Tag: Mark Zuckerberg

  • ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ಜುಕರ್‌ಬರ್ಗ್‌ ಹೇಳಿಕೆಗೆ ಕ್ಷಮೆ ಕೇಳಿದ ಮೆಟಾ – ಈ ವಿಚಾರ ಇಲ್ಲಿಗೆ ಮುಕ್ತಾಯ: ನಿಶಿಕಾಂತ್‌ ದುಬೆ

    ನವದೆಹಲಿ: ಫೇಸ್‌ಬುಕ್‌ (Facebook) ಕಂಪನಿಯ ಮಾತೃಸಂಸ್ಥೆ ಮೆಟಾ (Meta) ಕ್ಷಮೆಯಾಚನೆ ಮಾಡಿದ ಬೆನ್ನಲ್ಲೇ ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇವೆ ಎಂದು ಬಿಜೆಪಿ ಸಂಸದ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ (Nishikant Dubey) ಹೇಳಿದ್ದಾರೆ.

    ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ (Mark Zuckerberg) ಅವರು ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತ ಸೇರಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸರ್ಕಾರಗಳು 2024ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದರು.

    ಈ ಹೇಳಿಕೆಗೆ ಭಾರತದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ಥುರ್ಕಲ್‌ ಅವರು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಉದ್ದೇಶಪೂರ್ವಕವಲ್ಲದ ಈ ತಪ್ಪಿಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

    2024 ರ ಚುನಾವಣೆಯಲ್ಲಿ ಅನೇಕ ಅಧಿಕಾರದಲ್ಲಿರುವ ಪಕ್ಷಗಳು ಮರು ಆಯ್ಕೆಯಾಗಲಿಲ್ಲ ಎಂಬ ಮಾರ್ಕ್ ಜುಕರ್‌ಬರ್ಗ್‌ ಅವರ ಅಭಿಪ್ರಾಯವು ಹಲವಾರು ದೇಶಗಳಿಗೆ ನಿಜವಾಗಿದೆ. ಆದರೆ ಈ ಹೇಳಿಕೆ ಭಾರತಕ್ಕೆ ಅಲ್ಲ. ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

    ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ನಿಶಿಕಾಂತ್‌ ದುಬೆ, ಕೊನೆಗೂ ಮೆಟಾ ಇಂಡಿಯಾದ ಅಧಿಕಾರಿಗಳು ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಇದು ಭಾರತದ ಸಾಮಾನ್ಯ ನಾಗರಿಕರ ಗೆಲುವು. ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ಜನರು ದೇಶದ ಬಲಿಷ್ಠ ನಾಯಕತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಈಗ ನಮ್ಮ ಸಮಿತಿಯ ಜವಾಬ್ದಾರಿ ಈ ವಿಷಯದ ಮೇಲೆ ಕೊನೆಗೊಳ್ಳುತ್ತದೆ. ಭವಿಷ್ಯದಲ್ಲಿ ನಾವು ಇತರ ವಿಷಯಗಳ ಬಗ್ಗೆ ಈ ಸಾಮಾಜಿಕ ವೇದಿಕೆಗಳನ್ನು ಕರೆಯುತ್ತೇವೆ ಎಂದು ಪೋಸ್ಟ್‌ ಮಾಡಿದ್ದಾರೆ.

    ಜುಕರ್‌ಬರ್ಗ್‌ ತಪ್ಪು ಮಾಹಿತಿ ನೀಡಿದ್ದಾರೆ. ಈ ತಪ್ಪಿಗಾಗಿ ಆ ಸಂಸ್ಥೆ ಭಾರತೀಯ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಮೆಟಾಗೆ ಸಮನ್ಸ್‌ ಜಾರಿ ಮಾಡಲಾಗುವುದು ಎಂದು ಮಂಗಳವಾರ ನಿಶಿಕಾಂತ್ ದುಬೆ ತಿಳಿಸಿದ್ದರು.

     

  • ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಚೆನ್ನೈ: ಫೇಸ್‌ಬುಕ್‌ (Facebook) ಕಂಪನಿಯ ಮಾತೃ ಸಂಸ್ಥೆ ಮೆಟಾ (META) ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ (Data Center) ಅನ್ನು ಚೆನ್ನೈನ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪನೆ ಮಾಡಲಿದೆ.

    ಮಾರ್ಚ್ ಆರಂಭದಲ್ಲಿ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಬಳಿಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಕಂಪನಿಯು ರಿಲಯನ್ಸ್‌ (Reliance Industries) ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

    ಅಂಬತ್ತೂರ್ ಇಂಡಸ್ಟ್ರಿಯಲ್ ಎಸ್ಟೇಟ್‌ 10-ಎಕರೆ ಕ್ಯಾಂಪಸ್ ಹೊಂದಿದೆ. ಬ್ರೂಕ್‌ಫೀಲ್ಡ್ ಅಸೆಟ್‌ ಮ್ಯಾನೇಜ್‌ಮೆಂಟ್‌, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿ ಜಂಟಿಯಾಗಿ ಈ ಕ್ಯಾಂಪಸ್‌ನಲ್ಲಿ ಹೂಡಿಕೆ ಮಾಡಿದೆ.

    ಭಾರತದಲ್ಲಿ ಫೇಸ್‌ಬುಕ್ 31.46 ಕೋಟಿ, ಇನ್‌ಸ್ಟಾಗ್ರಾಮ್ 35 ಕೋಟಿ, ವಾಟ್ಸಪ್‌ಗೆ 48 ಕೋಟಿ ಬಳಕೆದಾರರಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಬಳಕೆದಾರರ ಸಂಖ್ಯೆ ದುಪ್ಪಟ್ಟು ಇರುವುದರಿಂದ ಈಗ ಇಲ್ಲೇ ಡೇಟಾ ಸೆಂಟರ್‌ ತೆರೆಯಲು ಮೆಟಾ ಮುಂದಾಗಿದೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಗೂಗಲ್ ದೇಶದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ನವಿ ಮುಂಬೈನಲ್ಲಿ 22.5 ಎಕರೆ ಭೂಮಿಯನ್ನು ಖರೀದಿ ಸಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

     

  • ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಗಾಂಧೀನಗರ: ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ ವೈಭವದ ಆಚರಣೆ ಮನೆ ಮಾಡಿದ. ಈ ನಡುವೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ( Meta CEO Mark Zuckerberg) ಮತ್ತು ಪತ್ನಿ ಪ್ರಿಸ್ಸಿಲ್ಲಾ ಚಾನ್ (Priscilla Chan) ಅವರು ಅನಂತ್ ಅಂಬಾನಿಯ ದುಬಾರಿ ಬೆಲೆಯ ವಾಚ್ ಬಗ್ಗೆ ವಿಚಾರಿಸಿರುವುದು ಅತಿಥಿಗಳ ಗಮನವನ್ನು ಸೆಳೆದಿದೆ.

    ಹೌದು. ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚಾನ್ ಜೊತೆ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಜುಕರ್‌ಬರ್ಗ್ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಅವರ ಕೈಯಲ್ಲಿರುವ ದುಬಾರಿ ವಾಚ್‌ (Watch) ನೋಡಿ ಮಾರುಹೋಗಿದ್ದಾರೆ. ಇದನ್ನೂ ಓದಿ: ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ವೀಡಿಯೋದಲ್ಲಿ ಏನಿದೆ..?: ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ವರ ಅನಂತ್ ಅವರು ನಿಂತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜುಕರ್‌ ಬರ್ಗ್‌ ಅವರ ಪತ್ನಿಯ ಕಣ್ಣಿಗೆ ಅನಂತ್‌ ಅವರ ವಾಚ್‌ ಬಿದ್ದಿದೆ. ಅಲ್ಲದೆ ಅವರಿಗೆ ತುಂಬಾ ಇಷ್ಟವಾಗುತ್ತೆ. ಹೀಗಾಗಿ ಅವರು ವಾಚ್‌ ತುಂಬಾ ಅದ್ಭುತವಾಗಿದೆ ಎಂದು ಹೇಳುತ್ತಾರೆ. ಈ ವೇಳೆ ಜುಕರ್‌ ಬರ್ಗ್‌ ಅವರು.. ಹೌದು. ತುಂಬಾ ಚೆನ್ನಾಗಿದೆ. ನಾನು ಈಗಾಗಲೇ ಅವರಿಗೆ ಹೇಳಿದೆ ಎನ್ನುತ್ತಾರೆ. ಈ ವೇಳೆ ಪ್ರಿಸಿಲ್ಲಾ, ಈ ವಾಚ್​​ ಅನ್ನು ಯಾವ ಕಂಪನಿ ತಯಾರಿಸಿದೆ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನಂತ್, ರಿಶಾರ್​ ಮಿಲ್ ಕಂಪನಿ ಎಂದು ಹೇಳಿದ್ದಾರೆ.

    ಅನಂತ್ ಕೈಯಲ್ಲಿದ್ದ ವಾಚ್ ನೋಡಿ ಜುಕರ್​​ಬರ್ಗ್ ಅವರ ಮನಸ್ಸು ಬದಲಾಗಿದೆ. ಹೀಗಾಗಿ ಮಾತು ಮುಂದವರಿಸಿದ ಅವರು, ನಿಮಗೆ ಗೊತ್ತಾ ನಾನು ಎಂದಿಗೂ ವಾಚ್​​ಗಳನ್ನು ಖರೀದಿಸಲು ಬಯಸಲಿಲ್ಲ. ಆದರೆ ಅನಂತ್‌ ಅವರ ಕೈಯಲ್ಲಿದ್ದ ವಾಚ್ ನೋಡಿ ನನ್ನ ಮನಸ್ಸು ಬದಲಾಯಿತು. ವಾಚ್ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಅಲ್ಲದೆ ಹಲವಾರು ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ.

    ವಾಚ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ: ರಿಶಾರ್​ ಮಿಲ್ (Richard Mille) ಅತ್ಯಂತ ದುಬಾರಿ ವಾಚ್​​ಗಳನ್ನು ತಯಾರಿಸುತ್ತದೆ. ಇದು ಸ್ವಿಜರ್​ಲೆಂಡ್​ನ ಕಂಪನಿ ಆಗಿದೆ. ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ಬೆಲೆ ಬರೋಬ್ಬರಿ 14 ಕೋಟಿ ರೂಪಾಯಿ ಎನ್ನಲಾಗಿದೆ.

  • ಟ್ವಿಟ್ಟರ್‌ಗೆ ಠಕ್ಕರ್ ಕೊಡಲು ಬಿಡುಗಡೆಯಾಯ್ತು ‘ಥ್ರೆಡ್ಸ್’ – 4 ಗಂಟೆಯಲ್ಲಿ 50 ಲಕ್ಷ ಸೈನ್ ಅಪ್

    ಟ್ವಿಟ್ಟರ್‌ಗೆ ಠಕ್ಕರ್ ಕೊಡಲು ಬಿಡುಗಡೆಯಾಯ್ತು ‘ಥ್ರೆಡ್ಸ್’ – 4 ಗಂಟೆಯಲ್ಲಿ 50 ಲಕ್ಷ ಸೈನ್ ಅಪ್

    ವಾಷಿಂಗ್ಟನ್: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ (Meta) ಟ್ವಿಟ್ಟರ್‌ಗೆ (Twitter) ಪೈಪೋಟಿ ನೀಡಲು ತನ್ನದೇ ಆದ ಹೊಸ ಅಪ್ಲಿಕೇಶನ್ ‘ಥ್ರೆಡ್ಸ್’ (Threads) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಬಳಕೆದಾರರು ಈ ಹೊಸ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

    ಥ್ರೆಡ್ಸ್ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಇದನ್ನು ಬಿಡುಗಡೆ ಮಾಡಿದ ಕೇವಲ 2 ಗಂಟೆಗಳಲ್ಲಿ 20 ಲಕ್ಷ ಜನರು ಸೈನ್ ಅಪ್ ಆಗಿದ್ದು, 4 ಗಂಟೆಗಳಲ್ಲಿ 50 ಲಕ್ಷ ಬಳಕೆದಾರರು ಸೈನ್ ಅಪ್ ಮಾಡಿದ್ದಾರೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ತಿಳಿಸಿದ್ದಾರೆ.

    ಎಲೋನ್ ಮಸ್ಕ್‌ನ (Elon Musk) ಟ್ವಿಟ್ಟರ್‌ಗೆ ಠಕ್ಕರ್ ನೀಡಲು ಮುಂದಾಗಿರುವ ಜುಕರ್‌ಬರ್ಗ್ ಥ್ರೆಡ್ಸ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ನಡುವೆ ಥ್ರೆಡ್ಸ್ ಟ್ವಿಟ್ಟರ್ ಅನ್ನು ಹಿಂದಿಕ್ಕಬಹುದು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಜುಕರ್‌ಬರ್ಗ್, ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಸಾಧಿಸಲು 100 ಕೋಟಿಗೂ ಅಧಿಕ ಬಳಕೆದಾರರು ಬೇಕು ಹಾಗೂ ಸಾರ್ವಜನಿಕ ಸಂಭಾಷಣೆಗೆ ಅಪ್ಲಿಕೇಶನ್ ಅನ್ನು ಮುಕ್ತಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ಟ್ವಿಟ್ಟರ್‌ಗೆ ಇದನ್ನು ಸಾಧಿಸೋ ಸಾಮರ್ಥ್ಯ ಇದೆ ಆದರೆ ಅದು ಗುರಿ ತಲುಪಿಲ್ಲ. ಈಗ ನಮ್ಮ ಬಳಿ ಆ ಅವಕಾಶವಿದೆ ಎಂದಿದ್ದಾರೆ. ಇದನ್ನೂ ಓದಿ: ಲೇಸರ್ ಇಂಟರ್ನೆಟ್ ತಂತ್ರಜ್ಞಾನ – ಭಾರತದಲ್ಲಿ ಇದರ ಬಳಕೆ ಹೇಗೆ?

    ಜುಕರ್‌ಬರ್ಗ್ ಈ ಮೊದಲು ಥ್ರೆಡ್ಸ್ ಸಂಭಾಷಣೆಗೆ ಮುಕ್ತ ಹಾಗೂ ಸ್ನೇಹಪರ ಸಾರ್ವಜನಕರಿಗಾಗಿರೋ ಒಂದು ಮಾಧ್ಯಮ ಎಂದು ಪರಿಚಯಿಸಿದ್ದರು. ಇದು ಇನ್‌ಸ್ಟಾಗ್ರಾಮ್‌ನ ಅತ್ಯುತ್ತಮ ಭಾಗವಾಗಲಿದ್ದು, ಬಳಕೆದಾರರಿಗೆ ಹೊಸ ಅನುಭವ ಸೃಷ್ಟಿಸುವ ಕಲ್ಪನೆಯಿದೆ ಎಂದಿದ್ದರು.

    11 ವರ್ಷಗಳಲ್ಲೇ ಮೊದಲು ಜುಕರ್‌ಬರ್ಗ್ ಟ್ವೀಟ್:
    ಕುತೂಹಲಕಾರಿ ಅಂಶವೆಂದರೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ 11 ವರ್ಷಗಳ ನಂತರ ಮೊದಲ ಬಾರಿ ಒಂದು ಮೀಮ್ ಅನ್ನು ಟ್ವೀಟ್ ಮಾಡಿದ್ದಾರೆ. ಥ್ರೆಡ್ಸ್ ಅನ್ನು ಅನಾವರಣಗೊಳಿಸಿದ ಬಳಿಕ ಜುಕರ್‌ಬರ್ಗ್ ಎಲೋನ್ ಮಸ್ಕ್‌ಗೆ ಸವಾಲು ಎಸೆಯುವಂತಹ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.

    ಅವರು ಹಂಚಿಕೊಂಡಿರುವ ಮೀಮ್‌ನಲ್ಲಿ 2 ಸ್ಪೈಡರ್ ಮ್ಯಾನ್‌ಗಳು ಮುಖಾಮುಖಿಯಾಗಿರೋ ಕಾರ್ಟೂನ್ ಚಿತ್ರ ಇದೆ. ಆದರೆ ಟ್ವೀಟ್‌ಗೆ ಅವರು ಯಾವುದೇ ಕ್ಯಾಪ್ಶನ್ ನೀಡಿಲ್ಲ. ಟ್ವಿಟ್ಟರ್‌ಗೆ ಪೈಪೋಟ್ ನೀಡಲು ಈಗ ಥ್ರೆಡ್ಸ್ ಬಂದಿದೆ ಎನ್ನೋ ರೀತಿ ಇದು ಬಿಂಬಿತವಾಗುತ್ತಿದೆ. ನೆಟ್ಟಿಗರು ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ – 4,000 ನುರಿತ ಉದ್ಯೋಗಿಗಳು ಟಾರ್ಗೆಟ್

    ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ – 4,000 ನುರಿತ ಉದ್ಯೋಗಿಗಳು ಟಾರ್ಗೆಟ್

    ವಾಷಿಂಗ್ಟನ್: ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿ ಮೆಟಾ (Meta) ಬುಧವಾರದಿಂದ ಮತ್ತೊಂದು ಸುತ್ತು ಉದ್ಯೋಗಿಗಳನ್ನು (Employees) ಸಾಮೂಹಿಕವಾಗಿ ವಜಾಗೊಳಿಸಲು (Layoff) ಸಿದ್ಧವಾಗಿದೆ. ಈ ಬಾರಿಯ ವಜಾ ಪ್ರಕ್ರಿಯೆ ಫೇಸ್‌ಬುಕ್, ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್‌ನ ಸುಮಾರು 4,000ಕ್ಕೂ ಅಧಿಕ ನುರಿತ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

    ಕಳೆದ ತಿಂಗಳು ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಏಪ್ರಿಲ್‌ನಲ್ಲಿ ಕಂಪನಿಯ ಸುಮಾರು 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಮೆಟಾ ವಜಾ ಪ್ರಕ್ರಿಯೆ ಪ್ರಾರಂಭಿಸಲು ಮುಂದಾಗಿದ್ದು, ಈ ವಾರದೊಳಗೆ 4,000 ಕ್ಕೂ ಅಧಿಕ ನುರಿತ ಉದ್ಯೋಗಿಗಳನ್ನೇ ವಜಾಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ಕಂಪನಿ ತನ್ನ ತಾಂತ್ರಿಕ ತಂಡದಲ್ಲಿನ ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಈ ಬಗೆಗಿನ ಮಾಹಿತಿಯನ್ನು ತಿಳಿಸಲು ಪ್ರಾರಂಭಿಸಿದೆ. ನಮ್ಮ ತಂಡದ ಗಾತ್ರವನ್ನು ಸುಮಾರು 10,000 ಉದ್ಯೋಗಿಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಶೇ.13 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಮೆಟಾ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಕಂಪನಿ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ವಾಷಿಂಗ್ಟನ್: ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆ ಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಲು ವಾಟ್ಸಪ್ ಅನುಮತಿ ನೀಡಿದೆ.

    ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹಾಗೂ ಧನ್ಯವಾದದ ಎಮೋಜಿಗಳನ್ನಷ್ಟೇ ರಿಯಾಕ್ಷನ್ ಆಗಿ ಕಳುಹಿಸಲು ಅವಕಾಶ ನೀಡಿತ್ತು. ಇದೀಗ ರಿಯಾಕ್ಷನ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಬಹುದಾಗಿದ್ದು, ಈ ಬಗ್ಗೆ ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ರೋಲ್‌ಔಟ್ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ಬೀಟಾ ಪರೀಕ್ಷಕರ ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಹಲವಾರು ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಬಳಕೆದಾರರು ವಾಟ್ಸಪ್ ಅನ್ನು ಇನ್ನೊಂದು ಹ್ಯಾಂಡ್‌ಸೆಟ್‌ನಿಂದ ಲಾಗ್‌ಇನ್ ಮಾಡಲು ಆಂಡ್ರಾಯ್ಡ್‌ಗಳಿಗಾಗಿ ಚ್ಯಾಟ್ ಸಿಂಕ್ ಫೀಚರ್, ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ಸಾಮರ್ಥ್ಯದಂತಹ ಫೀಚರ್‌ಗಳು ಟೆಸ್ಟಿಂಗ್‌ನಲ್ಲಿ ಒಳಗೊಂಡಿವೆ. ಇದನ್ನೂ ಓದಿ: ಹಿಂದೂ ಬಾಲಕಿಯ ಹೃದಯ ಮುಸ್ಲಿಂ ಯುವಕನಿಗೆ ಕಸಿ

    ಜೂನ್‌ನಲ್ಲಿ ವಾಟ್ಸಪ್ ಬಳಕೆದಾರರಿಗೆ ಗೌಪ್ಯತೆಯನ್ನು ನಿಯಂತ್ರಿಸುವ ಫೀಚರ್‌ಗಳನ್ನು ಹೊರತರಲು ಪ್ರಾರಂಭಿಸಿತು. ಅದರಲ್ಲಿ ಕೊನೆಯದಾಗಿ ಆನ್‌ಲೈನ್‌ನಲ್ಲಿದ್ದ ಸಮಯವನ್ನು ಮರೆಮಾಡುವುದು ಹಾಗೂ ಪ್ರೊಫೈಲ್ ಫೋಟೋವನ್ನು ಆಯ್ಕೆ ಮಾಡಿದವರಿಗಷ್ಟೇ ತೋರುವಂತೆ ಮಾಡುವಂತಹ ಅವಕಾಶವನ್ನು ನೀಡಿದೆ.

    ಜುಕರ್‌ಬರ್ಗ್ ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಿಂದ ಐಫೋನ್‌ಗೆ ತಮ್ಮ ವಾಟ್ಸಪ್ ಡೇಟಾವನ್ನು ಸುಲಭವಾಗಿ ವರ್ಗಾಯಿಸುವ ಸಾಮರ್ಥ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇದು ಇನ್ನೂ ಪರೀಕ್ಷೆಯಲ್ಲಿದೆ. ಇದನ್ನೂ ಓದಿ: ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    Live Tv
    [brid partner=56869869 player=32851 video=960834 autoplay=true]

  • ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಹಣ ಸಂಪಾದಿಸಿ ಎಂದ ಜುಕರ್‌ಬರ್ಗ್

    ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಹಣ ಸಂಪಾದಿಸಿ ಎಂದ ಜುಕರ್‌ಬರ್ಗ್

    ವಾಷಿಂಗ್ಟನ್: ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಿದ್ದಾರೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ 2024ರ ವರೆಗೆ ಆದಾಯ ಹಂಚಿಕೆಯ ಯೋಜನೆಯನ್ನು ತಡೆ ಹಿಡಿಯುತ್ತದೆ ಎಂದು ಫೇಸ್‌ಬುಕ್ ಸಿಇಒ ತಮ್ಮ ಅಧಿಕೃತ ಖಾತೆಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ನಾವು 2024ರ ವರೆಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಆದಾಯ ಹಂಚಿಕೆಯನ್ನು ತಡೆಹಿಡಿಯುತ್ತೇವೆ. ಅವುಗಳಲ್ಲಿ ಪಾವತಿಸಲಾಗುವ ಆನ್‌ಲೈನ್ ಈವೆಂಟ್‌ಗಳು, ಸಬ್ಸ್‌ಕ್ರಿಪ್ಷನ್‌ಗಳು, ಬ್ಯಾಡ್ಜ್‌ಗಳು ಹಾಗೂ ಬುಲೆಟಿನ್‌ಗಳು ಸೇರಿರುತ್ತವೆ ಎಂದು ತಿಳಿಸಿದ್ದಾರೆ.

    ಇದರೊಂದಿಗೆ ಜುಕರ್‌ಬರ್ಗ್ ಈ ಎರಡು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಸಂಪಾದಿಸುವ ಹೊಸ ಮಾರ್ಗಗಳ ಬಗ್ಗೆಯೂ ತಿಳಿಸಿದ್ದಾರೆ. ಇದಕ್ಕಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಹೊಸ ಫೀಚರ್‌ಗಳನ್ನು ತರಲಿದ್ದಾರೆ ಎಂದು ತಿಳಿಸಿದ್ದಾರೆ.

    ಹೊಸ ಫೀಚರ್‌ಗಳು:
    ಇಂಟರ್‌ಆಪರೇಬಲ್ ಸಬ್ಸ್‌ಕ್ರಿಪ್ಷನ್‌ಗಳು: ಇತರ ಪ್ಲಾಟ್‌ಫಾರ್ಮ್ ಬಳಕೆದಾರರು ಫೇಸ್‌ಬುಕ್ ಕ್ರಿಯೇಟರ್(ರಚನಾಕಾರರು)ಗಳಿಗೆ ಪಾವತಿಸುವ ವೇಳೆ ಫೇಸ್‌ಬುಕ್ ಗುಂಪುಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

    ಫೇಸ್‌ಬುಕ್ ಸ್ಟಾರ್ಸ್: ಕಂಪನಿಯು ಎಲ್ಲಾ ಅರ್ಹ ರಚನೆಕಾರರಿಗೆ ಸ್ಟಾರ್ಸ್ ಎಂಬ ಫೀಚರ್ ಅನ್ನು ತರುತ್ತಿದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಈ ಫೀಚರ್ ಮೂಲಕ ಹೆಚ್ಚಿನ ಜನರು ತಮ್ಮ ರೀಲ್ಸ್‌, ಲೈವ್ ಅಥವಾ ವಿಒಡಿ ವೀಡಿಯೊಗಳಿಂದ ಗಳಿಸಲು ಪ್ರಾರಂಭಿಸಬಹುದು.

    ಹಣಗಳಿಸುವ ರೀಲ್ಸ್: ಕಂಪನಿ ಫೇಸ್‌ಬುಕ್‌ನಲ್ಲಿ ಹೆಚ್ಚಿನ ರಚನೆಕಾರರಿಗೆ ರೀಲ್ಸ್ ಪ್ಲೇ ಬೋನಸ್ ಪ್ರೋಗ್ರಾಂ ಅನ್ನು ತೆರೆಯುತ್ತಿದೆ. ಇದು ರಚನೆಕಾರರು ತಮ್ಮ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಫೇಸ್‌ಬುಕ್‌ಗೆ ಕ್ರಾಸ್-ಪೋಸ್ಟ್ ಮಾಡಲು ಹಾಗೂ ಅಲ್ಲಿಯೂ ಹಣಗಳಿಸಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಬಂದೇ ಬಿಡ್ತು ಎಡಿಟ್ ಬಟನ್ – ಟ್ವಿಟ್ಟರ್ ರೋಲ್‌ಔಟ್ ಪ್ರಾರಂಭ

    ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್: ಕಂಪನಿಯು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹೊಸ ಯೋಜನೆಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಅಲ್ಲಿ ರಚನೆಕಾರರು ತಮಗೆ ಬೇಕಾದ ವಿಷಯಗಳನ್ನು ಹುಡುಕಬಹುದು, ಪಾವತಿಸಬಹುದು ಹಾಗೂ ಬ್ರ‍್ಯಾಂಡ್‌ಗಳಿಗೆ ಹೊಸ ಪಾಲುದಾರಿಕೆ ಅವಕಾಶಗಳನ್ನು ಹಂಚಿಕೊಳ್ಳಬಹುದು ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.

    Live Tv

  • ಫೇಸ್‌ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್‌ಬರ್ಗ್

    ಫೇಸ್‌ಬುಕ್ ಉದ್ಯೋಗಿಗಳು ಇನ್ನು ಮುಂದೆ ಮೆಟಾಮೇಟ್ಸ್: ಜುಕರ್‌ಬರ್ಗ್

    ವಾಷಿಂಗ್ಟನ್: ಈ ಹಿಂದೆ ಫೇಸ್‌ಬುಕ್ ಎಂದು ಕರೆಯಲಾಗುತ್ತಿದ್ದ ಮೆಟಾ ಕಂಪನಿಯ ಉದ್ಯೋಗಿಗಳು ಇನ್ನು ಮುಂದೆ ಕೇವಲ ಉದ್ಯೋಗಿಗಳಲ್ಲ. ಅವರನ್ನು ಇನ್ನು ಮೆಟಾ ಮೇಟ್ಸ್ ಎಂದು ಕರೆಯಲಾಗುತ್ತದೆ.

    ಹೌದು, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ತನ್ನ ಉದ್ಯೋಗಿಗಳನ್ನು ಮೆಟಾಮೇಟ್ಸ್ ಎನ್ನಲು ಬಯಸುತ್ತಾರೆ ಎಂದಿದ್ದಾರೆ. ಇದರೊಂದಿಗೆ ಕಂಪನಿಯ ಹೊಸ ಧ್ಯೇಯವಾಕ್ಯವನ್ನೂ ತಿಳಿಸಿದ್ದಾರೆ. ಮೆಟಾ, ಮೆಟಾಮೇಟ್ಸ್, ಮೀ ಎಂಬುದು ಕಂಪನಿಯ ಹೊಸ ಧ್ಯೇಯವಾಕ್ಯವಾಗಲಿದೆ. ಇದನ್ನೂ ಓದಿ: ವಾಟ್ಸಪ್‌ಗೂ ಬರಲಿದೆ ಫೇಸ್‌ಬುಕ್‌ನಂತಹ ಕವರ್ ಫೋಟೋ ಫೀಚರ್

    ಮೆಟಾ, ಮೆಟಾಮೇಟ್ಸ್, ಮಿ ಎಂದರೆ ಕಂಪನಿ ಹಾಗೂ ಮಿಷನ್‌ನ ಉತ್ತಮ ಮೇಲ್ವಿಚಾರಕರು. ಇದು ನಮ್ಮ ಸಾಮೂಹಿಕ ಯಶಸ್ಸಿಗೆ, ಕಂಪನಿ ಸದಸ್ಯರ ಜವಾಬ್ದಾರಿಯುತ ಕಾರ್ಯಕ್ಕೆ, ಕಾಳಜಿಗೆ ಈ ಹೆಸರು ನೀಡಲಾಗುತ್ತಿದೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ. ಇದನ್ನೂ ಓದಿ: ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್

    ಮೆಟಾ ಇನ್ನು ಮುಂದೆ ತನ್ನ ಉದ್ಯೋಗಿಗಳನ್ನು ಉಲ್ಲೇಖಿಸುವಾಗ ಮೆಟಾಮೇಟ್ಸ್ ಎಂದು ಕರೆಯಲಿದೆ. ಈ ರೀತಿ ವಿಭಿನ್ನ ಹೆಸರಿನಿಂದ ಉದ್ಯೋಗಿಗಳನ್ನು ಕರೆಯುತ್ತಿರುವುದು ಫೇಸ್‌ಬುಕ್ ಮೊದಲ ಟೆಕ್ ಕಂಪನಿಯಲ್ಲ. ಗೂಗಲ್ ತನ್ನ ಉದ್ಯೋಗಿಗಳನ್ನು ಗೂಗ್ಲರ್ಸ್ ಎಂದು ಕರೆದರೆ ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳನ್ನು ಮೈಕ್ರೋಸಾಟೀಸ್ ಎಂದು ಕರೆಯುತ್ತದೆ.

  • ಫೇಸ್‍ಬುಕ್ ಒಡೆಯನಿಗಿಂತ ಈಗ ಅದಾನಿ, ಅಂಬಾನಿ ಶ್ರೀಮಂತರು

    ಫೇಸ್‍ಬುಕ್ ಒಡೆಯನಿಗಿಂತ ಈಗ ಅದಾನಿ, ಅಂಬಾನಿ ಶ್ರೀಮಂತರು

    ನ್ಯೂಯಾರ್ಕ್: ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಬಳಕೆದಾರರ ಸಂಖ್ಯೆ ತಗ್ಗಿದ ಹಿನ್ನೆಲೆಯಲ್ಲಿ ಅದರ ಮಾತೃಸಂಸ್ಥೆ ಮೆಟಾ ಕಂಪನಿಯ ಷೇರುಗಳು ಶೇ.26ರಷ್ಟು ಕುಸಿತ ಕಂಡಿವೆ. ಇದರ ಪರಿಣಾಮವಾಗಿ ಆ ಕಂಪನಿಯ ಒಡೆಯ ಮಾರ್ಕ್ ಜುಕರ್‌ಬರ್ಗ್ ಸಂಪತ್ತಿನ ಮೌಲ್ಯವೂ ಇಳಿಕೆಯಾಗಿದೆ.

    ಸಿರಿವಂತಿಕೆಯಲ್ಲಿ ಭಾರತದ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿಗಿಂತಲೂ ಮಾರ್ಕ್ ಜುಕರ್‌ಬರ್ಗ್ ಹಿಂದೆ ಬಿದ್ದಿದ್ದಾರೆ. ಶ್ರೀಮಂತರ ಪಟ್ಟಿಯಿಂದ ಮಾರ್ಕ್ ಜುಕರ್‌ಬರ್ಗ್ ಅವರು 12ನೇ ಸ್ಥಾನಕ್ಕೆ ಜಾರಿದ್ದಾರೆ. ಗೌತಮ್ ಅದಾನಿ 10ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ 11 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಫೇಸ್‍ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ಬಹಿರಂಗಪಡಿಸಿದೆ.

    ಮೇಟಾ ಹಣಕಾಸು ಅಧಿಕಾರಿ ಡೇವಿಡ್ ವೆಹ್ನಾರ್ ಪ್ರಕಾರ, ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್‍ಬುಕ್ ಬಳಕೆದಾರರ ಸಂಖ್ಯೆಯು ಕೂಡಾ ಕಡಿಮೆಯಾಗುತ್ತಾ ಬರುತ್ತಿದೆ. ನಾವು ಈ ಅಂಶಗಳ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ.

    ಏರ್ಟೆಲ್, ರಿಲಯನ್ಸ್ ಜಿಯೋ, ವೋಡಫೋನ್ ನೆಟ್‍ವರ್ಕ್‍ಗಳು ತಮ್ಮ ಡಾಟಾ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ಕೆಲವು ಬಳಕೆದಾರರ ಮೇಲೆ ಡಾಟಾ ಪ್ಲ್ಯಾನ್ ಬೆಲೆ ಹೆಚ್ಚಳದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.

    ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ. ಟಿಕ್‍ಟಾಕ್ ಮತ್ತು ಯೂಟ್ಯೂಬ್‍ನಿಂದ ಹೆಚ್ಚಿನ ಸ್ಪರ್ಧೆ ನೀಡುತ್ತಿದೆ. ಇದರಿಂದ ಫೇಸ್‍ಬುಕ್ ಜಾಹೀರಾತುಗಳು ಕಡಿಮೆಯಾಗಬಹುದಾದ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಬಳಕೆದಾರರ ಸಂಖ್ಯೆ ಕಡಿಮೆಯಾದ ವಿಚಾರ ತಿಳಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಮೆಟಾ ಷೇರುಗಳು ಶೇ.23ರಷ್ಟು ಕುಸಿದಿದ್ದು, ಕಂಪನಿಗೆ ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ನ್ಯೂಯಾರ್ಕ್: 18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

    3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಫೇಸ್‍ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ಬಹಿರಂಗಪಡಿಸಿದೆ.

    ಮೇಟಾ ಹಣಕಾಸು ಅಧಿಕಾರಿ ಡೇವಿಡ್ ವೆಹ್ನಾರ್ ಹೇಳವ ಪ್ರಕಾರ, ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್‍ಬುಕ್ ಬಳಕೆದಾರರ ಸಂಖ್ಯೆಯು ಕೂಡಾ ಕಡಿಮೆಯಾಗುತ್ತಾ ಬರುತ್ತಿದೆ. ನಾವು ಈ ಅಂಶಗಳ ಜೊತೆಗ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ.

    ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ನೆಟ್‍ವರ್ಕ್‍ಗಳು ತಮ್ಮ ಡಾಟಾ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ಕೆಲವು ಬಳಕೆ ದಾರರ ಮೇಲೆ ಡಾಟಾ ಪ್ಲ್ಯಾನ್ ಬೆಲೆ ಹೆಚ್ಚಳದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.

    ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ. ಟಿಕ್‍ಟಾಕ್ ಮತ್ತು ಯೂಟ್ಯೂಬ್‍ನಿಂದ ಹೆಚ್ಚಿದ ಸ್ಪರ್ಧೆ ನೀಡುತ್ತಿದೆ. ಇದರಿಂದ ಫೇಸ್‍ಬುಕ್ ಜಾಹೀರಾತುಗಳು ಕಡಿಮೆಯಾಗಬಹುದಾದ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಬಳಕೆದಾರರ ಸಂಖ್ಯೆ ಕಡಿಮೆಯಾಗಿದ ವಿಚಾರ ತಿಳಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಮೆಟಾ ಷೇರುಗಳು ಶೇ.23ರಷ್ಟು ಕುಸಿಸಿದ್ದು, ಕಂಪನಿಗೆ ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಭಾರತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟಹೆಸರು ತರುತ್ತಿವೆ. ಆದರೆ ಇವನ್ನು ನಕಲಿ ಸುದ್ದಿಗಳು ಎಂದು ಗುರುತಿಸಿ ತೆಗೆದುಹಾಕುವಂತೆ ಹೇಳಿದರೂ ಅದನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಗೂಗಲ್, ಟ್ವೀಟರ್, ಫೇಸ್‍ಬುಕ್ ಹಾಗೂ ಇತರ ಕೆಲವು ಸಾಮಾಜಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಗ್ಯಾರೇಜ್ ಧಗಧಗ – 3 ಬೈಕ್, 2 ಕಾರು ಸುಟ್ಟು ಕರಕಲು

    ಅಲ್ಲದೆ, ಸುಳ್ಳು ಸುದ್ದಿ ತಡೆಯದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂಬಂಧ ಸೋಮವಾರ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಕಂಪನಿಗಳ ನಿರ್ಲಕ್ಷ್ಯವನ್ನು ಬಲವಾಗಿ ಟೀಕಿಸಿ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.