Tag: Marnus Labuschagne

  • ಆಂಗ್ಲರ ವಿರುದ್ಧ ಆಸೀಸ್‌ಗೆ 33 ರನ್‌ ಜಯ; ಸೆಮಿ-ಫೈನಲ್‌ಗೆ ಇನ್ನೂ ಹತ್ತಿರ

    ಆಂಗ್ಲರ ವಿರುದ್ಧ ಆಸೀಸ್‌ಗೆ 33 ರನ್‌ ಜಯ; ಸೆಮಿ-ಫೈನಲ್‌ಗೆ ಇನ್ನೂ ಹತ್ತಿರ

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ (England vs Australia) 33 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಸೆಮಿ-ಫೈನಲ್‌ಗೆ ಮತ್ತಷ್ಟು ಹತ್ತಿರವಾಗಿದೆ.

    ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 286 ರನ್‌ಗಳಿಸಿ ಆಲೌಟ್‌ ಆಯಿತು. 287 ರನ್‌ ಗುರಿ ಬೆನ್ನತ್ತಿದ ಆಂಗ್ಲರು 48.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 253 ರನ್‌ ಅಷ್ಟೇ ಗಳಿಸಿತು. ಸತತ ಸೋಲುಗಳಿಂದ ಕಂಗೆಟ್ಟು ಸೆಮಿ ಹಾದಿಯಿಂದ ಹೊರಗಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಪಾಕ್‌ಗೆ ವರವಾದ ವರುಣ – ಕಿವೀಸ್‌ ವಿರುದ್ಧ 21 ರನ್‌ಗಳ ಜಯ; ಸೆಮೀಸ್‌ ಆಸೆ ಜೀವಂತ

    ಆಸೀಸ್‌ ನೀಡಿದ 287 ರನ್‌ ಗುರಿ ಬೆನ್ನತ್ತಿದ ಆಂಗ್ಲರು ಗೆಲುವಿನ ಭರವಸೆಯೊಂದಿಗೆ ಕೊನೆ ವರೆಗೂ ಹೋರಾಡಿದರು. ತಂಡದ ಪರ ಡೇವಿಡ್ ಮಲನ್ (50), ಬೆನ್‌ ಸ್ಟೋಕ್ಸ್‌ (64) ಅರ್ಧಶತಕ ಬಾರಿಸಿ ಉತ್ತಮ ಪ್ರದರ್ಶನ ತೋರಿದರು. ಮೊಯಿನ್‌ ಅಲಿ (42), ಕ್ರಿಸ್ ವೋಕ್ಸ್ (32) ಆಟವೂ ತಂಡಕ್ಕೆ ಜಯದ ಭರವಸೆ ಮೂಡಿಸಿತ್ತು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗದೇ ಆಂಗ್ಲ ಬ್ಯಾಟರ್‌ಗಳು ಪೆವಿಲಿಯನ್‌ ಸೇರಿದರು. ಜಾನಿ ಬೈರ್ಸ್ಟೋವ್ (0), ಜೋ ರೂಟ್ (13), ಜೋಸ್ ಬಟ್ಲರ್ (1), ಲಿಯಾಮ್ ಲಿವಿಂಗ್ಸ್ಟೋನ್ (2) ಕಳಪೆ ಪ್ರದರ್ಶನದಿಂದ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

    ಆಸೀಸ್‌ ಪರ ಆಡಮ್ ಝಂಪಾ 3 ವಿಕೆಟ್‌ ಪಡೆದು ಗಮನ ಸೆಳೆದರು. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮ್ಮಿನ್ಸ್ ತಲಾ 2 ಹಾಗೂ ಮಾರ್ಕಸ್ ಸ್ಟೊಯಿನಿಸ್ ಒಂದು ವಿಕೆಟ್‌ ಪಡೆದು ತಂಡದ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಪಾಕ್‌-ಕಿವೀಸ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ – ಅಭಿಮಾನಿಗಳಿಗೆ ನಿರಾಸೆ

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ತೋರಿತು. ಮಾರ್ನಸ್‌ ಲಾಬುಷೇನ್‌ 83 ಬಾಲ್‌ಗೆ 71 ರನ್‌ (7 ಫೋರ್‌) ಗಳಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ತಂಡದ ಪರ ಕ್ಯಾಮರೂನ್‌ ಗ್ರೀನ್‌ (47), ಸ್ಟೀವ್‌ ಸ್ಮಿತ್‌ (44), ಮಾರ್ಕಸ್‌ ಸ್ಟೊಯಿನಿಸ್‌ (35) ತಂಡದ ಪರ ರನ್‌ ಕಾಣಿಕೆ ನೀಡಿದರು.

    ಆಂಗ್ಲರ ಪರ ಕ್ರಿಸ್‌ ವೋಕ್ಸ್‌ 4 ವಿಕೆಟ್‌ ಪಡೆದು ಮಿಂಚಿದರು. ಮಾರ್ಕ್‌ ವುಡ್‌ ಹಾಗೂ ಅದಿಲ್‌ ರಶೀದ್‌ ತಲಾ 2 ವಿಕೆಟ್‌ ಗಳಿಸಿದರು. ಆದರೆ ಬ್ಯಾಟಿಂಗ್‌ ವೈಫಲ್ಯದಿಂದ ತಂಡ ಸೋಲನುಭವಿಸಿತು.

  • WTC Final: ರೋಚಕ ಘಟ್ಟದಲ್ಲಿ ಪಂದ್ಯ – ಭಾರತದ ಗೆಲುವಿಗೆ ಬೇಕಿದೆ 280 ರನ್‌

    WTC Final: ರೋಚಕ ಘಟ್ಟದಲ್ಲಿ ಪಂದ್ಯ – ಭಾರತದ ಗೆಲುವಿಗೆ ಬೇಕಿದೆ 280 ರನ್‌

    ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (WTC Final) ಪಂದ್ಯ ರೋಚಕ ಘಟಕ್ಕೆ ತಲುಪಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಭಾರತ (Team India) 3 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿದ್ದು, ಗೆಲುವಿಗೆ 280 ರನ್‌ಗಳ ಅಗತ್ಯವಿದೆ.

    173 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ (Australia) ತಂಡ 4ನೇ ದಿನದಾಟದಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಉಳಿದ ಒಂದೂವರೆ ದಿನದಲ್ಲಿ ಭಾರತಕ್ಕೆ ಗೆಲ್ಲಲು 444 ರನ್‌ಗಳ ಬೃಹತ್ ಗುರಿ ನೀಡಿತು. ಇದನ್ನೂ ಓದಿ: WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ (Steve Smith) ಮತ್ತು ಟ್ರಾವಿಸ್ ಹೆಡ್ (Travis Head) ಶತಕಗಳ ನೆರವಿನಿಂದ 469 ರನ್‌ ಗಳಿಸಿ ಆಲೌಟ್ ಆಗಿತ್ತು. ಆದ್ರೆ ಭಾರತ ಅಜಿಂಕ್ಯಾ ರಹಾನೆ ಹಾಗೂ ಶಾರ್ದೂಲ್‌ ಠಾಕೂರ್‌ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ 296 ರನ್‌ಗಳಿಗೆ ಸರ್ವಪತನ ಕಂಡಿತ್ತು. 2ನೇ ಇನ್ನಿಂಗ್ಸ್‌ ಆರಂಭಿಸಿದ್ದ ಆಸೀಸ್‌ 3ನೇ ದಿನ ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿದ್ದರೆ ಇಂದು ಆ ಮೊತ್ತಕ್ಕೆ 147 ರನ್‌ ಗಳಿಸಿ ಅಂತಿಮವಾಗಿ 84.3 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 270 ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

    ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜಾ 13 ರನ್, ಡೇವಿಡ್ ವಾರ್ನರ್ 1 ರನ್, ಮಾರ್ನಸ್ ಲಾಬುಶೇನ್‌ 41 ರನ್, ಸ್ಟೀವ್ ಸ್ಮಿತ್ 34 ರನ್, ಟ್ರಾವಿಸ್ ಹೆಡ್ 18 ರನ್, ಕ್ಯಾಮರೂನ್‌ ಗ್ರೀನ್ 25 ರನ್, ಮಿಚೆಲ್ ಸ್ಟಾರ್ಕ್ 41 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 5 ರನ್ ಗಳಿಸಿ ಔಟಾದರೆ ಅಲೆಕ್ಸ್ ಕ್ಯಾರಿ 66 ರನ್ ಗಳಿಸಿ ಅಜೇಯರಾಗುಳಿದರು.

    ಇನ್ನೂ 444 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಭಾರತ 4ನೇ ದಿನದ ಅಂತ್ಯಕ್ಕೆ 44 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿದೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಶನಿವಾರ ತನ್ನ ಸರದಿ ಆರಂಭಿಸಿದ ಭಾರತದ ಪರ ಶುಭಮನ್‌ ಗಿಲ್‌ (Shubman Gill) ಹಾಗೂ ನಾಯಕ ರೋಹಿತ್‌ ಶರ್ಮಾ (Rohit Sharma) ಜೋಡಿ ಮೊದಲ ವಿಕೆಟ್‌ಗೆ 41 ರನ್‌ ಜೊತೆಯಾಟವಾಡಿದರೆ, ರೋಹಿತ್‌ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ 2ನೇ ವಿಕೆಟ್‌ಗೆ 51 ರನ್‌ ಜೊತೆಯಾಟವಾಡಿತು. ನಂತರ ಜೊತೆಗೂಡಿದ ರಹಾನೆ ಹಾಗೂ ವಿರಾಟ್‌ ಕೊಹ್ಲಿ (Virat Kohli) ಜೋಡಿ ಮುರಿಯದ 4ನೇ ವಿಕೆಟ್‌ಗೆ 71 ರನ್‌ ಜೊತೆಯಾಟ ನೀಡಿತು.

    ರೋಹಿತ್‌ ಶರ್ಮಾ 43 ರನ್‌ (60 ಎಸೆತ, 7 ಬೌಂಡರಿ, 1 ಸಿಕ್ಸರ್), ಶುಭಮನ್‌ ಗಿಲ್‌ 18 ರನ್‌, ಚೇತೇಶ್ವರ್‌ ಪೂಜಾರಾ 27 ರನ್‌ ಗಳಿಸಿ ಔಟಾದರು. ಇನ್ನೂ ವಿರಾಟ್‌ ಕೊಹ್ಲಿ 44 ರನ್‌ (60 ಎಸೆತ, 7 ಬೌಂಡರಿ) ಅಜಿಂಕ್ಯಾ ರಹಾನೆ 20 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಭಾನುವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

  • WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ (WTC Final) ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದ್ದಾರೆ. ರವೀಂದ್ರ ಜಡೇಜಾ (Ravindra Jadeja), ಉಮೇಶ್‌ ಯಾದವ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ಕಮಾಲ್‌ನಿಂದಾಗಿ ಆಸ್ಟ್ರೇಲಿಯಾದ (Australia) ಟಾಪ್‌ ಬ್ಯಾಟ್ಸ್‌ಮ್ಯಾನ್‌ಗಳು ನೆಲ ಕಚ್ಚಿದ್ದಾರೆ. ಇದರ ಹೊರತಾಗಿಯೂ ಭಾರತ 296 ರನ್‌ಗಳ ಹಿನ್ನಡೆಯಲ್ಲಿದೆ.

    2ನೇ ದಿನದ ಅಂತ್ಯಕ್ಕೆ 38 ಓವರ್‌ಗಳಲ್ಲಿ 151 ರನ್‌ ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ 3ನೇ ದಿನ ಅಜಿಂಕ್ಯಾ ರಹಾನೆ ಹಾಗೂ ಆಲ್‌ರೌಂಡರ್‌ ಶಾರ್ದೂಲ್‌ ಬ್ಯಾಟಿಂಗ್‌ ನೆರವಿನಿಂದ 296 ರನ್‌ ಗಳಿಸುಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    3ನೇ ದಿನದ ಇನ್ನಿಂಗ್ಸ್‌ ಆರಂಭಿಸಿದ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಶ್ರೀಕಾರ್‌ ಭರತ್‌ ಜೋಡಿ ಉತ್ತಮ ರನ್‌ ಕಲೆಹಾಕುವಲ್ಲಿ ವಿಫಲವಾಯಿತು. ಭರತ್‌ 5 ರನ್‌ ಗಳಿಸಿ ಔಟಾದರು. ನಂತರ ಜೊತೆಗೂಡಿದ ಶಾರ್ದೂಲ್‌ ಠಾಕೂರ್‌ (Shardul Thakur) ಹಾಗೂ ರಹಾನೆ ಜೋಡಿ 7ನೇ ವಿಕೆಟ್‌ಗೆ 145 ಎಸೆತಗಳಲ್ಲಿ 109 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರಹಾನೆ 89 ರನ್‌ (129 ಎಸೆತ, 11 ಬೌಂಡರಿ, 1 ಸಿಕ್ಸರ್‌), ಶಾರ್ದೂಲ್‌ ಠಾಕೂರ್‌ 51 ರನ್‌ (109 ಎಸೆತ, 6 ಬೌಂಡರಿ) ಗಳಿಸಿ ಔಟಾದರು. ಕೊನೆಯಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನವಿಲ್ಲದೇ ಭಾರತ 69.4 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್‌ ಆಯಿತು.

    ಇನ್ನೂ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾದ ಟಾಪ್‌ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ ಸ್ಟೀವ್‌ ಸ್ಮಿತ್‌ ಹಾಗೂ ಟ್ರಾವಿಸ್‌ ಹೆಡ್‌ ಜಡೇಜಾ ಸ್ಪಿನ್‌ ದಾಳಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ 3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡು 123 ರನ್‌ ಗಳಿಸಿದೆ.

    ಉಸ್ಮಾನ್‌ ಖವಾಜ 13 ರನ್‌, ಸ್ಟೀವ್‌ ಸ್ಮಿತ್‌ (Steve Smith) 34 ರನ್‌, ಟ್ರಾವಿಸ್‌ ಹೆಡ್‌ (Travis Head) 18 ರನ್‌ ಹಾಗೂ ಡೇವಿಡ್‌ ವಾರ್ನರ್‌ ಕೇವಲ 1 ರನ್‌ ಗಳಿಸಿ ಔಟಾದರು. ಮಾರ್ಕಸ್‌ ಲಾಬುಶೇನ್‌ 41 ರನ್‌ (118 ಎಸೆತ, 3 ಬೌಂಡರಿ), ಕ್ಯಾಮರೂನ್‌ ಗ್ರೀನ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಶನಿವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ರವೀಂದ್ರ ಜಡೇಜಾ 2 ಪ್ರಮುಖ ವಿಕೆಟ್‌ ಕಿತ್ತರೆ, ಸಿರಾಜ್‌ ಹಾಗೂ ಉಮೇಶ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌ ಆಸ್ಟ್ರೇಲಿಯಾ – 469/10
    ಮೊದಲ ಇನ್ನಿಂಗ್ಸ್‌ ಭಾರತ – 296/10

  • ವಿರಾಟ್ ಕೊಹ್ಲಿಯಿಂದ ಕೆಲವು ಶಾಟ್‌ಗಳನ್ನ ಕಲಿತೆ – ಸತ್ಯ ಒಪ್ಪಿಕೊಂಡ ಆಸ್ಟ್ರೇಲಿಯಾ ಕ್ರಿಕೆಟಿಗ

    ವಿರಾಟ್ ಕೊಹ್ಲಿಯಿಂದ ಕೆಲವು ಶಾಟ್‌ಗಳನ್ನ ಕಲಿತೆ – ಸತ್ಯ ಒಪ್ಪಿಕೊಂಡ ಆಸ್ಟ್ರೇಲಿಯಾ ಕ್ರಿಕೆಟಿಗ

    ಮುಂಬೈ/ನಾಗ್ಪುರ: ಟೀಂ ಇಂಡಿಯಾ (Team India) ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ ಅನ್ನೋದು ನಿದರ್ಶನಗಳಿಂದ ಸಾಬೀತಾಗುತ್ತಿದೆ. ಕ್ರೀಡಾ ತಾರೆಗಳೂ ಅವರ ಶಾಟ್‌ಗಳನ್ನ ಅನುಕರಣೆ ಮಾಡೋದು ಗಮನಾರ್ಹವಾಗಿದೆ.

    ಅದರಂತೆ ಆಸ್ಟ್ರೇಲಿಯಾ (Australia) ಕ್ರಿಕೆಟಿಗರೊಬ್ಬರು ವಿರಾಟ್ ಕೊಹ್ಲಿ ಅವರಿಂದ ಕಲಿತ ಕೆಲವು ಶಾಟ್‌ಗಳನ್ನ ಟೀಂ ಇಂಡಿಯಾ ವಿರುದ್ಧದ ಆಟದಲ್ಲೇ ಪ್ರಯೋಗ ಮಾಡಿರುವುದು ಕಂಡುಬಂದಿದೆ.

    ಹೌದು.. ಆಸ್ಟ್ರೇಲಿಯಾ ಕ್ರಿಕೆಟಿಗ ಮಾರ್ನಸ್ ಲಾಬುಶೇನ್ (Marnus Labuschagne) ತಾನು ವಿರಾಟ್ ಕೊಹ್ಲಿ ಅವರಿಂದ ಕೆಲವು ಶಾಟ್‌ಗಳನ್ನ ಟೆಸ್ಟ್ ಪಂದ್ಯದಲ್ಲಿ ಪ್ರಯೋಗ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಜಡೇಜಾ, ಅಶ್ವಿನ್‌ ದಾಳಿಗೆ ಆಸ್ಟ್ರೇಲಿಯಾ ಪಲ್ಟಿ – ಏಕದಿನ ಶೈಲಿಯಲ್ಲಿ ರೋಹಿತ್‌ ಬ್ಯಾಟಿಂಗ್‌

    ಭಾರತ-ಆಸ್ಟ್ರೇಲಿಯಾ (India, Australia) ನಡುವಿನ ಟೆಸ್ಟ್ ಸರಣಿ ಆರಂಭಗೊಂಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 63.5 ಓವರ್‌ಗಳಲ್ಲಿ 177 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಮಾರ್ನಸ್ ಲಾಬುಶೇನ್ 123 ಎಸೆತಗಳಲ್ಲಿ 49 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಅವರೊಬ್ಬರೇ ಹೆಚ್ಚಿನ ರನ್ ಗಳಿಸಿದ್ದರು.

    ಪಂದ್ಯದ ಬಳಿಕ `ಅತ್ಯುತ್ತಮ ಶಾಟ್‌ಗಳನ್ನ ಆಡಿದ್ದೀರಿ’ ಎಂಬ ಪ್ರಶಂಸೆಗೆ ಉತ್ತರಿಸಿದ ಲಾಬುಶೇನ್, ನಾನು ಕೊಹ್ಲಿಯಿಂದ ಕೆಲವು ಶಾಟ್ ಹೊಡೆಯುವುದನ್ನ ಕಲಿತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    ನಾವು ಟೀಂ ಇಂಡಿಯಾ ವಿರುದ್ಧ ಸರಣಿ ಗೆಲ್ಲಲು ಬಂದಿದ್ದೇವೆ. ಸಾಧ್ಯವಾದಷ್ಟು ಶ್ರಮ ಹಾಕುತ್ತೇವೆ. ವಿಶೇಷ ಪ್ರದರ್ಶನದೊಂದಿಗೆ ಟ್ರೋಫಿ ಗೆದ್ದು ತವರಿಗೆ ಮರಳಲು ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 4 ವಿಕೆಟ್ ಕಿತ್ತು ಆಸೀಸ್‍ಗೆ ಕಾಡಿದ ಶಮಿ- ಕೊಹ್ಲಿ ಪಡೆಗೆ 287ರ ಗುರಿ

    4 ವಿಕೆಟ್ ಕಿತ್ತು ಆಸೀಸ್‍ಗೆ ಕಾಡಿದ ಶಮಿ- ಕೊಹ್ಲಿ ಪಡೆಗೆ 287ರ ಗುರಿ

    – ಸ್ಮಿತ್ ತಾಳ್ಮೆಯ ಶತಕ, ಲಾಬುಶೇನ್ ಅರ್ಧಶತಕ
    – ಆಸೀಸ್‍ಗೆ ಆರಂಭದಲ್ಲಿ, ಕೊನೆಯಲ್ಲಿ ಆಘಾತ ನೀಡಿದ ಶಮಿ
    – ಶೂನ್ಯ ರನ್ ಅಂತರದಲ್ಲಿ ಎರಡು ವಿಕೆಟ್ ಕಿತ್ತ ಜಡೇಜಾ

    ಬೆಂಗಳೂರು: ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಅವರ ಅದ್ಭುತ ಬೌಲಿಂಗ್ ಎದುರು ಸ್ಟೀವ್ ಸ್ಮಿತ್ ತಾಳ್ಮೆಯ ಶತಕದಾಟ, ಮಾರ್ನಸ್ ಲಾಬುಶೇನ್ ಅರ್ಧಶತಕದ ಸಹಾಯದಿಂದ ಆಸ್ಟ್ರೇಲಿಯಾ ತಂಡವು ಕೊಹ್ಲಿ ಪಡೆಗೆ 287 ರನ್‍ಗಳ ಗುರಿ ನೀಡಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಭಾನುವಾರ ನಡೆಯುತ್ತಿರುವ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 131 ರನ್ (132ಎಸೆತ, 14 ಬೌಂಡರಿ, ಸಿಕ್ಸ್), ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ), ಅಲೆಕ್ಸ್ ಕ್ಯಾರಿ 35 ರನ್ (36 ಎಸೆತ, 5 ಬೌಂಡರಿ) ಸಹಾಯದಿಂದ 9 ವಿಕೆಟ್‍ಗಳ ನಷ್ಟಕ್ಕೆ 286 ರನ್‍ಗಳ ಸಾಧಾರಣ ಮೊತ್ತ ಪೇರಿಸಿದೆ.

    ಈ ಬಾರಿಯೂ ಟಾಸ್ ಗೆದ್ದ ಆಸ್ಟ್ರೇಲಿಯಾ ಬೃಹತ್ ಮೊತ್ತದ ರನ್‍ಗಳ ಗುರಿ ನೀಡುವ ಉದ್ದೇಶದಿಂದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಆಸೀಸ್ ಪಡೆ ಆರಂಭದಲ್ಲಿ ಭಾರೀ ಪಜೀತಿಗೆ ಸಿಲುಕಿತು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಜೊತೆಯಾಟ ಕಟ್ಟಲು ಮುದಾಗಿದ್ದ ಆ್ಯರನ್ ಫಿಂಚ್ ಹಾಗೂ ಸ್ಟೀವ್ ಸ್ಮೀತ್ ಜೋಡಿ ರನ್ ಕದಿಯಲು ಯತ್ನಿಸಿ ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ ನ 9ನೇ ಓವರ್‍ನ ಮೊಹಮ್ಮದ್ ಶಮಿ ಬೌಲಿಂಗ್ ವೇಳೆ ಫಿಂಚ್ ರನ್ ಔಟ್ ಆದರು. ಫಿಂಚ್ 19 ರನ್ (26 ಎಸೆತ, ಬೌಂಡರಿ, ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳಿದರು.

    ಜಡೇಜಾ ಕಮಾಲ್:
    ವಿಕೆಟ್ ಕಾಯ್ದುಕೊಂಡು ನಿಧಾನಗತಿಯ ಆಟ ಮುಂದುವರಿಸಿದ ಸ್ಮಿತ್‍ಗೆ ಮಾರ್ನಸ್ ಲಾಬುಶೇನ್ ಸಾಥ್ ನೀಡಿದರು. ಈ ಜೋಡಿ ಉತ್ತಮ ಜೊತೆಯಾಟ ಕಟ್ಟುವಲ್ಲಿ ಯಶಸ್ವಿಯಾಯಿತು. ಸ್ಮಿತ್ ಹಾಗೂ ಲಾಬುಶೇನ್ ಜೋಡಿ 3ನೇ ವಿಕೆಟ್‍ಗೆ 128 ರನ್‍ಗಳ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಏರಿಸಿತು. ಇನ್ನಿಂಗ್ಸ್ ನ 32ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಮಾರ್ನಸ್ ಲಾಬುಶೇನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಮಿಚೆಲ್ ಸ್ಟಾರ್ಕ್ ಗೆ ರನ್ ಗಳಿಸಲು ಅವಕಾಶ ನೀಡದೆ ಜಡೇಜಾ ವಿಕೆಟ್ ಕಿತ್ತಿದರು. ಈ ಒಂದೇ ಓವರ್ ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದಿದ್ದು ಪಂದ್ಯಕ್ಕೆ ಉತ್ತಮ ತಿರುವು ನೀಡಿತು.

    ಐದನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಅಲೆಕ್ಸ್ ಕ್ಯಾರಿ ಸ್ಟೀವ್ ಸ್ಮಿತ್‍ಗೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 58 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಇನ್ನಿಂಗ್ಸ್ ನ 42ನೇ ಓವರ್ ನಲ್ಲಿ ಕುಲದೀಪ್ ಯಾದವ್ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದರು. ಅಲೆಕ್ಸ್ ಕ್ಯಾರಿ 35 ರನ್ (36 ಎಸೆತ, 6 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು.

    ಸ್ಮಿತ್ ಶತಕ:
    63 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಸ್ಟೀವ್ ಸ್ಮಿತ್ 118 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನ ಒಂಬತ್ತನೇ ಶತಕವಾಗಿದೆ. ಆದರೆ ಸ್ಮಿತ್ ಶತಕ ಸಿಡಿಸಿದ ಇನ್ನಿಂಗ್ಸ್ ನ 44ನೇ ಓವರ್ ನಲ್ಲಿ ಭಾರತ ಯುವ ವೇಗಿ ನವದೀಪ್ ಸೈನಿ 4 ರನ್ ಗಳಿಸಿದ್ದ ಆಗಸ್ಟ್ ವಿಕೆಟ್ ಕಿತ್ತರು. ಆದರೆ ಸ್ಮಿತ್ ಭರ್ಜರಿ ಬ್ಯಾಟಿಂಗ್ ಆರಂಭಿಸಿದರು.

    ಇನ್ನಿಂಗ್ಸ್ ನ 46ನೇ ಓವರ್ ನಲ್ಲಿ ಸ್ಮಿತ್ ಎರಡು ಬೌಂಡರಿ, ಒಂದು ಸಿಕ್ಸ್ ಸಿಡಿಸಿದರು. ಸೈನಿ ಎಸೆದ ಈ ಓವರ್ ನಲ್ಲಿ ಆಸೀಸ್ 16 ಗಳಿಸಿತು. ಆದರೆ ಸ್ಮಿತ್ ಅವರನ್ನು ಪೆವಿಲಿಯನ್‍ಗೆ ಅಟ್ಟುವಲ್ಲಿ ಮೊಹಮ್ಮದ್ ಶಮಿ ಸೈ ಎನಿಸಿಕೊಂಡರು. ಇನ್ನಿಂಗ್ಸ್ ನ 48ನೇ ಓವರ್ ನ ಮೊದಲ ಎಸೆತದಲ್ಲೇ ಸ್ಮಿತ್ ವಿಕೆಟ್ ಪಡೆದ ಶಮಿ, 4ನೇ ಎಸೆತದಲ್ಲಿ ಕಮ್ಮಿನ್ಸ್ ವಿಕೆಟ್ ಕಿತ್ತರು. ಬಳಿಕ ಮೈದಾಕ್ಕಿಳಿದ ಆಸೀಸ್ ಆಟಗಾರರು ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.

    ಅನುಭವಿ ಹಿರಿಯ ಆಟಗಾರ ಮೊಹಮ್ಮದ್ ಶಮಿ ಆಸೀಸ್ ತಂಡಕ್ಕೆ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಆಘಾತ ನೀಡಿದರು. 10 ಓವರ್ ಮಾಡಿದ ಶಮಿ 63 ರನ್ ನೀಡಿ 4  ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಸ್ಪಿನ್ನರ್ ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಪಡೆದರೆ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಆದರೆ ಯಾವುದೇ ವಿಕೆಟ್ ಪಡೆಯದ ಜಸ್‍ಪ್ರೀತ್ ಬುಮ್ರಾ 10 ಓವರ್ ಮಾಡಿ ಕೇವಲ 38 ರನ್ ನೀಡಿದ್ದಾರೆ.

    ರನ್ ಏರಿದ್ದು ಹೇಗೆ?:
    50 ರನ್- 54 ಎಸೆತ
    100 ರನ್- 105 ಎಸೆತ
    150 ರನ್- 159 ಎಸೆತ
    200 ರನ್- 222 ಎಸೆತ
    250 ರನ್- 272 ಎಸೆತ
    286 ರನ್- 300 ಎಸೆತ