂದು ಬರೆದುಕೊಂಡಿದ್ದರು.

    ಚಿರು ಮತ್ತು ಮೇಘನಾ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿ ಪ್ರೀತಿ ಮಾಡಿದ್ದರು. 2018 ಮೇ 2ರಂದು ಬೆಂಗಳೂರಿನ ಆರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದಕ್ಕೂ ಮೊದಲು ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆ್ಯಂಥೋನೀಸ್ ಫೈರಿ ಚರ್ಚ್ ಮೇಘನಾ ಚಿರಂಜೀವಿ ಸರ್ಜಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು.

    ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ 2:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ತಮ್ಮ 39ನೇ ವರ್ಷಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.

  • ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

    ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚಿ ಅಪ್ಪ-ಅಮ್ಮನ ಮದ್ವೆ ವಾರ್ಷಿಕೋತ್ಸವ ಆಚರಿಸಿದ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದ್ರೆ ಇದೀಗ ತಮ್ಮ ಅಪ್ಪ-ಅಮ್ಮ ಮದುವೆ ವಾರ್ಷಿಕೋತ್ಸವದ ವಿಶೇಷ ದಿನವನ್ನು ಕೊರೊನಾ ವಾರಿಯರ್ಸ್‍ಗೆ ಆಹಾರ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿಯನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಗಿಣಿ ತಮ್ಮ ತಂಡದೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ 300ಕ್ಕೂ ಹೆಚ್ಚು ಸಿಬ್ಬಂದಿಗೆ ಆಹಾರ ಹಂಚಿದ್ದಾರೆ. ಈ ಮೂಲಕ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಆಚರಿಸಿ, ಹೆತ್ತವರಿಗೆ ಒಂದೊಳ್ಳೆ ಉಡುಗೊರೆ ನೀಡಿದ್ದಾರೆ.

    ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ರಾಗಿಣಿ, ಆರ್‌ಡಿ ವೆಲ್‍ಫೇರ್ ವತಿಯಿಂದ 300ಕ್ಕೂ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರಿಯರ್ಸ್‍ಗೆ ಊಟ, ಸಿಹಿ ಹಂಚಿದ್ದೇವೆ. ನಮಗೆ ಹೀಗೆ ಬೆಂಬಲ ನೀಡುತ್ತಿರಿ ಎಂದು ಬರೆದು ಊಟ ನೀಡುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

    https://twitter.com/raginidwivedi24/status/1258067253234298880

    ಕಳೆದ ಕೆಲವು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ 150 ವೈದ್ಯಕೀಯ ಸಿಬ್ಬಂಧಿಗಳಿಗೆ ಮನೆಯಲ್ಲಿ ಅಡುಗೆ ತಯಾರಿಸಿ ಕಳುಹಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಆರ್‌ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ಅವರು ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡಿದ್ದರು. ಹಾಗೆಯೇ ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡಿದ್ದರು. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆ ಮಾಡಿದ್ದರು.

    ರಾಗಿಣಿ ಅವರು ಲಾಕ್‍ಡೌನ್ ಸಂಕಷ್ಟದಲ್ಲಿ ಬಡವರು, ಸಿನಿಮಾ ರಂಗದ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಗಿಣಿ ಅವರು ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿರುವುದು ಎಲ್ಲರ ಮನಗೆದ್ದಿದೆ.

  • ಜಗ್ಗಿ ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ: ಪರಿಮಳ ಜಗ್ಗೇಶ್

    ಜಗ್ಗಿ ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ: ಪರಿಮಳ ಜಗ್ಗೇಶ್

    ಬೆಂಗಳೂರು: 1984ರಲ್ಲಿ ಜಗ್ಗಿಯನ್ನು ಮದ್ವೆಯಾದಾಗ ಇಷ್ಟು ದೊಡ್ಡ ಪರಿವಾರ ಸಿಗುತ್ತದೆ ಎಂದು ನೆನೆಸಿರಲಿಲ್ಲ ಎಂದು ನವರಸ ನಾಯಕ ಜಗ್ಗೇಶ್ ಅವರು ಪತ್ನಿ ಪರಿಮಳ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

    ಜಗ್ಗೇಶ್ ದಂಪತಿಗೆ ಇಂದು ಸುದಿನ, ಯಾಕೆಂದರೆ ಹಲವಾರು ಅಡೆತಡೆಗಳ ಮಧ್ಯೆ ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾಗಿ ಇಂದಿಗೆ 36 ವರ್ಷಗಳಾಗಿವೆ. ಮನೆಯವರ ವಿರೋಧದ ನಡುವೆಯೂ ಜಗ್ಗೇಶ್ ಅವರು ಪ್ರೀತಿಸಿ ಮದುವೆಯಾಗಿ ಇಂದಿಗೆ 36ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅಚರಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿಯೇ ಪರಿಮಳ ಅವರು, ಈ ರೀತಿ ಟ್ವೀಟ್ ಮಾಡಿದ್ದಾರೆ.

    ಜಗ್ಗೇಶ್ ಅವರ ಮದುವೆ ನಡೆದಿದ್ದೆ ಒಂದು ರೋಚಕ ಘಟನೆ. 1984 ಮಾರ್ಚ್ 22 ರಂದು ಜಗ್ಗೇಶ್ ದಂಪತಿಯ ಮದುವೆ ನಡೆದಿತ್ತು. ಹಾಗೇ ನೋಡುವುದಾದರೆ ಮದುವೆಯಾದ ಜಗ್ಗೇಶ್ ಅವರಿಗೆ 19 ವರ್ಷ ಆಗಿದ್ದರೆ ಪರಿಮಳ ಅವರಿಗೆ 14 ವರ್ಷ. ಜಗ್ಗೇಶ್ ಮೊದಲ ವರ್ಷದ ಡಿಗ್ರಿ ಓದುತ್ತಿದ್ದರೆ, ಪರಿಮಳ ಅವರು ಆಗ ತಾನೇ 9ನೇ ತರಗತಿಯಲ್ಲಿ ಓದುತ್ತಿದ್ದರು.

    ಅಂದು ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಮಟ್ಟಕ್ಕೆ ಪ್ರೀತಿ ಮಾಡುತ್ತಿದ್ದ ಈ ಜೋಡಿ ಮನೆಯವರ ವಿರೋಧದ ನಡುವೆ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆಯಾಗಿತ್ತು. ಮಗಳು ಚಿಕ್ಕವಳು ಎಂಬ ಕಾರಣಕ್ಕೆ ಈ ಮದುವೆಗೆ ಪರಿಮಳ ಅವರ ಕುಟುಂಬದವರು ಒಪ್ಪಿರಲಿಲ್ಲ. ಆದರೆ ಪರಿಮಳ ಅವರನ್ನು ಹುಚ್ಚನಂತೆ ಪ್ರೀತಿ ಮಾಡುತ್ತಿದ್ದ ಜಗ್ಗೇಶ್ ಅವರು ಅಂದು ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ವಿರೋಧದ ನಡುವೆ ಮದುವೆಯಾಗಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡಿ ಪರಿಮಳ ಅವರನ್ನು ಪಡೆದುಕೊಂಡಿದ್ದರು.

    ಜಗ್ಗೇಶ್ ಹಾಗೂ ಪರಿಮಳ ಅವರು ಮದುವೆಯಾದಾಗ ಇನ್ನೂ ಮೈನರ್ ಆಗಿದ್ದ ಕಾರಣ, ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದು ಪರಿಮಳ ಕುಟುಂಬದವರು ಜಗ್ಗೇಶ್ ಅವರ ಮೇಲೆ ಅಪಹರಣ ಕೇಸ್ ಬುಕ್ ಮಾಡಿದ್ದರು. ಅಷ್ಟೋತ್ತಿಗೆ ಕೆಲ ಸಿನಿಮಾಗಳಲ್ಲಿ ಜಗ್ಗೇಶ್ ಅಭಿನಿಸಿದ್ದ ಕಾರಣ ಚಿತ್ರನಟನೋರ್ವ ಯುವತಿಯನ್ನು ಅಪಹರಿಸಿದ್ದಾನೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

    ಈ ಇಲ್ಲದರ ನಡುವೆ ಅವರ ಮದುವೆ ಕೇಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಅಂದಿನ ನ್ಯಾಯಾಧೀಶರು ಜಗ್ಗೇಶ್ ಮತ್ತು ಪರಿಮಳ ಅವರು ಪ್ರೀತಿಗೆ ಬೆಲೆಕೊಟ್ಟು, ಮಾನವೀಯತೆಯ ಅಧಾರದ ಮೇಲೆ ಪ್ರೇಮಿಗಳ ಪರವಾಗಿ ತೀರ್ಪು ನೀಡಿದ್ದರು. ಅಂದು ಅಲ್ಲೇ ಜೀವನದಲ್ಲಿ ಇಬ್ಬರು ಒಟ್ಟಿಗೆ ಚೆನ್ನಾಗಿ ಬದುಕಬೇಕು ಎಂದು ತೀರ್ಮಾನಿಸಿದ ಜಗ್ಗೇಶ್ ದಂಪತಿ ಇಂದು ಮಾದರಿ ಜೋಡಿಯಾಗಿ ಬಾಳುತ್ತಿದ್ದಾರೆ.

  • ವಿವಾಹ ವಾರ್ಷಿಕೋತ್ಸವಕ್ಕೆ ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ರಕ್ಷಿತಾ ವಿಶ್

    ವಿವಾಹ ವಾರ್ಷಿಕೋತ್ಸವಕ್ಕೆ ಹ್ಯಾಪಿ ಫ್ರೆಂಡ್‍ಶಿಪ್ ಡೇ ಎಂದು ರಕ್ಷಿತಾ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ದಂಪತಿ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ರಕ್ಷಿತಾ ಮತ್ತು ಪ್ರೇಮ್ ದಂಪತಿ ಮದುವೆಯಾಗಿ ಇಂದು 13 ವರ್ಷಗಳಾಗಿದೆ. ಹೀಗಾಗಿ ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಿತಾ ತಮ್ಮ ಪತಿಗೆ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯ ತಿಳಿಸಿದ್ದಾರೆ.

    ರಕ್ಷಿತಾ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಭ್ರಮದಂದು ಸ್ನೇಹಿತರ ದಿನಾಚರಣೆಗೆ ಶುಭ ಕೂರಿದ್ದಾರೆ. ಈ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವ ಫ್ರೆಂಡ್‍ಶಿಪ್ ಡೇಗೆ ಹೋಲಿಸಿದ್ದಾರೆ. “ಸ್ನೇಹಿತರ ದಿನಾಚರಣೆಗೆ ಶುಭಾಯಗಳು. ನಾವಿಬ್ಬರು ಮದುವೆಯಾಗಿ 13 ವರ್ಷಗಳಾಗಿದೆ. ನಾವಿಬ್ಬರು ಹೀಗೆ ಮುಂದಕ್ಕೂ ಇರುತ್ತೇವೆ ಎಂದು ನಾನು ಭಾವಿಸಿದ್ದೇನೆ. ಯಾವಾಗಲೂ ಸಂತೋಷವಾಗಿರಿ. ದೇವರು ನಿಮಗೆ ಆರ್ಶೀವಾದ ಮಾಡಲಿ” ಎಂದು ರಕ್ಷಿತಾ ಅವರು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಜೊತೆಗೆ ತಮ್ಮ ಮದುವೆಯ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಇಬ್ಬರಿಗೂ ಶುಭಾಶಯ ಕೋರುತ್ತಿದ್ದಾರೆ. ಮಾರ್ಚ್ 9, 2007 ರಂದು ರಕ್ಷಿತಾ ಮತ್ತು ಪ್ರೇಮ್ ಹಸೆಮಣೆ ಏರಿದ್ದರು. ಈ ದಂಪತಿಗೆ ಸೂರ್ಯ ಎನ್ನುವ ಮಗನಿದ್ದಾನೆ.

    https://www.instagram.com/p/B9fB96FpIdE/

    ರಕ್ಷಿತಾ ಮದುವೆ ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅನೇಕ ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಪ್ರೇಮ್ ‘ಏಕ್ ಲವ್ ಯಾ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಕ್ಷಿತಾ ನಿರ್ಮಾಣ ಮಾಡುತ್ತಿದ್ದು, ಜೊತೆಗೆ ಈ ಸಿನಿಮಾದ ಹಾಡೊಂದಕ್ಕೆ ರಕ್ಷಿತಾ ಅವರು ಡ್ಯಾನ್ಸ್ ಮಾಡಿದ್ದಾರೆ.

  • 8ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಸನ್ನಿ ಲಿಯೋನ್‍ನಿಂದ ಕ್ಯೂಟ್ ಪೋಸ್ಟ್

    8ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಸನ್ನಿ ಲಿಯೋನ್‍ನಿಂದ ಕ್ಯೂಟ್ ಪೋಸ್ಟ್

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬುಧವಾರ ತಮ್ಮ 8ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತಿ ಡೇನಿಯಲ್ ವೆಬರ್ ಹಾಗೂ ತಮ್ಮ ಮಗಳು ನಿಶಾ ಕೌರ್ ಜೊತೆ ಆಚರಿಸಿಕೊಂಡಿದ್ದಾರೆ. ಸನ್ನಿ ತನ್ನ ವಿವಾಹ ವಾರ್ಷಿಕೋತ್ಸವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ತನ್ನ ಇನ್‍ಸ್ಟಾಗ್ರಾಂನಲ್ಲಿ, “ವಿವಾಹ ವಾರ್ಷಿಕೋತ್ಸದ ಶುಭಾಶಯಗಳು ಡೇನಿಯಲ್. ನೀನು ನನ್ನ ಜೀವನದ ಅತ್ಯುತ್ತಮದ ಭಾಗ. ನೀನು ನನ್ನ ಆತ್ಮೀಯ ಗೆಳೆಯ ಹಾಗೂ ನಮ್ಮ ಮಕ್ಕಳಿಗೆ ಅತ್ಯುತ್ತಮ ತಂದೆ. ಖುಷಿಯ ವಿಚಾರವೆನೆಂದರೆ ನಮ್ಮ ಮಗಳು ನಮಗಾಗಿ ಕೇಕ್ ತಯಾರಿಸಿದ್ದಾಳೆ” ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷ ಸರೊಗಸಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು.

    ಸನ್ನಿ ಲಿಯೋನ್ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್-5 ಕಾರ್ಯಕ್ರಮದ ಮೂಲಕ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು, ‘ಜಿಸ್ಮ್-2’, ‘ಹೇಟ್ ಸ್ಟೋರಿ-2’, ‘ರಾಗಿಣಿ ಎಂಎಂಎಸ್-2’ ಹಾಗೂ ‘ಏಕ್ ಪೆಹಲಿ ಲೀಲಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

    ಸದ್ಯ ಸನ್ನಿ ಲಿಯೋನ್ ಈಗ `ವೀರಮಾದೇವಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.