Tag: Mark Boucher

  • ರೋಹಿತ್‌ ಪತ್ನಿ ರಿತಿಕಾ ಅಸಮಾಧಾನ ಬೆನ್ನಲ್ಲೇ ಪಾಂಡ್ಯನಿಗೆ ಬಿಗ್‌ ವಾರ್ನಿಂಗ್‌!

    ರೋಹಿತ್‌ ಪತ್ನಿ ರಿತಿಕಾ ಅಸಮಾಧಾನ ಬೆನ್ನಲ್ಲೇ ಪಾಂಡ್ಯನಿಗೆ ಬಿಗ್‌ ವಾರ್ನಿಂಗ್‌!

    ಮುಂಬೈ: 2024ರ ಐಪಿಎಲ್‌ (IPL 2024) ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದ್ದು, ಹೊಸ ಹೊಸ ಬೆಳವಣಿಗೆಗಳು ಬರುತ್ತಿವೆ. ಪ್ರಮುಖ ಆಟಗಾರರ ಬದಲಾವಣೆಯಿಂದ 10 ತಂಡಗಳೂ ಬಲಿಷ್ಠವಾಗಿದ್ದು, ಈ ಬಾರಿಯ ಚಾಂಪಿಯನ್‌ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ನಡುವೆ ಮುಂಬೈ ಇಂಡಿಯನ್ಸ್‌ (Mumbai Indians) ತಂಡದಲ್ಲಿ ನಾಯಕತ್ವ ಬದಲಾವಣೆಯಾದ ಬಳಿಕ ಹಲವು ವಿಷಯಗಳು ಚರ್ಚೆಯಾಗುತ್ತಿವೆ.

    ಇತ್ತೀಚೆಗೆ ಮುಂಬೈ ಕೋಚ್ ಮಾರ್ಕ್ ಬೌಚರ್ (Mark Boucher), ರೋಹಿತ್​​ರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ರೋಹಿತ್​ ಪತ್ನಿ ರಿತಿಕಾ ಸಜ್ದೇಹ್ (Ritika Sajdeh) ಅವರ ಪ್ರತಿಕ್ರಿಯಿಸಿ, ಇದರಲ್ಲಿ ಎಲ್ಲವೂ ಸರಿಯಿಲ್ಲ, ಬಹಳ ವಿಷಯಗಳು ತಪ್ಪಿನಿಂದ ಕೂಡಿದೆ ಎಂದು ಕಾಮೆಂಟ್‌ ಮಾಡಿದ್ದರು. ಈ ವಿಷಯ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ಕಮೆಂಟೇಟರ್‌ ಆಕಾಶ್‌ ಚೋಪ್ರಾ ಹಾರ್ದಿಕ್‌ ಪಾಂಡ್ಯಗೆ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಆಕಾಶ್ ಚೋಪ್ರಾ, ರಿತಿಕಾ ಅವರ ಕಾಮೆಂಟ್‌ ನಂತರ ಮುಂಬೈ ಇಂಡಿಯನ್ಸ್‌ ಕುಟುಂಬವು ಒಂದು ತಂಡವಾಗಿ ಮುಂದುವರಿಯುವುದೇ ಎಂಬುದು ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ICC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟ – ಹೊಸ ಇತಿಹಾಸ ನಿರ್ಮಿಸಿದ ಬೂಮ್‌ ಬೂಮ್‌ ಬುಮ್ರಾ

    ನಾನು ಮಾರ್ಕ್ ಬೌಚರ್ ಅವರೊಂದಿಗಿನ ಸಂದರ್ಶನ ಕೇಳುತ್ತಿದ್ದೆ, ಅಲ್ಲಿ ಅವರು ನಾಯಕತ್ವವನ್ನು ಏಕೆ ಬದಲಾಯಿಸಿದರು ಎಂದು ವಿವರಿಸಿದರು. ಇದೇ ವೇಳೆ ಪ್ರಮುಖ ಕಾರಣಗಳನ್ನು ತಿಳಿಸಿದ್ದಾರೆ. ಆದ್ರೆ ಇದಕ್ಕೆ ರಿತಿಕಾ ಅವರು ಮಾಡಿದ ಕಾಮೆಂಟ್‌ ಭಾರೀ ಸದ್ದು ಮಾಡುತ್ತಿದೆ ಅನ್ನೋದಂತೂ ಸತ್ಯ. ಒಟ್ಟಿನಲ್ಲಿ ಯಾವುದು ಸರಿ? ಯಾವುದು ತಪ್ಪು ಅನ್ನೋದು ನಮಗೆ ತಿಳಿದಿಲ್ಲ. ಆದ್ರೆ ಮುಂಬೈ ಅಸಾಧಾರಣ ತಂಡ ಹೊಂದಿರೋದ್ರಿಂದ ಹಾರ್ದಿಕ್‌ ಪಾಂಡ್ಯ ಅವರ ಮೇಲೆ ಒತ್ತಡವಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಂತಹ ದೊಡ್ಡ ಜವಾಬ್ದಾರಿ ಅವರ ಮೇಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಪಾಂಡ್ಯ ಇನ್‌ಸ್ಟಾ ಅನ್‌ಫಾಲೋ ಮಾಡಿದ್ರಾ ರೋಹಿತ್‌?
    ರೋಹಿತ್‌ ಪತ್ನಿ ರಿತಿಕಾ ಹೇಳಿಕೆ ಬಳಿಕ ಹಾರ್ದಿಕ್‌ ಪಾಂಡ್ಯ ಹಾಗೂ ರೋಹಿತ್‌ ಶರ್ಮಾ ಪರಸ್ಪರ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದ್ರೆ ಈವರೆಗೆ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್‌‌ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ

    ಮಾರ್ಕ್ ಬೌಚರ್ ಹೇಳಿದ್ದೇನು?
    ಮುಂಬೈ ಇಂಡಿಯನ್ಸ್‌ ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ಕೆಳಗಿಳಿಸಿದ್ದಕ್ಕೆ ಸಂಬಂಧಿಸಿದಂತೆ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದರು. ಇದು ಸಂಪೂರ್ಣವಾಗಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರವೆಂದು ನಾನು ಭಾವಿಸುತ್ತೇನೆ, ಜೊತೆಗೆ ಪರಿವರ್ತನೆಯ ಹಂತವೂ ಹೌದು, ಆದ್ರೆ ಬಹಳಷ್ಟು ಜನರಿಗೆ ಇದು ಅರ್ಥವಾಗುವುದಿಲ್ಲ. ಇಲ್ಲಿನ ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ಕ್ರಿಕೆಟ್‌ನಲ್ಲಿ ಭಾವನೆಗಳ ಹೊರತಾಗಿ ಯೋಚಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ

    ಈ ನಿರ್ಧಾರವು ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ ಎಂದು ಮಾರ್ಕ್ ಬೌಚರ್ ಹೇಳಿದ್ದರು. ಇದಕ್ಕೆ ರೋಹಿತ್‌ ಶರ್ಮಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಂತೆ, ರೋಹಿತ್‌ ಪತ್ನಿ ರಿತಿಕಾ ಸಜ್ದೇಹ್ ಸಹ ಪ್ರತಿಕ್ರಿಯೆ ನೀಡಿದ್ದರು. ಇದರಲ್ಲಿ ಎಲ್ಲವೂ ಸರಿಯಿಲ್ಲ, ಕೆಲವು ತಪ್ಪುಗಳಿದೆ ಎಂದು ಕಾಮೆಂಟ್‌ ಮಾಡಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಕೇಪ್ ಟೌನ್: ದಕ್ಷಿಣ ಆಫ್ರಿಕಾ ತಂಡಕ್ಕೆ ರೀ ಎಂಟ್ರಿ ಕೊಡಲು ಸಿದ್ಧವಾಗಿರುವ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್‍ಗೆ ತಂಡದ ಹೆಡ್ ಕೋಚ್ ಮಾರ್ಕ್ ಬೌಚರ್ ಅಧಿಕೃತವಾಗಿ ಡೆಡ್‍ಲೈನ್ ನೀಡಿದ್ದಾರೆ. ತಂಡಕ್ಕೆ ಮತ್ತೆ ಸೇರ್ಪಡೆಯಾಗ ಬೇಕಾದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಜೂನ್‍ನಲ್ಲಿ ತಂಡದ ಆಯ್ಕೆಗೆ ಲಭ್ಯವಿರಬೇಕು ಎಂದು ಬೌಚರ್ ಹೇಳಿದ್ದಾರೆ.

    ಮಾರ್ಚ್ 9ರಿಂದ ಆರಂಭವಾಗಲಿರುವ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯ ಮೇ24 ರಂದು ನಡೆಯಲಿದೆ. ಆರ್ ಸಿಬಿ ಪರ ಟೂರ್ನಿಯಲ್ಲಿ ಎಬಿಡಿ ಆಡುತ್ತಿದ್ದಾರೆ. ಇತ್ತ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಜೂನ್‍ನಿಂದ ಸಿದ್ಧತೆ ಆರಂಭಿಸಲು ದಕ್ಷಿಣ ಆಫ್ರಿಕಾ ತಂಡ ನಿರ್ಧರಿಸಿದೆ. ಐಪಿಎಲ್ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾಗಿಯಾಗಲಿದೆ. ಈ ಸರಣಿಯಲ್ಲಿ ಆಡುವ ಬಹುತೇಕ ಆಟಗಾರರು ಮುಂದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂದು ಪರೋಕ್ಷವಾಗಿ ಬೌಚರ್ ತಿಳಿಸಿದ್ದಾರೆ. ಆ ವೇಳೆ ತಂಡದ ಆಯ್ಕೆಗೆ ಲಭ್ಯವಾಗುವ ಆಟಗಾರರನ್ನು ಪರಿಗಣಿಸಲಾಗುವುದು ಎಂದಿದ್ದಾರೆ.

    2018ರ ಐಪಿಎಲ್ ಬಳಿಕ ಸ್ವದೇಶಕ್ಕೆ ತೆರಳಿದ್ದ ಎಬಿ ಡಿವಿಲಿಯರ್ಸ್ ಅಚ್ಚರಿ ಎಂಬಂತೆ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದರು. ಆದರೆ 2019ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ತಾವು ರಾಷ್ಟ್ರೀಯ ತಂಡಕ್ಕೆ ಮರಳುವ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ತಿಳಿಸಿದ್ದರು. ಅದರಂತೆ ಶ್ರೀಲಂಕಾ ವಿರುದ್ಧದ ಟೂರ್ನಿಗೆ ತಂಡವನ್ನು ಪ್ರಕಟಿಸುವ ಮುನ್ನ ನಿವೃತ್ತಿ ವಾಪಸ್ ಪಡೆದು ಆಯ್ಕೆ ಸಮಿತಿಗೆ ಲಭ್ಯವಾಗುವ ಯೋಚನೆಯಲ್ಲಿ ಎಬಿಡಿ ಇದ್ದರು ಎನ್ನಲಾಗಿದೆ.

    ಎಬಿ ಡಿವಿಲಿಯರ್ಸ್ ಕಳೆದ ವರ್ಷದ ಅಂತ್ಯದ ವೇಳೆಗೆ ಕ್ರಿಕೆಟ್‍ಗೆ ರೀ ಎಂಟ್ರಿ ನೀಡುವ ಕುರಿತು ಚರ್ಚೆ ನಡೆದಿತ್ತು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಸ್ ಹಂತಕ್ಕೂ ತೆರಳದ ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಬಹುಬೇಗ ನಿರ್ಗಮಿಸಿತ್ತು. ಟೂರ್ನಿಯ ಬಳಿಕ ತಂಡದ ಅನುಭವಿ ಆಟಗಾರರು ಕೂಡ ಎಬಿ ಡಿವಿಲಿಯರ್ಸ್ ರಂತಹ ಆಟಗಾರರ ಅಗತ್ಯ ತಂಡಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಕೆಲ ಕ್ರಿಕೆಟಿಗರು ಎಬಿಡಿ ಅವರ ನಡೆಯನ್ನು ಟೀಕೆ ಮಾಡಿದ್ದರು. ಟಿ20 ಲೀಗ್‍ಗಳಲ್ಲಿ ಆಡಲು ಎಬಿಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇಂತಹ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಬಿಡಿ ರೀಎಂಟ್ರಿ ತಡವಾಯಿತು ಎನ್ನಲಾಗಿದೆ.