Tag: Markscard

  • ಆನ್‍ಲೈನ್ ನಲ್ಲೇ ಅಂಕಪಟ್ಟಿ ಪಡೆಯಿರಿ: ಪಿಯುಸಿ ಬೋರ್ಡ್ ಈಗ ಮತ್ತಷ್ಟು ಹೈಟೆಕ್

    ಆನ್‍ಲೈನ್ ನಲ್ಲೇ ಅಂಕಪಟ್ಟಿ ಪಡೆಯಿರಿ: ಪಿಯುಸಿ ಬೋರ್ಡ್ ಈಗ ಮತ್ತಷ್ಟು ಹೈಟೆಕ್

    ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಮತ್ತಷ್ಟು ಹೈಟೆಕ್ ಆಗಿದ್ದು, ಈ ಬಾರಿಯ ಪಿಯು ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಪಡೆಯುವ ಅವಕಾಶ ಕಲ್ಪಿಸಿದೆ.

    ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ಮೊದಲ ಬಾರಿಗೆ ಡಿಜಿ ಲಾಕರ್ ಮೂಲಕ ಅಂಕಪಟ್ಟಿ ನೀಡುವ ಯೋಜನೆ ರೂಪಿಸಿಕೊಂಡಿದ್ದು, ಮತ್ತಷ್ಟು ಹೈಟೆಕ್ ಸೌಲಭ್ಯವನ್ನು ಜಾರಿಗೊಳಿಸಲು ಸಜ್ಜಾಗಿದೆ.

    ಕಳೆದ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್‍ಲೋಡ್ ಮಾಡಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕಪಟ್ಟಿಗಳನ್ನು ಡಿಜಿ ಲಾಕರ್ ವೆಬ್ ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಪದವಿ ಪೂರ್ವ ಮಂಡಳಿಯ ನಿರ್ದೇಶಕಿ ಶಿಖಾರವರು ತಿಳಿಸಿದ್ದಾರೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಅಂಕಪಟ್ಟಿ ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 5 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.

  • ಚಿನ್ನದ ಪದಕ ಪಡೆದಿದ್ದ ಅಂಕಪಟ್ಟಿಗಳು ಕಳೆದಿದ್ದಕ್ಕೆ ಮಾನಸಿಕ ಅಸ್ವಸ್ಥನಾದ!

    ಚಿನ್ನದ ಪದಕ ಪಡೆದಿದ್ದ ಅಂಕಪಟ್ಟಿಗಳು ಕಳೆದಿದ್ದಕ್ಕೆ ಮಾನಸಿಕ ಅಸ್ವಸ್ಥನಾದ!

    ಹಾವೇರಿ: ಮಾನಸಿಕ ಅಸ್ವಸ್ಥನಾಗಿ ಬಳಲುತ್ತಾ ಮನೆಯಲ್ಲೇ ವಾಸವಾಗಿದ್ದ ವ್ಯಕ್ತಿಯನ್ನು ರಕ್ಷಿಸಿ ಪೊಲೀಸರು ಮತ್ತು ಅಧಿಕಾರಿಗಳು ಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದಿದೆ.

    ಸಿದ್ದಪ್ಪ ರೇವಣ(40) ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ಇವರು 2002ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಎಂ.ಕಾಂ ಪದವಿ ಪಡೆದಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾ ಮನೆಯಲ್ಲೇ ತಂದೆಯೊಂದಿಗೆ ವಾಸವಾಗಿದ್ದರು.

    ಇದೀಗ ಸಿದ್ದಪ್ಪ ಅವರ ಆರೋಗ್ಯದ ಪರಿಸ್ಥಿತಿ ಹದಗೆಡುತ್ತಾ ಬಂದಿದ್ದರಿಂದ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆಡೂರು ಠಾಣೆ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿದ್ದಪ್ಪರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎನ್ನಲಾಗಿದೆ. ಸಿದ್ದಪ್ಪರೊಂದಿಗೆ ಅವರ ತಂದೆಯೂ ಆಸ್ಪತ್ರೆಯಲ್ಲಿದ್ದು ಮಗನನ್ನು ನೋಡಿಕೊಳ್ಳುತ್ತಿದ್ದಾರೆ.