Tag: marraige

  • ವರ `ಚೋಲಿ ಕೆ ಪೀಚೆ ಕ್ಯಾ ಹೈ’ ಡ್ಯಾನ್ಸ್ ಮಾಡಿದ್ದಕ್ಕೆ ಮದ್ವೆ ನಿಲ್ಲಿಸಿದ ವಧುವಿನ ತಂದೆ

    ವರ `ಚೋಲಿ ಕೆ ಪೀಚೆ ಕ್ಯಾ ಹೈ’ ಡ್ಯಾನ್ಸ್ ಮಾಡಿದ್ದಕ್ಕೆ ಮದ್ವೆ ನಿಲ್ಲಿಸಿದ ವಧುವಿನ ತಂದೆ

    ನವದೆಹಲಿ: ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದಕ್ಕೆ ವಧುವಿನ ತಂದೆ ಮದುವೆಯನ್ನೇ ನಿಲ್ಲಿಸಿದ ವಿಚಿತ್ರ ಘಟನೆಯೊಂದು ನವದೆಹಲಿಯಲ್ಲಿ (NewDelhi) ನಡೆದಿದೆ.

    ಸಾಮಾನ್ಯವಾಗಿ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದು ಸಹಜ. ಆದರೆ ದೆಹಲಿಯ ಮದುವೆಯೊಂದರಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಅಚಾತುರ್ಯ ನಡೆದಿದೆ. ಮದುವೆಯ ಮೆರವಣಿಗೆ ವೇಳೆ ವರನ ಸ್ನೇಹಿತರ ಒತ್ತಾಯದ ಮೇರೆಗೆ ವರ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆ ನಿಂತಿಹೋಗಿದೆ.ಇದನ್ನೂ ಓದಿ: ಚರ್ಚ್‌ನಲ್ಲಿ ಪಾದ್ರಿ ಮೇಲೆ ಭಿನ್ನಮತೀಯ ಗುಂಪಿನಿಂದ ಹಲ್ಲೆ

    ಮೆರವಣಿಗೆಯಲ್ಲಿ ವರನಿಗೆ ಡ್ಯಾನ್ಸ್ ಮಾಡುವಂತೆ ಆತನ ಸ್ನೇಹಿತರು ಒತ್ತಾಯಿಸಿದ್ದಾರೆ. ಆಗ ಬಾಲಿವುಡ್‌ನ `ಕಳ್ ನಾಯಕ್’ ಸಿನಿಮಾದ ಪ್ರಸಿದ್ಧ ಹಾಡು `ಚೋಲಿ ಕೆ ಪೀಚೆ ಕ್ಯಾ ಹೈ’ ಪ್ರಾರಂಭವಾಗಿದ್ದು, ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. ಅಲ್ಲಿದ್ದ ಅತಿಥಿಗಳು ಕೂಡ ಆತನನ್ನು ಹುರಿದುಂಬಿಸಿದರು. ಆದರೆ ಇದನ್ನು ಕಂಡ ವಧುವಿನ ತಂದೆ ಕೋಪಗೊಂಡು ಮೆರವಣಿಗೆಯನ್ನು ನಿಲ್ಲಿಸಿ ಮದುವೆ ನಿಲ್ಲಿಸಿದ್ದಾರೆ.

    ಇದನ್ನು ಕಂಡ ವರ, ವಧುವಿನ ತಂದೆಯ ಬಳಿ ಹೋಗಿ ಇದೆಲ್ಲವೂ ಮೋಜು, ತಮಾಷೆ ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದನ್ನು ಲೆಕ್ಕಿಸದೇ ಸಂಪೂರ್ಣವಾಗಿ ವಧು ಹಾಗೂ ವರನ ಮನೆಯವರೊಂದಿಗಿನ ಸಂಪರ್ಕವನ್ನು ಕಡಿದುಕೊಂಡರು ಎಂದು ಮೂಲಗಳು ತಿಳಿಸಿವೆ.

    ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅತಿಥಿಗಳನ್ನು ರಂಜಿಸಲು ವರ ಡ್ಯಾನ್ಸ್ ಮಾಡಿರಬಹುದು, ವಧುವಿನ ತಂದೆ ಸರಿಯಾಗಿ ಮಾಡಿದ್ದಾರೆ, ಇಲ್ಲದಿದ್ದರೆ ಪ್ರತಿ ದಿನ ಡ್ಯಾನ್ಸ್ ನೋಡಬೇಕಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಚಂದೌಲಿಯಲ್ಲಿ ವರನೊಬ್ಬ ಊಟ ಬಡಿಸಲು ವಿಳಂಬ ಮಾಡಿದ ಕಾರಣ ತನ್ನ ಮದುವೆಯನ್ನು ರದ್ದುಗೊಳಿಸಿದ್ದ. ಬಳಿಕ ಬೇರೆಯವರೊಂದಿಗೆ ಮದುವೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು.ಇದನ್ನೂ ಓದಿ: Mandya | ಕೇಕ್‌ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಬಾಲಕಿ ಮೇಲೆ ಗ್ಯಾಂಗ್‌ ರೇಪ್

  • ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!

    ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!

    ಮಂಡ್ಯದವರಾದ (Mandya) ಎಸ್‌ಎಂ ಕೃಷ್ಣ (SM Krishna) ಅವರು ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆ ಗ್ರಾಮದ ಪ್ರೇಮಾ ಅವರನ್ನು 1966 ಏ.29 ರಂದು ವಿವಾಹವಾದರು. ಆದರೆ ಎಸ್‌ಎಂಕೆ ಅವರು ಮದುವೆಗೂ ಮುನ್ನ ಭಾವಿ ಪತ್ನಿಯ ಸಂದರ್ಶನ ಮಾಡಿದ್ದರು.ಇದನ್ನೂ ಓದಿ: ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ಮೊದಲ ಬಾರಿಗೆ ಪ್ರೇಮಾ ಅವರನ್ನು ನೋಡಲು ಬಂದಾಗ, ಎಸ್‌ಎಂಕೆ ಕೇವಲ ಅವರನ್ನು ನೋಡಲು ಬಂದಿಲ್ಲ ನಾನು ಅವರ ಜೊತೆ ಮಾತನಾಡಬೇಕು ಎಂದು ಹೆಣ್ಣಿನ ಕುಟುಂಬಕ್ಕೆ ತಿಳಿಸಿದ್ದರು. ಅನುಮತಿ ಪಡೆದು ಬಳಿಕ ಅವರೊಟ್ಟಿಗೆ ಮಾತನಾಡಿದ್ದರು. ತಾವು ಏನು ಓದಿದ್ದೀರಿ? ಯಾವ ಪುಸ್ತಕ ಓದಿದ್ದೀರಿ? ನಾನು ಎಂಎಲ್‌ಎ ಅಂತಾ ಗೊತ್ತಾ? ಅದರಲ್ಲೂ ವಿರೋಧಪಕ್ಷದ ಎಂಎಲ್‌ಎ ಎಂಬುದು ಗೊತ್ತಾ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಸಮಯದಲ್ಲಿಯೇ ಪ್ರೇಮಾ ಅವರೂ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ನೀಡಿದ್ದರು. ತಮ್ಮ ವಿಚಾರವನ್ನು ಪೇಪರ್‌ನಲ್ಲಿ ಓದಿದ್ದೇನೆ. ತಮ್ಮ ಭಾಷಣಗಳಿಂದ ತಮ್ಮ ಬಗ್ಗೆ ಅಭಿಮಾನ ಹೊಂದಿರುವುದಾಗಿಯೂ ಪ್ರತಿಕ್ರಿಯಿಸಿದ್ದರು.

    ಆಗ ಕೃಷ್ಣ ಅವರು ತಾವು ವಿರೋಧ ಪಕ್ಷದಲ್ಲಿರುವುದಾಗಿ ತಿಳಿಸಿ, ಹೋರಾಟವೇ ನನ್ನ ಮುಖ್ಯ ಗುರಿಯಾಗಿದೆ. ಜೀವನದಲ್ಲಿ ಸುಖ ಎನ್ನುವುದನ್ನು ನೀವು ಯಾವ ಪ್ರಮಾಣದಲ್ಲಿ ಬಯಸುವಿರೋ ಅದು ನಿಮಗೆ ಸಿಗದೇ ಹೋಗಬಹುದು. ನಾನು ಸದಾ ಹೋರಾಟದ ಗುಂಗಿನಲ್ಲೇ ಇರುತ್ತೇನೆ. ನಮ್ಮ ಸಂಸಾರದ ವಿಚಾರಗಳು ಅಪ್ರಸ್ತುತ ಆಗಬಹುದು. ಕೆಲವು ಬಾರಿ ಜೈಲಿಗೂ ಹೋಗಬಹುದು. ಇದನ್ನೆಲ್ಲಾ ಯೋಚನೆ ಮಾಡಿ ನನ್ನ ಜೊತೆ ಬಾಳ್ವೆ ನಡೆಸಬೇಕಾಗುತ್ತದೆ ಎಂದು ಹೇಳಿ, ನೀವು ಇದಕ್ಕೆಲ್ಲಾ ಸಿದ್ಧರಿದ್ದೀರಾ ಎಂದು ಪ್ರಶ್ನೆ ಮಾಡಿದ್ದರಂತೆ. ಕೃಷ್ಣ ಅವರಿಗೆ ಮನಸೋತಿದ್ದ ಪ್ರೇಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿದರು. ಮುಂದೆ ಪ್ರೇಮಾ ಕೃಷ್ಣ (Prema Krishna) ಅವರು ಕೃಷ್ಣರವರ ರಾಜಕೀಯ ಜೀವನದಲ್ಲಿ ಬೆಂಗಾವಲಾಗಿ ನಿಂತಿದ್ದು ಇತಿಹಾಸವೇ ಹೌದು.ಇದನ್ನೂ ಓದಿ: ಇಂದು ಸಂಜೆ ಹುಟ್ಟೂರಿನಲ್ಲಿ ಎಸ್‌ಎಂಕೆ ಅಂತ್ಯಕ್ರಿಯೆ – ಏನೇನು ಸಿದ್ಧತೆ ನಡೆದಿದೆ?

  • ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

    ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

    ರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು (PV Sindhu) ಇದೇ 22 ರಂದು ಉದಯಪುರದಲ್ಲಿ (Udaipur) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

    ಭಾನುವಾರ (ಡಿ.01) ರಂದು ಲಕ್ನೋದಲ್ಲಿ (Lucknow) ನಡೆದ 2024ರ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಇದನ್ನೂ ಓದಿ: ಹುಟ್ಟೂರಿಗೆ ಶೋಭಿತಾ ಮೃತದೇಹ – ಇಂದು ಅಂತ್ಯಕ್ರಿಯೆ

    ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್ ಎಂಬ ಖಾಸಗಿ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟ ದತ್ತ ಸಾಯಿ ಎಂಬವರನ್ನು ವಿವಾಹವಾಗಲಿದ್ದಾರೆ.

    ಈ ಕುರಿತು ಸಿಂಧು ತಂದೆ ಪಿವಿ ರಮಣ ಮಾಹಿತಿ ನೀಡಿದ್ದು, ಡಿ.20 ರಿಂದ ಮದುವೆ ಶಾಸ್ತ್ರಗಳು ಶುರುವಾಗಲಿದೆ. ಡಿ.22 ರಂದು ಉದಯಪುರದಲ್ಲಿ ಮದುವೆ ನಡೆಯಲಿದೆ. ಇನ್ನೂ ಡಿ.24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಸಿಂಧು ಇಲ್ಲಿಯವರೆಗೆ ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಇದನ್ನೂ ಓದಿ: ಚಿತ್ರದುರ್ಗದಲ್ಲಿ ವ್ಯಾಪಕ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

  • ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ರೈಲು ವಿಳಂಬ – ಸರಿಯಾದ ಸಮಯಕ್ಕೆ ವರನನ್ನು ಮದುವೆಗೆ ಕರೆದೊಯ್ದ ರೈಲ್ವೇ ಇಲಾಖೆ

    ಮುಂಬೈ: ರೈಲು ಬರಲು ತಡವಾದ ಹಿನ್ನೆಲೆ ನಿಗದಿ ಪಡಿಸಿದ ಮೂಹೂರ್ತದಲ್ಲಿ ಮಂಟಪಕ್ಕೆ ತಲುಪಬೇಕಿದ್ದ ವರನನ್ನು ರೈಲ್ವೆ ಇಲಾಖೆ (Railway Department) ಸರಿಯಾದ ಸಮಯಕ್ಕೆ ತಲುಪಿಸಿರುವ ಘಟನೆ ನಡೆದಿದೆ.

    ಮುಂಬೈ (Mumbai) ಮೂಲದ ವರ ಚಂದ್ರಶೇಖರ್ ವಾಘ್ ಹಾಗೂ ಅವರ ಕುಟುಂಬಸ್ಥರು ಗುವಾಹಟಿಯಲ್ಲಿ (Guwahati) ನಿಗದಿಯಾಗಿದ್ದ ಮದುವೆಗಾಗಿ ಮುಂಬೈನ ಕಲ್ಯಾಣ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಮುಂಬೈನಿಂದ ಗುವಾಹಟಿಗೆ ಹೊರಟಿದ್ದ ಗೀತಾಂಜಲಿ ಎಕ್ಸಪ್ರೆಸ್‌ (Geetanjali Express) ಪಶ್ಚಿಮ ಬಂಗಾಳದ (West Bengal) ಹೌರಾ ಬಳಿ ಇರುವ ಸಾಂತರಗಾಭಿ ನಿಲ್ದಾಣಕ್ಕೆ 4 ಗಂಟೆ ತಡವಾಗಿ ತಲುಪಿದೆ.ಇದನ್ನೂ ಓದಿ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

    ಇದರಿಂದ ಆತಂಕಗೊಂಡ ವರ ಕೂಡಲೇ ತನ್ನ ಎಕ್ಸ್ (X) ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರೈಲ್ವೇ ಇಲಾಖೆಗೆ ಮನವಿ ಮಾಡಿಕೊಂಡಿದ್ದು, ಕೂಡಲೇ ಇಲಾಖೆ ಆತನ ಮನವಿಗೆ ಸ್ಪಂದಿಸಿ, ಮುಹೂರ್ತದ ಸಮಯಕ್ಕೆ ಸರಿಯಾಗಿ ಮಂಟಪಕ್ಕೆ ತಲುಪುವಂತೆ ಸಹಾಯ ಮಾಡಿದೆ.

    ಘಟನೆ ಏನು?
    ನ.14ರಂದು ಚಂದ್ರಶೇಖರ್ ವಾಘ 35 ಜನ ಕುಟುಂಬಸ್ಥರೊಂದಿಗೆ ಮುಂಬೈನ ಕಲ್ಯಾಣ ನಿಲ್ದಾಣದಿಂದ (Kalyan Railway Station) ಗುವಾಹಟಿಗೆ ಹೋಗಬೇಕಿತ್ತು. ಕಲ್ಯಾಣ ರೈಲು ನಿಲ್ದಾಣದಿಂದ ಬೆಳಿಗ್ಗೆ 6:55ಕ್ಕೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹತ್ತಿ, ನ.15ರ ಮಧ್ಯಾಹ್ನ 1:05ಕ್ಕೆ ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ (Howrah Juntion) ತಲುಪಬೇಕಿತ್ತು. ಅಲ್ಲಿಂದ ಸಂಜೆ 4.05ಕ್ಕೆ ಇರುವ ಸರೈಘಾಟ್ ಎಕ್ಸಪ್ರೆಸ್‌ ರೈಲು ಹತ್ತಿ ಗುವಾಹಟಿ ತಲುಪುವ ಯೋಜನೆ ಅವರದಾಗಿತ್ತು. ಆದರೆ ಗೀತಾಂಜಲಿ ಎಕ್ಸಪ್ರೆಸ್‌ ರೈಲು ಹೌರಾ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿರುವ ಸಾಂತರಗಾಛಿ ರೈಲು ನಿಲ್ದಾಣಕ್ಕೆ ತಲುಪಬೇಕಾಗಿದ್ದ ಸಮಯಕ್ಕಿಂತ 4 ಗಂಟೆ ತಡವಾಗಿ ಬಂದಿತ್ತು. ಇದರಿಂದ ವಿಚಲಿತರಾದ ವರ ಕೂಡಲೇ `ಎಕ್ಸ್’ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿ, ನೆರವು ನೀಡುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದರು.

    ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ಗೀತಾಂಜಲಿ ಎಕ್ಸ್ಪ್ರೆಸ್ ರೈಲು ಬರುವವರೆಗೂ ಸರೈಘಾಟ್ ಎಕ್ಸಪ್ರೆಸ್‌ ರೈಲನ್ನು ಹೌರಾ ಜಂಕ್ಷನ್‌ನಲ್ಲಿಯೇ ನಿಲ್ಲಿಸಿದರು. ಲೋಕೊ ಪೈಲಟ್ ಗೀತಾಂಜಲಿ ಎಕ್ಸಪ್ರೆಸ್‌ ರೈಲಿನ ವೇಗವನ್ನು ಹೆಚ್ಚಿಸಿದರು.

    ರೈಲು ತಲುಪಿದ ತಕ್ಷಣ ರೈಲ್ವೆ ಸಿಬ್ಬಂದಿಗಳು ತಕ್ಷಣವೇ ವರನ ಕುಟುಂಬ ಮತ್ತು ಅವರ ಬ್ಯಾಗುಗಳನ್ನು ಇನ್ನೊಂದು ಪ್ಲಾಟ್‌ಫಾರ್ಮ್ಗೆ ಸಾಗಿಸಲು ನೆರವಾದರು. ವಯೋವೃದ್ಧರಿಗಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ರೈಲು ಸಂಜೆ 4:08 ನಿಮಿಷಕ್ಕೆ ಹೌರಾ ನಿಲ್ದಾಣ ತಲುಪಿತು. ಸರೈಘಾಟ್ ಎಕ್ಸಪ್ರೆಸ್‌ ಸಂಜೆ 4.19ಕ್ಕೆ ಹೊರಟು ಶನಿವಾರ ಬೆಳಿಗ್ಗೆ 10.05ಕ್ಕೆ ಸರಿಯಾಗಿ ಗುವಾಹಟಿ ತಲುಪಿತು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

    ಸರಿಯಾಗಿ ಸಮಯಕ್ಕೆ ತಲುಪಲು ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಸಹಾಯ ಮಾಡಿದ ರೈಲ್ವೆ ಇಲಾಖೆ ಹಾಗೂ ಅಧಿಕಾರಿಗಳಿಗೆ ಚಂದ್ರಶೇಖರ್ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಪಿಡಿಓ ಪ್ರಶ್ನೆ ಪತ್ರಿಕೆ ಸೋರಿಕೆ? – ರಾಯಚೂರಿನಲ್ಲಿ ರಸ್ತೆ ಬಂದ್ ಮಾಡಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

  • ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಾಟ!

    ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಾಟ!

    – ಮದುವೆ ಮಾಡಿಕೊಡುವಂತೆ ಯುವತಿ ತಾಯಿಗೆ ಧಮ್ಕಿ

    ಬೆಳಗಾವಿ: ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಕೊಲೆ ಪ್ರಕರಣದ ನಂತರವೂ ಪಾಗಲ್ ಪ್ರೇಮಿಗಳ ಕಾಟ ತಪ್ಪಿಲ್ಲ. ಇದೀಗ ಬೆಳಗಾವಿಯಲ್ಲೊಬ್ಬ (Belagavi) ಸೈಕೋಪಾತ್ ಕಾಣಿಸಿಕೊಂಡಿದ್ದಾನೆ.

    ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬ ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಕುಟುಂಬ ಕಂಗಾಲಾಗಿದೆ. ಯುವತಿ ಅದೇ ಗ್ರಾಮದ ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿದ್ದಾಳೆ. ಬಿಕಾಂ ಓದುತ್ತಿರುವ ಈಕೆ ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ತಿಪ್ಪಣ್ಣ ರೇಗಿಸುತ್ತಿದ್ದನು.

    ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಿ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಪಾಗಲ್ ಪ್ರೇಮಿ ಕಾಟದಿಂದ ಯುವತಿ ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಾಳೆ. ಪ್ರೀತಿಸು, ಮದುವೆ ಆಗೆಂದು ಕಳೆದ ಮೂರು ವರ್ಷಗಳಿಂದ ಡೋಕರೆ ಪೀಡಿಸುತ್ತಿದ್ದಾನೆ. ಮದುವೆ ಮಾಡಿಕೊಡದಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ರಾತ್ರಿ ಸುರಿದ ಮಳೆಗೆ ರಾಜಕಾಲುವೆಗೆ ಉರುಳಿದ ಆಟೋ – ಚಾಲಕ ದುರ್ಮರಣ

    ಕೆಲ ತಿಂಗಳ ಹಿಂದೆ ಯುವತಿ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದನು. ಯಾವುದೇ ಕೆಲಸ ಮಾಡದೇ ಕುಡಿದು ಊರಲ್ಲಿ ಸುತ್ತಾಡುವ ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಕುಟುಂಬ ಪೊಲೀಸರ ಮೊರೆ ಹೋಗಿದೆ. ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಗ ಪೊಲೀಸರ ವಾರ್ನ್‍ಗೆ ಕೆಲ ದಿನಗಳ ಕಾಲ ಯುವತಿ ತಂಟೆಗೆ ಹೋಗದೇ ಸೈಲೆಂಟ್ ಆಗಿದ್ದ. ಈಗ ಮತ್ತೆ ಬಾಲಬಿಚ್ಚಿರುವ ತಿಪ್ಪಣ್ಣ, ಯುವತಿಯ ಮನೆ ಮೇಲೆ ಕಲ್ಲು ತೂರಿ ಅಟ್ಟಹಾಸ ಮೆರೆದಿದ್ದಾನೆ.

    ಸದ್ಯ ಕುಟುಂಬ ಮತ್ತೆ ರಕ್ಷಣೆ ಕೋರಿ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದೆ. ಇದೀಗ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ರಕ್ಷಣೆಗಾಗಿ ಯುವತಿ ಮನೆಗೆ ಓರ್ವ ಪೊಲೀಸ್ ಪೇದೆಯನ್ನು ನೇಮಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ – ಸೂಪರ್‌ ಜೋಡಿ ಅಂದ್ರು ಫ್ಯಾನ್ಸ್‌

    ಖ್ಯಾತ ನಟಿ ಹರಿಪ್ರಿಯಾ (Haripriya) ಹಸೆಮಣೆ ಏರಲು ಸಜ್ಜಾಗಿದ್ದು, ಸ್ಯಾಂಡಲ್ ವುಡ್‌ (SandalWood) ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗಿದೆ.

     

    View this post on Instagram

     

    A post shared by Hariprriya (@iamhariprriya)

    ನಟಿ ಅದಿತಿ ಪ್ರಭುದೇವ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಇದೇ ತಿಂಗಳ 27ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬೆನ್ನಲ್ಲೇ ನಟಿ ಹರಿಪ್ರಿಯಾ ಮದುವೆ ವಿಚಾರ ಕೂಡ ಭಾರೀ ಸದ್ದು ಮಾಡ್ತಿದೆ. ಆಪ್ತ ಮೂಲಗಳು ಹೇಳಿರುವ ಪ್ರಕಾರ ಹರಿಪ್ರಿಯಾ ಮದುವೆಗೆ ಸಜ್ಜಾಗಿದ್ದು, ಹುಡುಗ ಕೂಡ ಫಿಕ್ಸ್ ಆಗಿದ್ದಾರಂತೆ. ಇತ್ತೀಚಿಗಷ್ಟೆ ಮೂಗು ಚುಚ್ಚಿಕೊಂಡಿದ್ದ ಹರಿಪ್ರಿಯಾ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡಿತ್ತು. ಆಗ ಸದ್ಯದಲ್ಲೇ ಅವರು ಹಸೆಮಣೆ ಏರುತ್ತಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿತ್ತು. ಇದೀಗ ಈ ಸುದ್ದಿ ನಿಜ ಎನ್ನುತ್ತಿವೆ ಆಪ್ತ ಮೂಲಗಳು. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ

    ಹೌದು ಬಹುಭಾಷಾ ನಟಿ ಹರಿಪ್ರಿಯಾ ಸ್ಯಾಂಡಲ್ ವುಡ್‌ನ ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್‌ ಮಾಡಿದ್ದಾರೆ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ. ಅಂದಹಾಗೆ ಈ ವಿಚಾರ ರಿವೀಲ್ ಆಗಿದ್ದು ಹರಿಪ್ರಿಯಾ ಅವರ ಮೂಗು ಚುಚ್ಚವ ವೇಳೆ. ಇತ್ತೀಚಿಗೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಅದರ ವೀಡಿಯೋವನ್ನು ಶೇರ್‌ ಮಾಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಜೊತೆಯಲ್ಲಿದ್ದರು. ಹರಿಪ್ರಿಯಾ ಮೂಗು ಚುಚ್ಚಿಸಿದ್ದೇ ವಸಿಷ್ಠ ಸಿಂಹ ಎಂದು ಹೇಳಲಾಗ್ತಿದೆ. EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜೋಡಿ ಹಕ್ಕಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಟ್ನಲ್ಲಿ ಜೋಡಿ ಅದ್ಧೂರಿಯಾಗಿದೆ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೇಕಪ್‍ನಲ್ಲೇ ಕಾರು ಡ್ರೈವ್ ಮಾಡಿ ಮಂಟಪಕ್ಕೆ ತೆರಳಿದ ವಧು!

    ಮೇಕಪ್‍ನಲ್ಲೇ ಕಾರು ಡ್ರೈವ್ ಮಾಡಿ ಮಂಟಪಕ್ಕೆ ತೆರಳಿದ ವಧು!

    – ನೆಟ್ಟಿಗರಿಂದ ಮೆಚ್ಚುಗೆ

    ಭುವನೇಶ್ವರ: ಮದುಮಗಳಂತೆ ರೆಡಿಯಾಗಿರುವ ಯುವತಿಯೊಬ್ಬಳು ಕಾರು ಓಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.

    ಹೌದು. ಮದುವೆಯಲ್ಲಿ ವರನಿಗಿಂತ ವಧುವಿನ ಎಂಟ್ರಿ ಯಾವತ್ತೂ ಸ್ವಲ್ಪ ವಿಭಿನ್ನವಾಗಿರುತ್ತದೆ. ಅಂತೆಯೇ ಒಡಿಶಾದಲ್ಲಿ ಮದುವೆ ಮಂಟಪಕ್ಕೆ ವಧು ವಿಭಿನ್ನವಾಗಿ ಎಂಟ್ರಿ ಕೊಟ್ಟು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಈ ಘಟನೆ ಭುವನೇಶ್ವರದ ಖಾರಬೆಲಾ ನಗರದಲ್ಲಿ ನಡೆದಿದೆ.

    ಫೆ.21 ಸಾಗರಿಕಾ ಬೆಹೇರ ಅವರ ಜೀವನದ ಪ್ರಮುಖ ಘಟ್ಟ. ಈ ಹಿನ್ನೆಲೆಯಲ್ಲಿ ಆಕೆ ‘ಗೀತಾ ಬ್ರೈಡಲ್ ಸ್ಟುಡಿಯೋ’ ಎಂಬ ಪಾರ್ಲರ್ ಗೆ ತೆರಳಿ ಅಲ್ಲಿ ಅದ್ಧೂರಿ ಅಲಂಕಾರ ಮಾಡಿಕೊಂಡು ಕಾರನ್ನೇರಿ ಸ್ವತಃ ತಾನೇ ಚಾಲನೆ ಮಾಡಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

    ಈ ಸಂಬಂಧ ಮಾಧ್ಯಮದ ಮುಂದೆ ಮಾತನಾಡಿದ ಸಾಗರಿಕಾ, ಮದುವೆಯ ದಿನ ನಾನು ಮೇಕಪ್ ಮಾಡಿಕೊಳ್ಳಲು ಪಾರ್ಲರ್ ಗೆ ಹೋಗಬೇಕಿತ್ತು. ಆದರೆ ನನ್ನ ಕುಟುಂಬಸ್ಥರು ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ನನ್ನನ್ನು ಪಾರ್ಲರ್ ಗೆ ಬಿಟ್ಟು ಬನ್ನಿ ಎಂದು ಯಾರ ಮುಂದೆಯೂ ಕೇಳಿಲ್ಲ. ಕುಟುಂಬದ ಸದಸ್ಯರೊಬ್ಬರನ್ನು ಕರೆದುಕೊಂಡು ಸ್ವತಃ ನಾನೇ ಕಾರು ಓಡಿಸಿಕೊಂಡು ಹೋದೆ ಎಂದು ತಿಳಿಸಿದ್ದಾರೆ.

    ಪಾರ್ಲರ್ ನಲ್ಲಿ ಮೇಕಪ್ ಮಾಡಿಕೊಂಡ ಬಳಿಕ ನಾನು ನೇರವಾಗಿ ಮದುವೆ ಮಂಟಪಕ್ಕೆ ತೆರಳಿದೆ. ಈ ಮಧ್ಯೆ ನನ್ನ ಜೊತೆ ಬಂದವರಿಗೆ ಕಾರು ಓಡಿಸಲು ಬರುತ್ತಿರಲಿಲ್ಲ. ಹೀಗಾಗಿ ಮೇಕಪ್ ಬಳಿಕವೂ ನಾನೇ ಕಾರು ಓಡಿಸಿದೆ. ಅಲ್ಲದೆ ಬಹು ಬೇಗನೇ ಮಂಟಪಕ್ಕೆ ತೆರಳಬೇಕಾಗಿಯೂ ಇತ್ತು ಎಂದು ಸಾಗರಿಕಾ ವಿವರಿಸಿದರು.

    ಸದ್ಯ ಸಾಗರಿಕಾ ಕಾರು ಡ್ರೈವ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಧುವಿನ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಆಸ್ಪತ್ರೆಯಲ್ಲಿ ಪಕ್ಕದ ಬೆಡ್‍ನಲ್ಲಿದ್ದ 55ರ ಮಹಿಳೆಯ ಮೇಲೆ 70ರ ಅಜ್ಜನಿಗೆ ಲವ್!

    ಆಸ್ಪತ್ರೆಯಲ್ಲಿ ಪಕ್ಕದ ಬೆಡ್‍ನಲ್ಲಿದ್ದ 55ರ ಮಹಿಳೆಯ ಮೇಲೆ 70ರ ಅಜ್ಜನಿಗೆ ಲವ್!

    – 4 ಗಂಡು ಮಕ್ಕಳು, 12 ಮೊಮ್ಮಕ್ಕಳ ಒಪ್ಪಿಗೆ
    – ಗ್ರಾಮದ ಜನರ ಮುಂದೆಯೇ ಮದುವೆ

    ಭೋಪಾಲ್: ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಅಂತಾರೆ. ಅಲ್ಲದೆ ಪ್ರೀತಿಗೆ ಜಾತಿ, ವಯಸ್ಸಿನ ಅಂತರ ಕೂಡ ಇಲ್ಲ. ಇದು ಅಕ್ಷರಶಃ ಸತ್ಯವಾದ ಮಾತಾಗಿದ್ದು ಇದಕ್ಕೆ ಪೂರಕ ಎಂಬಂತೆ ಮಧ್ಯಪ್ರದೇಶದಲ್ಲೊಂದು ಘಟನೆ ನಡೆದಿದೆ.

    ಹೌದು. 70 ವರ್ಷದ ಅಜ್ಜನಿಗೆ 55 ಮಹಿಳೆಯ ಮೇಲೆ ಆಸ್ಪತ್ರೆಯಲ್ಲಿ ಪ್ರೇಮಾಂಕುರವಾಗಿದೆ. ಅಲ್ಲದೆ ನೆರೆಹೊರೆಯವರ ಸಮ್ಮುಖದಲ್ಲಿಯೇ ಜೋಡಿ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದೆ.

    ಓಂಕಾರ್ ಸಿಂಗ್ ಹಾಗೂ ಗುಡ್ಡಿಬಾಯ್ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಕ-ಪಕ್ಕದ ಬೆಡ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಇವರಿಬ್ಬರು ಮಾತಾಡುತ್ತಾ ಪರಿಚಯವಾದರು. ಹೀಗೆ ಆದ ಪರಿಚಯ ಪ್ರೀತಿಗೆ ತಿರುಗಿದೆ.

    ಮಾತುಕತೆ ಶುರುವಾದ ಈ ಜೋಡಿಗೆ ತಾವು ಪ್ರೀತಿಯ ಬಲೆಯಲ್ಲಿ ಸಿಲುಕಿರುವುದು ತಿಳಿಯಿತು. ಹೀಗಾಗಿ ಅವರಿಬ್ಬರು ಜೊತೆಯಾಗಿ ಸಮಯ ಕಳೆಯಲು ನಿರ್ಧರಿಸಿದರು. ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಓಂಕಾರ್, ಗುಡ್ಡಿಬಾಯ್ ಅವರನ್ನು ತನ್ನ ಮನೆಗೆ ಕರೆದೊಯ್ದಿದ್ದಾರೆ.

    ಓಂಕಾರ್ ತನ್ನ 4 ಗಂಡು 12 ಮೊಮ್ಮಕ್ಕಳ ಜೊತೆ ಗುಡ್ಡಿಬಾಯ್ ಮೇಲೆ ಇರುವ ತನ್ನ ಭಾವನೆಗಳನ್ನು ವಿವರಿಸಿದ್ದಾರೆ. ಹೀಗೆ ಅವರ ಕುಟುಂಬದ ಒಪ್ಪಿಗೆ ಪಡೆದ ನಂತರ ಈ ಜೋಡಿ ಇಡೀ ಹಳ್ಳಿಯ ಜನರ ಮುಂದೆಯೇ ವಿವಾಹವಾದರು. ನೃತ್ಯ, ಬೃಹತ್ ಮೆರವಣಿಗೆಯ ಮೂಲಕ ಮದುವೆ ಸಮಾರಂಭ ನಡೆದಿದೆ.

    ಈ ಶುಭ ಸಂದರ್ಭದಲ್ಲಿ ಗುಡ್ಡಿಬಾಯ್ ಗೋಲ್ಡ್ ಹಾಗೂ ಕಂದು ಬಣ್ಣದ ಸೀರೆಯನ್ನು ಧರಿಸಿದ್ದರೆ, ಓಂಕಾರ್ ತನ್ನ ಪ್ರಿಯತಮೆಯ ಉಡುಪಿನೊಂದಿಗೆ ಹೋಲಿಸಲು ಹಳದಿ ಪೇಟ ಧರಿಸಿದ್ದರು. ಓಂಕಾರ್ ಅವರ ಮೊದಲ ಪತ್ನಿ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸರ್ವಮಂಗಳ ಮಾಂಗಲ್ಯೇ’ ಖ್ಯಾತಿಯ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸರ್ವಮಂಗಳ ಮಾಂಗಲ್ಯೇ’ ಖ್ಯಾತಿಯ ನಟಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಪಿಸ್ಸೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಐಶ್ವರ್ಯಾ ಅವರು ತಮ್ಮ ಬಹುಕಾಲದ ಗೆಳೆಯ ಹರಿ ವಿನಯ್ ಅವರನ್ನು ಇತ್ತೀಚೆಗಷ್ಟೆ ಮೈಸೂರಿನಲ್ಲಿ ಮದುವೆಯಾಗಿದ್ದಾರೆ. ಹರಿ ವಿನಯ್ ಅವರು ಮೈಸೂರು ಮೂಲದವರಾಗಿದ್ದು, ನಿರ್ಮಾಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರಿಬ್ಬರ ಮದುವೆಗೆ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಿದ್ದು, ನವಜೋಡಿಗಳಿಗೆ ಶುಭಾಶಯ ಕೋರಿದ್ದಾರೆ.

    ಮದುವೆ ಬಗ್ಗೆ ಮಾತನಾಡಿರುವ ಐಶ್ವರ್ಯಾ, “ನಮ್ಮದು ಗುರು ಹಿರಿಯರು ನಿಶ್ಚಯಿಸಿ ಮಾಡಿಸಿರುವ ಅರೇಂಜ್ಡ್ ಮ್ಯಾರೇಜ್ ಆಗಿದೆ. ಈ ಮದುವೆಗೆ ಕೇವಲ ಬಂಧುಮಿತ್ರರು ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು. ಹರಿ ಅವರು ನನ್ನ ಕರಿಯರ್‌ಗೆ ಸಪೋರ್ಟ್ ಮಾಡುತ್ತಾರೆ. ಜೊತೆಗೆ ನನ್ನ ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸುತ್ತಾರೆ. ಅಷ್ಟೇ ಅಲ್ಲದೇ ನಾನು ಕಿರುತೆರೆಯಲ್ಲಿ ಮುಂದುವರಿಯಲು ಹರಿ ಅವರು ಸಪೋರ್ಟ್ ಮಾಡುತ್ತಾರೆ” ಎಂದು ಹರಿಯ ಬಗ್ಗೆ ಸಂತಸದಿಂದ ಹೇಳಿಕೊಂಡಿದ್ದಾರೆ.

    ನಟಿ ಐಶ್ವರ್ಯ ಅವರು `ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ಮಾಡುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಟ ಚಂದನ್ ಕುಮಾರ್ ಸಹ ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

    ಅಷ್ಟೇ ಅಲ್ಲದೇ ಐಶ್ವರ್ಯ ಯಶ್ ಅಭಿನಯದ `ಸಂತು ಸ್ಟ್ರೈಟ್ ಫಾರ್ವಡ್’ ಸಿನಿಮಾದಲ್ಲಿ ಯಶ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರು ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಸೀರಿಯಲ್ ಅಭಿನಯಿಸುತ್ತಿದ್ದಾರೆ.

    https://www.instagram.com/p/B0DFa60Az6_/

  • ಸಿನಿಮಾ ಸ್ಟೈಲ್‍ನಲ್ಲಿ ಅತ್ತೆ ಮಗನ ಜೊತೆ ವಧು ಎಸ್ಕೇಪ್

    ಸಿನಿಮಾ ಸ್ಟೈಲ್‍ನಲ್ಲಿ ಅತ್ತೆ ಮಗನ ಜೊತೆ ವಧು ಎಸ್ಕೇಪ್

    ತುಮಕೂರು: ರಾತ್ರೋರಾತ್ರಿ ವಿಷ ಕುಡಿಯುವ ಹೈ ಡ್ರಾಮಾ ಮಾಡಿ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಶಿರಾ ತಾಲೂಕಿನ ಮಳೆಕೋಟೆ ಗ್ರಾಮದಲ್ಲಿ ನಡೆದಿದೆ.

    ಮಳೆಕೋಟೆ ಗ್ರಾಮದ ಯುವತಿಗೆ ದೊಡ್ಡಗುಳ ಗ್ರಾಮದ ಜೊತೆ ಮದುವೆ ಫಿಕ್ಸ್ ಆಗಿತ್ತು. ಇಂದು ಮಾಂಗಲ್ಯಧಾರಣೆ ಕಾರ್ಯಕ್ರಮವಿತ್ತು. ಆದರೆ ಶನಿವಾರ ರಾತ್ರಿ ವಿಷ ಕುಡಿಯುವ ನಾಟಕವಾಡಿದ್ದು, ಮೈ ಮೇಲೆ ವಿಷ ಚೆಲ್ಲಿಕೊಂಡು ಹೈ ಡ್ರಾಮಾ ಮಾಡಿದ್ದಾಳೆ. ಇದನ್ನು ನೋಡಿ ಮನೆಯವರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.

    ಸಿನಿಮಾ ರೀತಿಯಲ್ಲಿ ಆಸ್ಪತ್ರೆಯಿಂದಲೇ ವಧು ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಅತ್ತೆ ಮಗ ಚೇತನ್ ನೊಂದಿಗೆ ಎಸ್ಕೇಪ್ ಆಗಿದ್ದಾಳೆ. ವಧು ಮತ್ತು ಅತ್ತೆ ಮಗ ಚೇತನ್ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಮನೆಯವರಿಗೆ ಅವರು ಹೇಳಿಲ್ಲ. ಇತ್ತ ಪೋಷಕರು ಕೂಡ ಅವರಿಬ್ಬರು ಸಂಬಂಧಿಗಳಾಗಿದ್ದರಿಂದ ಸಹಜವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದುಕೊಂಡಿದ್ದಾರೆ.

    ಈ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.