Tag: Mark Zuckerberg

  • ಫೇಸ್‍ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ್ಯಾಂಡ್ -FB ಕಂಪನಿ ಇನ್ನು ಮೆಟಾವರ್ಸ್

    ಫೇಸ್‍ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ್ಯಾಂಡ್ -FB ಕಂಪನಿ ಇನ್ನು ಮೆಟಾವರ್ಸ್

    – ವಾರ್ಷಿಕ ಸಭೆಯಲ್ಲಿ ಜುಕರ್‌ಬರ್ಗ್ ಘೋಷಣೆ

    ವಾಷಿಂಗ್ಟನ್: ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಈ ಎಲ್ಲ ಸೋಶಿಯಲ್ ಮೀಡಿಯಾಗಳನ್ನು ಒಟ್ಟಿಗೆ ತರಲಾಗುತ್ತದೆ ಎಂದು ಜುಕರ್‌ಬರ್ಗ್ ಘೋಷಿಸಿದ್ದಾರೆ

    ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಕಂಪನಿಯ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಭವಿಷ್ಯದ ವರ್ಚುವಲ್ ದೃಷ್ಟಿಕೋನದೊಂದಿಗೆ ತಮ್ಮ ಕಂಪನಿಯನ್ನು ಮೆಟಾ ಎಂಬ ಹೆಸರಿನಲ್ಲಿ ಬ್ರಾಂಡಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೇ ಅವರು ಮೆಟಾವರ್ಸ್ ಎಂದು ಕರೆದಿದ್ದಾರೆ. ಇದನ್ನೂ ಓದಿ: ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    ನಿನ್ನೆ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸಲು ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

    ಕಾಲಾಂತರದಲ್ಲಿ ನಾವು ಮೆಟಾವರ್ಸ್ ಕಂಪನಿಯಾಗಿ ಬದಲಾವಣೆಯಾವ ಭರವಸೆಯಿದೆ ಎಂದು ಹೆಳಿದ್ದಾರೆ. ಮೆಟಾವರ್ಸ್ ವೇದಿಕೆಯು ಜನರ ಸಂವಹನ, ಕೆಲಸ, ಉತ್ಪನ್ನಗಳಿಗೆ ಮಾರುಕಟ್ಟೆ ವಿವಿಧ ವಿಷಯಗಳ ಕುರಿತ ರಚನೆ ಅವಕಾಶ ನೀಡಲಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿ ಕೊಡಲಿದೆ ಎಂದಿದ್ದಾರೆ.

    ಫೇಸ್ ಬುಕ್, ಇಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳನ್ನು ಒಟ್ಟಿಗೆ ತರಲಾಗುತ್ತದೆ. ಆದರೆ ಉದ್ಯೋಗ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾರ್ಕ್ ಘೋಷಿಸಿದ್ದಾರೆ.

    ಏನಿದು ಮೆಟಾವರ್ಸ್?
    ಮೆಟಾವರ್ಸ್ ಒಂದು ವಿಶಾಲವಾದ ಅರ್ಥವನ್ನು ನೀಡುವ ಪದವಾಗಿದೆ. ಸಾಮಾಜಿಕ ಜಾಲತಾಣಗಳ ವಿಚಾರಕ್ಕೆ ಬರುವುದಾದರೆ ಇಂಟರ್ ನೆಟ್ ಮೂಲಕ ಒಬ್ಬ ವ್ಯಕ್ತಿ ವರ್ಚುವಲ್ ಮಾದರಿಯಲ್ಲಿ (ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಮಾದರಿಯಲ್ಲಿ ಅಥವಾ ಬೇರೆ ಮಾದರಿಗಳಲ್ಲಿ) ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದಾಗಿದೆ. ಇದನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾಧಿಸಲು ಫೇಸ್‍ಬುಕ್ ನಿರ್ಧಾರ ಮಾಡಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ನಟ ರಜನಿಕಾಂತ್

  • ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    ನವದೆಹಲಿ: ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್‍ಬುಕ್(facebook) ತನ್ನ ಹೆಸರನ್ನು ಬದಲಿಸಲು ಚಿಂತಿಸಿದ್ದು, ಹೊಸ ಹೆಸರಿನೊಂದಿಗೆ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ.

    ಫೇಸ್‍ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್‍ಜುಕರ್ ಬರ್ಗ್(Mark Zuckerberg) ಅಕ್ಟೋಬರ್ 28 ರಂದು ನಡೆದ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಶೀಘ್ರದಲ್ಲಿ ಹೊಸ ಹೆಸರು ನಾಮಕರಣ ಮಾಡುವ ಸಾಧ್ಯತೆಗಳಿದೆ ಎಂದು ವರ್ಜ್ ವರದಿ ಮಾಡಿದೆ.ಇದನ್ನೂ ಓದಿ: ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

    ಹೆಸರು ಬದಲಾವಣೆ ಸುದ್ದಿ ಜೋರಾಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೇಸ್‍ಬುಕ್ ಈ ರೀತಿಯ ಯಾವುದೇ ಬೆಳವಣಿಗೆಗಳಿಲ್ಲ ಇದೊಂದು ಊಹಪೂಹಾದ ಸುದ್ದಿ ಎಂದು ಹೇಳಿದೆ. ಇದನ್ನೂ ಓದಿ: ಮೃತ ರೈತರಿಗೆ ಗೌರವ ಸಲ್ಲಿಸಿದ ಪ್ರಿಯಾಂಕಾ ಗಾಂಧಿ – ಲಖೀಂಪುರ್ ಖೇರಿಯಲ್ಲಿ ಭಾರಿ ಭದ್ರತೆ

    ಆದರೆ ಮೂಲಗಳ ಪ್ರಕಾರ ಫೇಸ್‍ಬುಕ್ ಮೇಲೆ ಕ್ಯಾಲಿಪೋನಿಯ ಸರ್ಕಾರ ಪರಿಶೀಲನೆ ಹೆಚ್ಚಿಸುತ್ತಿದ್ದು, ಈ ನಡುವೆ ಹಲವು ವಿವಾದಗಳಿಗೆ ಫೇಸ್‍ಬುಕ್ ಕಾರಣವಾಗಿದೆ. ಈಗ ಹೆಸರು ಬದಲಿಸುವ ಮೂಲಕ ತನ್ನ ಅಡಿಯಲ್ಲಿರುವ ಇನ್‍ಸ್ಟಾಗ್ರಾಮ್, ವಾಟ್ಸಾಪ್ ಸೇರಿದಂತೆ ಹಲವು ಕಂಪನಿಗಳನ್ನು ಪುನಶ್ಚೇತನ ಮಾಡಲು ಚಿಂತಿಸಲಾಗಿದೆ ಎನ್ನಲಾಗಿದೆ.ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

    ಯುರೋಪಿಯನ್ ಒಕ್ಕೂಟದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿರುವ ಫೇಸ್‍ಬುಕ್, ಮತ್ತಷ್ಟು ಜನರನ್ನು ಸೆಳೆಯುವ ಲೆಕ್ಕಕಾಗಿ ಫೇಸ್‍ಬುಕ್ ವರ್ಚುವಲ್ ರಿಯಾಲಿಟಿ (ವಿಆರ್), ವರ್ಧಿತ ರಿಯಾಲಿಟಿರಿಯಾಲಿಟಿ (ಎಆರ್ ) ಮೇಲೆ ಹೂಡಿಕೆ ಮಾಡಿದೆ.

  • ಫೇಸ್‍ಬುಕ್ ಜಿಯೋ ಷೇರು ಖರೀದಿಸಿದ್ದು ಯಾಕೆ? ಕಂಪನಿಗಳಿಗೆ ಲಾಭ ಏನು? -ಇಲ್ಲಿದೆ ಪೂರ್ಣ ವಿವರ

    ಫೇಸ್‍ಬುಕ್ ಜಿಯೋ ಷೇರು ಖರೀದಿಸಿದ್ದು ಯಾಕೆ? ಕಂಪನಿಗಳಿಗೆ ಲಾಭ ಏನು? -ಇಲ್ಲಿದೆ ಪೂರ್ಣ ವಿವರ

    ಮುಂಬೈ: ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಕಂಪನಿಯನ್ನು ಷೇರುಗಳನ್ನು ಫೇಸ್ ಬುಕ್ ಖರೀದಿಸಿದೆ. ಕೊರೊನಾ ವೈರಸ್ ಸಮಯದಲ್ಲಿ ವಿಶ್ವದ ಆರ್ಥಿಕತೆ ಮುಗ್ಗರಿಸುತ್ತಿರುವ ಮಧ್ಯೆ ಶತಕೋಟಿ ಡಾಲರ್ ಒಪ್ಪಂದ ಭಾರತದ ಪಾಲಿಗೆ ಶುಭ ಸುದ್ದಿಯಾಗಿದೆ. ಫೇಸ್‍ಬುಕ್ ಯಾಕೆ ಷೇರು ಖರೀದಿಸಿದ್ದು? ಜಿಯೋಗೆ ಏನು ಲಾಭ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಒಪ್ಪಂದದ ಮೌಲ್ಯ ಎಷ್ಟು?
    ಈ ಹಿಂದೆಯೇ ಫೇಸ್‍ಬುಕ್ ಕಂಪನಿ ಜಿಯೋ ಕಂಪನಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿದೆ ಎಂಬ ವರದಿ ಬಂದಿತ್ತು. ಆದರೆ ಎರಡು ಕಂಪನಿಗಳ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಎರಡು ಕಂಪನಿಗಳು ಅಧಿಕೃತವಾಗಿ ಈ ಸುದ್ದಿಯನ್ನು ಪ್ರಕಟಿಸಿದ್ದು ಶೇ.9.9 ಷೇರುಗಳನ್ನು 43,574 ಕೋಟಿ ರೂ. ನೀಡಿ ಖರೀದಿಸಿದೆ. ಈ ಮೂಲಕ ಜಿಯೋ ಕಂಪನಿಯ ಮೌಲ್ಯ 4.62 ಲಕ್ಷ ಕೋಟಿಗೆ ತಲುಪಿದೆ.

    ಯಾವ ಕಂಪನಿಯ ಸಾಮರ್ಥ್ಯ ಏನು?
    ಜಿಯೋ ಭಾರತದ ಅತಿ ದೊಡ್ಡ ಟೆಲಿಕಾಂ ನೆಟ್‍ವರ್ಕ್ ಆಗಿದ್ದು 38 ಕೋಟಿ ಜನ ಬಳಕೆ ಮಾಡುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಕಂಪನಿಯಾದ ಫೇಸ್‍ಬುಕ್ ಗೆ ಪ್ರತಿ ತಿಂಗಳು 2.50 ಶತಕೋಟಿ ಸಕ್ರೀಯ ಬಳಕೆದಾರಿದ್ದಾರೆ.

    ಜಿಯೋ, ಫೇಸ್‍ಬುಕ್ ಗೆ ಏನು ಲಾಭ?
    ಯಾವುದೇ ಕಂಪನಿ ಇನ್ನೊಂದು ಕಂಪನಿಯಲ್ಲಿ ಲಾಭ ಇಲ್ಲದೇ ಹಣವನ್ನು ಹೂಡಿಕೆ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮುಕೇಶ್ ಅಂಬಾನಿ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡಲಾಗುವುದು ಎಂದು 2019ರ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಷೇರುದಾರರಿಗೆ ತಿಳಿಸಿದ್ದರು. ಅದರಂತೆ ಜಿಯೋ ಮಾರ್ಟ್ ಆರಂಭಿಸಿದ್ದರು.

    ತನ್ನ ಇ-ಕಾಮರ್ಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರಿಲಯನ್ಸ್ ರಿಟೇಲ್ ಜಿಯೋಮಾರ್ಟ್‍ಗಾಗಿ ಪೂರ್ವ ನೋಂದಣಿಗಳಿಗೆ ಆಹ್ವಾನಿಸಿತ್ತು. ಈ ಹೊಸ ಉದ್ಯಮವು 50 ಸಾವಿರಕ್ಕೂ ಹೆಚ್ಚು ಕಿರಾಣಿ ಉತ್ಪನ್ನಗಳಿಗೆ ಬಂಡವಾಳ ನೀಡಲು ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಬೆಲೆ ಮತ್ತು ಉಚಿತ ಡೆಲಿವರಿಗೆ ಹೆಚ್ಚು ಆದ್ಯತೆ ನೀಡಿದ್ದು ಉತ್ಪನ್ನಗಳು ವಾಪಸ್ ಆಗದ ರೀತಿಯಲ್ಲಿ ಎಕ್ಸ್ ಪ್ರೆಸ್ ಡೆಲಿವರಿ ಸೇವೆಯನ್ನ ಗ್ರಾಹಕರಿಗೆ ಒದಗಿಸಲಿದೆ. ಇದಕ್ಕಾಗಿ ಜಿಯೋ ಮಾರ್ಟ್ “ದೇಶ್ ಕೀ ನಾಯ್ ದುಕಾನ್” (ದೇಶದ ಹೊಸ ಅಂಗಡಿ) ಸಬ್ ಟೈಟಲ್ ನ್ನು ನೀಡಿದ್ದು ಅಮೇಜಾನ್ ಫ್ಲಿಪ್‍ಕಾರ್ಟ್ ನಂತೆ ತನ್ನತ್ತ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಪ್ರಾಯೋಗಿಕವಾಗಿ ಹೊಸ ಮುಂಬೈ, ಥಾಣೆ ಮತ್ತು ಕಲ್ಯಾಣ್‍ನಲ್ಲಿ ಜಿಯೋಮಾರ್ಟ್ ಆರಂಭಿಸಿತ್ತು.

    ಕಿರಾಣಿ ಅಂಗಡಿ ಮಾರುಕಟ್ಟೆಯನ್ನು ವಾಟ್ಸಪ್ ಮೂಲಕ ತಲುಪಲು ಜಿಯೋ ಮತ್ತು ವಾಟ್ಸಪ್ ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ವಾಟ್ಸಪ್ ಮೂಲಕವೂ ಆದಾಯ ತರಲು ಫೇಸ್‍ಬುಕ್ ಸಿದ್ಧತೆ ನಡೆಸುತ್ತಿದೆ.

    ಭಾರತವೇ ಯಾಕೆ?
    ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜಿಯೋ ಪ್ರವೇಶದ ಬಳಿಕ ಇಂಟರ್ ನೆಟ್ ಬಳಕೆ ಹೆಚ್ಚಾಗಿದೆ. ಚೀನಾದಲ್ಲಿ ಫೇಸ್‍ಬುಕ್, ಗೂಗಲ್ ಕಂಪನಿಗಳ ಉತ್ಪನ್ನಗಳಿಗೆ ನಿಷೇಧವಿದ್ದು ಈಗ ವಿಶ್ವದಲ್ಲೇ ಭಾರತ ಅತಿ ದೊಡ್ಡ ಡಿಜಿಟಲ್ ಮಾರುಕಟ್ಟೆಯಾಗಿದೆ. ಭಾರತದಲ್ಲಿ ತಿಂಗಳಿಗೆ ಫೇಸ್‍ಬುಕ್ ಗೆ 32.8 ಕೋಟಿ ಸಕ್ರೀಯ ಬಳಕೆದಾರರಿದ್ದು, ವಾಟ್ಸಪ್ 40 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ ವಿಶ್ವದ ಹಲವು ಕಂಪನಿಗಳು ಭಾರತದ ಉದ್ಯಮಗಳ ಮೇಲೆ ಬಂಡವಾಳ ಹೂಡಲು ಆಸಕ್ತಿ ವಹಿಸಿದೆ. ಇದನ್ನೂ ಓದಿ: ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

    ವಾಟ್ಸಪ್ ಮೂಲಕ ಆದಾಯ:
    ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಇನ್ ಸ್ಟಾ ಸ್ಟೇಟಸ್ ನಲ್ಲಿ ಹೇಗೆ ಜಾಹೀರಾತುಗಳು ಬರುತ್ತದೋ ಅದೇ ರೀತಿಯಾಗಿ ವಾಟ್ಸಪ್ ಸ್ಟೇಟಸ್ ನಲ್ಲೂ ಜಾಹೀರಾತು ಪ್ರಕಟ ಮಾಡಲು ಫೇಸ್‍ಬುಕ್ ಮುಂದಾಗುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಇದು ಜಾರಿಯಾಗಿರಲಿಲ್ಲ. ಈ ನಡುವೆ ವಾಟ್ಸಪ್ ಬಿಸಿನೆಸ್ ಅಕೌಂಟ್ ತರುವ ಮೂಲಕ ಮೊದಲ ಬಾರಿಗೆ ಆದಾಯದತ್ತ ದೃಷ್ಟಿ ಹಾಕಿತು.

    ಈ ಮಧ್ಯೆ ಗೂಗಲ್ ಪೇ, ಫೋನ್ ಪೇ ರೀತಿ ಹಣ ಕಳುಹಿಸಲು ವಾಟ್ಸಪ್ ಸಿದ್ಧತೆ ನಡೆಸಿ ಪ್ರಯೋಗಿಕ ಪರೀಕ್ಷೆ ಸಹ ನಡೆಸಿತ್ತು. ಆದರೆ ಖಾಸಗಿತನ ವಿಚಾರದಲ್ಲಿ ಕೆಲ ಪ್ರಶ್ನೆಗಳು ಎದ್ದ ಪರಿಣಾಮ ಇದು ಜಾರಿಯಾಗಿರಲಿಲ್ಲ. ಈಗ ವಾಟ್ಸಪ್ ಅನ್ನು ವೇದಿಕೆಯನ್ನಾಗಿಸಿಕೊಂಡು ಜಿಯೋ ಮಾರ್ಟ್ ವ್ಯವಹಾರವನ್ನು ಉತ್ತೇಜಿಸಿ ಆದಾಯಗಳಿಸಲು ಫೇಸ್‍ಬುಕ್ ಮುಂದಾಗಿದೆ.


    ಜಿಯೋಮಾರ್ಟ್ ವಿಶೇಷತೆ ಏನು?
    ಜಿಯೋ ಮಾರ್ಟ್ ಉಗ್ರಾಣವನ್ನು ನಿರ್ಮಿಸುವ ಬದಲು, “ಆನ್‍ಲೈನ್- ಟು – ಆಫ್‍ಲೈನ್” ಮಾರುಕಟ್ಟೆ ನಿರ್ಮಿಸುತ್ತಿದೆ. ಅಮೆಜಾನ್ ಪ್ರೈಮ್ ನೌ ಮತ್ತು ಗ್ರೂಫರ್ಸ್‍ನಂತೆಯೇ ಕಿರಾಣಿ ವಸ್ತುಗಳನ್ನು ಹತ್ತಿರದ ವ್ಯಾಪಾರಿಗಳಿಂದ ಪಡೆದು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದೆ. ಇದರಿಂದ ಜಿಯೋ ಮಾರ್ಟ್ ಹೊಸ ಉದ್ಯಮವು ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರದೇಶದಲ್ಲಿನ ಆನ್‍ಲೈನ್ ಕೇಂದ್ರೀಕೃತ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸುವ ವೇದಿಕೆಯಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.

    ಆರಂಭದಲ್ಲಿ, ಜಿಯೋಮಾರ್ಟ್, ದೈನಂದಿನ ಅವಶ್ಯಕತೆಗಳಾದ ಸಾಬೂನು, ಶ್ಯಾಂಪೂ ಮತ್ತು ಇತರ ಮನೆ ಬಳಕೆಯ ವಸ್ತುಗಳನ್ನು ಕೇವಲ ಎರಡು ಗಂಟೆಯಲ್ಲಿ ಪೂರೈಕೆ ಮಾಡಲಿದೆ ಎಂದು ಹೇಳಿಕೊಂಡಿದೆ.

    ಭಾರತಕ್ಕೆ ಏನು ಲಾಭ?
    2019-20ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ಮಾತ್ರ ಧನಾತ್ಮಕ ಜಿಡಿಪಿ ಬೆಳವಣಿಗೆ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭವಿಷ್ಯ ನುಡಿದಿದೆ. ಈ ನಿಟ್ಟಿನಲ್ಲಿ ವಿಶ್ವದ ಹಲವು ರಾಷ್ಟ್ರಗಳು ಚೀನಾದ ಅವಲಂಬನೆ ಕಡಿಮೆ ಮಾಡಿ ಭಾರತದಲ್ಲಿ ಹೂಡಿಕೆ ಮಾಡಲು ಮುದಾಗುತ್ತಿದೆ. ಇದರಿಂದಾಗಿ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ವಿಶ್ವದ ಹಲವು ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡರೂ ಭಾರತದ ಮಾರುಕಟ್ಟೆ ಕುಸಿತ ಕಂಡು ಮತ್ತೆ ನಿಧಾನವಾಗಿ ಏಳುತ್ತಿದೆ. ಶತಕೋಟಿ ಜನಸಂಖ್ಯೆ ಇದ್ದರೂ ಕೊರೊನಾ ನಿಯಂತ್ರಣ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೇ ಶ್ಲಾಘಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು 100ಕ್ಕೂ ಅಧಿಕ ದೇಶಗಳಿಗೆ ಭಾರತ ರಫ್ತು ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ವಿದೇಶಿ ಕಂಪನಿಗಳನ್ನು ಸೆಳೆಯಲು ಮುಂದಾಗುತ್ತಿದೆ.

    ಸೌದಿ ಕಂಪನಿಯ ಜೊತೆ ಸಹಿ ಹಾಕಿತ್ತು:
    ರಿಲಯನ್ಸ್ ಇಂಡಸ್ಟ್ರೀಸ್ ಜಿಯೋದ ಮಾತೃ ಸಂಸ್ಥೆಯಾಗಿದ್ದು ಹಲವು ಸಾಲಗಳನ್ನು ಮಾಡಿದ್ದು ಈಗ ಸಾಲದ ಹೊರೆ ಕಡಿಮೆಯಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ವಿದೇಶಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು ಇದು ಮೊದಲೆನಲ್ಲ. ಈ ಹಿಂದೆ ತೈಲ ಕ್ಷೇತ್ರ ಜಾಗತಿಕ ಕಂಪನಿ ಸೌದಿ ಅರಾಮ್ಕೋಗೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿತ್ತು. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕುವುದಾಗಿ ತಿಳಿಸಿತ್ತು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ